ಅಡಿಲೇಡ್: ಟೆಸ್ಟ್ ಸರಣಿಯಲ್ಲಿ 2-0 ಅಂತರದ ಮುನ್ನಡೆ ಎದುರು ನೋಡುತ್ತಿದ್ದ ತಂಡಕ್ಕೆ ಮರ್ಮಾಘಾತ ಎದುರಾಗಿದ್ದು, ಎದುರು ಇಲ್ಲಿ ನಡೆಯಬೇಕಿರುವ ಪಿಂಕ್ ಬಾಲ್ ಟೆಸ್ಟ್ ಆರಂಭಕ್ಕೆ ಕೆಲವೇ ಗಂಟೆಗಳು ಇರುವಾಗ ಸೇವೆಯನ್ನು ಕಳೆದುಕೊಂಡಿದೆ. ಬುಧವಾರ ರಾತ್ರಿ ಅಡಿಲೇಡ್‌ನ ರೆಸ್ಟೋರೆಂಟ್ ಒಂದರಲ್ಲಿ ಮಾಜಿ ಕ್ರಿಕೆಟಿಗ ಒಬ್ಬರ ಜೊತೆಗೆ ಕಮಿನ್ಸ್ ಭೋಜನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ವ್ಯಕ್ತಿಗೆ ಕೊರೊನಾ ವೈರಸ್ ಪಾಸಿಟಿವ್ ಇದ್ದ ಕಾರಣ, ಅವರ ಹತ್ತಿರದ ಸಂಪರ್ಕದ ವ್ಯಕ್ತಿಗಳ ಪಟ್ಟಿಯಲ್ಲಿ ಕಮಿನ್ಸ್ ಹೆಸರಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಐಸೊಲೇಷನ್‌ಗೆ ಒಳಪಡಿಸಲಾಗಿದ್ದು 2ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. "ದುರದೃಷ್ಟ ವಶಾತ್ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಅವರನ್ನು ಐಸೊಲೇಷನ್‌ಗೆ ಒಳಪಡಿಸಲಾಗಿದೆ. ಅವರ ಸ್ಥಾನದಲ್ಲಿ ಸ್ಟೀವ್ ಸ್ಮಿತ್ ನಾಯಕತ್ವ ವಹಿಸಲಿದ್ದು, ಟ್ರಾವಿಸ್ ಹೆಡ್ ಉಪನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ," ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆ ನೀಡಿದೆ. ಮಿಚೆಲ್ ಸ್ಟಾರ್ಕ್ ಮತ್ತು ನೇಥನ್ ಲಯಾನ್ ಕೂಡ ಅದೇ ರೆಸ್ಟೋರೆಂಟ್‌ನಲ್ಲಿ ಬುಧವಾರ ರಾತ್ರಿ ಊಟ ಮಾಡಿದ್ದಾರೆ. ಆದರೆ, ಸೋಂಕಿತನ ಹತ್ತಿರದಲ್ಲಿ ಇಲ್ಲದೇ ಇದ್ದ ಕಾರಣ ಅವರನ್ನು ಐಸೊಲೇಷನ್‌ಗೆ ಒಳಪಡಿಸಲಾಗಿಲ್ಲ. ಕಮಿನ್ಸ್ ಅವರನ್ನು ಪಿಸಿಆರ್ ಟೆಸ್ಟ್‌ಗೆ ಒಳಪಡಿಸಲಾಗಿದ್ದು, ಅವರ ವರದಿಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ. ಆದರೆ, ಸೋಂಕಿತನಿಗೆ ಹತ್ತಿರದ ಸಂಪರ್ಕದಲ್ಲಿ ಇದ್ದ ಕಾರಣ ನಿಯಮಾನುಸಾರ ಕನಿಷ್ಠ 7 ದಿನಗಳ ಕಾಲ ಐಸೊಲೇಷನ್‌ಗೆ ಒಳಪಡಬೇಕಾಗುತ್ತದೆ. ಇದೇ ವೇಳೆ ಮೆಲ್ಬೋರ್ನ್‌ನಲ್ಲಿ ಡಿ.26ರಂದು ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಕಮಿನ್ಸ್ ಲಭ್ಯರಾಗಲಿದ್ದಾರೆ ಎಂದು ಸಿಎ ಮಾಹಿತಿ ನೀಡಿದೆ. ಮೈಕಲ್ ನೆಸೆರ್ ಪದಾರ್ಪಣೆ ಆಸ್ಟ್ರೇಲಿಯಾ ಟೆಸ್ಟ್ ತಂಡದಲ್ಲಿ ಆಡುವ ಅವಕಾಶಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದ ಬೌಲಿಂಗ್ ಆಲ್‌ರೌಂಡರ್ ಮೈಕಲ್ ನೆಸೆರ್ ಅವರಿಗೆ ಈ ಮೂಲಕ ಪದಾರ್ಪಣೆಯ ಭಾಗ್ಯ ಸಿಕ್ಕಿದೆ. ಮೈಕಲ್ ಅವರನ್ನು ಕಮಿನ್ಸ್ ಸ್ಥಾನದಲ್ಲಿ ಆಡಿಸಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಖಾತ್ರಿ ಪಡಿಸಿದೆ. ದೇಶಿ ಟೂರ್ನಿಗಳಲ್ಲಿ ಬಾಲ್ ಮತ್ತು ಬ್ಯಾಟ್ ಎರಡರಲ್ಲೂ ಪರಿಣಾಮಕಾರಿ ಪ್ರದರ್ಶನ ನೀಡಿರುವ ನೆಸೆರ್, ಒಟ್ಟು 70 ಪಂದ್ಯಗಳಲ್ಲಿ 236 ಪ್ರಥಮದರ್ಜೆ ವಿಕೆಟ್‌ಗಳನ್ನು ಪಡೆದಿದ್ದಾರೆ. ಶೇಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಪಿಂಕ್ ಬಾಲ್ ಟೆಸ್ಟ್‌ಗೆ ಆಸ್ಟ್ರೇಲಿಯಾದ ಪ್ಲೇಯಿಂಗ್ ಇಲೆವೆನ್ 1. ಮಾರ್ಕಸ್ ಹ್ಯಾರಿಸ್ (ಓಪನರ್) 2. ಡೇವಿಡ್ ವಾರ್ನರ್ (ಓಪನರ್) 3. ಮಾರ್ನಸ್ ಲಾಬುಶೇನ್ (ಬ್ಯಾಟ್ಸ್‌ಮನ್) 4. ಸ್ಟೀವ್ ಸ್ಮಿತ್ (ಬ್ಯಾಟ್ಸ್‌ಮನ್/ನಾಯಕ) 5. ಟ್ರಾವಿಸ್ ಹೆಡ್ (ಬ್ಯಾಟ್ಸ್‌ಮನ್) 6. ಕ್ಯಾಮೆರಾನ್ ಗ್ರೀನ್ (ಆಲ್‌ರೌಂಡರ್) 7. ಅಲೆಕ್ಸ್ ಕೇರಿ (ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್) 8. ಮೈಕಲ್ ನೆಸೆರ್ (ಬಲಗೈ ವೇಗಿ) 9. ಮಿಚೆಲ್ ಸ್ಟಾರ್ಕ್ (ಎಡಗೈ ವೇಗಿ) 10. ನೇಥನ್ ಲಯಾನ್ (ಆಫ್ ಸ್ಪಿನ್ನರ್) 11. ಜೇ ರಿಚರ್ಡ್ಸನ್ (ಬಲಗೈ ವೇಗಿ)
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3IPY1sK