ಒತ್ತುವರಿಗೆ ಡೀಮ್ಡ್ ವಾಮಮಾರ್ಗ: ರಾಜ್ಯಮಟ್ಟದಲ್ಲಿ ಡೀಮ್ಡ್ ಗೆ ಸಂಕೋಲೆ ಬೀಳದಿರಲು ಭೂದಾಹಿಗಳ ಯತ್ನ!

ನಾಗರಾಜು ಅಶ್ವತ್ಥ್, ಬೆಂಗಳೂರು ಗ್ರಾಮಾಂತರ: ರಾಜ್ಯಾದ್ಯಂತ ಕೃಷಿಕರ ಜಮೀನು ದಾಖಲೆಗಳನ್ನು ಪಡೆಯಲಾಗದೆ ಸಮಸ್ಯೆಗೆ ಕಾರಣವಾಗಿರುವ ವ್ಯಾಪ್ತಿ ಕಿತ್ತಾಟ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಭೂ ಮಾಫಿಯಾಕ್ಕೂ ತಲೆಬಿಸಿಯಾಗಿ ಪರಿಣಮಿಸಿದೆ. ಜಿಲ್ಲೆಯ ದೇವನಹಳ್ಳಿಯಲ್ಲಿಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದ ಬಳಿಕ ಭೂಮಿಯ ಬೆಲೆ ಗಗನಕ್ಕೇರಿದ್ದು, ಸಾಕಷ್ಟು ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಪ್ರಸ್ತುತ, ರಾಜ್ಯ ಸರಕಾರ ಡೀಮ್ಡ್ ಅರಣ್ಯ ಪ್ರದೇಶದ ವರದಿಯೊಂದನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಲು ಮುಂದಾಗುತ್ತಿರುವ ಪ್ರಯತ್ನ ಲ್ಯಾಂಡ್‌ ಮಾಫಿಯಾದ ಕೆಂಗಣ್ಣಿಗೆ ಗುರಿಯಾಗಿದೆ. ಜತೆಗೆ, ಒತ್ತುವರಿಯಾದ ಭೂಮಿಯನ್ನು ಡೀಮ್ಡ್ ಅರಣ್ಯ ಸಂಕೋಲೆಯಿಂದ ಬಿಡಿಸಿಕೊಳ್ಳಲು ನಾನಾ ಮೂಲಗಳ ಮೂಲಕ ಸರಕಾರಕ್ಕೆ ಪ್ರಭಾವ ಬಳಸಲಾಗುತ್ತಿದೆ ಎನ್ನುವ ಮಾಹಿತಿ ಕೇಳಿಬಂದಿದೆ. ಡೀಮ್ಡ್ ಪಟ್ಟಿಯಿಂದ ಕೃಷಿಕರ ಜಮೀನು ಮುಕ್ತಿಗೆಂದು ನಡೆಯುತ್ತಿರುವ ಪ್ರಯತ್ನದ ಜತೆಗೆ ಭೂ ಮಾಫಿಯಾ ಸಹ ಹೊರಗುಳಿಯಲು ಯತ್ನಿಸುತ್ತಿದ್ದು, ಸರಕಾರ ಪಾರದರ್ಶಕ ಸಮೀಕ್ಷೆ ನಡೆಸಬೇಕಾದ ಅಗತ್ಯವಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 18642.92 ಹೆಕ್ಟೇರ್‌ ಅರಣ್ಯ ಪ್ರದೇಶವಿದ್ದು, ಈ ಪೈಕಿ 4 ತಾಲೂಕು ವ್ಯಾಪ್ತಿಯಲ್ಲಿ 2175.66 ಹೆಕ್ಟೇರ್‌ ಡೀಮ್ಡ್ ಅರಣ್ಯ ಪ್ರದೇಶವನ್ನು ಗುರುತಿಸಲಾಗಿದೆ. ಈ ವ್ಯಾಪ್ತಿಯೊಳಗೆ ಕೆಲ ಒತ್ತುವರಿದಾರರ ಪ್ರದೇಶಗಳು ಸಹ ಗುರುತಿಸಲಾಗಿದ್ದು, ಲ್ಯಾಂಡ್‌ ಬ್ಯಾಂಕ್‌ನ ಉತ್ತಮ ಬೆಲೆ ಬಾಳುವ ಭೂಮಿಗೆ ಉಳುಮೆದಾರರ ವೇಶದಲ್ಲಿ ಲ್ಯಾಂಡ್‌ ಮಾಫಿಯಾ ಒಳನುಸುಳಿದೆ. ಇಲಾಖೆಗಳ ಅಧಿಕಾರಿಗಳು ಸರಕಾರಕ್ಕೆ ಈ ಬಗ್ಗೆ ಮಾಹಿತಿ ಒದಗಿಸಿ, ಅರಣ್ಯ ಪ್ರದೇಶವನ್ನು ಉಳಿಸಬೇಕಾದ ಅನಿವಾರ್ಯತೆಯಿದೆ. ಏನಿದು ಡೀಮ್ಡ್ ಲ್ಯಾಂಡ್‌? ಕೃಷಿ ಚಟುವಟಿಕೆಗೆ ಪೂರಕವಲ್ಲದ ಬೆಟ್ಟ, ಬಾಣೆ, ಜಮ್ಮಾ, ಪೈಸಾರಿ, ಕಾನ, ಕುಮ್ಕಿ, ಸೇರಿದಂತೆ ನೀರಾವರಿ ಪ್ರದೇಶವಲ್ಲದ ಭೂಮಿಯನ್ನು ಸಿ ಅಂಡ್‌ ಡಿ ಅಥವಾ ಡೀಮ್ಡ್ ಲ್ಯಾಂಡ್‌ ಎನ್ನಲಾಗುತ್ತದೆ. ತೀವ್ರ ಬೇಡಿಕೆತೀವ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿರುವ ರಾಜಧಾನಿಯೊಂದಿಗೆ ಗಡಿ ಹಂಚಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭೂಮಿಗೆ ತೀವ್ರ ಬೇಡಿಕೆಯಿದೆ. ಅತ್ಯಾಧುನಿಕ ವಿಲ್ಲಾ, ರೆಸಾರ್ಟ್‌, ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ ನಗರ ಪ್ರದೇಶಗಳ ಹೊರವಲಯಗಳೇ ಗುರಿಯಾಗುತ್ತಿದ್ದು, ಉದ್ಯಮಿಗಳ ಚಿತ್ತ ಇಲ್ಲಿನ ರೈತರತ್ತ ನೆಟ್ಟಿದೆ. ಈ ನಡುವೆ ನಂದಿಬೆಟ್ಟ, ಮಾಕಳಿ ದುರ್ಗದ ತಪ್ಪಲಿನ ಹಸಿರು ವ್ಯಾಪ್ತಿಯಲ್ಲಿನ ಪ್ರದೇಶಗಳಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗುತ್ತಿರುವ ಹಿನ್ನೆಲೆ ಕೆಲ ಭೂ ಮಾಫಿಯಾ ವ್ಯಕ್ತಿಗಳು ಅರಣ್ಯ ಪ್ರದೇಶದಲ್ಲಿ ಕೃಷಿಕರ ಸೋಗಿನಲ್ಲಿ ಭೂಮಿಯನ್ನು ಉಳುಮೆ ಮಾಡುತ್ತಾ, ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಹೀಗೆ, ಕೃಷಿಗೆ ಯೋಗ್ಯವಿಲ್ಲದಿದ್ದರೂ ಕೃಷಿ ನೆಪ ಮಾಡಿಕೊಂಡು ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕೋಟ್ಯಂತರ ರೂ. ಹಣ ಮಾಡುವ ಹುನ್ನಾರಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ 7983.60ಹೆ, ದೇವನಹಳ್ಳಿ 3105ಹೆ, ಹೊಸಕೋಟೆ 3626.25ಹೆ, ನೆಲಮಂಗಲ 3927.61ಹೆ ಸೇರಿದಂತೆ ಒಟ್ಟು 18642.92ಹೆಕ್ಟೇರ್‌ ಅರಣ್ಯವಿದ್ದು, ಅನೇಕ ಕಡೆ ಒತ್ತುವರಿ ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಇದೀಗ ಡೀಮ್ಡ್ ವೇಶದಲ್ಲಿ ಭೂ ಮಾಫಿಯಾ ಎಂಟ್ರಿ ಪಡೆಯುತ್ತಿದೆ. ಜಿಲ್ಲೆಯಲ್ಲಿ ಗುರುತಿಸಲಾದ ಸಿ ಆಂಡ್‌ ಡಿ ಲ್ಯಾಂಡ್‌ ತಾಲೂಕು- ಡೀಮ್ಡ್ ಅರಣ್ಯ
  • ದೊಡ್ಡಬಳ್ಳಾಪುರ -1279.60
  • ದೇವನಹಳ್ಳಿ -519.14
  • ನೆಲಮಂಗಲ -316.22
  • ಹೊಸಕೋಟೆ -60.70
  • ಒಟ್ಟು -2175.66
ಸಮಿತಿ ರಚಿಸಿ, ರೈತರನ್ನು ಉಳಿಸಿ ರಾಜ್ಯ ಸರಕಾರದ ಕೆಲ ಅಧಿಕಾರಿಗಳು ಡೀಮ್ಡ್ ಅರಣ್ಯಕ್ಕೆ ಸಂಬಂಧಿಸಿದ ವರದಿಗಳನ್ನು ತಮ್ಮ ಕಚೇರಿಗಳಿಂದ ಸಿದ್ಧಪಡಿಸಿರುವುದು ಸರಿಯಲ್ಲ. ವಾಸ್ತವವಾಗಿ ಭೌತಿಕವಾಗಿ ಆಯಾ ಪ್ರದೇಶಗಳಿಗೆ ಭೇಟಿ ನೀಡಿ, ಸಮೀಕ್ಷೆ ಸಿದ್ಧಪಡಿಸಬೇಕಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಾಜ್ಯಾದ್ಯಂತ ಸಾಕಷ್ಟು ಸಣ್ಣ ಪ್ರಮಾಣದ ರೈತರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಹಿಂದೆ ಎಚ್‌.ಡಿ.ದೇವೇಗೌಡರ ಹೋರಾಟದಿಂದ 50 ಸಾವಿರ ಹೆಕ್ಟೇರ್‌ ಭೂಮಿ ರೈತರಿಗೆ ವಾಪಸ್ಸಾಗಿತ್ತು. ಆ ಬಳಿಕ ಅಂತಹ ಬೆಳವಣಿಗೆಗಳು ನಡೆಯದೆ ರೈತರು ಕತ್ತಲಲ್ಲಿ ಉಳಿಯುವಂತಾಗಿದೆ. ಸರಕಾರ ಕೂಡಲೇ ಕಂದಾಯ, ಅರಣ್ಯ ಇಲಾಖೆಗಳ ಉನ್ನತಾಧಿಕಾರಿಗಳ ನೇತೃತ್ವದ ಜಂಟಿ ಸಮೀಕ್ಷೆಯನ್ನು ಕೈಗೊಂಡು ಈ ಸಮಸ್ಯೆಗೆ ಶೀಘ್ರ ಇತ್ಯರ್ಥಗೊಳಿಸಬೇಕಿದೆ. ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ


from India & World News in Kannada | VK Polls https://ift.tt/3oVi2Gl

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...