ರಾಷ್ಟ್ರಗೀತೆಗೆ ಅವಮಾನ ಮಾಡಿದ ಮಮತಾ ಬ್ಯಾನರ್ಜಿ!: ಬಿಜೆಪಿ ಮುಖಂಡನಿಂದ ದೂರು

ಮುಂಬಯಿ: ರಾಷ್ಟ್ರಗೀತೆಗೆ ಅಗೌರವ ತೋರಿಸುವ ಮೂಲಕ ಅವಮಾನ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಮುಖಂಡರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಬಿಜೆಪಿಗೆ ಎದುರಾಳಿಯಾಗಿ ಮುಂದಿನ ಸಾರ್ವತ್ರಿಕ ಚುನಾವಣೆ ವೇಳೆ ಪ್ರಬಲ ಮೈತ್ರಿಕೂಟ ರಚಿಸುವ ಸಲುವಾಗಿ ಮುಂಬಯಿಗೆ ತೆರಳಿರುವ ಮಮತಾ ಬ್ಯಾನರ್ಜಿ ಅವರು ಬುಧವಾರ ಎನ್‌ಸಿಪಿ ನಾಯಕ ಶರದ್ ಪವಾರ್ ಹಾಗೂ ಇತರರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಬಳಿಕ ಸುದ್ದಿಗೋಷ್ಠಿ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ಇದ್ದಕ್ಕಿದ್ದಂತೆ ಹಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುದ್ದಿಗೋಷ್ಠಿಯಲ್ಲಿ ಕುಳಿತಿದ್ದ ಮಮತಾ, ಇದ್ದಕ್ಕಿದ್ದಂತೆ ರಾಷ್ಟ್ರಗೀತೆ ಹಾಡಲು ಆರಂಭಿಸಿದ್ದಾರೆ. ಕುಳಿತೇ ಹಾಡುತ್ತಿರುವುದು ನೆನಪಿಗೆ ಬಂದಾಗ ತಕ್ಷಣ ಎದ್ದು ನಿಂತಿದ್ದಾರೆ. ಅವರು ಎದ್ದಿದ್ದನ್ನು ಕಂಡು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಉಳಿದ ಎಲ್ಲರೂ ಎದ್ದು ನಿಂತಿದ್ದಾರೆ. ಆದರೆ ಮಮತಾ ಅವರು ನಾಲ್ಕ ಐದು ಸಾಲುಗಳಲ್ಲಿಯೇ ರಾಷ್ಟ್ರಗೀತೆ ಮುಗಿಸಿದ್ದಾರೆ. ಕೊನೆಗೆ 'ಜೈ ಮಹಾರಾಷ್ಟ್ರ' ಎಂದು ಘೋಷಣೆ ಕೂಗಿದ್ದಾರೆ. ಇದು ವಿಡಿಯೋದಲ್ಲಿ ದಾಖಲಾಗಿದೆ. ಮಮತಾ ಬ್ಯಾನರ್ಜಿ ಅವರು ಕುಳಿತು ರಾಷ್ಟ್ರಗೀತೆ ಹಾಡಿದ್ದಲ್ಲದೆ, ಅರೆಬರೆಯಾಗಿ ಹಾಡಿರುವುದು ತಮ್ಮದೇ ರಾಜ್ಯದ ಕವಿ ರವೀಂದ್ರನಾಥ ಟ್ಯಾಗೋರ್ ಅವರಿಗೂ ಮಾಡಿರುವ ಅವಮಾನವಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. #National Anthem ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಈ ಘಟನೆ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಮಮತಾ ಅವರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಮುಖಂಡರೊಬ್ಬರು ದೂರು ನೀಡಿದ್ದಾರೆ. ಮಮತಾ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಯುವ ಮೋರ್ಚಾ ಘಟಕದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, 'ನಮ್ಮ ರಾಷ್ಟ್ರಗೀತೆಗೆ ಗೌರವ ಸಲ್ಲಿಸುವಲ್ಲಿ ವಿಫಲರಾದ ಮುಖ್ಯಮಂತ್ರಿ ನಮ್ಮಲ್ಲಿ ಇದ್ದಾರೆ ನೋಡಿ. ಭಾರತ ಹಾಗೂ ಅದರ ಮೌಲ್ಯಗಳನ್ನು ವಿರೋಧ ಪಕ್ಷಗಳು ಗೌರವಿಸುವುದನ್ನು ನಿರೀಕ್ಷಿಸುವುದು ಈ ದಿನಗಳಲ್ಲಿ ಬಹಳ ಕಷ್ಟ. ಸಂವಿಧಾನಾತ್ಮಕ ಅಧಿಕಾರವೊಂದರಿಂದ ಈ ಶೋಚನೀಯ ವರ್ಗನೆಯು ತೀವ್ರ ನಾಚಿಕೆಗೇಡು ಮತ್ತು ಖಂಡನಾರ್ಹ' ಎಂದು ಹೇಳಿದ್ದಾರೆ. 'ಮಮತಾ ಬ್ಯಾನರ್ಜಿ ಅವರು ಭಾರತದ ರಾಷ್ಟ್ರಗೀತೆ ಹಾಡುವಾಗ ಮೊದಲು ಕುಳಿತಿದ್ದರು, ಬಳಿಕ ಎದ್ದು ನಿಂತರು. ಹಾಡುವುದನ್ನು ಅರ್ಧದಲ್ಲಿಯೇ ನಿಲ್ಲಿಸಿದರು. ಇಂದು ಮುಖ್ಯಮಂತ್ರಿ ಬಂಗಾಳದ ಸಂಸ್ಕೃತಿ, ರಾಷ್ಟ್ರಗೀತೆ ಮತ್ತು ದೇಶ ಹಾಗೂ ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರನ್ನು ಅವಮಾನಿಸಿದ್ದಾರೆ' ಎಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕ ಟ್ವೀಟ್ ಮಾಡಿದೆ. 'ನಮ್ಮ ರಾಷ್ಟ್ರಗೀತೆಯು ನಮ್ಮ ದೇಶದ ಅಸ್ಮಿತೆಯ ಅತ್ಯಂತ ಶಕ್ತಿಶಾಲಿ ಗುರುತುಗಳಲ್ಲಿ ಒಂದು. ಸಾರ್ವಜನಿಕ ಕಚೇರಿಯ ಅಧಿಕಾರದಲ್ಲಿ ಇರುವವರು ಕನಿಷ್ಠ ವ್ಯಕ್ತಿಗಳು ಹೀಗೆ ಮಾಡುವುದರಿಂದ ಅದರ ಘನತೆ ಕುಗ್ಗುವುದಿಲ್ಲ. ಬಂಗಾಳ ಸಿಎಂ ಹಾಡಿದ ರಾಷ್ಟ್ರಗೀತೆಯ ಛಿದ್ರ ಛಿದ್ರ ಆವೃತ್ತಿ ಇಲ್ಲಿದೆ ನೋಡಿ. ಭಾರತದ ವಿರೋಧಪಕ್ಷವು ಹೆಮ್ಮೆ ಮತ್ತು ದೇಶಪ್ರೇಮದಿಂದ ಇಷ್ಟೊಂದು ವಿಮುಖವಾಗಿವೆಯೇ?' ಎಂದು ಬಿಜೆಪಿ ಮುಖಂಡ ಅಮಿತ್ ಮಾಳವೀಯ ಪ್ರಶ್ನಿಸಿದ್ದಾರೆ.


from India & World News in Kannada | VK Polls https://ift.tt/3ruHqEM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...