
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಪುನರ್ ರಚನೆ, ಆಸ್ತಿ ಹಣ ಗಳಿಕೆ, ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಗಳ ಅಧ್ಯಯನ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ಅಧ್ಯಕ್ಷತೆಯಲ್ಲಿ ಏಕ ವ್ಯಕ್ತಿ ಸಮಿತಿಯನ್ನು ಸರಕಾರ ರಚಿಸಿದೆ. ಅಲ್ಲದೇ, ಮೂರು ತಿಂಗಳೊಳಗೆ ವರದಿ ಸಲ್ಲಿಸಲು ಸರಕಾರವು ಈ ಏಕ ವ್ಯಕ್ತಿ ಸಮಿತಿಗೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿನ ನಾಲ್ಕೂ ಸಾರಿಗೆ ನಿಗಮಗಳು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಸಂಬಳ ನೀಡಲಾಗದ ಸ್ಥಿತಿಗೆ ತಲುಪಿವೆ. ಕೋವಿಡ್‌ನಿಂದ ನಿಗಮಗಳ ಆರ್ಥಿಕ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಸರಕಾರವೇ ಅಧಿಕಾರಿ, ಸಿಬ್ಬಂದಿಯ ವೇತನಕ್ಕೆ ಅನುದಾನ ಬಿಡುಗಡೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಗಮಗಳ ಸುಧಾರಣೆಗೆ ಅಧ್ಯಯನ ನಡೆಸಿ ವರದಿ ನೀಡಲು ಸಮಿತಿ ರಚಿಸಲು ಸೂಚಿಸಿದ್ದರು. , ಬಿಎಂಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಮಗ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಮರು ಸಂಘಟನೆ, ಆಡಳಿತಾತ್ಮಕ ಸುಧಾರಣೆ, ಭೂಮಿ, ಕಟ್ಟಡಗಳೂ ಸೇರಿದಂತೆ ಇತರ ಸ್ಥಿರಾಸ್ತಿ, ಆರ್ಥಿಕ ಸ್ವಾವಲಂಬನೆ, ಸಂಪನ್ಮೂಲ ಕ್ರೋಢೀಕರಣ ಹಾಗೂ ಇತರ ವಿಷಯಗಳನ್ನು ಪರಿಗಣಿಸಿ ಸಮಿತಿ ಅಧ್ಯಕ್ಷರು ಅಧ್ಯಯನ ನಡೆಸಬೇಕು ಎಂದು ಸರಕಾರ ನಿಬಂಧನೆಗಳನ್ನು ವಿಧಿಸಿದೆ.
ಸಮಿತಿಯು ಅಧ್ಯಯನ ನಡೆಸುವ ಸಲುವಾಗಿ ರಾಜ್ಯ ಹಾಗೂ ಇತರ ಕಚೇರಿ, ಕೇಂದ್ರಗಳು ಹಾಗೂ ಹೊರ ರಾಜ್ಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಯಾಣ ಭತ್ಯೆಯ ವೆಚ್ಚವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವೇ ಭರಿಸಬೇಕು ಎಂದೂ ಹೇಳಲಾಗಿದೆ.
from India & World News in Kannada | VK Polls https://ift.tt/3pituuE