
ಬೀದರ್: ಪುತ್ರನ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಹೋದ ದಂಪತಿಗಳು ಅಪಘಾತದಲ್ಲಿ ದುರ್ಮರಣಕ್ಕೀಡಾದ ಘಟನೆ ಜಿಲ್ಲೆಯ ತಾಲೂಕಿನ ಸೇವಾಲಾಲ್ ನಿನ್ನೆ(ಬುಧವಾರ) ತಡರಾತ್ರಿ ನಡೆದಿದೆ. ಮಗನ ಮದುವೆಯ ಆಮಂತ್ರಣ ಪತ್ರ ನೀಡಲು ಹೋದ ಭಾಲ್ಕಿಯ ಕಾಂಗ್ರೆಸ್ ಪಕ್ಷದ ಮುಖಂಡ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ (50) ಹಾಗೂ (45) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮದುವೆ ಸಂಭ್ರಮದ ಖುಷಿಯಲ್ಲಿದ್ದ ಮನೆಯಲ್ಲೀಗ ಆಕ್ರಂದನ ಮುಗಿಲು ಮುಟ್ಟಿದೆ. ಇದೇ ತಿಂಗಳ ಡಿ.26ರಂದು ಪುತ್ರ ಸಾಯಿನಾಥ ಸೂರ್ಯಕಾಂತ ಪಾಟೀಲ್ ಮದುವೆ ನಿಗದಿಯಾಗಿತ್ತು. ಈ ಸಂಬಂಧ ನಲ್ಲಿ ಸಂಬಧಿಕರಿಗೆ ಮದುವೆಯ ಕಾರ್ಡ್ ನೀಡಿ ವಾಪಸ್ ಬರುತ್ತಿದ್ದ ವೇಳೆ ನಿನ್ನೆ(ಬುಧವಾರ) ಮಧ್ಯ ರಾತ್ರಿ ಕಾರು ಅಪಘಾತವಾಗಿದೆ. ಬೀದರ್ ನ ಭಾಲ್ಕಿಯ ಸೇವಾಲಾಲ ತಾಂಡದ ಬಳಿ ಕಾರು ಪಲ್ಟಿಯಾಗಿದ್ದು, ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತಡ ರಾತ್ರಿಯಾದರೂ ತಂದೆ ತಾಯಿ ಮನೆಗೆ ಬಾರದ ಹಿನ್ನಲೆಯಲ್ಲಿ ಹಾಗೂ ಅವರ ಪೋನ್ ಕೂಡಾ ಸಿಗದ ಕಾರಣ ಆತಂಕಗೊಂಡ ಕುಟುಂಬಸ್ಥರು ಇಡೀ ರಾತ್ರಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಇಂದು ಮುಂಜಾನೆ ಸೇವಾಲಾಲ ತಾಂಡದ ಬಳಿ ಕಾರು ಸಮೇತ ಇಬ್ಬರ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಈಶ್ವರ ಖಂಡ್ರೆ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧನ್ನೂರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
from India & World News in Kannada | VK Polls https://ift.tt/31grn29