ಬಿಎಂಟಿಸಿಯಿಂದ ವೋಲ್ವೊ ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ; ಟಿಕೆಟ್ ದರದಲ್ಲಿ ಭಾರಿ ಇಳಿಕೆ!

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ()ಯು ವೋಲ್ವೊ ಬಸ್‌ಗಳ ಪ್ರಯಾಣ ದರ, ದೈನಿಕ ಮತ್ತು ಮಾಸಿಕ ಪಾಸ್‌ಗಳ ದರವನ್ನು ಇಳಿಕೆ ಮಾಡಿದೆ. ಡಿ.17ರಿಂದ ಜಾರಿಗೆ ಬರುವಂತೆ ಪ್ರಯಾಣ ದರ ಮತ್ತು ದೈನಿಕ ಪಾಸ್‌ಗಳ ದರವನ್ನು ಕಡಿಮೆ ಮಾಡಿ ಪರಿಷ್ಕರಿಸಲಾಗಿದೆ. ಕೋವಿಡ್‌ ಅಪ್ಪಳಿಸಿದ ಬಳಿಕ ಬೆರಳೆಣಿಕೆಯಷ್ಟು ವೋಲ್ವೊ ಬಸ್‌ಗಳಷ್ಟೇ ಕಾರ್ಯಾಚರಣೆಗೊಳ್ಳುತ್ತಿವೆ. ಆದಾಗ್ಯೂ, ನಿರೀಕ್ಷಿಸಿದಷ್ಟು ಪ್ರಯಾಣಿಕರು ಈ ಬಸ್‌ಗಳಲ್ಲಿ ಸಂಚರಿಸುತ್ತಿಲ್ಲ. ಹೀಗಾಗಿಯೇ, ಸಂಸ್ಥೆಯು ಪ್ರಯಾಣಿಕರನ್ನು ಆಕರ್ಷಿಸಲು ಟಿಕೆಟ್‌ ಮತ್ತು ಪಾಸ್‌ಗಳ ದರವನ್ನು ಕಡಿಮೆ ಮಾಡಿದೆ. ಮಾಸಿಕ ಪಾಸ್‌ ದರವನ್ನು 2,000 ರೂ.ಗಳಿಂದ(ಜಿಎಸ್‌ಟಿ ಸೇರಿ) 1500 ರೂ.ಗಳಿಗೆ ಇಳಿಕೆ ಮಾಡಿದೆ. ಪಾಸ್‌ಗಳ ಪರಿಷ್ಕೃತ ದರವು 2022ರ ಜ. 1ರಿಂದ ಜಾರಿಗೆ ಬರಲಿದೆ. ದೈನಂದಿನ ಪಾಸ್‌ಗಳ ದರವನ್ನು 120 ರೂ.ನಿಂದ 100 ರೂ.ಗಳಿಗೆ ಇಳಿಸಲಾಗಿದೆ. ವೋಲ್ವೊ ಬಸ್‌ಗಳ ಪ್ರಯಾಣ ದರವನ್ನು ಶೇ.34ರಷ್ಟು ಕಡಿತಗೊಳಿಸಲಾಗಿದೆ. ಮೊದಲ ಮೂರು ಹಂತದ ಪ್ರಯಾಣ ದರವನ್ನು ಪರಿಷ್ಕರಿಸಿಲ್ಲ. ನಾಲ್ಕನೇ ಹಂತದಿಂದ 5 ರೂ.ನಿಂದ 40 ರೂ.ವರೆಗೆ ಇಳಿಕೆ ಮಾಡಲಾಗಿದೆ. ಈ ಮೊದಲು 50 ಕಿ.ಮೀ ದೂರದ ಪ್ರಯಾಣಕ್ಕೆ 90 ರೂ. ನಿಗದಿಪಡಿಸಲಾಗಿತ್ತು. ಇದೀಗ 50 ರೂ.ಗಳಿಗೆ ಇಳಿಸಲಾಗಿದೆ. ಸಾಮಾನ್ಯ ಮತ್ತು ವಾಯುವಜ್ರ(ವಿಮಾನ ನಿಲ್ದಾಣಕ್ಕೆ ಸಂಚರಿಸುವ ಬಸ್‌ಗಳು) ಸೇವೆಗಳ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 12 ಮಾರ್ಗಗಳಲ್ಲಿ 90 ಬಸ್‌ಬಿಎಂಟಿಸಿಯು ಪ್ರಯಾಣಿಕರ ಅನುಕೂಲಕ್ಕಾಗಿ ಸದ್ಯ 9 ಮಾರ್ಗಗಳಲ್ಲಿ 83 ಹವಾನಿಯಂತ್ರಿತ ವೋಲ್ವೊ ಬಸ್‌ಗಳನ್ನು ಓಡಿಸುತ್ತಿದೆ. ಡಿ.17ರಿಂದ ಹೊಸದಾಗಿ 12 ಮಾರ್ಗಗಳಲ್ಲಿ 90 ವೋಲ್ವೊ ಬಸ್‌ಗಳನ್ನು ಪರಿಚಯಿಸಲಾಗುತ್ತಿದೆ. ಒಟ್ಟಾರೆ 21 ಮಾರ್ಗಗಳಲ್ಲಿ 173 ಬಸ್‌ಗಳು ಸಂಚರಿಸಲಿವೆ. ಹೊಸದಾಗಿ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಜಂಬೂ ಸವಾರಿ ದಿಣ್ಣೆ, ಚಿಕ್ಕಬಾಣಾವರ, ವಿದ್ಯಾರಣ್ಯಪುರ, ಜಿಗಣಿ ಎಪಿಸಿ ಸರ್ಕಲ್‌, ಬನಶಂಕರಿ ಟಿಟಿಎಂಸಿಯಿಂದ ಅತ್ತಿಬೆಲೆ, ಹೆಬ್ಬಾಳ, ಯಶವಂತಪುರ ಟಿಟಿಎಂಸಿ, ಕೆಂಗೇರಿ ಟಿಟಿಎಂಸಿ, ಯಲಹಂಕ, ಎಲೆಕ್ಟ್ರಾನಿಕ್‌ ಸಿಟಿಯಿಂದ ಕೆಂಗೇರಿ, ಶಿವಾಜಿನಗರ ನಿಲ್ದಾಣದಿಂದ ಬನಶಂಕರಿಗೆ ವೋಲ್ವೊ ಬಸ್‌ಗಳು ಕಾರ್ಯಾಚರಣೆಗೊಳ್ಳಲಿವೆ.


from India & World News in Kannada | VK Polls https://ift.tt/328Rada

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...