
ಶ್ರೀನಗರ: ಪಾಕಿಸ್ತಾನ ಪರ ಕಾಶ್ಮೀರ ನಾಯಕ ಬುಧವಾರ ಸಂಜೆ ಶ್ರೀನಗರದ ತಮ್ಮ ನಿವಾಸದಲ್ಲಿ ನಿಧನರಾದರು. 92 ವರ್ಷದ ಗೀಲಾನಿ, ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ರಾಜಕಾರಣದಲ್ಲಿ ಮುಂಚೂಣಿಯಲ್ಲಿದ್ದರು. ಸುದೀರ್ಘ ಸಮಯದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಕಳೆದ ವರ್ಷ ರಾಜಕೀಯ ಹಾಗೂ ಹುರಿಯತ್‌ನಿಂದ ನಿವೃತ್ತರಾಗಿದ್ದರು. 2018ರ ಮಾರ್ಚ್‌ನಲ್ಲಿ ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಗೀಲಾನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರ ಆರೋಗ್ಯ ಕ್ಷೀಣಿಸಿತ್ತು. ಗೀಲಾನಿ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ ನಡೆಯಿತು. ಸುದ್ದಿ ತಿಳಿಯುತ್ತಿದ್ದಂತೆ ಬುಧವಾರ ಸಂಜೆಯಿಂದಲೇ ಕಾಶ್ಮೀರ ಕಣಿವೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಕಾಶ್ಮೀರ ಕಣಿವೆಯಲ್ಲಿ ಅಂತರ್ಜಾಲ ಕಡಿತ ಸೇರಿದಂತೆ ಅನೇಕ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ ಎಂದು ಕಾಶ್ಮೀರ ಭದ್ರತೆಯ ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಹೈದರ್‌ಪೊರಾದಲ್ಲಿನ ಗೀಲಾನಿ ನಿವಾಸದ ಸುತ್ತಲೂ ಮತ್ತಷ್ಟು ಭದ್ರತೆ ನಿಯೋಜಿಸಲಾಗಿತ್ತು. ಹುರಿಯತ್‌ನ ಹಿರಿಯ ಮುಖಂಡರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಹಿರಿಯ ನಾಯಕ ಮುಖ್ತಾರ್ ಅಹ್ಮದ್ ವಾಜಾನನ್ನು ಅನಂತನಾಗ್ ಪಟ್ಟಣದ ನಿವಾಸದಿಂದ ಬಂಧಿಸಲಾಗಿದೆ. ಸುಮಾರು 27 ವರ್ಷಗಳ ಕಾಲ ಹುರಿಯತ್ ಪ್ರತ್ಯೇಕತಾವಾದಿ ಸಂಘಟನೆ ಜತೆಗಿದ್ದ ಗೀಲಾನಿ, ಪಾಕಿಸ್ತಾನ ಮತ್ತು ಅದರ ಸೈನ್ಯದ ಗುಪ್ತಚರದಿಂದ ಮೂಲೆಗುಂಪಾದ ಬಳಿಕ ಸಂಘಟನೆ ತೊರೆದಿದ್ದರು. ಸಂಘಟನೆಯು ತನ್ನ ವಿರುದ್ಧವೇ ಸಂಚು ರೂಪಿಸಿದೆ ಎಂದು ಆರೋಪಿಸಿದ್ದ ಅವರಿಗೆ, 2019ರಲ್ಲಿ ಕೇಂದ್ರ ಸರ್ಕಾರವು ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಪ್ರತ್ಯೇಕತಾವಾದಿ ಚಳವಳಿ ನಡೆಸಲು ಸಾಧ್ಯವಾಗಿರಲಿಲ್ಲ. ಗೀಲಾನಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ 1972, 1977 ಮತ್ತು 1987ರಲ್ಲಿ ಚುನಾಯಿತರಾಗಿದ್ದರು. ಕೊನೆಯ ದಿನಗಳಲ್ಲಿ ಕಾಶ್ಮೀರ ಪ್ರತ್ಯೇಕತೆಯ ಪ್ರಯತ್ನಗಳು ತಪ್ಪು ಮತ್ತು ವೈಯಕ್ತಿಕ ಲಾಭಕ್ಕಾಗಿ ಅದನ್ನು ಬಳಸಿಕೊಂಡಿದ್ದೆ ಎಂಬುದಾಗಿ ಅವರು ಒಪ್ಪಿಕೊಂಡಿದ್ದರು.
from India & World News in Kannada | VK Polls https://ift.tt/3gT4GGa