ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ? ಕೋಟಿ ಬಳಸಿದ್ರೂ ಚನ್ನಪಟ್ಟಣದ ರಸ್ತೆಗಳೆಲ್ಲ ಹೊಂಡಾ ಗುಂಡಿ!

ಬಿ.ಟಿ ನಾಗೇಶ್‌ ಚನ್ನಪಟ್ಟಣ: ಪಟ್ಟಣ ಮತ್ತು ತಾಲೂಕಿದಾದ್ಯಂತ ಕಳೆದ ಎರಡು ವರ್ಷಗಳಿಂದ ರಸ್ತೆಗಳು ಸಮಗ್ರವಾಗಿ ಅಭಿವೃದ್ಧಿ ಕಂಡಿವೆ. ಕೋಟ್ಯಾಂತರ ರೂ ಬಿಡುಗಡೆಯಾಗಿ ರಸ್ತೆ ಅಭಿವೃದ್ಧಿ ಪಡಿಸಿದ್ದು, ಕೆಲವೆಡೆ ಕಳಪೆ ಕಾಮಗಾರಿಯಾಗಿವೆ ಎಂಬ ಆರೋಪ ಕೂಡಾ ಬಂದಿದೆ. ಈಗಾಗಲೇ ಕೆಲ ಮುಖ್ಯ ರಸ್ತೆಗಳು ಅಲ್ಲಲ್ಲಿ ಗುಂಡಿ ಬಿದ್ದು ಹಾಳಾಗಿವೆ. ಸಂಬಂಧಪಟ್ಟವರಿಗೆ ಮುಚ್ಚುವ ಇಚ್ಛಾಶಕ್ತಿ ಇಲ್ಲ. ಜನರ ಪ್ರಾಣದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಕೊರೊನಾ ಹೆಸರಿನಲ್ಲಿ ಅನುದಾನದ ಕೊರತೆ ನೆಪ ಹೇಳಿಕೊಂಡು, ತಮ್ಮ ಹೊಣೆಗಾರಿಕೆಯಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಗಳು ಮಾತ್ರ ಈ ಬಗ್ಗೆ ಗಮನಹರಿಸಿಲ್ಲ ಎಂಬ ಕೂಗು ಸಾರ್ವಜನಿಕವಾಗಿ ಕೇಳಿ ಬಂದಿದೆ. ಬೆಂಗಳೂರು ಮೈಸೂರು ಹೆದ್ದಾರಿ ವಿಸ್ತರಣೆ ಅಭಿವೃದ್ಧಿ ನೆಪದಲ್ಲಿ ಪಟ್ಟಣದ ಕೆಲವಡೆ ಇನ್ನೂ ರಸ್ತೆ ಅಭಿವೃದ್ಧಿ ನೆನಗುದಿಗೆ ಬಿದ್ದಿದೆ. ಕೆಲ ರಸ್ತೆಗಳಿಗೆ ತೇಪೆ ಹಾಕುತ್ತಿದ್ದು, ಇನ್ನು ಪ್ರಮುಖ ರಸ್ತೆಗಳ ಕಡೆ ಮುಖ ಮಾಡಿಲ್ಲ. ಪ್ರತಿ ಹಳ್ಳಿಗಳಲ್ಲಿ ಜಲ ಜೀವನ ಮಿಷನ್‌ ಯೋಜನೆಯಡಿ ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ಉತ್ತಮ ರಸ್ತೆಗಳನ್ನು ಅಗೆದು ಬಿಡಲಾಗುತ್ತಿದೆ. ಇದರಿಂದ ಜನರಿಗೆ ಸಂಚರಿಸಲು ತೊಂದರೆಯಂಟಾಗಿದೆ. ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು ಅಭಿವೃದ್ಧಿಯಾಗಿದ್ದು, ಹೊಸ ಬಡಾವಣೆಗಳ ಹಾಗೂ ಕೆಲ ಹಳ್ಳಿಗಳ ರಸ್ತೆಗಳಿಗೆ ಇನ್ನು ಕೇಳುವವರೇ ಇಲ್ಲದಂತಾಗಿದೆ. ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚಾರ ಮಾಡುವುದು ಅನಿವಾರ್ಯವಾಗಿದೆ. ಪಟ್ಟಣ ವ್ಯಾಪ್ತಿಯ ಅನ್ನಪೂರ್ಣೇಶ್ವೇರಿ, ಮಂಗಳವಾರಪೇಟೆ, ವಿವೇಕಾನಂದ ನಗರ, ಕೆಂಪೇಗೌಡ ಬಡಾವಣೆ, ಅಪ್ಪಗೆರೆ, ನಗರಸಭೆ ಬಡಾವಣೆ, ಕನಕನಗರ, ತಟ್ಟೆಕೇರಿ ಸೇರಿ ಹೊಸ ಬಡಾವಣೆಗಳ ರಸ್ತೆ ಅಭಿವೃದ್ಧಿ ಕಂಡಿಲ್ಲ. ನಗರಸಭೆ ವ್ಯಾಪ್ತಿಯ ರಸ್ತೆಗಳ ಗುಣಮಟ್ಟ ಇನ್ನೂ ಸುಧಾರಣೆ ಕಾಣಬೇಕಿದೆ. ಇನ್ನೂ ಗ್ರಾಮೀಣ ಭಾಗದಲ್ಲಿ ಕೆಲ ಹಳ್ಳಿಗಳಿಗೆ ಸಂಪರ್ಕ ಕಲ್ಪಸುವ ರಸ್ತೆಗಳ ಸುಧಾರಣೆಯಾಗಿಲ್ಲ. ಅಕ್ಕೂರು ಸಾದಾರಹಳ್ಳಿ, ಸಾದಾರಹಳ್ಳಿ, ನಾಗಪುರ, ಭೈರಾಪಟ್ಟಣದ ಬಸಗುಡಿ ರಸ್ತೆ, ನಾಗವಾರ ಮಾಕಳಿ ಹೆಬ್ಬಾಳ ಸಂಪರ್ಕ ರಸ್ತೆ ಸೇರಿ ಕೆಲವೆಡೆ ಕೆಲ ರಸ್ತೆ ಅಭಿವೃದ್ಧಿ ಕಂಡಿಲ್ಲ. ಗ್ರಾಮೀಣ ಪ್ರದೇಶದ ಜನ ಕೃಷಿಯನ್ನೇ ಪ್ರಧಾನವಾಗಿಸಿದ್ದು, ರೈತರಿಗೆ ಬೇಕಾಗಿರುವ ರಸ್ತೆ ಭಾಗ್ಯ ಇನ್ನೂ ದೊರತಿಲ್ಲ. ನಮ್ಮ ಹೊಲ ನಮ್ಮ ರಸ್ತೆ ಕೇವಲ ಯೋಜನೆಯಾಗಿ ಉಳಿದಿದೆ. ಕೃಷಿ ಚಟುವಟಿಕೆಯ ಪದಾರ್ಥಗಳು, ಸರಕು ಸರಂಜಾಮು ಸೇರಿ ಉತ್ಪನ್ನಗಳು, ಕೃಷಿ ಬೆಳೆಗಳ ಶೀಘ್ರ ಹಾಗೂ ತ್ವರಿತ ರವಾನೆಗೆ ರಸ್ತೆಗಳ ಪ್ರಮುಖವಾಗಿದ್ದು, ಅದರ ನಿರ್ವಹಣೆ ಸಮಪರ್ಕವಾಗಿ ಆಗಿಲ್ಲ ಎಂಬದು ರೈತ ಮುಂಖಡರ ವಾದವಾಗಿದೆ. ಹದಗೆಟ್ಟಿದ್ದ ರಸ್ತೆಗಳಿಂದ ಜನತೆ ಆಕ್ರೋಶಕ್ಕೆ ಗುರಿಯಾಗಿದ್ದ ಅಧಿಕಾರಿಗಳು ಜನರನ್ನು ಸಮಾಧಾನ ಪಡಿಸಲು ಕೆಲವು ರಸ್ತೆಗಳಿಗೆ ತ್ಯಾಪೆ ಹಾಕಿದ್ದರು. ಇನ್ನೂ ಕೆಲ ರಸ್ತೆಗಳ ಕ್ಯಾರೆ ಅನ್ನುತ್ತಿಲ್ಲ. ಕೆಲವಡೆ ರಸ್ತೆ ಅಭಿವೃದ್ಧಿ ಸುಧಾರಣೆಯಾಗಬೇಕಿದೆ. ಪ್ರಮುಖ ಹಳ್ಳಿಗಳ ಸಂಪರ್ಕ ಕಲ್ಪಿಸುವುದರಿಂದ ನಿತ್ಯ ಸಾವಿರಾರು ಮಂದಿ ಇಲ್ಲಿ ಪ್ರಯಾಣ ನಡೆಸುತ್ತಾರೆ. ತಾವು ಬೆಳೆ ಬೆಳೆಯನ್ನು ಸುಗಮವಾಗಿ ಮಾರುಕಟ್ಟೆ ಮತ್ತು ಮನೆಗೆ ಕೊಂಡೊಯ್ಯಲು ಅನುಕೂಲವಾಗುತ್ತದೆ. ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಜಲ ಜೀವನ್‌ ಯೋಜನೆಯಡಿ ಪ್ರತಿ ಮನೆಗಳಿಗೆ ದಿನದ 24 ಗಂಟೆ ನೀರು ಪೂರೈಕೆ ಮಾಡುವ ಸಲುವಾಗಿ ರಸ್ತೆಗಳನ್ನು ಅಗೆದು ಬಿಡಲಾಗುತ್ತಿದೆ. ಈ ಹಿಂದೆ ನರೇಗಾ ಯೋಜನೆಯಡಿ ಹಲವು ರಸ್ತೆಗಳಿಗೆ ಕಾಂಕ್ರೀಟ್‌ ಮತ್ತು ಡಾಂಬರೀಕರಣ ಮಾಡಲಾಗಿತ್ತು. ಇಂತಹ ಉತ್ತಮ ಕಾಂಕ್ರೀಟ್‌ ಮತ್ತು ಡಾಂಬರ್‌ ರಸ್ತೆಗಳನ್ನು ಅಗೆದು ಬಿಡಲಾಗಿದೆ. ಇದರಿಂದ ಜನರಿಗೆ ಸಾಕಷ್ಟು ಅನಾನುಕೂಲವಾಗಿದೆ.


from India & World News in Kannada | VK Polls https://ift.tt/3kH8jS7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...