ಹರಿಹರ, ಕೂಡಲಸಂಗಮ ಪೀಠಗಳ ಬಗ್ಗೆ ಅಸಮಾಧಾನ; ಪಂಚಮಸಾಲಿ ಸಮಾಜಕ್ಕೆ ಮೂರನೇ ಪೀಠ?

ಬಾಗಲಕೋಟೆ: ರಾಜ್ಯದ ಪಂಚಮಸಾಲಿ ಸಮಾಜದಲ್ಲಿ ಎರಡು ಪೀಠಗಳಿಗೆ ಪರ್ಯಾಯ ವ್ಯವಸ್ಥೆ ರೂಪುಗೊಳ್ಳಲಿದ್ದು, ಹರಿಹರ, ಕೂಡಲಸಂಗಮ ಪೀಠಗಳಿಗೆ ಪರ್ಯಾಯವಾಗಿ ಮೂರನೇ ಪೀಠ ಅಸ್ತಿತ್ವಕ್ಕೆ ಬರುವ ಸಾಧ್ಯತೆಯಿದೆ. ಪಂಚಮಸಾಲಿ ಮಠಾಧೀಶರ ಒಕ್ಕೂಟದಿಂದ ನಿರಂತರ ಸಂಘಟನೆ ನಡೆದಿದ್ದು, ಮೂರನೇ ಪೀಠದ ಸಾಧ್ಯತೆ ಹೆಚ್ಚಿದೆ. ಎರಡೂ ಪೀಠಗಳಿಗೆ ಪ್ರತ್ಯೇಕವಾಗಿ ರೂಪುಗೊಂಡಿರುವ ಸ್ವಾಮೀಜಿಗಳ ಒಕ್ಕೂಟದಿಂದಲೇ ಹೊಸ ಪೀಠ ಸ್ಥಾಪಿಸುವ ನಿರೀಕ್ಷೆಯಿದೆ. ಈ ಬಗ್ಗೆ ಸ್ವಾಮೀಜಿಗಳ ಸಭೆಗಳಲ್ಲೂ ತೀವ್ರವಾಗಿ ಚರ್ಚೆ ನಡೆದಿದೆ ಎನ್ನಲಾಗಿದೆ. ಹರಿಹರ, ಕೂಡಲಸಂಗಮ ಪೀಠಗಳ ಕಾರ್ಯವೈಖರಿಯಿಂದ ಬೇಸತ್ತಿರುವ ಇತರ ಸ್ವಾಮೀಜಿಗಳು ಜಮಖಂಡಿಯಲ್ಲೇ ಪೀಠ ಸ್ಥಾಪಿಸುವ ಆಶಯ ಹೊಂದಿದ್ದಾರೆ ಎನ್ನಲಾಗುತ್ತಿದೆ. ವಿಜಯಪುರ ಜಿಲ್ಲೆಯ ಸ್ವಾಮೀಜಿಯೊಬ್ಬರನ್ನು ಪೀಠಾಧಿಪತಿಯಾಗಿ ನೇಮಿಸಲು ಚರ್ಚೆ ನಡೆದಿದ್ದು, ಮೂರು ಎಕರೆ ಜಾಗೆಯಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ನಿರ್ಮಾಣ ಜತೆಗೆ ಮಠಕ್ಕಾಗಿ ಕಟ್ಟಡ ನಿರ್ಮಿಸಲು ಚರ್ಚೆ ನಡೆದಿದೆ ಎಂಬುದು ಮೂಲಗಳ ಮಾಹಿತಿ. 3ನೇ ಶಕ್ತಿ:ಸ್ವಾಮೀಜಿಗಳ ಒಕ್ಕೂಟದಿಂದ ಈಗಾಗಲೇ 4 ಸಭೆಗಳನ್ನು ನಡೆಸಲಾಗಿದೆ. ಬಹುತೇಕ ಸಭೆಗಳಲ್ಲಿ ಎರಡೂ ಪೀಠಗಳ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಇದೇ ಉದ್ದೇಶದಿಂದ ಇದೀಗ 2 ಎ ಮೀಸಲಾತಿ ಹೋರಾಟದಲ್ಲಿ ಒಕ್ಕೂಟ ಧುಮುಕಿದೆ. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್‌ನೊಂದಿಗೆ ಸೇರಿ ಸಿಎಂಗೆ ಮೀಸಲಾತಿಗೆ ಒತ್ತಾಯಿಸುವುದು ಪ್ರಮುಖ ಅಜೆಂಡಾ. ಇದರೊಂದಿಗೆ ಪಂಚಮಸಾಲಿ ಸಮಾಜದಲ್ಲಿ ಮೂರನೇ ಧಾರ್ಮಿಕ ಶಕ್ತಿ ಉದಯವಾದಂತಾಗಲಿದೆ. ರಾಜ್ಯದ ಹರಿಹರ ಹಾಗೂ ಕೂಡಲಸಂಗಮದಲ್ಲಿ ಪಂಚಮಸಾಲಿ ಸಮಾಜದ ಪೀಠಗಳಿವೆ. ಕೂಡಲಸಂಗಮದ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿಇತ್ತೀಚೆಗೆ ಸಮಾಜಕ್ಕೆ 2 ಎ ಮಿಸಲಾತಿಗಾಗಿ ಬೃಹತ್‌ ಪಾದಯಾತ್ರೆ ನಡೆಸಿ ಹೋರಾಟ ರೂಪಿಸಲಾಗಿತ್ತು. ಹೋರಾಟದಲ್ಲಿ ಹರಿಹರ ಪೀಠ ಹಾಗೂ ಸಮಾಜದ ಬಹುತೇಕ ಸ್ವಾಮೀಜಿಗಳು ಪಾಲ್ಗೊಂಡಿದ್ದರು. ಆದರೆ ಪಾದಯಾತ್ರೆ ನಂತರ ಸ್ವಾಮೀಜಿಗಳಲ್ಲಿ ಭಿನ್ನಮತ ಕಂಡುಬಂದಿತ್ತು. ರಾಜ್ಯದ 80ಕ್ಕೂ ಹೆಚ್ಚು ಸ್ವಾಮೀಜಿಗಳು ಸೇರಿ ಪಂಚಮಸಾಲಿ ಮಠಾಧೀಶರ ಒಕ್ಕೂಟ ಸ್ಥಾಪಿಸಿದರು. ಸತತವಾಗಿ ಸಭೆಗಳನ್ನು ನಡೆಸಿರುವ ಒಕ್ಕೂಟ ಇದೀಗ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಮಹಾದೇಶ್ವರ ಶ್ರೀ ಒಕ್ಕೂಟದ ಅಧ್ಯಕ್ಷಲಿಂಗಾಯತ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾಗಿ ಬಬಲೇಶ್ವರ ಬೃಹನ್ಮಠದ ಮಹಾದೇಶ್ವರ ಶಿವಾಚಾರ್ಯರು ಆಯ್ಕೆಯಾಗಿದ್ದಾರೆ. ಜಿಲ್ಲೆಯ ಜಮಖಂಡಿಯಲ್ಲಿ ಬುಧವಾರ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಸಭೆಯಲ್ಲಿಅಧ್ಯಕ್ಷ, ಕಾರ್ಯದರ್ಶಿ ಆಯ್ಕೆ ಮಾಡಲಾಗಿದೆ. ಕಾರ್ಯದರ್ಶಿಯಾಗಿ ಮನಗೂಳಿ ಹಿರೇಮಠದ ಸಂಗನಬಸವ ಶಿವಾಚಾರ್ಯರನ್ನು ನೇಮಕಗೊಳಿಸಲಾಯಿತು. ಜಮಖಂಡಿಯ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಒಕ್ಕೂಟದ 15ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗವಹಿಸಿದ್ದರು. ಅಖಿಲ ಭಾರತ ಪಂಚಮಸಾಲಿ ಸಮಾಜ ಟ್ರಸ್ಟ್‌ ಪದಾಧಿಕಾರಿಗಳೂ ಇದ್ದರು. 2ಎ ಮೀಸಲಾತಿಗೆ ಒತ್ತಾಯಿಸಿ ಸಿಎಂ ಮೇಲೆ ಒತ್ತಡ ಹೇರುವುದು, ಸಮಾಜ ಸಂಘಟನೆ ಕೈಗೊಳ್ಳುವುದು, ರಾಜ್ಯದ ಇತರ ಜಿಲ್ಲೆಗಳಲ್ಲಿರುವ ಪಂಚಮಸಾಲಿ ಸ್ವಾಮೀಜಿಗಳನ್ನು ಒಕ್ಕೂಟದಡಿ ಒಗ್ಗೂಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.


from India & World News in Kannada | VK Polls https://ift.tt/3t9KPaU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...