ದ.ಆಫ್ರಿಕಾ ಸರಣಿಗೆ ತಂಡವನ್ನು ಆರಿಸಲಿರುವ ನೂತನ ಆಯ್ಕೆ ಸಮಿತಿ

ಮುಂಬಯಿ: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಮಾರ್ಚ್ 12ರಂದು ಆರಂಭವಾಗಲಿದೆ. ಆದರೆ ಇದುವರೆಗೆ ಟೀಮ್ ಇಂಡಿಯಾ ಘೋಷಣೆಯಾಗಿಲ್ಲ. ಇದು ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಪಷ್ಟೆ ನೀಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ , ಮುಂಬರುವ ದಕ್ಷಿಣ ಆಫ್ರಿಕಾ ಸರಣಿಗೆ ಹೊಸ ಆಯ್ಕೆ ಸಮಿತಿಯು ತಂಡವನ್ನು ಆರಿಸಲಿದೆ ಎಂದಿದ್ದಾರೆ. ರಾಷ್ಟ್ರೀಯ ಆಯ್ಕೆ ಸಮಿತಿಯಲ್ಲಿ ತೆರವಾಗಿರುವ ಎರಡು ಸ್ಥಾನಗಳಿಗಾಗಿ ಮಾರ್ಚ್ 4 ಬುಧವಾರದಂದು ಕ್ರಿಕೆಟ್ ಸಲಹಾ ಸಮಿತಿಯು ಸಂದರ್ಶನವನ್ನು ನಡೆಸಲಿದೆ ಎಂಬುದನ್ನು ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ಇದರಿಂದ ಬುಧವಾರದಂದೇ ಆಯ್ಕೆ ಸಮಿತಿ ಮುಖ್ಯಸ್ಥರ ನೇಮಕವಾಗಬಹುದೇ ಎಂಬುದನ್ನು ಕಾದು ನೋಡಬೇಕಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಗವಹಿಸಲಿದೆ. ಕ್ರಿಕೆಟ್ ಸಲಹಾ ಸಮಿತಿ ಜೊತೆಗೆ ಮಂಗಳವಾರ ನಡೆದ ಮಾತುಕತೆ ವೇಳೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಬಿಸಿಸಿಐ ಕಾರ್ಯದರ್ಶಿ ಜೇ ಶಾ ಮತ್ತು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಉಪಸ್ಥಿತರಿದ್ದರು. ಈ ಹಿಂದೆ ಜನವರಿ 31ರಂದು ಕ್ರಿಕೆಟ್ ಸಲಹಾ ಸಮಿತಿಗೆ ಮೂವರು ಸದಸ್ಯರುಗಳಾದ ಮದನ್ ಲಾಲ್, ಆರ್‌ಪಿ ಸಿಂಗ್ ಮತ್ತು ಸುಲಕ್ಷಣ ನಾಯ್ಕ್ ಅವರನ್ನು ನೇಮಕಗೊಳಿಸಲಾಗಿತ್ತು. ಅರ್ಜಿ ಸಲ್ಲಿಸಿರುವ ಆಯ್ದ ಮಾಜಿ ಆಟಗಾರರ ಸಂದರ್ಶನದ ಬಳಿಕ ಸಿಎಸಿ ನೂತನ ಆಯ್ಕೆ ಸಮಿತಿ ಸದಸ್ಯರನ್ನು ಘೋಷಣೆ ಮಾಡಲಿದೆ. ಬಿಸಿಸಿಐ ಮುಖ್ಯಸ್ಥ ಸ್ಥಾನದಿಂದ ಎಂಎಸ್‌ಕೆ ಪ್ರಸಾದ್ ಮತ್ತು ಕೇಂದ್ರ ವಲಯದ ಆಯ್ಕೆಗಾರ ಗಗನ್ ಖೋಡಾ ಅಧಿಕಾರವಧಿ ಅಂತ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ನೂತನ ಸದಸ್ಯರನ್ನು ನೇಮಕ ಮಾಡಲು ಜನವರಿ 18ರಂದು ಅರ್ಜಿ ಆಹ್ವಾನಿಸಲಾಗಿತ್ತು. ಕರ್ನಾಟಕದ ಮಾಜಿ ವೇಗದ ಬೌಲರ್ ಸೇರಿದಂತೆ ಮಾಜಿ ಪ್ರಮುಖರು ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕಾಗಿ ರೇಸ್‌ನಲ್ಲಿದ್ದಾರೆ. ಪ್ರಸಾದ್ ಜೊತೆಗೆ ಮಾಜಿ ಸ್ಪಿನ್ ಬೌಲರ್ ಸುನಿಲ್ ಜೋಶಿ ಅವರನ್ನು ಆಯ್ದ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂಬುದು ತಿಳಿದು ಬಂದಿದೆ. ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್, ರಾಜೇಶ್ ಚೌಹಾನ್ ಹಾಗೂ ಹರ್ವಿಂದರ್ ಸಿಂಗ್ ಕೂಡಾ ಸಂದರ್ಶನದಲ್ಲಿ ಭಾಗಿಯಾಗಲಿದ್ದಾರೆ ಎಂಬುದು ವರದಿಯಾಗಿದೆ. ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ವೇಗದ ಬೌಲರ್‌ಗಳಲ್ಲಿ ಓರ್ವರಾಗಿರುವ ವೆಂಕಟೇಶ್ ಪ್ರವಾದ್, 33 ಟೆಸ್ಟ್ ಪಂದ್ಯಗಳಲ್ಲಿ 96 ವಿಕೆಟ್‌ಗಳನ್ನು ಕಬಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2PLc2hm

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...