ಕನ್ನಡ ಗೀತೆಗಳ ಗೀತಗಾಯನ 'ನಾದ ಝೇಂಕಾರ'; ಚಿರಂತನ ಅಭಿವೃದ್ಧಿ ಪ್ರತಿಷ್ಠಾನದಿಂದ ಡಿ.18ರಂದು ಆಯೋಜನೆ!

ಬೆಂಗಳೂರು: ಸ್ವರ ಚಿರಂತನ ಅರ್ಪಿಸುವ ವೈವಿಧ್ಯಮಯ ಕನ್ನಡ ಗೀತೆಗಳ ಗೀತಗಾಯನ 'ನಾದ ಝೇಂಕಾರ' ಕಾರ್ಯಕ್ರಮವು ಡಿಸೆಂಬರ್ 18ರಂದು ನಡೆಯಲಿದೆ. ಚಿರಂತನ ಅಭಿವೃದ್ಧಿ ಪ್ರತಿಷ್ಠಾನ-ಸಿಡಿಎಫ್, ಇದರ ವತಿಯಿಂದ ನಡೆಯುವ ಕನ್ನಡ ಗೀತೆಗಳ ಗೀತಯಾನ ಕಾರ್ಯಕ್ರಮವು ಶ್ರೀ ಸಿದ್ದಾರೂಢ ಆಶ್ರಮ ಮೈಸೂರು ರಸ್ತೆ (ಮೆಟ್ರೋ ಸ್ಟೇಷನ್ ಹತ್ತಿರ) ಬೆಂಗಳೂರು ಇಲ್ಲಿ ಸಂಜೆ ಸರಿಯಾಗಿ 5ಗಂಟೆಗೆ ಆರಂಭಗೊಳ್ಳಲಿದೆ. ಹಾಗೂ ಕೆನರಾ ಬ್ಯಾಂಕ್ ಸಹಕಾರದೊಂದಿಗೆ ನಡೆಯುವ ಈ ಕಾರ್ಯಕ್ರಮವನ್ನು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ನೀಲಮ್ಮ ಉದ್ಘಾಟಿಸಲಿದ್ದಾರೆ. ಆಶಯ ನುಡಿಗಾನವನ್ನು ಹಿಂದೂಸ್ತಾನಿ ಸಂಗೀತದ ಹೆಸರಾಂತ ಗಾಯಕರು ಹಾಗೂ ಸಂಗೀತ ಸಂಯೋಜಕರಾದ ಪಂ.ಬಸವರಾಜ ಮುಗಳಖೋಡ ನೆರವೇರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕ್ ನ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ವೆಂಕಟೇಶ್ ಶೇಷಾದ್ರಿ, ಖ್ಯಾತ ಹಿನ್ನಲೆ ಗಾಯಕಿ ಹಾಗೂ ಸಂಗೀತ ಸಂಯೋಜಕರಾದ ಸುಮಾ ಎಲ್. ಎನ್ ಶಾಸ್ತ್ರಿ, ಹಾಗೂ ರಾಜಾ ರಾಜೇಶ್ವರಿ ಹಾಸ್ಪಿಟಲ್ ಬೆಂಗಳೂರು ಇದರ ಆರ್ಥೋಪಿಡಿಕ್ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎನ್ ರೋಶನ್ ಕುಮಾರ್ ಭಾಗವಹಿಸಲಿದ್ದಾರೆ. ಸಂಗೀತ, ನೃತ್ಯ ವಿಶೇಷ ಆಹ್ವಾನಿತರಾಗಿ ರಾಜಾರಾಜೇಶ್ವರಿ ನಗರದ ನಾಟ್ಯಾಂಜನ ಸಂಗೀತ ಮತ್ತು ನೃತ್ಯ ಶಾಲೆಯ ಆಶಾ ಹೇಮರಾಜ್, ಸ್ಥಾಯಿ ಸ್ವರಾಂಜಲಿ ತಂಡದ ರೂಪಾಂಜಲಿ, ಬೆಂಗಳೂರು ನಗರ ನಾಗರಿಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಟಿ ಎನ್ ವಿಶ್ವನಾಥ್ ಭಾಗವಹಿಸಲಿದ್ದಾರೆ. ಕನ್ನಡ ಗೀತೆಗಳ ಗೀತಗಾಯನ ಕಾರ್ಯಕ್ರಮಕ್ಕೆ ಪ್ರವೇಶಾತಿ ಉಚಿತವಾಗಿದ್ದು, ಮಾಹಿತಿಗಾಗಿ ಮೊಬೈಲ್ ನಂಬರ್ 9611736266 ಹಾಗೂ 903556011 ಸಂಪರ್ಕಿಸಬಹುದು.


from India & World News in Kannada | VK Polls https://ift.tt/329Y16b

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...