ವಾಷಿಂಗ್ಟನ್: ಅಫ್ಘಾನಿಸ್ತಾನದಿಂದ ಪಡೆಗಳನ್ನು ಸಂಪೂರ್ಣ ಹಿಂದಕ್ಕೆ ಕರೆಸಿಕೊಳ್ಳುವ ತಮ್ಮ ನಿರ್ಧಾರವನ್ನು ಅಧ್ಯಕ್ಷ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಇದು ಅಮೆರಿಕ ರಾಷ್ಟ್ರೀಯ ಹಿತಾಸಕ್ತಿ ನಿರ್ಧಾರ ಎಂದು ಅವರು ಹೇಳಿದ್ದಾರೆ. ಹಾಗೆಯೇ ಅಮೆರಿಕಕ್ಕಾಗಿ ತೆಗೆದುಕೊಂಡ 'ಸರಿಯಾದ, ಬುದ್ಧಿವಂತಿಕೆಯ ಮತ್ತು ಅತ್ಯುತ್ತಮ ನಿರ್ಧಾರ' ಎಂದೂ ಹೇಳಿಕೊಂಡಿದ್ದಾರೆ. ಜತೆ ಒಪ್ಪಂದ ಮಾಡಿಕೊಂಡಿದ್ದಕ್ಕಾಗಿ ಹಿಂದಿನ ಅಧ್ಯಕ್ಷ ಅವರನ್ನು ದೂಷಿಸಿರುವ ಬೈಡನ್, ತಾವು ಶ್ವೇತ ಭವನ ಕಚೇರಿ ಪ್ರವೇಶಿಸಿದಾಗ 2001ರಿಂದಲೂ ತಾಲಿಬಾನ್ ತನ್ನ ಅತ್ಯಂತ ಸೇನಾ ಸಾಮರ್ಥ್ಯ ಹೊಂದಿತ್ತು. ಆಗ ದೇಶದ ಸುಮಾರು ಅರ್ಧಭಾಗವನ್ನು ನಿಯಂತ್ರಣದಲ್ಲಿಟ್ಟುಕೊಂಡಿತ್ತು. ಹಿಂದಿ ಸರ್ಕಾರ ನಡೆಸಿದ ಒಪ್ಪಂದವು ನಾವು ಅಫ್ಘಾನಿಸ್ತಾನವನ್ನು ಮೇ 1ಕ್ಕೆ ತೊರೆಯುವಂತೆ ಗಡುವು ನೀಡಿತ್ತು. ಆ ವೇಳೆಗೆ ನಾವು ದೇಶವನ್ನು ತೊರೆಯಬೇಕು, ಅಲ್ಲಿಯವರೆಗೂ ತಾಲಿಬಾನ್ ಅಮೆರಿಕ ಪಡೆಗಳ ಮೇಲೆ ದಾಳಿ ಮಾಡುವುದಿಲ್ಲ. ಆದರೆ ನಾವು ಅಲ್ಲಿಯೇ ಉಳಿದರೆ ದಾಳಿ ನಡೆಸುತ್ತವೆ ಎಂಬಂತೆ ಒಪ್ಪಂದ ಮಾಡಲಾಗಿತ್ತು ಎಂದು ಬೈಡನ್ ಆರೋಪಿಸಿದ್ದಾರೆ. 'ಅಫ್ಘನ್ ಭದ್ರತಾ ಪಡೆಗಳು ಹೋರಾಟಕ್ಕೆ ಸಿದ್ಧವಾದಾಗ ನಾವೂ ಸಿದ್ಧರಾಗಿದ್ದೆವು. ಅವರು ತಮ್ಮ ದೇಶಕ್ಕಾಗಿ ಎರಡು ದಶಕಗಳ ಹೋರಾಟ ಮಾಡಿ ಸಾವಿರಾರು ಸೈನಿಕರನ್ನು ಕಳೆದುಕೊಂಡ ಬಳಿಕವೂ ನಿರೀಕ್ಷಿಸಿದ್ದಷ್ಟು ಸಮಯ ಕೂಡ ಅದನ್ನು ಹಿಡಿದಿಟ್ಟುಕೊಳ್ಳಲಾಗಲಿಲ್ಲ. ತಮ್ಮದೇ ಸರ್ಕಾರದ ಪತನವನ್ನು ಭ್ರಷ್ಟಾಚಾರ ಹಾಗೂ ಅಕ್ರಮಗಳ ನಡುವೆ ಅವರ ಅಧ್ಯಕ್ಷ ದೇಶದಿಂದ ಪರಾರಿಯಾಗುವುದನ್ನು, ದೇಶವನ್ನು ತಮ್ಮ ಶತ್ರು ತಾಲಿಬಾನ್‌ಗೆ ಒಪ್ಪಿಸುವುದನ್ನು ಹಾಗೂ ಅಮೆರಿಕ ಮತ್ತು ನಮ್ಮ ಮಿತ್ರ ದೇಶಗಳ ಸೇನೆಗಳಿಗೆ ಅಪಾಯ ಗಣನೀಯವಾಗಿ ಹೆಚ್ಚಿದ್ದನ್ನು ಜನತೆ ಕಣ್ಣಾರೆ ನೋಡಿದ್ದಾರೆ' ಎಂದು ಅಫ್ಘಾನಿಸ್ತಾನ ಪಡೆಗಳ ವೈಫಲ್ಯವನ್ನು ಕೂಡ ದೂಷಿಸಿದ್ದಾರೆ. ತಾಲಿಬಾನ್ ಮಾತು ನಂಬಿರಲಿಲ್ಲಅಫ್ಘಾನಿಸ್ತಾನದೆಲ್ಲೆಡೆ ಟೆಲಿವಿಷನ್ ಮತ್ತು ರೇಡಿಯೋ ಪ್ರಸಾರ ಮಾಡಲಾಗುವುದು, ಅಮೆರಿಕದ ಜತೆ ಕೆಲಸ ಮಾಡಿದವರು ಸೇರಿದಂತೆ ದೇಶ ತೊರೆಯಲು ಬಯಸುವವರಿಗೆ ಸುರಕ್ಷಿತ ಅವಕಾಶ ನೀಡಲಾಗುವುದು ಎಂದು ತಾಲಿಬಾನ್ ಸಾರ್ವಜನಿಕವಾಗಿ ಹೇಳಿಕೊಂಡಿತ್ತು. ಆದರೆ ಅವರ ಮಾತುಗಳನ್ನು ನಾವು ಪರಿಗಣಿಸಲಿಲ್ಲ. ಆದರೆ ಅವರ ಕ್ರಿಯೆಗಳನ್ನು ಗಂಭೀರವಾಗಿ ಗಮನಿಸಿದ್ದೆವು. ಅವರ ಬದ್ಧತೆಗಳು ಈಡೇರಿಸುವಂತೆ ಮಾಡುವ ಹತೋಟಿ ನಮ್ಮಲ್ಲಿತ್ತು ಎಂದಿರುವ ಬೈಡನ್, ಆಗಸ್ಟ್ 31ರಂದು ಅಫ್ಘಾನಿಸ್ತಾನವನ್ನು ತೊರೆಯುವ ಪ್ರಯತ್ನವು ಒಪ್ಪಂದದ ಗಡುವಿನ ಕಾರಣಕ್ಕಾಗಿ ಅಲ್ಲ, ಆದರೆ ಅಮೆರಿಕನ್ನರನ್ನು ಉಳಿಸುವುದಾಗಿತ್ತು ಎಂದು ಎಂದಿದ್ದಾರೆ. ಇದೆಲ್ಲ ಟ್ರಂಪ್ ಕೆಲಸ'ನನ್ನ ಪೂರ್ವಾಧಿಕಾರಿ, ಮಾಜಿ ಅಧ್ಯಕ್ಷರು, ಮೇ 1ರಂದು ಅಮೆರಿಕ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವುದಾಗಿ ತಾಲಿಬಾನ್ ಜತೆ ಒಪ್ಪಂದ ಮಾಡಿಕೊಂಡಿದ್ದರು. ನಾನು ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಇದು ನಡೆಯಬೇಕಿತ್ತು. ಈ ಒಪ್ಪಂದದಲ್ಲಿ ಅಫ್ಘನ್ ಸರ್ಕಾರದ ಜತೆ ತಾಲಿಬಾನ್ ಸಹಕಾರ ಆಡಳಿತ ವ್ಯವಸ್ಥೆ ಮಾಡಿಕೊಳ್ಳುವ ಅಗತ್ಯವಿಲ್ಲ ಎಂಬುದು ಸೇರಿದಂತೆ, ಕಳೆದ ವರ್ಷ ತಾಲಿಬಾನ್‌ನ ಪ್ರಮುಖ ಕಮಾಂಡರ್‌ಗಳನ್ನು ಒಳಗೊಂಡ 5,000 ಕೈದಿಗಳನ್ನು ಬಿಡುಗಡೆಗೊಳಿಸುವಂತೆಯೂ ಮಾಡಿತ್ತು. ಈಗ ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ಪಡೆದುಕೊಂಡವರಲ್ಲಿ ಅವರೂ ಇದ್ದಾರೆ' ಎಂದು ಟ್ರಂಪ್ ವಿರುದ್ಧ ಬೈಡನ್ ಕಿಡಿಕಾರಿದ್ದಾರೆ. ಎಲ್ಲಾ ಕಡೆ ಭಯೋತ್ಪಾದನೆ ಇದೆಅಫ್ಘಾನಿಸ್ತಾನವನ್ನು ತೊರೆಯುವುದು ರಾಷ್ಟ್ರೀಯ ಹಿತಾಸಕ್ತಿ ನಿರ್ಧಾರ ಎಂದು ಸಮರ್ಥಿಸಿಕೊಂಡಿರುವ ಬೈಡನ್, 2001ರಲ್ಲಿ ತನಗೆ ಇದ್ದ ಬೆದರಿಕೆಗಳನ್ನು ಎದುರಿಸಿದಂತೆ ಈಗಲೂ ಮಾಡಲು ಆಗುವುದಿಲ್ಲ. ಇದು ಹೊಸ ಜಗತ್ತು. ಭಯೋತ್ಪಾದನೆ ಬೆದರಿಕೆಯು ಅಫ್ಘಾನಿಸ್ತಾನದಾಚೆ ಇಡೀ ಜಗತ್ತಿನಾದ್ಯಂತ ವ್ಯಾಪಿಸಿದೆ. ಸೊಮಾಲಿಯಾದಲ್ಲಿ ನಮಗೆ ಅಲ್ ಶಬಾಬ್‌ನಿಂದ ಬೆದರಿಕೆ ಇದೆ. ಸಿರಿಯಾ ಮತ್ತು ಅರೇಬಿಯನ್ ದ್ವೀಪದಲ್ಲಿ ಅಲ್ ಕೈದಾ, ಸಿರಿಯಾ ಹಾಗೂ ಇರಾಕ್‌ನಲ್ಲಿ ಐಸಿಸ್ ಬೇರೂರುತ್ತಿದ್ದು, ಆಫ್ರಿಕಾ ಮತ್ತು ಏಷ್ಯಾಗಳೆಲ್ಲೆಡೆ ಉಗ್ರ ಸಂಘಟನೆಗಳು ನೆಲೆಯೂರುತ್ತಿವೆ ಎಂದಿದ್ದಾರೆ. ಐಸಿಸ್-ಕೆ ಎಚ್ಚರಿಕೆ'ಅಫ್ಘಾನಿಸ್ತಾನ ಹಾಗೂ ಇತರೆ ದೇಶಗಳಲ್ಲಿನ ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಅದಕ್ಕಾಗಿ ನಾವು ಅಲ್ಲಿನ ನೆಲದಲ್ಲಿ ಇದ್ದು ಯುದ್ಧ ಮಾಡಬೇಕಿಲ್ಲ. ಅಮೆರಿಕದ ಬೂಟ್‌ಗಳನ್ನು ನೆಲದ ಮೇಲೆ ಇರಿಸದೆಯೂ ನಾವು ಭಯೋತ್ಪಾದಕರ ಮೇಲೆ ದಾಳಿ ನಡೆಸಬಹುದು. ಆ ಸಾಮರ್ಥ್ಯವನ್ನು ಕಳೆದ ವಾರ ತೋರಿಸಿದ್ದೇವೆ. ದೂರದಲ್ಲಿದ್ದ ಐಸಿಸ್-ಕೆ ಮೇಲೆ ದಾಳಿ ನಡೆಸಿದ್ದೇವೆ. ನಮ್ಮ 13 ಸೈನಿಕರು ಹಾಗೂ ಮುಗ್ಧ ಅಫ್ಘನ್ ಜನರನ್ನು ಕೊಂದ ದಿನಗಳ ನಂತರ ಕ್ರಮ ತೆಗೆದುಕೊಂಡಿದ್ದೇವೆ. ಹಾಗೆಯೇ ಐಸಿಸ್-ಕೆ: ನಿಮ್ಮ ವಿಚಾರದಲ್ಲಿ ನಮ್ಮ ಕೆಲಸ ಇನ್ನೂ ಮುಗಿದಿಲ್ಲ' ಎಂದು ಐಸಿಸ್-ಕೆ ಉಗ್ರ ಸಂಘಟನೆಗೆ ಎಚ್ಚರಿಕೆ ನೀಡಿದ್ದಾರೆ. ಮಗನನ್ನು ಸ್ಮರಿಸಿದ ಬೈಡನ್ಇರಾಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ತಮ್ಮ ಮಗ ಬ್ಯೂ ಬೈಡನ್, ಯುದ್ಧ ನಿಲ್ಲಿಸಲು ಬದ್ಧರಾಗಿದ್ದರು. 2015ರಲ್ಲಿ ತನ್ನ 46ನೇ ವಯಸ್ಸಿನಲ್ಲಿ ಮಿದುಳಿನ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು ಎಂದು ಜೋ ಬೈಡನ್ ಸ್ಮರಿಸಿಕೊಂಡಿದ್ದಾರೆ. ಆ ಸಮವಸ್ತ್ರ ಧರಿಸಿದ ಈ ದೇಶದ ಶೇ 1ರಷ್ಟು ಮಂದಿಯಿಂದ ನಾವು ಏನೇನೆಲ್ಲ ಕೇಳುತ್ತಿದ್ದೇವೆ ಎಂಬುದನ್ನು ಸಾಕಷ್ಟು ಜನರು ಅರ್ಥಮಾಡಿಕೊಳ್ಳುತ್ತಿಲ್ಲ. ಅವರು ನಮ್ಮ ದೇಶದ ರಕ್ಷಣೆಗಾಗಿ ತಮ್ಮ ಜೀವವನ್ನೇ ನೀಡಲು ಸಿದ್ಧರಿದ್ದಾರೆ. ಇರಾಕ್‌ನಲ್ಲಿ ಒಂದು ವರ್ಷ ಸಂಪೂರ್ಣವಾಗಿ ಕಳೆದಿದ್ದ ನನ್ನ ಮಗ ಬ್ಯೂ ಕಾರಣದಿಂದ ಇರಬಹುದು. ಅಥವಾ ನಾನು ಸೆನೆಟರ್, ಉಪಾಧ್ಯಕ್ಷ ಮತ್ತು ಅಧ್ಯಕ್ಷನಾಗಿ ಈ ದೇಶಗಳಲ್ಲಿ ಪ್ರಯಾಣಿಸುವಾಗ ಕಂಡಿರುವ ಸಂಗತಿಗಳ ಕಾರಣದಿಂದ ಇರಬಹುದು ಎಂದು ಸೇನೆ ಹಿಂತೆಗೆತದ ನಿರ್ಧಾರದ ಕಾರಣವನ್ನು ಹಂಚಿಕೊಂಡಿದ್ದಾರೆ.
from India & World News in Kannada | VK Polls https://ift.tt/3gSmn8R