Ind vs Sl Live Score: ಟಾಸ್‌ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್!

ಕೊಲಂಬೊ: ಆತಿಥೇಯ ವಿರುದ್ಧದ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ನಾಯಕ ಶಿಖರ್‌ ಧವನ್‌ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಶಿಖರ್‌ ಧವನ್‌ ಟಾಸ್‌ ಗೆಲ್ಲುವಲ್ಲಿ ವಿಫಲರಾಗಿದ್ದರು. ಪರಿಣಾಮ ಎರಡೂ ಪಂದ್ಯಗಳಲ್ಲಿ ರನ್‌ ಚೇಸ್‌ ಲಭ್ಯವಾಗಿ ಕ್ರಮವಾಗಿ 7 ಮತ್ತು 3 ವಿಕೆಟ್‌ಗಳ ಗೆಲುವು ಲಭ್ಯವಾಗಿತ್ತು. ಭಾರತ ತಂಡದಲ್ಲಿ 6 ಬದಲಾವಣೆ ಸರಣಿ ಈಗಾಗಲೇ ಗೆದ್ದುಕೊಂಡಿರುವ ಭಾರತ ತಂಡ ಕೊನೇ ಪಂದ್ಯದಲ್ಲಿ ಪ್ರಯೋಗಕ್ಕೆ ಮುಂದಾಗಿದ್ದು, ಕೆಲ ಯುವ ಪ್ರತಿಭೆಗಳಿಗೆ ಆಡುವ ಅವಕಾಶ ಮಾಡಿಕೊಟ್ಟಿದೆ. ಒಟ್ಟಾರೆ ಆರು ಬದಲಾವಣೆ ತರಲಾಗಿದ್ದು, ಕೃಷ್ಣಪ್ಪ ಗೌತಮ್, ರಾಹುಲ್ ಚಹರ್, ನವದೀಪ್ ಸೈನಿ, ಚೇತನ್ ಸಕಾರಿಯ, ಸಂಜು ಸ್ಯಾಮ್ಸನ್‌ ಮತ್ತು ನಿತೀಶ್‌ ರಾಣಾಗೆ ಅವಕಾಶ ಮಾಡಿಕೊಡಲಾಗಿದೆ. 1980ರಲ್ಲಿ ಭಾರತ ತಂಡಕ್ಕೆ 5 ಮಂದಿ ಆಟಗಾರರು ಪದಾರ್ಪಣೆ ಮಾಡಿದ್ದರು. ಈಗ ಶ್ರೀಲಂಕಾ ವಿರುದ್ದದ 3ನೇ ಒಡಿಐ ಪಂದ್ಯದಲ್ಲಿ 5 ಮಂದಿ ಪದಾರ್ಪಣೆ ಮಾಡಿ ಹಿಂದಿನ ದಾಖಲೆಯನ್ನು ಸರಿಗಟ್ಟಿದ್ದಾರೆ. IND vs SL: ತೃತೀಯ ಒಡಿಐ ಪಂದ್ಯದ LIVE ಶ್ರೀಲಂಕಾ ತಂಡದ ಪ್ಲೇಯಿಂಗ್ ಇಲೆವೆನ್ಅವಿಷ್ಕ ಫರ್ನಾಂಡೊ, ಮಿನೋದ್ ಭಾನುಕ (ವಿಕೆಟ್‌ಕೀಪರ್‌), ಭಾನುಕ ರಾಜಪಕ್ಸೆ, ಧನಂಜಯ ಡಿ'ಸಿಲ್ವಾ, ಚರಿತ್ ಅಸಲಂಕಾ, ದಸುನ್ ಶನಕ (ನಾಯಕ), ರಮೇಶ್ ಮೆಂಡಿಸ್, ಚಮಿಕ ಕರುಣಾರತ್ನೆ, ಅಕಿಲ ಧನಂಜಯ, ದುಶ್ಮಾಂತ ಚಾಮೀರ, ಪ್ರವೀಣ್‌ ಜಯವಿಕ್ರಮ. ಟೀಮ್ ಇಂಡಿಯಾ ಪ್ಲೇಯಿಂಗ್‌ ಇಲೆವೆನ್ಪೃಥ್ವಿ ಶಾ, ಶಿಖರ್ ಧವನ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್‌), ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್, ನಿತೀಶ್ ರಾಣಾ, ಹಾರ್ದಿಕ್ ಪಾಂಡ್ಯ, ಕೃಷ್ಣಪ್ಪ ಗೌತಮ್, ರಾಹುಲ್ ಚಹರ್, ನವದೀಪ್ ಸೈನಿ, ಚೇತನ್ ಸಕಾರಿಯ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3iHZ01M

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...