ಭೂಕುಸಿತದಿಂದ ಭಾರಿ ದುರಂತ: ಮಹಾರಾಷ್ಟ್ರದ ರಾಯಗಡದಲ್ಲಿ 36 ಮಂದಿ ದುರ್ಮರಣ

ರಾಯಗಡ: ಮಹಾರಾಷ್ಟ್ರದ ಜಿಲ್ಲೆಯಲ್ಲಿ ಅನಾಹುತಕಾರಿ ಮಳೆಯಿಂದ ಉಂಟಾದ ಪರಿಣಾಮ 36 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ರಾಜ್ಯದ ಕೊಂಕಣ ಪ್ರದೇಶದಲ್ಲಿ ಸಾವಿರಾರು ಮಂದಿ ಹಾಗೂ ಭೂಕುಸಿತದ ಘಟನೆಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಯಗಡದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರನ್ನು ಸ್ಥಳಾಂತರಿಸಲು ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಹೆಲಿಕಾಪ್ಟರ್ ಮೂಲಕ ನಡೆಸಲಾಗುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಜನರನ್ನು ಗುರುತಿಸಲು ಸಹಾಯವಾಗುತ್ತದೆ ಎಂಬ ಕಾರಣಕ್ಕೆ ಒಳಗೆ ಸಿಲುಕಿಕೊಂಡಿರುವವರು ಮನೆಯ ಮಹಡಿಗಳು ಅಥವಾ ಎತ್ತರದ ಪ್ರದೇಶಕ್ಕೆ ಹತ್ತುವಂತೆ ಅಧಿಕಾರಿಗಳು ಜನರಿಗೆ ಮನವಿ ಮಾಡುತ್ತಿದ್ದಾರೆ. ಗುರುಚಾರ ಸಂಭವಿಸಿದ ಮೂರು ಪ್ರತ್ಯೇಕ ಭೂಕುಸಿತ ಪ್ರಕರಣಗಳಲ್ಲಿ ಸಾವುಗಳು ಸಂಭವಿಸಿದ್ದು, 32 ಮೃತದೇಹಗಳನ್ನು ಒಂದು ಸ್ಥಳದಲ್ಲಿ ಮತ್ತು ಉಳಿದ ನಾಲ್ಕು ಶವಗಳನ್ನು ಮತ್ತೊಂದು ಸ್ಥಳದಲ್ಲಿ ಹೊರತೆಗೆಯಲಾಗಿದೆ. ಮಹಾರಾಷ್ಟ್ರದಲ್ಲಿ ಜುಲೈ ತಿಂಗಳಲ್ಲಿ ಕಳೆದ 40 ವರ್ಷಗಳಲ್ಲಿಯೇ ಅತ್ಯಧಿಕ ದಾಖಲಾಗಿದೆ. ತಲೈ ಪ್ರದೇಶದಲ್ಲಿ 32 ಶವಗಳು ಪತ್ತೆಯಾಗಿದ್ದು, ಸಖಾರ್ ಸುತಾರ್ ವಾದಿಯಲ್ಲಿ ನಾಲ್ಕು ಮೃತದೇಹ ಸಿಕ್ಕಿವೆ. ಇನ್ನೂ 30 ಮಂದಿ ಒಳಗೆ ಸಿಲುಕಿಕೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರವಾಹ, ಭೂಕುಸಿತದಿಂದ ತತ್ತರಿಸಿರುವ ಪ್ರದೇಶಗಳಿಗೆ 12 ಸ್ಥಳೀಯ ಪರಿಹಾರ ತಂಡಗಳು, ನೌಕಾಪಡೆಯ ಎರಡು ತಂಡಗಳು, ಕರಾವಳಿ ಕಾವಲು ಪಡೆಯ ಎರಡು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದಿಂದ (ಎನ್‌ಡಿಎಆರ್‌ಎಫ್) ಮೂರು ತಂಡಗಳನ್ನು ನಿಯೋಜಿಸಲಾಗಿದೆ. ರತ್ನಗಿರಿ ಜಿಲ್ಲೆಯ ಕರಾವಳಿ ಪಟ್ಟಣ ಚಿಪ್ಲುನ್‌ನಲ್ಲಿ ಸತತ ಮಳೆಯಿಂದಾಗಿ ವಶಿಷ್ಟಿ ನದಿ ಉಕ್ಕಿ ಹರಿಯುತ್ತಿದ್ದು, ರಸ್ತೆಗಳು ಮತ್ತು ಮನೆಗಳ ಒಳಗೆ ನೀರು ನುಗ್ಗಿದೆ. ಸುಮಾರು 12 ಅಡಿಗಳಷ್ಟು ಎತ್ತರದಲ್ಲಿ ನೀರು ಹರಿಯುತ್ತಿದೆ. ಪಟ್ಟಣದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ದೂರವಾಣಿ ಸಂಪರ್ಕವೂ ಸರಿಯಾಗಿ ಸಿಗುತ್ತಿಲ್ಲ. ಕೋವಿಡ್ ಆಸ್ಪತ್ರೆಯ ಸುತ್ತಲೂ ನೀರು ಆವರಿಸಿದ್ದು, ರೋಗಿಗಳನ್ನು ದೋಣಿಗಳಲ್ಲಿ ರಕ್ಷಿಸಲಾಗುತ್ತಿದೆ.


from India & World News in Kannada | VK Polls https://ift.tt/3zwV3Eb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...