ಏರ್ಟೆಲ್, ವೊಡಾಫೋನ್ ಕಂಪೆನಿಗಳಿಗೆ ಹಿನ್ನಡೆ: ಎಜಿಆರ್ ಲೆಕ್ಕ ಲೋಪ ಆರೋಪ ವಜಾಗೊಳಿಸಿದ ಸುಪ್ರೀಂಕೋರ್ಟ್

ಹೊಸದಿಲ್ಲಿ: ಹೊಂದಾಣಿಕೆ ಮಾಡಿದ ಒಟ್ಟು ವರಮಾನ () ಲೆಕ್ಕಾಚಾರದಲ್ಲಿ ದೋಷಗಳು ಉಂಟಾಗಿದ್ದು, ತಿದ್ದುಪಡಿ ಮಾಡುವಂತೆ ಕಂಪೆನಿಗಳು ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ತಿರಸ್ಕರಿಸಿದೆ. ಇದರಿಂದ ಖಾಸಗಿ ದೂರಸಂಪರ್ಕ ಸಂಸ್ಥೆಗಳಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಕೇಂದ್ರ ಸರಕಾರಕ್ಕೆ ಪ್ರತಿ ವರ್ಷ ಶೇ 10ರ ಪಾವತಿಯಂತೆ ಬಾಕಿ ಉಳಿದಿರುವ ಎಜಿಆರ್ ಮೊತ್ತವನ್ನು ಸಂಪೂರ್ಣವಾಗಿ ಪಾವತಿ ಮಾಡಲು ಸುಪ್ರೀಂಕೋರ್ಟ್, ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ 10 ವರ್ಷಗಳ ಅವಧಿಯನ್ನು ದೂರಸಂಪರ್ಕ ಸಂಸ್ಥೆಗಳಿಗೆ ನೀಡಿತ್ತು. ಮೊದಲ ಕಂತು ಪಾವತಿಸಲು 2021ರ ಮಾರ್ಚ್ 31ರಂದು ಕಂಪೆನಿಗಳಿಗೆ ಗಡುವು ನೀಡಲಾಗಿತ್ತು. ನಡೆಸಿದ ಲೆಕ್ಕಾಚಾರವು ಸಮರ್ಪಕವಾಗಿಲ್ಲ ಎಂದು ತಗಾದೆ ತೆಗೆದಿದ್ದ ದೂರಸಂಪರ್ಕ ಕಂಪೆನಿಗಳು ಮೊದಲ ಕಂತಿನ ಮೊತ್ತವನ್ನು ಪಾವತಿಸದೆ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದವು. ತಾವು ಈಗಾಗಲೇ ಶೇ 10ಕ್ಕಿಂತಲೂ ಅಧಿಕ ಮೊತ್ತವನ್ನು ಪಾವತಿ ಮಾಡಿಯಾಗಿದೆ ಎಂದು ವಾದಿಸಿದ್ದವು. ಎಜಿಆರ್ ಬಾಕಿಗೆ ಸಂಬಂಧಿಸಿದ ಲೆಕ್ಕ ಮಾಡುವಾಗ ದೂರಸಂಪರ್ಕ ಇಲಾಖೆ ತಪ್ಪುಗಳನ್ನು ಮಾಡಿದೆ ಎಂದು ಆರೋಪಿಸಿದ್ದ ಕಂಪೆನಿಗಳು, ತಮ್ಮ ಹಿಂದಿನ ಪಾವತಿಗಳನ್ನು ಪರಿಗಣಿಸುವಂತೆ ಇಲಾಖೆಗೆ ಸೂಚನೆ ನೀಡಬೇಕು ಎಂದು ಕೋರಿದ್ದವು. ವೊಡಾಫೋನ್ ಐಡಿಯಾ 58,254 ಕೋಟಿ ರೂ ಮತ್ತು ಭಾರ್ತಿ ಏರ್ಟೆಲ್ 43,980 ಕೋಟಿ ರೂ ಬಾಕಿ ಉಳಿಸಿಕೊಂಡಿವೆ.


from India & World News in Kannada | VK Polls https://ift.tt/3y1g3CC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...