'ಪಂಜಾಬ್‌ನ ಸತ್ಯವನ್ನು ಬಯಲು ಮಾಡಿದ್ದೇನೆ': ಕಾಂಗ್ರೆಸ್‌ಗೆ ಮತ್ತೆ ಬಿಸಿ ತುಪ್ಪವಾದ ಸಿಧು

ಚಂಡೀಗಡ: ಪಂಜಾಬ್‌ನಲ್ಲಿ ನೇತೃತ್ವದ ಸರ್ಕಾರ ಮಗ್ಗುಲ ಮುಳ್ಳಾಗಿರುವ ಮಾಜಿ ಕ್ರಿಕೆಟಿಗ, ರಾಜಕಾರಣ , ತಮ್ಮ ನಿಲುವು ಸಡಿಲಿಸುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದಾರೆ. ರಾಜ್ಯಸಭೆ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರಚಿಸಿದ ಮೂವರು ಸದಸ್ಯರ ಸಮಿತಿ ಮುಂದೆ ಮಂಗಳವಾರ ಹೊಸದಿಲ್ಲಿಯಲ್ಲಿ ಹಾಜರಾಗಿದ್ದ ಸಂದರ್ಭದಲ್ಲಿ ಅವರು ತಮ್ಮ ಮಾತನ್ನು ಪುನರುಚ್ಚರಿಸಿದ್ದಾರೆ. 'ನನ್ನ ನಿಲುವಿನಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ತೆರಿಗೆಗಳು ಸೇರಿದಂತೆ ಜನರ ಪ್ರಜಾಪ್ರಭುತ್ವದ ಹಕ್ಕುಗಳನ್ನು ಮರಳಿಸಬೇಕು. ನಾನು ಸತ್ಯವನ್ನು ತೆರೆದಿಟ್ಟಿದ್ದೇನೆ' ಎಂದು ಸಭೆಯ ಬಳಿಕ ಸಿಧು ಸುದ್ದಿಗಾರರಿಗೆ ತಿಳಿಸಿದ್ದಾರೆ. ಮೂವರು ಸದಸ್ಯರ ಸಮಿತಿಯೊಂದಿಗೆ ಸುಮಾರು ಎರಡು ಗಂಟೆ ಸಿಧು ಮಾತುಕತೆ ನಡೆಸಿದರು. 'ತಮಗೆ ವಿವರ ನೀಡುವಂತೆ ಹೈಕಮಾಂಡ್ ಕರೆಸಿದ ಕಾರಣದಿಂದ ನಾನು ಇಲ್ಲಿಗೆ ಬಂದಿದ್ದೇನೆ. ನಾನು ಪಂಜಾಬ್‌ನ ಸತ್ಯವನ್ನು ಅವರಿಗೆ ತಿಳಿಸಿದ್ದೇನೆ. ತಳಮಟ್ಟದಿಂದ ಬಂದಿರುವ ಪಂಜಾಬ್‌ ಜನರ ಧ್ವನಿಯನ್ನು ನಾನು ಅವರಿಗೆ ತಿಳಿಸಿದ್ದೇನೆ. ಸತ್ಯವನ್ನು ಅಡಗಿಸಿಡಬಹುದು, ಆದರೆ ಸೋಲಿಸಲಾಗದು. 'ಜೀತೇಗಾ ಪಂಜಾಬ್' ಮತ್ತು ರಾಜ್ಯದ ಪ್ರತಿ ಪ್ರಜೆಯನ್ನೂ ಪಾಲುದಾರನನ್ನಾಗಿಸಬೇಕು. ನಾವು ಎಲ್ಲ ವಿರೋಧಿ ಶಕ್ತಿಗಳನ್ನು ಸೋಲಿಸಬೇಕಿದೆ' ಎಂದು ಅವರು ಹೇಳಿದರು. ಆದರೆ ಯಾವ ಪ್ರಶ್ನೆಗಳಿಗೂ ಉತ್ತರಿಸುವ ಗೋಜಿಗೆ ಅವರು ಹೋಗಲಿಲ್ಲ. ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ವಿರುದ್ಧ ತೀವ್ರ ಟೀಕೆಗಳನ್ನು ನಡೆಸುತ್ತಿರುವ ಸಿಧು, ಪಂಜಾಬ್ ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿದ್ದಾರೆ. ಅದರಲ್ಲಿಯೂ ಗೃಹ ಸಚಿವರಾಗಿ ಅಮರಿಂದರ್ ಸಿಂಗ್ ಅವರು ಗುರು ಗ್ರಂಥ ಸಾಹಿಬ್‌ಗೆ ಅಪಮಾನ ಮಾಡಿದ ಪ್ರಕರಣದ ವಿಚಾರದಲ್ಲಿ ಸಿಧು ಹಾಗೂ ಸಿಂಗ್ ನಡುವೆ ಭಾರಿ ಮಾತಿನ ಸಮರಗಳು ನಡೆದಿವೆ. ಸಿಧು ಅವರಿಗೆ ಜಲಂಧರ್‌ನ ಶಾಸಕ ಪರ್ಗಾಟ್ ಸಿಂಗ್ ಬೆಂಬಲ ನೀಡಿದ್ದಾರೆ. 'ಧರ್ಮ ಅಪಚಾರ, ಮಾದಕವಸ್ತು ಹಾಗೂ ಮರಳು ಮಾಫಿಯಾದಂತಹ ಗಂಭೀರ ಸಮಸ್ಯೆಗಳು ಹೆಚ್ಚಾಗಿವೆ. ಈ ಬಗ್ಗೆ ಸಿಎಂಗೆ ಪತ್ರವನ್ನೂ ಬರೆದಿದ್ದೆ. ಎಲ್ಲವೂ ಸಿಎಂ ಮೇಲೆ ಅವಲಂಬಿತವಾಗಿದೆ. ಇತರರೂ ತಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಗೂ ವಿದ್ಯುತ್ ಖರೀದಿ ಒಪ್ಪಂದಗಳ ವಿಚಾರದಲ್ಲಿಯೂ ಆತಂಕವಿದೆ' ಎಂದು ಪರ್ಗಾಟ್ ಹೇಳಿದ್ದಾರೆ. ಸಿಧು ಬಂಡಾಯ ಕಾಂಗ್ರೆಸ್‌ಗೆ ತೀವ್ರ ಮುಜುಗರ ಉಂಟುಮಾಡಿದೆ. ಪಂಜಾಬ್‌ನ ಶಾಸಕರು ಮತ್ತು ಸಂಸದರು ಎಐಸಿಸಿ ಸಮಿತಿಯನ್ನು ಭೇಟಿ ಮಾಡಿದ್ದಾರೆ. ರಾಹುಲ್ ಗಾಂಧಿ ಕೂಡ ದೂರವಾಣಿ ಮೂಲಕ ಅನೇಕ ಶಾಸಕರ ಜತೆ ಮಾತನಾಡಿದ್ದಾರೆ. ಇಬ್ಬರು ಉಪ ಮುಖ್ಯಮಂತ್ರಿಗಳು ಅಥವಾ ಇಬ್ಬರು ಕಾರ್ಯಾಧ್ಯಕ್ಷರ ನೇಮಕದಂತಹ ಶಿಫಾರಸುಗಳ ಬಗ್ಗೆ ಸಮಿತಿ ಸಮಾಲೋಚನೆ ಮಾಡುತ್ತಿದೆ. ಸಿಧು ಅವರಿಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ.


from India & World News in Kannada | VK Polls https://ift.tt/2Rc7XXu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...