ಮದುವೆಯಾಗಿ ನಂಬಿಸಿ ಬೆಂಗಳೂರಿನ ಉದ್ಯಮಿಗೆ ವಂಚನೆ: 36 ಲಕ್ಷ ರೂ. ನಾಮ ಹಾಕಿದ ಕಿಲಾಡಿ ಲೇಡಿ..!

: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳು ಉದ್ಯಮಿಯೊಬ್ಬರಿಗೆ 36 ಲಕ್ಷ ರೂ. ವಂಚಿಸಿದ ಘಟನೆ ಬೆಂಗಳೂರಿನ ಎಚ್‌ಎಎಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕ್ವಾಂಟೆಕ್‌ ಕನ್ಸಲ್ಟೆನ್ಸಿ ಕಂಪನಿಯ ಸಿಇಒ ಅನಂತ್‌ ಮಲ್ಯ ವಂಚನೆಗೊಳಗಾದ . ಅನಂತ್‌ಮಲ್ಯ ಅವರಿಗೆ 2019ರ ಜೂನ್‌ನಲ್ಲಿ ಯುವತಿಯೊಬ್ಬಳು ಪರಿಚಯವಾಗಿದ್ದಳು. ಬಳಿಕ ಇಬ್ಬರ ನಡುವೆ ಸ್ನೇಹ ಏರ್ಪಟ್ಟು ನಂತರ ಪ್ರೇಮಾಂಕುರವಾಗಿತ್ತು. ಆಗುವುದಾಗಿ ನಂಬಿಸಿದ್ದ ಯುವತಿ ಸೈಟ್‌ ಖರೀದಿಸಲು ಮಲ್ಯ ಅವರ ಬಳಿ ಹಂತ- ಹಂತವಾಗಿ 36.22 ಲಕ್ಷ ರೂ. ಪಡೆದಿದ್ದಳು. ಪಡೆದ ನಂತರ ಮಲ್ಯ ಅವರನ್ನು ದೂರ ಮಾಡಲು ಪ್ರಾರಂಭಿಸಿದಳು. ಇದೇ ವಿಷಯಕ್ಕೆ ಇಬ್ಬರ ನಡುವೆ ಜಗಳ ನಡೆದು ಕೊಟ್ಟ ಹಣ ವಾಪಸ್‌ ನೀಡುವಂತೆ ಮಲ್ಯ ಯುವತಿಯನ್ನು ಒತ್ತಾಯಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಯುವತಿ ತಾನು ಪಡೆದ 36 ಲಕ್ಷ ರೂ. ಹಣದಲ್ಲಿ 6.90 ಲಕ್ಷ ಹಣ ವಾಪಸ್‌ ಕೊಟ್ಟಿದ್ದು, ಉಳಿದ 29.40 ಲಕ್ಷ ರೂ. ಮರಳಿಸದೇ ನಾಪತ್ತೆಯಾಗಿದ್ದಳು. ಈ ವಿಷಯ ತಿಳಿದ ಅನಂತ್‌ ಮಲ್ಯ ಎಚ್‌ಎಎಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಐಪಿಸಿ 406 ಹಾಗೂ 420 ಅಡಿಯಲ್ಲಿ ದೂರು ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


from India & World News in Kannada | VK Polls https://ift.tt/3fHUz6T

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...