ಪುತ್ತೂರು: ಮೆಡಿಕಲ್‌ನಲ್ಲಿ ಯುವತಿಯೊಬ್ಬಳೇ ಇರುವ ಸಂದರ್ಭ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾದ ವ್ಯಕ್ತಿಯನ್ನು ಗ್ರಾಮಾಂತರ ಸಂಪ್ಯ ಪೊಲೀಸರು ಬಂಧಿಸಿದ್ದು, ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇಬ್ರಾಹಿಂ ಕುಕ್ಕಾಜೆ (58) ಎಂಬಾತ ಬಂಧಿತ ಆರೋಪಿ. ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ಚರಮಂಗಲ ಪೇಟೆಯಲ್ಲಿ ಮಂಗಳವಾರ ಈ ಘಟನೆ ಸಂಭವಿಸಿದೆ. ಇಲ್ಲಿನ ಮೆಡಿಕಲ್ ಒಂದಕ್ಕೆ ಮಂಗಳವಾರ ಔಷಧಿ ಖರೀದಿಸಲು ಬಂದಿದ್ದ ಇಬ್ರಾಹಿಂ, ಮೆಡಿಕಲ್‌ನಲ್ಲಿ ಯುವತಿಯೊಬ್ಬಳೇ ಇರುವುದನ್ನು ಕಂಡು ನೇರವಾಗಿ ಮೆಡಿಕಲ್ ಒಳಕ್ಕೆ ನುಗ್ಗಿ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಎನ್ನಲಾಗಿದೆ. ಇದರಿಂದ ಭಯಗೊಂಡ ಯುವತಿ ಬೊಬ್ಬೆ ಹಾಕಿದ್ದು, ಸುತ್ತಮುತ್ತಲಿನಿಂದ ಜನ ಧಾವಿಸಿ ಬಂದು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಂಗಳೂರು: ನಗರದ ಸರಿಪಲ್ಲ ನಿವಾಸಿ ವೀಣಾ ಅವರ ಮನೆಗೆ ಮೇ 30ರಂದು ರಾತ್ರಿ 8ಗಂಟೆಗೆ ಪ್ರವೇಶಿಸಿದ 9 ಮಂದಿಯ ತಂಡ ತಲವಾರು ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಕೊಲೆ ಬೆದರಿಕೆ ಹಾಕಿದ ಘಟನೆ ಭಾನುವಾರ ನಡೆದಿದೆ. ಮನೆಗೆ ನುಗ್ಗಿ ತಂಡದಿಂದ ಕೊಲೆ ಬೆದರಿಕೆ ಸರಿಪಲ್ಲ ನಿವಾಸಿ ಹೇಮಂತ್, ಕೋಡಿಕಲ್‌ನ ರಂಜಿತ್, ಕುಂಜತ್‌ಬೈಲಿನ ಸುಶಾಲ್, ಕಾವೂರಿನ ಯತಿರಾಜ್, ಕೊಟ್ಟಾರ ಕಲ್ಬಾವಿಯ ಅವಿನಾಶ್, ಉರ್ವಾ ಸ್ಟೋರ್ ಸುಂಕದ ಕಟ್ಟೆಯ ಧನುಷ್, ಕೊಟ್ಟಾರ ಚೌಕಿಯ ಪ್ರಜ್ವಲ್, ಧಕ್ಕೆಯ ದೀಕ್ಷಿತ್, ಉರ್ವಾ ಸ್ಟೋರ್‌ನ ದೀಪಕ್ ಪ್ರಕರಣ ಆರೋಪಿಗಳು. ಪ್ರಶ್ನಿಸಿದ್ದೇ ತಪ್ಪಾಯ್ತೇ!ವೀಣಾ ಅವರ ಮಗಳನ್ನು 2 ವಾರದ ಹಿಂದೆ ಮೋಟಾರ್ ಸೈಕಲ್‌ನಲ್ಲಿಕರೆದುಕೊಂಡು ಹೋಗುತ್ತಿದ್ದನ್ನು ನೋಡಿ ಸಹೋದರರಾದ ಆಕಾಶ್ ಹಾಗೂ ಕೀರ್ತನ್ ಫೋನ್ ಮಾಡಿ ಹೇಮಂತ್‌ನನ್ನು ಪ್ರಶ್ನಿಸಿದ್ದರು. ಇದರಿಂದ ತಂಡವಾಗಿ ಬಂದ ಆರೋಪಿಗಳು ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
from India & World News in Kannada | VK Polls https://ift.tt/3pa7rWH