
ಕ್ರೆೈಸ್ಟ್‌ಚರ್ಚ್: ಭಾರತ ಕ್ರಿಕೆಟ್ ತಂಡದ ನಾಯಕ ವಿಶ್ವದ ಅಗ್ರ ಬ್ಯಾಟ್ಸ್‌ಮನ್ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಕಳೆದ ಅನೇಕ ವರ್ಷಗಳಲ್ಲಿ ಎಲ್ಲ ಪರಿಸ್ಥಿತಿಗೆ ಹೊಂದಿಕೊಂಡು ಶ್ರೇಷ್ಠ ಪ್ರದರ್ಶನ ನೀಡುವುದರಲ್ಲಿ ಕಿಂಗ್ ಕೊಹ್ಲಿ ಯಶಸ್ವಿಯಾಗಿದ್ದಾರೆ. ಹಾಗಿರಬೇಕೆಂದರೆ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅಪರೂಪದ ವೈಫಲ್ಯವನ್ನು ಅನುಭವಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ದ ನಡೆದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಕೆಟ್ಟ ಪ್ರದರ್ಶನ ನೀಡಿದ್ದಾರೆ. ನ್ಯೂಜಿಲೆಂಡ್ ಬೌಲರ್‌ಗಳ ಪಾಲಿಗೆ ವಿರಾಟ್ ಕೊಹ್ಲಿ ಅವರನ್ನು ಕಟ್ಟಿ ಹಾಕುವುದು ಅಷ್ಟು ಸುಲಭವಾಗಿರಲಿಲ್ಲ. ಇದಕ್ಕಾಗಿ ಒಂದು ತಂಡವಾಗಿ ವ್ಯವಸ್ಥಿತ ಯೋಜನೆಯನ್ನು ರೂಪಿಸಿತ್ತು. ಈ ಬಗ್ಗೆ ಎಡಗೈ ವೇಗದ ಬೌಲರ್ ವಿವರಣೆ ನೀಡಿದ್ದಾರೆ. ಸರಣಿಯುದ್ಧಕ್ಕೂ ವಿರಾಟ್ ಕೊಹ್ಲಿ ಬ್ಯಾಟ್ ಸದ್ದು ಮಾಡದಂತೆ ನೋಡಿಕೊಳ್ಳಲಾಗಿದೆ. ಇದರ ಹಿಂದಿನ ರಹಸ್ಯವನ್ನು ಕೇಳಿದಾಗ ಹಾಗೇನಿಲ್ಲ, "ಯಾವುದೇ ಸಿಕ್ರೇಟ್‌ಗಳಿಲ್ಲ. ವಿರಾಟ್ ಕೊಹ್ಲಿ ವಿಶ್ವದರ್ಜೆಯ ಬ್ಯಾಟ್ಸ್‌ಮನ್. ನಿಸ್ಸಂಶವಾಗಿಯೂ ಮಹಾನ್ ಆಟಗಾರ. ಆದರೆ ಅವರ ಮೇಲೆ ನಿರಂತರ ಒತ್ತಡವನ್ನು ಹೇರಲು ಸಾಧ್ಯವಾಯಿತು. ಬೌಂಡರಿ ಬೌಲ್‌ಗಳನ್ನು ಕಡಿಮೆ ಎಸೆದು ಸಾಧ್ಯವಾದಷ್ಟು ಶಾಂತವಾಗಿರಿಸಲು ಬಯಸಿದ್ದೆವು. ಮಾಡಲು ಪ್ರಯತ್ನಿಸಿದ್ದೆವು. ಭಾರತದ ಕಪ್ತಾನ ಕೆಲವೊಂದು ತಪ್ಪುಗಳನ್ನು ಮಾಡಿರುವುದನ್ನು ಬೇಗನೇ ಕಟ್ಟಿ ಹಾಕಲು ನೆರವಾಯಿತು. ಈ ಬಗ್ಗೆ ಸಂತಸವಿದೆ" ಎಂದರು. "ವಿರಾಟ್ ಕೊಹ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಸಮಾನವಾದ ರೀತಿಯಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಬೌಲ್ಟ್, "ಚೆಂಡಿನ ನೈಸರ್ಗಿಕ ಬದಲಾವಣೆಗಳನ್ನು ಬಳಕೆ ಮಾಡಲಾಯಿತು. ನೇರವಾಗಿ ಎಸೆದ ಚೆಂಡು ನೈಸರ್ಗಿಕ ವೆರಿಯೇಷನ್ ಪಡೆದುಕೊಂಡು ತಿರುವು ಪಡೆಯಿತು. ಏನೇ ಆದರೂ ಬೌಲಿಂಗ್ ವಿಭಾಗವು ಸಾಂಘಿಕ ಪ್ರಯತ್ನದೊಂದಿಗೆ ವಿರಾಟ್ ಕೊಹ್ಲಿಯನ್ನು ಕಟ್ಟಿ ಹಾಕಲು ಯಶಸ್ವಿಯಾಗಿದ್ದೇವೆ. ವಿರಾಟ್‌ಗೆ ಕೆಟ್ಟ ಎಸೆತವನ್ನು ಮಾಡದಂತೆ ಎಚ್ಚರಿಕೆ ವಹಿಸಿದೆವು. ಅಂತಿಮವಾಗಿ ಬೇಗನೇ ಔಟ್ ಮಾಡಲು ಸಾಧ್ಯವಾಯಿತು" ಎಂದು ನುಡಿದರು. ಅದೇ ಹೊತ್ತಿಗೆ ಭಾರತೀಯ ಬ್ಯಾಟ್ಸ್‌ಮನ್‌ಗಳ ಕೆಟ್ಟ ಪ್ರದರ್ಶನದ ಬಗ್ಗೆ ಟ್ರೆಂಟ್ ಬೌಲ್ಟ್ ಕನಿಕರವನ್ನು ತೋರಿದರು. ಬಹುಶ: ಭಾರತೀಯ ದಾಂಡಿಗರು ತಾಯ್ನಾಡಿನಲ್ಲಿ ಲೋ ಹಾಗೂ ಸ್ಲೋ ಪಿಚ್‌ಗಳಲ್ಲಿ ಆಡಿರುತ್ತಾರೆ. ಹಾಗಾಗಿ ಇಲ್ಲಿನ ಪಿಚ್‌ಗೆ ಹೊಂದಿಕೊಂಡು ಆಡುವ ಸವಾಲು ಎದುರಾಗಿತ್ತು. ಹಾಗೊಂದು ವೇಳೆ ನಾನು ಭಾರತದಲ್ಲಿ ಬೌಲಿಂಗ್ ಮಾಡುತ್ತಿದ್ದರೆ ನನ್ನ ಪಾಲಿಗದು ವಿದೇಶ ಪರಿಸ್ಥಿತಿಯಾಗುತ್ತಿತ್ತು ಎಂದು ಸೇರಿಸಿದರು. ಎರಡನೇ ದಿನದಾಟದಲ್ಲಿ ಒಟ್ಟು 16 ವಿಕೆಟ್‌ಗಳು ಪತನಗೊಂಡಿದ್ದವು. ಈ ಪೈಕಿ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ 90 ರನ್ನಿಗೆ ಆರು ವಿಕೆ್ಟ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿಗೆ 38 (2, 19, 3, 14) ರನ್ ಗಳಿಸಲು ಮಾತ್ರ ಸಾಧ್ಯವಾಗಿತ್ತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2TwmZ7y