ಭಾರತ 124ಕ್ಕೆ ಆಲೌಟ್; ಕಿವೀಸ್ ಗೆಲುವಿಗೆ ಬೇಕು 132 ರನ್

ಕ್ರೈಸ್ಟ್‌ಚರ್ಚ್: ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 46 ಓವರ್‌ಗಳಲ್ಲಿ ಕೇವಲ 128 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿದೆ. ಇದರೊಂದಿಗೆ ಕಿವೀಸ್ ಗೆಲುವಿಗೆ 132 ರನ್‌ಗಳ ಗುರಿಯನ್ನು ಒಡ್ಡಿದೆ. 90/6 ಎಂಬಲ್ಲಿದ್ದ ಮೂರನೇ ದಿನದಾಟ ಆರಂಭಿಸಿದ ಭಾರತದ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಅಲ್ಲದೆ 34 ರನ್ ಪೇರಿಸುವುದರೊಳಗೆ ಉಳಿದಿರುವ ನಾಲ್ಕು ವಿಕೆಟುಗಳನ್ನು ಕಳೆದುಕೊಂಡಿತು. ಹನುಮ ವಿಹಾರಿ (9), ರಿಷಬ್ ಪಂತ್ (4), ಮೊಹಮ್ಮದ್ ಶಮಿ (5) ಹಾಗೂ ಜಸ್ಪ್ರೀತ್ ಬುಮ್ರಾ (4) ನಿರಾಸೆ ಮೂಡಿಸಿದರು. ಇನ್ನೊಂದೆಡೆ ಅಜೇಯ 16 ರನ್ ಗಳಿಸಿದ ರವೀಂದ್ರ ಜಡೇಜಾ ಸೂಕ್ತ ಜೊತೆಯಾಟ ಸಿಗದೇ ನಿರಾಸೆ ಅನುಭವಿಸಿದರು. ಕಿವೀಸ್ ಪರ ಟ್ರೆಂಟ್ ಬೌಲ್ಟ್ ನಾಲ್ಕು, ಟಿಮ್ ಸೌಥಿ ಮೂರು ಮತ್ತು ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಹಾಗೂ ನೀಲ್ ವ್ಯಾಗ್ನರ್ ತಲಾ ಒಂದು ವಿಕೆಟ್ ಕಿತ್ತು ಮಿಂಚಿದರು. ಈ ಮೊದಲು ಎರಡನೇ ದಿನದಾಟದಲ್ಲಿ ನ್ಯೂಜಿಲೆಂಡ್ ತಂಡವನ್ನು 235 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿತ್ತು. ಈ ಮೂಲಕ ಏಳು ರನ್‌ಗಳ ಮುನ್ನಡೆ ದಾಖಲಿಸಿತ್ತು. ಭಾರತದ ಪರ ಮೊಹಮ್ಮದ್ ಶಮಿ ನಾಲ್ಕು, ಜಸ್ಪ್ರೀತ್ ಬುಮ್ರಾ ಮೂರು ಮತ್ತು ರವೀಂದ್ರ ಜಡೇಜಾ ಎರಡು ವಿಕೆಟ್‌ಗಳನ್ನು ಪಡೆದಿದ್ದರು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಭಾರತೀಯ ಬ್ಯಾಟ್ಸ್‌ಮನ್‌ಗಳು ಪರದಾಡಿದರು. ಪೃಥ್ವಿ ಶಾ (14), ಮಯಾಂಕ್ ಅಗರ್ವಾಲ್ (3), ಚೇತೇಶ್ವರ ಪೂಜಾರ (24), ವಿರಾಟ್ ಕೊಹ್ಲಿ (14) ಹಾಗೂ ಅಜಿಂಕ್ಯ ರಹಾನೆ (9) ಅಲ್ಪ ಮೊತ್ತಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಈ ಮೊದಲು ಪ್ರಥಮ ದಿನದಾಟದಲ್ಲಿ ಕೈಲ್ ಜೇಮಿಸನ್ ಚೊಚ್ಚಲ ಐದು ವಿಕೆಟ್ ಸಾಧನೆಯಿಂದಾಗಿ ಮುಗ್ಗರಿಸಿದ ಟೀಮ್ ಇಂಡಿಯಾ 242 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2IceJnY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...