ಜಮಾತ್‌ ಮಸೀದಿಯಿಂದ ವಾಪಸಾದ ರಾಜ್ಯದ 300 ಮಂದಿ ಪೈಕಿ 12 ಜನರದ್ದು ಕೊರೊನಾ ನೆಗೆಟಿವ್‌!

ಬೆಂಗಳೂರು: ದಿಲ್ಲಿಯ ನಿಜಾಮುದ್ದೀನ್ ಪ್ರದೇಶದ ಜಮಾತ್ ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ಭಾಗವಹಿಸಿದ ಕರ್ನಾಟಕ ಮೂಲದ 300 ಜನರು ಭಾಗವಹಿಸಿದ ಬಗ್ಗೆ ಮಾಹಿತಿ ಸಿಕ್ಕಿದೆ. ಇದರಲ್ಲಿ 40 ಜನರನ್ನ ಪತ್ತೆ ಹಚ್ಚಿದ್ದು, ಎಲ್ಲರನ್ನೂ ಕ್ವಾರಂಟೈನ್‌ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಇದರಲ್ಲಿ 12 ಜನರ ಕೋವಿಡ್‌-19 ಪರೀಕ್ಷೆಯ ವರದಿ ಲಭ್ಯವಾಗಿದ್ದು, ನೆಗೆಟಿವ್‌ ರಿಪೋರ್ಟ್‌ ಬಂದಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು. ಪ್ರಾರ್ಥನೆಯಲ್ಲಿ ಭಾಗವಹಿಸಿದ ಇಂಡೋನೇಷ್ಯಾ ಹಾಗೂ ಮಲೇಶಿಯಾದ 62 ಪ್ರಜೆಗಳು ಕರ್ನಾಟಕಕ್ಕೆ ಬಂದ ಮಾಹಿತಿ‌ ಲಭಿಸಿದೆ. ಇದರಲ್ಲಿ 12 ಜನರನ್ನ ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗುತ್ತಿದೆ. ತಮ್ಮ ದೇಶಕ್ಕೆ ಹಿಂತಿರುಗದೆ ಇಲ್ಲೇ ಉಳಿದಿರುವವರನ್ನು ಗೃಹ ಇಲಾಖೆ ಹಾಗೂ ಆರೋಗ್ಯ ಇಲಾಖೆ ಕಾರ್ಯಾಚರಣೆ ನಡೆಸಿ, ಪತ್ತೆ ಹಚ್ಚಿ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದು ಶ್ರೀರಾಮುಲು ಮಾಹಿತಿ ನೀಡಿದರು. ಭಾರತದಲ್ಲಿ ಕೋವಿಡ್‌-19 ಸೋಂಕು ಹರಡುತ್ತಿರುವ 25 ಪ್ರಮುಖ ಸೂಕ್ಷ್ಮ ಕ್ಷೇತ್ರಗಳಲ್ಲಿ ಬೆಂಗಳೂರು ನಗರ ಹಾಗೂ ಮೈಸೂರು ಗುರುತಿಸಲ್ಪಟ್ಟಿದೆ. ಹಾಗೆಯೇ, ಚಿಕ್ಕಬಳ್ಳಾಪುರದಲ್ಲಿ ಕಳೆದ 14 ದಿನಗಳಲ್ಲಿ ಹೊಸ ಸೂಕ್ಷ್ಮ ಕ್ಷೇತ್ರಗಳಲ್ಲೊಂದು ಎಂದು ಗುರುತಿಸಲಾಗಿದೆ. ನಾಗರಿಕರು ಲಾಕ್ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆರೋಗ್ಯ ಸಚಿವರು ವಿನಂತಿಸಿದರು. ಚಿಕ್ಕಬಳ್ಳಾಪುರದ ಗೌರಿಬಿದನೂರು ನಗರದಲ್ಲಿ ಮೆಕ್ಕಾ ಯಾತ್ರೆಯಿಂದ ವಾಪಸಾಗಿದ್ದ 72 ವರ್ಷದ ವೃದ್ಧೆಯೊಬ್ಬರು ಮಾರ್ಚ್‌ 25ರಂದು ಮೃತಪಟ್ಟಿದ್ದರು. ಇವರು ಸೇರಿದಂತೆ ಜಿಲ್ಲೆಯಲ್ಲಿ 10 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆ ಅತಿಸೂಕ್ಷ್ಮ ಜಿಲ್ಲೆಯೆಂದು ಚಿಕ್ಕಬಳ್ಳಾಪುರವನ್ನು ಪರಿಗಣಿಸಲಾಗಿದೆ.


from India & World News in Kannada | VK Polls https://ift.tt/2R0Q9LI

ಕೊರೊನಾ ಪರಿಹಾರ ನಿಧಿಗೆ ಒಂದು ವರ್ಷದ ವೇತನವನ್ನು ನೀಡಿದ ಬಿಎಸ್‌ವೈ

ಬೆಂಗಳೂರು: ಕೊರೊನಾ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತನ್ನ ಒಂದು ವರ್ಷದ ವೇತನವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನೀಡಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ಕುರಿತಾಗಿ ಮಾಹಿತಿ ನೀಡಿದ ಅವರು , ಸಚಿವರು, ಶಾಸಕರು, ಸಂಸದರು ಈ ನಿಟ್ಟಿನಲ್ಲಿ ಮುಂದುವರಿಯಬೇಕು ಎಂದು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಏಪ್ರಿಲ್‌ 1 ರ ತನಕ 101 ಪ್ರಕರಣಗಳು ಕಂಡುಬಂದಿದ್ದು ಈ ಪೈಕಿ ಮೂವರು ಮೃತಪಟ್ಟಿದ್ದಾರೆ. ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ದೇಶಾದ್ಯಂತ 21 ದಿನಗಳ ಕಾಲದ ಲಾಕ್‌ಡೌನ್ ಜಾರಿಯಲ್ಲಿದೆ. ಕರ್ನಾಟಕದಲ್ಲೂ ಸಂಪೂರ್ಣ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಲಾಕ್‌ಡೌನ್ ಕಾರಣದಿಂದಾಗಿ ಭಾರೀ ಪ್ರಮಾಣದಲ್ಲಿ ಆರ್ಥಿಕ ನಷ್ಟ ಉಂಟಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ನಿರ್ವಹಿಸಲು ಸಾಕಷ್ಟು ಆರ್ಥಿಕ ಸಹಕಾರದ ಅಗತ್ಯವಿದೆ. ಅದಕ್ಕಾಗಿ ಜನರು ಸ್ಪಂದಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕರೆ ನೀಡಿದ್ದರು. ಸಿಎಂ ಬಿಎಸ್‌ವೈ ಕರೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಸಿನಿಮಾ ನಟ ಪುನಿತ್ ರಾಜ್‌ಕುಮಾರ್ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ನೀಡಿದ್ದಾರೆ. ಅಲ್ಲದೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಕೂಡಾ ತಮ್ಮ ಮೂರು ತಿಂಗಳ ಶಾಸಕರ ವೇತನವನ್ನು ನೀಡಿದ್ದಾರೆ.


from India & World News in Kannada | VK Polls https://ift.tt/3bCp9tG

ದೆಹಲಿ ಧಾರ್ಮಿಕ ಸಭೆಯಲ್ಲಿ ರಾಜ್ಯದ 300ಕ್ಕೂ ಹೆಚ್ಚು ಮಂದಿ ಭಾಗಿ, ವೈರಸ್ ಹಬ್ಬುವ ಭೀತಿ!

ಬೆಂಗಳೂರು: ದೆಹಲಿಯಲ್ಲಿ ನಡೆದ ಮುಸ್ಲಿಂ ಧಾರ್ಮಿಕ ಸಭೆಯಲ್ಲಿ ಕರ್ನಾಟಕದ 300ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಸಂಘಟನೆಯು ದೆಹಲಿಯ ನಿಜಾಮುದ್ದೀನ್ ಕೇಂದ್ರದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜ್ಯದ ಸುಮಾರು 300 ಜನ ಭಾಗವಹಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಲ್ಲಿ 40 ಜನರನ್ನು ಪತ್ತೆ ಮಾಡಲಾಗಿದ್ದು, ಎಲ್ಲರನ್ನೂ ಕ್ವಾರೆಂಟೈನ್ ಮಾಡಲಾಗುತ್ತಿದೆ. ಇದರಲ್ಲಿ 12 ಮಂದಿಯ ಕೋವಿಡ್ 19 ಪರೀಕ್ಷೆ ವರದಿ ನೆಗೆಟಿವ್ ಎಂದಿದೆ ಎಂದು ಆರೋಗ್ಯ ಸಚಿವ ಟ್ವೀಟ್ ಮಾಡಿದ್ದಾರೆ. ತಮ್ಮ ಮತ್ತೊಂದು ಟ್ವೀಟ್ ನಲ್ಲಿ ಧಾರ್ಮಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಇಂಡೋನೇಷ್ಯಾ ಹಾಗೂ ಮಲೇಶಿಯಾದ 62 ಪ್ರಜೆಗಳು ಕರ್ನಾಟಕಕ್ಕೆ ಬಂದ ಮಾಹಿತಿ‌ ಸಿಕ್ಕಿದ್ದು, ಇದರಲ್ಲಿ 12 ಜನರನ್ನು ಪತ್ತೆ ಹಚ್ಚಿ ಕ್ವಾರೆಂಟೈನ್ ಮಾಡಲಾಗಿದೆ. ಮಿಕ್ಕಂತೆ ತಮ್ಮ ದೇಶಕ್ಕೆ ಹಿಂತಿರುಗದೆ ಇಲ್ಲೇ ಉಳಿದು ಕೊಂಡಿರುವವರನ್ನು ಗೃಹ ಇಲಾಖೆ ಹಾಗೂ ಆರೋಗ್ಯ ಇಲಾಖೆ ಕಾರ್ಯಾಚರಣೆ ನಡೆಸಿ, ಪತ್ತೆ ಹಚ್ಚಿ ಕ್ವಾರೆಂಟೈನ್ ನಲ್ಲಿ ಇಡಲಾಗುವುದು ಎಂದಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯ ನಿಜಾಮುದ್ದೀನ್ (ಬಂಗ್ಲೇವಾಲೆ) ಮಸೀದಿಯಲ್ಲಿ ತಬ್ಲೀಗ್ ಜಮಾತ್‌ ಸಂಘಟನೆ ಮಾರ್ಚ್ 1ರಿಂದ 15ರವರೆಗೆ ಧಾರ್ಮಿಕ ಸಭೆಯನ್ನು ನಡೆಸಿತ್ತು. ಈ ಸಭೆಯಲ್ಲಿ ದೇಶ-ವಿದೇಶಗಳ 8000ಕ್ಕೂ ಹೆಚ್ಚು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.


from India & World News in Kannada | VK Polls https://ift.tt/3455U9F

ತಬ್ಲಿಘಿ ಸಭೆ ಕೆಲವರಿಗೆ ಮುಸ್ಲಿಮರನ್ನು ನಿಂದಿಸಲು ಅವಕಾಶ ಕೊಟ್ಟಿದೆ: ಒಮರ್ ಅಬ್ದುಲ್ಲಾ!

ನವದೆಹಲಿ: ದೆಹಲಿಯ ಮರ್ಕಜ್ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಸಭೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಸಭೆಯಲ್ಲಿ ಪಾಲ್ಗೊಂಡವರಲ್ಲಿ ಬಹುತೇಕರಿಗೆ ಕೊರೊನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ತಬ್ಲಿಘಿ ಸಭೆಯಲ್ಲಿ ಪಾಲ್ಗೊಂಡವರಿಗಾಗಿ ದೇಶಾದ್ಯಂತ ಹುಟುಕಾಟ ನಡೆದಿದ್ದು, ಪತ್ತೆಯಾದವರೆನ್ನೆಲ್ಲಾ ಪರೀಕ್ಷೆಗೆ ಗುರಿ ಮಾಡಲಾಗಿದೆ. ಕರ್ನಾಟಕದಲ್ಲೂ ಪತ್ತೆಯಾದವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇದುವರೆಗೂ ದೇಶಾದ್ಯಂತ ಒಟ್ಟು 128 ಕೊರೊನಾ ವೈರಸ್ ಪಾಸಿಟವ್ ಪ್ರಕರಣಗಳು ಪತ್ತೆಯಾಗಿದ್ದು, ಮಸೀದಿಯೊಳಗಿದ್ದ ಎಲ್ಲಾ 2,100 ಜನರನ್ನು ಹೊರ ಹಾಕಲಾಗಿದೆ. ಈ ಮಧ್ಯೆ ದೆಹಲಿಯ ಮಸೀದಿ ಸಭೆ ಕೆಲವರಿಗೆ ಮುಸ್ಲಿಂ ಸಮುದಾಯವನ್ನು ನಿಂದಿಸಲು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಇತ್ತೀಚಿಗಷ್ಟೇ ಗೃಹ ಬಂಧನದಿಂದ ಬಿಡುಗಡೆಯಾಗಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಅಭಿಪ್ರಾಯಪಟ್ಟಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಧಾರ್ಮಿಕ ಸಭೆ ನಡೆದಿರುವುದ ಪ್ರಶ್ನಾರ್ಹವಾದರೂ, ಇದೇ ನೆಪ ಮಾಡಿಕೊಂಡು ಕೆಲವರು ಇಡೀ ಮುಸ್ಲಿಂ ಸಮುದಾಯವನ್ನು ನಿಂದಿಸುತ್ತಿದ್ದಾರೆ ಎಂದು ಒಮರ್ ಅಬ್ದುಲ್ಲಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಒಮರ್ ಅಬ್ದುಲ್ಲಾ, ತಬ್ಲಿಘಿ ಧಾರ್ಮಿಕ ಸಭೆಯಿಂದಾಗಿ ಇಡೀ ಮುಸ್ಲಿಂ ಸಮುದಾಯವನ್ನು ದೂಷಿಸುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇದೇ ಅವಕಾಶವನ್ನು ಬಳಸಿಕೊಂಡು ಕೆಲವರು ಮುಸ್ಲಿಂ ಸಮುದಾಯವನ್ನು ನಿಂದಿಸುತ್ತಿದ್ದು, ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿಯೇ ಧಾರ್ಮಿಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಎಂಬುದನ್ನು ಮರೆ ಮಾಚಲಾಗುತ್ತಿದೆ ಎಂದು ಒಮರ್ ವಿಷಾದ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/3ayBHm3

ಕೊರೊನಾ ಆತಂಕದಲ್ಲಿ ನಿಜಾಮುದ್ದೀನ್‌ , ಏನಿದು ತಬ್ಲೀಗ್‌ ಜಮಾತ್ ?

ಹೊಸದಿಲ್ಲಿ: ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿರುವ ತಬ್ಲೀಗ್‌ ಜಮಾತ್‌ ಸಂಘಟನೆಯ ಕೇಂದ್ರ ಕಚೇರಿಯಲ್ಲಿ ಕಾಣಿಸಿಕೊಂಡ ಮಹಾಮಾರಿ ದೇಶವನ್ನು ಮತ್ತೊಮ್ಮೆ ಬೆಚ್ಚಿಬೀಳಿಸಿದೆ. ತಬ್ಲೀಗ್ ಜಮಾತ್‌ ಸಂಘಟನೆಯ ಮೂರು ದಿನಗಳ ಕಾಲ ನಡೆದ ಇಜ್ತಿಮಾ ( ಧಾರ್ಮಿಕ ಕಾರ್ಯಕ್ರಮ) ದಲ್ಲಿ ಭಾಗಿಯಾದವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಈ ಪೈಕಿ 10 ಜನರು ಮೃತಪಟ್ಟಿದ್ದಾರೆ. ಕರ್ನಾಟದಿಂದಲೂ 300 ಜನರು ಇಜ್ತಿಮಾದಲ್ಲಿ ಭಾಗಿಯಾಗಿದ್ದಾರೆ. ಇಂಡೋನೇಷಿಯಾ, ಸೌದಿ ಅರೇಬಿಯಾ, ಮಲೇಷಿಯಾ, ಬ್ರಿಟನ್‌ ಸೇರಿದಂತೆ ದೇಶ ವಿದೇಶಗಳಿಂದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಜನರು ಭಾಗಿಯಾಗಿದ್ದರು ಎಂಬ ಮಾಹಿತಿ ಆತಂಕಕ್ಕೆ ಕಾರಣವಾಗಿದೆ. ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ 'ತಬ್ಲೀಗ್‌ ಜಮಾತ್‌' ಸಂಘಟನೆ ಹಾಗೂ ಅವರ ಕಾರ್ಯವೈಖರಿಗಳ ಕುರಿತಾಗಿ ಚರ್ಚೆಗಳು ನಡೆಯುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲೂ ಜನರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಮಾರಕ ಸಾಂಕ್ರಾಮಿಕ ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ಸಾವಿರಾರು ಜನರನ್ನು ಒಂದು ಕಡೆ ಸೇರಿಸುವಾಗ ಯಾಕಾಗಿ ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಹಲವರು ಪ್ರಶ್ನಿಸಿದ್ದಾರೆ. ಅಲ್ಲದೆ ಸಾರ್ವಜನಿಕ ಸಭೆ ನಡೆಸಬಾರದು ಹಾಗೂ ಜನರು ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸರ್ಕಾರ ಸೂಚನೆ ನೀಡಿದ್ದರೂ ಅದನ್ನು ಪಾಲನೆ ಮಾಡದ ಕಾರಣಕ್ಕಾಗಿ ಇಜ್ತಿಮಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮೌಲಾನಾ ಸಾದ್‌ ಅವರ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಏನಿದು ? ತಬ್ಲೀಗ್ ಜಮಾತ್ ಭಾರತದಲ್ಲಿ ಹುಟ್ಟಿಕೊಂಡ ಮುಸ್ಲಿಂ ಧಾರ್ಮಿಕ ಸಂಘಟನೆ. 1927 ರಲ್ಲಿ ಮುಹಮ್ಮದ್ ಇಲ್ಯಾಸ್ ಕಂದ್ಲವಿ ಈ ಸಂಘಟನೆಯನ್ನು ಹುಟ್ಟುಹಾಕಿದರು. ಮುಸ್ಲಿಮರಲ್ಲಿ ಧಾರ್ಮಿಕ ಶೃದ್ಧೆಯನ್ನು ಹೆಚ್ಚಿಸುವುದು ಈ ಸಂಘಟನೆಯ ಉದ್ದೇಶವಾಗಿದೆ. ಪ್ರವಾದಿ ಮುಹಮ್ಮದರ ಜೀವನ ಶೈಲಿ ಹಾಗೂ ಮುಸ್ಲಿಂ ಧಾರ್ಮಿಕ ನೆಲೆಗಟ್ಟುಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದು ಹಾಗೂ ಇದಕ್ಕಾಗಿ ಜನರನ್ನು ಸಂಘಟನೆ ಮಾಡುವುದು ತಬ್ಲೀಗ್ ಜಮಾತ್‌ ಕೆಲಸವಾಗಿದೆ. ಭಾರತದಲ್ಲಿ ಈ ಸಂಘಟನೆ ಆರಂಭಗೊಂಡರೂ ದೇಶ ವಿಭಜನೆಯ ಬಳಿಕ ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಮಲೇಷಿಯಾ, ಇಂಡೋನೇಷಿಯಾ ಶ್ರೀಲಂಕಾ, ಸಿಂಗಾಪುರ್ ಹಾಗೂ ಯುರೋಪ್‌ನ ಕೆಲವು ದೇಶಗಳಲ್ಲಿಯೂ ನೆಲೆವೂರಿದೆ. ಮುಸ್ಲಿಂ ಧಾರ್ಮಿಕ ಸಂಘಟನೆಗಳ ಪೈಕಿ ತಬ್ಲೀಗ್‌ ಜಮಾತ್‌ ಹೆಚ್ಚಿನ ಸದಸ್ಯಬಲ ಹಾಗೂ ವ್ಯಾಪ್ತಿಯನ್ನು ಹೊಂದಿರುತ್ತದೆ. ಕರ್ನಾಟದಲ್ಲಿ ಬೆಂಗಳೂರು, ಬೀದರ್‌, ಬಳ್ಳಾರಿ, ಗುಲ್ಬರ್ಗ ಹಾಗೂ ಇತ್ತೀಚೆಗೆ ಕರಾವಳಿ ಭಾಗದಲ್ಲೂ ಸಂಘಟನೆ ವಿಸ್ತರಣೆಯಾಗುತ್ತಿದೆ. ಸುಶಿಕ್ಷಿತ ಯುವಕರು ಸೇರಿದಂತೆ ಸಮಾಜದ ವಿವಿಧ ಸ್ತರಗಳ ಜನರು ಈ ಸಂಘಟನೆಯಲ್ಲಿ ಸಕ್ರಿಯವಾಗಿದ್ದಾರೆ. ತಬ್ಲೀಗ್‌ ಜಮಾತ್ ಸಂಘಟನೆಯ ಉದ್ಧೇಶವೇನು ? ಮುಸ್ಲಿಂ ಸಮುದಾಯದಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸುವುದು ಹಾಗೂ ಧರ್ಮದ ಪ್ರಚಾರ ಮಾಡುವುದು ಈ ಸಂಘಟನೆಯ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಜನರನ್ನು ಸಂಘಟನೆ ಮಾಡುತ್ತಾರೆ. ಆದರೆ ತಬ್ಲೀಗ್ ಜಮಾತ್‌ನಲ್ಲಿ ಯಾವುದೇ ಅಧಿಕೃತ ಸದಸ್ಯತ್ವದ ಮಾದರಿ ಇಲ್ಲ. ಈ ಸಿದ್ದಾಂತವನ್ನು ಒಪ್ಪಿದ ಯಾರು ಬೇಕಾದರೂ ಇದರ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದಾಗಿದೆ. ಸಾಮೂಹಿಕವಾಗಿ ಜನರನ್ನು ಸಂಘಟನೆ ಮಾಡುತ್ತಾ ಧರ್ಮ ಪ್ರಚಾರದ ಕೆಲಸದಲ್ಲಿ ಈ ಸಂಘಟನೆ ನಿರತವಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಸಂಘಟನೆಗೆ ಓರ್ವ ಮುಖ್ಯಸ್ಥ ಇರುತ್ತಾನೆ. ಇವರನ್ನು 'ಅಮೀರ್' ಎಂದು ಕರೆಯುತ್ತಾರೆ. ಆದರೆ ಇವರು ಸಾಮಾಜಿಕವಾಗಿ ಹೆಚ್ಚಾಗಿ ಗುರುತಿಸಿಕೊಳ್ಳುವುದಿಲ್ಲ. ಯಾವುದೇ ರಾಜಕೀಯ ಪಕ್ಷಗಳಲ್ಲೂ ಸಂಘಟನೆಯ ಸದಸ್ಯರು ಸಕ್ರಿಯವಾಗಿಲ್ಲ. ಪರಲೋಕ ಹಾಗೂ ಸತ್ತ ನಂತರದ ಜೀವನದ ಬಗ್ಗೆ ಹೆಚ್ಚು ಚಿಂತಿಸುತ್ತಾರೆ. ಈ ಭೂಮಿ ನಶ್ವರವಾಗಿದೆ ಏನಿದ್ದರೂ ಪರಲೋಕದ್ದೇ ನಿಜವಾದ ಬದುಕು ಎನ್ನುವ ಈ ಸಿದ್ಧಾಂತವಾದಿಗಳು ಮುಸ್ಲಿಮರು ಧರ್ಮದ ನೆಲೆಗಟ್ಟನ್ನು ಪಾಲಿಸುವ ಪರಲೋಕದ ವಿಜಯಕ್ಕಾಗಿ ಶ್ರಮಿಸಬೇಕು ಎಂದು ಕರೆ ನೀಡುತ್ತಾರೆ. ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಈ ಸಂಘಟನೆಯ ಯುವಕರ ತಂಡ ಮನೆಗಳಿಗೆ ಭೇಟಿ ನೀಡಿ ಧರ್ಮದ ಪ್ರಚಾರ ನಡೆಸುತ್ತಾರೆ. ಬಿಳಿ ಪೈಜಾಮ ಹಾಗೂ ಟೊಪ್ಪಿ ಧರಿಸಿದ ಗಡ್ಡಧಾರಿ ಯುವಕರು ಇಸ್ಲಾಂನಲ್ಲಿ ದೇವರ ಆರಾಧನಾ ಕರ್ಮಗಳ ಕುರಿತಾಗಿ ಜನರಿಗೆ ಮಾಹಿತಿ ನೀಡುತ್ತಾರೆ. ತಬ್ಲೀಗ್‌ ಜಮಾತ್‌ ಪ್ರಮುಖ ಧಾರ್ಮಿಕ ಕಾರ್ಯಕ್ರಮ ಇಜ್ತಿಮಾ ತಬ್ಲೀಗ್‌ ಜಮಾತ್‌ ಸಂಘಟನೆ ಪ್ರತಿ ವರ್ಷ ಇಜ್ತಿಮಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಮೂರು ದಿನಗಳ ಕಾಲ ನಡೆಯುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯ ಜನರು ಭಾಗಿಯಾಗುತ್ತಾರೆ. ಆದರೆ ಈ ಕಾರ್ಯಕ್ರಮಗಳಿಗೆ ಭಾಗಿಯಾಗಲು ಪುರುಷರಿಗೆ ಮಾತ್ರ ಅವಕಾಶವಿದೆ. ಪ್ರತಿಯೊಂದು ಕೇಂದ್ರಗಳಲ್ಲಿ ತಬ್ಲೀಗ್‌ ಸಂಘಟನೆಯ ಮಸೀದಿಗಳಿವೆ. ಇಜ್ತಿಮಾಗೆ ಬಂದ ಕಾರ್ಯಕರ್ತರು ಈ ಮಸೀದಿಯಲ್ಲೇ ಉಳಿದುಕೊಳ್ಳಬೇಕೇ ಹೊರತು ಬೇರೆ ಕಡೆಗಳಲ್ಲಿ ಉಳಿದುಕೊಳ್ಳುವ ಹಾಗಿಲ್ಲ. ಬೃಹತ್‌ ಮಸೀದಿಯಲ್ಲಿ ಬಂದವರಿಗೆ ಉಳಿದುಕೊಳ್ಳಲು ಎಲ್ಲಾ ರೀತಿಯ ವ್ಯವಸ್ಥೆ ಇರುತ್ತದೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬೃಹತ್ ಇಜ್ತಿಮಾ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ ಪ್ರಪಂಚದ ವಿವಿಧ ದೇಶಗಳಿಂದ ಬಂದ ಭಾರೀ ಸಂಖ್ಯೆಯ ಜನರು ಭಾಗಿಯಾಗಿದ್ದರು. ಇದರ ಹೊರತಾಗಿ ಬಾಂಗ್ಲಾ ದೇಶದಲ್ಲಿ ನಡೆದ ಇಜ್ತಿಮಾ ಪ್ರಸಿದ್ಧಿ ಪಡೆದಿದೆ. ಇಜ್ತಿಮಾ ಎಂದರೆ ತಬ್ಲೀಗ್‌ ಜಮಾತ್‌ ಸಿದ್ದಾಂತದ ಇಸ್ಲಾಮಿಕ್ ಧಾರ್ಮಿಕ ಕಾರ್ಯಕ್ರಮ. ಇಜ್ತಿಮಾಗೆ ಬಂದವರಿಗೆ ಧಾರ್ಮಿಕ ಪ್ರವಚನದ ಜೊತೆಗೆ ನಮಾಜ್‌, ಶರಿಯಾ ಪಾಲನೆ ಹಾಗೂ ಧಾರ್ಮಿಕ ಕೀರ್ತನೆಗಳನ್ನು ಹೇಳಿಕೊಡಲಾಗುತ್ತದೆ. ಹಾಗೂ ತಾವು ತಿಳಿದುಕೊಂಡ ಧರ್ಮದ ಪಾಠಗಳನ್ನು ಮುಸ್ಲಿಂ ಸಮುದಾಯದ ಇತರ ಜನರಿಗೆ ಹೇಳಿಕೊಡುವಂತೆ ತಿಳಿಸಲಾಗುತ್ತದೆ. ಕನಿಷ್ಠ ಮೂರು ದಿನಗಳ ಕಾಲ ಈ ಕಾರ್ಯಕ್ರಮಗಳು ನಡೆದರೆ ಕೆಲವೊಂದು 45 ದಿನಗಳು ಹಾಗೂ ಗರಿಷ್ಠ ನಾಲ್ಕು ತಿಂಗಳುಗಳ ಕಾಲ ನಡೆಯುತ್ತದೆ. ಈ ಸಂದರ್ಭದಲ್ಲಿ ಹೊರಭಾಗಗಳಿಂದ ಆಗಮಿಸಿದ ತಬ್ಲೀಗ್‌ ಜಮಾತ್‌ ಸದಸ್ಯರು ಸಣ್ಣ ಸಣ್ಣ ಗುಂಪುಗಳನ್ನಾಗಿ ವಿಂಗಡಿಸಿ ವಿವಿಧ ಕಡೆಗಳ ಮುಸ್ಲಿಮರು ಹೆಚ್ಚಿರುವ ಪ್ರದೇಶಗಳಿಗೆ ಧರ್ಮ ಪ್ರಚಾರಕ್ಕಾಗಿ ಕಳುಹಿಸಿಕೊಡಲಾಗುತ್ತದೆ. ತಬ್ಲೀಗ್‌ ಜಮಾತ್‌ ವಿರುದ್ಧ ಇರುವ ಆರೋಪಗಳೇನು? ತಬ್ಲೀಗ್‌ ಜಮಾತ್‌ ಸಂಘಟನೆಯ ಕಾರ್ಯವೈಖರಿಗಳ ಕುರಿತಾಗಿ ಮುಸ್ಲಿಂ ಸಮಾಜದಲ್ಲಿ ಭಿನ್ನಾಭಿಪ್ರಾಯಗಳಿವೆ. ಈ ಸಂಘಟನೆ ಹಾಗೂ ಸಿದ್ಧಾಂತ ಎಲ್ಲವನ್ನೂ ಕೇವಲ ಧರ್ಮದ ಆಧಾರದಲ್ಲಿ ನೋಡುತ್ತದೆ. ಎಲ್ಲದಕ್ಕೂ ಧರ್ಮವೇ ಪರಿಹಾರ ಎಂದು ಪ್ರಚಾರ ಮಾಡುತ್ತದೆ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಇವರು ಹೆಚ್ಚಾಗಿ ತೊಡಗಿಸಿಕೊಳ್ಳುವುದಿಲ್ಲ. ರಾಜಕೀಯದಲ್ಲಿ ಈ ಸಂಘಟನೆಯ ಅಸ್ಥಿತ್ವ ನೇರವಾಗಿ ಇಲ್ಲ. ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳ ಜೊತೆಗೆ ಕೆಲವೊಂದು ಧಾರ್ಮಿಕ ಭಿನ್ನಾಭಿಪ್ರಾಯವನ್ನು ಈ ಸಿದ್ಧಾಂತ ಹೊಂದಿದೆ. ಈ ಕಾರಣಕ್ಕಾಗಿ ಮುಸ್ಲಿಮರಲ್ಲಿ ತಬ್ಲೀಗಿಗಳು ವಿಸ್ತಾರ ವ್ಯಾಪ್ತಿಯನ್ನು ಹೊಂದಿಲ್ಲ. ಧಾರ್ಮಿಕತೆ ಹಾಗೂ ಧರ್ಮದ ಶುದ್ದೀಕರಣದ ಹೆಸರಿನಲ್ಲಿ ಜನರನ್ನು ಮೂಲಭೂತವಾದಿಗಳನ್ನಾಗಿ ಮಾಡುತ್ತಿದ್ದಾರೆ ಎಂಬ ಆರೋಪ ಇವರ ಮೇಲೆ ಇದೆ. ಇವರ ನಿಗೂಢ ಧಾರ್ಮಿಕ ಕಾರ್ಯಶೈಲಿಗಳ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಭಾರತೀಯ ನೆಲದ ಸೂಫಿ ಸಿದ್ದಾಂತದ ಸಹಬಾಳ್ವೆ ಹಾಗೂ ಬಹುತ್ವಕ್ಕೆ ವಿರುದ್ಧ ಧಿಕ್ಕಿನಲ್ಲಿ ಜನರನ್ನು ಕೊಂಡೊಯ್ಯುತ್ತಿದ್ದಾರೆ ಎಂಬ ಅಭಿಪ್ರಾಯಗಳು ಇವರ ಕುರಿತಾಗಿದೆ. ಭಾರತದಲ್ಲಿ ಭಯೋತ್ಪಾದನೆಯ ಚಟುವಟಿಗೆಗಳಲ್ಲಿ ಈ ಸಂಘಟನೆಯ ಪಾತ್ರ ಎಲ್ಲಾ ಕೇಳಿ ಬಂದಿಲ್ಲ. ಆದರೆ ಫ್ರಾನ್ಸ್‌ನಲ್ಲಿ ಕೆಲವೊಂದು ಭಯೋತ್ಪಾಧನೆಯ ಕೃತ್ಯ ಎಸಗಿರುವ ಆರೋಪಗಳು ಈ ಸಿದ್ಧಾಂತವಾದಿಗಳ ಮೇಲಿದೆ. ಇದೀಗ ಕೊರೊನಾ ವೈರಸ್‌ ಹರಡುತ್ತಿರುವ ಸಂದರ್ಭದಲ್ಲಿ ತಬ್ಲೀಗ್‌ ಜಮಾತ್‌ ಮತ್ತೊಮ್ಮೆ ಸುದ್ದಿ ಕೇಂದ್ರಕ್ಕೆ ಬಂದಿದೆ.


from India & World News in Kannada | VK Polls https://ift.tt/2xEg9FQ

ಕೊರೊನಾ ಪರೀಕ್ಷೆ ಮಾಡಿಸಲು ಅಧಿಕಾರಿಗಳಿಗೆ ಮಾಹಿತಿ ನೀಡಿದ ಯುವಕನ ಹತ್ಯೆ!

200ರಷ್ಟು ಬಡ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದ ಬಾಂಗ್ಲಾದೇಶ ಕ್ರಿಕೆಟಿಗ

ಹೊಸದಿಲ್ಲಿ: ಕೋವಿಡ್ 19 ವೈರಸ್ ಕೇವಲ ಭಾರತದಲ್ಲಷ್ಟೇ ಅಲ್ಲದೆ ನೆರೆಯ ಸೇರಿದಂತೆ ವಿಶ್ವದೆಲ್ಲೆಡೆ ಭಾರಿ ಪರಿಣಾಮವನ್ನು ಬೀರಿದೆ. ಇದರಿಂದಾಗಿ ಜಗತ್ತಿನಾದ್ಯಂತ ವೈದ್ಯಕೀಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ವಿರುದ್ಧ ಹೋರಾಟ ಸಾರಿರುವ ಬಾಂಗ್ಲಾದೇಶ ಕ್ರಿಕೆಟಿಗ 200ರಷ್ಟು ಬಡ ಕುಟುಂಬಗಳಿಗೆ ಆಹಾರವನ್ನು ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಸ್ವತ: ತಾವೇ ಖುದ್ದಾಗಿ ಬೀದಿಗಿಳಿದ ಮೊಸಡೆಕ್ ಹೊಸೈನ್, 'ಹಸಿದವರಿಗೆ ಆಹಾರ ನೀಡುವ ಮೂಲಕ ನೆರವಾದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಮೊಸಡೆಕ್, ಆದಷ್ಟು ಬೇಗನೇ ಈ ಸಾಂಕ್ರಾಮಿಕ ರೋಗದಿಂದ ಹೊರಬರಲು ಬಯಸುತ್ತಿದ್ದೇವೆ. ನಾನು ನನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೇನೆ. ಅಲ್ಲದೆ ಬಡ ಜನರಿಗೆ ಸಹಾಯ ಮಾಡುವಂತೆ ಎಲ್ಲರಲ್ಲೂ ಬೇಡಿಕೊಳ್ಳುತ್ತೇನೆ. ಎಲ್ಲರೂ ಚೆನ್ನಾಗಿರಿ' ಎಂದಿದ್ದಾರೆ. ಈ ಸಂಬಂಧ ತಮ್ಮ ಫೇಸ್‌ಬುಕ್ ಪುಟದಲ್ಲಿ ಮೊಸಡೆಕ್ ಹೊಸೈನ್ ಚಿತ್ರ ಹಾಗೂ ಮಾಹಿತಿಗಳನ್ನು ಹಂಚಿದ್ದಾರೆ. 'ಕೋವಿಡ್ 19 ಸೋಂಕಿಗೆ ಇಡೀ ಜಗತ್ತೇ ತತ್ತರಿಸಿದೆ. ನಮ್ಮ ತಾಯ್ನಾಡಿಯಲ್ಲಿ ಇಂತಹ ಬಿಕ್ಕಟ್ಟನ್ನು ಎಂದೂ ನೋಡಿಲ್ಲ. ಬಡ ದೇಶದಲ್ಲಿ ಸುಮಾರು ಆರು ಕೋಟಿ ಜನರು ಅಸಹಾಯಕರಾಗಿದ್ದು, ಈ ಕಠಿಣ ಪರಿಸ್ಥಿತಿಯಲ್ಲಿ ಹಾದು ಹೋಗುತ್ತಿದ್ದಾರೆ' ಎಂದಿದ್ದಾರೆ. 'ಈ ಕಠಿಣ ಸಂದರ್ಭದಲ್ಲಿ ಅವರ ಜೊತೆಗೆ ನಿಲ್ಲುವುದು ನಮ್ಮ ಜವಾಬ್ದಾರಿಯಾಗಿದೆ. ಈ ನಿರ್ಗತಿಕ ಜನರ ಪಕ್ಕದಲ್ಲಿ ನಿಲ್ಲಲು ಸಾಧ್ಯವಾಗಿರುವುದು ನನ್ನ ಅದೃಷ್ಟ. ಸಮರ್ಥರಾಗಿರುವವರು ಸಹಾಯ ಮಾಡೋಣ. ನಮ್ಮ ಸಮಾಜಕ್ಕಾಗಿ ಏನಾದರೂ ಮಾಡಿ' ಎಂದು ಮನವಿ ಮಾಡಿದರು. ಕೊರೊನ್ ವೈರಸ್ ವಿರುದ್ಧದ ಹೋರಾಟದಲ್ಲಿ ಬೆಂಬಲ ಸೂಚಿಸಿದವರಲ್ಲಿ ಬಾಂಗ್ಲಾದೇಶ ಕ್ರಿಕೆಟಿಗರು ಮೊದಲಿಗರಾಗಿದ್ದಾರೆ. ಅಲ್ಲದೆ ಸರಿ ಸುಮಾರು 26 ಲಕ್ಷ ರೂ.ಗಳಷ್ಟು ಧನ ಸಹಾಯ ಮಾಡಿದ್ದಾರೆ. ಅಂದ ಹಾಗೆ ಬಾಂಗ್ಲಾದೇಶದಲ್ಲಿ ಇದುವರೆಗೆ 51 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಐದು ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ ಜನರಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3byXaeC

ಅಂದು ಕಾಶ್ಮೀರ ವಿರುದ್ಧ ಹೋರಾಟ ಸಾರಿದ ಆಫ್ರಿದಿಗೆ ಬೆಂಬಲ ಸೂಚಿಸಿದ ಯುವಿ, ಭಜ್ಜಿಗೆ ಭಾರತೀಯರ ತರಾಟೆ!

ಹೊಸದಿಲ್ಲಿ: ಕೊರೊನಾ ವೈರಸ್ ವಿರುದ್ಧ ಇಡೀ ವಿಶ್ವವೇ ಒಗ್ಗಟ್ಟಾಗಿ ಸಮರೋಪಾದಿಯಲ್ಲಿ ಹೋರಾಟ ಸಾರಿದೆ. ಪಾಕಿಸ್ತಾನದಲ್ಲಿ ಮಾಜಿ ನಾಯಕ ಶಾಹೀದ್ ಶಾಫ್ರಿದಿ ಸಹಾಯಾರ್ಥ ಸಂಸ್ಥೆಯ ನೇತೃತ್ವದಲ್ಲಿ ಬಡವರಿಗೆ ಸಹಾಯ ಮಾಡುವ ನಿರಂತರ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಬೆಂಬಲ ಸೂಚಿಸಿರುವ ಭಾರತದ ಮಾಜಿ ಆಲ್‌ರೌಂಡರ್ ಹಾಗೂ ಆಫ್ ಸ್ಪಿನ್ನರ್ , ಫೌಂಡೇಷನ್‌ಗೆ ದೇಣಿಗೆ ನೀಡಲು ಕರೆ ನೀಡಿದ್ದರು. ಆದರೆ ಸದಾ ಗಡಿಯಾಚೆಗಿನ ಭಯೋತ್ಪಾದನೆಯ ಚಟುವಟಿಕೆಗಳಿಗೆ ಕುಮ್ಮುಕ್ಕು ನೀಡುತ್ತಿರುವ ಪಾಕಿಸ್ತಾನದ ಪರವಾಗಿ ಭಾರತೀಯ ಕ್ರಿಕೆಟಿಗರು ನೆರವು ಯಾಚಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಂದು ಕಾಶ್ಮೀರ ವಿರುದ್ಧ ಹೋರಾಟ ಸಾರಿದ್ದ ಆಫ್ರಿದಿಗೆ ಯುವಿ ಹಾಗೂ ಭಜ್ಜಿ ಬೆಂಬಲ ಸೂಚಿಸಿರುವುದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಹರ್ಭಜನ್ ಸಿಂಗ್ ಹಾಗೂ ಯುವರಾಜ್ ಸಿಂಗ್‌ಗೆ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹೀದ್ ಆಫ್ರಿದಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಯುವಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಆಫ್ರಿದಿ, 'ಯುವಿ ಹಾಗೂ ಬ್ರದರ್ ಹರ್ಭಜನ್ ಸಿಂಗ್ ನನ್ನ ಬೆಂಬಲದ ಆಧಾರ ಸ್ತಂಭಗಳಾಗಿದ್ದಾರೆ. ನಮ್ಮಲ್ಲಿರುವ ಈ ಬಂಧವು ಪ್ರೀತಿಯನ್ನು ಪ್ರತಿಬಂಬಿಸುತ್ತದೆ ಮತ್ತು ಮಾನವೀಯತೆಯ ವಿಷಯಕ್ಕೆ ಬಂದಾಗ ಶಾಂತಿಯು ಗಡಿಗಳನ್ನು ಮೀರಿಸುತ್ತದೆ. ನಿಮ್ಮ ಉದಾತ್ತ ಪ್ರಯತ್ನಗಳಿಗೆ ಶುಭಾಶಯಗಳು' ಎಂದು ಹೇಳಿದ್ದಾರೆ. ದೇಣಿಗೆ ಸಂಗ್ರಹಿಸಲು ಶಾಹೀದ್ ಆಫ್ರಿದಿ ಡೋನೆಟ್ ಕರೋನಾ ಎಂಬ ವಿಶೇಷವಾದ ವೆಬ್‌ಸೈಟ್ ರಚಿಸಿದ್ದಾರೆ. ಆಫ್ರಿದಿ ಈ ಪ್ರಯತಕ್ಕೆ ಕ್ರಿಕೆಟ್ ವಲಯದಿಂದ ವ್ಯಾಪಕ ಬೆಂಬಲ ದೊರಕಿದೆ. ಈ ನಡುವೆ ಭಾರತೀಯ ಕ್ರಿಕೆಟಿಗರು ಶಾಹೀದ್ ಆಫ್ರಿದಿ ಫೌಂಡೆಷನ್‌ಗೆ ಬೆಂಬಲ ನೀಡಲು ಕರೆ ನೀಡಿರುವುದು ವ್ಯಾಪಕ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ. ಈ ಹಿಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವಾದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಭಾರತೀಯ ಸರಕಾರದ ಕ್ರಮವನ್ನು ಶಾಹೀದ್ ಆಫ್ರಿದಿ ತೀವ್ರವಾಗಿ ವಿರೋಧಿಸಿದ್ದರು. ಅಷ್ಟೇ ಯಾಕೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ವಿರುದ್ಧ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಆಫ್ರಿದಿ, ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸಿದ್ದರು. ಇದೀಗ ಆಫ್ರಿದಿಗೆ ಭಾರತೀಯ ಕ್ರಿಕೆಟಿಗರು ಬೆಂಬಲ ಸೂಚಿಸಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಅಂದ ಹಾಗೆ ಪಾಕಿಸ್ತಾನದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಇದುವರೆಗೆ 1914 ಮಂದಿಯಲ್ಲಿ ಕೋವಿಡ್ 19 ಸೋಂಕು ಕಂಡುಬಂದಿದೆ. ಈ ಪೈಕಿ 26 ಮಂದಿ ಸಾವಿಗೆ ಶರಣಾಗಿದ್ದಾರೆ. ಭಾರತದಲ್ಲೂ ಇದಕ್ಕೆ ಸಮಾನವಾದ ಪರಿಸ್ಥಿತಿಯಿದ್ದು, 1397 ಮಂದಿಗೆ ಸೋಂಕು ತಗುಲಿದ್ದು, 35 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ ಕೊರೊನಾ ವೈರಸ್ ಸರಪಳಿಯನ್ನು ಮುರಿಯುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮನವಿ ಮಾಡಲಾಗಿದ್ದು, ಏಪ್ರಿಲ್ 14ರ ವರೆಗೆ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಈ ಅವಧಿಯಲ್ಲಿ ಮನೆಯಲ್ಲೇ ಇರುವಂತೆಯೇ ಸೂಚಿಸಲಾಗಿದೆ. ಆಫ್ರಿದಿ ಫೌಂಡೇಷನ್ ನೆರವಿವಾಗಿ ಯುವಿ ಸಂದೇಶ ಇಂತಿತ್ತು:


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3bIjq5S

ಕೊರೊನಾಗೆ 2 ಲಕ್ಷಕ್ಕೂ ಅಧಿಕ ಜನ ಸಾಯುವ ಅಂದಾಜು: ದು:ಖ ತಡೆಯಲಾಗ್ತಿಲ್ಲ ಎಂದ ಟ್ರಂಪ್!

ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ವೈರಸ್ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ಸಾವಿನ ಸಂಖ್ಯೆಯಲ್ಲಿ ಚೀನಾವನ್ನೂ ಮೀರಿಸಿರುವುದು ಇಡೀ ಜಗತ್ತನ್ನೇ ದಂಗು ಬಡಿಸಿದೆ. ಮಾರಕ ವೈರಾಣುವಿಗೆ ಈಗಾಗಲೇ ಅಮೆರಿಕದಲ್ಲಿ 3,415 ಜನ ಸಾವಿಗೀಡಾಗಿದ್ದು, 1,75,000 ಜನರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಅಲ್ಲದೇ ಇದುವರೆಗೂ ಒಟ್ಟು 10 ಲಕ್ಷಕ್ಕೂ ಅಧಿಕ ಜನರನ್ನು ಪರೀಕ್ಷೆಗೆ ಗುರಿಪಡಿಸಲಾಗಿದೆ. ಈ ಮಧ್ಯೆ ಅಮೆರಿಕದಲ್ಲಿ ಮುಂದಿನ ಎರಡು ವಾರಗಳಲ್ಲಿ ಸುಮಾರು 2,40,000 ಜನರು ಕೊರೊನಾ ವೈರಸ್‌ಗೆ ಬಲಿಯಾಗಲಿದ್ದಾರೆ ಎಂಬ ಆಘಾತಕಾರಿ ವರದಿಯನ್ನು ಸ್ವತಃ ಟ್ರಂಪ್ ಸರ್ಕಾರ ಬಿಡುಗಡೆ ಮಾಡಿದೆ. ಮುಂದಿನ ಎರಡು ವಾರಗಳಲ್ಲಿ ಸುಮಾರು 2,40,000 ಜನ ಈ ಮಾರಕ ವೈರಾಣುವಿಗೆ ಬಲಿಯಾಗಲಿದ್ದು, ತನ್ನ ಇತಿಹಾದಲ್ಲೇ ಅತ್ಯಂತ ದು:ಖದ ದಿನಗಳನ್ನು ಎದುರಿಸಬೇಕಿದೆ ಎಂದು ವೈಟ್‌ಹೌಸ್ ಪ್ರಕಟಣೆ ಹೊರಡಿಸಿದೆ. ಇದಕ್ಕೆ ಪುಷ್ಠಿ ಎಂಬಂತೆ ಭಾರೀ ಸಾವು-ನೋವುಗಳನ್ನು ತಡೆದುಕೊಳ್ಳಲು ಸಿದ್ಧವಾಗಿರಿ ಎಂದು ಸ್ವತಃ ಅಮೆರಿಕ ಅಧ್ಯಕ್ಷ ದೇಶದ ಜನತೆಗೆ ಕರೆ ಕೊಟ್ಟಿದ್ದಾರೆ. ಅಧ್ಯಕ್ಷರ ಈ ಕರೆಯಿಂದಾಗಿ ಅಮೆರಿಕನ್ನರು ಅಕ್ಷರಶಃ ನಡುಗಿ ಹೋಗಿದ್ದಾರೆ. ಸರ್ಕಾರದ ಮಾರ್ಗಸೂಚಿಗಳು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಈ ಮಾರಕ ವೈರಾಣುವಿನಿಂದ ದೂರ ಇರಿ ಎಂದು ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ದೇಶವಾಸಿಗಳಿಗೆ ಕರೆ ನೀಡಿದ್ದಾರೆ.


from India & World News in Kannada | VK Polls https://ift.tt/2UUeYdd

ವೈರಸ್ ಹಬ್ಬಿಸಿದ ಧಾರ್ಮಿಕ ಸಭೆ, ಆಯೋಜಕನ ವಿರುದ್ಧ ಕೇಸು ಜಡಿದ ದಿಲ್ಲಿ ಪೊಲೀಸ್

ಹೊಸದಿಲ್ಲಿ: ಕೊರೊನಾ ವೈರಸ್ ತಡೆಗೆ ದೇಶದಾದ್ಯಂತ ಲಾಕ್ ಡೌನ್ ಹೇರಿರುವ ಬೆನ್ನಲ್ಲೇ ದೆಹಲಿಯ ಮಸೀದಿಯಲ್ಲಿ ನಡೆದ ಇದೀಗ ಇಡೀ ದೇಶಕ್ಕೆ ವೈರಸ್ ಹಬ್ಬಿಸಿರುವ ಭಯ ಹುಟ್ಟಿಸಿದೆ. ಮಾರ್ಚ್ ತಿಂಗಳ ಆರಂಭದಲ್ಲಿ ನಡೆದ ಈ ಧಾರ್ಮಿಕ ಸಭೆಯ ನೇತೃತ್ವ ವಹಿಸಿದ್ದ ಸಂಘಟನೆಯ ಸಂಸ್ಥಾಪಕ ಮುಹಮ್ಮದ್ ಇಲಿಯಾಸ್ ಅವರ ಮೊಮ್ಮಗ ವಿರುದ್ಧ ಇದೀಗ ಪೊಲೀಸರು ಕೇಸು ದಾಖಲಿಸಿದ್ದಾರೆ. ಸಾರ್ವಜನಿಕ ಸಭೆಗಳನ್ನು ನಡೆಸಬಾರದು ಮತ್ತು ಕೋವಿಡ್ 19 ಹಬ್ಬದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಸೂಚನೆಯ ನಡೆವೆಯೂ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಕೂಟಕ್ಕೆ ಸಂಬಂಧಿಸಿದಂತೆ ಮಾರ್ಕಾಜ್ ನಲ್ಲಿ ಧಾರ್ಮಿಕ ಸಭೆಯನ್ನು ಸರಿಯಾಗಿ ನಿರ್ವಹಣೆ ಮಾಡದೆ ಸರಕಾರದ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕೇಂದ್ರದ ಮೌಲಾನಾ ಸಾದ್ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಇತರ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯ ನಿಜಾಮುದ್ದೀನ್ (ಬಂಗ್ಲೇವಾಲೆ) ಮಸೀದಿಯಲ್ಲಿ ತಬ್ಲೀಘಿ ಜಮಾತ್ ಸಂಘಟನೆ ಮಾರ್ಚ್ 1ರಿಂದ 15ರವರೆಗೆ ಧಾರ್ಮಿಕ ಸಭೆಯನ್ನು ನಡೆಸಿತ್ತು. ಈ ಸಭೆಯಲ್ಲಿ ದೇಶ-ವಿದೇಶಗಳ 8000ಕ್ಕೂ ಹೆಚ್ಚು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು. ಕಳೆದ ಭಾನುವಾರ ರಾತ್ರಿ ಹಲವು ಮಂದಿಯಲ್ಲಿ ಕೋವಿಡ್ 19 ನ ಲಕ್ಷಣಗಳು ಕಾಣಿಸಿದವು. ಇದರ ಮೂಲ ದೆಹಲಿಯ ಧಾರ್ಮಿಕ ಸಭೆ ಎಂದು ತಿಳಿದುಬಂತು. ಸದ್ಯ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು, ಪೊಲೀಸರು ಮತ್ತು ಅರೆಸೇನಾ ಪಡೆಗಳು ನಿಜಾಮುದ್ದೀನ್ ಸಂಪರ್ಕಿಸುವ ರಸ್ತೆಗಳನ್ನು ಸಭೆ ನಡೆದ ಪ್ರದೇಶವನ್ನು ಲಾಕ್ ಮಾಡಿದ್ದಾರೆ. ಆದರೆ ಇನ್ನೂ ಹೆಚ್ಚು ಮಂದಿಗೆ ವೈರಸ್ ಹರಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಭಯ ವ್ಯಕ್ತಪಡಿಸಿದ್ದಾರೆ. ಸೋಮವಾರ ತಡರಾತ್ರಿ ತೆಲಂಗಾಣ ಸರಕಾರ ಈ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದೆ. ಮಿಕ್ಕಂತೆ ಕರ್ನಾಟಕ, ತಮಿಳುನಾಡು, ದೆಹಲಿ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ಈ ಧಾರ್ಮಿಕ ಸಭೆಗೆ ಜನ ಸೇರಿದ್ದು ಇನ್ನಷ್ಟು ಜನರಿಗೆ ಸೋಂಕು ಹಬ್ಬಿರುವ ಭೀತಿ ಎದುರಾಗಿದೆ. ಮಂಗಳವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಬ್ಲೀಘಿ ಜಮಾತ್ ನಲ್ಲಿ ಭಾಗವಹಿಸಿದ 24 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಮಾರ್ಕಾಜ್ ಪ್ರದೇಶದಲ್ಲಿ ವಾಸಿಸುತ್ತಿರುವ 440 ಕ್ಕೂ ಹೆಚ್ಚು ಜನರಲ್ಲಿ ರೋಗದ ಲಕ್ಷಣಗಳು ಕಂಡುಬಂದಿದೆ ಹೀಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ, ವರದಿಗಾಗಿ ಕಾಯಲಾಗುತ್ತಿದೆ ಎಂದಿದ್ದಾರೆ. ಮಾರ್ಕಾಜ್ ನಿಜಾಮುದ್ದೀನ್ ಸುಮಾರು 100 ವರ್ಷಗಳಿಂದ ಜಮಾಅತ್‌ನ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 22 ರಂದು ಜನತಾ ಕರ್ಫ್ಯೂ ಘೋಷಿಸಿದಾಗ ಧಾರ್ಮಿಕ ಸಭೆಯನ್ನು ನಿಲ್ಲಿಸಲಾಯ್ತು. ಆದರೆ ಸಾರಿಗೆ ವ್ಯವಸ್ಥೆ ಸಿಗದೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಅಲ್ಲಿಯೇ ಸಿಲುಕಿಕೊಂಡರು. ಇದು ಈಗ ಬಹುದೊಡ್ಡ ತೊಂದರೆ ತಂದಿಟ್ಟಿದೆ.


from India & World News in Kannada | VK Polls https://ift.tt/340UuDS

ದಾದಾರಿಂದ ದೊರಕಿರುವುದು ಮಹಿಯಿಂದ ಸಿಕ್ಕಿರಲಿಲ್ಲ: ಯುವರಾಜ್ ಸಿಂಗ್

ಹೊಸದಿಲ್ಲಿ: ಮಾಜಿ ನಾಯಕರುಗಳಾದ ಹಾಗೂ ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆಯನ್ನು ಸಲ್ಲಿಸಿದ್ದಾರೆ. ಈ ಇಬ್ಬರ ಮಧ್ಯೆ ಯಾರು ಶ್ರೇಷ್ಠ ನಾಯಕ ಎಂಬುದನ್ನು ಗುರುತಿಸುವುದು ಕಷ್ಟ ಸಾಧ್ಯ. ಹಾಗಿರಬೇಕೆಂದರೆ ಭಾರತದ ವಿಶ್ವಕಪ್ ಹೀರೊ , ಮಹಿಗಿಂತಲೂ ಮಿಗಿಲಾಗಿ ದಾದಾ ಶ್ರೇಷ್ಠ ನಾಯಕ ಎಂದು ಪಟ್ಟ ನೀಡಿದ್ದಾರೆ. "ನಾನು ಗಂಗೂಲಿ ನಾಯಕತ್ವದ ಅಡಿಯಲ್ಲಿ ಆಟವಾಡಿದ್ದು, ಅತೀವ ಬೆಂಬಲ ದೊರಕಿದೆ. ತದಾ ಬಳಿಕ ಮಹಿ ನಾಯಕರಾದರು. ಹಾಗಾಗಿ ಅವರಿಬ್ಬರ ಮಧ್ಯೆ ಅತ್ಯುತ್ತಮ ನಾಯಕರನ್ನು ಗುರುತಿಸುವುದು ಕಠಿಣವಾದ ಕೆಲಸವಾಗಿದೆ" ಎಂದರು. "ಆದರೂ ಗಂಗೂಲಿ ಕಪ್ತಾನಗಿರಿಯಲ್ಲಿ ನಾನು ಹೆಚ್ಚಿನ ನೆನಪುಗಳನ್ನು ಹೊಂದಿದ್ದೇನೆ. ಅವರು ನನಗೆ ಅತೀವ ಬೆಂಬಲ ನೀಡುತ್ತಿದ್ದರು. ಮಹೇಂದ್ರ ಸಿಂಗ್ ಧೋನಿ ಅಥವಾ ಅವರಿಂದ ಅದಕ್ಕೆ ಸಮಾನವಾದ ಬೆಂಬಲ ಪಡೆದಿರಲಿಲ್ಲ" ಎಂದು ಸೇರಿಸಿದರು. 2000ನೇ ದಶತಕದ ಆರಂಭದಲ್ಲಿ ಭಾರತೀಯ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಹಗರಣದಿಂದ ತತ್ತರಿಸಿ ಹೋಗಿದ್ದಾಗ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವ ವಹಿಸಿ ಯುವ ಆಟಗಾರರನ್ನು ಕಟ್ಟಿ ಬೆಳೆಸಿದ್ದರು. 2000ನೇ ಇಸವಿಯಲ್ಲಿ ಐಸಿಸಿ ನಾಕೌಟ್ ಟೂರ್ನಿಯಲ್ಲಿ ಫೈನಲ್ ವರೆಗೂ ಮುನ್ನಡೆಸಿದ್ದರು. ಆಗ 18ರ ಹರೆಯದ ಯುವ ಆಟಗಾರನಾದ ಯುವಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದರು. ಬಳಿಕ 2002ನೇ ಇಸವಿಯಲ್ಲಿ ನಾಟ್‌ವೆಸ್ಟ್ ಸಿರೀಸ್‌ ಫೈನಲ್‌ನಲ್ಲೂ ಮೊಹಮ್ಮದ್ ಕೈಫ್ ಜೊತೆ ಯುವಿ ನಿರ್ಣಾಯಕ ಜೊತೆಯಾಟ ಕಟ್ಟಿದ ಯುವರಾಜ್ ಸಿಂಗ್ ಭಾರತಕ್ಕೆ ಸ್ಮರಣೀಯ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು. ಬಳಿಕ ದಾದಾ ನಾಯಕತ್ವದಲ್ಲೇ 2003ನೇ ಇಸವಿಯಲ್ಲಿ ಭಾರತ ವಿಶ್ವಕಪ್ ರನ್ನರ್ ಅಪ್ ಎನಿಸಿತು. ಅಲ್ಲಿಂದ ಬಳಿಕ ಮಹೇಂದ್ರ ಸಿಂಗ್ ಧೋನಿ ಮುಂದಾಳತ್ವದಲ್ಲಿ 2007 ಹಾಗೂ 2011ನೇ ಇಸವಿಯಲ್ಲಿ ಭಾರತ ಟ್ವೆಂಟಿ-20 ಹಾಗೂ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಯುವಿ ಮಹತ್ವದ ಪಾತ್ರ ವಹಿಸಿದ್ದರು. ತದಾ ಬಳಿಕ ಕ್ಯಾನ್ಸರ್ ರೋಗದಿಂದ ಗೆದ್ದು ಬಂದ ಯುವಿಗೆ ನಾಯಕ ಮಹಿಯಿಂದ ಬೇಕಾದಷ್ಟು ಬೆಂಬಲ ದೊರಕಿರಲಿಲ್ಲ. ಇದರಿಂದಾಗಿ ಕೆರಿಯರ್‌ನ ಅಂತಿಮ ಹಂತದಲ್ಲಿ ಹಿನ್ನೆಡೆಯನ್ನು ಅನುಭವಿಸಿದ್ದರು. 2011 ಏಕದಿನ ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ಹೀರೊ ಎನಿಸಿಕೊಂಡಿರುವ ಯುವರಾಜ್ ಸಿಂಗ್ 362 ರನ್ ಹಾಗೂ 15 ವಿಕೆಟ್‌ಗಳನ್ನು ಕಬಳಿಸಿದ್ದರು. ಅಲ್ಲದೆ ನಾಲ್ಕು ಪಂದ್ಯಶ್ರೇಷ್ಠ ಪುರಸ್ಕಾರಗಳೊಂದಿಗೆ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನವಾದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/39CxzQl

ಕೊರೊನಾ ಗೃಹಬಂಧನದಿಂದ ಫ್ಯಾಮಿಲಿ ಟ್ರಬಲ್‌, ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳ!

ಕೊರೊನಾದಿಂದ ಸತ್ತವರ ಸಂಖ್ಯೆ 35ಕ್ಕೆ ಏರಿಕೆ, ತಬ್ಲಿಘಿ ಜಮಾತ್‌ ಸಭೆಯಲ್ಲಿ ಪಾಲ್ಗೊಂಡವರಿಗಾಗಿ ಶೋಧ!

ಹೊಸದಿಲ್ಲಿ: ದಿಲ್ಲಿ ನಿಜಾಮುದ್ದೀನ್‌ ಪ್ರದೇಶದಲ್ಲಿರುವ 'ಅಲಾಮಿ ಮಾರ್ಕಜ್‌ ಬಂಗ್ಲೇವಾಲಿ' ಮಸೀದಿಯಲ್ಲಿ ಮಾರ್ಚ್‌ನಲ್ಲಿ ತಬ್ಲಿಘಿ ಜಮಾತ್‌ ಆಯೋಜಿಸಿದ್ದ ಧಾರ್ಮಿಕ ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗಳಿಗಾಗಿ ದೇಶಾದ್ಯಂತ ಹುಡುಕಾಟ ಆರಂಭವಾಗಿದೆ. ಮಾರ್ಚ್ 13ರಿಂದ 15ರ ಅವಧಿಯಲ್ಲಿ ನಡೆದ ಸಮಾವೇಶದಲ್ಲಿ ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ತೆಲಂಗಾಣ ಸೇರಿ ವಿವಿಧ ರಾಜ್ಯ/ಕೇಂದ್ರಾ­ಡಳಿತ ಪ್ರದೇಶಗಳಿಂದ ಸಾವಿರಾರು ಜನರು ಪಾಲ್ಗೊಂಡು ಬಳಿಕ ತಮ್ಮ ತಮ್ಮ ಊರುಗಳಿಗೆ ಮರಳಿದ್ದಾರೆ. ದೇಶಾದ್ಯಂತ 10 ಮಂದಿ ಸೋಂಕಿಗೆ ಬಲಿಯಾದವರು ಇದೇ ಸಮಾವೇಶದಲ್ಲಿ ಪಾಲ್ಗೊಂಡಿ­ರುವುದು ಬೆಳಕಿಗೆ ಬಂದಿದೆ. ಈ ರೀತಿ ಸೋಂಕು ಹರಡಲು ಮಸೀದಿ­ಯಲ್ಲಿ ನಡೆದ ಧಾರ್ಮಿಕ ಕಾರ‍್ಯ­ಕ್ರಮ ಕಾರಣ­ವಾಗಿದ್ದು, ಸಮಾವೇಶದಲ್ಲಿ ಪಾಲ್ಗೊಂಡಿದ್ದ­ವರ ಹುಡು­ಕಾಟಕ್ಕೆ ರಾಜ್ಯ ಸರಕಾರಗಳು ಕಾರ್ಯಾಚರಣೆ ತೀವ್ರಗೊಳಿಸಿವೆ. ಸವಾಲಿನ ಕೆಲಸ: ದಕ್ಷಿಣ ದಿಲ್ಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿ ಸೂಫಿ ಸಂತ ನಿಜಾಮುದ್ದೀನ್‌ ಔಲಿಯಾ ದರ್ಗಾ ಸಮೀಪವೇ ಬಂಗ್ಲೇವಾಲಿ ಮಸೀದಿ ಇದೆ. ಚಿಕ್ಕ ಗೇಟು, ಕಿಷ್ಕಿಂಧೆಯಂತಹ ರಸ್ತೆಯಲ್ಲಿರುವ ಮಸೀದಿ ಕಟ್ಟಡ ನಾಲ್ಕು ಮಹಡಿಗಳನ್ನು ಹೊಂದಿದೆ. ಇದೊಂದು ಜನನಿಬಿಡ ಪ್ರದೇಶ. ಯಾರು ಒಳಹೋದರು, ಹೊರಬಂದರು ಎಂದು ಪತ್ತೆ ಹಚ್ಚುವುದೇ ಕಷ್ಟ. ಇಂತಹ ಕಟ್ಟಡದಲ್ಲಿ ಸೋಮವಾರದವರೆಗೂ 2000 ಜನ ಇದ್ದಿದ್ದರಿಂದ ಸೋಂಕು ಶರವೇಗದಲ್ಲಿ ಹರಡಿರುವ ಸಾಧ್ಯತೆಗಳಿವೆ. ಹೀಗಾಗಿ ಕಾರ‍್ಯಕ್ರಮದಲ್ಲಿ ಪಾಲ್ಗೊಂಡವರಿಗಾಗಿ ರಾಜ್ಯ ಸರಕಾರಗಳು ಹುಡುಕಾಟ ನಡೆಸಿದ್ದರೂ ಅದೊಂದು ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯ: ಲಾಕ್‌ಡೌನ್‌ ಆದೇಶ ಜಾರಿಯಾದ ನಂತರವೇ ಇಲ್ಲಿ ಜನರ ಓಡಾಟಕ್ಕೆ ಬ್ರೇಕ್‌ ಬಿದ್ದಿದೆ. ಅದಕ್ಕೂ ಮೊದಲೇ ಕೊರೊನಾ ಸೋಂಕು ತಗುಲಿಸಿಕೊಂಡಿದ್ದವರ ಪೈಕಿ ಕೆಲವರು ಈ ಕಾರ್ಯ­ಕ್ರಮದಲ್ಲಿ ಭಾಗಿಯಾಗಿದ್ದರೆಂಬುದು ಗೊತ್ತಾಗಿ­ದ್ದರೂ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದರು ಎಂಬ ಆರೋಪ ಕೇಳಿಬಂದಿದೆ. ವಿದೇಶಿಯರನ್ನು ಹೆಚ್ಚಿನ ರೀತಿಯಲ್ಲಿ ತಪಾಸಣೆಗೊಳ­ಪಡಿಸದೇ ಒಳಬಿಟ್ಟಿದ್ದರು ಎನ್ನಲಾಗಿದೆ. ಪ್ರದೇಶದಲ್ಲಿ ವೈದ್ಯಕೀಯ ಶಿಬಿರಗಳನ್ನೂ ತೆರೆಯಲಿಲ್ಲ ಎನ್ನಲಾಗಿದೆ. ಈಗ ಎಚ್ಚೆತ್ತುಕೊಂಡಿರುವ ದಿಲ್ಲಿ ಪಾಲಿಕೆ 30 ಸಾವಿರ ಲೀಟರ್‌ ಸೋಂಕು ನಿವಾರಕ ದ್ರಾವಣದಿಂದ ಪ್ರದೇಶ­ವನ್ನು ಸ್ವಚ್ಛಗೊಳಿಸಿದೆ. ಸೋಂಕಿತರ ಸಂಖ್ಯೆ ಭಾರತದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದುವರೆಗೆ ರಾಷ್ಟ್ರದಲ್ಲಿ 1,590 ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 124 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಾವಿನ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 102ಕ್ಕೆ ಏರಿಕೆಯಾಗಿದ್ದು, ಮೂವರು ಸಾವನ್ನಪ್ಪಿದರೆ ಆರು ಮಂದಿ ಗುಣಮುಖರಾಗಿದ್ದಾರೆ. ರಾಷ್ಟ್ರದಲ್ಲೇ ಅತಿಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿರುವುದು ಮಹಾರಾಷ್ಟ್ರದಲ್ಲಿ. ಇದುವರೆಗೆ 302 ಪ್ರಕರಣಗಳು ದಾಖಲಾಗಿದ್ದರೆ, 10 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ 39 ಮಂದಿ ಗುಣಮುಖರಾಗಿದ್ದಾರೆ. ರಾಷ್ಟ್ರದಲ್ಲೇ ಮೊದಲ ಸೋಂಕು ಪತ್ತೆಯಾದ ಕೇರಳದಲ್ಲಿ ಇದುವರೆಗೆ ಸೋಂಕಿತರ 241ಕ್ಕೆ ಏರಿಕೆಯಾಗಿದೆ. ಮೂವರು ಸಾವನ್ನಪ್ಪಿದ್ದು, 24 ಮಂದಿಗೆ ಗುಣವಾಗಿದೆ.


from India & World News in Kannada | VK Polls https://ift.tt/2w3fnSm

ಕೊರೊನಾ ವೈರಸ್‌: ವಿಶ್ವಾದ್ಯಂತ ಇದುವರೆಗೆ ಸೋಂಕಿನಿಂದ 42 ಸಾವಿರಕ್ಕೂ ಹೆಚ್ಚು ಮಂದಿ ಸಾವು!

ವಿಶ್ವಾದ್ಯಂತ ವೈರಸ್‌ ದಿನದಿಂದ ದಿನಕ್ಕೆ ಬೃಹತ್‌ ಪ್ರಮಾಣದಲ್ಲಿ ವ್ಯಾಪಿಸುತ್ತಿದೆ. ಈಗಾಗಲೇ ವಿಶ್ವಾದ್ಯಂತ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 9 ಲಕ್ಷ ಸಮೀಪಿಸಿದೆ. ಸಾವಿನ ಸಂಖ್ಯೆ 42,114ಕ್ಕೆ ತಲುಪಿದೆ. ಪ್ರಸ್ತುತ ವಿಶ್ವಾದ್ಯಂತ 8,57,299 ಮಂದಿ ಕೊರೊನಾ ವೈರಸ್‌ನಿಂದ ನರಳುತ್ತಿದ್ದಾರೆ. ಈ ಪೈಕಿ 32,297 ಮಂದಿ ಸ್ಥಿತಿ ಗಂಭೀರವಾಗಿದೆ. ಕೊರೊನಾ ಪ್ರಕರಣಗಳ ಪೈಕಿ 2,19,255 ಕೇಸ್‌ಗಳನ್ನು ಕ್ಲೋಸ್‌ ಮಾಡಲಾಗಿದೆ. ಈ ಪೈಕಿ 1,77,141 ಮಂದಿ ಗುಣಮುಖರಾಗಿದ್ದಾರೆ. 42,144 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ಗುಣಮುಖರಾದವರ ಪ್ರಮಾಣ ಶೇ.81 ಇದೆ. ವಿಶ್ವಾದ್ಯಂತ ಎಲ್ಲ ರಾಷ್ಟ್ರಗಳು ಕೊರೊನಾ ವೈರಸ್‌ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ. ಆತಂಕ ಸೃಷ್ಟಿಸುವ ವಿಚಾರವೆಂದರೆ ಒಂದೇ ದಿನದಲ್ಲಿ ಅಮೆರಿಕ, ಇಟಲಿ, ಸ್ಪೇನ್‌ನಲ್ಲಿ 700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ವಿಶ್ವಾದ್ಯಂತ ಒಟ್ಟು 4,341 ಹೊಸ ಕೊರೊನಾ ಸಾವುಗಳು ಸಂಭವಿಸಿವೆ. ಕರ್ನಾಟಕದಲ್ಲಾಗಲಿ ಕೊರೊನಾದಿಂದ ಮೃತಪಟ್ಟ ಹೊಸ ಪ್ರಕರಣ ದಾಖಲಾಗಿಲ್ಲ. ಭಾರತದಲ್ಲಿ ಹೊಸದಾಗಿ ಮೂರು ಸಾವುಗಳು ಸಂಭವಿಸಿದ್ದು, ಸತ್ತವರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿತ ಸಂಖ್ಯೆ 1,560ಕ್ಕೆ ಹೆಚ್ಚಿದೆ. ಕೊರೊನಾ ವೈರಸ್‌ ಪ್ರಕರಣಗಳ ಅಂಕಿಸಂಖ್ಯೆ ವಿಶ್ವಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ: 8,57,299 ಸತ್ತವರ ಸಂಖ್ಯೆ: 42,114 ಗುಣಮುಖರಾದವರ ಸಂಖ್ಯೆ: 1,77,141 ದೇಶಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ: 1,560 ಸತ್ತವರ ಸಂಖ್ಯೆ: 48 ಗುಣಮುಖರಾದವರ ಸಂಖ್ಯೆ: 123 ರಾಜ್ಯಾದ್ಯಂತ ಕೊರೊನಾ ಪೀಡಿತರ ಸಂಖ್ಯೆ: 102 ಸತ್ತವರ ಸಂಖ್ಯೆ: 03


from India & World News in Kannada | VK Polls https://ift.tt/2xJn2Wj

ಇಂದಿನ ಚುಟುಕು ಸುದ್ದಿಗಳು: ಕೊರೊನಾ ಮುಕ್ತ ಹೋರಾಟಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ ಸಂಸದ ಜಿ.ಎಸ್‌ ಬಸವರಾಜ್‌

ತುಮಕೂರು: ಕೊರೊನಾ ಮುಕ್ತ ಹೋರಾಟಕ್ಕೆ ಕೇಂದ್ರ ಸರಕಾರಕ್ಕೆ 1 ಕೋಟಿ ರೂ. ನೆರವು ನೀಡಲು ಸಂಸದ ಜಿ.ಎಸ್‌ ಬಸವರಾಜ್‌ ಮುಂದಾಗಿದ್ದಾರೆ. ತಮ್ಮ ಸಂಸದರ ನಿಧಿಯಿಂದ 1 ಕೋಟಿ ರೂ. ನೆರವು ಜತೆಗೆ ತಮ್ಮ ಒಂದು ತಿಂಗಳ ವೇತನವನ್ನು ಕೊರೊನಾ ವೈರಸ್‌ ವಿರುದ್ಧದ ಹೋರಾಟಕ್ಕೆ ನೀಡುವುದಾಗಿ ಪತ್ರ ಮುಖೇನ ತಿಳಿಸಿದ್ದಾರೆ. ಈಗಾಗಲೇ ತಮ್ಮ ಒಡೆತನದ ಸಿಐಟಿ ಇಂಜಿನಿಯರಿಂಗ್‌ ಕಾಲೇಜನ್ನು ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ರಾಜ್ಯ ಸರಕಾರಕ್ಕೆ ಬಿಟ್ಟುಕೊಟ್ಟಿದ್ದಾರೆ. ಕೊಪ್ಪಳ: ಅಂತಾರಾಜ್ಯ ಕಳ್ಳರ ಬಂಧನ ಗಂಗಾವತಿ: ನಗರ ಸೇರಿ ತಾಲೂಕಿನ ಬಂಡಿಬಸಪ್ಪ ಕ್ಯಾಂಪಿನ ಮನೆಗಳಲ್ಲಿ ಕಳ್ಳತನ ಮಾಡಿ, ತಲೆ ಮರೆಸಿಕೊಂಡಿದ್ದ ಅಂತಾರಾಜ್ಯ ಮೂವರು ಕಳ್ಳರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಅಭಿಜಿತ್‌ ಜಾಧವ್‌, ಸಚಿನ್‌ ಗಾಯಕವಾಡ ಹಾಗೂ ಹುಸೇನ್‌ ಗಾಯಕವಾಡ ಬಂಧಿತರು. ಅವರಿಂದ 12 ಲಕ್ಷ ರೂ. ಮೌಲ್ಯದ 225 ಗ್ರಾಂ ಬಂಗಾರ ಹಾಗೂ 2670 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.


from India & World News in Kannada | VK Polls https://ift.tt/2wIJbUT

ಲಾಕ್‌ಡೌನ್‌ ವಿಧಿಸಿ ಕ್ಷಮೆ ಕೇಳಿದ್ರಂತೆ ಮೋದಿ..! ಇಮ್ರಾನ್‌ ಎಡವಟ್ಟಿಗೆ ಪಾಕ್ ಮಾಧ್ಯಮಗಳು ಕೆಂಡ..!

ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಭಾಷಣ ಬರೆದುಕೊಡುವವರಿಗೆ ಸುಳ್ಳು ಸುದ್ದಿ ಯಾವುದು, ಅಸಲಿ ಸುದ್ದಿ ಯಾವುದು ಎಂಬುದನ್ನು ಕಂಡು ಹಿಡಿಯುವ ವ್ಯವಧಾನ, ಬುದ್ದಿವಂತಿಕೆ ಇಲ್ಲ ಅನ್ಸುತ್ತೆ. ಯಾರೋ ಬರೆದುಕೊಟ್ಟಿದ್ದನ್ನು ಓದುವ ಅವರಿಗೂ ಇವೆಲ್ಲ ಗೊತ್ತಾಗೋದಿಲ್ಲ ಅನ್ಸುತ್ತೆ. ಯಾಕಂದ್ರೆ ಇಮ್ರಾನ್ ತಮ್ಮ ಭಾಷಣದಲ್ಲಿ ಮಾಡಿರುವ ಎಡವಟ್ಟಿಗೆ ಅಲ್ಲಿನ ಮಾಧ್ಯಮಗಳೇ ಚಾಟಿ ಬೀಸುತ್ತಿವೆ..! ಪಾಕಿಸ್ತಾನದಾದ್ಯಂತ ಭಾರತವನ್ನೂ ಮೀರಿಸುವಂತೆ ಕೊರೊನಾ ವೈರಸ್ ಹಾವಳಿ ಮನೆ ಮಾಡಿದೆ. ಆದ್ರೆ, ಜನರಿಗೆ ಸೂಕ್ತ ರೀತಿಯಲ್ಲಿ ಪರೀಕ್ಷೆಗಳನ್ನೇ ಮಾಡುತ್ತಿಲ್ಲ. ಸೋಂಕಿತರು ಪತ್ತೆಯಾದ್ರೆ, ಅವರನ್ನು ಭಾರತದ ಗಡಿಗೆ ತಂದು ಸುರಿಯುತ್ತಿರುವ ಪಾಕ್ ಸರ್ಕಾರ, ಲಾಕ್‌ಡೌನ್‌ ಮಾಡಲು ನೆಪಗಳನ್ನು ಹೇಳುತ್ತಿದೆ..! ಸಂಪೂರ್ಣ ಪಾಕಿಸ್ತಾನವನ್ನು ಭಾರತದ ರೀತಿ ಮಾಡಿದರೆ ಬಡವರಿಗೆ ತೊಂದರೆ ಆಗುತ್ತದೆ, ಹಸಿವಿನಿಂದ ಸಾಯಬೇಕಾಗುತ್ತೆ ಎಂದು ಅಭಿಪ್ರಾಯಪಟ್ಟಿರುವ ಪಾಕ್ ಪ್ರಧಾನಿ ಇಮ್ರಾನ್‌ ಖಾನ್, ಮಾತನಾಡುವ ಭರದಲ್ಲಿ ಒಂದು ಎಡವಟ್ಟು ಮಾಡಿಬಿಟ್ಟರು..! ಭಾರತದಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಕ್ಷಮೆ ಕೇಳಿದ್ದಾರೆ ಎಂದು ಹೇಳಿದರು. ಇಮ್ರಾನ್ ಅವರ ಈ ಹೇಳಿಕೆಗೆ ಕೆಂಡಾಮಂಡಲವಾದ ಪಾಕಿಸ್ತಾನ ಮಾಧ್ಯಮಗಳು, ಭಾರತದ ಅವರ ಭಾಷಣವನ್ನು ಸರಿಯಾಗಿ ಕೇಳಿ ಎಂದು ಇಮ್ರಾನ್‌ ಖಾನ್‌ಗೆ ತಿರುಗೇಟು ಕೊಟ್ಟವು. ಮನ್‌ ಕಿ ಬಾತ್‌ ವೇಳೆ ಕಳೆದ ಭಾನುವಾರ ರೇಡಿಯೋದಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ, ಲಾಕ್‌ಡೌನ್‌ನಿಂದಾಗಿ ಬಡವರು ಕಷ್ಟಪಡಬೇಕಾಗಿದೆ, ದೇಶಾದ್ಯಂತ ಜನರಿಗೆ ತೊಂದರೆ ಆಗಿದೆ, ಇದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದಿದ್ದರು. ಆದ್ರೆ, ಪ್ರಧಾನಿ ಮೋದಿ ಭಾಷಣವನ್ನು ತಿರುಚಿದ್ದ ಇಮ್ರಾನ್‌ ಖಾನ್, ಲಾಕ್‌ಡೌನ್‌ ಘೋಷಣೆ ಮಾಡಿದ್ದೇ ತಪ್ಪು ಅನ್ನೋ ಕಾರಣಕ್ಕೆ ಕ್ಷಮೆ ಕೇಳಿಬಿಟ್ಟರು ಎಂದು ಹೇಳಿಕೆ ನೀಡಿ ಇದೀಗ ಪೇಚಾಡುತ್ತಿದ್ಧಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಈ ಹೇಳಿಕೆಯ ಜೊತೆಗೆ ಪ್ರಧಾನಿ ಮೋದಿಯವರ ಭಾಷಣವನ್ನೂ ಪ್ರಸಾರ ಮಾಡಿದ ಪಾಕಿಸ್ತಾನದ ಜಿಯೋ ವಾಹಿನಿ, ತಮ್ಮ ಪ್ರಧಾನಿಯ ಬಣ್ಣ ಬಯಲು ಮಾಡಿದೆ. ಪ್ರಧಾನಿ ಮೋದಿ ಲಾಕ್‌ಡೌನ್‌ ನಿರ್ಧಾರಕ್ಕೆ ಕ್ಷಮೆ ಕೇಳಿರಲಿಲ್ಲ ಎಂದು ಸ್ಪಷ್ಟನೆ ನೀಡಿದೆ.


from India & World News in Kannada | VK Polls https://ift.tt/2Ut5lDo

ರಾಜ್ಯದಲ್ಲಿ ಮತ್ತೆ 10 ಕೊರೊನಾ ಪಾಸಿಟಿವ್‌ ಕೇಸ್‌ ಪತ್ತೆ, ಸೋಂಕಿತರ ಸಂಖ್ಯೆ 98ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿತರ ಸಂಖ್ಯೆ 100ರ ಗಡಿಯಲ್ಲಿ ನಿಂತಿದೆ. ಸೋಮವಾರ ಸಂಜೆಯಿಂದ ಇಲ್ಲಿಯವರೆಗೂ ಹೊಸ 10 ಕೊರೊನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 98ಕ್ಕೆ ಏರಿಕೆಯಾಗಿದೆ. ಇದರಲ್ಲಿ ಮೂವರು ಮೃತಪಟ್ಟಿದ್ದು, 6 ಜನ ಗುಣಮುಖರಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಮೂವರು, ಬೆಂಗಳೂರು, ಮೈಸೂರಿನಲ್ಲಿ ತಲಾ ಇಬ್ಬರು, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯ ತಲಾ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಒಂದೇ ಕುಟುಂಬದ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಎಲ್ಲರೂ ನಿಯೋಜಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರ್ಚ್‌ 16ರಂದು ಬೆಂಗಳೂರಿನ ಸಂಬಂಧಿಕರ ಮನೆಗೆ ಹೋಗಿ ಮಾ.19ರಂದು ಹೊಸಪೇಟೆಗೆ ಹಿಂತಿರುಗಿದ್ದ 52 ವರ್ಷದ ಪುರುಷ, 48 ವರ್ಷದ ಮಹಿಳೆ ಹಾಗೂ 26 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇನ್ನು, ಬೆಂಗಳೂರಿನಲ್ಲಿ ಸೋಂಕಿತ ಸಂಖ್ಯೆ 59ರ ಸಂಪರ್ಕಿತ 40 ವರ್ಷದ ಪುರುಷ ಹಾಗೂ ಅಮೆರಿಕದಿಂದ ಬಂದ 19 ವರ್ಷದ ಯುವಕನಲ್ಲಿ ಕೊರೊನಾ ದೃಢವಾಗಿದೆ. ಚಿಕ್ಕಬಳ್ಳಾಪುರದ ಗೌರಿಬಬಿದನೂರಿನಲ್ಲಿ 40 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಇತ್ತ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು, ನಂಜನಗೂಡಿನ ಸೋಂಕಿತ ಸಂಖ್ಯೆ 52ರ ಸಂಪರ್ಕಿತ 35 ವರ್ಷದ ಹಾಗೂ 41 ವರ್ಷದ ವ್ಯಕ್ತಿಗಳಲ್ಲಿ ಕೋವಿಡ್‌-19 ಕಂಡುಬಂದಿದೆ. ಇದರ ಜೊತೆ ದುಬೈನಿಂದ ಬಂದಿದ್ದ 34 ವರ್ಷದ ವ್ಯಕ್ತಿಗೆ ದಕ್ಷಿಣ ಕನ್ನಡದಲ್ಲಿ ಸೋಂಕು ಕಂಡಿದ್ದು, ಉತ್ತರ ಕನ್ನಡದ ಭಟ್ಕಳದಲ್ಲಿ ದುಬೈನಿಂದ ಬಂದ 26 ವರ್ಷದ ಯುವಕನಲ್ಲಿ ಕೊರೊನಾ ಇರುವುದು ಖಚಿತವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 98ಕ್ಕೆ ಏರಿದ್ದು, ಮೂವರು ಮೃತಪಟ್ಟಿದ್ದಾರೆ. ಇನ್ನು ದೇಶಾದ್ಯಂತ ಸೋಂಕಿತರ ಸಂಖ್ಯೆ 1251ಕ್ಕೆ ಏರಿದ್ದು, 32 ಜನ ಸಾವನ್ನಪ್ಪಿದ್ದಾರೆ.


from India & World News in Kannada | VK Polls https://ift.tt/2UtoHZg

ಎಲ್ಲರಿಗೂ ಮಾಸ್ಕ್‌ ಬೇಕಾಗಿಲ್ಲ, ಕೊರೊನಾ ಲಕ್ಷಣವಿದ್ದವರೂ ಧರಿಸಿದರೆ ಸಾಕು: ಆರೋಗ್ಯ ಇಲಾಖೆ

ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆ ರಾಜ್ಯದ ಕೆಲವು ಸೂಪರ್‌ ಮಾರ್ಕೆಟ್‌ಗಳಲ್ಲಿ, ದಿನಸಿ ಅಂಗಡಿಗಳಲ್ಲಿ ಧರಿಸದ ವ್ಯಕ್ತಿಗಳಿಗೆ ಪ್ರವೇಶ ನಿರಾಕರಿಸುತ್ತಿರುವುದು ಕಂಡುಬಂದ ಹಿನ್ನೆಲೆ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದ್ದು, ಎಲ್ಲರೂ ಮಾಸ್ಕ್‌ ಧರಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ. ಈ ಬಗ್ಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿರುವ ಆರೋಗ್ಯ ಇಲಾಖೆಯ ಆಯುಕ್ತರು, ಎಲ್ಲರೂ ಮಾಸ್ಕ್‌ ಧರಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಈ ಮೊದಲು ರಾಜ್ಯ ಸರಕಾರ ಹಲವು ಸುತ್ತೋಲೆಗಳ ಮೂಲಕ ಯಾರೂ ಮಾಸ್ಕ್‌ ಧರಿಸಬೇಕು, ಯಾರಿಗೆ ಅಗತ್ಯವಿಲ್ಲ ಎಂಬ ಮಾಹಿತಿಯನ್ನು ಜನರಿಗೆ ನೀಡಿದ್ದಾರೆ ಎಂದು ತಿಳಿಸಲಾಗಿದೆ. ಶೀತ, ಕೆಮ್ಮು, ಜ್ವರದಂತಹ ಲಕ್ಷಣಗಳು ಕಂಡುಬಂದರೆ ಮಾಸ್ಕ್‌ ಧರಿಸುವ ಅಗತ್ಯವಿದೆ. ಶಂಕಿತ ಕೊರೊನಾ ರೋಗಿ ಅಥವಾ ದೃಢಪಟ್ಟ ಕೊರೊನಾ ರೋಗಿ ಮಾಸ್ಕ್‌ ಧರಿಸಬೇಕು. ಹಾಗೂ ಇಂತಹ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗೆ ಮಾಸ್ಕ್‌ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇನ್ನು, ಯಾವ ರೀತಿ ಮಾಸ್ಕ್‌ ಉಪಯೋಗಿಸಬೇಕು ಎಂದು ಹೇಳಿರುವ ಆರೋಗ್ಯ ಇಲಾಖೆ, ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿ ಎನ್‌95 ಮಾಸ್ಕ್‌ ಧರಿಸಬೇಕು. ಇತರರು ಟ್ರಿಪಲ್‌ ಲೇಯರ್‌ ಸರ್ಜಿಕಲ್‌ ಮಾಸ್ಕ್‌ ಧರಿಸಿದರೆ ಸಾಕು ಎಂದು ಆಯುಕ್ತರು ತಿಳಿಸಿದ್ದಾರೆ. ಇದುವರೆಗೂ ರಾಜ್ಯದಲ್ಲಿ 98 ಕೊರೊನಾ ಸೋಂಕಿತ ಪ್ರಕರಣಗಳು ಕಂಡುಬಂದಿದ್ದು, ಮೂವರು ಮೃತಪಟ್ಟಿದ್ದಾರೆ. ಮಂಗಳವಾರ 10 ಹೊಸ ಕೋವಿಡ್-‌19 ಕೇಸ್‌ಗಳು ಕಂಡುಬಂದಿದ್ದು, ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಈ ಭೀತಿಯ ಹಿನ್ನೆಲೆ ಹಲವು ಅಂಗಡಿಗಳಲ್ಲಿ ಮಾಸ್ಕ್‌ ಧರಿಸದವರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಈಗ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದ್ದು, ಎಲ್ಲರೂ ಮಾಸ್ಕ್‌ ಧರಿಸುವ ಅಗತ್ಯವಿಲ್ಲ ಎಂದು ಹೇಳಿದೆ.


from India & World News in Kannada | VK Polls https://ift.tt/2UyLB1r

ಮೈಸೂರಿನಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ವೈರಸ್ ಸೋಂಕು: ಜಿಲ್ಲೆಯಲ್ಲಿ 14ಕ್ಕೇರಿದ ಪೀಡಿತರ ಸಂಖ್ಯೆ

ಮೈಸೂರು: ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಪಾಸಿಟಿವ್‌ ಪ್ರಕರಣ ಹೆಚ್ಚಾಗುತ್ತಾ ಸಾಗುತ್ತಿದೆ. ಮಂಗಳವಾರ ಬೆಳಗ್ಗೆ ಮತ್ತಿಬ್ಬರಲ್ಲಿ ಕೊರೊನಾ ಪತ್ತೆಯಾಗಿರೋದು ದೃಢಪಟ್ಟಿದೆ. ಜಿಲ್ಲೆ ನಂಜನಗೂಡಿನಲ್ಲಿ ನಿಯಂತ್ರಣಕ್ಕೇ ಸಿಗದಂತೆ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಜನರು ಆತಂಕಕ್ಕೊಳಗಾಗಿದ್ದಾರೆ. ಇದೀಗ ಮತ್ತಿಬ್ಬರಿಗೆ ಕೊರೊನಾ ಸಾಬೀತಾಗಿದ್ದು, ಈವರೆಗಿನ ಕೊರೊನಾ ಪೀಡಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಇದೀಗ ಸೋಂಕು ದೃಢಪಟ್ಟಿರುವ ಇವರಿಬ್ಬರೂ ಕೂಡಾ ಜ್ಯುಬಿಲಿಯೆಂಟ್ ಕಾರ್ಖಾನೆಯ ನೌಕರರೇ ಆಗಿದ್ದು, ಸೋಂಕಿತ 52 ನೇ ವ್ಯಕ್ತಿಯಿಂದ ಕೊರೊನಾ ಹರಡಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಇನ್ನು ನಂಜನಗೂಡಿನಲ್ಲಿರುವ ಜ್ಯುಬಿಲಿಯೆಂಟ್ ಕಾರ್ಖಾನೆಯೊಂದರಲ್ಲೇ ಒಬ್ಬ ವ್ಯಕ್ತಿಯಿಂದ ಬರೋಬ್ಬರಿ 12 ಜನರಿಗೆ ಸೋಂಕು ಹರಡಿದೆ. ಪಿ-95 ಎಂದು ಹೆಸರಿಸಲಾಗಿರುವ 35 ವರ್ಷದ ವ್ಯಕ್ತಿ ಹಾಗೂ ಪಿ-96 ಎಂದು ಗುರ್ತಿಸಲಾಗಿರುವ 41 ವರ್ಷದ ವ್ಯಕ್ತಿಗೆ ಸೋಂಕು ದೃಢವಾಗಿದೆ. ಇವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಂಜನಗೂಡಿನಲ್ಲಿ ಕೋವಿಡ್–19 ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆಯೇ, ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ತಮ್ಮೂರುಗಳಿಗೆ ದಿಗ್ಬಂಧನ ಹಾಕಿಕೊಳ್ಳುವುದು ಹೆಚ್ಚಿದೆ. ಸ್ಥಳೀಯ ನಿಯಮಾವಳಿ ಉಲ್ಲಂಘಿಸಿದವರಿಗೆ ದಂಡ ವಿಧಿಸುವುದಾಗಿಯೂ ಘೋಷಿಸಿರುವುದು ತಿಳಿದು ಬಂದಿದೆ.



from India & World News in Kannada | VK Polls https://ift.tt/2JtUfaU

FAKE ALERT: ಕೋವಿಡ್‌ - 19: ಸ್ಟೇಜ್‌ - 3ಗೆ ಪ್ರವೇಶವಾಗಿದ್ಯಾ ಭಾರತ? ಸುದ್ದಿಯ ಅಸಲಿಯತ್ತೇನು?

ಹಕ್ಕು: ಭಾರತವು ಈಗ ಕೋವಿಡ್ -19 ಪ್ರಸರಣದ 3 ನೇ ಹಂತದಲ್ಲಿದೆ ಎಂಬ ಹೇಳಿಕೆಯೊಂದಿಗೆ ಪ್ರಮುಖ ಡಿಜಿಟಲ್ ನ್ಯೂಸ್ ವೆಬ್‌ಸೈಟ್ ಸುದ್ದಿ ವರದಿಯನ್ನು ಪ್ರಕಟಿಸಿದೆ. ವಿದೇಶ ಪ್ರಯಾಣ ಇತಿಹಾಸವಿಲ್ಲದ ವ್ಯಕ್ತಿಯು ದೇಶೀಯ ಮೂಲಗಳ ಮೂಲಕ ಕೊರೊನಾ ವೈರಾಣು ಸೋಂಕನ್ನು ಪಡೆದುಕೊಂಡಾಗ ಹಂತ -3 ಅಂದರೆ 'ಸಮುದಾಯ ಪ್ರಸರಣ' ಎಂದು ಕರೆಯಲಾಗುತ್ತದೆ. ನೀತಿ ಆಯೋಗದ ಸಹಾಯದಿಂದ ಕೋವಿಡ್ -19 ಆಸ್ಪತ್ರೆಯ ಕಾರ್ಯಪಡೆಯ ಭಾಗವಾಗಿರುವ ವೈದ್ಯ ಡಾ. ಗಿರಿಧರ್‌ ಗ್ಯಾನಿ ಎಂಬ ವ್ಯಕ್ತಿಯನ್ನು ಉಲ್ಲೇಖಿಸಿ ವೆಬ್‌ಸೈಟ್ ಈ ವರದಿಯನ್ನು ನೀಡಿದೆ. ಭಾರತದಲ್ಲಿ ಸಮುದಾಯ ಪ್ರಸರಣ ಆರಂಭವಾಗಿದೆ. ಆದರೆ ಕೇಂದ್ರ ಸರಕಾರ ಈ ಹೇಳಿಕೆಯನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ವೈದ್ಯ ಗ್ಯಾನಿ ಹೇಳಿದ್ದಾರೆ ಎಂದು ವೆಬ್‌ಸೈಟ್‌ ವರದಿ ಮಾಡಿದೆ. ಈ ವರದಿಯ ಸ್ಕ್ರೀನ್‌ಶಾಟ್‌ ಇಲ್ಲಿದೆ.. ಸತ್ಯ ಸುದ್ದಿಯ ಶೀರ್ಷಿಕೆ ಹಾದಿ ತಪ್ಪಿಸುವಂತಿದೆ ಎಂದು ಸ್ವತ: ವೈದ್ಯ ಗ್ಯಾನಿ ಸ್ಪಷ್ಟಪಡಿಸಿದ್ದಾರೆ. ಆ ವೆಬ್‌ಸೈಟ್‌ ಅವರನ್ನು ಸಂದರ್ಶನ ಮಾಡಿದ ದಿನ, ಸರಕಾರದ ಮಾಹಿತಿಯ ಪ್ರಕಾರ ಕೊರೊನಾ ವೈರಸ್‌ ಸೋಂಕಿನಲ್ಲಿ ಸ್ಟೇಜ್‌ - 3 ಗೆ ಎಂಟ್ರಿ ಆಗಿಲ್ಲ ಎಂದು ಅವರು ತಿಳಿಸಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐಯ ಆರೋಗ್ಯ ವರದಿಗಾರ ಪ್ರಿಯಾಂಕಾ ಶರ್ಮಾ ಅವರಿಗೆ ನೀಡಿದ ಸಂದರ್ಶನದಲ್ಲಿ, ಡಾ. ಗ್ಯಾನಿ, "ಅದೃಷ್ಟವಶಾತ್ ಇಂದಿನವರೆಗೂ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವು ಕೇವಲ ಅಂಕಗಣಿತವಾಗಿದೆ, ಆದರೆ ಸಮುದಾಯ ಹರಡುವಿಕೆಯಲ್ಲಿ ಇದು ಸ್ಫೋಟಕವಾಗಿ ಹೆಚ್ಚಳವಾಗುತ್ತದೆ" ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಡಾ. ಗ್ಯಾನಿ ವೈದ್ಯರಾಗಲೀ ಅಥವಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞರಲ್ಲ. ಅವರು ಎಲೆಕ್ಟ್ರಿಕಲ್ ಎಂಜಿನಿಯರ್ ಪದವೀಧರರಾಗಿದ್ದು, ಬಳಿಕ ಗುಣಮಟ್ಟ ನಿರ್ವಹಣೆಯಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಪ್ರಸ್ತುತ ಅವರು ಅಸೋಸಿಯೇಷನ್ ಆಫ್ ಹೆಲ್ತ್‌ಕೇರ್ ಪ್ರೊವೈಡರ್ಸ್ (ಭಾರತ) ದಲ್ಲಿ ಡೈರೆಕ್ಟರ್ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಸ್ಕ್ರೀನ್‌ಶಾಟ್ ಇಲ್ಲಿದೆ.. ನಂತರ ಎಎಚ್‌ಪಿಐ ತನ್ನ ಟ್ವಿಟ್ಟರ್‌ನಲ್ಲಿ ಈ ವರದಿ ಹಾದಿತಪ್ಪಿಸುವಂತಿದೆ ಎಂದು ಹೇಳಿದೆ. ಮಾರ್ಚ್ 27, 2020 ರ ಸಂದರ್ಶನವೊಂದರಲ್ಲಿ ಡಾ. ಗ್ಯಾನಿ, ಭಾರತವು ಪ್ರಸ್ತುತ ಹಂತ -3 ರ ಪ್ರಸರಣದಲ್ಲಿಲ್ಲ ಎಂಬ ಅರಿವು ಇದ್ದರೂ, ನಾವು ಹಂತ - 3 ರಲ್ಲಿರುವವರಂತೆ ಸಿದ್ಧತೆ ನಡೆಸಿದರೆ ಉತ್ತಮ ಎಂದು ವೆಬ್‌ಸೈಟ್‌ಗೆ ತಿಳಿಸಿದ್ದಾಗಿ ಹೇಳಿದರು. ಅಲ್ಲದೆ, ನೀತಿ ಆಯೋಗದ ಅಡಿಯಲ್ಲಿ ಸ್ಥಾಪಿಸಲಾದ ಕೋವಿಡ್ -19 ಗಾಗಿ ಸಾರ್ವಜನಿಕ ಆರೋಗ್ಯ ತಜ್ಞರ ಅಧಿಕೃತ ಉನ್ನತ ಮಟ್ಟದ ತಾಂತ್ರಿಕ ಸಮಿತಿಯ ಸಮಿತಿಯಲ್ಲಿ ಗ್ಯಾನಿ ಇಲ್ಲ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಹಾನಿರ್ದೇಶಕ ಪ್ರೊಫೆಸರ್ ಬಲರಾಮ್ ಭಾರ್ಗವ ಅವರ ಪತ್ರದ ಪ್ರತಿ ಇಲ್ಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿಯನ್ನು ಉದ್ದೇಶಿಸಿ ಬರೆದ ಈ ಪತ್ರದಲ್ಲಿ ನೀತಿ ಆಯೋಗದ ಡಾ.ವಿನೋದ್ ಪಾಲ್ ಅವರ ಅಧ್ಯಕ್ಷತೆಯಲ್ಲಿ 21 ಸಾರ್ವಜನಿಕ ಆರೋಗ್ಯ ತಜ್ಞರ ಹೆಸರನ್ನು ಹೊಂದಿದೆ. ಇದರಲ್ಲಿ ಡಾ. ಗ್ಯಾನಿ ಹೆಸರಿಲ್ಲ. ಇನ್ನು, ಪ್ರೆಸ್ ಇನ್‌ಫಾರ್ಮೇಶನ್‌ ಬ್ಯೂರೋದ ಫ್ಯಾಕ್ಟ್ ಚೆಕ್ ವಿಭಾಗ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಎಎಚ್‌ಪಿಐ ಅವರ ಟ್ವೀಟ್ ಅನ್ನು ಉಲ್ಲೇಖಿಸಿದ್ದು, ವರದಿ ದಾರಿ ತಪ್ಪಿಸುವಂತಿದೆ ಎಂದು ಟ್ವೀಟ್‌ ಮಾಡಿದೆ. ಜತೆಗೆ, ಡಾ. ಗ್ಯಾನಿ ಹೆಸರಿನಲ್ಲಿ ತಪ್ಪುದಾರಿಗೆಳೆಯುವ ಮಾಹಿತಿಯನ್ನು ಪ್ರಕಟಿಸಲು ಎಎಚ್‌ಪಿಐ ವೆಬ್‌ಸೈಟ್‌ಗೆ ಕರೆ ಮಾಡಿದ ನಂತರ, ವೆಬ್‌ಸೈಟ್ ತನ್ನ ಶೀರ್ಷಿಕೆಯನ್ನು "India May be in Stage 3: COVID-19 Hospital Task Force Convener" ಎಂದು ಬದಲಾಯಿಸಿತು. ತೀರ್ಮಾನ ಭಾರತವು ಕೋವಿಡ್ -19 ಪ್ರಸರಣದ 3 ನೇ ಹಂತದಲ್ಲಿದೆ ಎಂದು ತಪ್ಪುದಾರಿಗೆಳೆಯುವ ಲೇಖನವನ್ನು ಪ್ರಮುಖ ಡಿಜಿಟಲ್ ಪೋರ್ಟಲ್ ಪ್ರಕಟಿಸಿದೆ ಎಂದು ಟೈಮ್ಸ್ ಫ್ಯಾಕ್ಟ್ ಚೆಕ್ ಕಂಡುಕೊಂಡಿದೆ.


from India & World News in Kannada | VK Polls https://ift.tt/2UTkay2

ಜಮಾತ್‌ ಧಾರ್ಮಿಕ ಸಭೆಯಲ್ಲಿ ರಾಜ್ಯದ 45 ಜನ ಭಾಗಿ, ಕೊರೊನಾ ದಲ್ಲಾಳಿಯಾಯ್ತಾ ದಿಲ್ಲಿಯ ಮಸೀದಿ..?

ಬೆಂಗಳೂರು: ದೇಶದಲ್ಲಿ ಕೊರೊನಾ ವೈರಸ್‌ನಿಂದ ಸಂಭವಿಸಿದ 9 ಸಾವುಗಳಿಗೆ ಹಾಗೂ 300 ಶಂಕಿತ ಕೊರೊನಾ ಪ್ರಕರಣಗಳಿಗೆ ನೇರ ಸಂಪರ್ಕ ಹೊಂದಿರುವ ದಿಲ್ಲಿಯ ನಿಜಾಮುದ್ದಿನ್‌ ವೆಸ್ಟ್‌ನಲ್ಲಿರುವ ತಬ್ಲಿಘಿ ಜಮಾತ್‌ ಧಾರ್ಮಿಕ ಸಭೆಗೆ ಕರ್ನಾಟಕದಿಂದ 45 ಜನ ಭಾಗವಹಿಸಿದ್ದರು ಎಂಬ ಮಾಹಿತಿ ತಿಳಿದಿದ್ದು, ರಾಜ್ಯದಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಈ ಬಗ್ಗೆ ಆರೋಗ್ಯ ಸಚಿವ ಸರಣಿ ಟ್ವೀಟ್‌ ಮಾಡಿದ್ದು, ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ಮಾರ್ಚ್ 10 ರಂದು ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಅದರಲ್ಲಿ ಕರ್ನಾಟಕದಿಂದ ಸುಮಾರು 45 ಮಂದಿ ಭಾಗವಹಿಸಿದ್ದರು ಎಂಬ ಮಾಹಿತಿಯಿದೆ. ಶಿರಾದಲ್ಲಿ ಮೃತಪಟ್ಟ ವ್ಯಕ್ತಿಯು ಇವರಲ್ಲೊಬ್ಬರಾಗಿದ್ದಾರೆ ಎಂದು ಹೇಳಿದ್ದಾರೆ. ಆದ್ದರಿಂದ ಪ್ರಾರ್ಥನೆಯಲ್ಲಿ ಭಾಗವಹಿಸಿದವರಿಗೆಲ್ಲಾ ಸೋಂಕು ಹರಡಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಹಾಗಾಗಿ ಅವರನ್ನು ಪತ್ತೆ ಮಾಡಿ, ಕ್ವಾರಂಟೈನ್‌ನಲ್ಲಿಡುವ ಕಾರ್ಯದಲ್ಲಿ ರಾಜ್ಯ ಸರಕಾರ ಕಾರ್ಯಪ್ರವೃತ್ತವಾಗಿದೆ. 45 ಜನರಲ್ಲಿ ಈಗಾಗಲೇ 13 ವ್ಯಕ್ತಿಗಳನ್ನು ಪತ್ತೆಹಚ್ಚಿ ಕ್ವಾರಂಟೈನ್‌ ಕೇಂದ್ರದಲ್ಲಿ ಇಡಲಾಗಿದೆ ಎಂದಿದ್ದಾರೆ. ತಬ್ಲಿಘಿ ಜಮಾತ್‌ ಧಾರ್ಮಿಕ ಸಭೆಗೆ ಆಸ್ಟ್ರೇಲಿಯಾ, ಸಿಂಗಾಪೂರ್, ದುಬೈ, ಸೌದಿ ಅರೇಬಿಯಾ, ಇಂಡೋನೇಷಿಯಾ ಸೇರಿ ಹಲವು ದೇಶಗಳಿಂದ ಪ್ರವಾಸಿಗರು ಆಗಮಿಸಿದ್ದರು ಎಂಬ ಮಾಹಿತಿ ದೊರೆತಿದೆ. ಉಳಿದ ವ್ಯಕ್ತಿಗಳನ್ನು ಶೀಘ್ರದಲ್ಲಿ ಗುರುತಿಸಿ ಕ್ವಾರಂಟೈನ್‌ನಲ್ಲಿಡಲು ಎಲ್ಲ ಕ್ರಮಗಳನ್ನು ಆರೋಗ್ಯ ಇಲಾಖೆ ತೆಗೆದುಕೊಂಡಿದೆ ಎಂದು ಸಚಿವ ಬಿ.ಶ್ರೀರಾಮುಲು ಟ್ವೀಟ್‌ ಮಾಡಿದ್ದಾರೆ.

ಇನ್ನು, ಮಾರ್ಚ್‌ 10ರಂದು ದಿಲ್ಲಿಯ ನಿಜಾಮುದ್ದೀನ್‌ ವೆಸ್ಟ್‌ನಲ್ಲಿರುವ ತಬ್ಲಿಘಿ ಜಮಾತ್‌ ಧಾರ್ಮಿಕ ಸಭೆಯಲ್ಲಿ ವಿದೇಶಿಗರು ಸೇರಿ ರಾಷ್ಟ್ರಾದ್ಯಂತ ಹಲವು ಮಂದಿ ಭಾಗವಹಿಸಿದ್ದರು. ಜಮಾತ್‌ ಸಭೆಯಲ್ಲಿ ಭಾಗವಹಿಸಿದ್ದ 9 ಮಂದಿ ಭಾರತೀಯರು ಈಗಾಗಲೇ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ತುಮಕೂರಿನ ವ್ಯಕ್ತಿ ಸೇರಿ, ತೆಲಂಗಾಣದ 6, ತಮಿಳುನಾಡು ಮತ್ತು ಜಮ್ಮು ಕಾಶ್ಮೀರದಿಂದ ತಲಾ ಒಬ್ಬರು ಕೋವಿಡ್‌-19 ಸೋಂಕಿನಿಂದ ಸಾವನ್ನಪ್ಪಿದ್ದಾರೆ. ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮತ್ತೊರ್ವ ವಿದೇಶಿಗ, ಫಿಲಿಪೈನ್ಸ್‌ನ ನಾಗರಿಕ ಕೋವಿಡ್‌-19 ಸೋಂಕಿನಿಂದ ಮೃತಪಟ್ಟಿದ್ದಾನೆ. ಒಟ್ಟಾರೆ ಜಮಾತ್‌ ಇಸ್ಲಾಮಿಕ್‌ ಮಿಷನರಿಯ ಹಿಂಬಾಲಕರ ಪೈಕಿ 19 ವಿದೇಶಿಗರಿಗೆ ಕೊರೊನಾ ಸೋಂಕು ಇರುವುದು ದೃಢ ಪಟ್ಟಿದೆ. ಇದುರೆಗೂ ರಾಜ್ಯದಲ್ಲಿ 91 ಕೊರೊನಾ ಸೋಂಕಿತರು ಕಂಡುಬಂದಿದ್ದು, ಮೂವರು ಸಾವನ್ನಪ್ಪಿದ್ದಾರೆ.


from India & World News in Kannada | VK Polls https://ift.tt/2UwijAm

ತಲೆ ಬೋಳಿಸಿದ ಡೇವಿಡ್ ವಾರ್ನರ್; ವಿರಾಟ್ ಕೊಹ್ಲಿಗೂ ಚಾಲೆಂಜ್!

ಹೊಸದಿಲ್ಲಿ: ಸೋಂಕಿನ ವಿರುದ್ಧ ಇಡೀ ವಿಶ್ವವೇ ಸಮರೋಪಾದಿಯಲ್ಲಿ ಹೋರಾಟ ನಡೆಸುತ್ತಿದೆ. ಈ ನಡುವೆ ಕೋವಿಡ್ 19 ವಿರುದ್ಧ ವೈದ್ಯಕೀಯ ಇಲಾಖೆ ಸೇರಿದಂತೆ ಮುಂಚೂಣಿಯಲ್ಲಿ ಹೋರಾಡುತ್ತಿರುವವರಿಗಾಗಿ ಬೆಂಬಲ ಸೂಚಿಸಿರುವ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ , ತಲೆ ಬೋಳಿಸಿದ್ದಾರೆ. ಅಷ್ಟೇ ಯಾಕೆ ತಮ್ಮ ಸಹ ಆಟಗಾರ ಸ್ಟೀವ್ ಸ್ಮಿತ್ ಸೇರಿದಂತೆ ಭಾರತೀಯ ಕ್ರಿಕೆಟ್ ತಂಡದ ನಾಯಕ ಅವರಿಗೂ ಈ ಸವಾಲು ಸ್ವೀಕರಿಸುವಂತೆಯೇ ಚಾಲೆಂಜ್ ಹಾಕಿದ್ದಾರೆ. ಆಸೀಸ್ ಎಡಗೈ ಆಕ್ರಮಣಕಾರಿ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಬರೆದುಕೊಂಡಿದ್ದಾರೆ. 'ಕೋವಿಡ್ 19 ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವವರ ಬೆಂಬಲಕ್ಕಾಗಿ ನನ್ನ ತಲೆ ಬೋಳಿಸಲು ನಾಮ ನಿರ್ದೇಶನ ಮಾಡಲಾಗಿದೆ. ನನಗನಿಸುತ್ತದೆ ಕೊನೆಯ ಬಾರಿ ಡೆಬ್ಯು ಪಂದ್ಯದ ವೇಳೆ ತಲೆ ಬೋಳಿಸಿಕೊಂಡಿದ್ದೆ, ನಿಮಗೆ ಇಷ್ಟವಾಯಿತೇ ಇಲ್ಲವೇ?' ಎಂದು ಅಭಿಮಾನಿಗಳನ್ನು ಕೇಳಿದ್ದಾರೆ. ಈ ಸಂಬಂಧ ತಲೆ ಬೋಳಿಸುವ ವಿಡಿಯೋವನ್ನು ಹಂಚಿರುವ ಡೇವಿಡ್ ವಾರ್ನರ್, 'ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ, ಪ್ಯಾಟ್ ಕಮಿನ್ಸ್, ಜೋ ಬರ್ನ್ಸ್, ಆ್ಯಡಂ ಜಾಂಪಾ, ಮಾರ್ಕಸ್ ಸ್ಟೋಯ್ನಿಸ್ ಮತ್ತು ಪಿಯರ್ಸ್ ಮಾರ್ಗನ್ ಹೆಸರುಗಳನ್ನು ನಾಮ ನಿರ್ದೇಶನ ಮಾಡಿದ್ದು, ಕೊರೊನಾ ವೈರಸ್ ವಿರುದ್ಧದ ಹೋರಾಟಗಾರರಿಗೆ ಬೆಂಬಲ ಸೂಚಿಸುವ ಸಲುವಾಗಿ ತಲೆ ಬೋಳಿಸುವಂತೆ' ಸವಾಲು ಹಾಕಿದ್ದಾರೆ. ಪ್ರಸ್ತುತ ಡೇವಿಡ್ ವಾರ್ನರ್ ಚಾಲೆಂಜ್ ಅನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ವೀಕರಿಸುತ್ತಾರೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಕ್ವಾರಂಟೈನ್ ಸಮಯವನ್ನು ಮನೆಯಲ್ಲೇ ಕಳೆಯುತ್ತಿರುವ ವಿರಾಟ್ ಕೊಹ್ಲಿಗೆ, ಅಡುಗೆ ಕೋಣೆಯ ಕತ್ತರಿಯನ್ನು ಬಳಕೆ ಮಾಡಿ ಪತ್ನಿ ಅನುಷ್ಕಾ ಶರ್ಮಾ ಹೇರ್ ಕಟ್ಟಿಂಗ್ ಮಾಡಿಸಿರುವುದು ಹೆಚ್ಚಿನ ಗಮನ ಸೆಳೆದಿತ್ತು. ಕೋವಿಡ್ 19 ಪರಿಹಾರ ನಿಧಿಗೆ ತಮ್ಮ ಸಹಾಯ ಹಸ್ತವನ್ನು ಚಾಚಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ದೇಣಿಗೆಯನ್ನು ಘೋಷಿಸಿದ್ದರು. ಆದರೆ ಎಷ್ಟು ಮೊತ್ತ ದೇಣಿಗೆಯಾಗಿ ನೀಡದ್ದಾರೆ ಎಂಬ ವಿಚಾರವನ್ನು ಗೌಪ್ಯವಾಗಿಟ್ಟುಕೊಂಡಿದ್ದರು. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ನಿರಂತರ ವಿಡಿಯೋ ಸಂದೇಶದ ಮೂಲಕ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮನೆಯಲ್ಲೇ ಉಳಿದುಕೊಳ್ಳುವಂತೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/33WUGUJ

ವಾರೆ ವ್ಹಾ..! ಕೋವಿಡ್ 19 ಪರಿಹಾರ ನಿಧಿಗೆ 80 ಲಕ್ಷ ರೂ. ದೇಣಿಗೆ ಘೋಷಿಸಿದ ಹಿಟ್‌ಮ್ಯಾನ್!

ಮುಂಬಯಿ: ವಿರುದ್ಧದ ಹೋರಾಟಕ್ಕೆ ಕೈಜೋಡಿಸಿಕೊಂಡಿರುವ ಹಿಟ್‌ಮ್ಯಾನ್ ಖ್ಯಾತಿಯ ಭಾರತೀಯ ಕ್ರಿಕೆಟ್ ತಂಡದ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಹಾಗೂ ಸೀಮಿತ ಓವರ್‌ಗಳ ತಂಡದ ಉಪನಾಯಕ , ಬರೋಬ್ಬರಿ 80 ಲಕ್ಷ ರೂಪಾಯಿಗಳ ದೇಣಿಗೆಯನ್ನು ಘೋಷಿಸಿದ್ದಾರೆ. ಈ ಬಗ್ಗೆ ರೋಹಿತ್ ಶರ್ಮಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 'ನಮ್ಮ ದೇಶವು ಹಳೆಯ ಸ್ಥಿತಿಗೆ ಮರಳಬೇಕು. ಇದರ ಜವಾಬ್ದಾರಿ ನಮ್ಮ ಮೇಲಿದೆ. ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿಗೆ (ಪಿಎಂ-ಕೇರ್ಸ್ ನಿಧಿ) 45 ಲಕ್ಷ ರೂ., ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂ., ಝೊಮಾಟೊ ಫೀಡಿಂಗ್ ಇಂಡಿಯಾಗೆ 5 ಲಕ್ಷ ರೂ. ಮತ್ತು ಬೀದಿ ನಾಯಿಗಳ ಕಲ್ಯಾಣಕ್ಕಾಗಿ 5 ಲಕ್ಷ ರೂ.ಗಳ ದೇಣಿಗೆಯನ್ನು ನೀಡುವ ಮೂಲಕ ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಮ್ಮ ನಾಯಕರನ್ನು ಬೆಂಬಲಿಸೋಣ' ಎಂಬ ಸಂದೇಶ ನೀಡಿದ್ದಾರೆ. ಕಳೆದ ದಿನವಷ್ಟೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಕೋವಿಡ್ 19 ಪರಿಹಾರ ನಿಧಿಗೆ ಧನ ಸಹಾಯವನ್ನು ಘೋಷಣೆ ಮಾಡಿದ್ದರು. ಆದರೆ ಎಷ್ಟು ಮೊತ್ತ ದೇಣಿಗೆ ನೀಡಿದ್ದಾರೆ ಎಂಬುದನ್ನು ಗೌಪ್ಯವಾಗಿಟ್ಟುಕೊಂಡಿದ್ದರು. ಈ ಮೊದಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) 51 ಕೋಟಿ ರೂ.ಗಳ ನೆರವನ್ನು ಘೋಷಿಸಿತ್ತು. ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 50 ಲಕ್ಷ ರೂ., ಕ್ರಿಕೆಟಿಗ ಸುರೇಶ್ ರೈನಾ 52 ಲಕ್ಷ ರೂ.ಗಳ ನೆರವಿನ ಹಸ್ತವನ್ನು ಚಾಚಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡಾ 50 ಲಕ್ಷ ರೂ.ಗಳ ಉಚಿತ ಅಕ್ಕಿಯನ್ನು ವಿತರಿಸುವುದಾಗಿ ಭರವಸೆ ನೀಡಿದ್ದರು. ಅಂದ ಹಾಗೆ ಭಾರತದಲ್ಲಿ ಇದುವರೆಗೆ 1251 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ಪೈಕಿ 32 ಮಂದಿ ಸಾವಿಗೆ ಶರಣಾಗಿದ್ದಾರೆ. ಅಲ್ಲದೆ ಕೋವಿಡ್ 19 ಸೋಂಕು ಸರಪಳಿಯನ್ನು ಮುರಿಯುವ ನಿಟ್ಟಿನಲ್ಲಿ ಏಪ್ರಿಲ್ 14ರ ವರೆಗೆ ದೇಶದ್ಯಾಂತ 21 ದಿನಗಳ ಲಾಕ್‌ಡೌನ್ ಘೋಷಿಸಲಾಗಿದೆ. ಈ ವೇಳೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜನರಲ್ಲಿ ಮನೆಯಲ್ಲೇ ಇರುವಂತೆ ಆದೇಶಿಸಲಾಗಿದೆ. ಅತ್ತ ಕ್ರಿಕೆಟಿಗರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮುಂತಾದವರು ನಿರಂತರ ವಿಡಿಯೋ ಸಂದೇಶದ ಮೂಲಕ ಅಭಿಮಾನಿಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಕೋವಿಡ್ 19 ಪರಿಹಾರ ನಿಧಿಗೆ 80 ಲಕ್ಷ ರೂ. ಘೋಷಣೆ ಮಾಡುವ ಮೂಲಕ ರೋಹಿತ್ ಶರ್ಮಾ ಗಮನ ಸೆಳೆದಿದ್ದಾರೆ. ಕೋವಿಡ್ 19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯನ್ನು ಏಪ್ರಿಲ್ 14ರ ವರೆಗೆ ಅಮಾನತಿನಲ್ಲಿಡಲಾಗಿದೆ. ಅಲ್ಲದೆ ಈ ಬಾರಿ ಐಪಿಎಲ್ ನಡೆಯುವುದೇ ಅನುಮಾನವೆನಿಸಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/33XDUEP

ಕೊರೊನಾ ಭೀತಿ: ಮಸೀದಿಗಳನ್ನು ಮುಚ್ಚಲು ಫತ್ವಾ ನೀಡಿ, ಚಿಂತಕ ತಾಹೀರ್ ಮೆಹಮೂದ್ ಸಲಹೆ

ಹೊಸದಿಲ್ಲಿ: ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ದೇಶದಲ್ಲಿರುವ ಎಲ್ಲಾ ಮಸೀದಿಗಳನ್ನು ಮುಚ್ಚಲು ನೀಡುವಂತೆ ದಾರುಲ್‌ ಉಲುಂ ದೇವ್‌ಬಂದ್ ಸಂಘಟನೆಗೆ ಚಿಂತಕರು ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ತಾಹೀರ್‌ ಮೆಹಮೂದ್‌ ಸಾಹೇಬ್ ಆಗ್ರಹಿಸಿದ್ದಾರೆ. ದೇಶದಲ್ಲಿ ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ 21 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿದೆ. ಜನರು ರಸ್ತೆಗಿಳಿಯದಂತೆಯೂ ಸರ್ಕಾರ ಸೂಚನೆ ನೀಡಿದೆ. ಹೀಗಿದ್ದರೂ ಕೆಲವು ಮಸೀದಿಗಳಲ್ಲಿ ಜನರು ಸಾಮೂಹಿಕ ನಮಾಝ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ದಾರುಲ್‌ ಉಲುಂ ಸಂಘಟನೆ ದೇಶದ ಎಲ್ಲ ಮಸೀದಿಗಳನ್ನು ಮುಚ್ಚುವಂತೆ ಫತ್ವಾ ನೀಡಬೇಕು ಎಂದು ತಾಹೀರ್ ಮೆಹಮೂದ್ ಒತ್ತಾಯಿಸಿದ್ದಾರೆ. ಕೊರೊನಾ ಕಾರಣದಿಂದಾಗಿ ಮುಸ್ಲಿಂ ದೇಶಗಳಲ್ಲೂ ಮಸೀದಿಗಳನ್ನು ಮುಚ್ಚಲಾಗಿದೆ. ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾಗೂ ಯಾರಿಗೂ ಪ್ರವೇಶ ಮಾಡಲು ಅವಕಾಶ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಭಾರತದಲ್ಲಿರುವ ಎಲ್ಲಾ ಮಸೀದಿಗಳನ್ನು ಕೊರೊನಾ ನಿಯಂತ್ರಣಕ್ಕೆ ಬರುವ ತನಕ ಸಂಪೂರ್ಣ ಮುಚ್ಚುವಂತೆ ಫತ್ವಾ ನೀಡಬೇಕು ಎಂದಿದ್ದಾರೆ. ತಾಹೀರ್‌ ಮೆಹಮೂದ್‌ ಅವರ ಅಭಿಪ್ರಾಯವನ್ನು ಬೆಂಬಲಿಸಿ ಖ್ಯಾತ ಕವಿ ಹಾಗೂ ಗೀತೆ ರಚನೆಕಾರ ಜಾವೇದ್‌ ಅಖ್ತರ್‌ ಟ್ವೀಟ್‌ ಮಾಡಿದ್ದಾರೆ. ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪ್ರಾರ್ಥನಾ ಮಂದಿರಗಳನ್ನು ಮುಚ್ಚುವಂತೆ ಅವರು ಆಗ್ರಹಿಸಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್‌ನಿಂದಾಗಿ ಸಂಭವಿಸಿದ 10 ಸಾವು ಮತ್ತು 300 ಕೊರೊನಾ ಶಂಕಿತ ಪ್ರಕರಣಗಳಲ್ಲಿ ದೆಹಲಿಯ ನಿಜಾಮುದ್ದೀನ್ ವೆಸ್ಟ್‌ನಲ್ಲಿರುವ ತಬ್ಲೀಗ್ ಜಮಾತ್‌ ಧಾರ್ಮಿಕ ಸಭೆಯಲ್ಲಿ ಭಾಗಿಯಾದವರೂ ಸೇರಿದ್ದಾರೆ ಎಂಬ ಮಾಹಿತಿ ಆತಂಕ ಮೂಡಿಸಿದೆ. ಈ ಧಾರ್ಮಿಕ ಸಮಾವೇಶದಲ್ಲಿ ಭಾಗಿಯಾದವರು ದೇಶಾದ್ಯಂತ ಪ್ರಯಾಣಿಸಿದ್ದಾರೆ ಎನ್ನಲಾಗುತ್ತಿದೆ. ಕೊರೊನಾ ಕಾರಣಕ್ಕಾಗಿ ಸಭೆ ಸಮಾರಂಭಗಳಿಗೆ ನಿರ್ಬಂಧ ಇದ್ದರೂ ದೆಹಲಿಯಲ್ಲಿ ಮಾರ್ಚ್‌ ತಿಂಗಳ ಮೊದಲ ವಾರದಲ್ಲಿ ಸಮಾವೇಶ ನಡೆದಿತ್ತು.


from India & World News in Kannada | VK Polls https://ift.tt/2WUVY15

FACT CHECK: ಕರ್ಫ್ಯೂ ವೇಳೆ ಪ್ರಯಾಣಕ್ಕೆ ಇ - ಪಾಸ್‌ ಪಡೆಯಲು ವೆಬ್‌ಸೈಟ್‌ ತೆರೆದ ದಿಲ್ಲಿ ಸರಕಾರ!

ಹಕ್ಕು: ಹಿನ್ನೆಲೆ ದೇಶಾದ್ಯಂತ ಆಗಿದ್ದು, ಈ ಹಿನ್ನೆಲೆ ರಾಷ್ಟ್ರ ರಾಜಧಾನಿ ಕರ್ಫ್ಯೂ ಸಮಯದಲ್ಲಿ ಅಗತ್ಯ ಸೇವೆಗಳನ್ನು ಒದಗಿಸುವಲ್ಲಿ ತೊಡಗಿರುವ ಜನರು ಪ್ರಯಾಣಕ್ಕಾಗಿ ಇ - ಪಾಸ್‌ಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಾಟ್ಸ್‌ಆ್ಯಪ್‌ ಬಳಕೆದಾರರು ಹಲವು ದಿನಗಳಿಂದ ವೆಬ್‌ಸೈಟ್‌ಗೆ ಲಿಂಕ್ ಹಂಚಿಕೊಳ್ಳುತ್ತಿದ್ದಾರೆ. https://ift.tt/2UCDEa8 - ಈ ವೆಬ್‌ಸೈಟ್‌ ಮೂಲಕ ದಿಲ್ಲಿಯಲ್ಲಿ ಕರ್ಫ್ಯೂ ಸಮಯದಲ್ಲಿ ಪ್ರಯಾಣಕ್ಕಾಗಿ ಜನರು ಇ-ಪಾಸ್‌ಗಾಗಿ ಅರ್ಜಿ ಸಲ್ಲಿಸಬಹುದು. ಅಷ್ಟೇ ಅಲ್ಲದೆ ಆಹಾರ, ಪಡಿತರ, ದೈನಂದಿನ ಕೂಲಿ ಕಾರ್ಮಿಕರಿಗೆ 5000 ರೂ., ಮತ್ತು ಪಿಂಚಣಿ ಮೊತ್ತಕ್ಕಾಗಿ ಆಹಾರ ಪಡೆಯಬಹುದು. ಕೆಲವು ಟೈಮ್ಸ್ ಫ್ಯಾಕ್ಟ್ ಚೆಕ್ ಓದುಗರು ಈ ವೆಬ್‌ಸೈಟ್ ನಿಜವಾದದ್ದೇ ಎಂದು ನಮ್ಮನ್ನು ಕೇಳಿದ್ದರು. ಸತ್ಯ ಹೌದು, ವೆಬ್‌ಸೈಟ್ ನಿಜವಾದದು. ಈ ವೆಬ್‌ಸೈಟ್ ಅನ್ನು ದೆಹಲಿ ಸರಕಾರ ಸ್ಥಾಪಿಸಿದೆ. ಈ ಬಗ್ಗೆ ಟೈಮ್ಸ್ ಫ್ಯಾಕ್ಟ್ ಚೆಕ್ ದೆಹಲಿ ಸರಕಾರದ ಉನ್ನತ ಮೂಲಗಳನ್ನು ಸಂಪರ್ಕಿಸಿದ್ದು, ಈ ವೆಬ್‌ಸೈಟ್ ಲಿಂಕ್ ಸರಿಯಾಗಿದೆ ಮತ್ತು ಜನರಿಗೆ ಸಹಾಯ ಮಾಡಲು ಇದನ್ನು ಪ್ರಾರಂಭಿಸಲಾಗಿದೆ ಎಂದು ಕೇಜ್ರಿವಾಲ್‌ ಸರಕಾರ ಧೃಡಪಡಿಸಿದೆ.


from India & World News in Kannada | VK Polls https://ift.tt/39xgOWM

ಗೃಹಬಂದಿಗಳಿಗೆ ಖ್ಯಾತ ಹಾಡುಗಾರರಿಂದ ಆನ್‌ಲೈನ್‌ ಸಂಗೀತದ ಮುದ

ಹೊಸದಿಲ್ಲಿ: ತಡೆಗೆ ಲಾಕ್‌ಡೌನ್‌ನಿಂದ ಮನೆಯಲ್ಲಿ ಬಂದಿಯಾಗಿ ಚಡಪಡಿಸುತ್ತಿರುವ ಜನರ ಮನಕ್ಕೆ ಆನ್‌ಲೈನ್‌ ಸರಣಿ ಸಂಗೀತ ಕಾರ್ಯಕ್ರಮಗಳ ಮೂಲಕ ತಂಪೆರೆಯುವ ಪ್ರಯತ್ನವನ್ನು ಭಾರತೀಯ ಹಾಡುಗಾರರ ತಂಡ ಮಾಡುತ್ತಿದ್ದು, ಇದಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಶಾಸ್ತ್ರೀಯ ಸಂಗೀತಗಾರರ ತಂಡ ಲಾಕ್‌ಡೌನ್‌ ಘೋಷಣೆಧಿಯಾಗುವುದಕ್ಕಿಂತ ಪೂರ್ವ ಮಾರ್ಚ್ 22ರಿಂದ "Utsaah' " ಆನ್‌ಲೈನ್‌ ಸರಣಿ ಸಂಗೀತ ಕಚೇರಿಗಳನ್ನು ನಡೆಸಿಕೊಡುತ್ತಿದೆ. ದುರ್ಗಾ ಜಸ್‌ರಾಜ್‌ ಮತ್ತು ಅವರ ತಂಡದ ಸದಸ್ಯರು ಈ ಕಾರ್ಯಕ್ರಮ ರೂಪಿಸಿ, ಅನುಷ್ಠಾನಗೊಳಿಸುತ್ತಿದ್ದಾರೆ. ಲಾಕ್‌ಡೌನ್‌ ಕೊನೆಗೊಳ್ಳುವವರೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ದುರ್ಗಾ ತಿಳಿಸಿದ್ದಾರೆ. ಪಂಡಿತ್‌ ವಿಶ್ವಮೋಹನ ಭಟ್‌ ಸೇರಿದಂತೆ 21 ಮಂದಿ ಖ್ಯಾತ ಸಂಗೀತಗಾರರು ಮನೆಯಿಂದಲೇ ಕಾರ್ಯಕ್ರಮ ನೀಡುತ್ತಾರೆ. ಯಾರು ಬೇಕಾದರೂ ಈ ಆನ್‌ಲೈನ್‌ ಸಂಗೀತ ಕಛೇರಿಯ ಸರಣಿಧಿಯನ್ನು ಕೇಳಬಹುದಾಗಿದೆ. ಶುಲ್ಕವಿಲ್ಲದೇ ಸಂಕಷ್ಟ ಸಂದರ್ಭದ ಸೇವಾರ್ಥ ಇದನ್ನು ನಡೆಸಿಕೊಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ''ಪ್ರತಿ ಸಂದರ್ಭವೂ ಜೀವನದಲ್ಲಿಅವಕಾಶ ಒದಗಿಸುತ್ತದೆ. ಇದು ದೇಶದ ಜನರ ಪಾಲಿಗೆ ಕ್ಲಿಷ್ಟ ಕಾಲಘಟ್ಟ. ಮನೆಗಳಲ್ಲಿಬಂದಿಯಾಗಿರುವ ಜನರಲ್ಲಿಅಗೋಚರ ವೈರಾಣು ಭೀತಿ ಆವರಿಸಿದೆ. ಅವರ ಆತಂಕ ಕಡಿಮೆ ಮಾಡಿ, ಮನಕ್ಕೆ ಮುದ ನೀಡುವ ಸಂಗೀತ ಈಗ ಅಗತ್ಯ ಇದೆ. ಸಂಗೀತಕ್ಕೆ ಅಗಾಧ ಶಕ್ತಿಯಿದೆ. ಪಂಡಿತ್‌ ಜಸ್‌ರಾಜ್‌ ಅವರ ಪುತ್ರಿಯಾಗಿ ನಾನು ಆ ನಂಬಿಕೆ ಇಟ್ಟುಕೊಂಡು ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ,'' ಎಂದು ದುರ್ಗಾ ಜಸ್‌ರಾಜ್‌ ಹೇಳಿದ್ದಾರೆ.


from India & World News in Kannada | VK Polls https://ift.tt/2WTGhXN

ಸಮೋಸಾ ಬೇಕೆಂದು ಕೋವಿಡ್-19 ಹೆಲ್ಪ್‌ಲೈನ್‌ಗೆ ಕರೆ ಮಾಡಿದ: ಮುಂದೇನಾಯ್ತು?

ರಾಂಪುರ್: ಇಡೀ ದೇಶ ಕೊರೊನಾ ವೈರಸ್ ವಿರುದ್ಧ ಒಗ್ಗಟ್ಟಾಗಿ ಹೋರಾಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾರ್ವಜನಿಕರ ಹಿತಕ್ಕಾಗಿ ಹಗಲಿರುಳೂ ದುಡಿಯುತ್ತಿವೆ. ಆದರೆ ಈ ಅವಕಾಶವನ್ನು ಕೆಲವರು ದುರ್ಬಳಕೆ ಮಾಡಿಕೊಂಡು ಇಡೀ ಹೋರಾಟವನ್ನೇ ಅಪಹಾಸ್ಯ ಮಾಡುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ಸಾರ್ವಜನಿಕರಿಗೆ ಶೀಘ್ರ ವೈದ್ಯಕೀಯ ನೆರವು ಸಿಗಲಿ ಎಂಬ ಉದ್ದೇಶದಿಂದ ಕೋವಿಡ್-19 ಸ್ಥಾಪಿಸಲಾಗಿದೆ. ಈ ಹೆಲ್ಪ್‌ಲೈನ್‌ಗೆ ಕರೆ ಮಾಡುವ ಮೂಲಕ ಸಾರ್ವಜನಿಕರು ತುರ್ತು ವೈದ್ಯಕೀಯ ಸಹಾಯ ಪಡೆಯಬಹುದಾಗಿದೆ. ಆದರೆ ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡ ಭೂಪನೋರ್ವ, ಹೆಲ್ಪ್‌ಲೈನ್‌ಗೆ ಕರೆ ಮಾಡಿ ಬೇಕೆಂದು ಪಟ್ಟು ಹಿಡಿದಿದ್ದಾನೆ. ಸತತ ನಾಲ್ಕು ಬಾರಿ ಈ ನಂಬರ್‌ಗೆ ಕರೆ ಮಾಡಿದ ವ್ಯಕ್ತಿ ತನಗೆ ತುರ್ತಾಗಿ ಸಮೋಸಾ ತಂದುಕೊಡಬೇಕು ಎಂದು ಹಠ ಮಾಡಿದ್ದಾನೆ. ಸತತ ಮನವಿಯ ಹೊರತಾಗಿಯೂ ಆತ ತನಗೆ ಸಮೋಸಾ ಬೇಕೆಂದು ಪಟ್ಟು ಹಿಡಿದಾಗ, ಸಮೋಸಾ ಪೊಟ್ಟಣದೊಂದಿಗೆ ಆತನ ಮನೆಗೆ ತೆರಳಿದ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರ ಸಹಾಯದೊಂದಿಗೆ ಆತನಿಗೆ ಚರಂಡಿ ಸ್ವಚ್ಛಗೊಳಿಸುವ ಶಿಕ್ಷೆ ನೀಡಿದ್ದಾರೆ. ಸಮೋಸಾ ಪೊಟ್ಟಣದೊಂದಿಗೆ ಪೊಲೀಸರನ್ನು ಕಂಡು ದಂಗಾದ ವ್ಯಕ್ತಿ ಕ್ಷಮೆ ಕೇಳಲು ಮುಂದಾದ. ಆದರೆ ತಮ್ಮ ಕೆಲಸವನ್ನೆಲ್ಲಾ ಬಿಟ್ಟು ಈತನಿಗೆ ಸಮೋಸಾ ತಂದು ಕೊಟ್ಟಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಕೋಪದಿಂದ ಆತನಿಗೆ ಚರಂಡಿ ಸ್ವಚ್ಛ ಮಾಡುವಂತೆ ಆದೇಶಿಸಿದರು. ಬೇರೆ ವಿಧಿಯಿಲ್ಲದೇ ತುರ್ತು ಸೇವಾ ಘಟಕಕ್ಕೆ ಕರೆ ಮಾಡಿ ತೊಂದರೆ ಕೊಟ್ಟಿದ್ದಕ್ಕೆ ಪ್ರತಿಯಾಗಿ ಆ ವ್ಯಕ್ತಿ ಚರಂಡಿ ಸ್ವಚ್ಛಗೊಳಿಸಿ ಬಳಿಕ ಅಧಿಕಾರಿಗಳ ಕ್ಷಮೆ ಕೇಳಿದ. ಈ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಂಜನೇಯ ಕುಮಾರ್ ಸಿಂಗ್ ಟ್ವೀಟ್ ಮಾಡಿದ್ದು, ಅಧಿಕಾರಿಗಳ ಕ್ರಮಕ್ಕೆ ಎಲ್ಲರೂ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/2QUVWlN

ಕೊರೊನಾ ವೈರಸ್‌ ಹೇಗೆ ದಾಳಿ ಮಾಡುತ್ತೆ? ಬೆಂಗಳೂರು ಪೊಲೀಸರು ತೋರಿಸಿಕೊಟ್ಟಿದ್ದಾರೆ ನೋಡಿ !

ಬೆಂಗಳೂರು: ನೀವು ಮನೆಯಿಂದ ಅನಗತ್ಯವಾಗಿ ಹೊರಗಡೆ ಬರುತ್ತೀರಾ ? ಯಾವುದೇ ಸುರಕ್ಷಿತ ಕ್ರಮ ಕೈಗೊಳ್ಳದೆ ಬೇಕಾಬಿಟ್ಟಿ ರಸ್ತೆಯಲ್ಲಿ ಸುತ್ತಾಡುತ್ತೀರಾ? ಹಾಗಾದರೆ ಡೌಟೇ ಬೇಡ ! ನಿಮ್ಮ ಮೇಲೆ ಕೊರೊನಾ ವೈರಸ್ ದಾಳಿ ನಡೆಸುವುದಂತೂ ಗ್ಯಾರಂಟಿ. ಆ ದಾಳಿ ಹೇಗೆ ನಡೆಯುತ್ತದೆ ಎಂಬುವುದನ್ನು ಬೆಂಗಳೂರು ಪೊಲೀಸರು ವಿಭಿನ್ನ ವಿಡಿಯೋ ಮೂಲಕ ತೋರಿಸಿಕೊಟ್ಟಿದ್ದಾರೆ. ಕೊರೊನಾ ಲಾಕ್‌ಡೌನ್‌ ನಡುವೆಯೂ ಒಬ್ಬ ಯುವಕ ಬೈಕ್‌ನಲ್ಲಿ ರಸ್ತೆಗಿಳಿಯುತ್ತಾನೆ. ಆದರೆ ಆತನಿಗೆ ಅರಿವಿಲ್ಲದ ಹಾಗೆ ಕೊರೊನಾ ಮಹಾಮಾರಿ ಬೆನ್ನಹಿಂದೆಯೇ ಸುತ್ತುತ್ತಾ ಇರುತ್ತೆ. ದಿಢೀರ್‌ ಆಗಿ ದಾಳಿಗೆ ಮುಂದಾಗುತ್ತೆ. ಆತ ಬೇಡ ಬೇಡ ಎಂದರೂ ಕೊರೊನಾ ಮಾತ್ರ ಸುಮ್ಮನಿರಲ್ಲ. ಬದಲಾಗಿ ಅವನ ದೇಹದ ಒಳಗೆ ಸೇರಿ ಬಿಡುತ್ತದೆ. ಮುಂದೆ ಗಂಟೆ ಹಾಗೂ ಶಂಖದ ಸದ್ದು! ಹೌದು, ಹೀಗೆ ಭಿನ್ನವಾಗಿ ಜನರಲ್ಲಿ ಕೊರೊನಾದ ತೀವ್ರತೆಯನ್ನು ವಿಡಿಯೋ ಮಾಡುವ ಮೂಲಕ ಬೆಂಗಳೂರು ಪೊಲೀಸರು ಜನರಿಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದ್ದಾರೆ. ಮನೆಯಿಂದ ಹೊರಬಂದವರ ಮೇಲೆ ಪೊಲೀಸರು ಲಾಠಿ ಚಾರ್ಜ್‌ ಮಾಡಿದ ಪ್ರಕರಣಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಹಾಡು, ವಿಡಿಯೋಗಳ ಮೂಲಕ ಜನರನ್ನು ನಿಯಂತ್ರಣ ಮಾಡಲು ಹೊರಟಿದ್ದಾರೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜನರ ಸಹಕಾರ ಅತ್ಯಗತ್ಯ. ಸರ್ಕಾರ ಹಾಗೂ ಪೊಲೀಸರು ಮನೆಯಿಂದ ಹೊರಬರಬೇಡಿ ಅಂದರೂ ಜನರು ಮಾತ್ರ ಇದಕ್ಕೆ ಕಿವಿಕೊಡುತ್ತಿಲ್ಲ. ಅಗತ್ಯ ಸಾಮಾಗ್ರಿಗಳ ಖರೀದಿಗೆ ಮನೆಯಿಂದ ಹೊರಬರುವುದು ಅನಿವಾರ್ಯ. ಆದರೆ ಕೆಲವು ಯುವಕರು ವಿನಾ ಕಾರಣ ಮನೆಯಿಂದ ಹೊರಬರುತ್ತಾರೆ. ಕೊರೊನಾ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿ ಬೇಕಾ ಬಿಟ್ಟಿ ಬೈಕ್‌ಗಳಲ್ಲಿ ತಿರುಗಾಡುತ್ತಾರೆ. ಇಂತಹ ಜನರಲ್ಲಿ ಕೊರೊನಾ ಭೀತಿ ಹಾಗೂ ಅದರ ಪರಿಣಾಮ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಲಾಠಿ ಬದಲಾಗಿ ಹೊಸವಿಧಾನಗಳ ಮೊರೆ ಹೋಗಿದ್ದಾರೆ.


from India & World News in Kannada | VK Polls https://ift.tt/2QW0xEk

ಸಮೋಸಾ ಬೇಕೆಂದು ಕೋವಿಡ್-19 ಹೆಲ್ಪ್‌ಲೈನ್‌ಗೆ ಕರೆ ಮಾಡಿದ: ಮುಂದೇನಾಯ್ತು?

ರಾಂಪುರ್: ಇಡೀ ದೇಶ ಕೊರೊನಾ ವೈರಸ್ ವಿರುದ್ಧ ಒಗ್ಗಟ್ಟಾಗಿ ಹೋರಾಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾರ್ವಜನಿಕರ ಹಿತಕ್ಕಾಗಿ ಹಗಲಿರುಳೂ ದುಡಿಯುತ್ತಿವೆ. ಆದರೆ ಈ ಅವಕಾಶವನ್ನು ಕೆಲವರು ದುರ್ಬಳಕೆ ಮಾಡಿಕೊಂಡು ಇಡೀ ಹೋರಾಟವನ್ನೇ ಅಪಹಾಸ್ಯ ಮಾಡುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ಸಾರ್ವಜನಿಕರಿಗೆ ಶೀಘ್ರ ವೈದ್ಯಕೀಯ ನೆರವು ಸಿಗಲಿ ಎಂಬ ಉದ್ದೇಶದಿಂದ ಕೋವಿಡ್-19 ಸ್ಥಾಪಿಸಲಾಗಿದೆ. ಈ ಹೆಲ್ಪ್‌ಲೈನ್‌ಗೆ ಕರೆ ಮಾಡುವ ಮೂಲಕ ಸಾರ್ವಜನಿಕರು ತುರ್ತು ವೈದ್ಯಕೀಯ ಸಹಾಯ ಪಡೆಯಬಹುದಾಗಿದೆ. ಆದರೆ ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡ ಭೂಪನೋರ್ವ, ಹೆಲ್ಪ್‌ಲೈನ್‌ಗೆ ಕರೆ ಮಾಡಿ ಬೇಕೆಂದು ಪಟ್ಟು ಹಿಡಿದಿದ್ದಾನೆ. ಸತತ ನಾಲ್ಕು ಬಾರಿ ಈ ನಂಬರ್‌ಗೆ ಕರೆ ಮಾಡಿದ ವ್ಯಕ್ತಿ ತನಗೆ ತುರ್ತಾಗಿ ಸಮೋಸಾ ತಂದುಕೊಡಬೇಕು ಎಂದು ಹಠ ಮಾಡಿದ್ದಾನೆ. ಸತತ ಮನವಿಯ ಹೊರತಾಗಿಯೂ ಆತ ತನಗ ಸಮೋಸಾ ಬೇಕೆಂದು ಪಟ್ಟು ಹಿಡಿದಾಗ, ಸಮೋಸಾ ಪೊಟ್ಟಣದೊಂದಿಗೆ ಆತನ ಮನೆಗೆ ತೆರಳಿದ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರ ಸಹಾಯದೊಂದಿಗೆ ಆತನಿಗೆ ಚರಂಡಿ ಸ್ವಚ್ಛಗೊಳಿಸುವ ಶಿಕ್ಷೆ ನೀಡಿದ್ದಾರೆ. ಸಮೋಸಾ ಪೊಟ್ಟಣದೊಂದಿಗೆ ಪೊಲೀಸರನ್ನು ಕಂಡು ದಂಗಾದ ವ್ಯಕ್ತಿ ಕ್ಷಮೆ ಕೇಳಲು ಮುಂದಾದ. ಆದರೆ ತಮ್ಮ ಕೆಲಸವನ್ನೆಲ್ಲಾ ಬಿಟ್ಟು ಈತನಿಗೆ ಸಮೋಸಾ ತಂದು ಕೊಟ್ಟಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಕೋಪದಿಂದ ಆತನಿಗೆ ಚರಂಡಿ ಸ್ವಚ್ಛ ಮಾಡುವಂತೆ ಆದೇಶಿಸಿದರು. ಬೇರೆ ವಿಧಿಯಿಲ್ಲದೇ ತುರ್ತು ಸೇವಾ ಘಟಕಕ್ಕೆ ಕರೆ ಮಾಡಿ ತೊಂದರೆ ಕೊಟ್ಟಿದ್ದಕ್ಕೆ ಪ್ರತಿಯಾಗಿ ಆ ವ್ಯಕ್ತಿ ಚರಂಡಿ ಸ್ವಚ್ಛಗೊಳಿಸಿ ಬಳಿಕ ಅಧಿಕಾರಿಗಳ ಕ್ಷಮೆ ಕೇಳಿದ. ಈ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಂಜನೇಯ ಕುಮಾರ್ ಸಿಂಗ್ ಟ್ವೀಟ್ ಮಾಡಿದ್ದು, ಅಧಿಕಾರಿಗಳ ಕ್ರಮಕ್ಕೆ ಎಲ್ಲರೂ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/3aw8ms5

ಫ್ಲ್ಯಾಶ್ ಬ್ಯಾಕ್: ಭಾರತದ ಟಿ20 ವಿಶ್ವಕಪ್ ಗೆಲುವಿನ ಕನಸನ್ನು ಛಿದ್ರಗೊಳಿಸಿದ್ದ ವಿಂಡೀಸ್

ಮುಂಬಯಿ: 2016ನೇ ಇಸವಿಯ ಅಂದಿನ ಈ ದಿನ ನಡೆದ ಟ್ವೆಂಟಿ-20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ಬಾರಿಸಿದ ವೆಸ್ಟ್‌ಇಂಡೀಸ್ ಫೈನಲ್‌ಗೆ ಲಗ್ಗೆಯಿಟ್ಟಿತು. ಪ್ರಸ್ತುತ ವಿಂಡೀಸ್ ಸ್ಮರಣೀಯ ಗೆಲುವಿಗೆ ನಾಲ್ಕು ವರ್ಷಗಳ ಸಂಭ್ರಮ. ಇದರೊಂದಿಗೆ ಎರಡನೇ ಬಾರಿಗೆ ಗೆಲ್ಲುವ ಕನಸು ಭಗ್ನಗೊಂಡಿತು. 2007ನೇ ಇಸವಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಮುಂದಾಳತ್ವದಲ್ಲಿ ಭಾರತ ಚೊಚ್ಚಲ ಟಿ20 ಕಿರೀಟಕ್ಕೆ ಮುತ್ತಿಕ್ಕಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಭಾರತಕ್ಕೆ ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 7.2 ಓವರ್‌ಗಳಲ್ಲೇ 62 ರನ್‌ಗಳ ಜೊತೆಯಾಟ ನೀಡಿದರು. 31 ಎಸೆತಗಳನ್ನು ಎದುರಿಸಿದ ರೋಹಿತ್ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 40 ರನ್ ಗಳಿಸಿದರು. ಇನ್ನೊಂದೆಡೆ 35 ಎಸೆತಗಳನ್ನು ಎದುರಿಸಿದ ರಹಾನೆ ಎರಡು ಬೌಂಡರಿಗಳಿಂದ 40 ರನ್ ಗಳಿಸಿದರು. ಆದರೆ ಬೃಹತ್ ಮೊತ್ತ ಪೇರಿಸಲು ನೆರವಾದರು ಕಿಂಗ್ ಕೊಹ್ಲಿ. ವಿಂಡೀಸ್ ದಾಳಿಯನ್ನು ಮನಬಂದಂತೆ ದಂಡಿಸಿದ 47 ಎಸೆತಗಳಲ್ಲಿ 11 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 89 ರನ್ ಗಳಿಸಿ ಔಟಾಗದೆ ಉಳಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ಧೋನಿ ಒಂಬತ್ತು ಎಸೆತಗಳಲ್ಲಿ ಬೌಂಡರಿ ನೆರವಿನಿಂದ 15 ರನ್ ಗಳಿಸಿ ಅಜೇಯರಾಗುಳಿದರು. ಬಳಿಕ ಗುರಿ ಬೆನ್ನಟ್ಟಿದ ವೆಸ್ಟ್‌ಇಂಡೀಸ್‌ಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಕ್ರಿಸ್ ಗೇಲ್ (5) ಹೊರದಬ್ಬಿದ ಜಸ್ಪ್ರೀತ್ ಬುಮ್ರಾ ಬಲವಾದ ಹೊಡೆತ ನೀಡಿದರು. ಮಾರ್ಲನ್ ಸ್ಯಾಮುವೆಲ್ಸ್ (8) ಹೊರದಬ್ಬಿದ ಆಶಿಶ್ ನೆಹ್ರಾ, ವಿಂಡೀಸ್‌ಗೆ ಡಬಲ್ ಆಘಾತ ನೀಡಲು ನೆರವಾದರು. ಈ ಹಂತದಲ್ಲಿ ಭಾರತ ಗೆಲ್ಲಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಲಿಂಡೆಲ್ ಸಿಮನ್ಸ್ ಹಾಗೂ ಜಾನ್ಸನ್ ಚಾರ್ಲ್ಸ್ ಮೂರನೇ ವಿಕೆಟ್‌ಗೆ 97 ರನ್‌ಗಳ ಬೃಹತ್ ಜೊತೆಯಾಟ ನೀಡುವ ಮೂಲಕ ಪಂದ್ಯದಲ್ಲಿ ತಿರುಗೇಟು ನೀಡಲು ನೆರವಾದರು. 36 ಎಸೆತಗಳನ್ನು ಎದುರಿಸಿದ ಚಾರ್ಲ್ಸ್ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 52 ರನ್ ಗಳಿಸಿದರು. ಅತ್ತ ದಿಟ್ಟ ಹೋರಾಟ ತೋರಿದ ಸಿಮನ್ಸ್, ಆಂಡ್ರೆ ರಸೆಲ್ ಜೊತೆ ಸೇರಿ ಇನ್ನೆರಡು ಎಸೆತಗಳು ಬಾಕಿ ಉಳಿದಿರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಪರಿಣಾಮ 19.4 ಓವರ್‌ಗಳಲ್ಲೇ ವಿಂಡೀಸ್ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತ್ತು. ಸಿಮನ್ಸ್ ಹಾಗೂ ರಸೆಲ್ ಮುರಿಯದ ನಾಲ್ಕನೇ ವಿಕೆಟ್‌ಗೆ 80 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಇದರೊಂದಿಗೆ ವಿರಾಟ್ ಕೊಹ್ಲಿ ಹೋರಾಟವು ವ್ಯರ್ಥವಾಗುವುದರೊಂದಿಗೆ ಭಾರತದ ಗೆಲುವಿನ ಕನಸು ಛಿದ್ರಗೊಂಡಿತು. 51 ಎಸೆತಗಳನ್ನು ಎದುರಿಸಿದ ಸಿಮನ್ಸ್ ಏಳು ಬೌಂಡರಿ ಹಾಗೂ ಐದು ಸಿಕ್ಸರ್‌ಗಳ ನೆರವಿನಿಂದ 82 ರನ್ ಗಳಿಸಿ ಅಜೇಯರಾಗುಳಿದರು. ಇನ್ನೊಂದೆಡೆ ರಸೆಲ್ 20 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿ ಔಟಾಗದೆ ಉಳಿದರು. ಭಾರತದ ಪರ ಆಶಿಶ್ ನೆಹ್ರಾ ಹೊರತಾಗಿ ಇತರೆಲ್ಲ ಬೌಲರ್‌ಗಳು ವೈಫಲ್ಯವನ್ನು ಅನುಭವಿಸಿದರು. ಅಂತಿಮವಾಗಿ ಫೈನಲ್‌ನಲ್ಲಿ ಇಂಗ್ಲೆಂಡ್ ಮಣಿಸಿದ ವಿಂಡೀಸ್ ಟಿ20 ವಿಶ್ವಕಪ್ ಕಿರೀಟ ಎತ್ತಿ ಹಿಡಿಯಿತು. ಆಂಗ್ಲರ ವಿರುದ್ಧ ಫೈನಲ್‌ನ ಅಂತಿಮ ಓವರ್‌ನಲ್ಲಿ ಸತತ ನಾಲ್ಕು ಸಿಕ್ಸರ್ ಸಿಡಿಸಿದ ಕಾರ್ಲಸ್ ಬ್ರಾತ್‌ವೇಟ್ ಗೆಲುವಿನ ಹೀರೊ ಎನಿಸಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2R13fsu

ಊಟವಿಲ್ಲದೆ ಪರದಾಡುತ್ತಿದ್ದ ಕಾರ್ಮಿಕರು! ಟ್ವಿಟ್ಟರ್‌ನಲ್ಲಿ ಸಿಕ್ತು ಸ್ಪಂದನೆ

ಬೆಂಗಳೂರು: ಬೆಂಗಳೂರಿನಲ್ಲಿ ಉಳಿದುಕೊಂಡಿರುವ ಹೊರರಾಜ್ಯದ 20 ಕಾರ್ಮಿಕರು ಊಟವಿಲ್ಲದೆ ಕಷ್ಟ ಅನುಭವಿಸುತ್ತಿದ್ದಾರೆ ಎಂಬ ಮಾಹಿತಿಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ದೆಹಲಿ ಮೂಲದ ವ್ಯಕ್ತಿಯೊಬ್ಬರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಬೆಂಗಳೂರಿನಲ್ಲಿ 20 ಜನ ಕಾರ್ಮಿಕರು ಊಟವಿಲ್ಲದೆ ಪರದಾಡುತ್ತಿದ್ದಾರೆ ಎಂದು ಸ್ಟೇಟಸ್ ಹಾಕಿದ್ದರು. ಮಂಗಳವಾರ ಬೆಳಗ್ಗೆ 9.15 ಕ್ಕೆ ಈ ಸ್ಟೇಟಸ್‌ ಹಾಕಿದ್ದಾರೆ. ಕೂಡಲೇ ಬೆಂಗಳೂರಿನ ಹಲವರು ಇದಕ್ಕೆ ಸ್ಪಂದಿಸಿದ್ದಾರೆ. ದೆಹಲಿಯ ಬಿಜೆಪಿ ಮುಖಂಡ ತಜಿಂದರ್ ಪಾಲ್‌ ಸಿಂಗ್ ಬಾಗಾ ಅವರಿಗೆ ಟ್ಯಾಗ್‌ ಮಾಡಿ ಈ ಸ್ಟೇಟಸ್ ಹಾಕಿ ಸಹಾಯ ಕೋರಿದ್ದರು. ಇದಕ್ಕೆ ಟ್ವಿಟ್ಟರ್‌ ಮೂಲಕ ಹಲವರು ಸ್ಪಂದಿಸಿದ್ದಾರೆ. ಯಾವುದೇ ರೀತಿಯ ಸಹಾಯಕ್ಕೆ ಸಿದ್ದ ಎಂದು ಮೆಸೇಜ್ ಹಾಕಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ ರಾವ್ ಕೂಡಾ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು ಕಾರ್ಮಿಕರು ಎಲ್ಲಿದ್ದಾರೆ ಹಾಗೂ ಅವರ ಕುರಿತಾದ ಮಾಹಿತಿಯನ್ನು ನೀಡಿ ಎಂದು ಟ್ವಿಟ್ಟರ್‌ನಲ್ಲಿ ಕೇಳಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಹೊರ ರಾಜ್ಯಗಳ ಕಾರ್ಮಿಕರು ತಮ್ಮೂರುಗಳಿಗೆ ನಡೆದುಕೊಂಡೇ ಹೋಗಲು ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳು ಜನರಿಗೆ ಪರಸ್ಪರ ಸ್ಪಂದಿಲು ಸಹಕಾರಿಯಾಗುತ್ತಿವೆ. ಊಟ ತಿಂಡಿಗೆ ಪರದಾಡುತ್ತಿರುವ ಜನರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಗಳಿಗೆ ಜನರು ಉತ್ತಮ ರೀತಿಯಲ್ಲೇ ಸ್ಪಂದಿಸುತ್ತಿದ್ದಾರೆ.


from India & World News in Kannada | VK Polls https://ift.tt/3bJrumZ

ಪಾಕಿಸ್ತಾನದ 19 ಹರೆಯದ ಈ ಯುವ ಬ್ಯಾಟ್ಸ್‌ಮನ್‌ಗೆ ರೋಹಿತ್ ಶರ್ಮಾ ಹೀರೊ!

ಹೊಸದಿಲ್ಲಿ: ಗಡಿಯಾಚೆಗಿನ ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮುಕ್ಕು ನೀಡುತ್ತಿುರವ ಹಿನ್ನೆಲೆಯಲ್ಲಿ ಭಾರತ ಹಾಗೂ ನಡುವಣ ಕ್ರಿಕೆಟ್ ಬಾಂಧವ್ಯ ಕಡಿದು ಹೋಗಿದೆ. ಇತ್ತಂಡಗಳು ಐಸಿಸಿ ಪ್ರಾಯೋಜಿತ ಟೂರ್ನಿಗಳಲ್ಲಿ ಮಾತ್ರ ಪರಸ್ಪರ ಮುಖಾಮುಖಿಯಾಗುತ್ತಿದೆ. ಹಿಂದಿನಿಂದಲೇ ಭಾರತೀಯ ಕ್ರಿಕೆಟ್ ತಂಡವು ಬ್ಯಾಟ್ಸ್‌ಮನ್ ದಿಗ್ಗಜರಿಗೆ ಹೆಸರುವಾಸಿಯಾಗಿದ್ದಾರೆ. ಅತ್ತ ಪಾಕಿಸ್ತಾನವು ವೇಗದ ಬೌಲಿಂಗ್ ವಿಭಾಗದಲ್ಲಿ ಹೆಚ್ಚಿನ ಮನ್ನಣೆ ಗಳಿಸಿದೆ. ದಶಕದಿಂದಲೂ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ಭಾರತದ ಮಾಜಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಆರಾಧ್ಯ ಪುರಷರನ್ನಾಗಿ ಪರಿಗಣಿಸಿದ್ದಾರೆ. ಇದೀಗ ಹಿಟ್‌ಮ್ಯಾನ್ ಖ್ಯಾತಿಯ ಸರದಿ. ಹೌದು, ಪಾಕಿಸ್ತಾನದ ಯುವ ಬ್ಯಾಟ್ಸ್‌ಮನ್ ಓರ್ವ ತಮ್ಮ ಪಾಲಿಗೆ ರೋಹಿತ್ ಶರ್ಮಾ ಅವರೇ ಹೀರೊ ಆಗಿದ್ದಾರೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ರೈಸಿಂಗ್ ಸ್ಟಾರ್ ಆಗಿರುವ , ರೋಹಿತ್ ಶರ್ಮಾ ಅವರನ್ನು ಹಾಡಿ ಹೊಗಳಿದ್ದು, ಭಾರತೀಯ ಬ್ಯಾಟ್ಸ್‌ಮನ್ ತರಹನೇ ಆಡಬೇಕು ಎಂದಿದ್ದಾರೆ. ''ನನ್ನ ಮಾದರಿ ಪುರುಷ ರೋಹಿತ್ ಶರ್ಮಾ. ಅವರ ಸ್ಟ್ರೇಕ್‌ರೇಟ್ ಹೆಚ್ಚು ಗಮನ ಸೆಳೆಯುತ್ತದೆ. ನಾನು ಅದೇ ರೀತಿ ಬ್ಯಾಟಿಂಗ್ ಮಾಡಲು ಬಯಸುತ್ತೇನೆ ಎಂದು 19ರ ಹರೆಯದ ಹೈದರ್ ಅಲಿ'' ತಿಳಿಸಿದರು. ಪಾಕಿಸ್ತಾನ ಸೂಪರ್ ಲೀಗ್ (ಪಿಸಿಎಲ್) ಟಿ20 ಟೂರ್ನಿಯಲ್ಲಿ ಪೇಶಾವರ ಜಾಲ್ಮಿ ಪರ ಒಂಬತ್ತು ಪಂದ್ಯಗಳನ್ನು ಆಡಿರುವ ಹೈದರ್ 239 ರನ್‌ಗಳನ್ನು ಗಳಿಸಿ ಮಿಂಚಿದ್ದರು. ಅಲ್ಲದೆ ಹೈದರ್ ಆಕ್ರಮಣಕಾರಿ ಆಟವು ಎಲ್ಲೆಡೆಗಳಿಂದ ಮೆಚ್ಚುಗೆಗೆ ಪಾತ್ರವಾಗಿತ್ತು. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವೀಕ್ಷಕ ವಿವರಣೆಗಾರನಾಗಿರುವ ರಮೀಜ್ ರಾಜಾ, ಭಾರತೀಯ ನಾಯಕ ವಿರಾಟ್ ಕೊಹ್ಲಿ ಹಾಗೂ ಪಾಕ್ ನಾಯಕ ಬಾಬರ್ ಅಜಾಮ್ ಅವರಷ್ಟೇ ಪ್ರತಿಭೆಯನ್ನು ಹೊಂದಿದ್ದಾರೆ ಎಂದಿದ್ದರು. ರೋಹಿತ್ ಶರ್ಮಾ ತರಹನೇ ಪವರ್ ಹಿಟ್ಟಿಂಗ್ ಶಾಟ್‌ಗಳ ಮೂಲಕ ಹೈದರ್ ಅಲಿ ಗಮನ ಸೆಳೆದಿದ್ದರು. ಅಲ್ಲದೆ ಏಳು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 49.61ರ ಸರಾಸರಿಯಲ್ಲಿ 645 ರನ್ ಗಳಿಸಿದ್ದಾರೆ. ಏತನ್ಮಧ್ಯೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳನ್ನು ಮುಂದೂಡಲಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/33WGM4Z

ಶೂಟ್‌ ಕೊರೊನಾ ! ಗಮನ ಸೆಳೆಯುತ್ತಿದೆ ಬೆಂಗಳೂರು ಪೊಲೀಸರ ಹಾಡು

ಬೆಂಗಳೂರು: ಕೊರೊನಾ ಮಹಾಮಾರಿಯ ವಿರುದ್ಧ ದೇಶ ಹೋರಾಡುತ್ತಿದೆ. 21 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿದೆ. ಜನರು ವಿನಾ ಕಾರಣ ಹೊರಬರದಂತೆ ಹಗಲು-ರಾತ್ರಿ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಮನೆಯಿಂದ ಹೊರಬಂದವರ ಮೇಲೆ ಲಾಠಿ ಪ್ರಹಾರವನ್ನು ನಡೆಸುತ್ತಿದ್ದಾರೆ. ಖಾಕಿಗಳ ಕುರಿತಾಗಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರು ಪೊಲೀಸರ ಈ ಹಾಡೊಂದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಕೊರೊನಾ ಹೊಡೆದೋಡಿಸಲು ಜನರು ನಮ್ಮ ಜೊತೆಗೆ ಸಹಕರಿಸಬೇಕು ಎಂದು ಪೊಲೀಸರು ಭಿನ್ನ ಸ್ವರೂಪದಲ್ಲಿ ಜನರ ಗಮನ ಸೆಳೆಯುತ್ತಿದ್ದಾರೆ. ಸದ್ಯ ಲಾಠಿಯನ್ನು ದೂರ ಇಡಿ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್ ಸೂಚನೆಯ ಹಿನ್ನೆಲೆಯಲ್ಲಿ ಹಾಡಿನ ಮೂಲಕ ರಸ್ತೆಯಲ್ಲಿ ಚಿತ್ರ ಬಿಡಿಸುವ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಇದೇ ಮಾದರಿಯಲ್ಲಿ ಬೆಂಗಳೂರು ಪೊಲೀಸರು "ಶೂಟ್‌ ಕೊರೊನಾ ನೆಮ್ಮದಿ ಪಡೆಯೋಣ" ಎಂದು ಹಾಡನ್ನು ಹಾಡಿ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಪೊಲೀಸರು ಹಾಡಿದ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೊರೊನಾದಂತಹಾ ಸಂಕಷ್ಟದ ಸಮಯದಲ್ಲೂ ಪೊಲೀಸರ ಪರಿಸ್ಥಿತಿ ಹೇಗಿರುತ್ತದೆ, ಅವರ ಕುಟುಂಬದ ಆತಂಕ ಏನು ಎಂಬುವುದನ್ನು ಈ ವಿಡಿಯೋ ಹಾಡಿನ ಮೂಲಕ ತೋರಿಸಿದ್ದಾರೆ. ಅಲ್ಲದೆ ಬೆಂಗಳೂರು ನಗರದಲ್ಲಿ ಪೊಲೀಸರು ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂಬವುದು ಹಾಡಿನ ವಿಡಿಯೋದಲ್ಲಿ ತೊರಿಸಲಾಗಿದೆ. ಹೀಗೆ ಪೊಲೀಸರಲ್ಲೂ ಆತ್ಮವಿಶ್ವಾಸ ಮೂಡಿಸುವ ಹಾಗೂ ಅವರಲ್ಲಿ ಉತ್ಸಾಹ ತುಂಬುವುದರ ಜೊತೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ವಿಡಿಯೋ ಹಾಡನ್ನು ತಯಾರಿಸಲಾಗಿದೆ. ಪೊಲೀಸರು ಈ ವಿಭಿನ್ನ ಪ್ರಯತ್ನಕ್ಕೆ ನೆಟ್ಟಿಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಲಾಠಿಯ ಬದಲಾಗಿ ವಿಭಿನ್ನವಾಗಿ ಜನರಲ್ಲಿಅರಿವು ಮೂಡಿಸುವ ಮೂಲಕ ಅವರನ್ನು ವಿಶ್ವಾಸಕ್ಕೆ ಪಡೆದುಕೊಳ್ಳುವ ಪೊಲೀಸರ ಈ ಪ್ರಯತ್ನ ಶ್ಲಾಘನೀಯ.


from India & World News in Kannada | VK Polls https://ift.tt/39vGJhu

ಕೊರೊನಾದಿಂದ ಸತ್ತವರಲ್ಲಿ 10 ಮಂದಿ ದಿಲ್ಲಿಯ ಜಮಾತ್‌ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು!

ಹೊಸದಿಲ್ಲಿ: ರಾಷ್ಟ್ರದಲ್ಲಿ ವೈರಸ್‌ನಿಂದಾಗಿ ಸಂಭವಿಸಿದ 10 ಸಾವು ಮತ್ತು 300 ಶಂಕಿತ ಪ್ರಕರಣಗಳಿಗೆ ದಿಲ್ಲಿಯ ನಿಜಾಮುದ್ದಿನ್‌ ವೆಸ್ಟ್‌ನಲ್ಲಿರುವ ತಬ್ಲಿಘಿ ಜಮಾತ್‌ ಧಾರ್ಮಿಕ ಸಭೆಗೆ ನೇರ ಸಂಪರ್ಕವಿರುವುದು ಕಂಡು ಬಂದಿದ್ದು, ಆತಂಕ ಮೂಡಿಸಿದೆ. ಈ ಸಭೆಯಲ್ಲಿ ಪಾಲ್ಗೊಂಡವರ ಪೈಕಿ ಹಲವರು ದೇಶಾದ್ಯಂತ ಪ್ರಯಾಣಿಸಿದ್ದು ಭೀತಿಗೆ ಕಾರಣವಾಗಿದೆ. ಪ್ರಸಕ್ತ ತಿಂಗಳ ಮೊದಲ ವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ವಿದೇಶಿಗರು ಸೇರಿದಂತೆ ರಾಷ್ಟ್ರಾದ್ಯಂತ ಹಲವು ಮಂದಿ ಭಾಗವಹಿಸಿದ್ದರು. ಜಮಾತ್‌ ಸಭೆಯಲ್ಲಿ ಭಾಗವಹಿಸಿದ್ದ 9 ಮಂದಿ ಭಾರತೀಯರು ಈಗಾಗಲೇ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ತುಮಕೂರಿನ ಓರ್ವ ಸೇರಿದಂತೆ ತೆಲಂಗಾಣದಿಂದ 6 ಮಂದಿ, ತಮಿಳುನಾಡು ಮತ್ತು ಜಮ್ಮು ಕಾಶ್ಮೀರದಿಂದ ತಲಾ ಒಬ್ಬರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮತ್ತೋರ್ವ ವಿದೇಶಿಗ, ಫಿಲಿಫಿಯನ್‌ ಕೋವಿಡ್‌-19 ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ ಇಸ್ಲಾಮಿಕ್‌ ಮಿಷನರಿಯ ಹಿಂಬಾಲಕರ ಪೈಕಿ 19 ವಿದೇಶಿಗರಿಗೆ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಮೂಲಗಳ ಪ್ರಕಾರ ನಿಜಾಮುದ್ದಿನ್‌ ಮಸೀದಿಯೊಳಗೆ 1,500 ಮಂದಿ ನೆಲೆಸಿದ್ದಾರೆ. ಈ ಪೈಕಿ ಕನಿಷ್ಠ 300 ಮಂದಿ ಜ್ವರ, ಕೆಮ್ಮ ಮತ್ತು ಉಸಿರಾಟ ತೊಂದರೆಯಿಂದ ನರಳುತ್ತಿದ್ದಾರೆ. ಹಲವರನ್ನು ಈಗಾಗಲೇ ಸ್ಥಳೀಯ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಈ ಪೈಕಿ 85 ಧರ್ಮಗುರುಗಳು ಸೇರಿದ್ದಾರೆ. ಈ ಪ್ರದೇಶದಲ್ಲಿ ಸಂಪೂರ್ಣ ಲಾಕ್‌ಡೌನ್‌ ಹೇರಲಾಗಿದೆ. ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಸೋಂಕು ಹರಡದಂತೆ ತಡೆಯಲು ಹರಸಾಹಸ ಪಡುತ್ತಿದ್ದಾರೆ. ಬೆಂಗಾಲ್‌ ವಾಲಿ ಮಸ್ಜಿದ್‌ ಎಂದು ಕರೆಯಲ್ಪಡುವ ಜಮಾನ್‌ನ ಮುಖ್ಯಕೇಂದ್ರಕ್ಕೆ ಸೀಲ್‌ ಮಾಡಲಾಗಿದ್ದು, ಮಸೀದಿಯಲ್ಲಿ ಉಳಿದುಕೊಂಡಿರುವವರಿದೆ ಕೋವಿಡ್‌-19 ಪರೀಕ್ಷೆ ನಡೆಸಲಾಗುತ್ತಿದೆ. ಏನಿದು ತಬ್ಲಿಘಿ ಜಮಾತ್ ಧಾರ್ಮಿಕ ಸಭೆ?1926ರಲ್ಲಿ ತಬ್ಲಿಘಿ ಜಮಾತ್‌ ಹುಟ್ಟಿಕೊಂಡಿತು. ಇದು ಇಸ್ಲಾಮಿಕ್‌ ಮಿಷನರಿಯ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿದೆ. ಪ್ರವಾದಿ ಮುಹಮ್ಮದ್‌ ಜೀವನದ ಅನುಸರಣೆಯನ್ನು ಇಲ್ಲಿ ಪ್ರಮುಖವಾಗಿ ಬೋದಿಸಲಾಗುತ್ತದೆ. ಮುಸ್ಲಿಮ್‌ ಧರ್ಮ ಬೋದಕ ಮೌಲಾನಾ ಮುಹಮ್ಮದ್‌ ಇಲ್ಯಾಸ್‌ ಇದನ್ನು ಸ್ಥಾಪನೆ ಮಾಡಿದ್ದಾರೆ. ದಿಲ್ಲಿಯ ನಿಜಾಮುದ್ದಿನ್‌ನಲ್ಲಿರುವ ತಬ್ಲಿಘಿ ಜಮಾತ್‌ ಅನುಯಾಯಿಗಳು ವಿಶ್ವಾದ್ಯಂತ ಇದ್ದಾರೆ. ಥೈಲೆಂಡ್‌, ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದ ಹೆಚ್ಚಿನ ಅನುಯಾಯಿಗಳು ಆಗಮಿಸುತ್ತಾರೆ. ಸಯೀದ್‌ ಅನ್ವರ್‌ ಸೇರಿದಂತೆ ಹಲವು ಪಾಕಿಸ್ತಾನಿ ಕ್ರಿಕೆಟ್‌ ಆಟಗಾರರು ಜಮಾತ್‌ಅನ್ನು ಅನುಸರಿಸುತ್ತಾರೆ. ಕೊರೊನಾ-ಜಮಾತ್‌ ಸಭೆ ನಡುವಣ ಪ್ರಮುಖ ಅಂಶಗಳು
  • ಇತ್ತೀಚೆಗೆ ನಡೆದ ತಬ್ಲಿಘಿ ಜಮಾತ್‌ ಸಭೆಯಲ್ಲಿ 250 ವಿದೇಶಿಗರು ಸೇರಿದಂತೆ 1,700-1,800 ಮಂದಿ ಭಾಗವಹಿಸಿದ್ದರು.
  • ತಬ್ಲಿಘಿ ಸಭೆಯಲ್ಲಿ ಭಾಗವಹಿಸಿದವರಲ್ಲಿ ಕೊರೊನಾದಿಂದ ಮೃತ ಪಟ್ಟವರ ಸಂಖ್ಯೆ 10.
  • ಲೋಕ ನಾಯಕ ಆಸ್ಪತ್ರೆಯಲ್ಲಿ ಕೊರೊನಾ ವೈರಸ್‌ಗೆ ಸಂಬಂಧಿಸಿ ದಾಖಲಾದ 285 ಮಂದಿ ತಬ್ಲಿಘಿ ಸಭೆಯಲ್ಲಿ ಭಾಗವಹಸಿದ್ದರು
  • ತೆಲಂಗಾಣ: ಸೋಮವಾರ ಸಾವನ್ನಪ್ಪಿದ ಐದು ಮಂದಿ ಸೇರಿದಂತೆ ಒಟ್ಟು ಆರು ಮಂದಿ ಮೃತರಾಗಿದ್ದಾರೆ. ಇವರೆಲ್ಲರೂ ತಬ್ಲಿಘಿ ಜಮಾತ್‌ ಸಭೆಯಲ್ಲಿ ಪಾಲ್ಗೊಂಡಿದ್ದರು.
  • ಕರ್ನಾಟಕ: ತುಮಕೂರಿನಲ್ಲಿ ಸಾವನ್ನಪ್ಪಿದ ವ್ಯಕ್ತಿ ಜಮಾತ್‌ಗೆ ಭೇಟಿ ನೀಡಿದ್ದ.
  • ಸಭೆಯಲ್ಲಿ ಪಾಲ್ಗೊಂಡಿದ್ದ ತಮಿಳುನಾಡಿನ 65 ವರ್ಷದ ವ್ಯಕ್ತಿ ಕೊರೊನಾದಿಂದ ಮೃತನಾಗಿದ್ದಾರೆ.
  • ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ 65 ವರ್ಷದ ವ್ಯಾಪಾರಿ ಕೊರೊನಾದಿಂದ ಮೃತರಾಗಿದ್ದಾರೆ. ಇವರೂ ಸಭೆಯಲ್ಲಿ ಭಾಗವಹಿಸಿದ್ದರು
  • ಜಮಾತ್‌ನಲ್ಲಿ ಭಾಗವಹಿಸಿದ ಮಂದಿ ರಾಷ್ಟ್ರದ ಹಲವೆಡೆ ಸುತ್ತಿದ್ದಾರೆ. ಉತ್ತರ ಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರಯಾಣ ಮಾಡಿದ್ದಾರೆ. ಸೋಮವಾರ ತೆಲಂಗಾಣದಲ್ಲಿ ಎರಡು ಹೊಸ ಕೋವಿಡ್‌-19 ಪ್ರಕರಣಗಳು ಪತ್ತೆಯಾಗಿವೆ.
  • ದಿಲ್ಲಿಯಲ್ಲಿ ಸೋಮವಾರ ಪತ್ತೆಯಾದ 25 ಹೊಸ ಕೋವಿಡ್‌-19 ಪ್ರಕರಣಗಳ ಪೈಕಿ 18 ಮಂದಿ ನಿಜಾಮುದ್ದಿನ್‌ನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ವೈದ್ಯಕೀಯ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ದಿಲ್ಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 97ಕ್ಕೆ ತಲುಪಿದೆ.
ತಮಿಳುನಾಡಿನ ಕೋವಿಡ್‌-19 ಪ್ರಕರಣಗಳ ಪೈಕಿ ಹೆಚ್ಚಿನವರು ಜಮಾತ್‌ಗೆ ಭೇಟಿ ನೀಡಿದ್ದವರು! ಜಮಾತ್‌ ಸಭೆಯಲ್ಲಿ ಭಾಗವಹಿಸಿ ಬಂದಿದ್ದ 65 ವರ್ಷದ ವ್ಯಕ್ತಿ ಮೃತಪಟ್ಟ ಹಿನ್ನೆಲೆ ತಮಿಳುನಾಡಿನಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಸೋಮವಾರ ಪತ್ತೆಯಾದ ಹೊಸ 38 ಕೋವಿಡ್‌ ಪ್ರಕರಣಗಳ ಪೈಕಿ ಹೆಚ್ಚಿನವರು ಜಮಾತ್‌ ಭೇಟಿ ನೀಡಿದ್ದವರೇ ಆಗಿದ್ದಾರೆ. ಒಟ್ಟಾರೆ ಹೊಸದಿಲ್ಲಿಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ತಮಿಳುನಾಡಿಗೆ ವಾಪಸಾದ 980 ತಮಿಳು ಮುಸ್ಲಿಮರ ಮೇಲೆ ನಿಗಾ ಇರಿಸಲಾಗಿದೆ. ಕೋಯಮತ್ತೂರಿನ 28, ಈರೋಡೆಯ 10 ಮಂದಿ ಸೇರಿದ್ದಾರೆ ಎಂದು ಸಿಎಂ ಎಡಪ್ಪಾಡಿ ಕೆ ಪಳನಿಸಾಮಿ ಸ್ಪಷ್ಟಪಡಿಸಿದ್ದಾರೆ. ಜಮಾತ್‌ನಲ್ಲಿ ಪಾಲ್ಗೊಂಡಿದ್ದ ಓರ್ವ ಫಿಲಿಪ್ಪಿಯನ್‌ ಮುಂಬಯಿನಲ್ಲಿ ಸಾವು, ಇಬ್ಬರಲ್ಲಿ ಕೊರೊನಾ ದೃಢ! ಮಾರ್ಚ್‌ 22ಕ್ಕೆ ಮುಂಬಯಿನಲ್ಲಿ ಫಿಲಿಪ್ಪಿಯನ್‌ ರಾಷ್ಟ್ರದ ವ್ಯಕ್ತಿ ಸಾವನ್ನಪ್ಪಿದ್ದ. ಈತ ಜಮಾತ್‌ನಲ್ಲಿ ಭಾಗವಹಿಸಿದ್ದ ಫಿಲಿಪ್ಪಿಯನ್‌ನ 10 ಮಂದಿ ತಂಡದ ಸದಸ್ಯ. ಈ ಗುಂಪಿನ ಮತ್ತಿಬ್ಬರಲ್ಲಿ ಕೊರೊನಾ ಸೋಂಕು ದೃಢ ಪಟ್ಟಿದೆ. ಮಸೀದಿಯ ಕಾರ್ಯದರ್ಶಿ, ಮಸೀದಿಯ ಅಧಿಕಾರಿಯ ಮಗ ಮತ್ತು ಸೊಸೆಗೆ ಕೊರೊನಾ ಹರಡಿರುವುದು ಮಾರ್ಚ್‌ 26ರಂದು ಖಾತರಿಯಾಗಿದೆ. ಮಾರ್ಚ್ 27ರಂದು ಆತನ ಮೊಮ್ಮಗನಿಗೂ ಕೊರೊನಾ ತಗುಲಿರುವುದು ದೃಢಪಟ್ಟಿದೆ.


from India & World News in Kannada | VK Polls https://ift.tt/2ymbRmZ

ಇಂದಿನ ಚುಟುಕು ಸುದ್ದಿಗಳು: ಕೊರೊನಾ ಪರಿಸ್ಥಿತಿ ನಿರ್ವಹಣೆ, ಇಂದು ಕಾಂಗ್ರೆಸ್ ಕಾರ್ಯಪಡೆಯ ಮೊದಲ ಸಭೆ

ಬೆಂಗಳೂರು: ಕೊರೊನಾ ಪರಿಸ್ಥಿತಿ ನಿರ್ವಹಣೆ, ಇಂದು ಕಾಂಗ್ರೆಸ್ ಕಾರ್ಯಪಡೆಯ ಮೊದಲ ಸಭೆ ಕೊರೋನಾ ಸೋಂಕು ನಿಯಂತ್ರಣ ಹಾಗೂ ಪರಿಸ್ಥಿತಿ ನಿರ್ವಹಣೆಗೆ ರಚಿಸಲಾಗಿರುವ ಕಾಂಗ್ರೆಸ್ ಕಾರ್ಯಪಡೆಯ ಮೊದಲ ಸಭೆ ಮಾ.31 ರಂದು ಮಂಗಳವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು, ಕಾರ್ಯಪಡೆಯ ಮುಖ್ಯಸ್ಥರು ಹಾಗೂ ಸದಸ್ಯರುಗಳು ಭಾಗವಹಿಸಲಿದ್ದಾರೆ. ಮೈಸೂರು: ಕರ್ಫ್ಯೂ ಉಲ್ಲಂಘನೆ: ಕಾರು ಮಾಲೀಕರಿಗೆ ಪೊಲೀಸರಿಂದ ನೋಟಿಸ್! ಮೈಸೂರಿನಲ್ಲಿ ಮನೆಯಿಂದ ಹೊರಬಂದು ಕಾರಿನಲ್ಲಿ ಓಡಾಡಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ. ಸಿಸಿಟಿವಿ ಫೂಟೇಜ್ ಆಧಾರದ ಮೇಲೆ ಕ್ರಮಕ್ಕೆ ಮುಂದಾಗಿರುವ ಪೊಲೀಸರು, ಕಾರು ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಮೈಸೂರು ನಗರದಲ್ಲಿ ಅನಗತ್ಯ ವಾಗಿ ರಸ್ತೆಗಿಳಿದ 303 ವಾಹನಗಳನ್ನು ಮೈಸೂರು ನಗರ ಪೊಲೀಸರು ವಶಪಡಿಸಿಕೊಂಡಿದ್ದು, ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಹಾಸನದಲ್ಲಿ ತರಕಾರಿ ಖರೀದಿಗೆ ನಗರ ಬಸ್ ನಿಲ್ದಾಣ,ಜಿಲ್ಲಾ ಕ್ರೀಡಾಂಗಣದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.


from India & World News in Kannada | VK Polls https://ift.tt/2JpMfb3

ಕೇರಳದಲ್ಲಿ ಗುಣಮುಖರಾದವರಿಗೆ ಕೇಕ್‌ ಕೊಟ್ಟು ಬೀಳ್ಕೊಟ್ಟ ಆಸ್ಪತ್ರೆ ಸಿಬ್ಬಂದಿ

ಕೊರೊನಾ ವೈರಸ್ ಲೈವ್ ಅಪ್ಡೇಟ್ಸ್: ದೇಶದಲ್ಲಿ 1300 ಗಡಿ ದಾಟಿದ ಸೋಂಕಿತ ಪ್ರಕರಣ!

ಚೀನಾದ ನಲ್ಲಿ ಮೊದಲು ಪತ್ತೆಯಾಗಿದ್ದ ವಿಶ್ವಾದ್ಯಂತ 30,000ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. ಭಾರತ ಸೇರಿ ಒಟ್ಟು 195ರಾಷ್ಟ್ರಗಳಿಗೂ ಹೆಚ್ಚು ಕಡೆ ವೈರಸ್ ಹರಡಿದೆ. ಭಾರತದಲ್ಲಿ 1300ಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಕರ್ನಾಟಕದಲ್ಲಿ 90ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಲೈವ್ ಮಾಹಿತಿ ವಿವರಣೆ ಇಲ್ಲಿದೆ. ಮಾರ್ಚ್ 30ರ ದೇಶದ ಕ್ಷಣ ಕ್ಷಣದ ಮಾಹಿತಿ:- -ದೇಶದಲ್ಲಿ ಒಟ್ಟು 1347 ಪ್ರಕರಣ ದಾಖಲಾಗಿದ್ದು, 43 ಮಂದಿ ಸಾವನ್ನಪ್ಪಿದ್ದಾರೆ. -ಕೇರಳ ಎರಡನೇ ಸ್ಥಾನದಲ್ಲಿದ್ದು, ಕೇರಳದಲ್ಲಿ 234 ಪ್ರಕರಣ ದಾಖಲಾಗಿದೆ. ಇದರಲ್ಲಿ 20 ಮಂದಿ ಗುಣಮುಖರಾಗಿದ್ದು, 1 ಸಾವಾಗಿದೆ. -ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಪ್ರಕರಣ ಬೆಳಕಿಗೆ ಬಂದಿದ್ದು, ಈವರೆಗೆ 238 ಪ್ರಕರಣ ದಾಖಲಾಗಿದೆ. ಇದರಲ್ಲಿ 39 ಜನ ಗುಣಮುಖರಾಗಿದ್ದಾರೆ. 10 ಮಂದಿ ಸಾವನ್ನಪ್ಪಿದ್ದಾರೆ.


from India & World News in Kannada | VK Polls https://ift.tt/2Jtr6gi

ಇನ್ನು 16 ದಿನ ಕಟ್ಟುನಿಟ್ಟಾಗಿ ಮನೆಯಲ್ಲಿರಿ, ಲಾಕ್‌ಡೌನ್‌ ವಿಸ್ತರಣೆಗೆ ಅವಕಾಶ ಮಾಡಿಕೊಡದಿರಿ!

ಬೆಂಗಳೂರು: 21 ದಿನಗಳ ಲಾಕ್‌ಡೌನ್‌ ಅವಧಿ ವಿಸ್ತರಿಸುವ ಯೋಚನೆ ಸದ್ಯಕ್ಕಿಲ್ಲಎಂದು ಕೇಂದ್ರ ಸರಕಾರ ಸೋಮವಾರ ಪ್ರಕಟಿಸಿದ ನಡುವೆಯೇ ಮುಖ್ಯಮಂತ್ರಿಗಳು ಈ ಕಠಿಣ ಸಂದೇಶ ರವಾನಿಸಿದ್ದಾರೆ. ದೇಶಾದ್ಯಂತ ಎಲ್ಲರೂ ಮನೆಯೊಳಗೆ ಬಂಧಿಗಳಾದರೆ ಮಾತ್ರ ವೈರಸ್‌ ಹರಡುವಿಕೆಯನ್ನು ತಡೆಗಟ್ಟಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಎಚ್ಚರಿಕೆ ನೀಡಿದ್ದರು. ಆದರೂ ದೇಶದ ನಾನಾ ಭಾಗಗಳಲ್ಲಿ ನಿಯಮಗಳ ಉಲ್ಲಂಘನೆ ನಡೆಯುತ್ತಿರುವುದು ಲಾಕ್‌ಡೌನ್‌ ಅವಧಿಯನ್ನು ವಿಸ್ತರಿಸುವ ಭೀತಿಯನ್ನು ಹುಟ್ಟಿಸಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ''ಲಾಕ್‌ಡೌನ್‌ ಅವಧಿ ಬೇಗ ಮುಗಿಯಬೇಕೆಂದರೆ ನೀವು ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕು. ನಿಮ್ಮ ಆಹಾರ, ಊಟಕ್ಕೆ ತೊಂದರೆಯಾಗದಂತೆ ಸರಕಾರ ನೋಡಿಕೊಳ್ಳುತ್ತಿದೆ. ಸುಳ್ಳು ಸುದ್ದಿ, ವದಂತಿಗಳಿಗೆ ಕಿವಿಗೊಡಬೇಡಿ. ನೀವು ಎಷ್ಟು ಕಟ್ಟುನಿಟ್ಟಿನಿಂದ ಮನೆಯಲ್ಲಿರುತ್ತೀರೋ ಅದರ ಮೇಲೆ ಲಾಕ್‌ಡೌನ್‌ ಅಂತ್ಯವಾಗುತ್ತದೆ. ಬೇಗ ಎಂದರೆ ಏಪ್ರಿಲ್‌ 14ಕ್ಕೆ ಲಾಕ್‌ಡೌನ್‌ ಅವಧಿ ಮುಗಿಯುತ್ತದೆ. ಹಾಗಾಗಿ ಇದನ್ನು ಕಟ್ಟುನಿಟ್ಟಾಗಿ ಪಾಲಿಸಿ ಲಾಕ್‌ಡೌನ್‌ ಕೊನೆಗೊಳ್ಳಲು ಅವಕಾಶ ಮಾಡಿಕೊಡಿ,'' ಎಂದು ಕಿವಿಮಾತು ಹೇಳಿದರು. ಕೊರೊನಾ ನಮ್ಮ ತಾಳ್ಮೆ ಪರೀಕ್ಷಿಸಲೆಂದೇ ಬಂದಿರುವ ವಿಪತ್ತಾಗಿದೆ. 21 ದಿನದ ಲಾಕ್‌ಡೌನ್‌ ವಿಧಿಸಿದ್ದಕ್ಕೆ ಪ್ರಧಾನಿಯವರೇ ಕ್ಷಮೆ ಕೇಳಿದ್ದಾರೆ. ಪ್ರಧಾನಿ ಕ್ಷಮೆ ಕೇಳುವ ಅನಿವಾರ್ಯತೆ ಇದೆಯೆಂದರೆ ಪರಿಸ್ಥಿತಿಯ ಗಂಭೀರತೆಯನ್ನು ರಾಜ್ಯದ ಜನರೂ ಅರ್ಥ ಮಾಡಿಕೊಳ್ಳಬೇಕು. - ಬಿ.ಎಸ್‌. ಯಡಿಯೂರಪ್ಪ, ಸಿಎಂ ಕಫ್ರ್ಯೂ ಧಿಕ್ಕರಿಸಬೇಡಿರಾಜ್ಯದಲ್ಲಿ ಕಫ್ರ್ಯೂ ಜಾರಿಯಲ್ಲಿದ್ದರೂ ಕೆಲವು ನಗರ ಪ್ರದೇಶಗಳಲ್ಲಿನ ಜನರು ಅದನ್ನು ಧಿಕ್ಕರಿಸಿ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಇದನ್ನು ಬಿಟ್ಟು ಮನೆಯಲ್ಲೆ ಇದ್ದು ಲಾಕ್‌ಡೌನ್‌ ಆದೇಶ ಪಾಲಿಸಿ. ಪೊಲೀಸರು ನಿಮ್ಮ ವೈರಿಗಳಲ್ಲ. ಅವರು ನಿಮ್ಮ ಹಿತವನ್ನೇ ಬಯಸುತ್ತಾರೆ. ಅವರು ಕಾನೂನು ಕೈಗೆತ್ತಿಕೊಳ್ಳುವ ಅನಿವಾರ್ಯತೆ ಸೃಷ್ಟಿಸಬೇಡಿ ಎಂದು ಸಿಎಂ ಮನವಿ ಮಾಡಿದ್ದಾರೆ. ''ಇನ್ನು 16 ದಿನ ಮನೆಯಲ್ಲೇ ಇರಿ. ಇದರಿಂದ ನಿಮಗೆ ಹಾಗೂ ದೇಶಕ್ಕೆ ಒಳ್ಳೆಯದಾಗುತ್ತದೆ. ಕೊರೊನಾ ಸೋಂಕಿಗೆ ಒಳಗಾದವರ ಪ್ರಾಣ ಉಳಿಸಲು ಸತತವಾಗಿ ಕೆಲಸ ಮಾಡುತ್ತಿರುವ ವೈದ್ಯರು, ನರ್ಸ್‌ಗಳು, ಆರೋಗ್ಯ ಸಿಬ್ಬಂದಿ ಹಾಗೂ ನಾಗರಿಕ ಸೇವೆಯಲ್ಲಿ ತೊಡಗಿರುವ ಕಾರ್ಯಕರ್ತರಿಗೆ ನಾವು ನೈತಿಕ ಸ್ಥೈರ್ಯ ಹೇಳಬೇಕು. ಅವರ ಮನೋಬಲ ಕುಗ್ಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ,'' ಎಂದು ಹೇಳಿದ್ದಾರೆ. ಬಡಾವಣೆಗಳಲ್ಲೇ ದಿನಸಿ, ತರಕಾರಿಬೆಂಗಳೂರಿನಲ್ಲಿ ತರಕಾರಿ, ದಿನಸಿ ಪದಾರ್ಥಗಳನ್ನು ಸ್ಥಳೀಯವಾಗಿ ಬಡಾವಣೆಗಳಲ್ಲೇ ಒದಗಿಸುವ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಪೊಲೀಸ್‌ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ''ಜನರು ನಡೆದುಕೊಂಡೇ ಅಂಗಡಿಗೆ ಹೋಗಿ ಬರಬೇಕು. ವಾಹನ ಬಳಕೆಗೆ ಅವಕಾಶ ನೀಡಬಾರದು. ಮನೆಗೆ ಹತ್ತಿರದಲ್ಲಿ ಅಂಗಡಿಗಳು ಇರುವುದರಿಂದ ನಡೆದುಕೊಂಡು ಹೋಗುವುದು ಕಷ್ಟವಲ್ಲ,'' ಎಂದರು. ಬಾಡಿಗೆಗೆ ಒತ್ತಡ ಹೇರಬೇಡಿ: ಬಾಡಿಗೆ ನೀಡುವಂತೆ ಬಾಡಿಗೆ ಮನೆ, ಪಿಜಿಯಲ್ಲಿರುವ ವೈದ್ಯರು, ನರ್ಸ್‌, ಇತರರಿಗೆ ಮನೆ ಮಾಲೀಕರು ಒತ್ತಡ ತರಬಾರದು. ಅಂತಹ ತೊಂದರೆ ಕೊಟ್ಟರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ವಲಸಿಗರಿಗೆ ಊಟ, ವಸತಿ''ಹೊಸ ಮಾರ್ಗಸೂಚಿ ಅನುಸಾರ ವಲಸಿಗ ಕಾರ್ಮಿಕರು ಈಗ ಇದ್ದಲ್ಲಿಯೇ ಇರಬೇಕು. ಬೆಂಗಳೂರಿನಲ್ಲಿರುವ ಕಾರ್ಮಿಕರಿಗೆ ಕಲ್ಯಾಣ ಮಂಟಪಗಳಲ್ಲಿ ವಸತಿ ಕಲ್ಪಿಸಿ ಊಟದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಪ್ರತಿ ವಾರ್ಡ್‌ನಲ್ಲೂ ಈ ಅಗತ್ಯ ಆಧರಿಸಿ ಈ ಸೌಲಭ್ಯ ನೀಡುವಂತೆ ಬಿಬಿಎಂಪಿಗೆ ಸೂಚಿಸಲಾಗಿದೆ. ಈ ಕಾರ್ಮಿಕರ ರಕ್ಷಣೆಗೆ ಗಮನ ಹರಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಇತರ ಜಿಲ್ಲೆಗಳಲ್ಲೂ ಇದೇ ರೀತಿಯ ವಲಸೆ ಕಾರ್ಮಿಕರಿಗೆ ಇದೇ ರೀತಿಯ ವ್ಯವಸ್ಥೆ ಮಾಡಲು ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ,'' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.


from India & World News in Kannada | VK Polls https://ift.tt/2xzeHEH

ಕರ್ನಾಟಕ-ಕೇರಳ ಗಡಿ ಬಂದ್‌ ತೆರವಿಗೆ ಆಗ್ರಹ, ಕಾಸರಗೋಡು ಸಂಸದನಿಂದ ಸುಪ್ರೀಂಗೆ ಮೊರೆ

ಹೊಸದಿಲ್ಲಿ: ಹರಡುವುದರ ನಿಯಂತ್ರಣಕ್ಕಾಗಿ ಕೇರಳ ಹಾಗೂ ಕರ್ನಾಟಕದ ನಡುವಿನ ಗಡಿ ಬಂದ್‌ ಮಾಡಿರುವುದನ್ನು ತೆರವುಗೊಳಿಸುವಂತೆ ಕೇರಳದ ಕಾಂಗ್ರೆಸ್‌ ರಾಜಮೋಹನ್‌ ಉನ್ನೀಥನ್‌ ಮೊರೆ ಹೋಗಿದ್ದಾರೆ. ಕರ್ನಾಟಕ - ಕೇರಳ ಗಡಿ ಬಂದ್‌ನಿಂದ ಆಂಬುಲೆನ್ಸ್‌ ಹಾಗೂ ತುರ್ತು ಸೇವೆಯ ವಾಹನಗಳಿಗೆ ವಿನಾಯಿತಿ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಕಾಸರಗೋಡು ಸಂಸದ ರಾಜಮೋಹನ್‌ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲೂ ತಲಪ್ಪಾಡಿಯ ಬಳಿಯ ಮಂಗಳೂರು - ಕಾಸರಗೋಡು ರಸ್ತೆಯ ಬಂದ್‌ ತೆರವುಗೊಳಿಸಲು ಕರ್ನಾಟಕ ಸರಕಾರಕ್ಕೆ ಸೂಚಿಸುವಂತೆ ಮನವಿ ಮಾಡಿದ್ದಾರೆ. ಸಂಸದ ರಾಜಮೋಹನ್‌ ಉನ್ನೀಥನ್‌ ಸಲ್ಲಿಸಿರುವ ಅರ್ಜಿಯಲ್ಲಿ ಆಂಬುಲೆನ್ಸ್‌, ತುರ್ತು ವಾಹನಗಳು, ಅಗತ್ಯ ಉತ್ಪನ್ನ ಪೂರೈಸುವ ವಾಹನಗಳಿಗೆ ಗಡಿಯಲ್ಲಿ ಅನುಮತಿ ನೀಡಲು ಕರ್ನಾಟಕ ಸರಕಾರಕ್ಕೆ ಸೂಚಿಸಿ ಹಾಗೂ ಇತರ ರಾಜ್ಯಗಳ ವಾಹನಗಳಿಗೆ ವಿಧಿಸಿರುವ ನಿರ್ಬಂಧದ ಮೇಲೆ ತಡೆ ನೀಡುವಂತೆ ಕೇಳಿದ್ದಾರೆ. ಇದರ ಜೊತೆ ಇಬ್ಬರು ನಾಗರಿಕರ ಸಾವಿಗೆ ಕಾರಣರಾದ ಪೊಲೀಸರ ಮೇಲೆ ಎಫ್‌ಐಆರ್‌ ದಾಖಲಿಸಿ, ವಿಶೇಷ ತನಿಖಾ ದಳದಿಂದ ವಿಚಾರಣೆ ನಡೆಸಲು ಕರ್ನಾಟಕಕ್ಕೆ ನಿರ್ದೇಶಿಸಿ ಎಂದು ಅವರು ಹೇಳಿದ್ದಾರೆ. ಗಡಿ ಬಂದ್‌ ಮಾಡಿರುವುದರಿಂದ ವೈದ್ಯಕೀಯ ಉತ್ಪನ್ನಗಳ ಪೂರೈಕೆಗೆ ಸಮಸ್ಯೆಯಾಗಿದೆ. ಇದು 21 ಹಾಗೂ 19 (ಡಿ) ವಿಧಿಗಳ ಸ್ಪಷ್ಟ ಉಲ್ಲಂಘನೆ ಎಂದು ರಾಜಮೋಹನ್‌ ಹೇಳಿದ್ದಾರೆ. ಸುಪ್ರೀಂಗೆ ಸಲ್ಲಿಸಿರುವ ಅರ್ಜಿಯಲ್ಲಿ ಭಾನುವಾರ ಆಂಬುಲೆನ್ಸ್‌ಗೆ ಮಂಗಳೂರಿಗೆ ಹೋಗಲು ಅವಕಾಶ ನಿರಾಕರಿಸಿದ್ದಕ್ಕೆ, 70 ವರ್ಷದ ವೃದ್ಧ ಮಹಿಳೆ ಸಾವಿಗೀಡಾದ ಪ್ರಕರಣನ್ನು ಪ್ರಸ್ತಾಪಿಸಲಾಗಿದೆ. ಕರ್ನಾಟಕ ಸರಕಾರ 21ನೇ ವಿಧಿಯನ್ವಯ ನೀಡಿರುವ ಗೌರವಯುತವಾಗಿ ಜೀವಿಸುವ ಹಕ್ಕನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ಹೇಳಲಾಗಿದೆ. ಕಾಸರಗೋಡು ಸಂಸದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಮುನ್ನವೇ ಭಾನುವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಗಡಿ ಬಂದ್ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಆಗ್ರಹಿಸಿದ್ದರು. ಕೇರಳದಲ್ಲಿ ಅತಿಹೆಚ್ಚು ಕೊರೊನಾ ಪಾಸಿಟಿವ್‌ ಪ್ರಕರಣಗಳು ಕಾಸರಗೋಡಿನಲ್ಲಿ ಕಂಡುಬಂದಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ರಾಜ್ಯ ಸರಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಗಡಿ ಬಂದ್‌ ಮಾಡುವ ನಿರ್ಧಾರ ಕೈಗೊಂಡಿತ್ತು.


from India & World News in Kannada | VK Polls https://ift.tt/3bzpL3f

ಏ.7ರೊಳಗಾಗಿ ತೆಲಂಗಾಣದಲ್ಲಿ ಕೊರೊನಾ ಇರಲ್ಲ:ಕೆಸಿಆರ್ ಭರವಸೆಯ ನುಡಿ!

ಹೈದರಾಬಾದ್: ರಾಜ್ಯದಲ್ಲಿ ಕೊರೊನಾ ವೈರಸ್‌ನ್ನು ಮುಂಬರುವ ಏ.7ರೊಳಗಾಗಿ ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ , ವೈರಸ್ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣ ಯಶಸ್ವಿಯಾಗಿದೆ ಎಂದು ಅಭಿಪ್ರಾಯಪಟ್ಟರು. ರಾಜ್ಯದಲ್ಲಿ 70 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 11 ಜನರು ಗುಣಮುಖರಾಗಿದ್ದಾರೆ. ಕೊರೋನಾ ವೈರಸ್ ನೆಗೆಟಿವ್ ಬಂದಿರುವವರನ್ನು ಇಂದು ಡಿಸ್ಚಾರ್ಜ್ ಮಾಡಲಾಗುವುದು ಎಂದು ಕೆಸಿಆರ್ ಮಾಹಿತಿ ನೀಡಿದರು. ಹೊರ ದೇಶಗಳಿಂದ ಬಂದ ಸುಮಾರು 25,937 ಜನರ ಮೇಲೆ ಸರ್ಕಾರ ನಿಗಾ ಇರಿಸಿದ್ದು, ಇವರ ಗೃಹ ಬಂಧನ ಇದೇ ರಂದು ಪೂರ್ಣಗೊಳ್ಳಲಿದೆ ಎಂದು ಕೆಸಿಆರ್ ಹೇಳಿದರು. ನಾಗರಿಕರಿಗೆ ತೊಂದರೆಯಾಗದಂತೆ ರೈತು ಬಜಾರ್‌ಗಳಲ್ಲಿ ತರಕಾರಿ ಹಾಗೂ ಹಣ್ಣು ಮಾರಾಟ ಮಳಿಗೆಗಳನ್ನು ತೆರೆಯಲಾಗಿದ್ದು, ಅಗತ್ಯ ವಸ್ತುಗಳ ಕೊರತೆ ಎದುರಾಗದು ಎಂದು ಕೆಸಿಆರ್ ಇದೇ ವೇಳೆ ಭರವಸೆ ನೀಡಿದರು. ಒಟ್ಟಿನಲ್ಲಿ ತೆಲಂಗಾಣ ಮಾರಕ ಕೊರೊನಾ ವೈರಸ್‌ನ್ನು ಗೆಲ್ಲುವಲ್ಲಿ ಯಶಸ್ವಿಯಾಗಲಿದ್ದು, ಇದೇ ಏ.7ರೊಳಗಾಗಿ ವೈರಸ್‌ನ್ನು ರಾಜ್ಯದಿಂದ ಸಂಪೂರ್ಣವಾಗಿ ಹೊರಹಾಕಲಾಗುವುದು ಎಂದು ಕೆಸಿಆರ್ ಭರವಸೆ ನೀಡಿದ್ದಾರೆ.


from India & World News in Kannada | VK Polls https://ift.tt/2Urhf0A

ಕೋವಿಡ್ 19 ಪರಿಹಾರ ನಿಧಿಗೆ ಸಹಾಯ ಹಸ್ತ ಚಾಚಿದ ವಿರುಷ್ಕಾ!

ಹೊಸದಿಲ್ಲಿ: ವಿರುದ್ಧ ಹೋರಾಡಲು ಇಡೀ ದೇಶವೇ ಒಗ್ಗಟ್ಟಾಗಿ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ದೇಶದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ದೇಶ ಹಾಗೂ ರಾಜ್ಯ ಸರಕಾರ ತಮ್ಮಿಂದಾಗುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಡುವೆ ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಮಾಜದ ಅನೇಕ ಗಣ್ಯರು ನೆರವಾಗುತ್ತಿದ್ದಾರೆ. ಕ್ರಿಕೆಟ್ ಹಾಗೂ ಬಾಲಿವುಡ್ ಸೆಲೆಬ್ರಿಟಿಗಳು ಕೋವಿಡ್ 19 ಪರಿಹಾರ ನಿಧಿಗೆ ತಮ್ಮ ನೆರವನ್ನು ಘೋಷಿಸುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಪತ್ನಿ ಕೂಡಾ ಸಹಾಯಹಸ್ತವನ್ನು ಚಾಚಿದ್ದಾರೆ. ಆದರೆ ಎಷ್ಟು ಮೊತ್ತವನ್ನು ದೇಣಿಗೆ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ. ಬಲ್ಲ ಮೂಲಗಳ ಪ್ರಕಾರ ವಿರುಷ್ಕಾ ಜೋಡಿಯು, ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿಗೆ ಮೂರು ಕೋಟಿ ರೂ.ಗಳ ದೇಣಿಗೆಯನ್ನು ನೀಡಿದ್ದಾರೆ ಎಂಬುದು ತಿಳಿದು ಬಂದಿದೆ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಟ್ವಿಟರ್ ಖಾತೆಯ ಮೂಲಕ ಕೋವಿಡ್ 19 ಪರಿಹಾರ ನಿಧಿಗೆ ಸಹಾಯಧನ ನೀಡುವುದಾಗಿ ಘೋಷಿಸಿದ್ದರು. 'ಅನುಷ್ಕಾ ಮತ್ತು ನಾನು ಪಿಎಂ ಕೇರ್ಸ್ ನಿಧಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬೆಂಬಲವನ್ನು ನೀಡುವುದಾಗಿ ಪ್ರತಿಜ್ಞೆ ಮಾಡುತ್ತಿದ್ದೇವೆ. ಹಲವರ ನೋವು ನೋಡಿದಾಗ ನಮ್ಮ ಹೃದಯವೇ ಒಡೆದು ಹೋಗಿದೆ. ನಮ್ಮ ಈ ದೇಣಿಗೆಯು ನಮ್ಮ ಸಹವರ್ತಿ ನಾಗರಿಕರ ನೋವನ್ನು ಕಡಿಮೆ ಮಾಡಲು ನೆರವಾಗಲಿದೆ ಎಂದು ಭಾವಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಬಾಲಿವುಡ್ ನಟಿ ಕೂಡಾ ಆಗಿರುವ ಅನುಷ್ಕಾ ಶರ್ಮಾ ಕೂಡಾ ವಿರಾಟ್ ಕೊಹ್ಲಿಗೆ ಸಮಾನವಾದ ಟ್ವೀಟ್ ಹಂಚಿದ್ದಾರೆ. ಈ ಮೊದಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು 51 ಕೋಟಿ ರೂ.ಗಳ ನೆರವನ್ನು ಘೋಷಿಸಿತ್ತು. ಭಾರತೀಯ ಮಾಜಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ 50 ಲಕ್ಷ ರೂ., ಕ್ರಿಕೆಟಿಗ ಸುರೇಶ್ ರೈನಾ 52 ಲಕ್ಷ ರೂ. ಸೇರಿದಂತೆ ಅನೇಕ ಕ್ರೀಡಾಪಟುಗಳು ನೆರವಿನ ಹಸ್ತವನ್ನು ಚಾಚಿದ್ದಾರೆ. ಅಂದ ಹಾಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ 25 ಕೋಟಿ ರೂ. ದೇಣಿಗೆ ನೀಡಿ ಗಮನ ಸೆಳೆದಿದ್ದರು. ಏತನ್ಮಧ್ಯೆ 50 ಲಕ್ಷ ರೂ.ಗಳ ಅಕ್ಕಿ ವಿತರಿಸುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಘೋಷಿಸಿದ್ದರು. ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಏಪ್ರಿಲ್ 14ರ ವರೆಗೆ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಕೋವಿಡ್ 19 ಸರಪಳಿಯನ್ನು ಮುರಿಯುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮನೆಯಲ್ಲೇ ಇರುವಂತೆಯೇ ಸೂಚಿಸಲಾಗಿದೆ. ಇದರಂತೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ನಿರಂತರ ಅಂತರಾಳಗಳಲ್ಲಿ ವಿಡಿಯೋ ಸಂದೇಶದ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3dGtBcM

ಐಪಿಎಲ್ ರದ್ದಾಗುವ ಭೀತಿ; 2021 ಮೆಗಾ ಹರಾಜು ನಡೆಯುವುದು ಡೌಟ್!

ಹೊಸದಿಲ್ಲಿ: ಹಾಗೊಂದು ವೇಳೆ ಎಲ್ಲವೂ ಅಂದುಕೊಂಡಂತೆ ನಡೆದಿದ್ದಲ್ಲಿ 2019 ಮಾರ್ಚ್ 29 ಭಾನುವಾರದಂದು ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯು ಭರ್ಜರಿ ಆರಂಭವಾಗಬೇಕಿತ್ತು. ಆದರೆ ಮಾರಣಾಂತಿಕ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 15ರ ವರೆಗೆ ಆವೃತ್ತಿಯನ್ನು ಅಮಾನತಿನಲ್ಲಿಡಲಾಗಿದೆ. ಇನ್ನೊಂದೆಡೆ ಪರಿಸ್ಥಿತಿ ಹದೆಗೆಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಏಪ್ರಿಲ್ 14ರ ವರೆಗೆ ಕಂಪ್ಲೀಟ್ ಲೌಕ್‌ಡೌನ್ ಘೋಷಿಸಿದೆ. ಈ ಅವಧಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜನರಲ್ಲಿ ಮನೆಯಲ್ಲೇ ಉಳಿದುಕೊಳ್ಳುವಂತೆ ಆದೇಶಿಸಲಾಗಿದೆ. ಇದರೊಂದಿಗೆ ಆಯೋಜನೆ ಸಂಬಂಧ ಯಾವುದೇ ಮಾತುಕತೆ ನಡೆಸುವುದು ಪ್ರಾಯೋಗಿಕವೆನಿಸುತ್ತಿಲ್ಲ. ಸದ್ಯ ಬಿಸಿಸಿಐ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ. ಫ್ರಾಂಚೈಸಿಗಳೊಂದಿಗೆ ಯಾವುದೇ ಮಾತುಕತೆಯನ್ನು ನಡೆಸಿಲ್ಲ. ತಜ್ಞರ ಅಭಿಪ್ರಾಯದಂತೆ ಈ ಬಾರಿ ಐಪಿಎಲ್ ಆಯೋಜನೆಯಾಗುವ ಯಾವುದೇ ಲಕ್ಷ್ಮಣಗಳು ಕಾಣಿಸುತ್ತಿಲ್ಲ. ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರೂ ಇನ್ನು ಕೆಲವು ತಿಂಗಳುಗಳ ಕಾಲ ನಿರ್ಬಂಧ ಮುಂದುವರಿಯುವ ಸಾಧ್ಯತೆಯಿದೆ. ವಿದೇಶಿ ವೀಸಾಗಳಿಗೆ ಭಾರತದ ವಿದೇಶಾಂಗ ಸಚಿವಾಲಯವು ಮತ್ತಷ್ಟು ಕಾಲ ನಿರ್ಬಂಧ ವಿಧಿಸಲಿದೆ. ಇದರಿಂದಾಗಿ ವಿದೇಶೀ ಆಟಗಾರರಿಗೆ ಐಪಿಎಲ್‌ನಲ್ಲಿ ಭಾಗವಹಿಸುವುದು ಕಷ್ಟಕರವೆನಿಸಲಿದೆ. ಆರಂಭದಲ್ಲಿ ಯಾವುದೇ ಕಾರಣಕ್ಕೂ ಐಪಿಎಲ್ ಆಯೋಜಿಸಲಿದ್ದೇವೆ ಎಂಬ ಬಿಗು ಪಟ್ಟು ಹಿಡಿದಿದ್ದ ಆಯೋಜಕರು ಈಗ ತಮ್ಮ ನಿಲುವನ್ನು ಸಡಿಲಗೊಳಿಸಿದೆ. ಹಾಗಾಗಿ ಮುಚ್ಚಿದ ಕ್ರೀಡಾಂಗಣದಲ್ಲೂ ಐಪಿಎಲ್ ಆಯೋಜಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆಟಗಾರರ ಜೊತೆಗೆ ಅಭಿಮಾನಿಗಳ ಸುರಕ್ಷತೆಗೂ ಮೊದಲ ಆದ್ಯತೆ ಕೊಡಲಾಗುತ್ತಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮುಂದಿನ ಕೆಲವು ತಿಂಗಳುಗಳ ಕಾಲ ಯಾವುದೇ ಕ್ರೀಡಾ ಚಟುವಟಿಕೆ ನಡೆಸುವುದು ಕಷ್ಟ ಸಾಧ್ಯವೆನಿಸಿದೆ. ಇವೆಲ್ಲದರ ನಡುವೆ 2021ನೇ ಐಪಿಎಲ್ ಆವೃತ್ತಿಗೂ ಮೊದಲು ನಡೆಯಬೇಕಾಗಿರುವ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಸಹ ನಡೆಯುವುದು ಅನುಮಾನವೆನಿಸಿದೆ. ಈ ಬಗ್ಗೆ ಐಪಿಎಲ್ ಆಡಳಿತ ಮಂಡಳಿಯಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ ಈಗಿನ ಪರಿಸ್ಥಿತಿಯನ್ನು ಗಮನಿಸಿದಾಗ ಐಪಿಎಲ್ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಮುಂದಿನ ವರ್ಷವೂ ಇದೇ ಟೀಮ್ ಸಂಯೋಜನೆಯನ್ನೇ ಮುಂದುವರಿಸುವ ಸಾಧ್ಯತೆಯಿದೆ. ಹಾಗಾಗಿ ಮೆಗಾ ಐಪಿಎಲ್ ಹರಾಜು ಮತ್ತಷ್ಟು ಮುಂದಕ್ಕೆ ಹೋಗುವ ಸಾಧ್ಯತೆಯಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2UPNp57

ಪ್ರಧಾನಿ ಮೋದಿಯಿಂದ ದೇಶಾದ್ಯಂತ ಇಂಟರ್‌ನೆಟ್‌ ಬಂದ್‌! ಈ ಸುದ್ದಿಯ ಅಸಲಿಯತ್ತೇನು?

ಹಕ್ಕು ಕೊರೊನಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ವದಂತಿಗಳ ಕಾರಣದಿಂದಾಗಿ ದೇಶದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲು ಆದೇಶಿಸಲಾಗಿದೆ ಎಂಬ ಪ್ರಧಾನಿ ಮೋದಿಯವರ ಚಿತ್ರವನ್ನು ಹೊಂದಿರುವ ಬ್ರೇಕಿಂಗ್‌ ನ್ಯೂಸ್‌ ಅನ್ನು ಹಂಚಿಕೊಳ್ಳಲಾಗುತ್ತಿದೆ. ಎಬಿಪಿ ನ್ಯೂಸ್ ಲೋಗೋ ಹೊಂದಿರುವ ಬುಲೆಟಿನ್ ಚಿತ್ರವನ್ನು ಹೊಂದಿದ್ದು, ರಾಷ್ಟ್ರಕ್ಕೆ ಸಂದೇಶ ನೀಡಿದ್ದಾರೆ, ಇಂಟರ್‌ನೆಟ್‌ ಬ್ಯಾನ್‌ ಘೋಷಣೆ ಮಾಡಿದ್ದಾರೆ ಎಂದು ವೈರಲ್‌ ಆಗುತ್ತಿದೆ. ಸತ್ಯ ಪ್ರಧಾನಿ ಮೋದಿ ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯನ್ನು ಆದೇಶಿಸಿಲ್ಲ. ಹಿಂದಿ ಸುದ್ದಿ ಚಾನೆಲ್ ಎಬಿಪಿ ಸುದ್ದಿಯ ಮೂಲ ಸುದ್ದಿ ಬುಲೆಟಿನ್‌ನ ನಕಲಿ ಆವೃತ್ತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪರಿಶೀಲನೆ ಮತ್ತು ವಿಧಾನ ಬುಲೆಟಿನ್‌ನಲ್ಲಿ ಮೇಲಿನ ಬಲ ಮೂಲೆಯಲ್ಲಿ ಎಬಿಪಿ ಸುದ್ದಿ ಚಾನೆಲ್‌ನ ಲೋಗೊವನ್ನು ಹೊಂದಿರುವುದರಿಂದ, ಎಬಿಪಿ ನ್ಯೂಸ್‌ನ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಟ್ವಿಟ್ಟರ್‌ನಲ್ಲಿ ಅಂತಹ ಸುದ್ದಿ ಇದೆಯೇ ಎಂದು ನಾವು ಚಾನಲ್‌ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಅನ್ನು ಪರಿಶೀಲಿಸಿದೆವು. ಅಲ್ಲದೆ, ಆ ಬುಲೆಟಿನ್ ನಕಲಿ ಎಂದು ಎಬಿಪಿ ನ್ಯೂಸ್‌ ಚಾನೆಲ್‌ ಸ್ಪಷ್ಟೀಕರಣ ಹೊರಡಿಸಿರುವುದನ್ನು ನಾವು ನೋಡಿದ್ದೇವೆ. ಹಿಂದಿಯಲ್ಲಿ ಎಬಿಪಿ ಸುದ್ದಿ ನೀಡಿದ ಹೇಳಿಕೆಯ ಅನುವಾದ ಹೀಗಿದೆ- "ಎಬಿಪಿ ನ್ಯೂಸ್ ಹೆಸರಿನಲ್ಲಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಅದರಲ್ಲಿ 'ಇಂದು ರಾತ್ರಿ 12 ಗಂಟೆಗೆ ಇಂಟರ್ನೆಟ್ ಸೇವೆಗಳು ಸ್ಥಗಿತಗೊಳ್ಳುತ್ತವೆ' ಎಂದಿದೆ. ಈ ಫೋಟೋ ಫೋಟೋಶಾಪ್ ಮೂಲಕ ರಚಿಸಲಾಗಿದೆ. ಎಬಿಪಿ ನ್ಯೂಸ್ ಅಂತಹ ಯಾವುದೇ ಸುದ್ದಿಯನ್ನು ಪ್ರಸಾರ ಮಾಡಿಲ್ಲ. ಅಂತಹ ವದಂತಿಗಳನ್ನು ತಪ್ಪಿಸಬೇಕು'' ಎಂದು ಸ್ಪಷ್ಟನೆ ನೀಡಿದೆ. ತೀರ್ಮಾನ ಅಂತರ್ಜಾಲ ಸ್ಥಗಿತಗೊಳಿಸುವಂತೆ ಪ್ರಧಾನಿ ಮೋದಿ ಆದೇಶಿಸಿದ್ದಾರೆ ಎಂದು ಟಿವಿ ಚಾನೆಲ್‌ಗಳಲ್ಲಿ ಬಂದಂತೆ ಕಾಣುತ್ತಿರುವ ನಕಲಿ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ ಎಂದು ಟೈಮ್ಸ್ ಫ್ಯಾಕ್ಟ್ ಚೆಕ್ ಕಂಡುಕೊಂಡಿದೆ.


from India & World News in Kannada | VK Polls https://ift.tt/342qR5i

ಕೊರೊನಾ ನಿರ್ವಹಣೆ: ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 1 ಕೋಟಿ ನೀಡಿದ ಸುಮಲತಾ ಅಂಬರೀಶ್

ಬೆಂಗಳೂರು: ಕೊರೊನಾ ನಿರ್ವಹಣೆಗಾಗಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಸಂಸದೆ ಮಂಡ್ಯ ಜಿಲ್ಲಾ ಸಂಸದರ ಪ್ರದೇಶಾಭಿವೃದ್ದಿ ನಿಧಿಯಿಂದ 1 ಕೋಟಿ ರೂಪಾಯಿ ಹಣವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ಕುರಿತಾಗಿ ಮಾಹಿತಿ ನೀಡಿರುವ ಅವರು “ದೇಶಾದ್ಯಂತ ಕೋವಿಡ್‌ 19 ವೈರಸ್ ರೋಗ ಹರಡುತ್ತಿದ್ದು ಅದನ್ನು ಪರಿಣಾಮಕಾರಿಯಾಗಿ ತರುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ನನ್ನ ಮಂಡ್ಯ ಜಿಲ್ಲಾ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.1 ಕೋಟಿ ಹಣವನ್ನು ವರ್ಗಾಯಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುತ್ತೇನೆ” ಎಂದಿದ್ದಾರೆ. ದೇಶಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ 21 ದಿನಗಳ ಕಾಲ ದೇಶಾದ್ಯಂತ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಲಾಗಿದ್ದು ಜನರಿಗೂ ಸಾಕಷ್ಟು ತೊಂದರೆಯಾಗುತ್ತಿದೆ. ಲಾಕ್‌ಡೌನ್‌ನಿಂದಾಗಿ ಆರ್ಥಿಕವಾಗಿ ಜನರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರ್ಥಿಕ ಪರಿಹಾರ ಕ್ರಮಗಳನ್ನು ಘೋಷಣೆ ಮಾಡಿದೆ. ಕೊರೊನಾ ನಿರ್ವಹಣೆಗೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಉದ್ಯಮಿಗಳು, ಕ್ರೀಡಾಪಟುಗಳು, ಸಿನಿಮಾ ನಟರು ಆರ್ಥಿಕ ಸಹಕಾರ ನೀಡುತ್ತಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಕೊರೊನಾ ನಿಯಂತ್ರಣ ಹಾಗೂ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಜನರು ಕೈಜೋಡಿಸಬೇಕು ಹಾಗೂ ಆರ್ಥಿಕವಾಗಿ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.


from India & World News in Kannada | VK Polls https://ift.tt/2QXrh7z

ಕೊರೊನಾ ವೈರಸ್‌ಗೆ ಸ್ಕ್ವಾಷ್‌ ದಂತಕತೆ ಅಜಮ್ ಖಾನ್‌ ಬಲಿ

ಕರಾಚಿ: ಕೋವಿಡ್‌-19 ಸೋಂಕಿಗೆ ಇಡೀ ವಿಶ್ವದಾದ್ಯಂತ ಸಾವಿರಾರು ಮಂದಿ ಸಾವಿಗೀಡಾಗುತ್ತಿದ್ದಾರೆ. ಇದೀಗ ಪಾಕಿಸ್ತಾನ ದಂತಕತೆ ಮಾರಣಾಂತಿಕ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಅಜಮ್‌ ಖಾನ್‌ ಅವರು 1959 ಮತ್ತು 1961 ರಲ್ಲಿ ಬ್ರಿಟೀಷ್‌ ಓಪನ್‌ ಎರಡು ಬಾರಿ ಗೆದ್ದಿದ್ದರು. ಕಳೆದ ವಾರ ಕೋವಿಡ್‌-19 ಸೋಂಕು ತಗುಲಿರುವ ಬಗ್ಗೆ ದೃಢಪಟ್ಟಿತ್ತು. ಅಂದಿನಿಂದ ಇಲ್ಲಿಯವರೆಗೂ ಅವರು ಲಂಡನ್‌ನ ಈಲೀಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ, ಅವರ ಆರೋಗ್ಯ ಪರಿಸ್ಥಿತಿ ಸುಧಾರಣೆಯಾಗದ ಕಾರಣ ಕೊನೆಯುಸಿರೆಳೆದಿದ್ದಾರೆ. ಅಜಮ್‌ ಖಾನ್‌ ಅವರು ವಿಶ್ವದ ಅತ್ಯುತ್ತಮ ಸ್ಕ್ವಾಷ್‌ ಆಟಗಾರ ಎಂದು ಕಿರಿಯ ಸಹೋದರ ಹಾಶೀಮ್‌ ಖಾನ್‌ ಅವರು ತಮ್ಮ ಅಣ್ಣನನ್ನು ಶ್ಲಾಘಿಸಿದ್ದಾರೆ. ಗಾಯದಿಂದಾಗಿ ಸ್ಕ್ವಾಷ್‌ ವೃತ್ತಿ ಜೀವನದಿಂದ ದೂರ ಉಳಿದಿದ್ದರು. 1962ರಲ್ಲಿ 14 ವರ್ಷಗಳ ಪುತ್ರನನ್ನು ಕಳೆದುಕೊಂಡಿದ್ದು, ಅಜಮ್‌ ಖಾನ್‌ ಅವರಿಗೆ ಬಹುದೊಡ್ಡ ಆಘಾತಕ್ಕೆ ಕಾರಣವಾಗಿತ್ತು. ಗಾಯಗೊಂಡ ಎರಡು ವರ್ಷಗಳ ಬಳಿಕ ಚೇತರಿಸಿಕೊಂಡಿದ್ದ ಅಜಮ್ ಖಾನ್‌ ಅವರು, ಬಳಿಕ ತಮ್ಮ ಪುತ್ರನ ಸಾವಿನ ನೋವಿನಿಂದ ಹೊರ ಬರಲಾಗಲಿಲ್ಲ. ಆ ಕಾರಣಕ್ಕಾಗಿ ಅವರು ಮತ್ತೇ ಸ್ಕ್ವಾಷ್‌ ಕಡೆ ತಿರುಗಿ ನೋಡಲೇ ಇಲ್ಲ. ಪೇಶಾವರ್‌ ಹೊರವಲಯ ಪುಟ್ಟ ಹಳ್ಳಿ ನವಾಕಿಲ್ಲಿಯಲ್ಲಿ ಅಜಮ್‌ ಖಾನ್‌ ಜನಿಸಿದ್ದರು. ವಿಶ್ವ ಚಾಂಪಿಯನ್ಸ್‌ ಸಹೋದರರಾದ ಜಹಾಂಗೀರ್ ಹಾಗೂ ಜನ್ಷೀರ್‌ ಖಾನ್‌ ಅವರು ಕೂಡ ಇದೇ ಗ್ರಾಮದಿಂದ ಹೊರಹೊಮ್ಮಿದವರಾಗಿದ್ದರು. ಇದೇ ಗ್ರಾಮದಲ್ಲಿ ಅಜಮ್‌ ಖಾನ್‌ ಅವರು ವಿಶ್ವ ಶ್ರೇಷ್ಠ ಸ್ಕ್ವಾಷ್‌ ಆಟಗಾರರಾಗಿ ಹೊರಹೊಮ್ಮಿದ್ದರು. 1956ರಲ್ಲಿ ಅಜಮ್‌ ಖಾನ್‌ ಇಂಗ್ಲೆಂಡ್‌ಗೆ ಸ್ಥಳಾಂತರವಾಗಿದ್ದರು. ಯುಎಸ್‌ ಓಪನ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 1962ರಲ್ಲಿ ಮೊಟ್ಟ ಮೊದಲ ಬಾರಿ ಗಾಯಕ್ಕೆ ತುತ್ತಾಗಿದ್ದರು. ಇದಾದ ಬಳಿಕ ಸ್ಕ್ವಾಷ್‌ ಅಂಗಳಕ್ಕೆ ಮರಳಲೇ ಇಲ್ಲ. ಇಡೀ ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಭಾರತದಲ್ಲಿ ಇದುವರೆಗೂ 1,161 ಕೋವಿಡ್‌-19 ಸೋಂಕು ಪ್ರಕರಣಗಳು ದಾಖಲಾಗಿದ್ದು 28 ಮಂದಿ ಇದುವರೆಗೂ ಮೃತಪಟ್ಟಿದ್ದಾರೆ. ಪ್ರಪಂಚದಲ್ಲಿ 7 ಲಕ್ಷ 23 ಸಾವಿರ 700 ಮಂದಿಗೆ ವೈರಸ್‌ ತಗುಲಿರುವುದು ಸ್ಷಷ್ಟವಾಗಿದ್ದು, 34,018 ಮಂದಿ ಸಾವಿಗೀಡಾಗಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2UOoheG

ಕೆನಡಾದಿಂದ ಹಾರಿ ಬಂದ ಪ್ರಿನ್ಸ್ ಮೇಲೆ ಕೋಪ: ಎಲ್ಲ ಜವಬ್ದಾರಿ ನಿಮ್ಮದೇ ಎಂದ ಟ್ರಂಪ್!

ವಾಷಿಂಗ್ಟನ್: ಬ್ರಿಟನ್ ರಾಜ ಮನೆತನ ತೊರೆದಿರುವ ಹಾಗೂ ದಂಪತಿ ಕೆನಡಾದಲ್ಲಿ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ. ರಾಜ ವೈಭೋಗ ತೊರೆದು ಜನಸಾಮಾನ್ಯರಂತೆ ಬದುಕುತ್ತಿರುವ ಈ ಜೋಡಿ ಇದೀಗ ಅಮೆರಿಕಕ್ಕೆ ವಲಸೆ ಬಂದಿದೆ. ಹೌದು, ಕೆನಡಾದಲ್ಲಿದ್ದ ಪ್ರಿನ್ಸ್ ಹ್ಯಾರಿ ಹಾಗೂ ಮೇಘನ್ ದಂಪತಿ ಇದೀಗ ಅಮೆರಿಕದ ಕ್ಯಾಲಿಫೋರ್ನಿಯಾಗೆ ಬಂದಿಳಿದ್ದಾರೆ. ಆದರೆ ದೇಶ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ, ಗಡಿ ಬಂದಾಗಿದ್ದರೂ ಪ್ರೈವೆಟ್ ಜೆಟ್ ಮೂಲಕ ಪ್ರವೇಶಿಸಿದ ದಂಪತಿ ಮೇಲೆ ಅಧ್ಯಕ್ಷ ಟ್ರಂಪ್ ತುಸು ಗರಂ ಆಗಿದ್ದಾರೆ. ಕೊರೊನಾ ವೈರಸ್ ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ-ಕೆನಡಾ ನಡುವಿನ ಭೂ, ನೌಕಾ ಹಾಗೂ ವಾಯು ಗಡಿಗಳನ್ನು ಬಂದ್ ಮಾಡಲಾಗಿದೆ. ಆದರೂ ತಮ್ಮ ಪ್ರೈವೆಟ್ ಜೆಟ್ ಮೂಲಕ ಹ್ಯಾರಿ ಮತ್ತು ಮೇಘನ್ ದಂಪತಿ ಅಮೆರಿಕ ಪ್ರವೇಶಿಸಿದ್ದಾರೆ. ಈ ಕುರಿತು ಪ್ರತಿಕ್ರಿತಯೆ ನೀಡಿರುವ ಟ್ರಂಪ್, ಅಮೆರಿಕಕ್ಕೆ ಬಂದಿರುವ ಹ್ಯಾರಿ ಮತ್ತು ಮೇಘನ್ ದಂಪತಿ ತಮ್ಮ ಭದ್ರತಾ ಖರ್ಚುಗಳನ್ನು ತಾವೇ ನಿಭಾಯಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಹ್ಯಾರಿ ಮತ್ತು ಮೇಘನ್ ದಂಪತಿಗೆ ಸರ್ಕಾರದ ವತಿಯಿಂದ ಭದ್ರತೆ ನೀಡಲು ಸಾಧ್ಯವಿಲ್ಲ. ಅವರ ಭದ್ರತೆ ಜವಾಬ್ದಾರಿಯನ್ನು ಅವರೇ ನಿಭಾಯಿಸಬೇಕು ಎಂದು ಟ್ರಂಪ್ ಹೇಳಿದ್ದಾರೆ. ಇನ್ನು ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಹ್ಯಾರಿ ಮತ್ತು ಮೇಘನ್ ಪರ ವಕ್ತಾರ, ದಂಪತಿ ತಮ್ಮ ಭದ್ರತೆಗಾಗಿ ಸರ್ಕಾರದ ನೆರವು ಬಯಸಿಲ್ಲ. ತಾವೇ ಸ್ವತಃ ಈ ಖರ್ಚನ್ನು ನಿಭಾಯಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.


from India & World News in Kannada | VK Polls https://ift.tt/2QVAZHM

ಮನೆ, ಮಕ್ಕಳನ್ನು ಬಿಟ್ಟು ಕೊರೊನಾ ವಿರುದ್ಧ ಹೋರಾಡುತ್ತಿರುವ ನರ್ಸ್‌ ಒಬ್ಬರ ಭಾವನಾತ್ಮಕ ಪತ್ರವಿದು!

ಸತ್ಯ ಹೇಳ್ತಿದ್ದೀನಿ, ಕೋವಿಡ್‌-19 ವಿರುದ್ಧ ಹೋರಾಡಲು ಎಲ್ಲ ನರ್ಸ್‌ಗಳು ತಪ್ಪದೆ ಆಸ್ಪತ್ರೆಗೆ ಆಗಮಿಸಬೇಕು ಎಂದು ಕರೆ ಬಂದಾಗ ತುಂಬಾ ಭಯ ಪಟ್ಟಿದ್ದೆ. ನನಗೆ ಮನೆಯಲ್ಲಿ ಗಂಡ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭ ಗಂಡ ಮತ್ತು ಮಕ್ಕಳ ಯೋಗಕ್ಷೇಮದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡೆ. ಇದೇ ಸಂದರ್ಭದಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ನನ್ನ ದೊಡ್ಡ ಮಗಳ ಪರೀಕ್ಷೆಗಳು ರದ್ದಾಗಿದ್ದು ಹೆಚ್ಚು ಸಮಾಧಾನ ತಂದಿತ್ತು. ಡ್ಯೂಟಿಗೆ ಹೋಗಬೇಕು ಎಂದು ಮನಸ್ಸು ಮಾಡಿದೆ. ಆದರೆ ನನ್ನ ಮತ್ತೊಬ್ಬಳು ಮಗಳು, ನನಗೆಲ್ಲಿ ಕೊರೊನಾ ಸೋಂಕು ಹರಡುತ್ತದೋ ಎಂದು ವಿಪರೀತ ಭಯ ಪಟ್ಟುಕೊಂಡಳು. ಕೆಲಸಕ್ಕೆ ಹೋಗದೆ, ಮನೆಯಲ್ಲೇ ಇರುವಂತೆ ಬೇಡಿಕೊಂಡಳು, ಅತ್ತಳು. ಮನೆಯವರೆಲ್ಲರಿಗೂ, 'ನಾನು ಸೋಂಕಿಗೆ ತುತ್ತಾಗುವುದಿಲ್ಲ. ಸಾಕಷ್ಟು ಮುಂಜಾಗ್ರತೆ ವಹಿಸುತ್ತೇನೆ' ಎಂದು ಸಮಾಧಾನ ಹೇಳುವಲ್ಲಿ ಸಾಕಾಗಿ ಹೋಯಿತು. ನಾನು ಇದನ್ನು ಮಾಡಲೇ ಬೇಕಿತ್ತು. ಏಕೆಂದರೆ ಸೇವೆಗೆ ಕರೆ ಬಂತು ಎಂದಾದರೆ ಮತ್ತೊಂದು ನೆಪ ಹೇಳದೆ ಸಿದ್ಧವಾಗಬೇಕು. ಹಾಗಾಗಿ ನನ್ನ ಗಂಡ ಮನೆಯ ಸಂಪೂರ್ಣ ಜವಾಬ್ದಾರಿ ಹೊರುತ್ತೇನೆ ಎಂದು ಭರವಸೆ ನೀಡಿದರು. ನಂತರ ಕೆಲಸಕ್ಕೆ ಮನೆಯಿಂದ ತೆರಳಿದೆ. ಆಸ್ಪತ್ರೆಗೆ ಮನೆಯಿಂದ ಹೋಗಿ ಬರುವುದು ದೊಡ್ಡ ಸವಾಲು ಎಂದೆನಿಸಿತು. ಟ್ಯಾಕ್ಸಿನಲ್ಲಿ ಹೋಗೋಣ ಎಂದರೆ ಸೋಂಕು ತಗಲುವ ಅಪಾಯ ಹೆಚ್ಚು. ಹಾಗಾಗಿ ನನ್ನ ಗಂಡನೇ ನನ್ನನ್ನು ಡ್ರಾಪ್‌ ಮಾಡಲು ಮುಂದಾದರು. ಆದರೆ ಮನೆಯಿಂದ ರಸ್ತೆಗಿಳಿಯುವುದು ಅವರಿಗೂ ಅಪಾಯ. ಹಾಗಾಗಿ ಜೊತೆಗಿದ್ದ ನರ್ಸ್‌ಗಳೆಲ್ಲರೂ ಸೇರಿ ಒಂದು ವಾಹನದಲ್ಲಿ ಮನೆಗೆ ಹೋಗಿ ಬರಲು ಉಪಯೋಗಿಸೋಣ ಎಂಬ ನಿರ್ಧಾರಕ್ಕೆ ಬಂದೆವು. ಕೊನೆಗೆ ನಮಗನಿಸಿದ್ದು ಅದಕ್ಕಿಂತ ಬೆಸ್ಟ್‌ ಅಂದ್ರೆ ಆಸ್ಪತ್ರೆಯಲ್ಲಿ ಉಳಿದುಕೊಳ್ಳುವುದು. ಹಾಗಾಗಿ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ನಿರ್ಧರಿಸಿಬಿಟ್ಟೆವು. ನನಗೆ ಮೊದಲ ದಿನದ ಕೆಲಸ ನೆನಪು ಎಂದೂ ನೆನಪಿನಿಂದ ಮರೆಯಾಗುವುದಿಲ್ಲ. ಆಸ್ಪತ್ರೆಗೆ ಬರುತ್ತಿದ್ದ ರೋಗಿಗಳ ದಾಖಲಾತಿ, ಅವರಿಗೆ ಬೆಡ್‌ಗಳನ್ನು ಹೊಂದಿಸುವ ಕೆಲಸ ಮತ್ತು ಗಾಬರಿಗೊಳಗಾದ ರೋಗಿಗಳನ್ನು ಸಮಾಧಾನ ಪಡಿಸುವುದು... ಅದೊಂದು ಸಮರೋಪಾದಿ ಪರಿಸ್ಥಿತಿಯಾಗಿತ್ತು. ಒಂದು ನಿಮಿಷವೂ ಬಿಡುವು ಸಿಗುತ್ತಿರಲಿಲ್ಲ. ಆದರೆ ಅದಕ್ಕಿಂತಲೂ ಕಷ್ಟವೆಂದೆನಿಸಿತ್ತು ಮನೆಯವರಿಂದ ದೂರ ಉಳಿಯುವುದಾಗಿತ್ತು. ಪುಣೆಯ ಜೋಡಿಯೊಂದರ ಚಿಕಿತ್ಸೆಯನ್ನು ನಿಭಾಯಿಸುತ್ತಿದ್ದೆ. ಈ ಸಂದರ್ಭ ನಮ್ಮ ಮಕ್ಕಳನ್ನು ನೋಡಬೇಕು. ಮನೆಗೆ ಹೋಗಬೇಕು. ಬಿಟ್ಟುಬಿಡಿ ಎಂದು ಬೇಡಿಕೊಳ್ಳುತ್ತಿದ್ದರು. ನನಗೆ ಕರುಳು ಕಿತ್ತುಬರುತ್ತಿತ್ತು. ಹಾಗಂತ ನಾನು ಅವರನ್ನು ಬಿಡುವ ಸ್ಥಿತಿಯಂತೂ ಇಲ್ಲವಲ್ಲ. ಅವರು ಅಳುವುದನ್ನು ನೋಡಿದಾಗ ನನ್ನ ಮಕ್ಕಳು ಹೆಚ್ಚು ನೆನಪಾಗುತ್ತಿದ್ದರು. ಮನೆಯಿಂದ ಹೊರಗುಳಿದು ಐದಾರು ದಿನಗಳೇ ಕಳೆದಿವೆ. ನನ್ನ ಮಗಳು ಆಗಾಗ ಫೋನ್‌ ಮಾಡಿ ಮಾಸ್ಕ್‌ ಧರಿಸಿದ್ದೇನಾ? ಸರಿಯಾಗಿ ಊಟ ಮಾಡುತ್ತಿದ್ದೇನಾ? ನಿದ್ರೆ ಮಾಡುತ್ತಿದ್ದೇನಾ? ಹೀಗೆ ಪ್ರತಿಯೊಂದನ್ನು ವಿಚಾರಿಸುತ್ತಾಳೆ. ಕೆಲಸದ ಒತ್ತಡದಲ್ಲಿ ಮಕ್ಕಳ ಜೊತೆಗಿನ ಮಾತುಕತೆ ಒಂದೆರಡು ನಿಮಿಷದಲ್ಲೇ ಮುಗಿದು ಹೋಗುತ್ತದೆ. ಮನೆಯವರ ಜೊತೆ ಪರಸ್ಪರ ಮೆಸೇಜ್‌ ಮಾಡುತ್ತ ಧೈರ್ಯವಾಗಿ ಇರಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಜೊತೆಗಿದ್ದ ನರ್ಸ್‌ಗಳ ಪೈಕಿ ಒಬ್ಬರು ಬೆಳಗ್ಗೆ 6 ಗಂಟೆ ಕೆಲಸಕ್ಕೆ ಹೋದವರು ವಾಪಸಾಗಿದ್ದು ಮರುದಿನ ಬೆಳಗ್ಗೆ 9 ಗಂಟೆಗೆ. ಜೊತೆಯಾಗಿ ಪ್ರಯಾಣ ಬೆಳೆಸಿದ್ದ ಗುಂಪೊಂದು ಕೊರೊನಾ ಸೋಂಕಿಗೆ ಸಂಬಂಧಿಸಿ ದಾಖಲಾಗಿತ್ತು. ಹಾಗಾಗಿ ಸುಮಾರು 27 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡಿದ್ದಾರೆ. ಕೊರೊನಾ ಸೋಂಕು ಇಲ್ಲ ಎಂಬುದು ಸ್ಪಷ್ಟವಾದಾಗ ಅವರ ಮುಖದಲ್ಲಿ ಅರಳುವ ನಿರಾಳತೆಯ ಮುಗುಳ್ನಗು ನಮ್ಮ ಶ್ರಮದ ಸಾರ್ಥಕತೆ ಪ್ರತಿಫಲವಾಗಿದೆ. ಕಳೆದ ವಾರ ದಾಖಲಾಗಿದ್ದ ಅವರೆಲ್ಲರೂ ನಮಗೆ ಕೈ ಮುಗಿದು ಧನ್ಯವಾದ ಅರ್ಪಿಸಿದರು. ಇಂತಹ ಸಂದರ್ಭಗಳಲ್ಲಿ ನಾನು ಹೇಳುವುದೊಂದೆ, ನಮ್ಮ ಮೊದಲ ಆದ್ಯತೆ ಸೇವೆಗೆ. ಕೊರೊನಾ ಸೋಂಕು ವಿರುದ್ಧದ ಹೋರಾಟದ ಪ್ರಯತ್ನವಿದು. ನಾವೆಲ್ಲರೂ ಜೊತೆಯಾಗಿ ಹೋರಾಡಿ ಗೆಲ್ಲುತ್ತೇವೆ ಎಂಬ ಭರವಸೆ ಇದೆ. ದೃಢ ಮೂಲಗಳ ಮಾಹಿತಿಗಳನ್ನಷ್ಟೇ ನಂಬಿ. ನಾವು ಕೊಡುವ ಸಲಹೆ ಮತ್ತು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ಮನೆಯಲ್ಲೇ ಇರಿ. ತುರ್ತು ಇಲ್ಲದೆ, ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ. ಇದೆಲ್ಲವೂ ಮುಗಿದ ಬಳಿಕ ನಾವೆಲ್ಲರೂ ಸೇರಿ ಸಂಭ್ರಮಿಸೋಣ. ನೀವು ನಿಮ್ಮ ಸ್ನೇಹಿತರು ಮತ್ತು ಮನೆಯವರ ಜೊತೆ ಸಂಭ್ರಮಿಸಿ. ನಾವು ನರ್ಸ್‌ಗಳು ನಮ್ಮವರ ಜೊತೆ ಸಂಭ್ರಮಿಸುತ್ತೇವೆ. ಹೀಗೆ ನಾವೆಲ್ಲರೂ ಒಟ್ಟಾಗಿ ಸಂಭ್ರಮಿಸೋಣ. ಅದಕ್ಕಾಗಿ ಮನೆಯೊಳಗೆ ಇರೋಣ.


from India & World News in Kannada | VK Polls https://ift.tt/39xaDlv

ಲಾಕ್‌ಡೌನ್ ಸಮಯದಲ್ಲಿ ಮೋದಿ ಏನ್ಮಾಡ್ತಾರೆ?: ಪ್ರಧಾನಿ ವಿಡಿಯೋ ಸಂದೇಶ ನೋಡಿ

ನವದೆಹಲಿ: ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದಂತೆ ಸಮಯದಲ್ಲಿ ತಮ್ಮ ಚಟುವಟಿಕೆ ಕುರಿತು ಮಾಹಿತಿ ನೀಡಿರುವ ಪ್ರಧಾನಿ ಮೋದಿ, ಯೋಗಾಸನದ ಆನಿಮೇಶನ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಲಾಕ್‌ಡೌನ್ ಸಮಯವನ್ನು ಆರೋಗ್ಯ ವೃದ್ಧಿಗೆ ಬಳಸಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿರುವ ಪ್ರಧಾನಿ ಮೋದಿ, ಮಾಡುವ ಮೂಲಕ ಆರೋಗ್ಯ ವೃದ್ಧಿಗೆ ಒತ್ತು ನೀಡಿ ಎಂದು ಹೇಳಿದ್ದಾರೆ. ಅದರಂತೆ ಲಾಕ್‌ಡೌನ್ ಸಮಯದಲ್ಲಿ ತಾವು ಮಾಡುವ ಯೋಗಾಸನಗಳ ಕುರಿತು ಆನಿಮೇಶನ್ ವಿಡಿಯೋ ಬಿಡುಗಡೆ ಮಾಡಿರುವ ಪ್ರಧಾನಿ ಮೋದಿ, ಈ ಆಸನಗಳ ಅನುಕರಣೆ ಉತ್ತಮ ಆರೋಗ್ಯಕ್ಕೆ ನಾಂದಿಯಾಗಲಿದೆ ಎಂದು ಹೇಳಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ನಾನು ಲಾಕ್‌ಡೌನ್ ಸಮಯದಲ್ಲಿ ಯೋಗಾಸನ ಮಾಡುತ್ತಿದ್ದು, ನೀವೆಲ್ಲರೂ ಯೋಗಾಸ ಮಾಡುತ್ತಿದ್ದೀರಿ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ಯೋಗಾಸನದ ಆನಿಮೇಶನ್ ವಿಡಿಯೋವನ್ನು ಜನರು ಬಹುವಾಗಿ ಮೆಚ್ಚಿಕೊಂಡಿದ್ದು, ಲಾಕ್‌ಡೌನ್ ಆದೇಶ ಆರೋಗ್ಯ ವೃದ್ಧಿಗೆ ಸಹಕರಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/39o1onO

ನೆರೆಯ ಹಿಂದೂವಿನ ಮೃತದೇಹವನ್ನು 'ರಾಮ ನಾಮ ಸತ್ಯಹೇ' ಎಂದು ಸಂಸ್ಕಾರಕ್ಕೆ ಹೊತ್ತೊಯ್ದ ಮುಸ್ಲಿಮರು!

ಮೀರತ್‌: ವ್ಯಾಪಿಸುವುದನ್ನು ನಿಯಂತ್ರಿಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರಕಾರಗಳು ಲಾಕ್‌ಡೌನ್‌, ಕ್ವಾಂಟೈನರ್‌ ಎಂಬೆಲ್ಲ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ. ಈ ಸಂದರ್ಭದಲ್ಲಿ ಅಕಾಲಿಕ ಮರಣ ಸಂಭವಿಸಿದರೆ ದಫನ ಕಾರ್ಯ ಅತ್ಯಂತ ಕಷ್ಟಕರವೆನಿಸಿದೆ. ಇದಕ್ಕೆ ಪೂರಕವಾಗಿ ಯಾವ ಸರಕಾರವು ಇದುವರೆಗೆ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಹಿಂದುವಿನ ಮೃತ ದೇಹವನ್ನು ಸಂಸ್ಕಾರಕ್ಕೆ ಹೊತ್ತೊಯ್ಯುತ್ತ 'ರಾಮ ನಾಮ ಸತ್ಯ ಹೇ' ಎಂಬ ಘೋಷಣೆಗಳನ್ನು ಕೂಗುತ್ತ ಸಾಗಿದ್ದು ಮುಸ್ಲಿಮರು. ಏನಿದು ಘಟನೆ? ಬುಲಂದ್‌ಶಹರ್‌ನ ಆನಂದ ವಿಹಾರ ಪ್ರದೇಶದ ನಿವಾಸಿ, ಕ್ಯಾನ್ಸರ್‌ನಿಂದ ಬಳಲುತ್ತಿದ್ದ 40 ವರ್ಷದ ರವಿ ಶಂಕರ್‌ ಎಂಬುವವರು ಶನಿವಾರ ಮಧ್ಯಾಹ್ಮ ಸಾವನ್ನಪ್ಪಿದ್ದರು. ಲಾಕ್‌ಡೌನ್‌ನಿಂದ ರವಿ ಶಂಕರ್‌ ಅವರ ಸಂಬಂಧಿಕರು ಯಾರಿಗೂ ಬರಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ದಫನ ಮಾಡುವುದು ಹೇಗೆ ಎಂದು ಪತ್ನಿ ಮಕ್ಕಳು ತಲೆ ಮೇಲೆ ಕೈಹೊತ್ತು ಕಳಿತಿದ್ದ ಸಂದರ್ಭ ನೆರೆಯ ಮುಸ್ಲಿಮರು ನೆರವಿಗೆ ಧಾವಿಸಿದರು. ಶವ ಸಂಸ್ಕಾರಕ್ಕೆ ಮುಸ್ಲಿಮರು ಹಿಂದು ಘೋಷವಾಕ್ಯಗಳನ್ನು ಪಠಿಸುತ್ತ ಮೃತದೇಹವನ್ನು ಹೊತ್ತೊಯ್ಯುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಹಿಂದು ಸಂಪ್ರದಾಯದ ಪ್ರಕಾರ ಶವ ಸಂಸ್ಕಾರ ನಡೆಸಲಾಗಿದೆ. ''ಸ್ಥಳೀಯರೆಲ್ಲರೂ ಮೃತ ರವಿ ಅವರ ಕುಟುಂಬಸ್ಥರ ನೆರವಿಗೆ ಧಾವಿಸಿದರು. ಎರಡು ಸಮುದಾಯ ಮೊದಲಿನಿಂದಲೂ ಪರಸ್ಪರ ನೆರವಾಗುತ್ತ ಉತ್ತಮ ಸಂಬಂಧ ಹೊಂದಿದ್ದೇವೆ'' ಎಂದು ಸ್ಥಳೀಯ ನಿವಾಸಿ ಮೊಹಮ್ಮದ್‌ ಜುಬೈದ್‌ ತಿಳಿಸಿದ್ದಾರೆ.


from India & World News in Kannada | VK Polls https://ift.tt/39rAlbd

ಟೆಸ್ಟ್ ಓಪನಿಂಗ್ ಶೈಲಿ ಬದಲಾಯಿಸಿದ್ದು ಸೆಹ್ವಾಗ್ ಅಲ್ಲವಂತೆ! ತಗಾದೆ ಎತ್ತಿದ ಪಾಕ್ ಮಾಜಿ ನಾಯಕ

ಹೊಸದಿಲ್ಲಿ: ಸಾಂಪ್ರಾದಾಯಿಕ ಟೆಸ್ಟ್ ಕ್ರಿಕೆಟ್ ರಕ್ಷಣಾತ್ಮಕ ಆಟಕ್ಕೆ ಹೆಸರುವಾಸಿಯಾಗಿದೆ. ಅತಿ ದೀರ್ಘವಾದ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ನ ನೈಜ ಕೌಶಲ್ಯ ಪ್ರದರ್ಶನವಾಗುತ್ತದೆ. ಅಂತಹ ಟೆಸ್ಟ್ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಪರಿಚಯಿಸುವ ಮೂಲಕ ಭಾರತದ ಮಾಜಿ ಡ್ಯಾಶಿಂಗ್ ಓಪನರ್ ಹೊಸ ಸ್ವರೂಪವನ್ನು ನೀಡಿದರು. ಆಕ್ರಮಣಕಾರಿ ಆಟದ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅಸ್ತಿತ್ವವನ್ನು ಕಾಪಾಡಿಕೊಳ್ಳಬಹುದು ಎಂಬುದನ್ನು ತಮ್ಮ ದೀರ್ಘ ಕಾಲದ ಟೆಸ್ಟ್ ಕೆರಿಯರ್ ಮೂಲಕ ವೀರು ಸಾಬೀತು ಮಾಡಿದರು. ಬಳಿಕ ಡೇವಿಡ್ ವಾರ್ನರ್ ಸೇರಿದಂತೆ ಅನೇಕ ಕ್ರಿಕೆಟಿಗರು ಟೆಸ್ಟ್ ಕ್ರಿಕೆಟ್‌ನಲ್ಲಿ ವೀರು ತಂತ್ರವನ್ನೇ ಅನುಸರಿಸಿದ್ದಾರೆ. ಹಾಗಿರಬೇಕೆಂದರೆ ವೀರೇಂದ್ರ ಸೆಹ್ವಾಗ್‌ಗಿಂತಲೂ ಮೊದಲೇ ಪಾಕ್ ಬ್ಯಾಟ್ಸ್‌ಮನ್‌ ಓರ್ವ ಟೆಸ್ಟ್ ಕ್ರಿಕೆಟ್‌ ಆರಂಭಿಕ ಸ್ಥಾನದಲ್ಲಿ ಬದಲಾವಣೆ ತಂದಿದ್ದರು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಅವರೇ ಪಾಕಿಸ್ತಾನದ ಮಾಜಿ ನಾಯಕ ಹಾಗೂ ವೇಗದ ಬೌಲರ್ . ಅಕ್ರಂ ಮಾತನಾಡಿರುವುದು ಬೇರೆ ಯಾರ ಬಗ್ಗೆಯೂ ಅಲ್ಲ. ಬೂಮ್ ಬೂಮ್ ಖ್ಯಾತಿಯ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಅವರ ಬಗ್ಗೆ. ಆಫ್ರಿದಿ ಬ್ಯಾಟಿಂಗ್ ಶೈಲಿಯನ್ನು ಹೊಗಳಿರುವ ಅಕ್ರಂ, ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಮನೋಸ್ಥಿತಿಯನ್ನೇ ಬದಲಾಯಿಸಿದರು ಎಂದಿದ್ದಾರೆ. ಇದಕ್ಕೆ ಅಕ್ರಂ ಕಾರಣವನ್ನು ನೀಡುತ್ತಾರೆ. "ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ಗೆ ತಡವಾಗಿ ಪ್ರವೇಶಿಸಿದ್ದರು. 1999-2000ನೇ ಇಸವಿಯಲ್ಲೇ ಶಾಹೀದ್ ಆಫ್ರಿದಿ ಟೆಸ್ಟ್ ಕ್ರಿಕೆಟ್ ಆರಂಭಿಕನ ಮನೋಸ್ಥಿತಿಯನ್ನೇ ಬದಲಾಯಿಸಿದರು. ಸ್ವತ: ನಾನು ಕೂಡಾ ಬೌಲರ್ ಆಗಿದ್ದರೂ, ಅವರನ್ನು ಔಟ್ ಮಾಡಬಲ್ಲೆ ಎಂಬುದು ಗೊತ್ತಿದ್ದರೂ ನನ್ನ ಬೌಲಿಂಗ್‌ಗೂ ಆಫ್ರಿದಿ ಬೌಂಡರಿ ಬಾರಿಸುವ ಸಾಮರ್ಥ್ಯವನ್ನು ಹೊಂದಿದ್ದರು. ಆಫ್ರಿದಿ ಕೆಟ್ಟ ಎಸೆತಗಳಿಗೆ ಸಿಕ್ಸರ್ ಬಾರಿಸುತ್ತಿದ್ದರು" ಎಂದು ವಿವರಿಸಿದರು. 1998ನೇ ಇಸವಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಆಫ್ರಿದಿ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಆದರೆ 1999-2000ನೇ ಇಸವಿಯ ಭಾರತ ಪ್ರವಾಸದಲ್ಲಿ ಆಫ್ರಿದಿ ಆಕ್ರಮಣಕಾರಿ ಆಟದ ಮೂಲಕ ಹೆಚ್ಚಿನ ಗಮನ ಸೆಳೆದಿದ್ದರು. ಭಾರತ ಪ್ರವಾಸಕ್ಕೆ ಆಫ್ರಿದಿ ಆಯ್ಕೆಯಾಗುವ ಸಾಧ್ಯತೆಗಳು ಕಡಿಮೆಯಾಗಿದ್ದವು. ಆದರೆ ತಾವು ಮತ್ತು ಇಮ್ರಾನ್ ಖಾನ್ ಯುವ ಆಟಗಾರನ ಮೇಲೆ ನಂಬಿಕೆಯನ್ನಿರಿದ್ದೆವು ಎಂದು ತಿಳಿಸಿದರು. "ತಂಡದ ಆಯ್ಕೆಗೂ ಮುನ್ನ ನಾನು ಇಮ್ರಾನ್ ಖಾನ್ ಅವರಲ್ಲಿ ಮಾತನಾಡಿದೆ. ಆಫ್ರಿದಿಯನ್ನು ಆರಿಸಬೇಕು ಎಂದು ಹೇಳಿದೆ. ಆದರೆ ಕೆಲವು ಆಯ್ಕೆದಾರರು ಇದಕ್ಕೆ ವಿರುದ್ಧವಾಗಿದ್ದರು. ಈ ಸಂದರ್ಭದಲ್ಲಿ ಖಂಡಿತವಾಗಿಯೂ ಆಯ್ಕೆ ಮಾಡುವಂತೆಯೂ, ಓಪನರ್ ಸ್ಥಾನವನ್ನು ನೀಡಿದರೆ ಒಂದೆರಡು ಪಂದ್ಯಗಳನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿರುವುದಾಗಿ ತಿಳಿಸಿದರು. ನಾನು ಯಾವತ್ತೂ ಇಮ್ರಾನ್ ಖಾನ್ ಜೊತೆ ಮಾತುಕತೆ ನಡೆಸಿ ಸಲಹೆಗಳನ್ನು ಪಡೆಯುತ್ತಿದ್ದೆ" ಎಂದು ಅಕ್ರಂ ಹೇಳಿದರು. ನಾಯಕ ವಾಸೀಮ್ ಅಕ್ರಂ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಂಡ ಆಫ್ರಿದಿ, ಚೆನ್ನೈ ಟೆಸ್ಟ್‌ನಲ್ಲಿ ಶತಕ (141) ಬಾರಿಸಿ ಪಾಕಿಸ್ತಾನಕ್ಕೆ 1-0 ಅಂತರದ ಮುನ್ನಡೆ ದೊರಕಿಸಿಕೊಡುವಲ್ಲಿ ನೆರವಾದರು. "ಅದು ಎಂತಹ ಅದ್ಭುತ ಇನ್ನಿಂಗ್ಸ್. ಅನಿಲ್ ಕುಂಬ್ಳೆ ಹಾಗೂ ಸುನೀಲ್ ಜೋಶಿ ದಾಳಿಗಳಲ್ಲಿ ಮುಂದೆ ಬಂದು ಆಫ್ರಿದಿ ಸಿಕ್ಸರ್ ಬಾರಿಸುತ್ತಿದ್ದರು" ಎಂದು ಅಕ್ರಂ ನೆನಪಿಸಿದರು. ಅಂತಿಮವಾಗಿ ಪಾಕಿಸ್ತಾನ ತಂಡವು ಟೆಸ್ಟ್ ಸರಣಿಯನ್ನು 2-1ರ ಅಂತರದಲ್ಲಿ ವಶಪಡಿಸಿಕೊಂಡಿತು. ಆದರೂ ಆಫ್ರಿದಿ ಟೆಸ್ಟ್ ಕೆರಿಯರ್ ನಿರೀಕ್ಷಿಸಿದಷ್ಟು ಯಶ ಸಾಧಿಸಲಿಲ್ಲ. ಪಾಕಿಸ್ತಾನಕ್ಕಾಗಿ 27 ಟೆಸ್ಟ್ ಪಂದ್ಯಗಳನ್ನಷ್ಟೇ ಆಡಿದ್ದರು. ಆದರೂ ಏಕದಿನ ಹಾಗೂ ಟಿ20 ಮಾದರಿಗಳಲ್ಲಿ ಅನುಕ್ರಮವಾಗಿ 398 ಹಾಗೂ 99 ಪಂದ್ಯಗಳನ್ನಾಡಿ ಪಾಕ್ ಪರ ಬೆಲೆ ಬಾಳುವ ಆಟಗಾರನಾಗಿ ಮೂಡಿಬಂದಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2WSbhHL

ಆರತಿ ಎತ್ತೀರೇ...ಲಾಕ್‌ಡೌನ್ ಪಾಲಿಸದವರಿಗೆ ಪೊಲೀಸರಿಂದ ಕಿವಿಯಲ್ಲಿ ಹೂವಿಟ್ಟು ಮಂಗಳಾರತಿ!

ನವದೆಹಲಿ: ಕೊರೊನಾ ವೈರಸ್‌ನ್ನು ಮಣಿಸಲು ಲಾಕ್‌ಡೌನ್ ಆದೇಶ ಪಾಲಿಸುವುದೊಂದೇ ಏಕೈಕ ಮಾರ್ಗ ಎಂಬ ಸತ್ಯ ಇಡೀ ದೇಶಕ್ಕೆ ಗೊತ್ತಿದೆ. ಆದರೂ ಪ್ರಧಾನಿ ಮೋದಿ ಮನವಿಯನ್ನು ಉಲ್ಲಂಘಿಸಿ ಕೆಲವರು ಲಾಕ್‌ಡೌನ್ ಸಮಯದಲ್ಲೂ ವಿನಾಕಾರಣ ಮನೆಯಿಂದ ಹೊರಬರುತ್ತಿದ್ದಾರೆ. ಲಾಕ್‌ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳ ಪೊಲೀಸ್ ಇಲಾಖೆಯೂ ಜನರಲ್ಲಿ ಪದೇ ಪದೇ ಮನವಿ ಮಾಡುತ್ತಿದೆ. ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಮನೆಯಿಂದ ಹೊರಗೆ ಬರುವವರಿಗೆ ಪೊಲೀಸರು ಕೈಮುಗಿದು ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೂ ದೇಶಾದ್ಯಂತ ಲಾಕ್‌ಡೌನ್ ಆದೇಶ ಉಲ್ಲಂಘಿಸುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರ ಕಟ್ಟೆಚ್ಚರದ ಹೊರತಾಗಿಯೂ ಕೆಲವರು ಕಾರಣವಿಲ್ಲದೇ ಮನೆಯಿಂದ ಹೊರ ಬರುತ್ತಾರೆ. ಅದರಂತೆ ರಾಷ್ಟ್ರ ರಾಜಧಾನಿಯಲ್ಲಿ ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಜಾಲಿ ರೈಡ್ ಹೊರಟ್ಟಿದ್ದ ಸ್ನೇಹಿತರಿಬ್ಬರನ್ನು ತಡೆದ ಪೊಲೀಸರು, ಅವರ ಕಿವಿಯಲ್ಲಿ ಹೂವಿಟ್ಟು ಮಂಗಳಾರತಿ ಮಾಡಿ ಕೈ ಮುಗಿದ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗಿದೆ. ಹವ್ಯಾಸಿ ಪತ್ರಕರ್ತ ಆದಿತ್ಯ ರಾಜ್ ಕೌಲ್ ಎಂಬುವವರು ಟ್ಟಿಟ್ಟರ್‌ನಲ್ಲಿ ಶೇರ್ ಮಾಡಿರುವ ಈ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ. ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಯುವಕರ ಕಾರನ್ನು ತಡದ ಪೊಲೀಸರು, ಅವರಿಗೆ ಆರತಿ ಎತ್ತಿ ನಿಯಮ ಪಾಲಿಸುವಂತೆ ಮನವಿ ಮಾಡಿರುವ ವಿಡಿಯೋ ಇದಾಗಿದೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಲಾಕ್‌ಡೌನ್ ಉಲ್ಲಂಘಿಸಿದವರ ವಿರುದ್ಧ ಪೊಲೀಡರು ಕೈಗೊಂಡಿರುವ ಕ್ರಮದ ಕುರಿತು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


from India & World News in Kannada | VK Polls https://ift.tt/2UtmcWK

ಕೊರೊನಾ ಲಾಕ್‌ಡೌನ್: ಸಂಕಷ್ಟದಲ್ಲಿರುವ ಜನರಿಗೆ ಅದಮ್ಯ ಚೇತನ ಸಂಸ್ಥೆ ನೆರವು

ಬೆಂಗಳೂರು: ಕೊರೊನಾ ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿದೆ. ಜನರು ಹೊರಬರದಂತೆ ಸರ್ಕಾರ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ. ಲಾಕ್‌ಡೌನ್‌ನಿಂದಾಗಿ ಬಡ ಜನರು, ದಿನಕೂಲಿ ಕಾರ್ಮಿಕರು, ನಿರ್ಗತಿಕರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಜನರ ಸಹಾಯಕ್ಕೆ ಸಂಸ್ಥೆ ಮುಂದೆ ಬಂದಿದೆ. ಸೋಮವಾರದಿಂದ ಈಸಿ ಟು ಕುಕ್‌ ಉಪ್ಪಿಟ್ಟು ಮತ್ತು ಕಿಚಡಿ ಮಿಕ್ಸ್‌ನ್ನು ಅಗತ್ಯವಿದ್ದವರಿಗೆ ವಿತರಿಸಲು ಸಂಸ್ಥೆ ಮುಂದಾಗಿದೆ. ಕಾರ್ಮಿಕ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಜನರ ಮನೆ ಮನೆಗೆ ಊಟ ತಲುಪಿಸುವ ನಿಟ್ಟಿನಲ್ಲಿ ಅದಮ್ಯ ಚೇತನ ಅಡುಗೆ ಮನೆಯು ಮತ್ತೆ ಕಾರ್ಯಾರಂಭ ಮಾಡಲಿದೆ ಎಂದು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌ ಅವರು ತಿಳಿಸಿದ್ದಾರೆ. ಅಲ್ಲದೆ, ಆರ್‌.ಎಸ್‌.ಎಸ್‌ ಸಹಯೋಗದಲ್ಲಿ ಜನರಿಗೆ ಅಗತ್ಯವಿರುವ ದಿನನಿತ್ಯದ ಸಾಮಾಗ್ರಿಗಳನ್ನು ತಲುಪಿಸುವ ಕಾರ್ಯದಲ್ಲೂ ಅದಮ್ಯ ಚೇತನ ಕೈಜೋಡಿಸಲಿದ್ದು.ದಿನಗೂಲಿ ನೌಕರರು, ಅಶಕ್ತರು ಹಾಗೂ ವಯಸ್ಸಾದವರ ಜೊತೆಯಲ್ಲಿಯೇ ಅಗತ್ಯವಿರುವ ಕುಟುಂಬಗಳಿಗೆ ಸೋಮುವಾರದಿಂದ ಸಾವಿರಾರು ಜನರಿಗೆ ಊಟ ತಲುಪಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಅದಮ್ಯ ಚೇತನ ಅಡುಗೆ ಮನೆಯನ್ನು ಕೇಂದ್ರೀಕೃತ ಅಡುಗೆ ಮನೆಯಾಗಿ ಗುರುತಿಸಲಾಗಿದ್ದು, ರಾಜ್ಯ ಸರಕಾರದ ಕಾರ್ಮಿಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳು ಈ ಕಾರ್ಯಕ್ಕೆ ಕೈಜೋಡಿಸಿವೆ. ಕೊರೊನಾ ಕರ್ಫ್ಯೂ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಅದಮ್ಯ ಅಡುಗೆ ಮನೆ ಮತ್ತೆ ಸೋಮವಾರದಿಂದ ತನ್ನ ಕಾರ್ಯ ಪ್ರಾರಂಭಿಸಲಿದ್ದು ಆಯಾ ದಿನದ ಅಗತ್ಯಕ್ಕೆ ತಕ್ಕಂತಹ ಸಂಖ್ಯೆಯಲ್ಲಿ ಅಡುಗೆಯನ್ನು ತಯಾರಿಸಿ ಉಚಿತವಾಗಿ ಹಂಚುವ ಕಾರ್ಯಕ್ಕೆ ಮುಂದಾಗಲಿದೆ ಎಂದು ಅವರು ತಿಳಿಸಿದರು. ಈಸಿ ಟು ಕುಕ್‌ ಉಪ್ಪಿಟ್ಟು ಹಾಗೂ ಕಿಚಡಿ ಮಿಕ್ಸ್‌ ಪ್ಯಾಕೇಟ್‌ ಬಳಸಿ ಕೆಲವೇ ನಿಮಿಷಗಳಲ್ಲಿ ಅಡುಗೆ ತಯಾರಿಸಿಕೊಳ್ಳಬಹುದಾಗಿದೆ. ಈ ಮಿಕ್ಸ್‌ ನಲ್ಲಿ ಎಣ್ಣೆ, ರವೆ, ದಾಲ್‌ ಸೇರಿದಂತೆ ಅಗತ್ಯವಿರುವ ಎಲ್ಲಾ ಸಾಮಗ್ರಿಗಳು ಒಳಗೊಂಡಿರುತ್ತವೆ. ಈ ಮಿಕ್ಸ್‌ಗೆ ನೀರನ್ನು ಬೆರೆಸಿ ಬೇಯಿಸಿ ತಿನ್ನಬಹುದಾಗಿದೆ. ಅಗತ್ಯವಿರುವವರು ಸುಲಭವಾಗಿ ಅಹಾರ ತಯಾರಿಸಿಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಡಾ. ತೇಜಸ್ವಿನಿ ಅನಂತಕುಮಾರ್‌ ವಿವರಿಸಿದರು.


from India & World News in Kannada | VK Polls https://ift.tt/2UHn9JY

ಕೊರೊನಾ ತಂದ ಫಜೀತಿ: 'ಕೊರೌನಾ' ಗ್ರಾಮದ ಜನರಿಂದ ದೂರ ಸರಿದ ಸಮಾಜ!

ಸೀತಾಪುರ್: ಇಡೀ ವಿಶ್ವ ನರಹಂತಕ ಕೊರೊನಾ ವೈರಸ್ ತಂದೊಡ್ಡಿರುವ ಅಪಾಯವನ್ನು ಎದುರಿಸುತ್ತಿದೆ. ಕೊರೊನಾ ಪರಿಣಾಮವಾಗಿ ಹೆಚ್ಚಾಗುತ್ತಿರುವ ಸಾವು-ನೋವಿಗೆ ಏನು ಮದ್ದು ಎಂಬುದೇ ತಿಳಿಯದಾಗಿದೆ. ಅದರಂತೆ ಕೂಡ ಕೊರೊನಾ ವೈರಸ್ ಕದಂಬಬಾಹುವಿನಲ್ಲಿ ಸಿಕ್ಕಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಲಾಕ್‌ಡೌನ್ ಆದೇಶದ ಮೂಲಕ ಈ ಮಾರಕ ವೈರಾಣವಿನ ವಿರುದ್ಧದ ಭಾರತ ತನ್ನ ಹೋರಾಟವನ್ನು ಮುಂದುವರೆಸಿದೆ. ಆದರೆ ಮಾರಕ ಕೊರೊನಾ ವೈರಸ್ ಇಡೀ ಜಗತ್ತಿನಲ್ಲಿ ಸೃಷ್ಟಿಸಿರುವ ಅವಾಂತರ ಒಂದೆಡೆಯಾದರೆ, ಉತ್ತರ ಪ್ರದೇಶದ ಕೊರೌನಾ ಎಂಬ ಗ್ರಾಮದ ಜನರಿಗೆ ತಂದೊಡ್ಡಿರುವ ಸಂಕಟವೇ ಬೇರೆಯಾಗಿದೆ. ಹೌದು, ಉತ್ತಪ್ರದೇಶದ ಸೀತಾಪುರ್ ಜಿಲ್ಲೆಯಲ್ಲಿರುವ ಕೊರೌನಾ ಎಂಬ ಗ್ರಾಮ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೆಚ್ಚು ಕಡಿಮೆ ಕೊರೊನಾ ವೈರಸ್ ಹೆಸರನ್ನೇ ಹೋಲುವ ಈ ಕೊರೌನಾ ಗ್ರಾಮದ ಜನರಿಂದ ಇತರರು ದೂರವಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊರೌನಾ ಗ್ರಾಮದ ರಾಜನ್, ನಮ್ಮ ಗ್ರಾಮದ ಹೆಸರು ಕೇಳಿದೊಡನೆ ಜನ ದೂರ ಸರಿಯುತ್ತಾರೆ. ನಮ್ಮೊಂದಿಗೆ ಯಾರೂ ಮಾತನಾಡಲು ಮುಂದಾಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದ್ದಾರೆ. ಸದ್ಯ ಲಾಕ್‌ಡೌನ್ ಪರಿಣಾಮ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಯಾರೂ ಮನೆಯಿಂದ ಹೊರ ಬರುತ್ತಿಲ್ಲ. ಅಲ್ಲದೇ ಕೊರೊನಾ ವೈರಸ್‌ಗೂ ತಮ್ಮ ಗ್ರಾಮದ ಹೆಸರಿಗೂ ಹೋಲಿಕೆ ಇರುವುದರಿಂದ ಜನ ಬೇಸರಗೊಂಡಿದ್ದಾರೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಕೊರೊನಾ ವೈರಸ್ ಹೆಸರಿಗೆ ಸಾಮ್ಯತೆ ಇರುವ ಏಕೈಕ ಕಾರಣಕ್ಕೆ ಉತ್ತರ ಪ್ರದೇಶದ ಕೊರೌನಾ ಗ್ರಾಮದ ಜನರು ಸಂಕಟಪಡುತ್ತಿರುವುದು ವಿಪರ್ಯಾಸವೇ ಸರಿ.


from India & World News in Kannada | VK Polls https://ift.tt/3dxFgKW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...