ಪೊಲೀಸರ ಅಮಾನುಷಕ್ಕೆ ಕೈ ಕಳೆದುಕೊಂಡ ಆರೋಪಿ: ಮೂವರು ಕಾನ್‌ಸ್ಟೇಬಲ್‌ಗಳ ಅಮಾನತು

ಬೆಂಗಳೂರು: ಕಾರಿನ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ಆರೋಪ ಪ್ರಕರಣದಲ್ಲಿ ಬಂಧಿತನಾಗಿದ್ದ ಯುವಕನನ್ನು ಕ್ರೂರವಾಗಿ ಥಳಿಸಿದ ಆರೋಪದಡಿ ಮೂವರು ಪೊಲೀಸರನ್ನು ಮಾಡಲಾಗಿದೆ. ಪೊಲೀಸ್ ಠಾಣೆಯ ಅಪರಾಧ ತಂಡಕ್ಕೆ ಸೇರಿದ ಒಬ್ಬ ಹೆಡ್ ಕಾನ್‌ಸ್ಟೇಬಲ್ ಮತ್ತು ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಗುರುವಾರ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಕಾರು ಬ್ಯಾಟರಿಗಳ ಕಳ್ಳತನ ಮಾಡುತ್ತಿದ್ದ ಶಂಕಿತ , 22 ವರ್ಷದ ಸಲ್ಮಾನ್ ಖಾನ್ ಎಂಬಾತನನ್ನು ಅಕ್ಟೋಬರ್ 27ರಂದು ವರ್ತೂರು ಪೊಲೀಸರು ಆತನ ಮನೆಯಲ್ಲಿ ಬಂಧಿಸಿ ಠಾಣೆಗೆ ಕರೆ ತಂದಿದ್ದರು. ವರ್ತೂರಿನ ನಿವಾಸಿಯಾಗಿರುವ ಈತನ ಬಂಧನದ ಬಳಿಕ ಪೊಲೀಸರು ಅಮಾನುಷವಾಗಿ ಥಳಿಸಿದ್ದರು ಎನ್ನಲಾಗಿದೆ. ನವೆಂಬರ್ 6ರಂದು ಆತನನ್ನು ವೈದ್ಯರ ಬಳಿ ಕರೆತರಲಾಗಿತ್ತು. ಆತನ ಬಲಗೈ ಕತ್ತರಿಸದೆ ಹೋದರೆ ಆತ ಬದುಕಿ ಉಳಿಯುವುದು ಕಷ್ಟ ಎನ್ನುವ ಪರಿಸ್ಥಿತಿ ಉಂಟಾಗಿತ್ತು. ಮೂರು ಕಾರ್ ಬ್ಯಾಟರಿಗಳ ಕಳವಿನಲ್ಲಿ ತನ್ನ ಪಾತ್ರ ಇರುವ ಬಗ್ಗೆ ಆತ ತಪ್ಪು ಒಪ್ಪಿಕೊಂಡಿದ್ದ ಎನ್ನಲಾಗಿದೆ. ಆತ ಬ್ಯಾಟರಿಗಳನ್ನು ಖರೀದಿ ಮಾಡಿದವರ ಬಗ್ಗೆ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಅವುಗಳನ್ನು ವಶಪಡಿಸಿಕೊಂಡಿದ್ದರು. ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬಗೆಹರಿಯದೆ ಉಳಿದಿದ್ದ ಇನ್ನೂ ಅನೇಕ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಳ್ಳುವಂತೆ ಪೊಲೀಸರು ಆತನಿಗೆ ಹಿಂಸೆ ನೀಡಲು ಆರಂಭಿಸಿದ್ದರು ಎನ್ನಲಾಗಿದೆ. ಅಕ್ಟೋಬರ್ 31ರವರೆಗೂ ಐದು ದಿನ ಸಲ್ಮಾನ್ ಖಾನ್‌ನನ್ನು ಪೊಲೀಸರು ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡಿದ್ದರು. ನಿರಂತರವಾಗಿ ಆತನನ್ನು ಥಳಿಸುತ್ತಿದ್ದರಿಂದ ಅವನ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಅ. 31ರಂದು ಆರೋಪಿಯನ್ನು ಆತನ ತಾಯಿ ಜತೆಗೆ ಪೊಲೀಸರು ಬಿಟ್ಟು ಕಳುಹಿಸಿದ್ದರು. ಆದರೆ ಆತನ ಬಲಗೈ ಸಹಜಕ್ಕಿಂತ ಎರಡು ಪಟ್ಟು ಹೆಚ್ಚು ಊದಿಕೊಂಡಿತ್ತು. ಅದು ದಿನದಿಂದ ದಿನಕ್ಕೆ ಮತ್ತಷ್ಟು ಹದಗೆಡುತ್ತಿತ್ತು. ಅದನ್ನು ಕಂಡ ವೈದ್ಯರು ಆತನನ್ನು ಉಳಿಸಲು ಬಲಗೈ ಕತ್ತರಿಸುವುದು ಅನಿವಾರ್ಯ ಎಂದಿದ್ದರು. ಸಲ್ಮಾನ್ ಖಾನ್‌ನ ಭುಜದ ಭಾಗದ ಮೂಳೆಯಲ್ಲಿ ಸಮಸ್ಯೆ ಉಂಟಾಗಿತ್ತು. ಆ ಭಾಗದ ನರಗಳಿಗೆ ಹಾನಿಯಾಗಿತ್ತು ಎಂದು ಮೂಲಗಳು ತಿಳಿಸಿವೆ. ಈ ವಿಚಾರವನ್ನು ಖಾನ್ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಪೊಲೀಸರ ಅಮಾನುಷ ವರ್ತನೆ ಬೆಳಕಿಗೆ ಬಂದಿತ್ತು. ಡಿಸಿಪಿ (ವೈಟ್ ಫೀಲ್ಡ್) ಡಿ ದೇವರಾಜ್ ಅವರು ತನಿಖೆಗೆ ಆದೇಶಿಸಿದ್ದರು. ವೈಟ್‌ಫೀಲ್ಡ್ ಎಸಿಪಿ ನಡೆಸಿದ ವಿಚಾರಣೆಯಲ್ಲಿ ಈ ಆರೋಪಗಳು ಸತ್ಯ ಎಂದು ಮೇಲ್ನೋಟಕ್ಕೆ ದೃಢಪಟ್ಟಿತ್ತು. ತನಿಖಾ ವರದಿ ಆಧಾರದಲ್ಲಿ ಹೆಡ್ ಕಾನ್‌ಸ್ಟೇಬಲ್ ನಾಗಭೂಷಣ ಗೌಡ ಮತ್ತು ಕಾನ್‌ಸ್ಟೇಬಲ್‌ಗಳಾದ ಬಿಎನ್ ನಾಗರಾಜ್ ಮತ್ತು ಎಚ್ ಶಿವರಾಜ್ ಅವರನ್ನು ಅಮಾನತು ಮಾಡಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಪೊಲೀಸರ ಕ್ರೌರ್ಯದ ಆರೋಪದ ಬಗ್ಗೆ ಕರ್ನಾಟಕ ಮಾನವ ಹಕ್ಕುಗಳ ಸಂಘಟನೆಗಳ ರಾಷ್ಟ್ರೀಯ ಸಂಸ್ಥೆ, ಅಖಿಲ ಭಾರತ ನ್ಯಾಯಕ್ಕಾಗಿ ವಕೀಲರ ಸಂಘಟನೆ ಮತ್ತು ದ್ವೇಷ ಭಾಷಣದ ವಿರುದ್ಧದ ಆಂದೋಲನಗಳು ಜಂಟಿಯಾಗಿ ಸತ್ಯ ಶೋಧನಾ ಸಮಿತಿ ರಚಿಸಿದ್ದು, ತನ್ನ ವರದಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಸಲ್ಮಾನ್ ಖಾನ್‌ನನ್ನು ವರ್ತೂರು ಪೊಲೀಸರು ಅಕ್ರಮವಾಗಿ ಬಂಧನದಲ್ಲಿ ಇಟ್ಟುಕೊಂಡಿದ್ದರು ಮತ್ತು ಬರ್ಬರವಾಗಿ ಥಳಿಸಿದ್ದರಿಂದ ಆತ ಕೈ ಕಳೆದುಕೊಂಡಿದ್ದಾನೆ ಎಂದು ವರದಿಯಲ್ಲಿ ತಿಳಿಸಿದೆ. ಇದು 'ಬೆಂಗಳೂರಿ ಜೈ ಭೀಮ್ ಘಟನೆ' ಎಂದು ಕರೆದಿರುವ ಎನ್‌ಸಿಎಚ್‌ಆರ್‌ಒ ರಾಜ್ಯಾಧ್ಯಕ್ಷ ಎಸ್ ಬಾಲನ್, ಸಂತ್ರಸ್ತನಿಗೆ ಒಂದು ಕೋಟಿ ರೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.


from India & World News in Kannada | VK Polls https://ift.tt/3xNjv4m

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...