ಇನ್ನು ಮುಂದೆ ನೇರ ಪ್ರಸಾರದಲ್ಲಿ ಹೈಕೋರ್ಟ್ ಕಲಾಪ ವೀಕ್ಷಿಸಲು ಅವಕಾಶ

ಬೆಂಗಳೂರು: ಮತ್ತು ಇತರೆ ನ್ಯಾಯಾಲಯಗಳು ಹಾಗೂ ನ್ಯಾಯಮಂಡಳಿಯ ವಿಚಾರಣೆಗಳು ಜನವರಿ 1ರಿಂದ ನೇರ ಪ್ರಸಾರವಾಗಲಿವೆ. ಈ ಬಗ್ಗೆ ಗುರುವಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ನೇರ ಪ್ರಸಾರದಲ್ಲಿ ಹತ್ತು ನಿಮಿಷ ವಿಳಂಬ ಇರಲಿದೆ. ಹಾಗೆಯೇ ಕೋರ್ಟ್ ನಿರ್ದೇಶನಕ್ಕೆ ಅನುಗುಣವಾಗಿ ಇದನ್ನು ಬದಲಿಸಬಹುದು. ಕರ್ನಾಟಕ ಕೋರ್ಟ್ ವಿಚಾರಣೆಗಳ ಮತ್ತು ಮುದ್ರಣಗಳ ನಿಯಮಗಳು 2021, ಅಧಿಸೂಚನೆಯನ್ನು ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಬಳಿಕ ನೀಡಲಾದ ನಿರ್ದೇಶನಗಳ ಅಡಿಯಲ್ಲಿ ಹೊರಡಿಸಲಾಗಿದೆ. ಇದರಿಂದ ಇನ್ನು ಮುಂದೆ ನ್ಯಾಯಾಲಯಗಳ ವಿಚಾರಣೆಯನ್ನು ನೇರ ಪ್ರಸಾರದಲ್ಲಿ ವೀಕ್ಷಿಸಬಹುದು. ಆದರೆ ಕೆಲವು ವಿಚಾರಣೆಗಳ ನೇರ ಪ್ರಸಾರಕ್ಕೆ ನ್ಯಾಯಾಲಯ ನಿರ್ಬಂಧ ವಿಧಿಸಬಹುದು. 2021ರ ಮೇ 31ರಂದು, ಕಾರವಾರ ಬಂದರು ವಿಸ್ತರಣೆ ಯೋಜನೆಗೆ ಸಂಬಂಧಿಸಿದ ಎರಡು ಪಿಐಎಲ್‌ಗಳ ವಿಚಾರಣೆಯನ್ನು ನೇರ ಪ್ರಸಾರ ಮಾಡುವ ಮೂಲಕ ಪ್ರಾಯೋಗಿಕ ಲೈವ್ ಸ್ಟ್ರೀಮಿಂಗ್ ನಡೆಸಲಾಗಿತ್ತು. ಕೆರೆಗಳಿಗೆ ಸಂಬಂಧಿಸಿದ ಇನ್ನೂ ಎರಡು ಪ್ರಕರಣಗಳ ವಿಚಾರಣೆಯನ್ನು ಕೂಡ ನೇರ ಪ್ರಸಾರ ಮಾಡಲಾಗಿತ್ತು. ಎಲ್ಲ ಪ್ರಕರಣಗಳ ವಿಚಾರಣೆಯೂ ನೇರ ಪ್ರಸಾರ ಆಗುವುದಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ವೈವಾಹಿಕ ವಿವಾದಗಳು, ಲೈಂಗಿಕ ಅಪರಾಧಗಳು, ಐಪಿಸಿ ಸೆಕ್ಷನ್ 376ರ ಅಡಿಯ ಪ್ರಕರಣಗಳು, ಲಿಂಗ ಆಧಾರಿತ ಹಿಂಸೆ, ಪೋಕ್ಸೋ ಕಾಯ್ದೆ, ಬಾಲಾರೋಪಿಗಳ ನ್ಯಾಯ ಕಾಯ್ದೆ ಮುಂತಾದ ಪ್ರಕರಣಗಳ ನೇರ ಪ್ರಸಾರ ಇರುವುದಿಲ್ಲ. ಸಮುದಾಯಗಳ ನಡುವೆ ವೈರತ್ವ ಪ್ರಚೋದಿಸುವಂತಹ ಪ್ರಕರಣಗಳು, ಸಾಕ್ಷ್ಯಗಳ ದಾಖಲೆ, ಪಾಟಿ ಸವಾಲು, ವಕೀಲರ ನಡುವಿನ ಸಾರ್ವಜನಿಕಯೇತರ ಚರ್ಚೆಗಳು, ಕ್ಯಾಮೆರಾ ಮುಂದಿನ ವಿಚಾರಣೆಗಳ ನೇರ ಪ್ರಸಾರಕ್ಕೆ ಅವಕಾಶ ಇಲ್ಲ. ಹಾಗೆಯೇ ತಮ್ಮ ಪ್ರಕರಣಗಳ ನೇರ ಪ್ರಸಾರ ಮಾಡದಂತೆ ಅರ್ಜಿದಾರರು ಆಕ್ಷೇಪ ಸಲ್ಲಿಸಬಹುದು. ನ್ಯಾಯಾಧೀಶರ ನಡುವಿನ ಚರ್ಚೆಗಳು, ಆಡಳಿತ ಸಿಬ್ಬಂದಿಗೆ ನ್ಯಾಯಾಧೀಶರ ಸೂಚನೆಗಳು, ನ್ಯಾಯಾಧೀಶರು ಮತ್ತು ವಕೀಲರು ಮಾಡಿಕೊಂಡ ಟಿಪ್ಪಣಿಗಳು, ವಕೀಲರು ಹಾಗೂ ನ್ಯಾಯಾಲಯದ ನಡುವೆ ನಡೆಯುವ ಅರ್ಜಿಯೇತರ ಸಂವಹನಗಳು ಕೂಡ ಈ ಪಟ್ಟಿಯಲ್ಲಿವೆ. ಅರ್ಜಿದಾರರ ಜನ್ಮದಿನಾಂಕ, ನಿವಾಸ ವಿಳಾಸ, ಗುರುತಿನ ಚೀಟಿ ಸಂಖ್ಯೆ, ಬ್ಯಾಂಕ್ ಖಾತೆ ಮಾಹಿತಿ ಮತ್ತು ಹತ್ತಿರದ ಸಂಬಂಧಿಗಳು, ಸಾಕ್ಷಿದಾರರು ಮತ್ತು ಇತರೆ ಭಾಗಿದಾರರ ಖಾಸಗಿ ಮಾಹಿತಿಗಳನ್ನು ನೇರ ಪ್ರಸಾರದ ವೇಳೆ ಡಿಲೀಟ್ ಅಥವಾ ಮ್ಯೂಟ್ ಮಾಡಲಾಗುತ್ತದೆ. ಅಧಿಕೃತ ವ್ಯಕ್ತಿಗಳು ಅಥವಾ ಸಂಸ್ಥೆ ಮಾತ್ರವೇ ನೇರ ಪ್ರಸಾರವನ್ನು ಮುದ್ರಿಸಿಕೊಳ್ಳುವ ಅಥವಾ ಹಂಚಿಕೊಳ್ಳುವ ಅಥವಾ ಸಂಗ್ರಹಿಸುವ ಅಧಿಕಾರ ಹೊಂದಿರುತ್ತಾರೆ. ಇದನ್ನು ಉಲ್ಲಂಘಿಸಿದರೆ ಭಾರತೀಯ ಹಕ್ಕುಸ್ವಾಮ್ಯ ಕಾಯ್ದೆ 1957 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಅಡಿ ವಿಚಾರಣೆಗೆ ಅರ್ಹವಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.


from India & World News in Kannada | VK Polls https://ift.tt/3pIaLKi

ಜಮ್ಮುವಿನ ವೈಷ್ಟೋ ದೇವಿ ಭವನದಲ್ಲಿ ಕಾಲ್ತುಳಿತ: ಸುದ್ದಿ ಕೇಳಿ ತೀವ್ರ ದುಃಖವಾಯಿತು; ಎಚ್‌ಡಿಕೆ

ಬೆಂಗಳೂರು: ಜಮ್ಮುವಿನ ಭವನದಲ್ಲಿ ಕಾಲ್ತುಳಿತ ಸುದ್ದಿ ಕೇಳಿ ತೀವ್ರ ದುಃಖವಾಯಿತು ಎಂದು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಹೊಸ ವರ್ಷದ ದಿನ ದೇಗುಲಗಳಲ್ಲಿ ಭಕ್ತಸಂದಣಿ ದಟ್ಟವಾಗಿರುತ್ತದೆ. ಎಲ್ಲೂ ದೇವರ ದರ್ಶನಕ್ಕೆ ನೂಕುನುಗ್ಗಲು ಆಗುವುದು ಬೇಡ ಎಂದು ಮನವಿ ಮಾಡಿದ್ದಾರೆ. ಹೊಸ ವರ್ಷದ ಮೊದಲ ದಿನವೇ ಜಮ್ಮುವಿನ ಕತ್ರಾದಲ್ಲಿರುವ ಮಾತೆ ವೈಷ್ಣೋದೇವಿ ದೇವಾಲಯದಲ್ಲಿ ಕಾಲ್ತುಳಿತ ಉಂಟಾಗಿ 12 ಭಕ್ತರು ಸಾವನ್ನಪ್ಪಿರುವ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಗಾಯಗೊಂಡಿರುವ ಭಕ್ತರು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಹೊಸ ವರ್ಷದ ದಿನ ದೇಗುಲಗಳಲ್ಲಿ ಭಕ್ತಸಂದಣಿ ದಟ್ಟವಾಗಿರುತ್ತದೆ. ಎಲ್ಲೂ ದೇವರ ದರ್ಶನಕ್ಕೆ ನೂಕುನುಗ್ಗಲು ಆಗುವುದು ಬೇಡ. ಕೋವಿಡ್‌ ಮಾರಿ ಇನ್ನೂ ಇದ್ದು, ಓಮಿಕ್ರಾನ್‌ ರೂಪದಲ್ಲಿ ಕಾಡುತ್ತಿದೆ. ಭಕ್ತರು ಕೋವಿಡ್‌ ನಿಯಮಗಳೊಂದಿಗೆ ಶಾಂತಚಿತ್ತರಾಗಿ ಭಗವಂತನ ದರ್ಶನ ಪಡೆಯಲಿ ಎಂದು ಮನವಿ ಮಾಡಿದ್ದಾರೆ. ಜಮ್ಮು ಕಾಶ್ಮೀರದ ಕತ್ರಾದಲ್ಲಿರುವ ಮಾತಾ ವೈಷ್ಟೋ ದೇವಿ ಭವನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 12 ಮಂದಿ ಯಾತ್ರಾರ್ಥಿಗಳು ಮೃತಪಟ್ಟಿದ್ದು 13 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮಧ್ಯರಾತ್ರಿ ಯಾತ್ರಾರ್ಥಿಗಳ ನಡುವೆ ಮಾತಿನ ಚಕಮುಕಿ ನಡೆದು, ಪರಸ್ಪರ ತಳ್ಳಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಸಂಭವಿಸಿದೆ. ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದಲೂ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಹಾಗೂ ಗಾಯಾಳುಗಳಿಗೆ ಐವತ್ತು ಸಾವಿರ ಪರಿಹಾರ ಘೋಷಿಸಲಾಗಿದೆ. ಘಟನೆಯಿಂದ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ಮತ್ತು ಗಾಯಾಳುಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.


from India & World News in Kannada | VK Polls https://ift.tt/32FuHoz

ಮನೆ ಬಾಗಿಲಿಗೆ ಕತ್ತೆ ಹಾಲು: ಭಾರೀ ಡಿಮ್ಯಾಂಡ್; ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ!

ಮಂಜುನಾಥ್‌ ಶೇರಖಾನೆ ಹಳಿಯಾಳ ಉತ್ತರ ಕನ್ನಡ: ಆಕಳು, ಮೇಕೆ ಮತ್ತು ಎಮ್ಮೆಯ ಸೇರಿದಂತೆ ಕೆಲವು ಸಾರಿ ಒಂಟೆಯ ಹಾಲು ಸಿಗುವುದು ಸಾಮಾನ್ಯ ಮಾತಾಗಿದೆ. ಆದರೆ ಪಟ್ಟಣದಲ್ಲಿ ಇದೀಗ ಕತ್ತೆಯ ಹಾಲು ಮನೆ ಬಾಗಿಲಿಗೆ ಸರಬರಾಜು ಮಾಡಲು ಏಳು ಕತ್ತೆಗಳ ಸಮೇತ ದೂರದ ಬೀದರ್ ಜಿಲ್ಲೆಯ ಕೆಲವರು ಪಟ್ಟಣಕ್ಕೆ ಆಗಮಿಸಿ ಪ್ರತಿ ದಿನ ನಸುಕಿನ ಜಾವ ಮನೆಮನೆಗೆ ಆಗಮಿಸಿ ಖರೀದಿಸುವಂತೆ ಮನವೊಲಿಸುತ್ತಿದ್ದಾರೆ. ಪ್ರತಿ ಲೀಟರ್‌ಗೆ 5 ಸಾವಿರ ರೂ. ನಂತೆ ಹಾಲು ಮಾರಾಟ ಮಾಡುತ್ತಿದ್ದಾರೆ. ಹಲವಾರು ರೀತಿಯ ವನಸ್ಪತಿಗಳನ್ನು ತಿನ್ನುವುದರಿಂದ ಅದರ ಹಾಲು ಆರೋಗ್ಯಕ್ಕೆ ಅತ್ಯುತ್ತಮವಾಗಿದ್ದರಿಂದ ಬೆಲೆಯು ಹೆಚ್ಚಾಗಿದೆ. ಪ್ರತಿ ಲೀಟರ್‌ ಹಾಲಿನ ಬೆಲೆ 5 ಸಾವಿರ ರೂ ಆಗಿದ್ದು, ಪ್ರತಿ ದಿನ ನಸುಕಿನ 6 ಗಂಟೆಯಿಂದ 9 ಗಂಟೆಯವರೆಗೆ ಪ್ರತಿ ಬಡಾವಣೆಗಳಿಗೆ ಭೇಟಿ ನೀಡಿ ಮನೆಮನೆಗೆ ತೆರಳಿ ಹಾಲು ಪಡೆಯುವಂತೆ ಒತ್ತಾಯಿಸುತ್ತಿದ್ದಾರೆ. ಜೊತೆಗೆ ಹಾಲಿನ ಸೇವೆನೆಯಿಂದ ವಿಶೇಷವಾಗಿ ಮಕ್ಕಳಿಗೆ ಪದೇಪದೆ ಬರುವ ಕೆಮ್ಮು, ಜ್ವರ, ಕಫ ಸೇರಿದಂತೆ ಇನ್ನಿತರ ರೋಗಗಳಿಗೆ ರಾಮಬಾಣವಾಗಿದ್ದು ಮಹಿಳೆಯರು ಹಾಗೂ ಪುರುಷರು ಸಹ ಇದನ್ನು ಸೇವಿಸುವುದರಿಂದ ದೀರ್ಘಕಾಲದ ರೋಗಳಿಗೆ ಪರಿಹಾರ ಪಡೆಯಬಹುದು ಎಂದು ಹೇಳುತ್ತಾರೆ. ಒಂದು ಕಪ್‌ಗೆ ನೂರು ರೂ. ಗ್ರಾಹಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಮನೆ ಮನೆಗೆ ಕತ್ತೆ ಸಮೇತ ಆಗಮಿಸುವ ಮಾಲೀಕರು ಒಂದು ಕಪ್‌ಗೆ 100ರೂ.ನಂತೆ ಮಾರಾಟ ಮಾಡುತ್ತಿದ್ದಾರೆ. ಕೆಲವರು ಕತ್ತೆ ಹಾಲಿನ ಕುರಿತು ತಮ್ಮ ಮೊಬೈಲ್‌ಗಳಲ್ಲಿ ಸರ್ಚ್ ಮಾಡಿ ಅದರ ಮಹತ್ವವನ್ನು ಅರಿತು ನಂತರ ಖರೀದಿ ಮಾಡುತ್ತಿರುವುದು ಕಂಡು ಬಂದಿದೆ. ಬಹುತೇಕ ಜನರು ಈಗಾಗಲೇ ಟಿವಿ ಮತ್ತು ಪತ್ರಿಕೆಗಳಲ್ಲಿ ಕತ್ತೆ ಹಾಲಿನ ವಿಚಾರ ತಿಳಿದುಕೊಂಡು ಸ್ವಯಂ ಪ್ರೇರಿತರಾಗಿ ಖರೀದಿಸಲು ಮುಂದಾಗಿದ್ದಾರೆ. ಕಳೆದ ಮೂರು ದಿನಗಳಿಂದ ಪಟ್ಟಣದಲ್ಲಿ ಬೀಡು ಬಿಟ್ಟಿರುವ ಕತ್ತೆ ಮಾಲೀಕರು ಉತ್ತಮ ವ್ಯಾಪಾರ ನಡೆಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸಿದ್ದು ಮುಂದಿನ ಮೂರು ದಿನಗಳ ಕಾಲ ಬೀಡು ಬಿಟ್ಟು ಕತ್ತೆ ಹಾಲಿನ ಮಾರಾಟದ ಜೊತೆಗೆ ಅದರಲ್ಲಿ ಅಡಗಿರುವ ಜೌಷಧೀಯ ಗುಣಗಳು, ಪೌಷ್ಟಿಕಾಂಶ ಮತ್ತು ಸೌಂದರ್ಯ ವರ್ಧಕದ ಬಗ್ಗೆ ಅರಿವು ಮೂಡಿಸುವ ಯತ್ನ ನಡೆಸಲಾಗುತ್ತಿದೆ ಎಂದು ಕತ್ತೆ ಮಾಲೀಕ ನಿತೀನ್ ತಿಳಿಸಿದ್ದಾರೆ.


from India & World News in Kannada | VK Polls https://ift.tt/3JAGDbJ

ಕಾಶ್ಮೀರದಲ್ಲಿ ವೈಷ್ಣೋದೇವಿ ದೇಗುಲದಲ್ಲಿ ಭೀಕರ ಕಾಲ್ತುಳಿತ, 12 ಸಾವು, 14 ಮಂದಿಗೆ ಗಾಯ

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಮಾತಾ ವೈಷ್ಣೋದೇವಿ ದೇಗುಲದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 12 ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. ಭಕ್ತಾದಿಗಳ ನೂಕುನುಗ್ಗಲಿನಿಂದಾಗಿ ಕಾಲ್ತುಳಿತ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುರಂತ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಅವರ ಕಚೇರಿಯ ಸಚಿವರೊಬ್ಬರು ತಿಳಿಸಿದ್ದಾರೆ. ಕಾಲ್ತುಳಿತದಲ್ಲಿ 12 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 14 ಮಂದಿ ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಥವಾ ಎಡಿಜಿಪಿ ಮುಖೇಶ್ ಸಿಂಗ್ ಖಚಿತಪಡಿಸಿದ್ದಾರೆ. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ತ್ರಿಕೂಟ ಬೆಟ್ಟದ ಗರ್ಭಗುಡಿಯ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ಹೊಸ ವರ್ಷದ ಆರಂಭದ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಏಕಾಏಕಿ ವೈಷ್ಣೋದೇವಿ ಭವನವನ್ನು ಪ್ರವೇಶಿಸಿದಾಗ ನೂಕುನುಗ್ಗಲು ಉಂಟಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಹೀಗೆ ಒಂದೇ ಸಮನೆ ಒಳನುಗ್ಗಿದ ಭಕ್ತರ ಬಳಿ ಅನುಮತಿ ಪತ್ರಗಳು ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಈ ವೇಳೆ ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯ ಸಹಾಯವಾಣಿ ಸಂಖ್ಯೆಗಳನ್ನು ಹಂಚಿಕೊಂಡಿದ್ದಾರೆ. "ಮಾತಾ ವೈಷ್ಣೋ ದೇವಿ ಭವನದಲ್ಲಿ ನೂಕುನುಗ್ಗಲಿನಿಂದ ಪ್ರಾಣಹಾನಿಯಾಗಿರುವುದು ಅತೀವ ದುಃಖ ತಂದಿದೆ," ಎಂದು ಪ್ರಧಾನಿ ನರೇಂದ್ರ ಮೋದಿ ಟ್ಟೀಟ್‌ ಮಾಡಿದ್ದು, ದುಃಖತಪ್ತ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಮೊತ್ತವನ್ನು ನೀಡಲಾಗುವುದು ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ ಘೋಷಿಸಿದೆ. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು ಎಂದು ಪ್ರಧಾನಿ ಕಚೇರಿ ತಿಳಿಸಿದೆ. "ಮಾತಾ ವೈಷ್ಣೋ ದೇವಿ ದೇಗುಲದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣಹಾನಿಯಾಗಿರುವುದು ತೀವ್ರ ನೋವು ತಂದಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು,” ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಟ್ವೀಟ್ ಮಾಡಿದ್ದಾರೆ. ನಾನು ಪ್ರಧಾನಿಯೊಂದಿಗೆ ಮಾತನಾಡಿದ್ದು, ಘಟನೆಯ ಬಗ್ಗೆ ಅವರಿಗೆ ವಿವರಿಸಿದ್ದೇನೆ ಎಂದು ಹೇಳಿರುವ ಅವರು, ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ ಚಿಕಿತ್ಸೆಯ ವೆಚ್ಚವನ್ನು ದೇಗುಲ ಮಂಡಳಿಯೇ ಭರಿಸಲಿದೆ ಎಂದು ತಿಳಿಸಿದ್ದಾರೆ. ಮಾತಾ ವೈಷ್ಣೋದೇವಿ ದೇಗುಲದಲ್ಲಿ ಕಾಲ್ತುಳಿತದಿಂದ ಸಂಭವಿಸಿರುವ ದುರಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಪಿಎಂಒ ಕಚೇರಿಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದು, ಪ್ರಧಾನಿ ಮೋದಿಯವರು ಗಾಯಾಳುಗಳಿಗೆ ಸಾಧ್ಯವಿರುವ ಎಲ್ಲ ವೈದ್ಯಕೀಯ ನೆರವು ಮತ್ತು ಸಹಾಯವನ್ನು ಒದಗಿಸಲು ಸೂಚನೆಗಳನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/3EQvO1W

ಅಭಯಾರಣ್ಯವಾಸಿಗಳ ಸ್ಥಳಾಂತರಕ್ಕೂ ಪರಿಹಾರ; ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿರುವ ಅರಣ್ಯ ಇಲಾಖೆ!

ಗುರುದತ್ತ ಭಟ್‌ ಬೆಳಗಾವಿ ಬೆಳಗಾವಿ: ರಾಜ್ಯದಲ್ಲಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ನಿವಾಸಿಗಳು ಸ್ವಪ್ರೇರಣೆಯಿಂದ ಸ್ಥಳಾಂತರಗೊಳ್ಳಲು ಇರುವ 15 ಲಕ್ಷ ರೂ.ಗಳ ಪರಿಹಾರದ ಯೋಜನೆಯನ್ನು ಇತರ ಅಭಯಾರಣ್ಯಗಳ ನಿವಾಸಿಗಳ ಸ್ಥಳಾಂತರಕ್ಕೂ ವಿಸ್ತರಿಸಬೇಕು ಎಂಬ ಪ್ರಸ್ತಾವವೀಗ ಸರಕಾರದ ಮುಂದಿದ್ದು, ಕಾರ್ಯರೂಪಕ್ಕೆ ಬಂದರೆ ವನ್ಯಜೀವಿಗಳು ಮತ್ತು ಅರಣ್ಯ ಸಂರಕ್ಷಣೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ)ದ ಫೆ.2008 ರ ಮಾರ್ಗಸೂಚಿ ಅನ್ವಯ, ಹುಲಿ ಸಂರಕ್ಷಿತ ಕೋರ್‌, ಕ್ರಿಟಿಕಲ್‌ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಕುಟುಂಬಗಳು ಸ್ವಯಂ ಪ್ರೇರಿತರಾಗಿ ಪುನರ್ವಸತಿಗೊಳ್ಳಲು ಬಯಸಿದರೆ ಮೊದಲು 10 ಲಕ್ಷ ರೂ. ನೀಡಲಾಗುತ್ತಿತ್ತು. 2021ರ ಏಪ್ರಿಲ್‌ನಲ್ಲಿ ಆದೇಶ ಪರಿಷ್ಕರಿಸಿ ಪರಿಹಾರದ ಮೊತ್ತವನ್ನು 15 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಆದರೆ ರಾಜ್ಯದಲ್ಲಿ ಅಳಿವಿನಂಚಿನಲ್ಲಿರುವ ವನ್ಯಪ್ರಭೇದಗಳನ್ನು ಹೊಂದಿರುವ ಅಭಯಾರಣ್ಯಗಳು ಹಾಗೂ ರಾಷ್ಟ್ರೀಯ ಉದ್ಯಾನಗಳು ಇನ್ನೂ ಹಲವಾರಿವೆ. ಈ ಪ್ರದೇಶಗಳಲ್ಲಿಯೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ನಿಯಮಗಳು ಅಡ್ಡಿಯಾಗುತ್ತಿವೆ. ಇಲ್ಲಿ ವಾಸಿಸುತ್ತಿರುವ ಸಾವಿರಾರು ಕುಟುಂಬಗಳು ಮೂಲ ಸೌಕರ್ಯಗಳ ಕೊರತೆ ಹಾಗೂ ತಮ್ಮ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಸ್ವಯಂಪ್ರೇರಿತರಾಗಿ ಪುನರ್ವಸತಿಗೊಳ್ಳಲು ಸಿದ್ಧರಿದ್ದಾರೆ. ಸೂಕ್ತ ಪುನರ್ವಸತಿ ಪ್ಯಾಕೇಜ್‌ ಕೊರತೆಯಿಂದ ಇಂತಹ ಪ್ರದೇಶಗಳಲ್ಲಿಪುನರ್ವಸತಿ ಯೋಜನೆ ಯಾವುದೇ ಪ್ರಗತಿ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪರಿಹಾರದ ಮೊತ್ತ ಹೆಚ್ಚಳ ಯೋಜನೆಯನ್ನು ಎಲ್ಲ ಅರಣ್ಯ ಪ್ರದೇಶಗಳ ನಿವಾಸಿಗಳಿಗೂ ವಿಸ್ತರಿಸುವಂತೆ ವನ್ಯಜೀವಿ ಕಾರ್ಯಕರ್ತ ಗಿರಿಧರ ಕುಲಕರ್ಣಿ ಅವರು ರಾಜ್ಯ ಅರಣ್ಯ ಸಚಿವ ಉಮೇಶ್‌ ಕತ್ತಿ ಮತ್ತು ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಮನವಿ ಮಾಡಿದ್ದರು. ಬಳಿಕ ಅರಣ್ಯ ಇಲಾಖೆಯ ಮುಖ್ಯ ವನ್ಯಜೀವಿ ಪರಿಪಾಲಕ (ಪಿಸಿಸಿಎಫ್‌ ವೈಲ್ಡ್‌ ಲೈಫ್‌ ) ವಿಜಯಕುಮಾರ್‌ ಗೋಗಿ ಅವರು ಈ ಕುರಿತು ವಿಸ್ತೃತ ವರದಿಯೊಂದಿಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಸ್ಥಳಾಂತರಕ್ಕೆ ಸಿದ್ಧ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯದ ವ್ಯಾಪ್ತಿಯಲ್ಲಿ ಹದಿಮೂರು ಗ್ರಾಮಗಳಿವೆ. ಇಲ್ಲಿನ ತಳೇವಾಡಿ ಸೇರಿದಂತೆ ಕೆಲ ಗ್ರಾಮಗಳ ಜನ ಸೂಕ್ತ ಪುನರ್ವಸತಿ ಪ್ಯಾಕೇಜ್‌ ನೀಡಿ ತಮ್ಮನ್ನು ಅಭಯಾರಣ್ಯದ ಹೊರಗೆ ಸ್ಥಳಾಂತರಿಸುವಂತೆ ಎಂಟು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದಾರೆ. ಅದೇ ರೀತಿ ಶಿವಮೊಗ್ಗ ವ್ಯಾಪ್ತಿಯ ಅಭಯಾರಣ್ಯದ ಕೆಲ ಗ್ರಾಮಸ್ಥರೂ ಸೂಕ್ತ ಪುನರ್‌ವಸತಿಗಾಗಿ ಅರಣ್ಯ ಇಲಾಖೆಯ ಕಚೇರಿಗಳನ್ನು ಎಡತಾಕುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಪರಿಹಾರ ಹೆಚ್ಚಳ ಮಾಡಿದ ಮಾದರಿಯನ್ನೇ ಇತರ ಅರಣ್ಯ ಪ್ರದೇಶಗಳ ಜನರ ಪುನರ್‌ವಸತಿಗೂ ಅನುಸರಿಸಿದರೆ ನನೆಗುದಿಗೆ ಬಿದ್ದಿರುವ ಯೋಜನೆ ಚುರುಕು ಪಡೆಯುವ ಆಶಯ ವ್ಯಕ್ತವಾಗಿದೆ. ಅನುದಾನವಿದೆ 'ಕಾಂಪಾ' (ಕಾಂಪನ್ಸೇಟರಿ ಅಫಾರೆಸ್ಟೇಶನ್‌ ಫಂಡ್‌ ಮ್ಯಾನೇಜ್‌ಮೆಂಟ್‌ ಆ್ಯಂಡ್‌ ಪ್ಲ್ಯಾನಿಂಗ್‌ ಅಥಾರಿಟಿ) ಎನ್‌.ಪಿ.ವಿ. ನಿಧಿಯನ್ನು ಸಂರಕ್ಷಿತ ಅರಣ್ಯ ವ್ಯಾಪ್ತಿಯೊಳಗೆ ವಾಸಿಸುತ್ತಿರುವ ಜನರ ಪುನರ್ವಸತಿಗೆ ವಿನಿಯೋಗಿಸಲು ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ 2010ರ ಮಾರ್ಚ್ 18ರಂದು ಮಾರ್ಗಸೂಚಿ ಹೊರಡಿಸಿದೆ. ಹಾಗಾಗಿ ಈ ಯೋಜನೆಯಡಿ ಲಭ್ಯವಿರುವ ಅನುದಾನವನ್ನು ಪುನರ್ವಸತಿ ಯೋಜನೆಗೆ ಬಳಸಬಹುದು ಎಂಬುದು ಪರಿಸರವಾದಿಗಳ ಅಭಿಪ್ರಾಯ. ಹುಲಿ ಸಂರಕ್ಷಿತ ಪ್ರದೇಶಗಳ ನಿವಾಸಿಗಳ ಪುನರ್ವಸತಿಗೆ ಪರಿಹಾರ ಧನ ಹೆಚ್ಚಿಸಿದ ಮಾದರಿಯಲ್ಲೇ ತಮಗೂ ಪರಿಹಾರ ಹೆಚ್ಚಳ ಮಾಡುವಂತೆ ಹಲವಾರು ಅಭಯಾರಣ್ಯಗಳು ಮತ್ತು ಸಂರಕ್ಷಿತ ಅರಣ್ಯ ಪ್ರದೇಶಗಳ ನಿವಾಸಿಗಳಿಂದ ಒತ್ತಾಯ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರಕ್ಕೆ ಸೂಕ್ತ ಕ್ರಮಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಸಂಜಯ್‌ ಮೋಹನ್‌, ಅರಣ್ಯ ಇಲಾಖೆ ಮುಖ್ಯಸ್ಥ


from India & World News in Kannada | VK Polls https://ift.tt/34cnhcW

2021ರಲ್ಲೇ ಅತಿ ಹೆಚ್ಚು ಡ್ರಗ್ಸ್‌ ಪ್ರಕರಣ ದಾಖಲು: ಮಾದಕ ವಸ್ತು ಮಾರಾಟದ ವಿರುದ್ಧ ಸಮರ ಸಾರಿರುವ ಬೆಂಗಳೂರು ಪೊಲೀಸರು!

ಬೆಂಗಳೂರು: ಮಾದಕ ವಸ್ತು ಮಾರಾಟ ಮತ್ತು ಸರಬರಾಜು ವಿರುದ್ಧ ಸಮರ ಸಾರಿರುವ ನಗರ ಪೊಲೀಸರು 2021ನೇ ಸಾಲಿನಲ್ಲಿ ಮಾದಕವಸ್ತು ಮಾರಾಟ ಸಂಬಂಧ ಎನ್‌ಡಿಪಿಎಸ್‌ ಕಾಯಿದೆಯಡಿ ಒಟ್ಟು 4,547 ಪ್ರಕರಣ ದಾಖಲಿಸಿದ್ದು, 5,741 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪೈಕಿ 176 ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ. ಮಾದಕವಸ್ತು ಪ್ರಕರಣಗಳ ಸಂಬಂಧ ಹಿಂದಿನ ಎರಡು ವರ್ಷಕ್ಕೆ ಹೋಲಿಕೆ ಮಾಡಿದರೆ 2021ನೇ ಸಾಲಿನಲ್ಲೇ ಅತಿಹೆಚ್ಚು ಪ್ರಕರಣಗಳು ದಾಖಲಾಗಿವೆ. 2019ರಲ್ಲಿ 768 ಪ್ರಕರಣ ಸಂಬಂಧ 1,260 ಮಂದಿ ಮತ್ತು 2020ರಲ್ಲಿ 2,766 ಪ್ರಕರಣಗಳ ಸಂಬಂಧ 3,673 ಮಂದಿಯನ್ನು ಬಂಧಿಸಲಾಗಿತ್ತು. ಈ ಪೈಕಿ 2019 ರಲ್ಲಿ38, 2020 ರಲ್ಲಿ84 ಹಾಗೂ 2021 ರಲ್ಲಿ176 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿತ್ತು. ನಗರದಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ 2021ನೇ ಸಾಲಿನಲ್ಲಿ 26 ಮಂದಿ ರೌಡಿಶೀಟರ್‌ಗಳನ್ನು ಗೂಂಡಾ ಕಾಯಿದೆಯಡಿ ಬಂಧಿಸಿದ್ದು, 10 ರೌಡಿಗಳನ್ನು ಗಡಿಪಾರು ಮಾಡಲಾಗಿದೆ. 2019ನೇ ಸಾಲಿನಲ್ಲಿ 21 ಹಾಗೂ 2020ನೇ ಸಾಲಿನಲ್ಲಿ 15 ಮಂದಿ ರೌಡಿಶೀಟರ್‌ಗಳನ್ನು ಗೂಂಡಾ ಕಾಯಿದೆಯಡಿ ಬಂಧಿಸಲಾಗಿತ್ತು. ಆದರೆ, ಒಬ್ಬರನ್ನೂ ಗಡಿಪಾರು ಮಾಡಿರಲಿಲ್ಲ. ಹೀಗಾಗಿ, 2021ನೇ ಸಾಲಿನಲ್ಲಿ ಅತಿಹೆಚ್ಚು ಸಂಖ್ಯೆಯ ರೌಡಿಶೀಟರ್‌ಗಳನ್ನು ಗೂಂಡಾ ಕಾಯಿದೆಯಡಿ ಬಂಧಿಸಿ, ಗಡಿಪಾರು ಮಾಡಲಾಗಿದೆ ಎಂದು ಪೊಲೀಸರು ಅಧಿಕೃತವಾಗಿ ತಿಳಿಸಿದ್ದಾರೆ. ಜೂಜಾಟ ಪ್ರಕರಣದಲ್ಲಿ 3,989 ಮಂದಿಯ ಬಂಧನ ನಗರದಲ್ಲಿ ಅಕ್ರಮ ಜೂಟಾಟದ ಅಡ್ಡೆಗಳ ಮೇಲೆ ದಾಳಿ ಮಾಡಿರುವ ಪೊಲೀಸರು, 2021ನೇ ಸಾಲಿನಲ್ಲಿ 491 ಜೂಜಾಟ ಪ್ರಕರಣ ದಾಖಲಿಸಿ, 3,989 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. 2019ನೇ ಸಾಲಿನಲ್ಲಿ 352 ಪ್ರಕರಣ ದಾಖಲಿಸಿ, 3,791 ಆರೋಪಿಗಳನ್ನು ಬಂಧಿಸಿದ್ದರು. 2020ನೇ ಸಾಲಿನಲ್ಲಿ 502 ಪ್ರಕರಣ ದಾಖಲಿಸಿ, 4,611 ಮಂದಿಯನ್ನು ಬಂಧಿಸಿದ್ದಾರೆ. ಇನ್ನು 2021ನೇ ಸಾಲಿನಲ್ಲಿ 96 ಕ್ರಿಕೆಟ್‌ ಬೆಟ್ಟಿಂಗ್‌ ಪ್ರಕರಣ ದಾಖಲಿಸಿ, 238 ಜನರನ್ನು ಬಂಧಿಸಿದ್ದಾರೆ. 2021ನೇ ಸಾಲಿನಲ್ಲಿ ಕಾನೂನುಬಾಹಿರವಾಗಿ ಆಯುಧಗಳನ್ನು ಹೊಂದಿರುವ ಅಪರಾಧಗಳ ವಿರುದ್ಧ ಶಸ್ತ್ರಾಸ್ತ ಕಾಯಿದೆಯಡಿ 217 ಪ್ರಕರಣ ದಾಖಲಿಸಿದ್ದಾರೆ. 363 ಸುಲಿಗೆ ಪ್ರಕರಣ ದಾಖಲ 2021ನೇ ಸಾಲಿನಲ್ಲಿ ನಗರದಲ್ಲಿ 363 ಸುಲಿಗೆ ಪ್ರಕರಣ ದಾಖಲಾಗಿದ್ದು, 273 ಪತ್ತೆಯಾಗಿವೆ. 2019 ಮತ್ತು 2020ನೇ ಸಾಲಿನಲ್ಲಿ ಕ್ರಮವಾಗಿ 506 ಮತ್ತು 378 ಪ್ರಕರಣ ದಾಖಲಾಗಿದ್ದು, 405 ಮತ್ತು 323 ಪ್ರಕರಣ ಪತ್ತೆಯಾಗಿವೆ. ಇನ್ನು 2021ರಲ್ಲಿ 165 ಸರ ಅಪಹರಣ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 130 ಪ್ರಕರಣ ಪತ್ತೆ ಮಾಡಲಾಗಿದೆ. 2019 ಮತ್ತು 2020ನೇ ಸಾಲಿನಲ್ಲಿ ಕ್ರಮವಾಗಿ 225 ಹಾಗೂ 152 ಪ್ರಕರಣ ದಾಖಲಾಗಿದ್ದು, 214 ಹಾಗೂ 145 ಪ್ರಕರಣ ಪತ್ತೆಯಾಗಿವೆ. 2021ನೇ ಸಾಲಿನಲ್ಲಿ ಮಾದಕವಸ್ತು ಪ್ರಕರಣಗಳ ಕುರಿತು ಮಾಹಿತಿ ಮಾದಕವಸ್ತು- ತೂಕ -ಬಂಧಿತರ ಸಂಖ್ಯೆ
  • ಗಾಂಜಾ- 3,589 ಕೆ.ಜಿ. -5,368
  • ಹ್ಯಾಶಿಶ್‌- 48.61 ಕೆ.ಜಿ.- 16
  • ಎಕ್ಸ್‌ಟೆಸಿ -8206 ಮಾತ್ರೆ- 46
  • ಎಲ್‌ಎಸ್‌ಡಿ -12451 ಸ್ಟ್ರಿಫ್ಸ್‌- 7


from India & World News in Kannada | VK Polls https://ift.tt/3qBrw9y

ರಾಜ್ಯದಲ್ಲಿ ಕೆರೆಗಳ ಸಂರಕ್ಷಣೆಗೆ ಅಧಿಕಾರಿಗಳಿಂದ ನಿರ್ಲಕ್ಷ್ಯ; ಸರ್ವೆಗೆ ಮೀನಾಮೇಷ, ಒತ್ತುವರಿ ತೆರವು ವಿಳಂಬ!

ಶಶಿಧರ್‌ ಎಸ್‌.ದೋಣಿಹಕ್ಲು, ತುಮಕೂರು ಕರ್ನಾಟಕ: ಕೆರೆಗಳ ಸಂರಕ್ಷಣೆ ನಿಟ್ಟಿನಲ್ಲಿ ಸರಕಾರದ ನಿರ್ಲಕ್ಷ್ಯ ಮುಂದುವರಿದಿದ್ದು, ರಾಜ್ಯದಲ್ಲಿ ಸಾವಿರಾರು ಕೆರೆಗಳ ಸರ್ವೆ ಕಾರ್ಯವೇ ನಡೆದಿಲ್ಲ. ಜತೆಗೆ ಸರ್ವೆ ನಡೆಸಿ ಗುರುತಿಸಲ್ಪಟ್ಟ ಒತ್ತುವರಿ ತೆರವಿಗೂ ಮುಹೂರ್ತ ಕೂಡಿ ಬಂದಿಲ್ಲ. ಕರ್ನಾಟಕ ಮತ್ತು ಅಭಿವೃದ್ಧಿ ಪ್ರಾಧಿಕಾರವೇ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ ರಾಜ್ಯದಲ್ಲಿ 39,179 ಕೆರೆಗಳಿದ್ದು, ಇದುವರೆಗೆ 17,009 ಕೆರೆಗಳ ಸರ್ವೆಯನ್ನು ಮಾಡಲಾಗಿದೆ. ಅವುಗಳಲ್ಲಿ 7,136 ಕೆರೆಗಳು ಒತ್ತುವರಿಯಾಗಿರುವುದನ್ನು ಗುರುತಿಸಲಾಗಿದೆ. 3,300 ಕೆರೆಗಳ ಒತ್ತುವರಿ ತೆರವು ಮಾಡಲಾಗಿದ್ದು, 3,836 ಕೆರೆಗಳ ಒತ್ತುವರಿ ತೆರವಿಗೆ ಕ್ರಮಗಳಾಗಿಲ್ಲ. ಅಲ್ಲದೆ 22,170 ಕೆರೆಗಳ ಸರ್ವೆಗೆ ಸಮಯ ಸಿಗದಿರುವುದು ವಿಪರ್ಯಾಸ. ಗುರುತಿಸಲು ಅಸಡ್ಡೆ ಜಲ ಸಂರಕ್ಷಣೆ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿ ಎಂಬುದು ಹೆಸರಿಗಷ್ಟೇ ಮಾತ್ರವಾಗಿದ್ದು, ಆ ನಿಟ್ಟಿನಲ್ಲಿ ಆದ್ಯತಾನುಸಾರ ಕೆಲಸಗಳೇ ನಡೆಯುತ್ತಿಲ್ಲ. ಗುರುತಿಸಲ್ಪಟ್ಟ ಕೆರೆಗಳ ಒತ್ತುವರಿ ತೆರವು ಮಾತ್ರವಲ್ಲದೆ ಸಮೀಕ್ಷೆ ಕಾರ್ಯಕ್ಕೆ ಅಸಡ್ಡೆ ತೋರಲಾಗುತ್ತಿದೆ. ಕೆರೆಗಳ ಒತ್ತುವರಿ ತೆರವು ಸೇರಿದಂತೆ ಜಲ ಮೂಲಗಳು ಮತ್ತು ಜಲಕಾಯಗಳ ಸಂರಕ್ಷಣೆ ನಿಟ್ಟಿನಲ್ಲಿ ಕ್ರಮವಹಿಸಲು ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ ಆದೇಶಿಸಿವೆ. ಆದರೂ ಸಂರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿಲ್ಲ. ಇಲಾಖೆಗಳಲ್ಲಿಲ್ಲ ಸಮನ್ವಯತೆಕೆರೆಗಳ ಜಾಗ ಗುರುತಿಸುವಿಕೆ ಹಾಗೂ ಒತ್ತುವರಿ ತೆರವು ಕಾರ್ಯಾಚರಣೆ ವಿಚಾರದಲ್ಲಿ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ ಹಾಗೂ ಬೃಹತ್‌ ನೀರಾವರಿ ಇಲಾಖೆಗಳು ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಸಮನ್ವಯತೆ ಕೊರತೆ ಕಾಡುತ್ತಿದೆ. ಆಯಾಯ ಇಲಾಖೆಗಳ ಪ್ರಾಥಮಿಕ ಕಾರ್ಯಗಳಿಗೇ ಸಿಬ್ಬಂದಿ ಕೊರತೆ ಮುಂದಿಟ್ಟು ಸಹಕಾರ ತೋರುತ್ತಿಲ್ಲ. ಹೀಗಾಗಿ ಜಲ ಜಾಗ ಗುರುತಿಸುವುದು ಹಾಗೂ ಒತ್ತುವರಿ ತೆರವಿಗೆ ಪ್ರತ್ಯೇಕವಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಿ ಸಂರಕ್ಷಣಾ ಕಾಯಕಕ್ಕೆ ವೇಗ ನೀಡಬೇಕಿದೆ. ಅಂತೆಯೇ ಹೂಳೆತ್ತುವ, ಕಟ್ಟೆಗಳನ್ನು ಭದ್ರಪಡಿಸುವ ಕಾರ್ಯವೂ ಆಗಬೇಕಿದೆ. ಮಳೆ ಬಂದರೂ ನೀರಿಲ್ಲ! ಬಯಲುಸೀಮೆ ಪ್ರದೇಶಗಳನ್ನೂ ಒಳಗೊಂಡಂತೆ ರಾಜ್ಯದೆಲ್ಲೆಡೆ ಭಾರಿ ಮಳೆಯಾಗಿದ್ದರೂ ನೀರಿನ ಹಾಹಾಕಾರ ತಪ್ಪಿಲ್ಲ! ಮಳೆ ನೀರಿನ ಸಂರಕ್ಷಣೆ, ನೀರನ್ನು ಹಿಡಿದಿಟ್ಟುಕೊಳ್ಳಬೇಕಾದ ಜಾಗಗಳನ್ನು ಗುರುತಿಸುವ ಹಾಗೂ ಮುಲಾಜಿಲ್ಲದೆ ಒತ್ತುವರಿ ತೆರವು ಮಾಡಿದರೆ ಮಾತ್ರ ಮಳೆ ನೀರಿನ ಸಂರಕ್ಷಣೆ ಸಾಧ್ಯ. ಸುತ್ತೋಲೆಯಲ್ಲಿ ಏನಿದೆ?ಹೈಕೋರ್ಟ್‌ ಆದೇಶದ ಬಳಿಕ ರಾಜ್ಯ ಸರಕಾರವು ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಡಳಿತಗಳಿಗೆ ಸುತ್ತೋಲೆ ಹೊರಡಿಸಿದ್ದು, 'ನೀರು ಇರಲಿ, ಇಲ್ಲದಿರಲಿ ಸರಕಾರಿ ಕೆರೆ, ಖರಾಬು ಕೆರೆ, ಕುಂಟೆ, ಕಟ್ಟೆ ಸೇರಿದಂತೆ ಯಾವುದೇ ಜಲ ಮೂಲ, ಜಲಕಾಯಗಳನ್ನು ಸಂರಕ್ಷಿಸಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿದೆ. ಈ ಪ್ರದೇಶಗಳನ್ನು ಯಾವುದೇ ಸರಕಾರಿ ಅಥವಾ ಖಾಸಗಿ ಉದ್ದೇಶಗಳಿಗೆ ಉಪಯೋಗಿಸಿಕೊಳ್ಳಲು ಅವಕಾಶವಿರುವುದಿಲ್ಲ ಹಾಗೂ ಪುನರುಜ್ಜೀವನಕ್ಕೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದೆ. ಕೆರೆಗಳು, ರಾಜಕಾಲುವೆಗಳ ಒತ್ತುವರಿ, ನೀರಿನ ಹರಿವಿನ ಜಾಗಗಳು ಮುಚ್ಚುತ್ತಿರುವುದರಿಂದ ಪ್ರವಾಹ ಸದೃಶ ಸ್ಥಿತಿ ನಿರ್ಮಾಣವಾಗುತ್ತಿರುವುದು. ಒಂದೆಡೆ ನೀರನ್ನು ಹಿಡಿದಿಟ್ಟುಕೊಳ್ಳಲಾಗದೆ ಧಾರಾಕಾರವಾಗಿ ಹರಿದು ಹೋಗುತ್ತಿದೆ ಹಾಗೂ ಇನ್ನೊಂದೆಡೆ ನೀರಿನ ಮೂಲಗಳಿಗೇ ಸಂಚಕಾರ ಬಂದಿದ್ದು, ಇನ್ನಾದರೂ ಎಚ್ಚೆತ್ತುಕೊಳ್ಳಲೇಬೇಕಿದೆ. ಪ್ರತಾಪ್‌ ಮುನಿಯಪ್ಪ, ಭೂ ವಿಜ್ಞಾನಿ ಜಲಮೂಲಗಳು ಮತ್ತು ಜಲಕಾಯಗಳ ಸಂರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯಬೇಕು. ಈ ನಿಟ್ಟಿನಲ್ಲಿ ಯಾವುದೇ ನೆಪ ಹೇಳಲು ಅವಕಾಶ ಸಿಗದಂತೆ ಜಾಗ ಗುರುತಿಸುವಿಕೆ ಮತ್ತು ಒತ್ತುವರಿ ತೆರವುಗೊಳಿಸಲು ವಿಶೇಷ ಕಾರ್ಯಪಡೆ ನೇಮಿಸಬೇಕು. ಆಂಜನೇಯ ರೆಡ್ಡಿ ಆರ್‌., ನೀರಾವರಿ ಹೋರಾಟಗಾರ, ಚಿಕ್ಕಬಳ್ಳಾಪುರ ರಾಜ್ಯದ ಕೆರೆಗಳ ಒತ್ತುವರಿ ವಿವರ
  • ಒಟ್ಟು ಕೆರೆಗಳು : 39,179
  • ಕೆರೆಗಳ ವ್ಯಾಪ್ತಿ : 6,89,417 ಎಕರೆ
  • ಸರ್ವೆ ಮಾಡಿರುವ ಕೆರೆಗಳು : 17,009
  • ಸರ್ವೆಯಾಗಿರುವ ವ್ಯಾಪ್ತಿ : 3,01,818 ಎಕರೆ
  • ಸರ್ವೆಗೆ ಬಾಕಿ ಕೆರೆಗಳು : 22,170
  • ಸರ್ವೆಗೆ ಬಾಕಿ ಇರುವ ಕೆರೆಗಳ ವ್ಯಾಪ್ತಿ : 3,85,073 ಎಕರೆ
  • ಗುರುತಿಸಲ್ಪಟ್ಟ ಒತ್ತುವರಿಯಾಗಿರುವ ಕೆರೆಗಳು : 7,136
  • ಒತ್ತುವರಿ ಕೆರೆ ಪ್ರದೇಶ : 30,507 ಎಕರೆ
  • ಒತ್ತುವರಿ ತೆರವು ಮಾಡಲಾಗಿರುವ ಕೆರೆಗಳು : 3,300
  • ಒತ್ತುವರಿ ತೆರವಾದ ಪ್ರದೇಶ : 20,092 ಎಕರೆ
  • ಒತ್ತುವರಿ ತೆರವಿಗೆ ಬಾಕಿ ಇರುವ ಕೆರೆಗಳು : 3,836
  • ಒತ್ತುವರಿ ತೆರವಿಗೆ ಬಾಕಿ ಇರುವ ವ್ಯಾಪ್ತಿ : 10,443 ಎಕರೆ


from India & World News in Kannada | VK Polls https://ift.tt/3pF6Z4y

'ಡ್ರೆಸ್ಸಿಂಗ್‌ ಕೊಠಡಿಯಲ್ಲಿ ದ್ರಾವಿಡ್‌ ಇರುವುದು ನಮ್ಮ ಅದೃಷ್ಟ' : ರಾಹುಲ್‌!

ಸೆಂಚೂರಿಯನ್‌: ದಕ್ಷಿಣ ಆಫ್ರಿಕಾ ವಿರುದ್ದ ಮೊದಲನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಗೆಲುವು ಪಡೆದ ಬಳಿಕ ಟೀಮ್‌ ಇಂಡಿಯಾ ಆರಂಭಿಕ ಕೆ.ಎಲ್‌ ರಾಹುಲ್‌ ತಮ್ಮ ಹೆಡ್‌ ಕೋಚ್‌ ರಾಹುಲ್ ದ್ರಾವಿಡ್‌ ಅವರ ಕಾರ್ಯವೈಖರಿ ಬಗ್ಗೆ ಬೆಳಕು ಚೆಲ್ಲಿದರು. ಗುರುವಾರ ಇಲ್ಲಿನ ಸೂಪರ್‌ಸ್ಪೋರ್ಟ್‌ ಪಾರ್ಕ್‌ ಸ್ಟೇಡಿಯಂನಲ್ಲಿ ಮುಕ್ತಾಯವಾದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ 113 ರನ್‌ಗಳ ಗೆಲುವು ಪಡೆಯಿತು ಹಾಗೂ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಬ್ಯಾಟಿಂಗ್‌ಗೆ ಕಠಿಣವಾಗಿರುವ ಪಿಚ್‌ ಹೊರತಾಗಿಯೂ ಪ್ರಥಮ ಇನಿಂಗ್ಸ್‌ನಲ್ಲಿ ವೃತ್ತಿ ಜೀವನದ 7ನೇ ಶತಕ ಸಿಡಿಸಿದ್ದ ಆರಂಭಿಕ ಕೆ.ಎಲ್‌ ರಾಹುಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದರು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಲ್‌ ರಾಹುಲ್‌, " ಅವರಂಥ ಅದ್ಭುತ ಆಟಗಾರರ ಜೊತೆ ಕುಳಿತುಕೊಂಡಾಗ, ಆಟದ ಬಗ್ಗೆ ನೀವು ಸಾಕಷ್ಟು ಕಲಿಯಬಹುದು. ಕಲಾತ್ಮಕ ಬ್ಯಾಟಿಂಗ್‌ ಬಗ್ಗೆ ಮಾತನಾಡಬಹುದು, ದ್ರಾವಿಡ್‌ ರೀತಿಯ ಒಬ್ಬರನ್ನು ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಹೊಂದಿರುವುದಕ್ಕೆ ನಮ್ಮೆಲ್ಲರ ಅದೃಷ್ಟ. ಅವರು ಡ್ರೆಸ್ಸಿಂಗ್ ಕೊಠಡಿಯಲ್ಲಿ ಶಾಂತ ವಾತಾವರಣ ಹಾಗೂ ಸಂಯೋಜನೆಯನ್ನು ತಂದುಕೊಡುತ್ತಾರೆ. ಸರಣಿಗೂ ಮುನ್ನ ಅವರು ನೆಟ್ಸ್‌ನಲ್ಲಿ ಹಾಗೂ ತರಬೇತಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ," ಎಂದು ಶ್ಲಾಘಿಸಿದರು. "ಟೀಮ್‌ ಇಂಡಿಯಾ ಪಾಲಿಗೆ 2021 ವಿಶೇಷ ವರ್ಷವಾಗಿದೆ. ಈ ರೀತಿಯ ಸಾಧನೆಯನ್ನು ನಾವು ಈ ವರ್ಷದಲ್ಲಿ ಮಾಡಿದ್ದೇವೆ. ವಿಶೇಷವಾಗಿ ಭಾರತೀಯ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿಯೇ ಅತ್ಯುತ್ತಮ ವರ್ಷಗಳಲ್ಲಿ ಇದು ಒಂದಾಗಿದೆ," ಎಂದು ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಕೆ.ಎಲ್ ರಾಹುಲ್‌ ಸಂತಸ ವ್ಯಕ್ತಪಡಿಸಿದರು. "ಶಿಸ್ತು ಮತ್ತು ಕಠಿಣ ಪರಿಶ್ರಮದ ಪ್ರತಿಫಲವೇ ಗೆಲುವು. ಕಳೆದ ಹಲವು ವರ್ಷಗಳಿಂದ ನಾವು ಒಂದು ತಂಡವಾಗಿ ಕಠಿಣ ಪರಿಶ್ರಮ ಪಟ್ಟಿದ್ದೇವೆ ಹಾಗೂ ನಿಧಾನವಾಗಿ ಫಲಿತಾಂಶವನ್ನು ನೋಡುತ್ತಿದ್ದೇವೆ. ಪ್ರಸ್ತುತ ಸನ್ನಿವೇಶದಲ್ಲಿ ಡ್ರೆಸ್ಸಿಂಗ್‌ ಕೊಠಡಿ ಅದ್ಭುತವಾಗಿದೆ. ಇದು ಅತ್ಯುತ್ತಮ ಟೆಸ್ಟ್‌ ಗೆಲುವು," ಎಂದು ಹೇಳಿದರು. "ಏಷ್ಯದ ಯಾವುದೇ ತಂಡ ಇಲ್ಲಿಗೆ ಬಂದು ಸೆಂಚೂರಿಯನ್‌ನಲ್ಲಿ ಟೆಸ್ಟ್‌ ಪಂದ್ಯ ಗೆದ್ದಿಲ್ಲ. ಆದರೆ, ನಾವು ಟೆಸ್ಟ್‌ ಸರಣಿ ಆರಂಭಕ್ಕೂ ಮೊದಲೇ ಇಲ್ಲಿಗೆ ಬಂದು ಅತ್ಯುತ್ತಮ ತಯಾರಿಯನ್ನು ನಡೆಸಿದ್ದೇವೆ. ಈ ಕಾರಣದಿಂದಲೇ ನಾವು ಇಲ್ಲಿ ಉತ್ತಮ ಪ್ರದರ್ಶನ ತೋರಿ ಪಂದ್ಯ ಗೆಲ್ಲಲು ಸಾಧ್ಯವಾಯಿತು," ಎಂದರು. ಸೂಚೂರಿಯನ್‌ ಟೆಸ್ಟ್‌ ಪಂದ್ಯದ ಗೆಲುವಿನಲ್ಲಿ ಸಂಭ್ರಮದಲ್ಲಿರುವ ನಾಯಕತ್ವದ ಟೀಮ್‌ ಇಂಡಿಯಾ ಮುಂದಿನ ಸೋಮವಾರದಿಂದ ಜೋಹನ್ಸ್‌ಬರ್ಗ್‌ನಲ್ಲಿ ಶುರುವಾಗಲಿರುವ ಎರಡನೇ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3qJpPXI

ಬಂಧಿಸಲು ಹೋದ ಯಶವಂತಪುರ ಠಾಣಾ ಪಿಎಸ್‌ಐಗೆ ಚಾಕುವಿನಿಂದ ಇರಿದ ಡಕಾಯಿತರು

ಬೆಂಗಳೂರು: ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಗಳ ಸುಳಿವು ಪತ್ತೆ ಹಚ್ಚಿ ಅವರನ್ನು ಬಂಧಿಸಲು ತೆರಳಿದ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಸಂಜಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ಠಾಣೆ ಪಿಎಸ್‌ಐ ವಿನೋದ್‌ ರಾಥೋಡ್‌ ಮತ್ತು ಪೊಲೀಸ್‌ ಕಾನ್‌ಸ್ಟೆಬಲ್‌ ವಲ್ಲಿಸಾಬ್‌ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ತಿಂಗಳು ಯಶವಂತಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವೃದ್ಧರ ಮನೆಗೆ ನುಗ್ಗಿದ ಆರೇಳು ಮಂದಿ ಆರೋಪಿಗಳು, ಪಿಸ್ತೂಲ್‌ ತೋರಿಸಿ ದರೋಡೆ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಯಶವಂತಪುರ ಠಾಣೆ ಪೊಲೀಸರು, ಕೆಲ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಆದರೆ, ಪ್ರಕರಣದ ಪ್ರಮುಖ ಆರೋಪಿ ಸೇರಿ ಇತರರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿತ್ತು. ಈ ಸಂಬಂಧ ಯಶವಂತಪುರ ಪೊಲೀಸ್‌ ಠಾಣೆ ಪಿಎಸ್‌ಐ ವಿನೋದ್‌ ರಾಥೋಡ್‌ ತನಿಖೆ ಕೈಗೊಂಡಿದ್ದರು. ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಸಂಜಯನಗರ ಠಾಣೆ ವ್ಯಾಪ್ತಿಯ ಹೆಬ್ಬಾಳ ಮೇಲುಸೇತುವೆ ಬಳಿ ಮೂವರು ಆರೋಪಿಗಳು ಓಡಾಡುತ್ತಿದ್ದಾರೆ ಎಂಬ ಮಾಹಿತಿ ತನಿಖಾಧಿಕಾರಿಗೆ ಸಿಕ್ಕಿತ್ತು. ಕೂಡಲೇ ಪೊಲೀಸ್‌ ಕಾನ್‌ಸ್ಟೆಬಲ್‌ ವಲ್ಲಿಸಾಬ್‌ ಜತೆ ವಿನೋದ್‌ ಸ್ಥಳಕ್ಕೆ ತೆರಳಿದ್ದರು. ಆಗ ಆರೋಪಿಗಳು ಪೊಲೀಸರನ್ನು ಕಂಡು ಭೂಪಸಂದ್ರದ ರೈಲ್ವೆ ಗೇಟ್‌ ಮೂಲಕ ತೋಟದ ಬಳಿ ಪರಾರಿಯಾಗಲು ಮುಂದಾದರು. ಅವರನ್ನು ಹಿಂಬಾಲಿಸಿದ ಪಿಎಸ್‌ಐ ಆರೋಪಿಗಳನ್ನು ಹಿಡಿಯಲು ಮುಂದಾದರು. ಈ ವೇಳೆ ಆರೋಪಿಯೊಬ್ಬ ಪೊಲೀಸ್‌ ಕಾನ್‌ಸ್ಟೆಬಲ್‌ ವಲ್ಲಿಸಾಬ್‌ ಅವರನ್ನು ತಳ್ಳಿದ್ದ. ಆಗ ಪಿಎಸ್‌ಐ ವಿನೋದ್‌ ರಾಥೋಡ್‌, ಕೆಳಗೆ ಬೀಳುತ್ತಿದ್ದ ವಲ್ಲಿಸಾಬ್‌ ಅವರನ್ನು ಹಿಡಿದುಕೊಳ್ಳಲು ಯತ್ನಿಸಿದ್ದಾರೆ. ಅದೇ ವೇಳೆ ಆರೋಪಿಗಳು ಪಿಎಸ್‌ಐ ಮೊಣಕೈಗೆ ಚಾಕುವಿನಿಂದ ಇರಿದಿದ್ದಾರೆ. ಸದ್ಯ ಪಿಎಸ್‌ಐ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಆರೋಪಿಗಳ ವಶ:ಪಿಎಸ್‌ಐ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ದರೋಡೆ ಪ್ರಕರಣದಲ್ಲಿ ಜೈಲು ಸೇರಿದ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.


from India & World News in Kannada | VK Polls https://ift.tt/3EBKqSF

ಕರ್ಫ್ಯೂ ಎಫೆಕ್ಟ್: ಹೋಟೆಲ್‌ ಬುಕ್ಕಿಂಗ್ ರದ್ದು; ಮನೆಯಲ್ಲೇ ಹೊಸ ವರ್ಷಾಚರಣೆಗೆ ಸಜ್ಜು

ಹರೀಶ ಎಲ್‌. ತಲಕಾಡು ಮೈಸೂರು: ಹೊಸ ವರ್ಷ ಆರಂಭಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಆದರೆ ಈ ಬಾರಿಯೂ ಆಚರಣೆ ಸಾರ್ವಜನಿಕವಾಗಿ ಹೋಟೆಲ್‌, ರೆಸಾರ್ಟ್‌ಗಳಲ್ಲಿ ನಡೆಯದೇ ಕೇವಲ ಮನೆಗೆ ಸಿಮೀತವಾಗಿದೆ. ಓಮಿಕ್ರಾನ್‌ ತಡೆಗೆ ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಜಿಲ್ಲಾಡಳಿತ ನೈಟ್‌ ಕರ್ಫ್ಯೂ ಜಾರಿಗೊಳಿಸಿದೆ. ಪರಿಣಾಮ ಡಿ.31 ರಂದು ರಾತ್ರಿ ಸಾರ್ವಜನಿಕರು, ರಸ್ತೆಗಿಳಿಯದೇ ಮನೆಯಲ್ಲಿಯೇ ಹೊಸವರ್ಷವನ್ನು ಸ್ವಾಗತಿಸಲು ಸಿದ್ಧತೆ ನಡೆಸಿದ್ದಾರೆ. ಹೊಸ ವರ್ಷ ಆಚರಣೆಗೆ ಬೇಕಾದ ಕೇಕ್‌, ಮತ್ತಿತರ ವಸ್ತುಗಳನ್ನು ಖರೀದಿಸಿ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಬೇಕರಿಗಳಲ್ಲಿ ಕೇಕ್‌ ಬಿಕರಿ ಹೆಚ್ಚಾಗುತ್ತಿದೆ. ಮದ್ಯ ಪ್ರಿಯರು, ಕೊನೆ ಸಮಯದಲ್ಲಿ ಮದ್ಯ ಸಿಗದೇ ಸಮಸ್ಯೆಯಾಗಬಹುದು ಎಂದು ಈಗಲೇ ಖರೀದಿಯಲ್ಲಿ ನಿರತರಾಗಿದ್ದಾರೆ. ಮನೆಗಳಲ್ಲಿ ಸಂಭ್ರಮ: ಹೊಸ ವರ್ಷವನ್ನು ಮನೆಯಲ್ಲಿಆಚರಿಸಲು ಯಾವುದೇ ನಿರ್ಬಂಧವಿಲ್ಲ. ಹೀಗಾಗಿ ನಾಲ್ಕೈದು ಕುಟುಂಬಗಳ ಸದಸ್ಯರು ಒಂದೇ ಮನೆಯಲ್ಲಿ ಸೇರಿ ಪಾರ್ಟಿ ನಡೆಸಲು ಸಜ್ಜಾಗಿದ್ದಾರೆ. ಹಾಡು, ಕುಣಿತದೊಂದಿಗೆ ಹೊಸ ವರ್ಷದ ಸ್ವಾಗತಕ್ಕೆ ಅಣಿಯಾಗುತ್ತಿದ್ದಾರೆ. ಹೋಟೆಲ್‌ ರೂಂ ಬುಕ್ಕಿಂಗ್‌: ಹಾಸ್ಟೆಲ್‌ ಮತ್ತು ಪಿಜಿಗಳಲ್ಲಿ ವಾಸ್ತವ್ಯ ಹೂಡಿರುವ ಯುವಕ-ಯುವತಿಯರು ಹೋಟೆಲ್‌, ಲಾಡ್ಜ್‌ಗಳಲ್ಲಿ ಪ್ರತ್ಯೇಕವಾಗಿ ರೂಂ ಬುಕ್‌ ಮಾಡಿ ಹೊಸ ವರ್ಷದ ಆಚರಣೆಗೆ ಪ್ಲ್ಯಾನ್‌ ಮಾಡುತ್ತಿದ್ದಾರೆ. ಐದಾರು ಮಂದಿ ಒಂದೆಡೆ ಸೇರಿ ಸಂಭ್ರಮಾಚರಿಸುವ ಸಡಗರದಲ್ಲಿದ್ದಾರೆ. ಬೇಕರಿ ಉದ್ಯಮ ಚೇತರಿಕೆ: ಹೊಸ ವರ್ಷಾಚರಣೆಯನ್ನು ಮನೆಯಲ್ಲಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಬೇಕರಿ ಉತ್ಪನ್ನ ಕೇಕ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಳೆದ ಎರಡು ದಿನಗಳಿಂದ ಸಾಕಷ್ಟು ಆರ್ಡರ್‌ಗಳು ಬರುತ್ತಿದ್ದು, ಶುಕ್ರವಾರ ಇನ್ನೂ ಹೆಚ್ಚಾಗಲಿದೆ ಎನ್ನುತ್ತಾರೆ ಬೇಕರಿ ಮಾಲೀಕರೊಬ್ಬರು. ಓಮಿಕ್ರಾನ್‌ ಮುನ್ನೆಚ್ಚರಿಕೆ ಕ್ರಮವಾಗಿ ನೈಟ್‌ ಕರ್ಫ್ಯೂ ಜಾರಿಯಲ್ಲಿರುವುದರಿಂದ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಲಾಗಿದೆ. ಯಾರಾದರೂ ಪಾರ್ಟಿ ಆಯೋಜಿಸಿದರೆ, ಆಯೋಜಿಸಿದವರು ಹಾಗೂ ಭಾಗಿಯಾದವರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಎಚ್ಚರಿಸಿದ್ದಾರೆ. ಪ್ರವಾಸೋದ್ಯಮಕ್ಕೆ ಹೊಡೆತ; ಹೋಟೆಲ್‌ ರೂಮ್‌ ಬುಕ್ಕಿಂಗ್‌ ರದ್ದು ಹೊಸ ವರ್ಷಾಚರಣೆಗೆ ಮೈಸೂರಿಗೆ ಬರಲಿದ್ದ ಪ್ರವಾಸಿಗರು, ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ. ಪರಿಣಾಮ, ಏಕಾಏಕಿ ಹಲವಾರು ಹೋಟೆಲ್‌ಗಳ 1500 ಕೋಣೆಗಳ ಬುಕ್ಕಿಂಗ್‌ ರದ್ದಾಗಿದೆ. ಮೈಸೂರಿಗೆ ಬರಬೇಕಿದ್ದ ಪ್ರವಾಸಿಗರು, ಗೋವಾ ಸೇರಿದಂತೆ ಬೇರೆಡೆಗೆ ತಮ್ಮ ಪ್ರವಾಸವನ್ನು ಬದಲಿಸಿಕೊಂಡಿದ್ದಾರೆ. ಇದರಿಂದ ಪ್ರವಾಸಿಗರು ಬರುತ್ತಾರೆಂದು ನಂಬಿಕೊಂಡಿದ್ದ ಹೊಟೇಲ್‌ ಉದ್ಯಮ ನಷ್ಟ ಅನುಭವಿಸುವಂತಾಗಿದೆ. ಆದರೆ ಮೈಸೂರಿನ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡಲು ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಕೊರತೆಯಾಗಿಲ್ಲ ಎನ್ನುತ್ತಾರೆ ಹೊಟೇಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ. ಹೊಸ ವರ್ಷದ ಸಂಭ್ರಮಾಚರಣೆಗೆ ಮೈಸೂರಿಗೆ ಬರುತ್ತಿದ್ದ ಪ್ರವಾಸಿಗರು, ತಮ್ಮ ಪ್ಲ್ಯಾನ್‌ ಬದಲಿಸಿ ಬೇರೆಡೆ ತೆರಳುತ್ತಿದ್ದಾರೆ. ಇದರಿಂದ ಹೊಟೇಲ್‌ ಉದ್ಯಮಕ್ಕೆ ಸಮಸ್ಯೆಯಾಗಿದೆ. ಸಾಕಷ್ಟು ಹೋಟೆಲ್‌, ರೆಸ್ಟೊರೆಂಟ್‌ಗಳು ಹೊಸ ವರ್ಷದ ಪಾರ್ಟಿ ಆಯೋಜಿಸಲು ಸಿದ್ಧತೆ ನಡೆಸಿದ್ದೆವು. ಈಗ ಸರಕಾರ ಅನುಮತಿ ನೀಡದೇ ಇರುವುದರಿಂದ ನಷ್ಟವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಮೈಸೂರು ಹೊಟೇಲ್‌ ಮಾಲೀಕರ ಸಂಘದ ಸಿ.ನಾರಾಯಣಗೌಡ.


from India & World News in Kannada | VK Polls https://ift.tt/32Eo9qj

ಸ್ಥಳೀಯ ಸಂಸ್ಥೆ ರಿಸಲ್ಟ್‌: ಆಡಳಿತ ಪಕ್ಷಕ್ಕೆ ಮತ್ತೊಂದು ಎಚ್ಚರಿಕೆಯ ಗಂಟೆ, ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಕಾಂಗ್ರೆಸ್‌

ಶಶಿಧರ ಹೆಗಡೆ ಬೆಂಗಳೂರು: ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲೇ ಆಡಳಿತಾರೂಢ ಬಿಜೆಪಿಯ ಇಳಿಜಾರಿನ ಪಯಣ ಪ್ರಾರಂಭವಾಗಿತ್ತು. ಅದು ಈಗಿನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದಲ್ಲೂ ಪ್ರತಿಫಲಿಸಿದೆ. ಈ ಮೂಲಕ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷ ಹಿನ್ನಡೆಯ ಹಾದಿಯಲ್ಲಿರುವುದು ಸ್ಪಷ್ಟವಾಗಿದೆ. ನಗರ ರಾಜ್ಯಾದ್ಯಂತ ನಡೆದದ್ದಲ್ಲ. ಈ ನಡುವೆಯೂ ಈ ಎಲೆಕ್ಷನ್‌ನ ಫಲಶ್ರುತಿ ಬಿಜೆಪಿಗೆ ಶುಭ ಸೂಚಕವಲ್ಲ. ಯಾಕೆಂದರೆ ಕಳೆದ ಐದಾರು ತಿಂಗಳಲ್ಲಿ ನಡೆದ ಚುನಾವಣೆಗಳನ್ನು ಅವಲೋಕಿಸುತ್ತ ಈ ಫಲಿತಾಂಶವನ್ನೂ ನೋಡಬೇಕು. ಬೆಳಗಾವಿ ಬಿಜೆಪಿಯ ಭದ್ರಕೋಟೆ. ಆದರೆ, ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ನಡೆದ ಬೈ ಎಲೆಕ್ಷನ್‌ನಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಗೆಲುವಾಯಿತು. ಅದು ಎಲ್ಲಿಯವರೆಗೆ ಬಂದು ನಿಂತಿದೆಯೆಂದರೆ ಮೊನ್ನೆ ನಡೆದ ಎಂಎಲ್ಸಿ ಚುನಾವಣೆಯಲ್ಲಿ ಇದೇ ಜಿಲ್ಲೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರ್ಗಿ ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲೂ ಬಿಜೆಪಿಗೆ ಮಿಶ್ರಫಲ ಸಿಕ್ಕಿತ್ತು. ಆ ಬಳಿಕ ಸಿಂದಗಿ, ಹಾನಗಲ್‌ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆದ ಎಲೆಕ್ಷನ್‌ನಲ್ಲೂ ನಿರೀಕ್ಷಿಸಿದಷ್ಟು ಸ್ಥಾನ ಬಂದಿಲ್ಲ. ಪ್ರಮುಖವಾಗಿ ದ್ವಿಸದಸ್ಯತ್ವವಿರುವ ಕಡೆ ಬಿಜೆಪಿಗಿಂತಲೂ ಕಾಂಗ್ರೆಸ್‌ಗೆ ಹೆಚ್ಚು ಮತ ಬಂದಿದೆ. ಈ ಎಲ್ಲ ವಿಚಾರಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಬಿಜೆಪಿಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಬಾರಿಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಹುತೇಕ ಕಡೆ ಸಚಿವರ ಕ್ಷೇತ್ರಗಳಲ್ಲೇ ಬಿಜೆಪಿ ಹಿನ್ನಡೆ ಅನುಭವಿಸಿದೆ. ಪ್ರಭಾವಿ ಶಾಸಕರು ಎನಿಸಿಕೊಂಡವರ ಕ್ಷೇತ್ರಗಳಲ್ಲೂ ಪಕ್ಷಕ್ಕೆ ಸಮಾಧಾನ ತರುವ ಫಲಿತಾಂಶ ಬಂದಿಲ್ಲ. ಇದು ಪ್ರತಿಪಕ್ಷಗಳ ಪಾಳಯದಲ್ಲಿ ಉತ್ಸಾಹ ಚಿಮ್ಮುವಂತೆ ಮಾಡಿದೆ. ಪ್ರತಿಪಕ್ಷಗಳಿಗೆ ಅಸ್ತ್ರ ವಿಧಾನಸಭೆ ಚುನಾವಣೆ ಸಿದ್ಧತೆಯನ್ನು ಈಗಾಗಲೇ ಆರಂಭಿಸಿರುವ ಪ್ರತಿಪಕ್ಷ ಕಾಂಗ್ರೆಸ್‌, ಸರಕಾರದ ವಿರುದ್ಧ ಪ್ರಯೋಗಿಸಲು ಸಿಗುವ ಯಾವ ಅಸ್ತ್ರವನ್ನೂ ನಿರರ್ಥಕಗೊಳಿಸುತ್ತಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿರುವುದರಿಂದ ಕಾಂಗ್ರೆಸ್‌ನ ಬತ್ತಳಿಕೆಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷವಿರುವಾಗ ಸರಕಾರದ ವಿರುದ್ಧ ದಕ್ಕುವ ಸಣ್ಣ ಸಣ್ಣ ಗೆಲುವನ್ನೂ ಪ್ರತಿಪಕ್ಷಗಳು ಸಂಭ್ರಮಿಸುವುದು ಸಹಜ. ಕಾಂಗ್ರೆಸ್‌ ಕೂಡ ಈಗ ಇದನ್ನೇ ಮಾಡುತ್ತಿದೆ. ಇದು ಮುಂದಿನ ಚುನಾವಣೆಗೆ ದಿಕ್ಸೂಚಿ ಎಂಬ ಭಾವದಲ್ಲೇ ಕಾಂಗ್ರೆಸ್‌ ನಾಯಕರು ಮಾತನಾಡುತ್ತಿದ್ದಾರೆ. ಅಂದರೆ ಪ್ರತಿಪಕ್ಷದ ಆತ್ಮವಿಶ್ವಾಸ ಹೆಚ್ಚುತ್ತಿದೆ ಎಂದೇ ಅರ್ಥ. ಇನ್ನು ಜೆಡಿಎಸ್‌ ಕೂಡ ತನ್ನ ಪ್ರಾಬಲ್ಯದ ಜಿಲ್ಲೆಗಳಲ್ಲಿ ಮುಖ ಉಳಿಸಿಕೊಂಡಿದೆ. ಬೆಳಗಾವಿ, ಉತ್ತರ ಕನ್ನಡ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಪಕ್ಷೇತರರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬಂದಿದ್ದಾರೆ. ಇದರಿಂದಲೂ ನಷ್ಟವಾಗಿರುವುದು ಬಿಜೆಪಿಗೆ ಎನ್ನುವುದು ಗಮನಾರ್ಹ. ಸಮೀಕರಣದಲ್ಲಿ ಕಾಂಗ್ರೆಸ್‌ ತಂತ್ರಗಾರಿಕೆ ಮಸ್ಕಿ ಉಪ ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್‌ ನಾಯಕರು ತಂತ್ರಗಾರಿಕೆ ರೂಪಿಸಿದ ಬಗ್ಗೆ ಚರ್ಚೆಯಾಗಿತ್ತು. ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿಗೆ ವಿರೋಧಿ ಅಲೆಯಿತ್ತು. ಅದನ್ನು ಕಾಂಗ್ರೆಸ್‌ ಮುಖಂಡರು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಸಫಲರಾಗಿದ್ದರು. ಈ ಮಾತನ್ನು ಯಾಕೆ ಹೇಳಬೇಕಾಯಿತೆಂದರೆ ಕಳೆದೊಂದು ವರ್ಷದಿಂದಲೂ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಕೆಪಿಸಿಸಿ ಮಟ್ಟದಲ್ಲಿ ನಿರಂತರ ಸಭೆ ನಡೆಸಲಾಗುತ್ತಿದೆ. ಅದು ಕೆಳಹಂತದವರೆಗೂ ತಲುಪುವಂತೆ ನೋಡಿಕೊಳ್ಳಲಾಗುತ್ತಿದೆ. ಹಾಗಾಗಿ ಚುನಾವಣೆಯಿಂದ ಚುನಾವಣೆಗೆ ಕಾಂಗ್ರೆಸ್‌ನ ಗ್ರಾಫ್‌ ಏರುತ್ತಿದೆ. ಇದರಿಂದ ಕಾರ್ಯಕರ್ತರಲ್ಲಿ ಹುರುಪು ಬರುವುದು ಸಹಜ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಕಾಂಗ್ರೆಸ್‌ನಲ್ಲಿಇದೇ ಸಕಾರಾತ್ಮಕ ಮನೋಭಾವ ಕೆಲಸ ಮಾಡಿದೆ. ನಗರ ಪ್ರದೇಶದ ಮತದಾರರು ಕಾಂಗ್ರೆಸ್‌ ಬಗ್ಗೆ ಒಲವು ಹೊಂದಿಲ್ಲ ಎಂಬ ಅಭಿಪ್ರಾಯವಿದೆ. ಆದರೆ, ಈ ಬಾರಿ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್‌ ಮುಂಚೂಣಿ ಸ್ಥಾನ ಗಳಿಸಿದೆ. ಇದು ಕಾಂಗ್ರೆಸ್‌ ಕೂಡ ನಗರದ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕಸರತ್ತು ನಡೆಸುತ್ತಿರುವುದರ ದ್ಯೋತಕ. ಅಭ್ಯರ್ಥಿಗಳ ಆಯ್ಕೆ, ಮತ ಸಮೀಕರಣದ ವಿಚಾರದಲ್ಲಿ ಕರಾರುವಾಕ್‌ ಗುರಿಯಿಟ್ಟಿರವುದು ಕಾಂಗ್ರೆಸ್‌ನ ಈ ಯಶಸ್ಸಿಗೆ ಕಾರಣವೆಂದು ಹೇಳಲಾಗುತ್ತಿದೆ. ಸ್ಥಳೀಯ ಸಂಘರ್ಷದಿಂದಲೇ ಮುಳುವು ಕೇಡರ್‌ ಬೇಸ್‌ ಪಾರ್ಟಿ ಎನಿಸಿಕೊಂಡಿರುವ ಬಿಜೆಪಿಯೂ ಅಧಿಕಾರದಲ್ಲಿದ್ದಾಗ ಕಾರ್ಯಕರ್ತರನ್ನು ಮರೆಯುತ್ತದೆ ಎಂಬ ಮಾತಿದೆ. ಯಾಕೆಂದರೆ, ಸ್ಥಳೀಯ ಮುಖಂಡರ ಸಂಘರ್ಷದಲ್ಲಿ ಕಾರ್ಯಕರ್ತರು ಮೂಲೆಗುಂಪಾಗುತ್ತಾರೆ. ಇದು ನಾನಾ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ದೇಶದಲ್ಲೆ ನಂಬರ್‌ ಒನ್‌ ಎನ್ನುವಂತಹ ಸಾಧನೆ ಮಾಡಿದರೂ ಚುನಾವಣೆಗಳಲ್ಲಿ ಬಿಜೆಪಿಯನ್ನು ಮೇಲೆತ್ತುವುದು ಕಷ್ಟ ಎಂಬಂತಾಗಿದೆ. ಏಕೆಂದರೆ, ಜಿಲ್ಲಾ ಹಂತದಲ್ಲಿ ಮುಖಂಡರ ನಡುವಿನ ವೈಮನಸ್ಯ ಬಿಕ್ಕಟ್ಟಾಗಿ ಪರಿಣಮಿಸಿದೆ. ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಘಟಕದ ಸಭೆ ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೇ ಈ ಪರಿಸ್ಥಿತಿಯ ನೇರಾ-ನೇರ ದರ್ಶನವಾಗಿತ್ತು. ಅವರ ಬುದ್ಧಿಮಾತು ರುಚಿಸಿದ್ದರೆ ಎಂಎಲ್ಸಿ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗೆ ಸೋಲಾಗುವ ಪ್ರಮೇಯ ಬರುತ್ತಿರಲಿಲ್ಲ. ಬಿಜೆಪಿ ನಾಯಕರ ಪ್ರತಿಷ್ಠೆಯಿಂದ ಉತ್ತರ ಕರ್ನಾಟಕ ಭಾಗದಲ್ಲೇ ಪಕ್ಷಕ್ಕೆ ಹಿನ್ನಡೆಯಾಗುತ್ತಿರುವುದು ಕಳವಳಕಾರಿ. ಸಚಿವರು, ಮಾಜಿ ಸಚಿವರೇ ತಮ್ಮ ಕ್ಷೇತ್ರದಲ್ಲಿ ಪಕ್ಷೇತರರನ್ನು ಗೆಲ್ಲಿಸಿಕೊಂಡು ಪಕ್ಷಕ್ಕೆ ಇರಿಸುಮುರಿಸು ತಂದಿದ್ದಾರೆ. ಇದರ ನಡುವೆ ಕರಾವಳಿ-ಮಲೆನಾಡು ಭಾಗದ ಜನರು ಬಿಜೆಪಿಯನ್ನು ದೂರ ಮಾಡಿಲ್ಲ ಎಂಬುದನ್ನು ಈ ಚುನಾವಣೆ ಫಲಿತಾಂಶ ಸೂಚ್ಯವಾಗಿ ಹೇಳಿದೆ. ಎಂಎಲ್ಸಿ ಚುನಾವಣೆಯಲ್ಲೂ ಇದೇ ಸೂಚನೆ ಸಿಕ್ಕಿತ್ತು. ಜೆಡಿಎಸ್‌ ನಿರ್ಲಕ್ಷಿಸುವಂತಿಲ್ಲ ಎರಡು ರಾಷ್ಟ್ರೀಯ ಪಕ್ಷಗಳ ಅಬ್ಬರದ ನಡುವೆ ಹೆಚ್ಚಿನ ಬಾರಿ ನಿರ್ಲಕ್ಷ್ಯಕ್ಕೆ ಒಳಗಾಗುವ ಜೆಡಿಎಸ್‌ ಈ ಚುನಾವಣೆಯಲ್ಲಿ ಮುಖ ಎತ್ತಿ ನಿಂತಿದೆ. ಅಂದರೆ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಜೆಡಿಎಸ್‌ಗೆ ಸ್ಪಷ್ಟ ಮೇಲುಗೈ ಸಿಕ್ಕಿದೆ. ಶಿರಾ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿಸೋತಿದ್ದ ಜೆಡಿಎಸ್‌ ಈ ಬಾರಿ ಅಲ್ಲಿ ಚೇತರಿಸಿಕೊಂಡಿದೆ. ಇತರ ಜಿಲ್ಲೆಗಳಲ್ಲೂ ಅಲ್ಲಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಗೆದ್ದಿದ್ದಾರೆ. ಇದರ ಅರ್ಥ ಈ ಪಕ್ಷವನ್ನು ನಿರ್ಲಕ್ಷಿಸುವಂತಿಲ್ಲ ಎಂಬ ಸಂದೇಶ ಹೋದಂತಾಯಿತು. ಇತ್ತೀಚಿನ ಉಪ ಚುನಾವಣೆಗಳಲ್ಲಿ ಜೆಡಿಎಸ್‌ ಸಂಪೂರ್ಣ ಮುಗ್ಗರಿಸಿತ್ತು. ಬಳಿಕ ಎಂಎಲ್ಸಿ ಚುನಾವಣೆಯಲ್ಲಿ ಹಾಸನ, ಮೈಸೂರಿನಲ್ಲಿ ಗೆಲ್ಲುವ ಮೂಲಕ ಅಸ್ತಿತ್ವ ತೋರಿಸಿತು. ಇದೀಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶವೂ ಪಕ್ಷಕ್ಕೆ ಒಂದಷ್ಟು ವಿಶ್ವಾಸ ತುಂಬುವಂತಿದೆ.


from India & World News in Kannada | VK Polls https://ift.tt/3pF85Nv

ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿ ಶಾಕ್‌ ನೀಡಿದ ಕ್ವಿಂಟನ್‌ ಡಿ ಕಾಕ್!

ಸೆಂಚೂರಿಯನ್‌: ಭಾರತ ವಿರುದ್ಧ ಮೊದಲನೇ ಟೆಸ್ಟ್‌ ಸೋಲಿನ ಬೆನ್ನಲ್ಲೆ ತಂಡದ ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್‌ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಹಠಾತ್‌ ನಿವೃತ್ತಿ ಘೋಷಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಈ ಪ್ರಮುಖ ವಿಷಯವನ್ನು ಕ್ರಿಕೆಟ್‌ ದಕ್ಷಿಣ ಆಫ್ರಿಕಾ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಸ್ಪಷ್ಟಪಡಿಸಿದೆ. "ಹರಿಣಗಳ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವ ಸಲುವಾಗಿ ತಕ್ಷಣ ಪರಿಣಾಮಕಾರಿಯಾಗುವಂತೆ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ," ಎಂದು ಸಿಎಸ್‌ಎ ಟ್ವೀಟ್‌ ಮಾಡಿದೆ. ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಮೂರು ಪಂದ್ಯಗಳ ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯದಲ್ಲಿ 113 ರನ್‌ಗಳ ಸೋಲು ಅನುಭವಿಸಿತು. ಆ ಮೂಲಕ ಟೆಸ್ಟ್‌ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿತು. ಇದರ ಬೆನ್ನಲ್ಲೆ ಕ್ವಿಂಟನ್‌ ಡಿ ಕಾಕ್‌ ತಮ್ಮ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಜೀವನದ ಬಗ್ಗೆ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅಂದಹಾಗೆ ಕ್ವಿಂಟನ್‌ ಡಿ ಕಾಕ್‌ ಅವರ ಪತ್ನಿ ಮೊದಲ ಮಗುವಿಗೆ ಜನ್ಮ ನೀಡುವ ಹೊಸ್ತಿಲಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಟೆಸ್ಟ್‌ ಸರಣಿ ಆರಂಭಕ್ಕೂ ಮೊದಲೇ ವಿಕೆಟ್‌ ಕೀಪರ್‌, ಕೊನೆಯ ಎರಡು ಪಂದ್ಯಗಳಿಗೆ ಅಲಭ್ಯರಾಗುವುದಾಗಿ ಘೋಷಿಸಿದ್ದರು. ಆದರೆ, ಮೊದಲನೇ ಪಂದ್ಯ ಮುಗಿದ ಬೆನ್ನಲ್ಲೆ ಟೆಸ್ಟ್‌ ಕ್ರಿಕೆಟ್‌ ಗುಡ್‌ಬೈ ಹೇಳುವ ಮೂಲಕ ಡಿ ಕಾಕ್‌ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಕ್ವಿಂಟನ್‌ ಡಿ ಕಾಕ್‌, "ಈ ನಿರ್ಧಾರ ನಿಜಕ್ಕೂ ಸುಲಭವಾಗಿರಲಿಲ್ಲ. ನನ್ನ ಪತ್ನಿ ಸಶಾ ಮೊದಲನೇ ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಜೀವನದ ಮುಂದಿನ ಅಧ್ಯಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ನಿಟ್ಟಿನಲ್ಲಿ ನನಗೆ ಸೂಕ್ತವಾಗುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಅಂದಹಾಗೆ ಈ ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ಯೋಚಿಸಿದ್ದೇನೆ. ನನಗೆ ಎಲ್ಲವೂ ನನ್ನ ಕುಟುಂಬವೇ," ಎಂದಿದ್ದಾರೆ. "ನಾನು ಅನ್ನು ಇಷ್ಟಪಡುತ್ತೇನೆ ಹಾಗೂ ನನ್ನ ದೇಶವನ್ನು ಪ್ರತಿನಿಧಿಸುವುದನ್ನು ನಾನು ಪ್ರೀತಿಸುತ್ತೇನೆ. ನನ್ನ ವೃತ್ತಿ ಜೀವನದಲ್ಲಿ ಸಂಭವಿಸಿದ ಏರಿಳಿಗಳನ್ನು ನಾನು ಆನಂದಿಸಿದ್ದೇನೆ. ಸಂಭ್ರಮಾಚರಣೆ ಹಾಗೂ ನಿರಾಶದಾಯಕ ಕ್ಷಣಗಳನ್ನು ನಾನು ಅನುಭವಿಸಿದ್ದೇನೆ. ಇದೀಗ ನಾನು ಹೆಚ್ಚು ಇಷ್ಟಪಡುವುದನ್ನು ಕಂಡುಕೊಂಡಿದ್ದೇನೆ," ಎಂದು ಹೇಳಿದರು. ಕಳೆದ 2014ರಲ್ಲಿ ದಕ್ಷಿಣ ಆಫ್ರಿಕಾ ಪರ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಕ್ವಿಂಟನ್‌ ಡಿ ಕಾಕ್‌ 54 ಪಂದ್ಯಗಳಿಂದ 38.82ರ ಸರಾಸರಿಯಲ್ಲಿ 3,300 ರನ್‌ ಗಳಿಸಿದ್ದಾರೆ. ಇದರಲ್ಲಿ ಅವರು 6 ಶತಕಗಳು ಹಾಗೂ 22 ಅರ್ಧಶತಕಗಳನ್ನು ಸಿಡಿಸಿದ್ದಾರೆ. "ಟೆಸ್ಟ್‌ ಕ್ರಿಕೆಟ್‌ ವೃತ್ತಿ ಜೀವನದ ಆರಂಭಿಕ ದಿನಗಳಿಂದಲೂ ನನ್ನ ಜೊತೆಗಿದ್ದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಲು ಈ ಸಮಯವನ್ನು ತೆಗೆದುಕೊಳ್ಳುತ್ತೇನೆ. ನನ್ನ ಕೋಚ್‌ಗಳು, ಸಹ ಆಟಗಾರರು, ವಿವಿಧ ತಂಡಗಳು ಟೀಮ್‌ ಮ್ಯಾನೇಜ್‌ಮೆಂಟ್‌ಗಳು, ನನ್ನ ಕುಟುಂಬ ಮತ್ತು ಸ್ನೇಹಿತರು ಬೆಂಬಲದಿಂದ ನಾನು ಇಲ್ಲಿಯವರೆಗೂ ಬಂದಿದ್ದೇನೆ," ಎಂದು ಡಿ ಕಾಕ್ ಭಾವುಕ ಸಂದೇಶ ಕಳುಹಿಸಿದ್ದಾರೆ. "ಇದು ನನ್ನ ವೃತ್ತಿ ಜೀವನದ ಅಂತ್ಯವಲ್ಲ, ಸೀಮಿತ ಓವರ್‌ಗಳ ಸ್ವರೂಪದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತೇನೆ ಹಾಗೂ ಬದ್ದನಾಗಿರುತ್ತೇನೆ. ನಿರೀಕ್ಷಿತ ಭವಿಷ್ಯಕ್ಕಾಗಿ ಸಾಮರ್ಥ್ಯಕ್ಕೆ ತಕ್ಕಂತೆ ನನ್ನ ದೇಶವನ್ನು ಪ್ರತಿನಿಧಿಸುತ್ತೇನೆ. ಅಂದಹಾಗೆ ಭಾರತ ವಿರುದ್ಧದ ಟೆಸ್ಟ್‌ ಸರಣಿಯ ಇನ್ನುಳಿದ ಭಾಗಕ್ಕೆ ಸಹ ಆಟಗಾರರಿಗೆ ಆಲ್ ದಿ ಬೆಸ್ಟ್‌," ಎಂದು ಹೇಳುವ ಮೂಲಕ ಕ್ವಿಂಟನ್‌ ಟಿ ಕಾಕ್‌ ತಮ್ಮ 7 ವರ್ಷಗಳ ಟೆಸ್ಟ್‌ ವೃತ್ತಿ ಬದುಕಿಗೆ ಅಂತ್ಯವಾಡಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3EL1zsW

ಹೊಸ ವರ್ಷ ಆಚರಣೆಗೆ ಸರ್ಕಾರ ಬ್ರೇಕ್; ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗೆ ಸಂಜೆ 6ರಿಂದ ಪ್ರವೇಶ ನಿರ್ಬಂಧ!

ಬೆಂಗಳೂರು: ಓಮಿಕ್ರಾನ್‌ ಭೀತಿ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌ ಹಾಕಲು ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಯಲ್ಲಿ ಈ ವರ್ಷವೂ ಹೊಸ ವರ್ಷಾಚರಣೆಗೆ ಬ್ರೇಕ್‌ ಹಾಕಲಾಗಿದೆ. ಸಂಜೆ 6 ಗಂಟೆಗೆ ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆಗಳನ್ನು ಬಂದ್‌ ಮಾಡಲಾಗುತ್ತದೆ. ಹೋಟೆಲ್‌, ಪಬ್‌, ರೆಸ್ಟೋರೆಂಟ್‌ಗಳಿಗೆ ಮೊದಲೇ ಬುಕ್‌ ಮಾಡಿದವರಿಗಷ್ಟೇ ಅವಕಾಶ ನೀಡಲಾಗುತ್ತದೆ. ಟಿಕೆಟ್‌ ಬುಕ್ಕಿಂಗ್‌ ಮೆಸೇಜ್‌ ಪರಿಶೀಲಿಸಿ ಪ್ರವೇಶ ನೀಡಲಾಗುತ್ತದೆ. ಟಿಕೆಟ್‌ ಬುಕ್‌ ಮಾಡಿದವರು ಎರಡು ಡೋಸ್‌ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು. ಯಾವುದೇ ಸಂಭ್ರಮಾಚರಣೆಗೆ ಅವಕಾಶ ನಿರಾಕರಿಸಲಾಗಿದೆ. ಸಂಜೆ 6 ಗಂಟೆ ನಂತರ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಗಳಲ್ಲಿ ನಿಯಮ ಮೀರಿ ಅನಗತ್ಯವಾಗಿ ಓಡಾಡುವವರ ವಿರುದ್ಧ ಕ್ರಮ ಜರುಗಿಸಲು ಪೊಲೀಸರು ನಿರ್ಧರಿಸಿದ್ದಾರೆ. ಪಬ್‌ಗೆ ಬಂದವರ ಸಂಪೂರ್ಣ ಜವಾಬ್ದಾರಿ ಮಾಲೀಕರದ್ದು. ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡಿದವರಿಗೆ ಮಾತ್ರ ಅವಕಾಶ. ಅನಿಲ್‌ ಕುಂಬ್ಳೆ ವೃತ್ತದಲ್ಲೇ ವಾಹನಗಳನ್ನು ತಡೆಯಲಾಗುತ್ತದೆ. 10 ಗಂಟೆ ನಂತರ ಯಾರಾದರೂ ಪಬ್‌ನಲ್ಲಿದ್ದರೆ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. 50:50 ಅವಕಾಶ:ಈ ನಡುವೆ, ಹೋಟೆಲ್‌, ಪಬ್‌, ರೆಸ್ಟೋರೆಂಟ್‌‍ಗಳಲ್ಲಿ ಶೇಕಡಾ ಅರ್ಧದಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ವರ್ಷಾಂತ್ಯವಾದ ಶುಕ್ರವಾರವೂ ಹೋಟೆಲ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌‍ಗಳು ನೈಟ್‌ ಕರ್ಫ್ಯೂಗೂ ಮುನ್ನವೇ ಬಂದ್‌ ಮಾಡಬೇಕು ಎಂದು ಪೊಲೀಸರು ಖಡಕ್ಕಾಗಿ ಸೂಚಿಸಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹೋಟೆಲ್‌ಗಳನ್ನು ತೆರೆಯಲು ಅವಕಾಶ ನೀಡುವಂತೆ ಹೋಟೆಲ್‌ ಮಾಲೀಕರು ಮನವಿ ಮಾಡಿದ್ದಾರೆ. ಈ ಮನವಿಗೆ ಸರಕಾರ ಸ್ಪಂದಿಸುವ ಯಾವುದೇ ಸಾಧ್ಯತೆಗಳು ಇಲ್ಲ. ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಮಾರ್ಷಲ್‌ಗಳು, ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ರಾತ್ರಿ 10ರ ಬಳಿಕ ಅನವಶ್ಯಕವಾಗಿ ಓಡಾಡಿದರೆ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್‌ ಇಲಾಖೆ ಮತ್ತೊಮ್ಮೆ ಎಚ್ಚರಿಸಿದೆ.


from India & World News in Kannada | VK Polls https://ift.tt/3FXN9r7

ಸೂರಿಲ್ಲದವರ ಆಶ್ರಯತಾಣಗಳ ಕೊರತೆ ಇನ್ನೂ ನೀಗಿಲ್ಲ; ಹೈಕೋರ್ಟ್‌ ಆದೇಶಕ್ಕೂ ಕಿಮ್ಮತ್ತಿಲ್ಲ!

ಬೆಂಗಳೂರು: ನಗರದಲ್ಲಿ ಮನೆ ಇಲ್ಲದ ರಾತ್ರಿ ವೇಳೆ ತಂಗಲು ಮುಂದಿನ ಆರು ತಿಂಗಳಲ್ಲಿ 84 ಆಶ್ರಯ ತಾಣಗಳನ್ನು ನಿರ್ಮಿಸುವಂತೆ ಕಳೆದ ಜುಲೈನಲ್ಲಿ ಬಿಬಿಎಂಪಿಗೆ ಹೈಕೋರ್ಟ್‌ ಗಡುವು ನೀಡಿತ್ತು. ಆದರೆ, ಇದುವೆರೆಗೂ 14 ಆಶ್ರಯ ತಾಣಗಳನ್ನು ಮಾತ್ರ ಪಾಲಿಕೆ ನಿರ್ಮಿಸಿದೆ. ಈ 14 ಆಶ್ರಯ ತಾಣಗಳ ಪೈಕಿ 10 ಮಾತ್ರ ಕಾರ್ಯ ನಿರ್ವಹಿಸುತ್ತಿವೆ ಎಂದು ನ್ಯಾಷನಲ್‌ ಅರ್ಬನ್‌ ಲೈವ್ಲಿವುಡ್‌ ಮಿಷನ್‌ ಕಾರ್ಯಕರ್ತರು ದೂರಿದ್ದಾರೆ. ಧನುರ್‌ ಮಾಸ ಹಿನ್ನೆಲೆಯಲ್ಲಿ ಚಳಿ ವಿಪರೀತವಾಗಿದೆ. ಮನೆ ಇಲ್ಲದ ನೂರಾರು ನಿರಾಶ್ರಿತರು ಚಳಿ, ಗಾಳಿಯಲ್ಲಿ ಮೇಲ್ಸೇತುವೆಗಳ ಕೆಳಗೆ, ಅಂಗಡಿಗಳ ಹೊರಗೆ, ಒಳಚರಂಡಿ ಮೇಲೆ ಅಳವಡಿಸಿರುವ ಸ್ಪ್ಯಾಬ್‌ಗಳ ಮೇಲೆ, ಬಸ್‌ ತಂಗುದಾಣಗಳು ಸೇರಿದಂತೆ ನಾನಾ ಕಡೆಗಳಲ್ಲಿ ರಾತ್ರಿ ಕಳೆಯುತ್ತಿದ್ದಾರೆ. ‘46 ಆಶ್ರಯ ತಾಣಗಳನ್ನು ನಿರ್ಮಿಸಲು ಅನುಮೋದನೆ ಸಿಕ್ಕಿದೆ. ಈ ಪೈಕಿ 14 ಆಶ್ರಯ ತಾಣಗಳು ಕಾರ್ಯ ನಿರ್ವಹಿಸುತ್ತಿವೆ. ಕಳೆದ ವಾರ ಇನ್ನೂ ಹಲವು ಆಶ್ರಯ ತಾಣಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಕೆಲವು ಆಶ್ರಯ ತಾಣಗಳ ರಿಪೇರಿ ಕಾರ್ಯ ಪ್ರಗತಿಯಲ್ಲಿದೆ. ಕೆಲವೇ ದಿನಗಳಲ್ಲಿಇನ್ನೂ ಮೂರು ಆಶ್ರಯ ತಾಣಗಳು ತಂಗಲು ಸಿದ್ಧವಾಗಲಿವೆ’ ಎಂದು ವಿಶೇಷ ಆಯುಕ್ತ ಕೆ.ಎ.ದಯಾನಂದ ತಿಳಿಸಿದರು. ‘ಎನ್‌ಜಿಒ ಗಳೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡ ನಂತರ ಉಳಿದ ಆಶ್ರಯ ತಾಣಗಳು ಕಾರ್ಯನಿರ್ವಹಣೆಗೊಳ್ಳಲಿವೆ. ಮುಂದಿನ 10 ದಿನಗಳಲ್ಲಿ 46 ಆಶ್ರಯ ತಾಣಗಳು ಸಿದ್ಧವಾಗಿ, ಕಾರ್ಯನಿರ್ವಹಣೆ ಆರಂಭಿಸಬೇಕೆಂಬ ಗುರಿಯನ್ನು ಬಿಬಿಎಂಪಿ ಹೊಂದಿದೆ. ಇನ್ನೊಂದೆಡೆ ಇನ್ನೂ 38 ಆಶ್ರಯ ತಾಣಗಳ ಅನುಮೋದನೆ ಬಾಕಿ ಇದೆ. 2022ರ ಮಾರ್ಚ್ ವೇಳೆಗೆ ಎಲ್ಲಾ 84 ಆಶ್ರಯ ತಾಣಗಳು ಕಾರ್ಯ ನಿರ್ವಹಿಸಲಿವೆ’ ಎಂದು ವಿವರಿಸಿದರು. ಈ ಮೂಲಕ ಹೈಕೋರ್ಟ್‌ ನಿಗದಿಪಡಿಸಿದ ಗಡುವಿನ ಒಳಗೆ ಕಾರ್ಯ ಪೂರ್ಣಗೊಳಿಸಲು ಬಿಬಿಎಂಪಿಗೆ ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳೇ ಒಪ್ಪಿಕೊಂಡಂತಾಗಿದೆ. ಈ ವರ್ಷ ಜುಲೈ 22ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿದ ಹೈಕೋರ್ಟ್‌, ‘ಒಂದು ಲಕ್ಷ ಜನಸಂಖ್ಯೆಗೆ ಒಂದರ ಅನುಪಾತದಲ್ಲಿ ಆಶ್ರಯ ತಾಣಗಳನ್ನು ನಿರ್ಮಿಸಲು ಸುಪ್ರೀಂ ಕೋರ್ಟ್‌ ರಾಜ್ಯ ಸರಕಾರಗಳಿಗೆ ಕಳೆದ 11 ವರ್ಷಗಳ ಹಿಂದೆ ನಿರ್ದೇಶನ ನೀಡಿತ್ತು. ಆದರೆ ಸುಮಾರು 11 ವರ್ಷಗಳ ನಂತರವೂ, ಕರ್ನಾಟಕದಲ್ಲಿ ಅಗತ್ಯವಿರುವ 166 ಆಶ್ರಯ ತಾಣಗಳ ಪೈಕಿ ಕೇವಲ 46 ಆಶ್ರಯ ತಾಣಗಳು ಕಾರ್ಯ ನಿರ್ವಹಿಸುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿತ್ತು. ಶಿಥಿಲ ಕಟ್ಟಡ ‘ಸರಕಾರದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಪದೇ ಪದೆ ಸಭೆ ನಡೆದರೂ ಫಲಿತಾಂಶ ಮಾತ್ರ ಶೂನ್ಯ. ಆಶ್ರಯ ತಾಣಗಳಿಗಾಗಿ ಬಿಬಿಎಂಪಿ ಶಿಥಿಲ ಕಟ್ಟಡಗಳನ್ನು ನೀಡಿದೆ. ಈಗಿರುವ ಆಶ್ರಯ ತಾಣಗಳಿಗೆ ಸಾಕಷ್ಟು ರಿಪೇರಿ ಕಾರ್ಯ, ನವೀಕರಣ ಅಗತ್ಯವಿದೆ’ ಎಂದು ಸೂರು ಇಲ್ಲದ ನಿರಾಶ್ರಿತರಿಗಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರೊಬ್ಬರು ತಿಳಿಸಿದರು. ಅಧಿಕಾರಿಗಳ ಉಡಾಫೆ ಉತ್ತರ ‘ಮನೆ ಇಲ್ಲದ ಹೆಚ್ಚಿನ ನಿರಾಶ್ರಿತರು ವಲಸೆ ಕಾರ್ಮಿಕರು ಮತ್ತು ಇತರೆ ರಾಜ್ಯಗಳಿಂದ ನಗರಕ್ಕೆ ಬಂದವರಾಗಿದ್ದಾರೆ. ವಲಸೆ ಕಾರ್ಮಿಕರ ಬಗ್ಗೆ ಹಲವು ಅಧಿಕಾರಿಗಳಿಗೆ ಅಸಡ್ಡೆ ಇದೆ. ದೇಶದ ಒಳಗೆ ಎಲ್ಲಿ ಬೇಕಾದರೂ ಭಾರತೀಯರು ವಾಸಿಸಬಹುದು. ಆದರೆ, ‘ಪ್ರತಿದಿನ ಸಾವಿರಾರು ವಲಸೆ ಕಾರ್ಮಿಕರು ರಾಜ್ಯಕ್ಕೆ ಬರುತ್ತಾರೆ. ಅವರಿಗೆಲ್ಲ ಆಶ್ರಯ ನೀಡಲು ಸಾಧ್ಯವಿಲ್ಲ’ ಎಂದು ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ. ಒಂದು ನಗರದಿಂದ ಇನ್ನೊಂದು ನಗರಕ್ಕೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ನಾಗರಿಕರು ಸ್ಥಳಾಂತರಗೊಳ್ಳುವುದನ್ನು ತಡೆಯಲು ಸರಕಾರಕ್ಕೆ ಸಾಧ್ಯವೇ?’ ಎಂದು ಅವರು ಪ್ರಶ್ನಿಸಿದರು.


from India & World News in Kannada | VK Polls https://ift.tt/3mEfOJW

ಪಾಲಿಸಿದಾರರ ಈಗಿನ ಕಾಯಿಲೆಗೆ ವಿಮೆ ಕ್ಲೇಮ್‌ ನಿರಾಕರಿಸುವಂತಿಲ್ಲ; ಸುಪ್ರೀಂ ಕೋರ್ಟ್

ಹೊಸದಿಲ್ಲಿ: ವಿಮೆ ಕಂಪನಿಗಳು ಪಾಲಿಸಿದಾರರಿಗೆ ಈಗ ಇರುವ ಕಾಯಿಲೆಗೆ ವೈದ್ಯಕೀಯ ವೆಚ್ಚ ಭರಿಸುವುದಕ್ಕೆ ಸಂಬಂಧಿಸಿದ ಮೆಡಿಕ್ಲೇಮ್‌ ಅನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. ಯಾವುದೇ ವಿಮೆ ಕಂಪನಿಯು ಪಾಲಿಸಿದಾರರಿಗೆ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭ ವಿಧಿಸಿದ ಷರತ್ತು ಅಥವಾ ನಿಬಂಧನೆಗಳಲ್ಲಿ ವಿವರಿಸಿದ ನಿರ್ದಿಷ್ಟ ವೈದ್ಯಕೀಯ ಪರಿಸ್ಥಿತಿಗೆ ಹೊರತುಪಡಿಸಿ ಉಳಿದ ಕಾಯಿಲೆಗೆ ಮೆಡಿಕ್ಲೇಮ್‌ ಅನ್ನು ತಿರಸ್ಕರಿಸುವಂತಿಲ್ಲ ಎಂದು ತಿಳಿಸಿದೆ. ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಮತ್ತು ಬಿ.ವಿ ನಾಗರತ್ನ ಅವರನ್ನು ಒಳಗೊಂಡಿದ್ದ ಪೀಠ, ಈ ಆದೇಶ ಹೊರಡಿಸಿದೆ. ಮನಮೋಹನ್‌ ನಂದ ಎಂಬುವರು ಅಮೆರಿಕಕ್ಕೆ ಪ್ರಯಾಣ ಮಾಡುವುದಕ್ಕೆ ಮುನ್ನ ಓವರ್‌ಸೀಸ್‌ ಮೆಡಿಕ್ಲೇಮ್‌ ಬಿಸಿನೆಸ್‌ ಆ್ಯಂಡ್‌ ಹಾಲಿಡೇ ಪಾಲಿಸಿಯನ್ನು ಖರೀದಿಸಿದ್ದರು. ಅಮೆರಿಕಕ್ಕೆ ಬಂದ ನಂತರ ಹೃದಯಾಘಾತವಾಗಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆಯ ವೆಚ್ಚವನ್ನು ಭರಿಸಲು ಯುನೈಟೆಡ್‌ ಇಂಡಿಯಾ ಇನ್ಷೂರೆನ್ಸ್‌ ಒಪ್ಪಿರಲಿಲ್ಲ. ಆರೋಗ್ಯ ಪರಿಸ್ಥಿತಿಯನ್ನು ಮೊದಲೇ ತಿಳಿಸಿರಲಿಲ್ಲ ಎಂದು ಕಾರಣ ಮುಂದಿಟ್ಟಿತ್ತು. ಮೆಡಿಕ್ಲೇಮ್‌ ಪಾಲಿಸಿಯ ಉದ್ದೇಶವು ಅನಾರೋಗ್ಯ ಆದ ಸಂದರ್ಭದಲ್ಲಿ ವಿಮೆ ಪರಿಹಾರವನ್ನು ಪಡೆಯುವುದಾಗಿದೆ. ಅನಾರೋಗ್ಯವು ಅನಿರೀಕ್ಷಿತವಾಗಿ, ವಿದೇಶದಲ್ಲಾದರೂ ಬರಬಹುದು. ಅನಿರೀಕ್ಷಿತವಾಗಿ ಅನಾರೋಗ್ಯವಾದರೆ ಪರಿಹಾರದಿಂದ ಹೊರಗಿಡಲಾಗುವುದು ಎಂಬ ಅಂಶವು ಪಾಲಿಸಿಯಲ್ಲೂ ಇಲ್ಲ ಎಂದು ಸುಪ್ರೀಂಕೋರ್ಟ್‌ ಪ್ರತಿಪಾದಿಸಿದೆ.


from India & World News in Kannada | VK Polls https://ift.tt/3FJ1V4S

ಹೂ ಬಿಟ್ಟ ಗೇರು ಮರ; ಈ ಬಾರಿ ಉತ್ತಮ ಫಸಲು ನಿರೀಕ್ಷೆಯಲ್ಲಿ ಕೃಷಿಕರು

ಕಾಸರಗೋಡು: ಜಿಲ್ಲೆಯಾದ್ಯಂತ ಗೇರು ಮರ ಹೂವು ಬಿಡಲಾರಂಭಿಸಿದ್ದು, ಈ ಬಾರಿ ಉತ್ತಮ ಫಸಲು ನಿರೀಕ್ಷೆಯಲ್ಲಿ ಕೃಷಿಕರಿದ್ದಾರೆ. ಕಳೆದೆರಡು ವರ್ಷಗಳಿಂದ ಹವಾಮಾನ ವೈಪರೀತ್ಯದಿಂದ ಗೇರು ಫಸಲು ಕುಸಿದಿರುವುದು, ಕೋವಿಡ್‌ ಬಳಿಕ ಉಂಟಾದ ಲಾಕ್‌ಡೌನ್‌ ಗೇರು ಕೃಷಿಕರನ್ನು ಸಂಕಷ್ಟಕ್ಕೊಳಪಡಿಸಿತ್ತು. ಸದ್ಯ ಮಳೆಗಾಲ ಕೊನೆಗೊಂಡಿದ್ದು, ಚಳಿ ಗಾಳಿ ಬೀಸಲಾರಂಭಿಸಿದ್ದು, ಗೇರುಮರಗಳು ಹೂವು ಬಿಡಲಾರಂಭಿಸಿವೆ. ಜನವರಿಯಲ್ಲಿ ಗೇರು ಕೊಯ್ಲು ಆರಂಭಗೊಳ್ಳುವ ಸಾಧ್ಯತೆ ಇದ್ದು, ಫೆಬ್ರವರಿ, ಮಾರ್ಚ್‌ನಲ್ಲಿ ಫಸಲಿಗೆ ಸಜ್ಜಾಗಲಿದೆ. ಕಳೆದ ವರ್ಷದ ಆರಂಭದಲ್ಲಿ ಗೇರು ಬೀಜಕ್ಕೆ ಕೆಜಿಗೆ 100 ರೂ. ಲಭಿಸಿದ್ದರೂ, ಕೊಯ್ಲಿಗೆ ಸಜ್ಜಾಗುವಾಗ ಬೆಲೆ ಕಡಿಮೆಯಾಗಿ 60 ರೂ.ಗೆ ಇಳಿದಿತ್ತು. ಮಳೆ ಸುರಿದಿರುವುದರಿಂದ ಬೆಲೆ ಮತ್ತೆ ಕುಸಿಯಿತು. ಗೇರು ಬೀಜವನ್ನೇ ಆಶ್ರಯಿಸಿ ಬದುಕುತ್ತಿರುವ ನೂರಾರು ಕೃಷಿಕರು ಜಿಲ್ಲೆಯಲ್ಲಿದ್ದಾರೆ. ಒಂದು ಕಾಲದಲ್ಲಿ ಮಲೆನಾಡಿನಲ್ಲಿ ವ್ಯಾಪಕಗೊಂಡಿತ್ತು. ಹುಳಗಳ ಉಪಟಳದಿಂದ ಗೇರು ಕೃಷಿ ವ್ಯಾಪಕವಾಗಿ ನಶಿಸಿದೆ. ಈ ಹಿಂದೆ ರಬ್ಬರ್‌ಗೆ ಉತ್ತಮ ಧಾರಣೆ ಇದ್ದ ಸಂದರ್ಭ ರಬ್ಬರ್‌ನತ್ತ ಆಕರ್ಷಿತರಾದ ಕೃಷಿಕರು ಗೇರುಮರಗಳನ್ನು ಕಡಿದು ರಬ್ಬರ್‌ ಗಿಡ ನೆಟ್ಟಿದ್ದರು. ಆದರೆ ಫಸಲು ಬರುವ ವೇಳೆಗೆ ರಬ್ಬರ್‌ ಧಾರಣೆಯೂ ಕುಸಿಯಿತು. ಕೃಷಿಕರು ಅತ್ತ ಗೇರು ಕೃಷಿಯೂ ಇಲ್ಲದೆ, ಇತ್ತ ರಬ್ಬರ್‌ಗೆ ಉತ್ತಮ ಧಾರಣೆಯೂ ಇಲ್ಲದೆ ಕಂಗಾಲಾದರು. ಫಸಲಿಗೆ ಮುನ್ನವೇ ಸರಕಾರ ಬೆಲೆ ನಿಗದಿಪಡಿಸಿ ನೂತನ ಯೋಜನೆಗಳನ್ನು ಘೋಷಿಸಿದರೆ ಹೊಸ ಕೃಷಿಕರನ್ನು ಈ ಕ್ಷೇತ್ರದಲ್ಲಿ ಸಕ್ರಿಯಗೊಳಿಸಲು, ಉಳಿದ ಗೇರು ಕೃಷಿಕರನ್ನು ಉಳಿಸಲು ಸಾಧ್ಯವಿದೆ ಎಂದು ಕೃಷಿಕರು ಹೇಳುತ್ತಿದ್ದಾರೆ. ಅಲ್ಲದೆ ಗೇರು ಹಣ್ಣು ಸಂಗ್ರಹಿಸಲು ಗೇರುಬೀಜ ಅಭಿವೃದ್ಧಿ ಕಾರ್ಪೊರೇಶನ್‌ ತೀರ್ಮಾನಿಸಿದೆ. ಈ ಕುರಿತು ಕೇರಳ ರಾಜ್ಯ ಕೈಗಾರಿಕಾ ಸಚಿವರೊಂದಿಗೆ ಚರ್ಚಿಸಲಾಗುವುದು. ಬಳಿಕ ಮುಖ್ಯಮಂತ್ರಿಯವರ ಉಪಸ್ಥಿತಿಯಲ್ಲಿ ಕೃಷಿ, ಕೈಗಾರಿಕೆ, ಸಹಕಾರಿ ಸಚಿವರ ಸಭೆಯಲ್ಲಿಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಗೇರುಹಣ್ಣು ಸಂಗ್ರಹಿಸಲು ಹಿಂದೆ ಯೋಜನೆಯಿತ್ತು. ಆದರೂ ಫಲಪ್ರದಗೊಂಡಿಲ್ಲ. ಈ ಬಾರಿ ಗೇರುಹಣ್ಣು ಸಂಗ್ರಹ ಯಶಸ್ವಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಗೇರುಹಣ್ಣಿನಿಂದ ಹೊಸ ಉತ್ಪನ್ನಗಳನ್ನು ತಯಾರಿಸಲಿರುವ ವರದಿಯನ್ನು ಸರಕಾರಕ್ಕೆ ಸಲ್ಲಿಸಿರುವುದಾಗಿ ಗೇರುಬೀಜ ಅಭಿವೃದ್ಧಿ ಕಾರ್ಪೊರೇಶನ್‌ ಅಧಿಕಾರಿಗಳು ಹೇಳುತ್ತಿದ್ದಾರೆ.


from India & World News in Kannada | VK Polls https://ift.tt/3pCgL7q

Ross Taylor: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರಾಸ್‌ ಟೇಲರ್‌ ವಿದಾಯ!

ಹೊಸದಿಲ್ಲಿ: ಪ್ರಸ್ತುತ ನಡೆಯುತ್ತಿರುವ ದೇಶಿ ಕ್ರಿಕೆಟ್‌ ಆವೃತ್ತಿಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ಹಿರಿಯ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್ ಗುರುವಾರ ಪ್ರಕಟಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ಎರಡನೇ ಪಂದ್ಯ ಹಿರಿಯ ಬ್ಯಾಟ್ಸ್‌ಮನ್ ಪಾಲಿಗೆ ವೃತ್ತಿ ಬದುಕಿನ ಕೊನೆಯ ಅಂತಾರಾಷ್ಟ್ರೀಯ ಟೆಸ್ಟ್ ಆಗಲಿದೆ. ಮುಂದಿನ ತಿಂಗಳು ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಆಡಲು ಎದುರು ನೋಡುತ್ತಿದ್ದಾರೆ. ಆ ಮೂಲಕ ನ್ಯೂಜಿಲೆಂಡ್‌ ಪರ 112 ಟೆಸ್ಟ್‌ ಪಂದ್ಯಗಳಾಡಿರುವ ಮಾಜಿ ನಾಯಕ ಹಾಗೂ ಸ್ಪಿನ್ನರ್‌ ಡೇನಿಯಲ್ ವೆಟ್ಟೋರಿ ಅವರ ದಾಖಲೆಯನ್ನು ವೆಟ್ಟೋರಿ ಸರಿದೂಗಿಸಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಮುಂದಿನ ಫೆಬ್ರವರಿಯಲ್ಲಿ ನ್ಯೂಜಿಲೆಂಡ್‌ ತಂಡದ ಪರ ರಾಸ್‌ ಟೇಲರ್ ಆಡುವುದಿಲ್ಲ. ಆದರೆ, ಆಸ್ಟ್ರೇಲಿಯಾ ವಿರುದ್ಧ ಅವರದೇ ನೆಲದಲ್ಲಿ ಓಡಿಐ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಂತರ, ಮಾರ್ಚ್‌ ತಿಂಗಳಲ್ಲಿ ತವರು ನೆಲದಲ್ಲಿ ನೇದರ್ಲೆಂಡ್ಸ್‌ ವಿರುದ್ಧ ಹಿರಿಯ ಬ್ಯಾಟ್ಸ್‌ಮನ್‌ ಕಣಕ್ಕೆ ಇಳಿಯಲಿದ್ದಾರೆ. ನೇದರ್ಲೆಂಡ್ಸ್‌ ವಿರುದ್ಧ ಏಪ್ರಿಲ್ 4 ರಂದು ನಡೆಯುವ ನಾಲ್ಕನೇ ಪಂದ್ಯ ರಾಸ್‌ ಟೇಲರ್‌ ವೃತ್ತಿ ಜೀವನದ ಪಾಲಿಗೆ ಕೊನೆಯ ಏಕದಿನ ಪಂದ್ಯವಾಗಲಿದೆ. "ಇದು ನಂಬಲಾಗದ ಅದ್ಭುತ ಪ್ರಯಾಣ ಹಾಗೂ ಸಾಧ್ಯವಾದಷ್ಟು ದೀರ್ಘಕಾಲ ನನ್ನ ದೇಶವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿರುವುದಕ್ಕೆ ನಾನು ಅದೃಷ್ಟಶಾಲಿಯಾಗಿದ್ದೇನೆ," ಎಂದು ರಾಸ್‌ ಟೇಲರ್ ಸಂತಸ ವ್ಯಕ್ತಪಡಿಸಿದ್ದಾರೆ. "ವೃತ್ತಿ ಜೀವನದುದ್ದಕ್ಕೂ ಕೆಲ ಶ್ರೇಷ್ಠ ಆಟಗಾರರ ಜೊತೆ ಮತ್ತು ವಿರುದ್ಧ ಆಡುವ ಮೂಲಕ ಕೆಲ ಅದ್ಭುತ ನೆನಪುಗಳು, ಸ್ನೇಹಿತರನ್ನು ಪಡೆದುಕೊಂಡಿರುವುದು ನನ್ನ ಪಾಲಿಗೆ ವಿಶೇಷ. ಎಲ್ಲಾ ಒಳ್ಳೆಯ ಸಂಗತಿಗಳು ಒಂದಲ್ಲ ಒಂದು ದಿನ ಕೊನೆಯಾಗಲೇಬೇಕು. ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಲು ಇದು ಸಕಾಲ ಎಂದು ನನಗೆ ಅನಿಸುತ್ತಿದೆ," ಎಂದರು. ನ್ಯೂಜಿಲೆಂಡ್‌ ಪರ ಟೆಸ್ಟ್ ಹಾಗೂ ಓಡಿಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ ಆಗಿ ರಾಸ್‌ ಟೇಲರ್‌ ವೃತ್ತಿ ಬದುಕಿಗೆ ವಿದಾಯ ಹೇಳುತ್ತಿದ್ದಾರೆ. 7,584 ರನ್‌ ಹಾಗೂ 19 ಶತಕಗಳನ್ನು ಸಿಡಿಸಿರುವ ಟೇಲರ್, ಕಿವೀಸ್‌ ನಾಯಕ ಕೇನ್‌ ವಿಲಿಯಮ್ಸನ್‌ (8,581) ಬಳಿಕ ಅತಿ ಹೆಚ್ಚು ಟೆಸ್ಟ್‌ ರನ್‌ ಗಳಿಸಿದ ಎರಡನೇ ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. 12 ಶತಕಗಳೊಂದಿಗೆ 8,581 ರನ್‌ ಗಳಿಸಿರುವ ರಾಸ್‌ ಟೇಲರ್‌, ಸ್ಟಿಫೆನ್ ಫ್ಲೆಮಿಂಗ್‌(8,007) ಬಳಿಕ ಓಡಿಐ ಕ್ರಿಕೆಟ್‌ನಲ್ಲಿಅತಿ ಹೆಚ್ಚು ರನ್‌ ಗಳಿಸಿದ ಕಿವೀಸ್‌ನ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಟೇಲರ್‌, ವೆಸ್ಟ್ ಇಂಡೀಸ್‌ ವಿರುದ್ಧ 2006ರಲ್ಲಿ ಓಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 102 ಟಿ20 ಪಂದ್ಯಗಳಾಡಿರುವ ಅವರು ನ್ಯೂಜಿಲೆಂಡ್‌ ಪರ 100ಕ್ಕೂ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳಾಡಿರುವ ನ್ಯೂಜಿಲೆಂಡ್‌ನ ಮೊದಲ ಕ್ರಿಕೆಟಿಗರಾಗಿದ್ದಾರೆ. 2019ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ರನ್ನರ್ ಅಪ್‌ ಹಾಗೂ ಕಳೆದ ಜೂನ್‌ ತಿಂಗಳಲ್ಲಿ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಗೆದ್ದಿದ್ದ ನ್ಯೂಜಿಲೆಂಡ್‌ ತಂಡದಲ್ಲಿ ರಾಸ್‌ ಟೇಲರ್‌ ಆಡಿದ್ದರು. ಅಷ್ಟೇ ಅಲ್ಲದೆ, ಇತ್ತೀಚೆಗೆ ಮುಕ್ತಾಯವಾಗಿದ್ದ 2021ರ ಟಿ20 ವಿಶ್ವಕಪ್‌ ಟೂರ್ನಿಯ ರನ್ನರ್‌ ಅಪ್‌ ಆಗಿದ್ದ ತಂಡದಲ್ಲಿಯೂ ಟೇಲರ್ ಕಾಣಿಸಿಕೊಂಡಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3JuY9hK

ರಾಘವೇಶ್ವರ ಶ್ರೀ ವಿರುದ್ಧ ಅತ್ಯಾಚಾರ ಪ್ರಕರಣ; ಖುಲಾಸೆ ಪ್ರಶ್ನಿಸಿದ್ದ ಮೇಲ್ಮನವಿ ಹೈಕೋರ್ಟ್‌ನಲ್ಲಿ ವಜಾ

ಬೆಂಗಳೂರು: ರಾಮಚಂದ್ರಾಪುರ ಮಠದ ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ಅವರನ್ನು ದೋಷಮುಕ್ತಗೊಳಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜ್ಯ ಸರಕಾರ (ಸಿಐಡಿ) ಮತ್ತು ಸಂತ್ರಸ್ತ ಗಾಯಕಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಕ್ರಿಮಿನಲ್‌ ಮೇಲ್ಮನವಿಗಳನ್ನು ಆಲಿಸಿದ್ದ ನ್ಯಾ.ವಿ.ಶ್ರೀಷಾನಂದ್‌ ಅವರಿದ್ದ ಏಕಸದಸ್ಯ ಪೀಠ ತೀರ್ಪು ಕಾಯ್ದಿರಿಸಿತ್ತು. ಬುಧವಾರ ನ್ಯಾಯಪೀಠ ತೀರ್ಪು ಪ್ರಕಟಿಸಿ, ಎರಡೂ ಮೇಲ್ಮನವಿಗಳನ್ನು ವಜಾಗೊಳಿಸಿದೆ. ಅಲ್ಲದೆ, 54ನೇ ಸೆಷನ್ಸ್‌ ಕೋರ್ಟ್‌ 2016ರ ಮಾ.31 ರಂದು ನೀಡಿದ್ದ ತೀರ್ಪು ಊರ್ಜಿತಗೊಳಿಸಿದೆ. ಇದರಿಂದಾಗಿ ಅತ್ಯಾಚಾರ ಪ್ರಕರಣದ ಆರೋಪ ಹೊತ್ತಿದ್ದ ರಾಘವೇಶ್ವರ ಭಾರತಿ ಶ್ರೀಗೆ ಕಾನೂನು ಹೋರಾಟದಲ್ಲಿ ಗೆಲುವು ದೊರೆತಂತಾಗಿದೆ. ‘ತೀರ್ಪಿನ ಪ್ರತಿ ಇನ್ನೂ ಬಿಡುಗಡೆಯಾಗಿಲ್ಲ. ಹಾಗಾಗಿ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಆದರೆ, ಮೇಲ್ನೋಟಕ್ಕೆ ಸೆಷನ್ಸ್‌ ಕೋರ್ಟ್‌ ನೀಡಿರುವ ಆದೇಶ ಸರಿ ಇದೆ. ಅದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ. 2016ರ ಮಾ.31 ರಂದು ಸೆಷನ್ಸ್‌ ಕೋರ್ಟ್‌ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಬಿ.ಮುದಿಗೌಡರ್‌, ‘ಎಲ್ಲ ಅಂಶಗಳನ್ನು ಪರಿಗಣಿಸಿದಾಗ ಅತ್ಯಾಚಾರ ಆರೋಪದಲ್ಲಿ ಮೇಲ್ನೋಟಕ್ಕೇ ಯಾವುದೇ ಸಣ್ಣ ಸಾಕ್ಷ್ಯವೂ ಇಲ್ಲದಿರುವುದು ಕಂಡು ಬರುತ್ತಿದೆ. ಪೊಲೀಸರು ಒದಗಿಸಿರುವ ಸಾಕ್ಷ್ಯಗಳಿಂದ ಆರೋಪ ರಚಿಸುವುದಾಗಲೀ, ಸಾಕ್ಷ್ಯ ವಿಚಾರಣೆ ನಡೆಸುವುದಕ್ಕಾಗಲೀ ಸಾಕಾಗುವುದಿಲ್ಲ. ಹೀಗಾಗಿ ಇದೊಂದು ಕೈಬಿಡಲು ಅರ್ಹವಾದ ಪ್ರಕರಣ. ಹಾಗಾಗಿ, ರಾಘವೇಶ್ವರ ಭಾರತಿ ಶ್ರೀ ವಿರುದ್ಧದ ಅತ್ಯಾಚಾರ ಆರೋಪವನ್ನು ಕೈ ಬಿಡುತ್ತಿದ್ದೇನೆ. ಅವರನ್ನು ದೋಷಮುಕ್ತಗೊಳಿಸುತ್ತಿದ್ದೇನೆ’ ಎಂದು ತೀರ್ಪಿನಲ್ಲಿ ಹೇಳಿದ್ದರು. ಇದನ್ನು ಪ್ರಶ್ನಿಸಿ ರಾಜ್ಯ ಸರಕಾರದ ಪರವಾಗಿ ಸಿಐಡಿಯ ತನಿಖಾಧಿಕಾರಿ ಮತ್ತು ಸಂತ್ರಸ್ತ ಗಾಯಕಿ ಮೇಲ್ಮನವಿ ಸಲ್ಲಿಸಿದ್ದರು. 2014ರ ಆ.17ರಂದು ಗಾಯಕಿ ತನ್ನ ಮೇಲೆ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ ಹಲವು ವರ್ಷಗಳ ಕಾಲ ನಿರಂತರವಾಗಿ 169 ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು. ಆ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು, ಸ್ವಾಮೀಜಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಮೇಲ್ಮನವಿ ವಜಾಕ್ಕೆ ಕಾರಣರಾಮಚಂದ್ರಾಪುರ ಮಠದ ಗಾಯಕಿಯನ್ನೇ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ತಾಂತ್ರಿಕ ಕಾರಣಗಳನ್ನು ನೀಡಿ ವಜಾಗೊಳಿಸಲಾಗಿದೆ. ಸಿಐಡಿ ಪೊಲೀಸರಿಗೆ ಠಾಣೆ ಅಧಿಕಾರವಿಲ್ಲ. ಸಿಐಡಿಯನ್ನು ಪೊಲೀಸ್‌ ಠಾಣೆ ಎಂದು ಘೋಷಿಸಿ ಸರಕಾರ ಆ ಬಗ್ಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿಲ್ಲ. ಸಿಐಡಿ ಪೊಲೀಸರಿಗೆ ಆರೋಪಪಟ್ಟಿ ಸಲ್ಲಿಸುವ ಅಧಿಕಾರವಿಲ್ಲ. ಹಾಗಾಗಿ, ಮೇಲ್ಮನವಿ ವಜಾ ಮಾಡುತ್ತಿರುವುದಾಗಿ ಕೋರ್ಟ್‌ ಹೇಳಿದೆ. 16 ಬಾರಿ ವಿಚಾರಣೆಯಿಂದ ಹಿಂದೆ ಸರಿದಿದ್ದ 10ಕ್ಕೂ ಹೆಚ್ಚು ಜಡ್ಜ್‌ಗಳು!ತನ್ನ ವಿರುದ್ಧ ಕೇಳಿಬಂದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಮತ್ತು ರಾಮಚಂದ್ರಾಪುರ ಮಠದಲ್ಲಿ ಅವ್ಯವಹಾರವೂ ನಡೆಯುತ್ತಿದ್ದು, ಅತ್ಯಾಚಾರದ ಆರೋಪ ಹೊತ್ತಿರುವ ರಾಘವೇಶ್ವರ ಭಾರತಿ ಸ್ವಾಮಿಯನ್ನು ಪೀಠದಿಂದ ಕೆಳಗಿಳಿಸಬೇಕು ಎಂದು ಕೋರಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಿಂದ ಇದುವರೆಗೆ ಅನೇಕ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿದ್ದರು. ಇದುವರೆಗೆ ಈ ಪ್ರಕರಣದಲ್ಲಿ 10ಕ್ಕೂ ಹೆಚ್ಚು ಜಡ್ಜ್‌ಗಳು 16 ಬಾರಿ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ವಿಚಾರಣೆಯಿಂದ ಹಿಂದೆ ಸರಿದವರುನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ, ರಾಮಮೋಹನ ರೆಡ್ಡಿ, ಎಂ.ಶಾಂತನಗೌಡರ, ಬಿ.ವೀರಪ್ಪ, ಎಚ್‌.ಜಿ.ರಮೇಶ್‌, ಪಿ.ಬಿ.ಭಜಂತ್ರಿ, ಅಧೀನ ನ್ಯಾಯಾಲಯದ ನ್ಯಾಯಾಧೀಶೆ ಎಚ್‌.ಜಿ.ವಿಜಯಕುಮಾರಿ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್‌.ಕೆ.ಮುಖರ್ಜಿ, ಎಸ್‌.ಜಿ.ಪಂಡಿತ್ ಮತ್ತು ಪಿ.ಎಂ.ನವಾಜ್‌.


from India & World News in Kannada | VK Polls https://ift.tt/3FHaFrY

ಬಿಡಿಎ ಆಯುಕ್ತರಾಗಿ ರಾಜೇಶ್‌ ಗೌಡ ನೇಮಕ ಪ್ರಶ್ನಿಸಿ ಅರ್ಜಿ; ಬಿಡಿಎ, ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಬೆಂಗಳೂರು: ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಎಂ.ಬಿ.ರಾಜೇಶ್‌ ಗೌಡ ನೇಮಕ ಪ್ರಶ್ನಿಸಿರುವ ಅರ್ಜಿ ಸಂಬಂಧ ಹೈಕೋರ್ಟ್‌ ಬುಧವಾರ ಬಿಡಿಎ ಮತ್ತು ಸರಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ. ವಕೀಲ ಮೋಹನ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿ ಮನವಿ ಆಲಿಸಿದ ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ರಜಾ ಕಾಲದ ವಿಭಾಗೀಯ ಪೀಠ, ರಾಜೇಶ್‌ ಗೌಡ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ನೀಡಿ ವಿಚಾರಣೆಯನ್ನು ಮುಂದೂಡಿತು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಕ್ಸ್‌.ಎಂ.ಜೋಸೆಫ್‌, ಬೆಂಗಳೂರು ಅಭಿವೃದ್ಧಿ ಕಾಯಿದೆ- 1976ರ ಸೆಕ್ಷನ್‌ 12ರ ಪ್ರಕಾರ ವಿಭಾಗೀಯ ಆಯುಕ್ತರಿಗಿಂತ ಕಡಿಮೆ ಇರದ ಶ್ರೇಣಿಯ ಅಧಿಕಾರಿಯನ್ನು ಹುದ್ದೆಗೆ ನೇಮಕ ಮಾಡಬೇಕಿದೆ. ಆದರೆ, ವಿಭಾಗೀಯ ಆಯುಕ್ತರಿಗಿಂತ ಕಡಿಮೆ ಶ್ರೇಣಿಯ ಅಧಿಕಾರಿಯಾಗಿರುವ ಎಂ.ಬಿ.ರಾಜೇಶ್‌ ಗೌಡ ಅವರನ್ನು ಬಿಡಿಎ ಆಯುಕ್ತ ಹುದ್ದೆಗೆ ನೇಮಿಸಿ ಸರಕಾರ 2021ರ ಏ. 30ರಂದು ಆದೇಶಿಸಿದೆ. ಹಾಗಾಗಿ, ಬಿಡಿಎ ಆಯುಕ್ತರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ರಾಜೇಶ್‌ ಗೌಡ ಅವರಿಗೆ ಸೂಕ್ತ ಅರ್ಹತೆ ಇಲ್ಲವಾಗಿದೆ. ಅರ್ಹತೆ ಇಲ್ಲದವರನ್ನು ನೇಮಿಸುವುದರಿಂದ ಆಯುಕ್ತರ ಹುದ್ದೆಯ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದರು. ರಾಜೇಶ್‌ ಗೌಡ ಅವರನ್ನು ಬಿಡಿಎ ಆಯುಕ್ತ ಹುದ್ದೆಗೆ ನೇಮಕ ಮಾಡಿದ ಆದೇಶ ಹಿಂಪಡೆಯಬೇಕು ಹಾಗೂ ಸೂಕ್ತ ಅರ್ಹತೆಯಿರುವ ಅಧಿಕಾರಿಯನ್ನು ನೇಮಿಸಬೇಕೆಂದು ಕೋರಿ ಅರ್ಜಿದಾರರು ನ.3ರಂದು ಸರಕಾರಕ್ಕೆ ಮನವಿ ಪತ್ರ ನೀಡಿದ್ದಾರೆ. ಅದನ್ನು ಈವರೆಗೂ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿರುವ ಅರ್ಜಿದಾರರು, ಸೂಕ್ತ ಅರ್ಹತೆ ಹೊಂದಿರದ ಕಾರಣಕ್ಕೆ ಬಿಡಿಎ ಆಯುಕ್ತ ಹುದ್ದೆಗೆ ರಾಜೇಶ್‌ ಗೌಡ ಅವರನ್ನು ನೇಮಿಸಿ ಸರಕಾರ ಹೊರಡಿಸಿದ ಆದೇಶ ರದ್ದುಪಡಿಸಬೇಕು ಎಂದು ನ್ಯಾಯಾಲಯವನ್ನು ಕೋರಿದರು.


from India & World News in Kannada | VK Polls https://ift.tt/3sJRBpy

ಕಾರ್ಯಕರ್ತರ ಅಂಗಡಿಯಲ್ಲಿ ಚಹಾ.. ಮದುವೆ ಮನೆ ಪಂಕ್ತಿಯಲ್ಲಿ ಊಟ: ಇದು ಸ್ಪೀಕರ್ ಕಾಗೇರಿ ಸರಳ ಜೀವನ

: ರಾಜ್ಯ ವಿಧಾನಸಭಾಧ್ಯಕ್ಷ ಬಹಳ ಜೀವಿ ಎನ್ನುವುದು ಬಹುತೇಕರಿಗೆ ತಿಳಿದಿರುವ ವಿಚಾರ. ಜಿಲ್ಲೆಯ ತಾಲೂಕಿನ ಕಾಗೇರಿಯ ವಿಶ್ವೇಶ್ವರ ಹೆಗಡೆಯವರು ಯಾರೇ ಬಂದು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ ಆ ಕಾರ್ಯಕ್ರಮಕ್ಕೆ, ಕರೆದವರ ಮನೆಗೆ ಹೋಗಿ ಬರುವ ಮೂಲಕ ಜನರೊಂದಿಗೆ ಬೆರೆಯುತ್ತಾರೆ. ಜನರು ಕೂಡ ಇದರಿಂದಾಗಿಯೇ ಕಾಗೇರಿಯವರನ್ನ ಬಹಳ ಮೆಚ್ಚಿಕೊಳ್ತಾರೆ. ಅದೇ ರೀತಿ ಖಾಸಗಿ ಕಾರ್ಯಕ್ರಮದ ನಿಮಿತ್ತ ಪಟ್ಟಣಕ್ಕೆ ಆಗಮಿಸಿದ್ದ ಕಾಗೇರಿ, ಜನ ಸಂಘದ ಹಿರಿಯ ಕಾರ್ಯಕರ್ತ ಅಶೋಕ ಮಹಾಲೆ ಅವರ ಹೋಟೆಲಿಗೆ ಭೇಟಿ ನೀಡಿ, ಕರೆ ಲಾಡು - ಚಹ ಸೇವಿಸಿ ಸರಳತೆಗೆ ಸಾಕ್ಷಿಯಾದರು. ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪ್ರಥಮ ಬಾರಿ ಶಾಸಕರಾಗಿದ್ದು ಅಂಕೋಲಾ ಕ್ಷೇತ್ರದಿಂದ. ಈ ಕ್ಷೇತ್ರದಿಂದ ಒಮ್ಮೆ ಆಯ್ಕೆಯಾದವರು ಮತ್ತೊಮ್ಮೆ ಆಯ್ಕೆ ಆಗುವುದಿಲ್ಲ ಎಂಬ ಅಂಕೋಲಾ ಕ್ಷೇತ್ರದ ಪ್ರತೀತಿ ಬದಲಿಸಿದ ಕಾಗೇರಿ, ಮೂರು ಬಾರಿ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ. ಈ ಆಯ್ಕೆಗೆ ಸಹಕರಿಸಿದ ಹಿರಿಯ ಕಾರ್ಯಕರ್ತರಲ್ಲಿ ಓರ್ವರಾದ ಅಶೋಕ ಮಹಾಲೆ ಅವರನ್ನು ನೆನಪಿಸಿಕೊಂಡು ಈಗ ಕಾರವಾರ ರಸ್ತೆಯಲ್ಲಿರುವ ಪುಟ್ಟ ಹೋಟೆಲ್‌ಗೆ ಭೇಟಿ ನೀಡಿ, ಅವರ ಕುಶಲೋಪರಿಯನ್ನ ಕಾಗೇರಿ ವಿಚಾರಿಸಿದರು. ಅದೇ ರೀತಿ ಕಿತ್ತೂರು ಚೆನ್ನಮ್ಮ ರಸ್ತೆಯಲ್ಲಿರುವ ಇನ್ನೋರ್ವ ಹಿರಿಯ ರಾಮಚಂದ್ರ ನಾಯ್ಕ ಅವರ ಅಂಗಡಿಗೂ ಹೋಗಿ ಅವರ ಆರೋಗ್ಯ ವಿಚಾರಿಸಿದರು. ನಾಮಧಾರಿ ದಹಿಂಕಾಲ ಉತ್ಸವದ ಹಿನ್ನೆಲೆಯಲ್ಲಿ ಶ್ರೀ ವೆಂಕಟ ರಮಣ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಇಷ್ಟೇ ಅಲ್ಲದೆ, ಅಂಕೋಲಾ ಪಟ್ಟಣದ ಆರ್ಯ ದುರ್ಗಾ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಪ್ರಮುಖರಾದ ದಯಾನಂದ ಪ್ರಭು ಅವರ ಮಗಳ ಮದುವೆಯಲ್ಲಿ ಭಾಗವಹಿಸಿ, ಇದೇ ಸಂದರ್ಭದಲ್ಲಿ ಮದುವೆ ಸಮಾರಂಭದಲ್ಲಿ ಭೇಟಿಯಾದ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರೊಂದಿಗೆ ಸಾಮಾನ್ಯರಂತೆ ಮದುವೆ ಮನೆಯ ಊಟದ ಪಂಕ್ತಿಯಲ್ಲಿ ಕುಳಿತು ಊಟ ಸೇವಿಸಿ, ನಂತರ ಮತ್ತೊಂದು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದರು. ಶಾಸಕರಾದರೂ, ಗೌರವದ ಸ್ಥಾನವಾದ ವಿಧಾನ ಸಭಾಧ್ಯಕ್ಷರಾದರೂ ಕೂಡ ಈಗಲೂ ಸರಳವಾಗಿ ಮದುವೆ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನರೊಂದಿಗೆ ಪಾಲ್ಗೊಂಡು ಸರಳತೆ ಮೆರೆಯುವ ವಿಶ್ವೇಶ್ವರ ಹೆಗಡೆ ಕಾಗೇರಿಯಂಥವರು ಈಗಿನ ರಾಜಕೀಯ ಕ್ಷೇತ್ರದಲ್ಲಿ ಬಹಳ ಅಪರೂಪವೇ ಸರಿ.


from India & World News in Kannada | VK Polls https://ift.tt/3Hn56iO

ಬೆಂಗಾಲ್‌ ವಾರಿಯರ್ಸ್‌ ಮೇಲೆ ದಬಾಂಗ್‌ ಡೆಲ್ಲಿ ದರ್ಬಾರ್‌!

ಬೆಂಗಳೂರು: ರೇಡರ್‌ ನವೀನ್‌ ಕುಮಾರ್‌ (24 ಅಂಕ) ಮತ್ತು ಆಲ್‌ರೌಂಡರ್‌ ವಿಜಯ್‌ (10 ಅಂಕ) ಅವರ ಅಮೋಘ ಪ್ರದರ್ಶನದ ನೆರವಿನಿಂದ ಮಿಂಚಿದ ದಬಾಂಗ್‌ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್‌ 8ನೇ ಆವೃತ್ತಿಯ 19ನೇ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ಸ್‌ ತಂಡದ ಹೆಡಮುರಿಗೆ ಕಟ್ಟಿ ಟೂರ್ನಿಯಲ್ಲಿ3ನೇ ಜಯ ಗಳಿಸಿತು. ವೈಟ್‌ಫೀಲ್ಡ್‌ನ ಶೆರ್ಟನ್‌ ಗ್ರ್ಯಾಂಡ್‌ ಹೋಟೆಲ್‌ ಸಭಾಂಗಣದಲ್ಲಿ ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಅಬ್ಬರಿಸಿದ ದಬಾಂಗ್‌ 52-35 ಅಂಕಗಳಿಂದ ಬೆಂಗಾಲ್‌ ತಂಡವನ್ನು ಸೋಲಿಸಿ ಅಜೇಯ ದಾಖಲೆ ಮುಂದುವರಿಸಿತು. ಸದ್ಯ 18 ಅಂಕ ಹೊಂದಿರುವ ದಿಲ್ಲಿ 12 ತಂಡಗಳಿರುವ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನವೀನ್‌ ಕುಮಾರ್‌ ಅವರ ಚುರುಕಿನ ರೇಡಿಂಗ್‌ ಬಲದಿಂದ ಪಂದ್ಯದ ಮೊದಲ ಹತ್ತು ನಿಮಿಷಗಳಲ್ಲೇ 2 ಬಾರಿ ವಾರಿಯರ್ಸ್‌ ಅಂಗಣವನ್ನು ಖಾಲಿ ಮಾಡಿಸಿದ ದಬಾಂಗ್‌ ಆಟಗಾರರು 17-5ರಲ್ಲಿ ಮುನ್ನಡೆ ಕಾಯ್ದುಕೊಂಡರು. ನಂತರವೂ ಅಧಿಕಾರಯುತ ಪ್ರದರ್ಶನ ತೋರಿದ ದಿಲ್ಲಿ ಪಡೆ, ಪ್ರಥಮಾರ್ಧದ ಮುಕ್ತಾಯಕ್ಕೆ 33-15 ಅಂಕಗಳಿಂದ ಭಾರಿ ಮುನ್ನಡೆ ಕಾಯ್ದುಕೊಂಡಿತು. ಆರಂಭಿಕ ಮುನ್ನಡೆಯಿಂದ ಇನ್ನಷ್ಟು ಆತ್ಮವಿಶ್ವಾಸ ಹೆಚ್ಚಿಸಿಕೊಂಡ ದಬಾಂಗ್‌, ದ್ವಿತೀಯಾರ್ಧದಲ್ಲೂ ಆಲ್‌ರೌಂಡ್‌ ಪ್ರದರ್ಶನ ನೀಡಿ ಗೆಲುವಿನ ಅಂತರವನ್ನು ಹಿಗ್ಗಿಸಿಕೊಂಡಿತು. ಅತ್ತ ಸತತ ಎರಡನೇ ಸೋಲಿಗೆ ಒಳಗಾದ ಬೆಂಗಾಲ್‌ ಪರ ನಾಯಕ ಮಣಿಂದರ್‌ ಸಿಂಗ್‌ (16 ಅಂಕ) ಮತ್ತು ಸುಖೇಶ್‌ ಹೆಗಡೆ (9 ಅಂಕ) ಹೋರಾಟ ನಡೆಸಿ ಸೋಲಿನ ಅಂತರವನ್ನು ತಗ್ಗಿಸಿದರು. ಯೋಧಾ -ಜಯಂಟ್ಸ್‌ ರೋಚಕ ಟೈದಿನದ 2ನೇ ಹಣಾಹಣಿಯಲ್ಲಿ ಸಮಬಲದ ಹೋರಾಟ ನೀಡಿದ ಯು.ಪಿ. ಯೋಧಾ ಮತ್ತು ತಂಡಗಳು 32-32 ಅಂಕಗಳಿಂದ ಡ್ರಾ ಸಾಧಿಸಿ ತಲಾ 3 ಅಂಕಗಳಿಗೆ ತೃಪ್ತಿಪಟ್ಟವು. ಯೋಧಾ ಪರ ಪರ್ದೀಪ್‌ ನರ್ವಾಲ್‌ 11 ಅಂಕ ಕಲೆಹಾಕಿದರೆ, ಎರಡು ಬಾರಿಯ ರನ್ನರ್ಸ್‌ಅಪ್‌ ಗುಜರಾತ್‌ ಜಯಂಟ್ಸ್‌ ಪರ ರಾಕೇಶ್‌ ನರ್ವಾಲ್‌ 13 ಅಂಕ ಗಳಿಸಿ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದರು. ಗುರುವಾರದ ಪಂದ್ಯಗಳು ಪಿಂಕ್‌ ಪ್ಯಾಂಥರ್ಸ್‌ - ಯು ಮುಂಬಾ ಪಂದ್ಯ ಆರಂಭ (ರಾತ್ರಿ 7.30) ಹರಿಯಾಣ ಸ್ಟೀಲರ್ಸ್‌ - ಬೆಂಗಳೂರು ಬುಲ್ಸ್‌ ಪಂದ್ಯ ಆರಂಭ (ರಾತ್ರಿ 8.30) ಬೆಂಗಳೂರು ಬುಲ್ಸ್‌ ಪಂದ್ಯಗಳ ವೇಳಾಪಟ್ಟಿಮೊದಲ ಚರಣದ ಹನ್ನೊಂದು ಪಂದ್ಯಗಳ ವಿವರ ಬೆಂಗಳೂರು ಬುಲ್ಸ್‌ vs ಯು ಮುಂಬಾ (ಡಿ.22) ಬೆಂಗಳೂರು ಬುಲ್ಸ್‌ vs ತಮಿಳ್‌ ತಲೈವಾಸ್‌ (ಡಿ.24) ಬೆಂಗಳೂರು ಬುಲ್ಸ್‌ vs ಬೆಂಗಾಲ್‌ ವಾರಿಯರ್ಸ್‌ (ಡಿ.26) ಬೆಂಗಳೂರು ಬುಲ್ಸ್‌ vs ಹರಿಯಾಣ ಸ್ಟೀಲರ್ಸ್‌ (ಡಿ.30) ಬೆಂಗಳೂರು ಬುಲ್ಸ್‌ vs ತೆಲುಗು ಟೈಟನ್ಸ್‌ (ಜ.01) ಬೆಂಗಳೂರು ಬುಲ್ಸ್‌ vs ಪುಣೇರಿ ಪಲ್ಟನ್‌ (ಜ.02) ಬೆಂಗಳೂರು ಬುಲ್ಸ್‌ vs ಜೈಪುರ ಪಿಂಕ್‌ ಪ್ಯಾಂಥರ್ಸ್‌ (ಜ.06) ಬೆಂಗಳೂರು ಬುಲ್ಸ್‌ vs ಯುಪಿ ಯೋಧಾ (ಜ.09) ಬೆಂಗಳೂರು ಬುಲ್ಸ್‌ vs ದಬಾಂಗ್‌ ಡೆಲ್ಲಿ (ಜ.12) ಬೆಂಗಳೂರು ಬುಲ್ಸ್‌ vs ಗುಜರಾತ್‌ ಜಯಂಟ್ಸ್‌ (ಜ.14) ಬೆಂಗಳೂರು ಬುಲ್ಸ್‌ vs ಪಟನಾ ಪೈರೇಟ್ಸ್‌ (ಜ.16)


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3mH1DE0

ಮುಡಾ ಮನೆ ಹರಾಜಿಗೆ ಸಿದ್ಧತೆ; 100 ಕೋಟಿ ರೂ. ಆದಾಯ ನಿರೀಕ್ಷೆ, ಈಗಾಗಲೇ 120 ಮನೆ ಪತ್ತೆ!

ಹರೀಶ ಎಲ್‌. ತಲಕಾಡು ಮೈಸೂರು: ನಿವೇಶನಗಳ ಹರಾಜಿನ ಮೂಲಕ ಆದಾಯ ಗಳಿಸುತ್ತಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (), ಈಗ ಮತ್ತೊಂದು ಆದಾಯದ ಮೂಲಕ್ಕೆ ಕೈ ಹಾಕಿದೆ. ದಾಖಲೆಯಲ್ಲಿ ಹಂಚಿಕೆಯಾಗದೇ ಬಾಕಿ ಇರುವ ಮುಡಾ ಮನೆಗಳ ಹರಾಜಿಗೆ ಸಿದ್ಧತೆ ನಡೆಸಿದೆ. ಈಗಾಗಲೇ ಅಂತಹ 120 ಮನೆಗಳನ್ನು ಗುರುತಿಸಿರುವ ಮುಡಾ ಅಧಿಕಾರಿಗಳು, ಇಂದಿನ ಮಾರುಕಟ್ಟೆ ದರದಲ್ಲಿ ನಡೆಸಲು ನಿರ್ಧರಿಸಿದ್ದಾರೆ. 1987ರಲ್ಲಿ ಮುಡಾದಿಂದ ಕುವೆಂಪುನಗರ, ಶಾರದಾದೇವಿನಗರ, ರಾಮಕೃಷ್ಣನಗರ, ಕ್ಯಾತಮಾರನಹಳ್ಳಿ, ರಾಜೀವ್‌ನಗರ ಒಂದನೇ ಹಂತ, ಎರಡನೇ ಹಂತ, ಹೆಬ್ಬಾಳು ಬಡಾವಣೆಗಳಲ್ಲಿ ಇಡಬ್ಲ್ಯೂಎಸ್‌, ಎಲ್ ಐಜಿ, ಎಂಐಜಿ, ಎಚ್‌ಐಜಿ ಮನೆಗಳನ್ನು ನಿರ್ಮಿಸಲಾಗಿತ್ತು. ನಂತರ ಮನೆಗಳನ್ನು ಅರ್ಹತೆ ಆಧಾರದ ಮೇಲೆ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿತ್ತು. ಕೆಲವರು ಸಕಾಲಿಕವಾಗಿ ಹಣ ಪಾವತಿಸದೇ ಇದ್ದುದರಿಂದ ಹಂಚಿಕೆಯನ್ನು ರದ್ದುಪಡಿಸಲಾಗಿತ್ತು. ಇದರಿಂದ ಸಾಕಷ್ಟು ಮನೆಗಳು ಖಾಲಿಯಾಗಿದ್ದವು. ಇದನ್ನೇ ಬಂಡವಾಳವಾಗಿಸಿಕೊಂಡ ಕೆಲವರು, ಅಂತಹ ಮನೆಗಳ ನಕಲಿ ದಾಖಲೆ ಸೃಷ್ಟಿಸಿ, ಬೇರೆಯವರಿಗೆ ಬಾಡಿಗೆ ಅಥವಾ ಭೋಗ್ಯಕ್ಕೆ ನೀಡುವ ಮೂಲಕ ಆದಾಯ ಗಳಿಸುತ್ತಿದ್ದರು. ಈ ಬಗ್ಗೆ ಇದರ ನಡುವೆ ಸಂಘಟನೆ ಮುಖಂಡರೊಬ್ಬರು ಅನಧಿಕೃತವಾಗಿ ವಾಸ ಮಾಡುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಮುಡಾ ಆಯುಕ್ತರಿಗೆ ದೂರು ಕೊಟ್ಟಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತ ಡಾ.ಡಿ.ನಟೇಶ್‌ ಮನೆಯಲ್ಲಿ ವಾಸವಿದ್ದ ಸಂಘಟನೆಯ ಮುಖಂಡನಿಗೆ ನೋಟಿಸ್‌ ನೀಡಿ ತೆರವುಗೊಳಿಸಿದ್ದರು. ಈ ರೀತಿ ಖಾಲಿ ಇರುವ ಮುಡಾ ಮನೆಗಳಲ್ಲಿ ಅಕ್ರಮವಾಗಿ ವಾಸವಿರುವ ಬಗ್ಗೆ ಅನುಮಾನದಿಂದ ಆಯುಕ್ತರು, ಸಮೀಕ್ಷೆ ನಡೆಸಿ ವರದಿ ನೀಡುವಂತೆ ವಲಯ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. 120 ಮನೆಗಳಲ್ಲಿ ಅನಧಿಕೃತ ವಾಸ ವಲಯವಾರು ಮುಡಾ ತಹಸೀಲ್ದಾರ್‌ ನೇತೃತ್ವದ ಅಧಿಕಾರಗಳ ತಂಡ, ಮುಡಾ ಮನೆಗಳಲ್ಲಿಪರಿಶೀಲನೆ ನಡೆಸಿ 120 ಮನೆಗಳಲ್ಲಿ ಅಕ್ರಮವಾಗಿ ವಾಸವಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. 59 ಇಡಬ್ಲೂಎಸ್‌ ಮನೆ, 45 ಎಲ್ಐಜಿ ಮನೆ, 10 ಎಂಐಜಿ ಮನೆಗಳಲ್ಲಿ ಅತಿಕ್ರಮವಾಗಿ ವಾಸ ಮಾಡುತ್ತಿದ್ದು, ಈ ನಿವಾಸಿಗಳ ಪಟ್ಟಿ ತಯಾರಿಸಲಾಗಿದೆ. ಹರಾಜಿನಲ್ಲಿ 100 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. 1997ರಲ್ಲಿ ಮಾರುಕಟ್ಟೆ ದರವು ಇಡಬ್ಲ್ಯೂಎಸ್‌ ಮನೆಗೆ 2 ಲಕ್ಷ, ಎಲ್ಐಜಿಗೆ 4 ಲಕ್ಷ, ಎಂಐಜಿ ಮನೆಗಳಿಗೆ 7 ಲಕ್ಷ ರೂ.ಇತ್ತು .ಆದರೆ, ಈಗಿನ ಮಾರುಕಟ್ಟೆ ದರದಲ್ಲಿ ಇಡಬ್ಲ್ಯೂಎಸ್‌ ಮನೆಗೆ 20ರಿಂದ 25 ಲಕ್ಷ, ಎಲ್ಐಜಿಗೆ 30ರಿಂದ 40 ಲಕ್ಷ ರೂ. ಆಗಲಿದೆ. ಈ ಎಲ್ಲ ಮನೆಗಳನ್ನು ಬಹಿರಂಗವಾಗಿ ಹರಾಜು ಹಾಕಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿಯೊಂದು ಮನೆ ಯಾರ ಹೆಸರಿಗೆ ಹಂಚಿಕೆಯಾಗಿತ್ತು. ಈಗ ಯಾರು ವಾಸ ಮಾಡುತ್ತಿದ್ದಾರೆ ಎಂಬುದು ಸೇರಿ ಮನೆಯ ಫೋಟೋ ಸಮಿತಿ ಪ್ರತ್ಯೇಕ ಕಡತಗಳನ್ನು ತಯಾರು ಮಾಡಲಾಗುತ್ತಿದೆ. ಮೂಲ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿದ ಬಳಿಕ, ಅಂತಿಮವಾಗಿ ಹರಾಜು ಪ್ರಕ್ರಿಯೆ ಮಾಡಲಾಗುತ್ತದೆ. ಈಗಾಗಲೇ ವಾಸ ಮಾಡುತ್ತಿರುವವರು ಹರಾಜಿನಲ್ಲಿ ಭಾಗವಹಿಸಿ ಖರೀದಿಸಬಹುದು. ಇಲ್ಲದಿದ್ದರೆ ಅಂತಹವರು ಮನೆಯನ್ನು ಖಾಲಿ ಮಾಡಿಸಲಾಗುತ್ತದೆ ಎನ್ನುತ್ತಾರೆ ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್‌. ಮುಡಾ ನಿರ್ಮಿಸಿರುವ ಮನೆಗಳಲ್ಲಿ ಅಕ್ರಮವಾಗಿ ವಾಸವಿರುವವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. 120 ಮನೆಗಳು ಪತ್ತೆಯಾಗಿದೆ. ದಾಖಲೆ ಪರಿಶೀಲನೆ ವೇಳೆ ಈ ಅತಿಕ್ರಮಿತ ಮನೆಗಳ ಸಂಖ್ಯೆ 150 ದಾಟಬಹುದಾಗಿದೆ. ಈ ಮನೆಗಳ ಹರಾಜಿನಿಂದ 100 ಕೋಟಿ ರೂ. ಆದಾಯದ ನಿರೀಕ್ಷೆ ಇದೆ. ಡಾ.ಡಿ.ಬಿ.ನಟೇಶ್‌, ಮುಡಾ ಆಯುಕ್ತ ಯಾವುದೇ ಒತ್ತಡಕ್ಕೆ ಮಣಿಯದೇ ಮುಡಾ ಮನೆಗಳನ್ನು ಸಮೀಕ್ಷೆ ನಡೆಸಿ ಅಕ್ರಮವಾಗಿ ವಾಸವಿರುವವರನ್ನು ಗುರುತಿಸಿ, ತೆರವುಗೊಳಿಸುವ ಮೂಲಕ ಮುಡಾ ಉತ್ತಮ ಕಾರ್ಯ ಮಾಡುತ್ತಿದೆ. ಈ ಮನೆಗಳ ಹರಾಜಿನಿಂದ ಮುಡಾಗೆ ಮತ್ತಷ್ಟು ಆದಾಯ ಬರಲಿದೆ. ಎಸ್‌ಬಿಎಂ ಮಂಜು, ಮುಡಾ ಸದಸ್ಯ


from India & World News in Kannada | VK Polls https://ift.tt/3qxr8sr

ಅಧಿಕಾರಕ್ಕೆ ಬಂದರೆ 50 ರೂಪಾಯಿಗೆ ಲಿಕ್ಕರ್!: ಮತದಾರರಿಗೆ ಆಂಧ್ರ ಬಿಜೆಪಿ ಅಧ್ಯಕ್ಷನ ಆಫರ್

ವಿಜಯವಾಡ: ಆಂಧ್ರಪ್ರದೇಶ ಅಧ್ಯಕ್ಷ ಸೋಮು ವೀರರಾಜು ಅವರು ಮಂಗಳವಾರ ಮತದಾರರಿಗೆ ನೀಡಿರುವ ಆಮಿಷ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಕೇವಲ 50 ರೂಪಾಯಿಗೆ ಒಂದು ಕ್ವಾರ್ಟರ್ ಬಾಟಲಿ ಗುಣಮಟ್ಟದ ಮದ್ಯವನ್ನು ಮಾರಾಟ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಪ್ರಸ್ತುತ ಆಂಧ್ರದಲ್ಲಿ ಕ್ವಾರ್ಟರ್ ಬಾಟಲಿ ಗುಣಮಟ್ಟದ ಲಿಕ್ಕರ್ ದರ 200 ರೂ ಇದೆ. ವಿಜಯವಾಡದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ವೀರರಾಜು, ಜನರಿಗೆ ಕಳಪೆ ಗುಣಮಟ್ಟದ ಮದ್ಯವನ್ನು ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಎಲ್ಲ ನಕಲಿ ಬ್ರ್ಯಾಂಡ್‌ಗಳನ್ನು ಅಧಿಕ ದರಕ್ಕೆ ಮಾರಲಾಗುತ್ತಿದೆ. ಜನರಿಗೆ ಪರಿಚಿತ ಹಾಗೂ ಜನಪ್ರಿಯವಾಗಿರುವ ಬ್ರ್ಯಾಂಡ್‌ಗಳು ಎಲ್ಲಿಯೂ ಲಭ್ಯವಾಗುತ್ತಿಲ್ಲ ಎಂದು ಆರೋಪಿಸಿದರು. ರಾಜ್ಯದ ಪ್ರತಿ ವ್ಯಕ್ತಿಯೂ ತಿಂಗಳಿಗೆ ಸುಮಾರು 12,000 ರೂಪಾಯಿಯನ್ನು ಮದ್ಯಕ್ಕಾಗಿ ವ್ಯಯ ಮಾಡುತ್ತಿದ್ದಾರೆ. ಇದನ್ನು ಸರ್ಕಾರ ಅವರಿಗೆ ಬೇರೆ ಯೋಜನೆ ಅಥವಾ ಇತರೆ ಹೆಸರಿನಲ್ಲಿ ನೀಡುತ್ತಿದೆ. ರಾಜ್ಯದಲ್ಲಿ ಸೇವನೆ ಮಾಡುವ ಒಂದು ಕೋಟಿ ಜನರು ಇದ್ದಾರೆ. ಆ ಒಂದು ಕೋಟಿ ಜನರು 2024ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಕು ಎಂದು ಬಯಸುತ್ತೇನೆ. ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಬಾಟಲಿ ಮದ್ಯವನ್ನು 75 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಆದಾಯ ಸುಧಾರಣೆಯಾದರೆ ಪ್ರತಿ ಬಾಟಲಿಗೆ 50 ರೂಪಾಯಿಯಂತೆಯೂ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು. ಆಡಳಿತ ಪಕ್ಷದ ಮುಖಂಡರು ಮದ್ಯ ಫ್ಯಾಕ್ಟರಿಗಳನ್ನು ಹೊಂದಿದ್ದು, ಸರ್ಕಾರಕ್ಕೆ ಕಳಪೆ ಗುಣಮಟ್ಟದ ಲಿಕ್ಕರ್ ಪೂರೈಕೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.


from India & World News in Kannada | VK Polls https://ift.tt/3zebmqn

ಪುತ್ತೂರು ನೂತನ ವಕೀಲರ ಭವನ ಉದ್ಘಾಟಿಸಿದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎಸ್‌. ಅಬ್ದುಲ್‌ ನಜೀರ್‌

ಪುತ್ತೂರು: ಸಮಾಜದಲ್ಲಿ ವ್ಯಾಜ್ಯಗಳಿರುವ ಮನೆ ಕ್ಯಾನ್ಸರ್‌ ಇದ್ದಂತೆ. ಕ್ಯಾನ್ಸರ್‌ ಎಂಬ ವ್ಯಾಜ್ಯವನ್ನು ಸಮಾಜದಿಂದ ತೊಲಗಿಸುವ ಮುಖ್ಯ ಅಗತ್ಯತೆ ಇದೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಸ್‌. ಅಬ್ದುಲ್‌ ನಜೀರ್‌ ಹೇಳಿದರು. ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಪುತ್ತೂರು ಬನ್ನೂರಿನ ಆನೆಮಜಲಿನಲ್ಲಿ ನೂತನವಾಗಿ ನಿರ್ಮಿಸಿರುವ ವಕೀಲರ ಭವನದ ಉದ್ಘಾಟನೆ ಹಾಗೂ ನೂತನ ನ್ಯಾಯಾಲಯ ಸಂಕೀರ್ಣದ 2ನೇ ಹಂತದ ಮತ್ತು ನ್ಯಾಯಾಧೀಶರ ವಸತಿ ಗೃಹಗಳ ಶಿಲಾನ್ಯಾಸ ಸಮಾರಂಭವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಜನರಿಗೆ ಶಾಂತಿ, ಸುವ್ಯವಸ್ಥೆಯ ವ್ಯವಸ್ಥೆ ಇಲ್ಲದಿದ್ದರೆ ಯಾವುದೇ ಕಟ್ಟಡ ಉಪಯೋಕ್ಕೆ ಬಾರದು. ಈ ನಿಟ್ಟಿನಲ್ಲಿ ಜನರಿಗೆ ಶಾಂತಿ, ಸುವ್ಯವಸ್ಥೆ ಒದಗಿಸುವುದು ನ್ಯಾಯಾಲಯದ ಮೂಲ ಕರ್ತವ್ಯ ಆಗಬೇಕು. ಪ್ರಸ್ತುತ ಕರ್ನಾಟಕ ಸರಕಾರ ನ್ಯಾಯಾಲಯಕ್ಕೆ ಸಂಬಂಧಿಸಿದ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತಿದ್ದು, ಕರ್ನಾಟಕ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಕೆ. ಸೋಮಶೇಖರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ವಕೀಲರು ಬುದ್ಧಿವಂತಿಕೆ ಜತೆ ಹೃದಯವಂತರಾಗಿರಬೇಕು. ದ.ಕ. ಸಾಕಷ್ಟು ಹಿರಿಯ ವಕೀಲರನ್ನು ನೀಡಿದೆ. ಸಮಾಜಕ್ಕೆ ಅವರ ಉಪಯೋಗ ಸಾಕಷ್ಟಿದೆ. ಸತ್ಯ ಎಂಬುದು ನ್ಯಾಯಾಧೀಶರ ಕೈಯಲ್ಲಿದೆ. ಅದನ್ನು ಯಾವಾಗಲು ಎತ್ತಿ ಹಿಡಿಯುವಲ್ಲಿ ಪ್ರಯತ್ನಿಸಬೇಕು ಎಂದರು. ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಆಧ್ಯಾತ್ಮಿಕ ಬದುಕಿಗೆ ನ್ಯಾಯ ನೀಡಿದವರು ಅಬ್ದುಲ್‌ ನಜೀರ್‌ ಅವರು. ಅವರ ಭಾಷಾ ಕಳಕಳಿಯಿಂದ ಪುತ್ತೂರಿನಲ್ಲಿ ಕಟ್ಟಡ ನಿರ್ಮಾಣವಾಗಿದೆ. ಮೂಲ ಸೌಕರ್ಯಗಳ ಜತೆ ನ್ಯಾಯ ನೀಡುವ ಕೆಲಸವನ್ನು ಅವರು ಮಾಡಿದ್ದಾರೆ ಎಂದರು. ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ, ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಮೊಹಮ್ಮದ್‌ ನವಾಜ್‌, ಎಸ್‌. ವಿಶ್ವಜಿತ್‌ ಶೆಟ್ಟಿ, ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಅರುಣ್‌ ಶ್ಯಾಮ್‌, ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಎಲ್‌.ಶ್ರೀನಿವಾಸ ಬಾಬು, ರಾಜ್ಯ ವಕೀಲರ ಪರಿಷತ್‌ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಪಿ.ಪಿ.ಹೆಗ್ಡೆ, ಶಿವಮೊಗ್ಗ ಲೋಕೋಪಯೋಗಿ ಇಲಾಖೆ ಕೇಂದ್ರ ವಲಯದ ಮುಖ್ಯ ಅಭಿಯಂತರ ಕಾಂತರಾಜ್‌ ಟಿ.ಟಿ. ಉಪಸ್ಥಿತರಿದ್ದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುರಳೀಧರ ಪೈ ಬಿ. ಸ್ವಾಗತಿಸಿದರು. ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ ಎನ್‌.ಎಸ್‌. ವಂದಿಸಿದರು. ಹಿರಿಯ ವಕೀಲ, ಕಾರ್ಯಕ್ರಮ ಸಂಯೋಜಕ ಕೆ.ಆರ್‌.ಆಚಾರ್ಯ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್‌ ರೈ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ವರಿ ಮತ್ತು ತಂಡದವರು ನಾಡಗೀತೆ ಹಾಡಿದರು.


from India & World News in Kannada | VK Polls https://ift.tt/3EFGQqu

ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದ್ದ 'ಬಚ್‌ಪನ್‌ ಕಾ ಪ್ಯಾರ್' ಖ್ಯಾತಿಯ ಬಾಲಕನಿಗೆ ಅಪಘಾತ

ಸುಕ್ಮಾ: 'ಬಚ್‌ಪನ್‌ ಕಾ ಪ್ಯಾರ್' ಹಾಡಿನ ಮೂಲಕ ರಾತ್ರೋರಾತ್ರಿ ಖ್ಯಾತಿ ಗಳಿಸಿದ್ದ ಬಾಲಕ ಸಹದೇವ್ ದಿರ್ದೋ ಅಪಘಾತಕ್ಕೀಡಾಗಿದ್ದಾನೆ. ಆತನಿಗೆ ಗಂಭೀರ ಗಾಯಗಳಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ ಎನ್ನಲಾಗಿದೆ. ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಬೈಕ್ ಸ್ಕಿಡ್ ಆಗಿ ಸಂಭವಿಸಿದ್ದು, ಸಹದೇವ್ ಹಿಂಬದಿ ಸವಾರನಾಗಿ ಬೈಕ್‌ನಲ್ಲಿ ಕುಳಿತಿದ್ದ. ಸಂಜೆ 6.30ರ ಸುಮಾರಿಗೆ ಈ ಅಪಘಾತ ಉಂಟಾಗಿದ್ದು, ಸಹದೇವ್ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ ಆತನ ತಲೆಗೆ ಗಾಯಗಳಾಗಿವೆ. ಬೈಕ್ ಓಡಿಸುತ್ತಿದ್ದ ಆತನ ತಂದೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಶರ್ಮಾ ತಿಳಿಸಿದ್ದಾರೆ. ಛತ್ತೀಸಗಡದಲ್ಲಿ ನಕ್ಸಲ್ ಪ್ರಾಬಲ್ಯ ತೀವ್ರವಾಗಿರುವ ಬುಡಕಟ್ಟು ಸಮುದಾಯಗಳು ಹೆಚ್ಚಿರುವ ಜಿಲ್ಲೆಯವನಾದ 10 ವರ್ಷದ ಸಹದೇವ್ ದಿರ್ದೋ, ಶಾಲಾ ಸಮವಸ್ತ್ರದಲ್ಲಿ 'ಬಚ್‌ಪನ್ ಕ ಪ್ಯಾರ್' ಹಾಡನ್ನು ಹಾಡುವ ವಿಡಿಯೋ ಈ ವರ್ಷ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಇಂಟರ್‌ನೆಟ್‌ನಲ್ಲಿ ಸಹದೇವ್ ಖ್ಯಾತಿ ಗಳಿಸಿದ್ದ. ಸಿನಿಮಾ ತಾರೆಯರು ಕೂಡ ಈತನ ಹಾಡಿಗೆ ಇನ್‌ಸ್ಟ್ರಾಗ್ರಾಂ ರೀಲ್‌ಗಳನ್ನು ಮಾಡಿ ಖುಷಿ ಪಟ್ಟಿದ್ದರು. 2019ರಲ್ಲಿ ತರಗತಿಯೊಳಗೆ ಶಾಲಾ ಶಿಕ್ಷಕರು ಆತನ ಹಾಡನ್ನು ಚಿತ್ರೀಕರಿಸಿದ್ದರು ಎನ್ನಲಾಗಿದೆ. ಇದು ಎಷ್ಟು ಪ್ರಸಿದ್ಧಿ ಪಡೆದಿತ್ತು ಎಂದರೆ, ಖ್ಯಾತ ರಾಪ್ ಗಾಯಕ , ಹೊಸ ಹಾಡೊಂದರಲ್ಲಿ ಆತನಿಗೆ ಅವಕಾಶ ನೀಡಿದ್ದರು. ಈ ವಿಡಿಯೋ ಸಾಂಗ್ ಆಗಸ್ಟ್‌ನಲ್ಲಿ ಬಿಡುಗಡೆಯಾಗಿತ್ತು. ಸಹದೇವ್ ಆರೋಗ್ಯದ ಬಗ್ಗೆ ಟ್ವೀಟ್ ಮಾಡಿದ್ದ ಬಾದ್‌ಷಾ, 'ಸಹದೇವ್‌ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿ ಇದ್ದೇನೆ. ಆತ ಪ್ರಜ್ಞಾಹೀನನಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ನಾನು ಆತನಿಗಾಗಿ ಇದ್ದೇನೆ. ನಿಮ್ಮೆಲ್ಲರ ಪ್ರಾರ್ಥನೆ ಅಗತ್ಯವಿದೆ' ಎಂದು ಹೇಳಿದ್ದಾರೆ. ಸಹದೇವ್‌ನನ್ನು ಜಿಲ್ಲಾ ಆಸ್ಪತ್ರೆಗೆ ಮೊದಲು ದಾಖಲಿಸಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ಬಳಿಕ ಜಗ್ದಲ್ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಸುಕ್ಮಾ ಕಲೆಕ್ಟರ್ ವಿನೀತ್ ನಂದನ್ವರ್ ಮತ್ತು ಎಸ್‌ಪಿ ಸುನಿಲ್ ಶರ್ಮಾ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಿಸಿದ್ದಾರೆ. ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಅವರೂ ಸಹದೇವ್ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಬಾಲಕನಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸುವಂತೆ ಸೂಚನೆ ನೀಡಿದ್ದಾರೆ.


from India & World News in Kannada | VK Polls https://ift.tt/3zfkQlm

14,500 ಅತಿಥಿ ಉಪನ್ಯಾಸಕರ ಪ್ರತಿಭಟನೆ ಮುಂದುವರಿಕೆ; ಪದವಿ ವಿದ್ಯಾರ್ಥಿಗಳ ಕಲಿಕೆಗೆ ಹೊಡೆತ, ಎನ್‌ಇಪಿಗೆ ಹಿನ್ನಡೆ!

ನಾಗರಾಜು ಅಶ್ವತ್ಥ್ ಬೆಂಗಳೂರು ಗ್ರಾಮಾಂತರಬೆಂಗಳೂರು: ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ಪ್ರಥಮ ದರ್ಜೆ ಕಾಲೇಜುಗಳ ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ರಾಜ್ಯಾದ್ಯಂತ ಪದವಿ ವಿದ್ಯಾರ್ಥಿಗಳ ಕಲಿಕೆಗೆ ತೀವ್ರ ಹೊಡೆತ ಬೀಳಲಾರಂಭಿಸಿದೆ. ಕಳೆದ ಡಿ. 10ರಿಂದ ಆರಂಭವಾದ ತರಗತಿ ಬಹಿಷ್ಕಾರ ಮುಂದುವರಿದಿದ್ದು, ರಾಜ್ಯಾದ್ಯಂತ 14,500 ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ತಡವಾಗಿ ಆರಂಭಗೊಂಡ ಪದವಿ ತರಗತಿಗಳ ಪಠ್ಯಗಳನ್ನು ನಿಗದಿತ ಮಟ್ಟದಲ್ಲಿ ಪೂರ್ಣಗೊಳಿಸಲಾಗದೆ ಕಾಯಂ ಉಪನ್ಯಾಸಕರು ಪರದಾಡುತ್ತಿದ್ದಾರೆ. ನಾನಾ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳೂ ಅತಿಥಿ ಉಪನ್ಯಾಸಕರ ಸಮಸ್ಯೆ ಇತ್ಯರ್ಥಗೊಳಿಸುವಂತೆ ಸರಕಾರಕ್ಕೆ ಮೂಲಕ ಒತ್ತಾಯಿಸುತ್ತಿದ್ದಾರೆ. ಅ.11ರಿಂದ ಆರಂಭಗೊಂಡ ಪದವಿ ತರಗತಿಗಳು ಇಲಾಖೆಯ ಮಾರ್ಗಸೂಚಿ ಪ್ರಕಾರ 2022ರ ಫೆ.11ಕ್ಕೆ ಅಂತ್ಯಗೊಳ್ಳಬೇಕು. ಹೀಗಾಗಿ ರಾಜ್ಯಾದ್ಯಂತ ಖಾಲಿ ಉಳಿದಿದ್ದ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಸರಕಾರ ಅಕ್ಟೋಬರ್‌ ಅಂತ್ಯದಲ್ಲಿ ನೇಮಕ ಪ್ರಕ್ರಿಯೆ ನಡೆಸಿತ್ತು. ಡಿ.10ರವರೆಗೆ ಕೆಲವೇ ಕೆಲವು ಪಾಠಗಳನ್ನಷ್ಟೇ ಬೋಧನೆ ಮಾಡಿರುವ ಅತಿಥಿ ಉಪನ್ಯಾಸಕರು ಬಳಿಕ ಪ್ರತಿಭಟನೆಗೆ ಇಳಿದಿದ್ದಾರೆ. ಫೆಬ್ರವರಿ ಮೊದಲ ವಾರದಿಂದ ಆರಂಭಗೊಳ್ಳಲಿರುವ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವುದು ಹೇಗೆನ್ನುವ ಪ್ರಶ್ನೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಪರ್ಯಾಯವಿಲ್ಲ ಬೆಂಗಳೂರಿನ ಆರ್‌ಸಿ ಕಾಲೇಜಿನಲ್ಲಿ 90ಕ್ಕೂ ಹೆಚ್ಚು ಉಪನ್ಯಾಸಕರ ಪೈಕಿ 77 ಮಂದಿ ಅತಿಥಿ ಉಪನ್ಯಾಸಕರಿದ್ದಾರೆ. ಕನಕಪುರ ಪ್ರಥಮ ದರ್ಜೆ ಕಾಲೇಜಿನಲ್ಲಿ 34 ಉಪನ್ಯಾಸಕರ ಪೈಕಿ 28 ಮಂದಿ ಅತಿಥಿ ಉಪನ್ಯಾಸಕರಿದ್ದು, ಬಹುತೇಕ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರೇ ಹೆಚ್ಚಿದ್ದಾರೆ. ಹೀಗಾಗಿ ಕೆಲವು ವಿಭಾಗಗಳಿಗೆ ಬೋಧನೆಯೇ ಇಲ್ಲದಂತಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮೊದಲ ವರ್ಷದ ಎನ್‌ಇಪಿ(ನೂತನ ಶಿಕ್ಷಣ ನೀತಿ)ಗೆ ದೊಡ್ಡ ಹೊಡೆತ ಬೀಳಲಿದೆ. ಉಳಿದ ಸೆಮಿಸ್ಟರ್‌ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಡಕಾಗಲಿದೆ. ಕೆಲವೆಡೆ ಪಾಳಿ ಪದ್ಧತಿಯಲ್ಲಿ ತರಗತಿಗಳನ್ನು ನಡೆಸುತ್ತಿದ್ದರೂ, 30ಕ್ಕೂ ಹೆಚ್ಚು ವಿಭಾಗಗಳಿರುವ ಕಾಲೇಜುಗಳಲ್ಲಿ ನಿತ್ಯ ರಜೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದಿನಿಂದ ಪಾದಯಾತ್ರೆ ಆರ್ಥಿಕ ಕಾರಣಗಳಿಗೆ ಮನನೊಂದು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಶ್ರೀಹರ್ಷ ಶಾನೊಭೋಗ್‌ರ ಸ್ಮರಣೆಯ ಹಿನ್ನೆಲೆಯಲ್ಲಿ ಡಿ.29ರಂದು ತೀರ್ಥಹಳ್ಳಿಯಿಂದ ರಾಜ್ಯ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘಗಳ ಒಕ್ಕೂಟದಿಂದ ಪಾದಯಾತ್ರೆ ಆರಂಭಗೊಳ್ಳಲಿದೆ. ವಿಧಾನಸೌಧದವರೆಗೆ ನಡೆಯಲಿರುವ ಪಾದಯಾತ್ರೆಯಲ್ಲಿ ನಿತ್ಯ 2 ಜಿಲ್ಲೆಯ ಉಪನ್ಯಾಸಕರು ಭಾಗಿಯಾಗಲಿದ್ದಾರೆ. ಜ.14ರಂದು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ಆಯೋಜಿಸಲಾಗಿದೆ. 10 ಸಾವಿರ ಅತಿಥಿ ಉಪನ್ಯಾಸಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಸಂಘದ ಮುಖಂಡ ರುದ್ರಪ್ಪ ಛಲವಾದಿ ತಿಳಿಸಿದ್ದಾರೆ. ತಿಂಗಳಿಗೆ 11 ಸಾವಿರ ರೂ. ಮಾತ್ರ ''ಯುಜಿಸಿ ನಿಯಮಾವಳಿ ಪ್ರಕಾರ ಅತಿಥಿ ಉಪನ್ಯಾಸಕರಿಗೆ ಮಾಸಿಕ 50 ಸಾವಿರ ರೂ. ವೇತನ ಅಥವಾ ಒಂದು ತಾಸಿಗೆ ಕನಿಷ್ಠ 1 ಸಾವಿರ ರೂ. ನೀಡಬೇಕು. ಆದರೆ ಸರಕಾರ ಇದನ್ನು ಒಪ್ಪುತ್ತಿಲ್ಲ. ಅತಿಥಿ ಉಪನ್ಯಾಸಕರಿಗೆ ಕೇವಲ 11ರಿಂದ 13 ಸಾವಿರ ರೂ. ವೇತನ ಮಾತ್ರ ನೀಡುತ್ತಿದೆ,'' ಎನ್ನುವುದು ಅತಿಥಿ ಉಪನ್ಯಾಸಕರ ಅಳಲು. ಅತಿಥಿ ಉಪನ್ಯಾಸಕರ ಬೇಡಿಕೆಗಳೇನು?
  • ಪಶ್ಚಿಮ ಬಂಗಾಳ, ದಿಲಿ, ಪಂಜಾಬ್‌ ಮಾದರಿಯ ಸೇವಾಭದ್ರತೆ ಒದಗಿಸಬೇಕು.
  • 48 ಸಾವಿರ ರೂ. ವೇತನ ನಿಗದಿಗೊಳಿಸಬೇಕು.
  • ಅತಿಥಿ ಎನ್ನುವ ಪದ ತೆರವುಗೊಳಿಸಬೇಕು.
  • 1982, 1992, 1996, 2003ರಲ್ಲಿಮಾನವೀಯತೆ ಆಧಾರದಲ್ಲಿ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಿದಂತೆ ಪ್ರಸಕ್ತ ಸಾಲಿನಲ್ಲೂ ಸರಕಾರ ಕ್ರಮ ಕೈಗೊಳ್ಳಬೇಕು.
ಪದವಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಬೇಸರವಿದೆ. ಆದರೆ ಜೀವನ ನಡೆಸಲು ಸಾಧ್ಯವಾಗದೆ ಸಾವಿನ ಹಾದಿ ಹಿಡಿಯುತ್ತಿರುವ ಯುವ ಅತಿಥಿ ಉಪನ್ಯಾಸಕರ ಜೀವನಮಟ್ಟಕ್ಕಾಗಿ ಪ್ರತಿಭಟನೆ ಅನಿವಾರ್ಯವಾಗಿದೆ. ಸರಕಾರ ಇನ್ನಾದರೂ ಸ್ಪಂದಿಸಿ ಸೇವಾ ಭದ್ರತೆ ಒದಗಿಸಬೇಕಿದೆ. ಹನುಮಂತೇಗೌಡ ಕಲ್ಮನಿ ಅಧ್ಯಕ್ಷರು, ರಾಜ್ಯ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘಗಳ ಒಕ್ಕೂಟ ಅತಿಥಿ ಉಪನ್ಯಾಸಕರ ಸಮಸ್ಯೆಯ ಇತ್ಯರ್ಥಕ್ಕೆಂದು ಕುಮಾರ ನಾಯಕ್‌ ಸಮಿತಿ ರಚಿಸಲಾಗಿದೆ. ಶೀಘ್ರದಲ್ಲೇ ಸರಕಾರ ಬೇಡಿಕೆಗಳನ್ನು ಪರಿಶೀಲಿಸಲಿದೆ. ಅತಿಥಿ ಉಪನ್ಯಾಸಕರು ತರಗತಿಗಳಿಗೆ ಹಿಂತಿರುಗಬೇಕು. ಡಾ. ಸಿ. ಎನ್‌. ಅಶ್ವತ್ಥ್ನಾರಾಯಣ್‌ ಉನ್ನತ ಶಿಕ್ಷಣ ಸಚಿವ


from India & World News in Kannada | VK Polls https://ift.tt/3FRSpwp

ಎಂಎಸ್‌ ಧೋನಿಯ ದೊಡ್ಡ ದಾಖಲೆ ಪುಡಿ-ಪುಡಿ ಮಾಡಿದ ಪಂತ್‌!

ಸೆಂಚೂರಿಯನ್: ವಿರುದ್ದ ಪ್ರಸ್ತುತ ನಡೆಯುತ್ತಿರುವ ಮೊದಲನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಮ್‌ ಇಂಡಿಯಾ ವಿಕೆಟ್‌ ಕೀಪರ್‌ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಸ್ಟಂಪ್‌ಗಳ ಹಿಂದೆ ಬಹುಬೇಗ 100 ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡಿದ ಮೊದಲ ವಿಕೆಟ್‌ ಕೀಪರ್‌ ಎಂಬ ನೂತನ ಸಾಧನೆಗೆ ಪಂತ್‌ ಭಾಜನರಾಗಿದ್ದಾರೆ. ಸೆಂಚೂರಿಯನ್ ಟೆಸ್ಟ್‌ಗೂ ಬರುವ ಮುನ್ನ 97 ವಿಕೆಟ್‌ಗಳನ್ನು ಪಡೆದಿದ್ದ ರಿಷಣ್‌ ಪಂತ್‌, 100ರ ಸಾಧನೆಗೆ ಕೇವಲ 3 ವಿಕೆಟ್‌ ಮಾತ್ರ ಬಾಕಿ ಇತ್ತು. ಅಂದಹಾಗೆ ದಕ್ಷಿಣ ಆಫ್ರಿಕಾ ತಂಡದ ಪ್ರಥಮ ಇನಿಂಗ್ಸ್‌ನಲ್ಲಿ ತೆಂಬಾ ಬವೂಮ ಅವರ ಕ್ಯಾಚ್‌ ಪಡೆಯುತ್ತಿದ್ದಂತೆ ರಿಷಭ್‌ ಈ ಮೈಲುಗಲ್ಲು ಸ್ಥಾಪಿಸಿದರು ಹಾಗೂ ಮಾಜಿ ನಾಯಕ ದಾಖಲೆಯನ್ನು ಹಿಂದಿಕ್ಕಿದರು. ವಿಕೆಟ್‌ ಕೀಪರ್‌ ಆಗಿ 100 ಬಲಿ ಪಡೆಯಲು ರಿಷಭ್‌ ಪಂತ್‌ ಕೇವಲ 26 ಪಂದ್ಯಗಳನ್ನು ಮಾತ್ರ ತೆಗೆದುಕೊಂಡಿದ್ದಾರೆ. ಆದರೆ, ಮಾಜಿ ನಾಯಕ ಎಂಎಸ್‌ ಧೋನಿ ಈ ಮೈಲುಗಲ್ಲು ಸ್ಥಾಪಿಸಲು ಒಟ್ಟು 36 ಟೆಸ್ಟ್‌ ಪಂದ್ಯಗಳನ್ನು ತೆಗೆದುಕೊಂಡಿದ್ದರು. ಇದೀಗ ಪಂತ್ ತನ್ನ ಗುರು ಧೋನಿಗಿಂತ 10 ಪಂದ್ಯಗಳನ್ನು ಕಡಿಮೆ ತೆಗೆದುಕೊಂಡಿದ್ದಾರೆ. ತೆಂಬಾ ಬವೂಮ ಅವರ ಕ್ಯಾಚ್‌ ಪಡೆಯುವುದಕ್ಕೂ ಮುನ್ನ ರಿಷಭ್‌ ಪಂತ್‌ ದಕ್ಷಿಣ ಆಫ್ರಿಕಾ ನಾಯಕ ಡೀನ್‌ ಎಲ್ಗರ್‌ ಅವರನ್ನು ಸ್ಟಂಪ್‌ಗಳ ಹಿಂದೆ ಬಲಿ ಪಡೆದಿದ್ದರು. ನಂತರ ಮೊಹಮ್ಮದ್‌ ಶಮಿ ಎಸೆತದಲ್ಲಿ ವಿಯಾನ್‌ ಮಲ್ಡರ್‌(12) ಅವರನ್ನು ಕೂಡ ಪಂತ್‌ ಕಾಟ್‌ ಬಿಹೈಂಡ್‌ ಮೂಲಕ ಪೆವಿಲಿಯನ್‌ಗೆ ಕಳುಹಿಸಿದ್ದರು. ಸಾಂಪ್ರದಾಯಿಕ ಸ್ವರೂಪದಲ್ಲಿ ಸ್ಟಂಪ್‌ಗಳ ಹಿಂದೆ ವಿಕೆಟ್‌ ಕೀಪರ್‌ ಆಗಿ 100 ಬ್ಯಾಟ್ಸ್‌ಮನ್‌ಗಳನ್ನು ಬಲಿ ಪಡೆದ ಆರನೇ ವಿಕೆಟ್‌ ಕೀಪರ್‌ ಎಂಬ ಕೀರ್ತಿಗೆ ಪಂತ್‌ ಪಾತ್ರರಾಗಿದ್ದಾರೆ. ಎಂಎಸ್‌ ಧೋನಿ, ಸೈಯದ್‌ ಕಿರ್ಮಾನಿ, ಕಿರಣ್‌ ಮೋರೆ, ನಯಾನ್ ಮೋಂಗ್ಯ ಹಾಗೂ ವೃದ್ದಿಮಾನ್‌ ಸಹಾ ಅವರ ಸಾಲಿಗೆ ಇದೀಗ ಪಂತ್‌ ಸೇರ್ಪಡೆಯಾಗಿದ್ದಾರೆ. 294 ವಿಕೆಟ್‌ಗಳನ್ನು ಕಬಳಿಸಿರುವ ಧೋನಿ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಮಂಗಳವಾರ ಬೆಳಗ್ಗೆ 3 ವಿಕೆಟ್‌ ನಷ್ಟಕ್ಕೆ 272 ರನ್‌ಗಳಿಗೆ ಮೂರನೇ ದಿನದಾಟ ಶುರು ಮಾಡಿದ್ದ ತಂಡ ಕೇವಲ 49 ರನ್‌ಗಳ ಅಂತರದಲ್ಲಿ 327 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬಳಿಕ ಪ್ರಥಮ ಇನಿಂಗ್ಸ್‌ ಶುರು ಮಾಡಿದ ದಕ್ಷಿಣ ಆಫ್ರಿಕಾ ತಂಡ 62.3 ಓವರ್‌ಗಳಿಗೆ 197 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ ಪರ ಅತ್ಯುತ್ತಮ ಬೌಲ್‌ ಮಾಡಿದ ಮೊಹಮ್ಮದ್‌ ಶಮಿ 5 ವಿಕೆಟ್‌ ಸಾಧನೆ ಮಾಡಿದರೆ, ಜಸ್‌ಪ್ರಿತ್‌ ಬುಮ್ರಾ ಹಾಗೂ ಶಾರ್ದುಲ್‌ ಠಾಕೂರ್‌ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು. ಒಟ್ಟಾರೆ ಮೂರನೇ ದಿನದಾಟದ ಅಂತ್ಯಕ್ಕೆ ಟೀಮ್‌ ಇಂಡಿಯಾ ದ್ವಿತೀಯ ಇನಿಂಗ್ಸ್‌ನಲ್ಲಿ 6 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ 16 ರನ್‌ ಗಳಿಸಿದ್ದು, 146 ರನ್‌ ಮುನ್ನಡೆ ಸಾಧಿಸಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3mBWQ6U

ಚಾಮರಾಜನಗರ ರೈತರಿಂದ ಅತಿ ದೊಡ್ಡ ಏತ ನೀರಾವರಿ ಯೋಜನೆ ವೀಕ್ಷಣೆ; ಕಾಳೇಶ್ವರಂ ಕಂಡು ಅಚ್ಚರಿಗೊಂಡ ನೇಗಿಲಯೋಗಿ!

ಚಾಮರಾಜನಗರ: ನೆರೆಯ ರಾಜ್ಯವು ಅನುಷ್ಠಾನಗೊಳಿಸಿರುವ ವಿಶ್ವದ ಅತಿ ದೊಡ್ಡ ಏತ ನೀರಾವರಿ ಯೋಜನೆ ಕಾಳೇಶ್ವರಂ ಯೋಜನೆಯನ್ನು ರಾಜ್ಯದ ಚಾಮರಾಜನಗರ ರು ಕಂಡು ಹರ್ಷ ವ್ಯಕ್ತಪಡಿಸಿದ್ದು, ಯೋಜನೆಯ ಜಾರಿಯಿಂದ ರೈತರಿಗೆ ಆಗಿರುವ ಅನುಕೂಲಗಳನ್ನು ಪರಾಮರ್ಶಿಸಿದರು. ಕಳೆದ ಮೂರು ದಿನಗಳಿಂದ ಕಾಳೇಶ್ವರಂ ಯೋಜನಾ ಪ್ರದೇಶದ ಪ್ರವಾಸದಲ್ಲಿರುವ ಅವರು 2014ರಲ್ಲಿ ಚಾಮರಾಜನಗರದಲ್ಲಿ ಮೆಘಾ ಇಂಜಿನಿಯರಿಂಗ್ ಅಂಡ್ ಇನ್ಪಾಸ್ಟ್ರಕ್ಚರ್ ಸಂಸ್ಥೆಯು ಯಶಸ್ವಿಯಾಗಿ ಜಾರಿ ಮಾಡಿರುವ ಆಲಂಬೂರ್ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆ ನೀರು ಅಭಿವೃದ್ಧಿ ಸಂರಕ್ಷಣಾ ಸಮಿತಿ ಸದಸ್ಯರುಗಳಾಗಿದ್ದು, ತೆಲಂಗಾಣದ ಕಾಳೇಶ್ವರಂ ಯೋಜನಾ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿದರು. ಚಾಮರಾಜನಗರದ ಆಲಂಬೂರ್ ಸಮೀಪ ಅನುಷ್ಠಾನಗೊಂಡಿರುವ ಕೆರೆ ತುಂಬಿಸುವ ಯೋಜನೆ ಯಶಸ್ವಿನಿಂದ ಲಾಭಪಡೆದುಕೊಂಡಿರುವ ಇಲ್ಲಿನ ರೈತರ ತಂಡವು ಕಾಳೇಶ್ವರಂ ಯೋಜನೆಯ ಮೇಡಿಗಡ್ಡ ಮತ್ತು ಭೂತಲದಲ್ಲಿ ನಿರ್ಮಾಣಗೊಂಡಿರುವ ಗಾಯಿತ್ರಿ ಪಂಪ್‌ಹೌಸ್ ಸೇರಿದಂತೆ ಯೋಜನೆಯ ಅಳತೆ- ಆಕಾರ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಏನಿದು ಕಾಳೇಶ್ವರಂ ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಏತ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾಳೇಶ್ವರಂ ಏತ ನೀರಾವತಿ ಯೋಜನೆ ಜಾರಿಯಲ್ಲಿ ದೇಶಿಯ ನಿರ್ಮಿತ ಬೃಹತ್ ಮೋಟಾರ್‌ಗಳು, ಭೂತಳದಲ್ಲಿ ಪಂಪ್‌ಹೌಸ್‌ಗಳ ನಿರ್ಮಾಣ, ಅತಿ ಹೆಚ್ಚು ಪ್ರದೇಶದಲ್ಲಿ ಕೃಷಿಗೆ ಅವಕಾಶ, ಕುಡಿಯುವ ನೀರು, ಮೀನುಗಾರಿಕೆ, ಕೈಗಾರಿಕೆಗೆ ನೀರು, ಪ್ರವಾಸೋದ್ಯಮಕ್ಕೆ ಅವಕಾಶ ಹೀಗೆ ಹತ್ತು ಹಲವು ಕ್ಷೇತ್ರಗಳಿಗೆ ಅನುಕೂಲವಾಗಿರುವುದೇ ಅಲ್ಲದೆ, ಹಲವು ಜಾಗತಿಕ ದಾಖಲೆಗಳಿಗೆ ಸಾಕ್ಷಿಯಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಯಿಂದ ಗುರುತ್ವಾಕರ್ಷಣ ದಿಕ್ಕಿಗೆ ಹರಿಯುತ್ತಿದ್ದ ಗೋಧಾವರಿ ನದಿ ನೀರನ್ನು ತಂತ್ರಜ್ಞಾನದ ಸಮರ್ಥ ಅಳವಡಿಕೆ ಮೂಲಕ ಭೂತಲದ ಪಂಪ್‌ಹೌಸ್‌ಗಳಿಗೆ ಹರಿಸಿ 600 ಅಡಿಗಳಷ್ಟು ಎತ್ತರಕ್ಕೆ ಪಂಪ್ ಮಾಡುವ ಮೂಲಕ ವ್ಯರ್ಥವಾಗುತ್ತಿದ್ದ ನೀರಿನ ಸದ್ಬಳಕೆಯನ್ನು ಸಾಧ್ಯವಾಗಿಸಲಾಗಿದೆ. ಭೂತಲದಲ್ಲಿ ಬಹುಮಹಡಿ ಕಟ್ಟಡವನ್ನು ನಾಚಿಸುವಂತೆ ನಿರ್ಮಿಸಿರುವ ಬೃಹತ್ತಾದ ಪಂಪ್‌ಹೌಸ್ ಮೂಲಕ ಎತ್ತುವಳಿ ಮಾಡಲಾಗುವ ನೀರನ್ನು ಅಣೆಕಟ್ಟೆಗಳಲ್ಲಿ ಸಂಗ್ರಹಿಸಿ, ಕಾಲುವೆ ಮತ್ತು ಪೈಪ್‌ಗಳ ಮೂಲಕ ಕೆರೆಗಳಿಗೆ ಹರಿಸಿ ಅಲ್ಲಿಂದ ವಿವಿಧ ಕಾರಣಗಳಿಗೆ ನೀರನ್ನು ಉಪಯೋಗಿಸಲಾಗುತ್ತಿದೆ. ಯಶಸ್ವಿ ಜಾರಿಗೆ ಅನುವಾಗುವಂತೆ ಮೆಘಾ ಇಂಜಿನಿಯರಿಂಗ್ ಅಂಡ್ ಇನ್ಪಾಸ್ಟ್ರಕ್ಚರ್ ಸಂಸ್ಥೆಯು (ಎಂ.ಇ.ಐ.ಎಲ್) 15 ಬೃಹದಾಕಾರದ ಪಂಪಿಂಗ್ ಕೇಂದ್ರಗಳನ್ನು ನಿರ್ಮಿಸಿದ್ದು, 5,159 ಮೆಘಾ ವಾಟ್ ಪಂಪಿಂಗ್ ಸಾಮರ್ಥ್ಯದ 104 ಪಂಪ್‌ಗಳನ್ನು ಅಳವಡಿಸಿದೆ. ಈ ಪ್ರಮಾಣದ ನೀರು ಎತ್ತುವಳಿ ಸಾಧನಗಳ ಅಳವಡಿಕೆ ವಿಶ್ವದಲ್ಲೇ ಇದು ಪ್ರಪ್ರಥಮ ಎನ್ನಲಾಗಿದೆ. ಪ್ರತಿ ನಿತ್ಯ 2 ಟಿಎಂಸಿ ನದಿ ನೀರನ್ನು ಎತ್ತುವಳಿ ಮಾಡುವ ಸಲುವಾಗಿ ಯೋಜನೆಯ ಪ್ಯಾಕೇಜ್-8ರಡಿಯಲ್ಲಿ ಗಾಯಿತ್ರಿ ಭೂತಳ ಪಂಪ್‌ಹೌಸ್ ನಿರ್ಮಿಸಿದೆ. ಇದೇ ರೀತಿ ಮೇಡಿಘಡ್ಡ ಲಕ್ಷ್ಮಿ ಪಂಪ್ ಹೌಸ್ (17 ಮೋಟಾರ್), ಅನ್ನಾರಾಂ ಸರಸ್ವತಿ (12 ಮೋಟಾರ್), ಸುಂಡಿಲ ಪಾರ್ವತಿ (14), ಅನ್ನಪೂರ್ಣ (4), ರಂಗನಾಯಕ ಸಾಗರ (4), 52 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಕೊಂಡಪೋಚಮ್ಮ ಪ್ಯಾಕೇಜ್‌ನಡಿ ಅಕ್ಕರಾಮ್ ಮತ್ತು ಮರುಕೋಕ್ಲು ಎಂಬಲ್ಲಿ ತಲಾ ಎರಡು ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಹೀಗೆ ಆಧುನಿಕ ತಂತ್ರಜ್ಞಾನದ ಬಳಕೆ ಮೂಲಕ ಯಶಸ್ವಿಯಾಗಿ ಜಾರಿ ಆಗಿರುವ ಕಾಳೇಶ್ವರಂ ಯೋಜನೆ ಮುಂದಿನ 10 ವರ್ಷಗಳಲ್ಲಿ ತೆಲಂಗಾಣ ರಾಜ್ಯದ ಚಿತ್ರಣವನ್ನೇ ಬದಲಿಸಲಿದೆ ಎಂದು ಹೇಳಲಾಗುತ್ತಿದೆ. ಈ ಯೋಜನೆಯನ್ನು ಖುದ್ದು ಕಂಡ ರಾಜ್ಯದ ರೈತರು ಕರ್ನಾಟಕವೂ ಸೇರಿದಂತೆ ದೇಶದ ಇತರೆಡೆಗಳನ್ನೂ ಇಂತಹ ಯೋಜನೆ ಮೂಲಕ ಕೃಷಿಗೆ ಒತ್ತು ನೀಡಬೇಕೆಂದು ಆಗ್ರಹಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಹೆಮ್ಮೆಯ ಪ್ರತೀಕವಾಗಿದ್ದ ಈ ಬೃಹತ್ ಏತ ನೀರಾವರಿ ಯೋಜನೆ ಬಗ್ಗೆ ಜಾಗತಿಕ ಚಾನೆಲ್ ಡಿಸ್ಕವರಿ ಸಹ ವಿಶೇಷ ಕಾರ್ಯಕ್ರಮ ರೂಪಿಸಿ ಪ್ರಸಾರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಕಾಳೇಶ್ವರಂ ಮಾದರಿ ಚಾಮರಾಜನಗರದಲ್ಲೂ 2014ರಿಂದ ಆಲಂಬೂರು ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಿ ನಡೆದಿದೆ. ನಮಗೆ ಅನುಕೂಲವೂ ಆಗಿದೆ. ಆದರೆ ಇಲ್ಲಿ ಪ್ರತಿ ನಿತ್ಯ 2 ಟಿಎಂಸಿ ನೀರನ್ನು ನದಿಯಿಂದ ಎತ್ತುವುದು ಸಾಮಾನ್ಯವಾದ ಕೆಲಸವಲ್ಲ, ಇಂತಹ ಬೃಹತ್ ಕೆಲಸ ಇಲ್ಲಿ ಆಗಿದೆ. ಕರ್ನಾಟಕವೂ ಸೇರಿದಂತೆ ಇತರೆ ರಾಜ್ಯಗಳಲ್ಲೂ ಕಾಳೇಶ್ವರಂನಂತಹ ಯೋಜನೆಗಳನ್ನು ರೂಪಿಸುವ ಮೂಲಕ ಕೃಷಿಗೆ ಆದ್ಯತೆ ನೀಡಬೇಕು. ಗುರುಮೂರ್ತಿ, ರೈತ ಇಲ್ಲಿ ಕಾಳೇಶ್ವರಂ ನೋಡಿ ಇದು ಎಷ್ಟು ಬೃಹತ್ತಾದ ಯೋಜನೆ ಎಂದು ಎನಿಸಿದೆ. ಇದರಿಂದ ರೈತರಿಗೆ ಒಳಿತಾಗಿದೆ. ನಮ್ಮ ರಾಜ್ಯದ ಸಚಿವರೂ ಇದನ್ನು ಬಂದು ನೋಡಿ, ನಮ್ಮ ರಾಜ್ಯದಲ್ಲೂ ಒಂತಹ ಯೋಜನೆಗಳನ್ನು ಜಾರಿ ಮಾಡಿದರೆ ರೈತ ಸಮುದಾಯಕ್ಕೆ ಒಳಿತಾಗಲಿದೆ. ದೇಶದ ಆಹಾರ ಸಮಸ್ಯೆಯೂ ನೀಗಲಿದೆ. ಎಂ. ಗುರುಸ್ವಾಮಿ ನಾವು ಭಾಗದಿಂದ ಇಲ್ಲಿಗೆ ಬಂದಿದ್ದೇವೆ. ನಮ್ಮಲ್ಲಿ 21 ಕೆರೆಗಳನ್ನು ತುಂಬುವ ಯೋಜನೆ ಉತ್ತಮವಾಗಿ ಜಾರಿ ಆಗಿತ್ತು. ಅದರಿಂದ ಇಲ್ಲಿಗೆ ಕಾಳೇಶ್ವರಂ ಯೋಜನೆ ನೋಡಲು ಬಂದೆವು, ಈ ಯೋಜನೆಯಿಂದ ಲಕ್ಷ ಕೋಟಿ ಎಕರೆಗೆ ನೀರಾವರಿ ಸಾಧ್ಯವಾಗಿದೆ. ದೇಶದ ಎಲ್ಲೆಡೆ ಇಂತಹ ಯೋಜನೆಗಳು ಜಾರಿ ಆಗಬೇಕು. - ಹೆಚ್.ಕೆ. ನಾಗರಾಜ್ ವಿಶ್ವದಲ್ಲೇ ಅದ್ಭುತವಾದ ಯೋಜನೆ ಕಾಳೇಶ್ವರಂ, ಕುಡಿಯುವ ನೀರು ಮತ್ತು ರೈತರಿಗೆ ನೀರನ್ನು ಒದಗಿಸಲಾಗುತ್ತಿದೆ. ಪ್ರಧಾನಿ ಎಲ್ಲ ರಾಜ್ಯಗಳಲ್ಲೂ ಇಂತಹ ಯೋಜನೆಗಳನ್ನು ಜಾರಿ ಮಾಡಿ ವ್ಯರ್ಥವಾಗುವ ನೀರಿನ ಸದ್ಬಳಕೆಗೆ ಅವಕಾಶ ಮಾಡಿಕೊಡಬೇಕು. -ರಾಜೇಶ್


from India & World News in Kannada | VK Polls https://ift.tt/3eDsa0l

ಸರ್ಕಾರಕ್ಕೆ ಮುಳುವಾದ ನೈಟ್‌ಕರ್ಫ್ಯೂ! ನ್ಯೂಇಯರ್‌ ಪಾರ್ಟಿಗೆ ಪಕ್ಕದ ರಾಜ್ಯಕ್ಕೆ ವಲಸೆ; ಆದಾಯಕ್ಕೆ ಹೊಡೆತ

ಮಹಾಬಲೇಶ್ವರ ಕಲ್ಕಣಿ ಬೆಂಗಳೂರು: ರಾಜ್ಯದಲ್ಲಿ ನೈಟ್‌ ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಹೊಸ ವರ್ಷದ ಪಾರ್ಟಿಗಾಗಿ ರಾಜ್ಯದ ಜನರು ನೆರೆಯ ರಾಜ್ಯಗಳಿಗೆ ವಲಸೆ ಹೋಗಲು ಸಜ್ಜಾಗಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಗಲಿದೆ. ಮಂಗಳವಾರ ರಾತ್ರಿಯಿಂದಲೇ 10 ದಿನಗಳ ಕಾಲ ರಾಜ್ಯದಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆವರೆಗೆ ನೈಟ್‌ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಹೊಸ ವರ್ಷಕ್ಕೆ ಹೋಟೆಲ್‌, ರೆಸಾರ್ಟ್‌, ರೆಸ್ಟೋರೆಂಟ್‌, ಬಾರ್‌, ಪಬ್‌ನಲ್ಲಿ ಪಾರ್ಟಿ ಮಾಡುವವರು ನೆರೆಯ ಗೋವಾ, ತಮಿಳುನಾಡಿಗೆ ವಲಸೆ ಹೋಗುತ್ತಿದ್ದಾರೆ. ಈಗಾಗಲೇ ಪಾರ್ಟಿಗಾಗಿ ನಗರ ಹಾಗೂ ಆಸುಪಾಸಿನ ಪ್ರದೇಶದ ರೆಸಾರ್ಟ್‌, ಹೋಟೆಲ್‌ ಬುಕ್‌ ಮಾಡಿದ ಗ್ರಾಹಕರು ಆರ್ಡರ್‌ ಕ್ಯಾನ್ಸಲ್‌ ಮಾಡುತ್ತಿದ್ದಾರೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎನ್ನುತ್ತಾರೆ ಮಾಲೀಕರು. ಕೋವಿಡ್‌ ಪೂರ್ವದಲ್ಲಿ ಹೊಸ ವರ್ಷದ ಮುನ್ನಾದಿನ ಎಂಜಿ ರೋಡ್‌, ಬ್ರಿಗೇಡ್‌ ರೋಡ್‌ನಲ್ಲಿ ಜನ ಜಾತ್ರೆಯೇ ಸೇರುತ್ತಿತ್ತು. ಪಬ್‌, ಬಾರ್‌, ಹೋಟೆಲ್‌ಗಳು ಕಿಕ್ಕಿರಿದು ತುಂಬಿರುತ್ತಿದ್ದವು. ಡಿಜೆ ಸೌಂಡ್‌ನಲ್ಲಿ ಜನ ಕುಣಿದು ಕುಪ್ಪಳಿಸಿ ಹೊಸ ಲೋಕವನ್ನು ಧರೆಗಿಳಿಸುತ್ತಿದ್ದರು. ಬೆಳಗಾಗುವುದರೊಳಗೆ ನೂರಾರು ಕೋಟಿ ರೂ. ವಹಿವಾಟು ನಡೆಯುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್‌ ಬಿಗಿ ನಿಯಮದ ಹಿನ್ನೆಲೆಯಲ್ಲಿ ಜನರೇ ಬರುತ್ತಿಲ್ಲ. ಮೋಜು ಮಸ್ತಿಗೆ ಬ್ರೇಕ್‌ ಬಿದ್ದಿದ್ದು, ವ್ಯಾಪಾರ ವಹಿವಾಟು ಪಾತಾಳಕ್ಕೆ ಕುಸಿದಿದೆ. ಹೋಟೆಲ್‌ಗಳಿಗೆ ನಷ್ಟ ಈ ವರ್ಷ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ರೆಸಾರ್ಟ್‌ ಮಾಲೀಕರಿಗೆ ಮತ್ತೆ ನಿರಾಸೆಯಾಗಿದೆ. ರಾಜ್ಯದಲ್ಲಿ ಪ್ರತಿ ವರ್ಷ ಡಿಸೆಂಬರ್‌ ಕೊನೆಯ ವಾರದಲ್ಲಿ ಮದ್ಯ ಮಾರಾಟ ಶೇ. 15 ರಿಂದ 20 ರಷ್ಟು ಹೆಚ್ಚಾಗುತ್ತದೆ. 300 ರಿಂದ 350 ಕೋಟಿ ರೂ. ವಹಿವಾಟು ಕೇವಲ ಈ ಒಂದು ವಾರದಲ್ಲಿ ನಡೆಯುತ್ತದೆ. 2018ರ ಕೊನೆಯ ದಿನ 82.02 ಕೋಟಿ ರೂ., 2019ರಲ್ಲಿ119 ಕೋಟಿ ರೂ. ಹಾಗೂ 2020ರಲ್ಲಿ 140 ಕೋಟಿ ರೂ. ವಹಿವಾಟು ನಡೆದಿದೆ. ಆದರೆ, ಈ ವರ್ಷ ಕೂಡ ಮದ್ಯ ಮಾರಾಟ ಜಾಸ್ತಿಯಾಗಹುದು. ಆದರೆ, ರೆಸ್ಟೋರೆಂಟ್‌, ಹೋಟೆಲ್‌ನಲ್ಲಿ ಆಹಾರ ಮಾರಾಟ ಜಾಸ್ತಿಯಾಗುವ ನಿರೀಕ್ಷೆ ಇಲ್ಲ. ಕಳೆದ ವರ್ಷ ಕೂಡ ಫುಡ್‌ ಆರ್ಡರ್‌ ನಿರೀಕ್ಷೆಯಷ್ಟು ಗುರಿ ತಲುಪಿಲ್ಲ ಎನ್ನುತ್ತಾರೆ ರೆಸ್ಟೋರೆಂಟ್‌ ಮಾಲೀಕರು. ‘ ಸುತ್ತಮುತ್ತಲಿನ ರೆಸಾರ್ಟ್‌ ಹಾಗೂ ರಾಜ್ಯದ ಬೇರೆಬೇರೆ ರೆಸಾರ್ಟ್‌ಗಳಿಗೆ ಕೋವಿಡ್‌ ನೈಟ್‌ ಕರ್ಫ್ಯೂ ಸಾಕಷ್ಟು ಹೊಡೆತ ನೀಡುತ್ತಿದೆ. ಹೊಸ ವರ್ಷದ ಆಚರಣೆಯ ವಹಿವಾಟು ಕಳೆದ ಎರಡು ವರ್ಷದಿಂದ ಕುಂಠಿತವಾಗಿದೆ. ಜನರು ಬೇರೆ ಬೇರೆ ರಾಜ್ಯಗಳಿಗೆ ಹೋಗಲು ಬಯಸುತ್ತಿದ್ದಾರೆ’ ಎನ್ನುತ್ತಾರೆ ರೆಸಾರ್ಟ್‌ ಮಾಲೀಕರೊಬ್ಬರು. ‘ಕೋವಿಡ್‌ ನಷ್ಟಕ್ಕೆ ಸರಕಾರ ನಮಗೆ ಸ್ಪಂದಿಸಲಿಲ್ಲ. ಹೊಸ ವರ್ಷಕ್ಕೆ ಒಳ್ಳೆಯ ಬಿಸಿನೆಸ್‌ ಆಗುತ್ತೆ. ಸ್ವಲ್ಪವಾದರೂ ನಷ್ಟ ತುಂಬಿಕೊಳ್ಳಬಹುದು ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಏಕಾಏಕಿ ನೈಟ್‌ ಕರ್ಫ್ಯೂ ಹೇರುವ ಮೂಲಕ ನಿರೀಕ್ಷೆ ಹುಸಿಯಾಗಿದೆ. ನಮ್ಮ ತಯಾರಿ ಪೂರ್ಣ ವ್ಯರ್ಥವಾಗುತ್ತಿದೆ. ಕೋವಿಡ್‌ನ ಎಲ್ಲ ನಿಯಮಗಳನ್ನು ಪಾಲಿಸಿಯೇ ನಾವು ವ್ಯವಹಾರ ಮಾಡುತ್ತಿದ್ದೆವು. ಅದಕ್ಕೂ ಅನುಮತಿ ನೀಡಿಲ್ಲ. ಬಹಳಷ್ಟು ಜನರು ಗೋವಾ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಪಾರ್ಟಿ ಮಾಡಲು ಹೋಗುತ್ತಿದ್ದಾರೆ. ಆತಿಥ್ಯ ವಲಯದ ಮೇಲೆ ಸರಕಾರಕ್ಕೆ ಯಾಕೆ ಕೋಪ ಎನ್ನುವುದು ತಿಳಿಯದಾಗಿದೆ.’ -ಗೋವಿಂದರಾಜ್‌ ಹೆಗ್ಡೆ, ಪ್ರಧಾನ ಕಾರ್ಯದರ್ಶಿ, ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ‘ಹೊಸ ವರ್ಷದ ಆಚರಣೆಯನ್ನು ಬೆಂಗಳೂರಿನ ಸುತ್ತಮುತ್ತಲಿನ ಯಾವುದಾದರೊಂದು ರೆಸಾರ್ಟ್‌ನಲ್ಲಿ ಮಾಡುವ ಬಗ್ಗೆ ನಾವೆಲ್ಲಾ ಸ್ನೇಹಿತರು ಆಲೋಚನೆ ಮಾಡಿದ್ದೆವು. ಆದರೆ ಸರಕಾರ ನೈಟ್‌ ಕರ್ಫ್ಯೂ ಜಾರಿಗೊಳಿಸುವ ಹಿನ್ನೆಲೆಯಲ್ಲಿ ರೆಸಾರ್ಟ್‌ಗಳು ಕಠಿಣ ನಿಯಮ ಜಾರಿಗೊಳಿಸಿವೆ. ಎಲ್ಲೂ ಮುಂಗಡವಾಗಿ ಬುಕಿಂಗ್‌ ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ ಪಕ್ಕದ ತಮಿಳುನಾಡಿನ ರೆಸಾರ್ಟ್‌ ಬುಕ್‌ ಮಾಡಿದ್ದೇವೆ.’ - ಶ್ಯಾಮ್‌ ಸುಂದರನ್‌, ಐಟಿ ಉದ್ಯೋಗಿ


from India & World News in Kannada | VK Polls https://ift.tt/3Ho40nb

ಮಲೆನಾಡಲ್ಲಿ ಭೂ ವಿವಾದದ ಬಿಕ್ಕಟ್ಟು; ಅಧಿಸೂಚಿತ ಅರಣ್ಯದಲ್ಲಿ ಭೂ ಮಂಜೂರು, ಪತ್ತೆಗೆ ಮುಂದಾದ ಅರಣ್ಯ ಇಲಾಖೆ!

ರಾಘವೇಂದ್ರ ಮೇಗರವಳ್ಳಿ, ತೀರ್ಥಹಳ್ಳಿ ಶಿವಮೊಗ್ಗ: ಸುಪರ್ದಿಯಲ್ಲಿದ್ದ ಪ್ರದೇಶವನ್ನು ಕಂದಾಯ ಇಲಾಖೆಗೆ ವರ್ಗಾಹಿಸುವ ಕುರಿತು ರಾಜ್ಯ ಸರಕಾರ ಮಹತ್ವದ ನಿರ್ಧಾರ ಪ್ರಕಟಿಸುತ್ತಿದ್ದಂತೆ ಅಧಿಸೂಚಿತ ಅರಣ್ಯ ಪ್ರದೇಶದ ಮೇಲೆ ಬಿಗಿ ಹಿಡಿತ ಸಾಧಿಸುವ ಪ್ರಯತ್ನ ಅರಣ್ಯ ಇಲಾಖೆಯಲ್ಲಿ ಸದ್ದಿಲ್ಲದೆ ಆರಂಭವಾಗಿದೆ. 1978ರ ಪೂರ್ವ, ನಂತರದ ಭೂ ಮಂಜೂರಾತಿ ಪ್ರಕರಣಗಳ ಕುರಿತು ಇಲಾಖೆ ಪರಿಶೀಲನೆ ಆರಂಭಿಸಿದೆ. ಅರಣ್ಯ, ಕಂದಾಯ ಭೂ ಪ್ರದೇಶದ ಕುರಿತಾಗಿ ಜಂಟಿ ಸರ್ವೆ ವರದಿ ಅಂತಿಮ ಮುನ್ನವೇ ಅರಣ್ಯ ಇಲಾಖೆಯ ಈ ಕ್ರಮ ಮಲೆನಾಡ ಭಾಗದಲ್ಲಿ ಮತ್ತೊಂದು ಭುಗಿಲೇಳುವ ಸಾಧ್ಯತೆಗೆ ಕಾರಣವಾಗಿದೆ. ಪ್ರತಿ ಗ್ರಾಮದ ಸರ್ವೆ ನಂಬರ್‌ವಾರು ಅಧಿಸೂಚಿತ ಅರಣ್ಯ ಪ್ರದೇಶವಾಗಿ ಘೋಷಿತಗೊಂಡ ಜಮೀನಿನ ಮಾಹಿತಿಯನ್ನು ಇಲಾಖೆ ಸಂಗ್ರಹಿಸಿದೆ. ಅಧಿಸೂಚಿತ ಅರಣ್ಯ ಪ್ರದೇಶವನ್ನು ಇಲಾಖೆ ವಶದಲ್ಲಿರುವ, ಒತ್ತುವರಿ, ಮಂಜೂರು ಪ್ರದೇಶ ಎಂದು ಇಲಾಖೆ ವರ್ಗೀಕರಿಸಿದೆ. ಅಕ್ರಮ ಮಂಜೂರಾತಿ ಖಚಿತಪಡಿಸಿಕೊಂಡು ಪ್ರಕರಣ ದಾಖಲಿಸಲು ಇಲಾಖೆ ಮುಂದಾಗಿದೆ. ಏತ್ಮನಧ್ಯೆ, ಅಧಿಸೂಚಿತ ಅರಣ್ಯ ಪ್ರದೇಶದ ಇಂಡೀಕರಣಕ್ಕೆ ಇಲಾಖೆ ಮತ್ತೊಮ್ಮೆ ಸಜ್ಜಾಗಿದ್ದು ಕಂದಾಯ, ಅರಣ್ಯ ಇಲಾಖೆ ನಡುವೆ ಜಟಾಪಟಿಗೆ ಕಾರಣವಾಗುವ ಸಾಧ್ಯತೆ ಇದೆ. ಅನೇಕ ಗ್ರಾಮದಲ್ಲಿ ಡೀಮ್ಡ್ ಫಾರೆಸ್ಟ್‌ ಪ್ರದೇಶವು ಅಧಿಸೂಚಿತ ಅರಣ್ಯ ವ್ಯಾಪ್ತಿಗೆ ಸೇರಿಕೊಂಡಿದೆ ಎಂಬ ವಾದ ಇಲಾಖೆಗಳ ನಡುವೆ ಕಾನೂನಿನ ಕುಸ್ತಿಗೆ ಕಾರಣವಾದರೂ ಅಚ್ಚರಿ ಇಲ್ಲ. ಹೊಸ ತಕಾರರು ಏನು?ಬಗರ್‌ಹುಕುಂ ಸಾಗುವಳಿ, ವಸತಿ ಹಕ್ಕುಪತ್ರ, ಅಕ್ರಮ-ಸಕ್ರಮ ನಿವೇಶನ ಮಂಜೂರಾತಿ ನಿಯಮದಡಿ ಅರಣ್ಯಇಲಾಖೆ ಎನ್‌ಓಸಿ ಪಡೆಯದೆ ಅಧಿಸೂಚಿತ ಅರಣ್ಯಪ್ರದೇಶದಲ್ಲಿ ಭೂ ಮಂಜೂರಾತಿ ಮಾಡಲಾಗಿದೆ ಎಂಬ ಹೊಸ ತಕಾರರು ಈಗ ವೇಗ ಪಡೆದಿದೆ. 1933ರಿಂದ 2012ರವರೆಗೆ ಅಧಿಸೂಚಿತ ಅರಣ್ಯ ಪ್ರದೇಶ ಘೋಷಿತವಾಗಿದೆ. ಕಿರು ಅರಣ್ಯ, ಸ್ಟೇಟ್‌ ಫಾರೆಸ್ಟ್‌, ಜನ್ನಾಮಂಗಲಿ, ಮೀಸಲು ಅರಣ್ಯ, ಅಭಯಾರಣ್ಯ ಪ್ರದೇಶವು ಅಧಿಸೂಚಿತ ವ್ಯಾಪ್ತಿಗೆ ಸೇರಿದೆ. ಬ್ರಿಟಿಷ್‌ ಸರಕಾರದ ಅವಧಿಯಲ್ಲೂ ಅಧಿಸೂಚಿತ ಅರಣ್ಯಪ್ರದೇಶ ವ್ಯಾಪ್ತಿ ಭೂ ಮಂಜೂರುಗೊಂಡ ಸಾಕಷ್ಟು ಪ್ರಕರಣಗಳಿವೆ. ಸ್ವಾತಂತ್ರ್ಯಾ ನಂತರ ವಿವೇಚನಾಧಿಕಾರದಡಿ, 25ನೇ ವರ್ಷದ ಸ್ವಾತಂತ್ರ್ಯಆಚರಣೆ ಹೆಸರಲ್ಲಿ ಭೂ ಮಂಜೂರಾತಿ ಮಾಡಲಾಗಿದೆ. 1980ರಲ್ಲಿ ದರಖಾಸ್ತು ನಿಯಮದಡಿ, 1991ರಲ್ಲಿ ಬಗರ್‌ಹುಕುಂ ಸಾಗುವಳಿ ಸಕ್ರಮ ಫಾರಂ-50,ಅಶ್ರಯ ವಸತಿ ಯೋಜನೆಯಡಿ ಹಕ್ಕುಪತ್ರ ವಿತರಿಸಲಾಗಿದೆ. 1999ರ ನಂತರ ಬಗರ್‌ಹುಕುಂ ಸಾಗುವಳಿಗೆ ಫಾರಂ-53ರಲ್ಲಿ, 94ಸಿ, 94ಸಿಸಿ ನಿಯಮದಡಿ ಅಕ್ರಮ ಸಕ್ರಮ ಕಟ್ಟಡ ನಿವೇಶನ ಹಕ್ಕುಪತ್ರ ವಿತರಿಸಲಾಗಿದೆ. 1978ರ ಪೂರ್ವ ಭೂ ಮಂಜೂರಾತಿ, ನಂತರದ ವರ್ಷಗಳ ಮಂಜೂರಾತಿಗಳೆಂದು ವರ್ಗೀಕರಿಸಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಗುರುತಿಸುವ ಪ್ರಯತ್ನ ನಡೆದಿದೆ. ಒತ್ತುವರಿ ಪ್ರಕರಣದ ಜತೆಯಲ್ಲೇ ಭೂ ಮಂಜೂರು ಪ್ರಕರಣಗಳ ಪತ್ತೆಗೆ ಅರಣ್ಯ ಇಲಾಖೆ ಪ್ರಯತ್ನ ಭೂ ವಿವಾದದ ಬಿಕ್ಕಟ್ಟಿಗೆ ಕಾರಣವಾಗಿದೆ. ಶೇ.69 ಇಂಡೀಕರಣ ಅಧಿಸೂಚಿತ ಅರಣ್ಯ ಪ್ರದೇಶ 2019 ಅಕ್ಟೋಬರ್‌ 10ರವರೆಗೆ ಇಂಡೀಕರಣಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 3,61,229,86 ಗುಂಟೆ ಅಧಿಸೂಚಿತ ಪ್ರದೇಶವಿದೆ. ಇಲ್ಲಿಯ 2,52,482,51 ಗುಂಟೆ ಇಂಡೀಕರಣ ಆಗಿದ್ದು, 108,747,35 ಗುಂಟೆ ಪ್ರದೇಶ ಇಂಡೀಕರಣ ಬಾಕಿ ಇದೆ. ಆರ್‌ಟಿಸಿ ದಾಖಲೆ ಕಾಲಂ-9ರಲ್ಲಿ ಶೇ.69.90 ರಷ್ಟು ಅಧಿಸೂಚಿತ ಅರಣ್ಯಪ್ರದೇಶದ ಹೆಸರು ದಾಖಲಾಗಿದೆ. ಈ ನಡುವೆ ಅಧಿಸೂಚಿತ ಅರಣ್ಯಪ್ರದೇಶದ ಹಕ್ಕು ವರ್ಗಾವಣೆ (ಮ್ಯುಟೇಷನ್‌)ದಾಖಲೆಯ ಇಂಡೀಕರಣದ ಸಮಗ್ರ ಮಾಹಿತಿ ಸಂಗ್ರಹಕ್ಕೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಭೂ ಮಂಜೂರು ಪ್ರಕರಣ ಕುರಿತು ಮಾಹಿತಿ ಸಂಗ್ರಹಕ್ಕೆ ಕೆಲವೊಂದು ಅಡೆತಡೆ ಇದೆ. ಲಭ್ಯ ದಾಖಲೆ ಆಧರಿಸಿ ಮಂಜೂರು ಪ್ರಕರಣದ ವಿವರವಾದ ಮಾಹಿತಿ ಕೋರಿ ಕಂದಾಯ ಇಲಾಖೆಗೆ ಪತ್ರ ಬರೆಯಲಾಗುತ್ತಿದೆ. ಈ ಸಂಬಂಧ ಇಲಾಖೆ ಅಧಿಕಾರಿಗಳ ಸಭೆ ನಡೆದಿದೆ. ಶಂಕರ್‌, ಡಿಸಿಎಫ್‌,


from India & World News in Kannada | VK Polls https://ift.tt/3ev5FL1

ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ಜಾಲ: ಪೊಲೀಸರಿಂದ ನಾಲ್ವರು ಆರೋಪಿಗಳ ಬಂಧನ

: ರಾಜ್ಯಾದ್ಯಂತ ಸದ್ದು ಮಾಡಿದ್ದ ನಕಲಿ ತುಪ್ಪ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಕಲಿ ನಂದಿನಿ ಪತ್ತೆ ಪ್ರಕರಣ ಸಂಬಂಧ ಡಿವೈಎಸ್ಪಿ ಸುಮಿತ್ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿತ್ತು. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಆರ್ ಚೇತನ್ ತಿಳಿಸಿದರು. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ಎಸ್ಪಿ ಆರ್. ಚೇತನ್, ಪ್ರಕರಣ ಸಂಬಂಧ ನಾಲ್ವರು ಆರೋಪಿಗಳ ಪೈಕಿ ಇಬ್ಬರ ಹೆಸರು ಎಫ್ಐಆರ್‌ನಲ್ಲಿ ಉಲ್ಲೇಖ ಆಗಿತ್ತು. ಪ್ರಕರಣ ಸಂಬಂಧ ತನಿಖೆ ಮುಂದುವರೆದಿದ್ದು, ಆರೋಪಿಗಳು ನೀಡುವ ಸುಳಿವಿನ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರಕರಣ ಸಂಬಂಧ ಮತ್ತಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ. ಆರೋಪಿಗಳು ಬಹಳ ವರ್ಷಗಳಿಂದ ಮೈಸೂರಿನಲ್ಲೇ ನೆಲೆಸಿದ್ದರೆಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದುವರೆಗಿನ ತನಿಖೆ ಪ್ರಕಾರ ಕೆಎಂಎಫ್‌ನ ಸಿಬ್ಬಂದಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹಾಗಂತ ಈಗಲೇ ನಿರ್ಧಾರ ಕೈಗೊಳ್ಳಲಾಗುವುದಿಲ್ಲ. ದಾಳಿ ವೇಳೆ 10 ಟನ್ ನಕಲಿ ನಂದಿನಿ ತುಪ್ಪ ಪತ್ತೆಯಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಮಾಹಿತಿ ನೀಡಿದರು. ಇದೀಗ ಪ್ರಕರಣದ ಸಂಬಂಧ ನಾಲ್ವರನ್ನ ಬಂಧಿಸಿದ್ದು, ಮತ್ತಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ನಾಲ್ವರು ಆರೋಪಿಗಳ ಪೈಕಿ ಇಬ್ಬರ ಹೆಸರು ಎಫ್ಐಆರ್‌ನಲ್ಲಿ ಉಲ್ಲೇಖವಾಗಿತ್ತು. ಈ ಕುರಿತಂತೆ ಇನ್ನಷ್ಟು ತನಿಖೆ ಮುಂದುವರೆದಿದ್ದು, ಆರೋಪಿಗಳು ನೀಡುವ ಸುಳಿವಿನ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ನಡುವೆ, ನಂದಿನಿ ತುಪ್ಪ ಕಲಬೆರೆಕೆ ಹಗರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಡಿಸೆಂಬರ್ 30ರಂದು ಪ್ರತಿಭಟನೆ ನಡೆಸಲು ರಾಜ್ಯ ರೈತ ಸಂಘ ಕರೆ ನೀಡಿದೆ. ಅಂದು ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಯಲಿದೆ. ನಂದಿನಿ ತುಪ್ಪ ಕಲಬೆರಕೆ ಆಗಿರೋದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಹಗರಣದಲ್ಲಿ ಮೈಮುಲ್ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇದೆ. ಹಾಗಾಗಿ ಕೂಡಲೇ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಆಗ್ರಹಿಸಿದ್ದಾರೆ. ಜನವರಿ 1 ರಿಂದ ಡೈರಿಗಳಲ್ಲಿ ಸ್ಥಳೀಯ ಕಚ್ಚಾ ಹಾಲು ಮಾರಾಟಕ್ಕೆ ನಿಷೇಧ ಮಾಡಿರೋದು ಖಂಡನೀಯ. ಇದರಿಂದ ಹಾಲು ಉತ್ಪಾದಕರಿಗೆ ಹೊಡೆತ ಬೀಳಲಿದೆ. ಹಾಗಾಗಿ ಈ ಎಲ್ಲಾ ವಿಚಾರಗಳ ಕುರಿತು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ನೈಟ್ ಕರ್ಫ್ಯೂ ಕಠಿಣ..! ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಎಲ್ಲಾ ಕ್ರಮಗಳನ್ನ ಕೈಗೊಳ್ಳಲಾಗಿದ್ದು, ಈಗಾಗಲೇ ನಾವು 13 ಚೆಕ್ ಪೋಸ್ಟ್ ಸಿದ್ದಪಡಿಸಿದ್ದೇವೆ. ಆ ಮೂಲಕ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಿದ್ದು, ಜನರ ಆರೋಗ್ಯದ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದೇವೆ. ರೆಸಾರ್ಟ್ಸ್ ಹಾಗೂ ಹೋಟೆಲ್‌ಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗಿದ್ದು, ಈ ಬಗ್ಗೆ ಈಗಾಗಲೇ ರೆಸಾರ್ಟ್ ಹಾಗೂ ಹೋಟೆಲ್‌ಗಳ ಮಾಲೀಕರಿಗೆ ಸಭೆ ನಡೆಸಿ ಮಾರ್ಗಸೂಚಿಗಳ ಬಗ್ಗೆ ತಿಳಿಸಿದ್ದೇವೆ. ಅಲ್ಲದೇ ಸಾರ್ವಜನಿಕರು ಸಹ ನೈಟ್ ಕರ್ಫ್ಯೂ ನಿಯಮವನ್ನು ಉಲ್ಲಂಘಿಸದೆ ಕೋವಿಡ್ ನಿಯಮಗಳನ್ನ ತಪ್ಪದೇ ಪಾಲಿಸಿಬೇಕು ಎಂದು ಎಸ್ಪಿ ಚೇತನ್ ಮನವಿ ಮಾಡಿದರು.


from India & World News in Kannada | VK Polls https://ift.tt/3EzzYei

ರಾಜ್ಯದಲ್ಲಿ ನೈಟ್ ಕರ್ಫ್ಯೂ ಶುರು..! ಧಾವಂತದಲ್ಲಿ ಮನೆ ಸೇರಿದ ಜನ.. ಎಲ್ಲೆಲ್ಲೂ ಖಾಕಿ ಕಣ್ಗಾವಲು..!

: ರಾಜ್ಯಾದ್ಯಂತ ಶುರುವಾಗಿದೆ. ಮಂಗಳವಾರದಿಂದ ಆರಂಭವಾಗಿರುವ ನೈಟ್ ಕರ್ಫ್ಯೂ, ಜನವರಿ 7ರ ವರೆಗೂ ಪ್ರತಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಜಾರಿಯಲ್ಲಿ ಇರಲಿದೆ. ನೈಟ್ ಕರ್ಫ್ಯೂ ಆರಂಭದ ಮೊದಲ ದಿನವಾದ ಡಿಸೆಂಬರ್ 28 ಮಂಗಳವಾರದಂದು ರಾತ್ರಿ 9.30ಕ್ಕೇ ಪೊಲೀಸರು ರೋಡಿಗೆ ಇಳಿದಿದ್ದರು. ಕಾನೂನು ಸುವ್ಯವಸ್ಥೆ ಪಾಲನೆ, ನೈಟ್ ಕರ್ಫ್ಯೂ ಸಮರ್ಪಕ ಜಾರಿ ಸಂಬಂಧ ರಾಜ್ಯಾದ್ಯಂತ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರು. ರಾತ್ರಿ 10 ಗಂಟೆ ಒಳಗೆ ಎಲ್ಲಾ ಅಂಗಡಿ ಮುಂಗಟ್ಟು, , ರೆಸ್ಟೋರೆಂಟ್, ಬಾರ್, ಪಬ್ ಹಾಗೂ ಕ್ಲಬ್‌ಗಳನ್ನು ಮುಚ್ಚಿಸುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದರು. ಮೆಡಿಕಲ್ ಸ್ಟೋರ್, ಆಸ್ಪತ್ರೆ, ತುರ್ತು ಸೇವೆ ಹಾಗೂ ಪೂರ್ವಾನುಮತಿ ಪಡೆದ ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ. ರಸ್ತೆಯಲ್ಲೂ ಸಹ ವಾಹನ ಸಂಚಾರ ರಾತ್ರಿ 9.30ರಿಂದಲೇ ವಿರಳವಾಗಿತ್ತು. ಅದರಲ್ಲೂ ಬೆಂಗಳೂರು ನಗರದ ಜನನಿಬಿಡ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಎಂದಿನಂತೆ ಇರುತ್ತಿದ್ದ ಜನ ಸಂಚಾರ ರಾತ್ರಿ 9 ಗಂಟೆ ವೇಳೆಗೇ ಕಡಿಮೆಯಾಗಿತ್ತು. ಪ್ರಮುಖ ವೃತ್ತಗಳಲ್ಲಿ ಪೊಲೀಸರ ಗಸ್ತು ವಾಹನಗಳು ನಿಂತಿದ್ದವು. ರಾಜ್ಯದ ಕೆಲವೆಡೆ ಪೊಲೀಸರು ಧ್ವನಿವರ್ಧಕಗಳ ಮೂಲಕ ಜನಜಂಗುಳಿ ಸೇರಿದ್ದ ಪ್ರದೇಶಗಳಲ್ಲಿ ಜನರನ್ನು ತೆರವುಗೊಳಿಸಲು ಸಂದೇಶ ರವಾನಿಸುತ್ತಿದ್ದರು. ಇನ್ನು ಕಾರ್ಮಿಕರು ರಾತ್ರಿ 10 ಗಂಟೆ ಒಳಗೆ ಮನೆ ಸೇರಿಕೊಳ್ಳುವ ಧಾವಂತದಲ್ಲಿದ್ದರು. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಎಂದಿಗಿಂತಾ ಕಡಿಮೆ ಇತ್ತು. ಮೆಟ್ರೋ ರೈಲುಗಳ ಸಂಖ್ಯೆ ಕೂಡಾ ರಾತ್ರಿ 10ರ ಬಳಿಕ ಕಡಿಮೆ ಮಾಡಲಾಗಿತ್ತು. ಇನ್ನು, ಬೆಂಗಳೂರಿನಲ್ಲಿ ರಾತ್ರಿ 10 ಗಂಟೆ ಒಳಗೆ ಮನೆ ಸೇರುವ ಧಾವಂತದಲ್ಲಿದ್ದ ಜನ ಟ್ರಾಫಿಕ್ ಜಾಮ್‌ಗೂ ಕಾರಣರಾದರು. ದೂರ ಪ್ರಯಾಣದ ಬಸ್‌ಗಳ ನಡುವೆ, ಕಾರು, ಬೈಕ್‌ಗಳ ಸವಾರರು ಆದಷ್ಟು ಬೇಗ ಮನೆ ಸೇರುವ ಸನ್ನಾಹದಲ್ಲಿದ್ದರು. ಕಾರ್ಪೊರೇಷನ್ ಸರ್ಕಲ್, ಟೌನ್ ಹಾಲ್ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಕಂಡು ಬಂತು. ಬೀದಿ ಬದಿ ವ್ಯಾಪಾರಿಗಳು, ರಾತ್ರಿ ವೇಳೆ ಟೀ, ಕಾಫಿ ಮಾರುವ ತಳ್ಳುಗಾಡಿಗಳು ಸೇರಿದಂತೆ ಯಾವುದೇ ವಹಿವಾಟು ಬೆಂಗಳೂರು ನಗರದಲ್ಲಿ ಇರಲಿಲ್ಲ. ರಾಜ್ಯದ ಬಹುತೇಕ ಎಲ್ಲ ನಗರಗಳ ಪರಿಸ್ಥಿತಿಯೂ ಇದೇ ರೀತಿಯಾಗಿತ್ತು. ಹೊಟೇಲ್, ಬಾರ್, ರೆಸ್ಟೋರೆಂಟ್, ಪಬ್‌ಗಳು 10 ಗಂಟೆಗೆ ಮುನ್ನವೇ ವಹಿವಾಟು ಮುಗಿಸಿದವು. ಆದ್ರೆ, ಇಲ್ಲಿ ಕೆಲಸ ಮಾಡುವ ಕಾರ್ಮಿಕರು ಮನೆ ತಲುಪಲು ಪರದಾಡುವಂತಾಯ್ತು. ಸ್ವಂತ ವಾಹನ ಇದ್ದವರು ಆದಷ್ಟು ಬೇಗ ಮನೆ ಸೇರಿಕೊಂಡರೆ, ಸಾರ್ವಜನಿಕ ಸಾರಿಗೆಯನ್ನೇ ನಂಬಿಕೊಂಡವರು ಕಷ್ಟಪಡಬೇಕಾಯ್ತು. ಇನ್ನು ಬೆಂಗಳೂರು ನಗರದ ಹೊರ ವಲಯಗಳಲ್ಲಿ ನೆಲೆಸಿರುವ ಜನರು, ನಗರದ ಹೃದಯ ಭಾಗದಿಂದ ತಮ್ಮ ತಮ್ಮ ಮನೆ ತಲುಪಲು ಹರಸಾಹಸ ಪಡಬೇಕಾಯ್ತು. ಇನ್ನು ಡಿಸೆಂಬರ್ 29ರ ಬುಧವಾರ ರಾತ್ರಿಯಿಂದ ನಗರದ ಎಲ್ಲಾ ಮೇಲ್ಸೇತುವೆಗಳ ಮೇಲೆ ಬ್ಯಾರಿಕೇಡ್‌ ನಿರ್ಮಿಸಿ, ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲು ಪೊಲೀಸ್‌ ಇಲಾಖೆ ನಿರ್ಧರಿಸಿದೆ. ರಾತ್ರಿ ಕರ್ಫ್ಯೂ ವೇಳೆ ಅನಗತ್ಯವಾಗಿ ಓಡಾಡುವ ಮೂಲಕ ನಿಯಮ ಉಲ್ಲಂಘಿಸುವವರ ವಿರುದ್ಧ ‘ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆ (ಎನ್‌ಡಿಎಂಎ)’ ಅಡಿಯಲ್ಲಿ ಪ್ರಕರಣ ದಾಖಲಿಸುವುದಾಗಿ ಈಗಾಗಲೇ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಎಚ್ಚರಿಕೆ ನೀಡಿದ್ದಾರೆ. ಆದರೆ, ಬಸ್‌ ಮತ್ತು ಕ್ಯಾಬ್‌ ಸೇವೆ ಎಂದಿನಂತೆ ಇರಲಿದೆ. ಆಸ್ಪತ್ರೆಗೆ ಹೋಗುವವರು ಸೂಕ್ತ ದಾಖಲೆ ತೋರಿಸಬೇಕು. ಪ್ರಯಾಣಿಕರು ಟಿಕೆಟ್‌ ತೋರಿಸುವುದು ಕಡ್ಡಾಯ. ಆದರೆ, ಯಾರಿಗೂ ರಾತ್ರಿ ಸಂಚಾರಕ್ಕೆ ಅನುಮತಿ ನೀಡಿ ಪಾಸ್‌ಗಳನ್ನು ನೀಡುವುದಿಲ್ಲ. ವಿನಾಯಿತಿಯಿರುವ ಸೇವೆಗಳು: - ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳು ಮತ್ತು ಅವರ ಸಹಾಯಕರು ಸಂಚರಿಸಬಹುದು - ಬಸ್ಸುಗಳು, ರೈಲುಗಳು, ಮೆಟ್ರೋ ರೈಲು ಸೇವೆಗಳು ಮತ್ತು ವಿಮಾನಗಳ ಸಂಚಾರ ಇರಲಿದೆ. - ವಿಮಾನ ನಿಲ್ದಾಣ, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಕ್ಕೆ ತೆರಳಲು ಹಾಗೂ ಅಲ್ಲಿಂದ ಮನೆಗೆ ಹಿಂತಿರುಗಲು ಸಾರ್ವಜನಿಕರು ಖಾಸಗಿ ವಾಹನ, ಸಾರ್ವಜನಿಕ ಸಾರಿಗೆ ಹಾಗೂ ಬಾಡಿಗೆ ಟ್ಯಾಕ್ಸಿಗಳನ್ನು ಬಳಸಬಹುದಾಗಿದೆ. - ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕೈಗಾರಿಕೆಗಳು ಅಥವಾ ಕಂಪನಿಗಳ ಕೆಲಸಗಾರರು. - ಟೆಲಿಕಾಂ ಮತ್ತು ಇಂಟರ್ನೆಟ್‌ ಸೇವಾ ಪೂರೈಕೆದಾರರ ಉದ್ಯೋಗಿಗಳು ಮತ್ತು ಅವರ ವಾಹನಗಳು. - ಐಟಿ ಕಂಪನಿಗಳ ಅಗತ್ಯ ಸಿಬ್ಬಂದಿ. - ವೈದ್ಯಕೀಯ, ತುರ್ತು ಮತ್ತು ಅಗತ್ಯ ಸೇವೆಗಳು, ಮೆಡಿಕಲ್‌ ಅಂಗಡಿ ಸಿಬ್ಬಂದಿ ಕಾರ್ಯನಿರ್ವಹಿಸಬಹುದು. - ಎಲ್ಲಾ ರೀತಿಯ ಸರಕು ವಾಹನಗಳು, ಖಾಲಿ ವಾಹನಗಳು, ಇ-ಕಾಮರ್ಸ್‌, ಹೋಂ ಡೆಲಿವರಿಗೆ ಅವಕಾಶ.


from India & World News in Kannada | VK Polls https://ift.tt/3JqIfoA

ಪ್ರಧಾನಿ ಮೋದಿ ಬೆಂಗಾವಲಿಗೆ 12 ಕೋಟಿ ಮೌಲ್ಯದ ಮರ್ಸಿಡೆಸ್ ಕಾರು: ಇದರ ವಿಶೇಷತೆಗಳೇನು?

ಹೊಸದಿಲ್ಲಿ: ಪ್ರಧಾನಿ ಅವರ ಬೆಂಗಾವಲು ವಾಹನಗಳ ಸಾಲಿಗೆ ಬಲು ದುಬಾರಿ ಹಾಗೂ ವಿಶೇಷ ರಕ್ಷಣಾ ಸೌಲಭ್ಯಗಳುಳ್ಳ ಕಾರು ಸೇರ್ಪಡೆಯಾಗಿದೆ. ಮರ್ಸಿಡೆಸ್-ಮೇಬ್ಯಾಚ್ ಎಸ್650 (Mercedes-Maybach S650) ಶಸ್ತ್ರಸಜ್ಜಿತ ವಾಹನವು ಬೆಂಗಾವಲಿಗೆ ಸೇರಿಕೊಂಡಿದೆ. ಇದರಿಂದ ಪ್ರಧಾನಿ ಅವರ ಭದ್ರತಾ ವಾಹನಗಳು ರೇಂಜ್ ರೋವರ್ ವೋಗ್ ಮತ್ತು ಟೊಯೊಟಾ ಲ್ಯಾಂಡ್ ಕ್ರೂಸರ್‌ನಿಂದ ಉನ್ನತೀಕರಣಗೊಂಡಂತಾಗಿದೆ. ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲು ಹೈದರಾಬಾದ್‌ ಹೌಸ್‌ಗೆ ತೆರಳಿದ್ದ ಪ್ರಧಾನಿ ಮೋದಿ ಅವರು ಈ ಹೊಸ ಮರ್ಸಿಡೆಸ್-ಮೇಬ್ಯಾಚ್ ಎಸ್650 ಕಾರಿನಲ್ಲಿ ಕಾಣಿಸಿಕೊಂಡಿದ್ದರು. ಅದರ ಬಳಿಕ ಈ ವಾಹನ ಪ್ರಧಾನಿ ಅವರ ಬೆಂಗಾವಲಿನಲ್ಲಿ ಮತ್ತೆ ಕಾಣಿಸಿಕೊಂಡಿದೆ. ಎಸ್650 ಗಾರ್ಡ್ ಬೆಲೆ ಎಷ್ಟು?ಮರ್ಸಿಡೆಸ್-ಮೇಬ್ಯಾಚ್ ಎಸ್650 ಗಾರ್ಡ್ ವಿಆರ್10 ಮಟ್ಟದ ರಕ್ಷಣೆಯುಳ್ಳ ಅತ್ಯಾಧುನಿಕ ಸವಲತ್ತುಗಳ ಮಾಡೆಲ್ ಆಗಿದೆ. ಇದು ಕಾರ್ ಒಂದರಲ್ಲಿ ನೀಡುವ ಅತಿ ಹೆಚ್ಚಿನ ರಕ್ಷಣಾ ಸೌಲಭ್ಯವಾಗಿದೆ. ಮರ್ಸಿಡೆಸ್-ಮೇಬ್ಯಾಚ್ ಎಸ್600 ಗಾರ್ಡ್ ವಾಹನವು ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾಗಿತ್ತು. ಅದಕ್ಕೆ 10.5 ಕೋಟಿ ರೂ ಇತ್ತು. ಮರ್ಸಿಡೆಸ್-ಮೇಬ್ಯಾಚ್ ಎಸ್650 ವಾಹನಕ್ಕೆ ಈಗ 12 ಕೋಟಿ ರೂ.ಗೂ ಅಧಿಕ ಬೆಲೆ ಇದೆ. ಎಸ್‌ಪಿಜಿಯ ಹೊಣೆಗಾರಿಕೆದೇಶದ ಮುಖ್ಯಸ್ಥರ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ವಿಶೇಷ ರಕ್ಷಣಾ ಗುಂಪು (ಎಸ್‌ಪಿಜಿ), ಸಾಮಾನ್ಯವಾಗಿ ಹೊಸ ಕಾರಿಗೆ ಬೇಡಿಕೆ ಸಲ್ಲಿಸುತ್ತದೆ. ತಾವು ಭದ್ರತೆ ನೀಡುತ್ತಿರುವ ವ್ಯಕ್ತಿಯ ರಕ್ಷಣೆಗೆ ಹೊಸ ವಾಹನದ ಅಗತ್ಯವಿದೆಯೇ ಎಂಬ ಭದ್ರತಾ ಅಗತ್ಯಗಳನ್ನು ಗುರುತಿಸುವ ಮತ್ತು ನಿರ್ಧರಿಸುವ ಕಾರ್ಯವನ್ನು ಮಾಡುತ್ತದೆ. ಬೆಂಗಾವಲಿನಲ್ಲಿ ಡೆಕಾಯ್ ಕಾರುಗಳನ್ನು ಬಳಸುವುದರಿಂದ ಅದೇ ಮಾದರಿಯ ವಾಹನಕ್ಕೆ ಬೇಡಿಕೆ ಇರಿಸುತ್ತದೆ. ವಾಹನದ ವಿಶೇಷತೆ ಏನು?ಮರ್ಸಿಡೆಸ್-ಮೇಬ್ಯಾಚ್ ಎಸ್650 ಗಾರ್ಡ್ 6.0 ಲೀಟರ್ ಅವಳಿ-ಟರ್ಬೋ ವಿ12 ಎಂಜಿನ್ ಹೊಂದಿದ್ದು, ಅದು 516ಬಿಎಚ್‌ಪಿ ಉತ್ಪಾದಿಸುತ್ತದೆ ಮತ್ತು ಅಂದಾಜು 900ಎನ್‌ಎಂ ಪೀಕ್ ಟಾರ್ಕ್ ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 160 ಕಿಮೀ ಆಗಿದೆ. ಎಸ್650 ಗಾರ್ಡ್ ಬಾಡಿ ಮತ್ತು ಕಿಟಕಿಗಳು ಪ್ರಬಲವಾದ ಉಕ್ಕಿನ ತಿರುಳಿನ ಬುಲೆಟ್‌ಗಳನ್ನು ಎದುರಿಸಬಲ್ಲಷ್ಟು ಶಕ್ತಿ ಹೊಂದಿವೆ. ಇದು 2010 ಸ್ಫೋಟಕ ನಿರೋಧಕ ವಾಹನ (ಇಆರ್‌ವಿ), Explosion Proof Vehicle ರೇಟಿಂಗ್ ಅನ್ನು ಹೊಂದಿದೆ. ಎಕೆ-47 ರೈಫಲ್‌ಗಳ ದಾಳಿಯನ್ನು ಇದು ತಾಳಿಕೊಳ್ಳಬಲ್ಲದು. ಕೇವಲ 2 ಮೀಟರ್ ದೂರದಿಂದ 15 ಕೆಜಿಯಷ್ಟು ಟಿಎನ್‌ಟಿ ಸ್ಫೋಟ ಸಂಭವಿಸಿದರೂ ಅದರಿಂದ ರಕ್ಷಣೆ ಒದಗಿಸುತ್ತದೆ. ಕಿಟಕಿಯ ಒಳ ರಚನೆಯು ಪಾಲಿಕಾರ್ಬೊನೇಟ್ ಲೇಪನ ಹೊಂದಿದೆ. ವಾಹನದ ಕೆಳ ಭಾಗವು ನೇರ ಸ್ಫೋಟದಿಂದ ಒಳಗೆ ಇರುವವರನ್ನು ರಕ್ಷಿಸಲು ಭಾರಿ ಶಸ್ತ್ರಸಜ್ಜಿತವಾಗಿದೆ. ಅನಿಲ ದಾಳಿ ನಡೆದರೆ ಅದರಿಂದ ರಕ್ಷಿಸುವುದಕ್ಕಾಗಿಯೂ ಕ್ಯಾಬಿನ್‌ಗೆ ಪ್ರತ್ಯೇಕ ಗಾಳಿ ಪೂರೈಕೆ ವ್ಯವಸ್ಥೆ ಇದೆ. ಇಂಧನ ಟ್ಯಾಂಕ್ ರಂಧ್ರವಾಗುವುದಿಲ್ಲ!Mercedes-Maybach S650 Gaurd ವಾಹನದ ಇಂಧನ ಟ್ಯಾಂಕ್ ವಿಶೇಷ ವಸ್ತುವಿನಿಂದ ಲೇಪಿತವಾಗಿದೆ. ಇದು ಯಾವುದೇ ದಾಳಿಯಿಂದ ಉಂಟಾಗುವ ರಂಧ್ರಗಳನ್ನು ತಕ್ಷಣವೇ ಮುಚ್ಚುತ್ತದೆ. ಎಎಚ್-64 ಅಪಾಚೆ ದಾಳಿಕೋರ ಹೆಲಿಕಾಪ್ಟರ್‌ಗಳ ಟ್ಯಾಂಕ್‌ಗಳಲ್ಲಿ ಬೋಯಿಂಗ್ ಸಂಸ್ಥೆ ಬಳಸುವ ಸಾಮಗ್ರಿಗಳಿಂದಲೇ ಇದನ್ನು ಮಾಡಲಾಗಿರುತ್ತದೆ. ಅಲ್ಲದೆ ಈ ಕಾರು, ಟೈರ್‌ಗಳಿಗೆ ಹಾನಿಯಾದರೆ, ಅಥವಾ ಗಾಳಿ ಹೋಗಿ ಪಂಕ್ಚರ್ ಆದರೂ, ತಕ್ಷಣವೇ ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ವಿಶೇಷವಾಗಿ ನಿರ್ಮಿಸಿರುವ ಫ್ಲ್ಯಾಟ್ ಟೈರ್‌ಗಳಲ್ಲಿ ಚಲಿಸುವ ಮೂಲಕ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಈ ಕಾರಿನಲ್ಲಿ ಐಷಾರಾಮಿ ಒಳಾಂಗಣ ವಿನ್ಯಾಸವಿದೆ. ಇದರಲ್ಲಿ ಸೀಟ್ ಮಸಾಜರ್ ಇದೆ. ಹಿಂಬದಿಯ ಸೀಟುಗಳಲ್ಲಿ ಪ್ರಯಾಣಿಕರು ಕಾಲುಗಳನ್ನು ಚಾಚಿಕೊಳ್ಳಲು ಅನುಕೂಲಕರವಾಗುವಂತೆ ಸೀಟುಗಳನ್ನು ಹಿಂದಕ್ಕೆ ಹೊಂದಿಸಿಕೊಳ್ಳಲು ಅವಕಾಶವಿದೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಅವರು ಬುಲೆಟ್‌ ಪ್ರೂಫ್ ಮಹೀಂದ್ರಾ ಸ್ಕಾರ್ಪಿಯೋ ಕಾರನ್ನು ಬಳಸುತ್ತಿದ್ದರು. 2014ರಲ್ಲಿ ಪ್ರಧಾನಿಯಾದಾಗ ಅವರು ಬಿಎಂಡಬ್ಲ್ಯೂ 7 ಸರಣಿಯ ಅಧಿಕ ಭದ್ರತಾ ಆವೃತ್ತಿಯನ್ನು ಬಳಸಿದ್ದರು. ಬಳಿಕ ಲ್ಯಾಂಡ್ ರೋವರ್ ರೇಂಜ್ ವೋಗ್ ಹಾಗೂ ಟೊಯೊಟೊ ಲ್ಯಾಂಡ್ ಕ್ರೂಸರ್ ವಾಹನಗಳನ್ನು ಬಳಸಿದ್ದರು.


from India & World News in Kannada | VK Polls https://ift.tt/3FzkN6h

'ಆಂಗ್ಲರ ಪ್ರದರ್ಶನ ಮುಜುಗರ ತಂದಿದೆ' ಇಂಗ್ಲೆಂಡ್‌ ವಿರುದ್ಧ ದಿಗ್ಗಜರ ಆಕ್ರೋಶ!

ಹೊಸದಿಲ್ಲಿ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಇನಿಂಗ್ಸ್ ಹಾಗೂ 14 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತು. ಆ ಮೂಲಕ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಆಸ್ಟ್ರೇಲಿಯಾ ತಂಡ ಆಷಸ್‌ ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿತು. ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಮಂಗಳವಾರ ಆರಂಭವಾದ ಮೂರನೇ ದಿನದಾಟದಲ್ಲಿ ಸ್ಕಾಟ್‌ ಬೊಲೆಂಡ್‌ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಇಂಗ್ಲೆಂಡ್‌ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 68 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ 0-3 ಅಂತರದಲ್ಲಿ ಟೆಸ್ಟ್‌ ಸರಣಿಯನ್ನು ಆತಿಥೇಯ ತಂಡಕ್ಕೆ ಬಿಟ್ಟುಕೊಟ್ಟಿತು. ಸಿಡ್ನಿ ಹಾಗೂ ಹೊಬರ್ಟ್‌ನಲ್ಲಿ ಇನ್ನುಳಿದ ಎರಡು ಪಂದ್ಯಗಳಲ್ಲಿ ಗೆದ್ದು ಗೌರವ ಉಳಿಸಿಕೊಳ್ಳುವತ್ತ ನಾಯಕತ್ವದ ಇಂಗ್ಲೆಂಡ್‌ ಗಮನ ಹರಿಸಲಿದೆ. ಅಂದಹಾಗೆ ಇಂಗ್ಲೆಂಡ್‌ ತಂಡದ ಹೀನಾಯ ಪ್ರದರ್ಶನದ ಬಗ್ಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗರು ಪ್ರತಿಕ್ರಿಯಿಸಿದ್ದಾರೆ. ಇಂಗ್ಲೆಂಡ್‌ ತಂಡ ತನ್ನ ಪ್ಲೇಯಿಂಗ್‌ ಇಲೆವೆನ್‌ ಆಯ್ಕೆಯಲ್ಲಿ ತಪ್ಪು ಮಾಡಿದೆ ಎಂದು 7 ಕ್ರಿಕೆಟ್‌ಗೆ ತಿಳಿಸಿದ್ದಾರೆ. "ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದಿಂದಲೇ ಇಂಗ್ಲೆಂಡ್‌ ತಂಡ ಉತ್ತಮ ಪ್ಲೇಯಿಂಗ್‌ ಇಲೆವೆನ್ ಆಯ್ಕೆಯ ವಿಚಾರದಲ್ಲಿ ತಪ್ಪು ಮಾಡಿದೆ. ಉತ್ತಮ ಪ್ರದರ್ಶನ ತೋರಬೇಕಾದರೆ ನೀವು ಮೊದಲನೇ ಪಂದ್ಯದಿಂದಲೇ ಉತ್ತಮ ತಂಡವನ್ನು ಕಣಕ್ಕೆ ಇಳಿಸಬೇಕಾಗುತ್ತದೆ. ಆದರೆ, ಇಂಗ್ಲೆಂಡ್‌ ಪಾಲಿಗೆ ಇದು ಸಾಧ್ಯವಾಗಲಿಲ್ಲ. ಅಡಿಲೇಡ್‌ ಹಾಗೂ ಎಂಸಿಜಿಯಲ್ಲಿಯೂ ಇಂಗ್ಲೆಂಡ್‌ ತಂಡದ ಪ್ಲೇಯಿಂಗ್‌ ಇಲೆವೆನ್‌ ವಿಭಿನ್ನವಾಗಿತ್ತು," ಎಂದು ಪಾಂಟಿಂಗ್‌ ಬೇಸರ ವ್ಯಕ್ತಪಡಿಸಿದರು. "ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಜೇಮ್ಸ್ ಆಂಡರ್ಸನ್‌ ಹಾಗೂ ಸ್ಟುವರ್ಟ್ ಬ್ರಾಡ್‌ ಅವರನ್ನು ಆಡಿಸದೇ ಇರುವುದು ದಿಗ್ಭ್ರಮೆಗೊಳಿಸುವಂತಿತ್ತು. ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಜೋ ರೂಟ್‌ ಬೌಲ್‌ ಮಾಡದೆ ಇರುವುದು ಕೂಡ ನನ್ನನ್ನು ದಿಗ್ಭ್ರಮೆಗೊಳಿಸಿತ್ತು. ಅಡಿಲೇಡ್‌ ಟೆಸ್ಟ್‌ನಲ್ಲಿ ಮಾರ್ಕ್‌ ವುಡ್‌ ಆಡದೆ ಇರುವುದು ಕೂಡ ನನಗೆ ದಿಗ್ಭ್ರಮೆ ಮೂಡಿಸಿತು. ಇಂಗ್ಲೆಂಡ್‌ ತಂಡದ ಎಲ್ಲಾ ಯೋಜನೆ, ಯೋಚನೆ ಹಾಗೂ ಕಾರ್ಯತಂತ್ರ ಸಂಪೂರ್ಣವಾಗಿ ತಪ್ಪಾಗಿದೆ," ಎಂದು ರಿಕಿ ಪಾಂಟಿಂಗ್‌ ಹೇಳಿದರು. ಅಗ್ರ ಕ್ರಮಾಂಕದಲ್ಲಿ ಸಮಸ್ಯೆ ಇದೆ: ಬೋಥಮ್‌ ಇಂಗ್ಲೆಂಡ್‌ ತಂಡ ಅತ್ಯುತ್ತಮ ಆಟಗಾರರನ್ನು ಪ್ಲೇಯಿಂಗ್‌ ಇಲೆವೆನ್‌ಗೆ ಕರೆ ತಂದಿಲ್ಲ ಎಂದು ಮತ್ತೊಬ್ಬ ದಿಗ್ಗಜ ಐಯಾನ್‌ ಬೋಥಮ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಸಿಬಿ ಮತ್ತು ಟೀಮ್‌ ಮ್ಯಾನೇಜ್‌ಮೆಂಟ್‌ ತೆಗೆದುಕೊಂಡ ಕೆಲ ನಿರ್ಧಾರಗಳಲ್ಲಿ ತರ್ಕವಿಲ್ಲ ಎಂಬುದು ಮಾಜಿ ಆಟಗಾರನ ಅಭಿಪ್ರಾಯ. "ಇಂಗ್ಲೆಂಡ್‌ ಪುಟಿದೇಳಲಿದೆಯೇ ಎಂಬದು ನನಗೆ ಗೊತ್ತಿಲ್ಲ. ಆದರೆ ಅವರು ಕಮ್‌ಬ್ಯಾಮ್‌ ಮಾಡಬೇಕೆಂದು ನಾನು ಬಯಸುತ್ತೇನೆ. ಪ್ರವಾಸಿ ತಂಡ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಅಂದಹಾಗೆ ಇಂಗ್ಲೆಂಡ್‌ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಸಮಸ್ಯೆ ಇದೆ. ಎರಡು ಸಂಯೋಜನೆಯೊಂದಿಗೆ ಅವರು ಪ್ರಯತ್ನಿಸಿದ್ದರು, ಆದರೆ ಇದು ಸಕಾರವಾಗಲಿಲ್ಲ," ಎಂದು ಬೋಥಮ್‌ ತಿಳಿಸಿದ್ದಾರೆ. ಇಂಗ್ಲೆಂಡ್‌ ಪ್ರದರ್ಶನ ಮುಜುಗರ ತಂದಿದೆ: ವಾನ್‌ ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ ಕೂಡ ಜೋ ರೂಟ್‌ ಬಳಗದ ಪ್ರದರ್ಶನವನ್ನು ಟೀಕಿಸಿದ್ದಾರೆ. ಇಂಗ್ಲೆಂಡ್‌ ತಂಡದ ಪ್ರದರ್ಶನ ಮುಜುಗರ ತಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. "ಇಂಗ್ಲೆಂಡ್‌ ತಂಡದಲ್ಲಿ ಕೆಲ ದೊಡ್ಡ ಸಮಸ್ಯೆಗಳಿವೆ. ಇದು ನಿಜಕ್ಕೂ ಮುಜುಗರ ತರುವಂತಿದೆ. ಸ್ಪರ್ಧಿಸುವ ಬಗ್ಗೆ ಹೆಮ್ಮೆಪಡುವ ಆಟಗಾರರ ಗುಂಪು ಇಂಗ್ಲೆಂಡ್‌ ತಂಡದಲ್ಲಿದೆ. ಆದರೆ ಅವರು ಯಾವುದೇ ರೀತಿಯ ಸ್ಥಿರತೆ ಅಥವಾ ಕೌಶಲ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಕನಿಷ್ಠ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲು ಅವರಿಂದ ಆಗಲಿಲ್ಲ. ಬ್ರಿಸ್ಬೇನ್‌ನಲ್ಲಿ ಆರಂಭವಾದ ವೈಫಲ್ಯ, ಮೆಲ್ಬೋರ್ನ್‌ವರೆಗೂ ಮುಂದುವರಿದಿದೆ," ಎಂದು ಮೈಕಲ್‌ ವಾನ್‌ ಟೀಕಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3FCXCIi

ಕೋವಿಡ್‌ನಲ್ಲೂ ಸರ್ಕಾರದ ಕೈಹಿಡಿದ ಎಣ್ಣೆ ಪ್ರಿಯರು! 3 ವರ್ಷಗಳಲ್ಲಿ 64,859 ಕೋಟಿ ರೂ. ರಾಜಸ್ವ ಸಂಗ್ರಹ!

ಬೆಂಗಳೂರು: ಕೋವಿಡ್‌ ಲಾಕ್‌ಡೌನ್ ಹಾಗೂ ನಿರ್ಬಂಧಗಳ ಪರಿಣಾಮ ರಾಜ್ಯ ಸರ್ಕಾರಕ್ಕೆ ವಿವಿಧ ವಿಭಾಗಗಳಿಂದ ಸಂಗ್ರಹವಾಗುತ್ತಿದ್ದ ತೆರಿಗೆಗೆ ಭಾರೀ ಹೊಡೆದ ಬಿದ್ದಿದೆ. ಆದರೆ ಈ ಸಂಕಷ್ಟದ ಅವಧಿಯಲ್ಲಿ ಎಣ್ಣೆ ಪ್ರಿಯರು ಮಾತ್ರ ಸರ್ಕಾರದ ಕೈ ಹಿಡಿದಿದ್ದಾರೆ. ಹೌದು, ಕಳೆದ ಮೂರು ವರ್ಷದಲ್ಲಿ ಅಬಕಾರಿ ಇಲಾಖೆಯಿಂದ ಸಂಗ್ರಹವಾದ ರಾಜಸ್ವದ ಮೊತ್ತ 64,859.98 ಕೋಟಿ ರೂಪಾಯಿ. ಸರ್ಕಾರದ ಅಂಕಿ ಅಂಶಗಳ ಪ್ರಕಾರ 2018 - 19 ರಲ್ಲಿ ಅಬಕಾರಿ ಇಲಾಖೆಯಿಂದ 19,943.93 ಕೋಟಿ ರೂ ರಾಜಸ್ವ ಸಂಗ್ರಹವಾದರೆ, 2019 - 20 ರಲ್ಲಿ 21,583.95 ಕೋಟಿ ರೂ, ಹಾಗೂ 2020- 21 23,332.10 ಕೋಟಿ ರೂಪಾಯಿ ರಾಜಸ್ವ ಸಂಗ್ರಹವಾಗಿದೆ. ಈ ಮೂಲಕ ಒಟ್ಟು 3 ವರ್ಷಗಳಲ್ಲಿ 64,859 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಕೋವಿಡ್ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಲಾಕ್‌ ಡೌನ್ ಅವಧಿಯಲ್ಲಿ ಇತರ ಅಂಗಡಿಗಳನ್ನು ತೆರೆಯಲು ಅವಕಾಶ ನೀಡದಿದ್ದರೂ ಮದ್ಯದಂಗಡಿಗಳ ಮೇಲಿನ ನಿರ್ಬಂಧ ಸಡಿಲಗೊಳಿಸಲಾಗಿತ್ತು. ಸರ್ಕಾರದ ಈ ನಿರ್ಧಾರಕ್ಕೆ ವಿರೋಧಗಳು ವ್ಯಕ್ತವಾಗಿದ್ದವು. ಸರ್ಕಾರ ತೆರಿಗೆ ಸಂಗ್ರಹದ ಉದ್ದೇಶದಿಂದ ಮದ್ಯಮಾರಾಟಕ್ಕೆ ಅವಕಾಶ ಕೊಡುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ರಾಜಸ್ವ ಸಂಗ್ರಹದಲ್ಲಿ ಅಬಕಾರಿ ಇಲಾಖೆ ಎರಡನೇ ಸ್ಥಾನ! ಕರ್ನಾಟಕದ ಸರ್ಕಾರದ ರಾಜಸ್ವ ಸಂಗ್ರಹದಲ್ಲಿ ಅಬಕಾರಿ ಇಲಾಖೆ ಎರಡನೇ ಸ್ಥಾನದಲ್ಲಿದೆ. ಅಬಕಾರಿ ವಸ್ತುಗಳ ಉತ್ಪಾದನೆ, ಸಾಗಾಣಿಕೆ ಮತ್ತು ಮಾರಾಟಕ್ಕೆ ಕಳೆದ ಎರಡು ವರ್ಷಗಳಲ್ಲಿ 620 ಹೊಸ ಪರವಾನಗಿಗಳನ್ನು ನೀಡಲಾಗಿದೆ. ಒಟ್ಟು 687 ಮನವಿಗಳು ಬಂದಿದ್ದು, ಈ ಪೈಕಿ 620 ಪರವಾನಗಿಗಳನ್ನು ಮಂಜೂರು ಮಾಡಲಾಗಿದೆ. ಇನ್ನು ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟಲು ಹಾಗೂ ಪಾದರ್ಶಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದ್ದು ಮದ್ಯ ಉತ್ಪಾದನೆ, ಮಾರಾಟ ಪರವಾನಗಿ ಮಂಜೂರಾತಿ ಮತ್ತು ನವೀಕರಣ ಒಳಗೊಂಡು ಒಟ್ಟು 44 ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತರಲಾಗಿದೆ. ಅಷ್ಟೇ ಅಲ್ಲದೆ 38 ಸೇವೆಗಳನ್ನು ಆನ್‌ಲೈನ್ ಮೂಲಕವೇ ಕಾರ್ಯಗತಗೊಳಿಸಲಾಗಿದೆ.


from India & World News in Kannada | VK Polls https://ift.tt/3FDAh9e

ನೈಟ್ ಕರ್ಫ್ಯೂ ಜಾರಿಗೆ ವಿರೋಧ; ಗದಗ ಜಿಲ್ಲೆಯಲ್ಲಿ ಹೋಟೆಲ್‌, ರೆಸ್ಟೋರೆಂಟ್‌ ಮಾಲೀಕರ ಆಕ್ರೋಶ!

ಗದಗ: ರಾಜ್ಯ ಸರಕಾರ ಹೊಸ ವರ್ಷಾಚರಣೆ ವೇಳೆ ಓಮಿಕ್ರಾನ್‌ ಹರಡುವುದನ್ನು ತಡೆಯುವ ಉದ್ದೇಶದಿಂದ ಇಂದಿನಿಂದ ಜಾರಿಗೆ ಬರಲಿರುವ ಬಗ್ಗೆ ಉದ್ಯಮಿಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಡಿಸಿದ್ದಾರೆ. ಎರಡು ವರ್ಷಗಳಿಂದ ಹೋಟೆಲ್‌ ಉದ್ಯಮ ಸಂಪೂರ್ಣ ನಲಕಚ್ಚಿ ಹೋಗಿದೆ. ಇತ್ತೀಚೆಗೆ ಕೆಲವು ದಿನಗಳಿಂದ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಆದರೆ ಮತ್ತೆ ರಾಜ್ಯ ಸರಕಾರ ನೈಟ್ ಕರ್ಫ್ಯೂ ಜಾರಿ ಮಾಡುವುದರಿಂದ ಬಾರ್‌ ಮತ್ತು ರೆಸ್ಟೋರೆಂಟ್‌ಗಳ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತದೆ. ಕೂಡಲೇ ಇಂತಹ ನಿರ್ಬಂಧವನ್ನು ವಾಪಸ್‌ ಪಡೆಯಬೇಕು ಎಂದು ಹೋಟೆಲ್‌ ಮಾಲೀಕರು ಒತ್ತಾಯಿಸಿದ್ದಾರೆ. ಶೇ.ನೂರು ಅವಕಾಶ ನೀಡಿ ರಾಜ್ಯದಲ್ಲಿ ಓಮಿಕ್ರಾನ್‌ ಹಾವಳಿಗೆ ಕಡಿವಾಣ ಹಾಕಲು ರಾಜ್ಯ ಸರಕಾರ ಡಿ.28ರಿಂದ ಹತ್ತು ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಹೋಟೆಲ್‌, , ಪಬ್‌ಗಳಿಗೆ ಶೇ.50ರಷ್ಟು ಮಾತ್ರ ಅವಕಾಶ ನೀಡಿದೆ. ಇದರಿಂದ ಜಿಲ್ಲೆಯ ಹೋಟೆಲ್‌ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ 2 ವರ್ಷ ಕೊರೊನಾದಿಂದ ಸಾಕಷ್ಟು ಸಂಕಷ್ಟ ಅನುಭವಿಸಿದ್ದೇವೆ. ಈಗಲೂ ಹೋಟೆಲ್‌ಗಳು ಸರಿಯಾಗಿ ನಡೆಯುತ್ತಿಲ್ಲ. ಹೋಟೆಲ್‌ ಬಾಡಿಗೆ, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿವೆ, ಕುಕ್ಕರ್‌, ಸಪ್ಲಾಯರ್‌ ಹೀಗೆ ಅನೇಕ ಕಾರ್ಮಿಕರ ಸಮಸ್ಯೆಯಿಂದ ಬಳಲುತ್ತಿದ್ದೇವೆ. ಈಗ ಮತ್ತೆ ಲಾಕ್‌ಡೌನ್‌ ಮಾಡೋದು ಸರಿಯಲ್ಲ. ನಾನ್‌ವೆಜ್‌ ಹೋಟೆಲ್‌ ಹಾಗೂ ಬಾರ್‌ಗಳಿಗೆ ರಾತ್ರಿ 9ರ ನಂತರವೇ ಜನ ಜಾಸ್ತಿ ಬರುತ್ತಾರೆ. ಆದರೆ ನೈಟ್ ಕರ್ಫ್ಯೂ ಜೊತೆಗೆ ಶೇ.50 ಜಾರಿಗೆ ತಂದಿದ್ದು ಸರಿಯಲ್ಲ. ಹೋಟೆಲ್‌, ಬಾರ್‌, ರೆಸ್ಟೋರೆಂಟ್‌ಗಳಿಗೆ ಶೇ.100 ಅನುಮತಿ ಕೊಡಬೇಕು. ಜತೆಗೆ ರಾತ್ರಿ 11ರ ವರೆಗೆ ಸಮಯ ವಿಸ್ತರಣೆ ನಿಯಮ ಜಾರಿ ಮಾಡುವಂತೆ ಆಗ್ರಹಿಸಿದ್ದಾರೆ. ಹೊಷ ವರ್ಷಾಚರಣೆಗೆ ಬ್ರೇಕ್‌ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾತ್ರಿ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಹಲವರು ನಗರದ ಹೋಟೆಲ್‌ಗಳಲ್ಲಿ ವಿವಿಧ ಪ್ರೋಗ್ರಾಂ ಹಮ್ಮಿಕೊಂಡಿದ್ದರು. ಏಕಾಏಕಿ ನೈಟ್ ಕರ್ಫ್ಯೂ ಜಾರಿಯಿಂದ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ನಿಗದಿ ಮಾಡಿರುವ ಸಾಂಸ್ಕೃತಿಕ ಕಾರ್ಯಕ್ರಮ ರದ್ದು ಮಾಡಲಾಗಿದೆ. ಒಂದು ತಿಂಗಳ ಹಿಂದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಜತೆಗೆ ಸಾರ್ವಜನಿಕರು ಸಹ ಟಿಕೆಟ್‌ ಖರೀದಿಸಿದ್ದರು. ಹೀಗಾಗಿ ರೆಸ್ಟೋರೆಂಟ್‌ ಮಾಲೀಕರಿಗೆ ಬಹಳ ಪ್ರಮಾಣದ ನಷ್ಟವಾಗಿದೆ. 50ರಷ್ಟು ಹೋಟೆಲ್‌ ಬಂದ್‌ ಕೊರೊನಾ ಹೊಡೆತಕ್ಕೆ ಜಿಲ್ಲೆಯ 50ರಷ್ಟು ಹೋಟೆಲ್‌ ಬಂದ್‌ ಆಗಿವೆ. ಅವಳಿ ನಗರದಲ್ಲಿ 100ಕ್ಕೂ ಅಧಿಕ ಹೋಟೆಲ್‌ಗಳು ನಡೆಯುತ್ತಿವೆ. ಆದರೆ ಮತ್ತೆ ಲಾಕ್‌ಡೌನ್‌ ಮಾಡಿದರೆ ಸಂಪೂರ್ಣ ಹೋಟೆಲ್‌ ಉದ್ಯಮ ಬಂದ್‌ ಆಗುತ್ತದೆ. ಗದಗ-ಬೆಟಗೇರಿ ಭಾಗದಲ್ಲಿರುವ ಸಸ್ಯಾಹಾರ ಹೋಟೆಲ್‌ ಮಾಲೀಕರು ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಕೂಡಲೇ ಸರಕಾರ ಹೋಟೆಲ್‌ ಮಾಲೀಕರಿಗೆ ಪರಿಹಾರ ನೀಡಬೇಕು. ಜತೆಗೆ 100ರಷ್ಟು ಸಿಟಿಂಗ್‌ ಅವಕಾಶ ಮಾಡಬೇಕು. ರಾತ್ರಿ 11ರ ನಂತರ ನೈಟ್ ಕರ್ಫ್ಯೂ ಮಾಡಬೇಕು. ಸುಧಾಕರ ಶೆಟ್ಟಿ, ಹೋಟೆಲ್‌ ಮಾಲೀಕರ ಸಂಘದ ಉಪಾಧ್ಯಕ್ಷ ಸಸ್ಯಾಹಾರದವರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಎರಡು ವರ್ಷದಿಂದ ಬಹಳ ಪ್ರಮಾಣದಲ್ಲಿ ನಷ್ಟವನ್ನು ಉಂಟು ಮಾಡಿದೆ. ಸರಕಾರ ಕೂಡಲೇ ಪರಿಹಾರ ನೀಡಬೇಕು. ನೈಟ್ ಕರ್ಫ್ಯೂ ದಿಂದ ಬಾರ್‌ ಮತ್ತು ರೆಸ್ಟೋರೆಂಟ್‌ ಮಾಲೀಕರಿಗೆ ಬಹಳ ನಷ್ಟವಾಗುತ್ತಿದೆ. ಸರಕಾರ ನೈಟ್ ಕರ್ಫ್ಯೂ ಸಮಯ ಬದಲಾವಣೆ ಮಾಡಬೇಕು. ಕಾ.ವೇ.ಶ್ರೀನಿವಾಸ, ಹೋಟೆಲ್‌ ಮಾಲೀಕರು ರಾಜ್ಯದಲ್ಲಿ ರೂಪಾಂತರಿ ಹೊಸ ವೈರಸ್‌ ರಾತ್ರಿ ಪಾಳಿ ಮಾತ್ರ ಹರಡುವುದಿಲ್ಲ. ಹೀಗಾಗಿ ನೈಟ್ ಕರ್ಫ್ಯೂ ಅನ್ನೋದೇ ಒಂದು ಜೋಕ್‌ ಆಗಿದೆ. ಇದರಿಂದ ಏನೂ ಪ್ರಯೋಜನವಿಲ್ಲ. ವಿಶ್ವನಾಥ ಖಾನಾಪೂರ, ವಿಕಾಸ ವೇದಿಕೆ ಅಧ್ಯಕ್ಷ


from India & World News in Kannada | VK Polls https://ift.tt/3z66eEU

ಇಂದಿನಿಂದ ನೈಟ್ ಕರ್ಫ್ಯೂ ಜಾರಿ: ಮದುವೆ, ಸಭೆ, ಸಮಾರಂಭ 300 ಮಂದಿಗೆ ಸೀಮಿತ; ಉಡುಪಿ ಜಿಲ್ಲಾಧಿಕಾರಿ

ಉಡುಪಿ: ಓಮಿಕ್ರಾನ್‌ ಸೋಂಕು ಹರಡುವುದನ್ನು ನಿಯಂತ್ರಿಸಲು ಡಿ.28ರಿಂದ ಜ.7ರ ತನಕ ಪ್ರತಿದಿನ ರಾತ್ರಿ 10ರಿಂದ ಬೆಳಗ್ಗೆ 10ರವರೆಗೆ ಜಾರಿಯಲ್ಲಿದ್ದು, ಮದುವೆ, ಸಭೆ, ಸಮಾರಂಭವನ್ನು 300 ಜನರಿಗೆ ಸೀಮಿತಗೊಳಿಸಿ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ತಿಳಿಸಿದ್ದಾರೆ. ಡಿ.30ರಿಂದ ಜ.2ರ ತನಕ ರೆಸ್ಟೋರೆಂಟ್‌, ಹೋಟೆಲ್‌, ಕ್ಲಬ್‌, ಪಬ್‌ಗಳು ಶೇ.50 ಆಸನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬೇಕು. 2 ಡೋಸ್‌ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶಾವಕಾಶ ನೀಡಬೇಕು. ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್‌-19 ಲಸಿಕೆಯ ಎರಡು ಡೋಸ್‌ ಪಡೆದು, ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಹೊಂದಿರಬೇಕು ಎಂದರು. ಯಕ್ಷಗಾನ, ಕೋಲ, ಕಂಬಳವನ್ನು ರಾತ್ರಿ 10ರೊಳಗೆ ಮುಗಿಸಬೇಕು. ರಾತ್ರಿ 10ರಿಂದ ಬೆಳಗ್ಗೆ 5ರ ತನಕ ಅಗತ್ಯ ಚಟುವಟಿಕೆಗಳ ಹೊರತು ಜನರ ಓಡಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ರೋಗಿಗಳು, ಸಹಾಯಕರು ತುರ್ತು ಅಗತ್ಯಕ್ಕಾಗಿ ವ್ಯಕ್ತಿಗಳನ್ನು ಸ್ಥಳಾಂತರಿಸಲು ಅನುಮತಿ ನೀಡಲಾಗಿದೆ. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಕೈಗಾರಿಕೆಗಳು, ಕಂಪನಿಗಳಿಗೆ ರಾತ್ರಿ ವೇಳೆ ಕಾರ್ಯಾಚರಿಸಲು ಅನುಮತಿ ನೀಡಲಾಗಿದೆ. ನೌಕರರು ಸಂಸ್ಥೆಯಿಂದ ನೀಡಿದ ಗುರುತಿನ ಚೀಟಿ, ದಾಖಲೆಗಳನ್ನು ತಮ್ಮ ಪ್ರಯಾಣ ಸಂದರ್ಭ ಹೊಂದಿರಬೇಕು. ದೂರವಾಣಿ, ಅಂತರ್ಜಾಲ ಸೇವೆ ಒದಗಿಸುವ ನೌಕರರು ಹಾಗೂ ವಾಹನಗಳು ಸೂಕ್ತ ಗುರುತಿನ ಚೀಟಿಯೊಂದಿಗೆ ಸಂಚರಿಸಬಹುದು. ಐಟಿ ಸಿಬ್ಬಂದಿ, ಕಾರ್ಮಿಕರ ಹೊರತು ಅನ್ಯರು ಮನೆಗಳಲ್ಲಿಯೇ ಕಾರ್ಯನಿರ್ವಹಿಸಬೇಕು(ವರ್ಕ್ ಫ್ರಂ ಹೋಂ) ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ವೈದ್ಯಕೀಯ, ತುರ್ತು ಹಾಗೂ ಔಷಧಾಲಯ ಸಹಿತ ಅಗತ್ಯ ಸೇವೆಗಳಲ್ಲಿ ವ್ಯತ್ಯಯವಾಗದು. ಟ್ರಕ್‌ಗಳಲ್ಲಿ ಸಾಗಿಸುವ ಸರಕುಗಳು, ಸರಕು ವಾಹನ, ಖಾಲಿ ವಾಹನ ಓಡಾಟಕ್ಕೆ ಅವಕಾಶವಿದೆ. ಇ-ಕಾಮರ್ಸ್‌ ಕಂಪನಿಗಳು, ಹೋಂ ಡೆಲಿವರಿ ಕೆಲಸ ಮುಂದುವರಿಸಬಹುದು. ಬಸ್‌ ಸೇವೆ, ರೈಲು, ವಿಮಾನ ಪ್ರಯಾಣಕ್ಕೆ ಅನುಮತಿಯಿದ್ದು, ಸಾರ್ವಜನಿಕರ ಸಾರಿಗೆ, ಖಾಸಗಿ ವಾಹನ, ಟ್ಯಾಕ್ಸಿ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಪ್ರಯಾಣ ಸಂದರ್ಭ ಪ್ರಯಾಣಿಕರು ಸೂಕ್ತ ಪ್ರಯಾಣದ ದಾಖಲೆ, ಟಿಕೆಟ್‌ ಹೊಂದಿರಬೇಕು. ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವವರು 72 ಗಂಟೆ ಮೊದಲಿನ ಆರ್‌ಟಿಪಿಸಿಆರ್‌ ನೆಗೆಟಿವ್‌ ಹೊಂದಿರಬೇಕು, ಏಳು ದಿನಗಳ ಕ್ವಾರಂಟೈನ್‌ಗೆ ಒಳಗಾಗಿ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಬೇಕು. ಜಿಲ್ಲೆಯ ಪಾಸಿಟಿವಿಟಿ ಕಳೆದೊಂದು ವಾರದಲ್ಲಿ ಶೇ.0.20ರಷ್ಟಿದ್ದು ಮಣಿಪಾಲದಲ್ಲಿ ಕಳೆದೆರಡು ವಾರದಲ್ಲಿ 10,733 ಜನರನ್ನು ಪರೀಕ್ಷೆಗೊಳಪಡಿಸಿದ್ದು, 35 ಪ್ರಕರಣ ಪಾಸಿಟಿವ್‌(ಶೇ.0.30 ಪಾಸಿಟಿವಿಟಿ) ಕಂಡು ಬಂದಿದೆ. 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್‌ ಲಸಿಕೆಗೆ ಸಿದ್ಧತೆ ನಡೆದಿದೆ ಎಂದರು. ಡಿ.30ರಿಂದ ಜ.2 ಕ್ಲಬ್‌, ಪಬ್‌, ರೆಸ್ಟೋರೆಂಟ್‌, ಹೋಟೆಲ್‌, ಖಾಸಗಿ ಸ್ಥಳಗಳಲ್ಲಿ ಡಿಜೆ, ಆರ್ಕೆಸ್ಟ್ರಾ, ಸಮೂಹ ನೃತ್ಯ ಸಹಿತ ಯಾವುದೇ ವಿಶೇಷ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಹೊಸ ವರ್ಷ ಆಚರಣೆಗೆ ಸಾರ್ವಜನಿಕ ಸ್ಥಳ ಸೇರಿದಂತೆ ರಸ್ತೆ, ಉದ್ಯಾನವನ, ಆಟದ ಮೈದಾನ ಬಳಸುವಂತಿಲ್ಲ. ಅಪಾರ್ಟ್‌ಮೆಂಟ್‌ ಅಸೋಸಿಯೇಶನ್‌ಗೆ ಸಂಬಂಧಿಸಿ ಸಾಮಾಜಿಕ ಅಂತರ ಹಾಗೂ ಕೋವಿಡ್‌ ಸಮುಚಿತ ವರ್ತನೆಯೊಂದಿಗೆ ತಮ್ಮ ಆವರಣದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿದೆ. ಗುಂಪು ನೃತ್ಯ ಡಿಜೆ/ಡಾನ್ಸ್‌ ಪ್ಲೋರ್‌ನಂತಹ ಯಾವುದೇ ವಿಶೇಷ ಕಾರ್ಯಕ್ರಮ ಆಯೋಜಿಸುವಂತಿಲ್ಲ, ಅದಕ್ಕೆ ಸಂಘಟಕರೇ ಜವಾಬ್ದಾರಿ. ಕಾನೂನು ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯಿದೆಯಡಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
  • ಉಡುಪಿ ಜಿಲ್ಲೆಯಲ್ಲಿ ಈ ತನಕ ಎರಡು ಓಮಿಕ್ರಾನ್‌ ಪ್ರಕರಣ ಪತ್ತೆಯಾಗಿದ್ದು ಜಿನೋಮಿಕ್ಸ್‌ ಸೀಕ್ವೆನ್ಸಿಂಗ್‌ ನಿಟ್ಟಿನಲ್ಲಿ ಈ ತನಕ 180 ಮಾದರಿ ಕಳುಹಿಸಿದ್ದು 58 ಮಾದರಿಗಳ ಫಲಿತಾಂಶ ಬರಲು ಬಾಕಿಯಿದೆ.
  • ಜ.7ರ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ 2022ರ ಜ.18ರಂದು ನಡೆಯುವ ಉಡುಪಿ ಪರ್ಯಾಯಕ್ಕೆ ಸಂಬಂಧಿಸಿ ಪರ್ಯಾಯ ಸ್ವಾಗತ ಸಮಿತಿ ಪದಾಧಿಕಾರಿಗಳ ಸಭೆ ಕರೆದು ಸಮಾಲೋಚಿಸಲಾಗುವುದು.
ಫಸ್ಟ್‌ ಡೋಸ್‌: ಶೇ.96, ಸೆಕೆಂಡ್‌ ಡೋಸ್‌: ಶೇ.82 ಪ್ರಗತಿ 18 ವರ್ಷ ಮೇಲ್ಪಟ್ಟ 9,99,000 ಜನರಿಗೆ ಕೋವಿಡ್‌-19 ಲಸಿಕೆ ನೀಡುವ ಗುರಿಯಿದ್ದು ಮೊದಲ ಡೋಸ್‌ 9,59,341(ಶೇ.96.03), ಎರಡನೇ ಡೋಸ್‌: 8,28,826(ಶೇ.82.97) ಜನರಿಗೆ ನೀಡಲಾಗಿದೆ. ಎರಡನೇ ಡೋಸ್‌ ಪಡೆಯಲು ಇನ್ನೂ 78,896 ಮಂದಿ ಬಾಕಿ ಇದ್ದಾರೆ. ಕನ್ನಡ, ತುಳು, ಕುಂದಾಪುರ ಕನ್ನಡ, ಉರ್ದು, ಕೊಂಕಣಿ ಭಾಷೆಗಳಲ್ಲಿ ಕೋವಿಡ್‌ ಲಸಿಕೆ ಪಡೆಯುವ ನಿಟ್ಟಿನಲ್ಲಿಆಡಿಯೋ ವಿಷುವಲ್‌ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಲಾಗಿದೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟ ಕೋಮಾರ್ಬಿಡಿಟಿ ಇರುವವರಿಗೆ ಕೋವಿಡ್‌ ಲಸಿಕೆಯ ಬೂಸ್ಟರ್‌ ಡೋಸ್‌ ನೀಡಲು ಕೇಂದ್ರ, ರಾಜ್ಯದ ಮಾರ್ಗಸೂಚಿ ಬಂದ ತಕ್ಷಣ ಕ್ರಮ ವಹಿಸಲಾಗುವುದು.


from India & World News in Kannada | VK Polls https://ift.tt/3FyQj45

ಹೊಸ ವರ್ಷಕ್ಕೆ ನೈಟ್‌ ಕರ್ಫ್ಯೂ ಹಿಡಿತ; ಕರಾವಳಿಯಲ್ಲಿ ಭೂತಕೋಲ, ಯಕ್ಷಗಾನಕ್ಕೂ ಹೊಡೆತ

ಮಂಗಳೂರು: ಸಂಭಾವ್ಯ ಒಮಿಕ್ರಾನ್‌ ಸೋಂಕು ಹರಡುವುದನ್ನು ತಪ್ಪಿಸಲು ರಾಜ್ಯದಲ್ಲಿ ಡಿ.28ರಿಂದಲೇ ಜಾರಿಯಾಗಲಿದ್ದು, ಜ.7ರವರೆಗೆ ಇರಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನೈಟ್‌ ಕರ್ಫ್ಯೂ ಜಾರಿಯಾಗಲಿದ್ದು, ರಾತ್ರಿ ವ್ಯಾಪಾರ ವಹಿವಾಟುಗಳಿಗೆ ಹೊಡೆತ ಬೀಳಲಿದೆ. ಹೊಸ ವರ್ಷದ ಸಂಭ್ರಮದ ಕಾರ್ಯಕ್ರಮ, ಹೋಟೆಲ್‌ ಉದ್ಯಮದ ಮೇಲೂ ಬಲವಾದ ಪೆಟ್ಟು ಬೀಳಲಿದೆ. ಎರಡು ವರ್ಷಗಳ ಅವಧಿಯಲ್ಲಿ ಕೋವಿಡ್‌ ಪ್ರಕರಣಗಳು ಜನತೆಗೆ ಸಾಕಷ್ಟು ಕಂಟಕ ತಂದಿತ್ತು. ತೀವ್ರಗತಿಯಲ್ಲಿ ಏರಿಕೆ ಕಂಡ ಕೋವಿಡ್‌ನಿಂದಾಗಿ ಹಲವು ತಿಂಗಳುಗಳ ಕಾಲ ಲಾಕ್‌ಡೌನ್‌ ಮಾಡಲಾಗಿತ್ತು. ಜನತೆ ಉದ್ಯೋಗವಿಲ್ಲದೆ ನಿತ್ಯದ ಊಟಕ್ಕೂ ಕಷ್ಟಪಡುವ ಸ್ಥಿತಿ ಎದುರಾಗಿತ್ತು. ಅಂಗಡಿ, ಹೋಟೆಲ್‌, ಮಾಲ್‌ಗಳು ಬಂದ್‌ ಆಗಿದ್ದರಿಂದ ವ್ಯಾಪಾರಿಗಳು ಸಾಕಷ್ಟು ನಷ್ಟ ಅನುಭವಿಸಿದ್ದರು. ತಮ್ಮಷ್ಟಕ್ಕೆ ದುಡಿದು ತಮ್ಮ ಪಾಡಿಗೆ ಬದುಕು ಕಟ್ಟಿಕೊಂಡಿದ್ದ ಜನತೆ ಕೂಡ ಯಾರೋ ನೀಡುವ ಆಹಾರ ಕಿಟ್‌ಗೆ ಕೈಯೊಡ್ಡುವ ಸ್ಥಿತಿ ಎದುರಾಗಿತ್ತು. ಹಲವು ತಿಂಗಳುಗಳ ಬಳಿಕ ಕೋವಿಡ್‌ ದೂರವಾಗಿ ಜನತೆ ಸಹಜ ಸ್ಥಿತಿಗೆ ಮರಳುತ್ತಿದ್ದಂತೆಯೇ ಈಗ ಒಮಿಕ್ರಾನ್‌ ಭೀತಿ ಎದುರಾಗಿ ಸರಕಾರ ನೈಟ್‌ ಕರ್ಫ್ಯೂ ವಿಧಿಸಿ ಸರಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಒಮಿಕ್ರಾನ್‌-ಕೋವಿಡ್‌ ಇನ್ನಷ್ಟು ಹರಡುವ ಸಾಧ್ಯತೆ ಇರುವುದರಿಂದ ನೈಟ್‌ ಕರ್ಫ್ಯೂ ಮೂಲಕ ತಡೆಯೊಡ್ಡಲಾಗಿದೆ. ಸೋಂಕು ಹರಡುವಿಕೆ ತಡೆಯಲು ಜನತೆ ಸ್ವಯಂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲೇಬೇಕಿದೆ. ವರ್ಷಾಚರಣೆ ಗುಂಗಿನಲ್ಲಿ ಗುಂಪು ಸೇರಿ ಮೈ ಮರೆತು ಸೋಂಕು ತಗುಲಿಸಿಕೊಂಡರೆ ಮನೆ ಮಂದಿಗೂ ಆಪತ್ತು ತಪ್ಪಿದ್ದಲ್ಲ. ವಾರ್ಷಿಕೋತ್ಸವ, ಯಕ್ಷಗಾನಕ್ಕೂ ಆತಂಕತುಳುನಾಡಿನಲ್ಲಿ ಯಕ್ಷಗಾನ, ಕಂಬಳ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ನೈಟ್‌ ಕರ್ಫ್ಯೂದಿಂದ ಆತಂಕ ಸೃಷ್ಟಿಯಾಗಿದೆ. ಕಲೆಯನ್ನೇ ನಂಬಿಕೊಂಡಿರುವ ಕಲಾವಿದರು ಎರಡು ವರ್ಷಗಳ ಕೋವಿಡ್‌ ಲಾಕ್‌ಡೌನ್‌ ಕಂಗೆಟ್ಟಿದ್ದರು. ಕೆಲವೆಡೆ ರಾತ್ರಿ ನಡೆಯಬೇಕಿದ್ದ ಯಕ್ಷಗಾನವನ್ನು ಮಧ್ಯಾಹ್ನವೇ ನಡೆಸಿ, ಮುಗಿಸುವ ಘೋಷಣೆ ಮಾಡಿದ್ದಾರೆ. ಮಧ್ಯಾಹ್ನ ಯಕ್ಷಗಾನಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಪ್ರದರ್ಶನ ಡಿ.28ರಿಂದ ಜ.7ರ ತನಕ ಕಾಲಮಿತಿಗೆ ಅನುಗುಣವಾಗಿ ಸಂಜೆ ಗಂಟೆ 3.30ರಿಂದ ರಾತ್ರಿ 9ರ ವರೆಗೆ ನಡೆಯಲಿದೆ. ರಾಜ್ಯ ಸರಕಾರದ ಕೋವಿಡ್‌/ಒಮಿಕ್ರಾನ್‌ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಆದೇಶದ ಪ್ರಕಾರ ಬದಲಾವಣೆ ಮಾಡಿಕೊಂಡಿದ್ದು, ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಭಕ್ತಾಭಿಮಾನಿಗಳು ಹಾಗೂ ಶ್ರೀ ಕಟೀಲು ಮೇಳಗಳ ಎಲ್ಲ ಸೇವಾದಾರರು ಸಹಕರಿಸುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ.


from India & World News in Kannada | VK Polls https://ift.tt/3ew9NKN

ಮನೆಗೆ ಸೀಮಿತ ಹೊಸ ವರ್ಷಾಚರಣೆ; ಮಾಲ್‌, ಹೋಟೆಲ್‌, ರೆಸ್ಟೋರೆಂಟ್ ಗಳಲ್ಲಿಲ್ಲ ಸಂಭ್ರಮಾಚರಣೆ!

ಆರ್‌.ಶ್ರೀಧರ್‌ ರಾಮನಗರ ರಾಮನಗರ: ಹೊಸ ವರ್ಷಚಾರಣೆ ಹಿನ್ನಲೆಯಲ್ಲಿ ಎಲ್ಲಿಯಾದರೂ ಪ್ರವಾಸಕ್ಕೆ ಹೋಗುವ ಪ್ಲ್ಯಾನ್‌ ಮಾಡಿಕೊಂಡಿದ್ದರೆ, ಬದಲಿಸಿಕೊಳ್ಳುವುದು ಒಳ್ಳೆಯದು. ಕೊರೊನಾದ ಹೊಸ ಮಾದರಿ ಒಮಿಕ್ರಾನ್‌ ದಾಳಿ ತಡೆಯಲು ಜಿಲ್ಲೆಯಲ್ಲೂ ಕಟ್ಟುನಿಟ್ಟಿನ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾತ್ರಿ 10ಗಂಟೆ ಬಳಿಕದ ಸಂಭ್ರಮಾಚರಣೆಗೆ ಜಿಲ್ಲಾಡಳಿತ ಬ್ರೇಕ್‌ ಹಾಕಿದೆ. ಕಳೆದ ವರ್ಷವೂ ನಿರ್ಬಂಧವಿತ್ತುಕಳೆದ ವರ್ಷ ಜಿಲ್ಲೆಯಲ್ಲಿನ ಪ್ರಮುಖ ಪ್ರವಾಸಿ ತಾಣಗಳ ಪ್ರವೇಶಕ್ಕೆ ಜಿಲ್ಲಾಡಳಿತ ಮೂರು ದಿನಗಳ ನಿರ್ಬಂಧ ವಿಧಿಸಿತ್ತು. 2020ರ ಡಿಸೆಂಬರ್‌ 30ರಿಂದ 2021ರ ಜನವರಿ 2ರವರೆಗು ಜಿಲ್ಲೆಯ ಪ್ರಮುಖ ತಾಣಗಳಿಗೆ ನಿಷೇಧಾಜ್ಙೆ ಹೊರಡಿಸಿತ್ತು. ಚನ್ನಪಟ್ಟಣದ ಕಣ್ವ ಜಲಾಶಯ, ಮಾಗಡಿಯ ಸಾವನದುರ್ಗ, ಮಂಚನಬೆಲೆ ಜಲಾಶಯ, ಕನಕಪುರದ ಸಂಗಮ-ಮೇಕೆದಾಟು, ಚುಂಚಿ ಫಾಲ್ಸ್‌ ಜಲಾಶಯಗಳಿಗೆ ಮೂರು ದಿನಗಳ ಕಾಲ ಸಾರ್ವಜನಿಕರು ಭೇಟಿಯನ್ನು ನಿಷೇಧಿಸಿತ್ತು. ಇನ್ನೂ ನಿರ್ಧಾರವಿಲ್ಲ ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧ ಹೇರುವ ಬಗ್ಗೆ ಈ ವರ್ಷ ಈ ಬಗ್ಗೆ ಈವರೆಗೂ ಜಿಲ್ಲಾಡಳಿತ ನಿರ್ಧಾರ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಬಹುದು. ಇದೆಲ್ಲದಕ್ಕಿಂತ ಹೆಚ್ಚಾಗಿ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೂ ಕರ್ಫ್ಯೂ ಜಾರಿಯಲ್ಲಿರುವುದರಿಂದ ಹೋಟಲ್‌ಗಳಲ್ಲಿ ಮಧ್ಯರಾತ್ರಿ ಪಾರ್ಟಿಗಳು ನಡೆಯುವಂತಿಲ್ಲ. ಲಾಂಗ್‌ ರೈಡ್‌ ನೆಪದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೇಕಾಬಿಟ್ಟಿ ಓಡಾಡುವಂತಿಲ್ಲ. ಮನೆಯೊಳಗೆ ಸೀಮಿತ ಈ ಭಾರಿಯ ಹೊಸ ವರ್ಷಚಾರಣೆ ಕೇವಲ ಮನೆಗಳಿಗಷ್ಟೆ ಸೀಮಿತಗೊಳ್ಳಬೇಕಿದೆ. ಕರ್ಫ್ಯೂ ಹಿನ್ನಲೆಯಲ್ಲಿ ಮನೆಮನೆಗಳಲ್ಲಿ ಮಾತ್ರವೇ ನೂತನ ವರ್ಷವನ್ನು ಸ್ವಾಗತಿಸಿಕೊಳ್ಳಬೇಕಿದೆ. ಮಾತ್ರವಲ್ಲ, ಸಾಲುಸಾಲು ಸರಕಾರಿ ರಜೆ ಇದೆ. ಡಿಸೆಂಬರ್‌ 31 ಶುಕ್ರವಾರ. ಹೀಗಾಗಿ ಶನಿವಾರ ರಜೆ ಹಾಕಿದರೆ, ಭಾನುವಾರ ರಜೆ. ಹೀಗಾಗಿ ಕಡೆ ಘಳಿಗೆಯಲ್ಲಿ ಪ್ರವಾಸಿತಾಣಗಳ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದರೂ ಅಚ್ಚರಿ ಇಲ್ಲ. ಹೋಟಲ್‌ಗಳಲ್ಲೂ ಆಚರಣೆ ಇಲ್ಲ ಕಳೆದ 22 ವರ್ಷಗಳಿಂದ ಹೊಸ ವರ್ಷಚಾರಣೆಗೆ ಖ್ಯಾತಿ ಪಡೆದಿದ್ದ ಈಗಲ್‌ಟನ್‌ ರೆಸಾರ್ಟ್‌ ಈ ಭಾರಿ ಕೋವಿಡ್‌ ಕಾರಣಕ್ಕೆ ತಟಸ್ಥಗೊಂಡಿದೆ. ಯುವಸಮೂಹಕ್ಕೆ ಅತ್ಯಾಕರ್ಷಕ ತಾಣವಾಗಿದ್ದ ಈಗಲ್‌ ಟನ್‌ನಲ್ಲಿ ಈ ಭಾರಿ ವರ್ಷಾಚರಣೆಗೆ ಪಾರ್ಟಿ ಇಲ್ಲದಿರುವುದು ಪಾರ್ಟಿ ಪ್ರಿಯರ ಅಸಮಾಧಾನಕ್ಕೂ ಕಾರಣವಾಗಿದೆ. ಬಿಡದಿಯಲ್ಲಿನ ಖಾಸಗಿ ರೆರ್ಸಾಟ್‌ಗಳು, ರಾಸ್ಥ, ಈಗಲ್‌ಟನ್‌, ಹೀಲ್‌ವ್ಯೂ ರೆಸಾರ್ಟ್‌ಗಳಲ್ಲಿ ಪ್ರತಿ ವರ್ಷ ನೈಟ್‌ ಪಾರ್ಟಿ ನಡೆಯುತ್ತಿದ್ದವು. ಡಿಸೆಂಬರ್‌ 31ರ ಮಧ್ಯರಾತ್ರಿಗಾಗಿ ಕಾಯುತ್ತಿದ್ದ ಸಾರ್ವಜನಿಕರು, ನೈಟ್‌ ಕರ್ಫೂ ಹಿನ್ನಲೆಯಲ್ಲಿ ಈ ಭಾರಿ ಎಲ್ಲ ಆಚರಣೆಗಳನ್ನು ತಮ್ಮ ಮನೆಗೆ ಸೀಮಿತಗೊಳಿಸಿಕೊಳ್ಳಬೇಕಿದೆ. ರಸ್ತೆ ಮಧ್ಯೆ ಮೋಜಿಗೆ ಅವಕಾಶವಿಲ್ಲ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪಾರ್ಟಿ, ಮೋಜು ಮಸ್ತಿ ಹೆಚ್ಚಾಗುವ ಸಾಧ್ಯತೆಯು ಇದೆ. ಹೊಸ ವರ್ಷದ ಆಚರಣೆ ನೆಪದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಪೊಲೀಸ್‌ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ರಸ್ತೆ ಮಧ್ಯದಲ್ಲಿ ಕೇಕ್‌ ಕತ್ತರಿಸಲು ಅವಕಾಶ ನೀಡಿಲ್ಲ. ಇದಲ್ಲದೇ, ನಗರದ ಪ್ರಮುಖ ವೃತ್ತದಲ್ಲಿಆಚರಣೆ ನಡೆಸುವುದನ್ನು ನಿಷೇಧಿಸಿದೆ. ಇನ್ನು ಡ್ರಿಂಕ್ ಅಂಡ್‌ ಡ್ರೈವ್‌ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಆಯಾ ಕಟ್ಟಿನ ಪ್ರದೇಶದಲ್ಲಿನ ಪೊಲೀಸ್‌ ತಪಾಸಣೆ ಡಿ.31ರ ಮದ್ಯರಾತ್ರಿ 2 ಗಂಟೆ ವರೆಗೂ ಮುಂದುವರಿಯಲಿದೆ. ದೇವಾಲಯಗಳಿಗೆ ಪ್ರವೇಶ ರೇವಣಸಿದ್ದೇಶ್ವರ ಬೆಟ್ಟ, ಮಳೂರಿನ ಅಪ್ರಮೇಯ ಸ್ವಾಮಿ ದೇವಾಲಯ, ಲಕ್ಷ್ಮಿ ನರಸಿಂಹಸ್ವಾಮಿ ಬೆಟ್ಟ, ಕನಕಪುರದ ಶಿವಾಲದಪ್ಪನ ಬೆಟ್ಟ, ಶಿವನಾಂಕೇಶ್ವರ ದೇವಾಲಯ, ಎಳಗಳ್ಳಿ ಕಾಯಿಮುದ್ದಮ್ಮ, ಕಲ್ಲಹಳ್ಳಿಯ ಚಿಕ್ಕತಿರುಪತಿ, ರಾಮದೇವರ ಬೆಟ್ಟ ರಾಮದೇವಾಲಯ, ಮಾಗಡಿಯ ರಂಗನಾಥಸ್ವಾಮಿ ದೇವಾಲಯ, ಕಲ್ಲೂರ ಆಂಜನೇಯ ಸ್ವಾಮಿ, ಕೆಂಗಲ್‌ನ ಆಂಜನೇಯ ದೇವಾಲಯ, ಕೋತಿ ಆಂಜನೇಯ ಸ್ವಾಮಿ ದೇವಾಲಯ ಸೇರಿದಂತೆ ಇನ್ನಿತರ ದೇವಾಲಯಗಳಲ್ಲಿ ಜ.1ರಂದು ವಿಶೇಷ ಪೂಜೆಗಳು ನಡೆಯಲಿವೆ. ಇಲ್ಲಿಗೆ ಬರಬಹುದು ಹೊಸ ವರ್ಷದ ದಿನ ಜಾನಪದ ಲೋಕ, ರೇವಣ ಸಿದ್ದೇಶ್ವರ ಸ್ವಾಮಿ ಬೆಟ್ಟ, ರಾಮದೇವರಬೆಟ್ಟ, ವಂಡರ್‌ ಲಾ, ಇನೋವೆಟಿವ್‌ ಫಿಲ್ಮ್‌ ಸಿಟಿ, ಸ್ಥಳೀಯ ನಿವಾಸಿಗಳು ರಾಮನಗರದ ರಂಗರಾಯನದೊಡ್ಡಿ ಕೆರೆ ಸೇರಿದಂತೆ ಇನ್ನಿತರ ಪ್ರದೇಶಗಳು ಪ್ರವಾಸಿಗರಿಗೆ ಮುಕ್ತಗೊಂಡಿವೆ. ಆದರೆ, ಇಲ್ಲಿಯು ಬೆಳಗ್ಗೆಯಿಂದ ಸಂಜೆವರೆಗು ಮಾತ್ರವೇ ಅವಕಾಶ ನೀಡುವ ಸಾಧ್ಯತೆಗಳಿವೆ. ಕುಡಿದು ವಾಹನ ಚಾಲನೆ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹೆದ್ದಾರಿಗಳಲ್ಲಿ ಆಚರಣೆಗಳಲ್ಲಿ ನೆಪದಲ್ಲಿ ಸವಾರರಿಗೆ ತೊಂದರೆ ನೀಡುವಂತಿಲ್ಲ. ನಿಯಮಗಳನ್ನು ಉಲ್ಲಂಘಿಸಿದರೆ ಶಿಕ್ಷೆ ತಪ್ಪಿದ್ದಲ್ಲ. ನೈಟ್‌ ಕಫ್ರ್ಯೂ ಜಾರಿಯಲ್ಲಿರುವುದರಿಂದ ಬಹುತೇಕ ಹೋಟಲ್‌ಗಳಲ್ಲಿ ರಾತ್ರಿ ಪಾರ್ಟಿಗಳು ನಡೆಯುವುದಿಲ್ಲ. ಸರಕಾರದ ನಿಯಮಗಳನ್ನು ಯಾರೊಬ್ಬರು ಉಲ್ಲಂಘಿಸುವಂತಿಲ್ಲ. ಎಸ್‌.ಗಿರೀಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿರಾಮನಗರ ನೈಟ್‌ ಕಫ್ರ್ಯೂ ಜಾರಿಯಲ್ಲಿರುವುದರಿಂದ ಯಾರೊಬ್ಬರು ರಾತ್ರಿ ಆಚರಣೆಗೆ ಹೊರ ಹೋಗುವುದಿಲ್ಲ. ಆದರೆ, ಪ್ರವಾಸಿ ತಾಣಗಳಿಗೆ ಕಳೆದ ಭಾರಿಯಂತೆ ನಿರ್ಬಂಧ ಹೇರಬಾರದು. ಕೋವಿಡ್‌ ನಿಯಮಗಳ ಪಾಲನೆ ಮೂಲಕ ಮುಕ್ತ ಅವಕಾಶ ನೀಡಬೇಕು. ಇದರಿಂದ ಪ್ರವಾಸೋದ್ಯಮ ಕೊಂಚ ಚೇತರಿಸಿಕೊಳ್ಳಲಿದೆ. ವಿವೇಕ್‌, ಕನಕಪುರ ನಿವಾಸಿಕಳೆದ ವರ್ಷದಂತೆ ಈ ವರ್ಷವು ಯಾವುದೇ ಪಾರ್ಟಿ ನಡೆಸುತ್ತಿಲ್ಲ. ನೈಟ್‌ ಕಫ್ರ್ಯೂ ಜಾರಿಗೆ ಬರುವ ಮುನ್ನವೆ, ಮುನ್ನೆಚ್ಚರಿಕಾ ಕ್ರಮ ವಹಿಸಿ ಪಾರ್ಟಿಗಳನ್ನು ನಿಷೇಧಿಸಿದ್ದೇವೆ. ಹೋಟಲ್‌ನಲ್ಲಿ ತಂಗಿರುವವರಿಗೆ ಯಥಾ ಪ್ರಕಾರ ಸೇವೆ ನೀಡುತ್ತೇವೆ. ಮ್ಯಾಥ್ಯು, ಮ್ಯಾನೇಜರ್‌ಈಗಲ್‌ಟನ್‌ ರೆರ್ಸಾರ್ಟ್‌ , ಬಿಡದಿ


from India & World News in Kannada | VK Polls https://ift.tt/3HmKHux

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...