ಅನರ್ಹತೆ ಕುರಿತ ಕಾಯ್ದೆ ಅಧಿಕಾರ ಸಂಸತ್ತಿಗೆ ಮಾತ್ರ; ರಮೇಶ್‌ ಕುಮಾರ್ ತೀರ್ಪು ಉಲ್ಲೇಖಿಸಿದ ಸುಪ್ರೀಂ

ಹೊಸದಿಲ್ಲಿ: ಪ್ರಕರಣಗಳನ್ನು ನಿರ್ದಿಷ್ಟ ಅವಧಿಯೊಳಗೆ ಇತ್ಯರ್ಥಪಡಿಸುವ ವಿಚಾರವಾಗಿ ಸಂಸತ್ತು ಮಾತ್ರವೇ ಕಾಯಿದೆ ರೂಪಿಸಬಹುದು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಸ್ಪಷ್ಟಪಡಿಸಿದೆ. ಅನರ್ಹತೆ ಕುರಿತು ಸ್ಪೀಕರ್‌ ಅಥವಾ ಸದನದ ಅಧ್ಯಕ್ಷರು ನಿಗದಿತ ಕಾಲಮಿತಿಯೊಳಗೆ ತೀರ್ಮಾನ ಕೈಗೊಳ್ಳುವಂತೆ ಸೂಕ್ತ ನಿಯಮಾವಳಿ ರೂಪಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪಶ್ಚಿಮ ಬಂಗಾಳದ ಕಾಂಗ್ರೆಸ್‌ ಮುಖಂಡ ರಣಜಿತ್‌ ಮುಖರ್ಜಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠವು, ಸಂಸತ್ತು ಮಾತ್ರವೇ ಈ ಕುರಿತು ಸೂಕ್ತ ಕಾಯಿದೆ ರೂಪಿಸಬಹುದು ಎಂದು ಸ್ಪಷ್ಟಪಡಿಸಿತು. ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಮತ್ತು ಹೃಷಿಕೇಶ್‌ ರಾಯ್‌ ಪೀಠದಲ್ಲಿದ್ದ ಇನ್ನಿಬ್ಬರು ಸದಸ್ಯರು. ‘ಸ್ಪೀಕರ್‌ಗಳು ಅನರ್ಹತೆ ಕುರಿತು ಕಾಲಮಿತಿಯೊಳಗೆ ನಿರ್ಧಾರ ಕೈಗೊಳ್ಳುವುದು ಮತ್ತು ಎಷ್ಟು ಅವಧಿವರೆಗೆ ಅನರ್ಹಗೊಳಿಸಬೇಕು ಎಂಬ ವಿಚಾರವಾಗಿ ನನ್ನ ನಿಲುವನ್ನು ಕರ್ನಾಟಕ ಶಾಸಕರ ಪ್ರಕರಣದಲ್ಲಿ ಸ್ಪಷ್ಟಪಡಿಸಿದ್ದೇನೆ. ಹಿರಿಯ ವಕೀಲ ಕಪಿಲ್‌ ಸಿಬಲ್‌ ಈ ವಿಷಯ ಪ್ರಸ್ತಾಪಿಸಿದ್ದರು. ಅನರ್ಹತೆ ಕರಿತಾದ ಸಂವಿಧಾನದ 10ನೇ ಪರಿಚ್ಚೇದಕ್ಕೆ ಸಂಬಂಧಿಸಿ ಸಂಸತ್ತು ಮಾತ್ರವೇ ಸೂಕ್ತ ಕಾಯಿದೆ ರೂಪಿಸಬೇಕು ಎಂದು ಸಿಜೆಐ ರಮಣ ಹೇಳಿದರು. ಕರ್ನಾಟಕದ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಶಾಸಕರನ್ನು ಹಾಲಿ ವಿಧಾನಸಭೆ ಅವಧಿ ಮುಕ್ತಾಯದವರೆಗೆ ಅಂದರೆ 2023ರವರೆಗೂ ಅನರ್ಹಗೊಳಿಸಿದ್ದನ್ನೂ ನ್ಯಾ.ರಮಣ ಪ್ರಸ್ತಾಪಿಸಿದರು.


from India & World News in Kannada | VK Polls https://ift.tt/2TrE2vC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...