ಹೊಸದಿಲ್ಲಿ: ಮುಂಬರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯ ಮೆಗಾ ಹರಾಜಿಗೆ ತಂಡದ ಸ್ಪಿನ್ನರ್ ಅವರನ್ನು ಫ್ರಾಂಚೈಸಿಗಳು ಪರಿಗಣಿಸಬೇಕೆಂದು ಸ್ಪಿನ್ ದಿಗ್ಗಜ ಆಗ್ರಹಿಸಿದ್ದಾರೆ. ಐಪಿಎಲ್ ಫ್ರಾಂಚೈಸಿಗಳು ಬಹುತೇಕ ಸ್ಥಳೀಯ ಸ್ಪಿನ್ನರ್‌ಗಳ ಮೇಲೆ ಹೆಚ್ಚಿನ ಒಲವು ಹೊಂದಿರುವ ಹಿನ್ನೆಲೆಯಲ್ಲಿ ವಾನಿಂದು ಹಸರಂಗ ಅವರಿಗೆ ಅವಕಾಶ ನೀಡುವುದು ನಿಜಕ್ಕೂ ಕಠಿಣ ಕರೆ ಎಂಬುದನ್ನು ಇದೇ ವೇಳೆ ಮುರಳಿಧರನ್ ಹೇಳಿದರು. ಆದರೆ, 23ರ ಪ್ರಾಯದ ಯುವ ಸ್ಪಿನ್ನರ್ ಶ್ರೀಮಂತ ಫ್ರಾಂಚೈಸಿ ಲೀಗ್ ಟೂರ್ನಿಯಲ್ಲಿ ಅವಕಾಶ ಪಡೆದುಕೊಳ್ಳುವ ಬಗ್ಗೆ ಸ್ಪಿನ್ ದಿಗ್ಗಜ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ ವಿರುದ್ಧ ನಡೆಯುತ್ತಿರುವ ಸೀಮಿತ ಓವರ್‌ಗಳ ಸರಣಿಯಲ್ಲಿ ಶ್ರೀಲಂಕಾ ತಂಡದ ಪರ ವನಿಂದು ಹಸರಂಗ ಸ್ಟ್ಯಾಂಡ್ ಔಟ್ ಬೌಲರ್ ಆಗಿದ್ದಾರೆ. ಭಾನುವಾರ ಕೊಲಂಬೊದಲ್ಲಿ ನಡೆದಿದ್ದ ಪಂದ್ಯದಲ್ಲಿ ಹಸರಂಗ ನಾಲ್ಕು ಓವರ್‌ಗಳಿಗೆ 28 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಆ ಮೂಲಕ ಭಾರತವನ್ನು 164 ರನ್‌ಗಳಿಗೆ ನಿಯಂತ್ರಿಸಲು ನೆರವಾಗಿದ್ದರು. ಆದರೆ, ಬ್ಯಾಟಿಂಗ್ ವೈಫಲ್ಯದಿಂದ ಶ್ರೀಲಂಕಾ 38 ರನ್‌ಗಳಿಂದ ಸೋಲು ಅನುಭವಿಸಿತ್ತು. ಒಂದು ಕಡೆ ಶ್ರೀಲಂಕಾ ತಂಡ ಹೆಣಗಾಡುತ್ತಿದ್ದರೆ, ವಾನಿಂದು ಹಸರಂಗ ಬೌಲಿಂಗ್‌ನಲ್ಲಿ ಪ್ರವಾಸಿ ತಂಡಕ್ಕೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದಾರೆ. ಒಮ್ಮೆ ಐಪಿಎಲ್‌ನಲ್ಲಿ ಆಡಲು ಅವಕಾಶ ಪಡೆದುಕೊಂಡರೆ, ಹಸರಂಗ ತಂಡದಲ್ಲಿ ನಿಯಮಿತ ಸದಸ್ಯರಾಗಲಿದ್ದಾರೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋಗೆ ಮುರಳಿಧರನ್ ಹೇಳಿದ್ದಾರೆ. "ಐಪಿಎಲ್ ಫ್ರಾಂಚೈಸಿಗಳು ಈತನ ಕಡೆ ನೋಡಬೇಕಾಗಿದೆ. ಆದರೆ, ತಂಡದಲ್ಲಿ ಅವಕಾಶ ಪಡೆಯುವ ವಿಷಯದಲ್ಲಿ ಹಸರಂಗಗೆ ಸ್ಥಳೀಯ ಸ್ಪಿನ್ನರ್‌ಗಳು ಕಠಿಣ ಪೈಪೋಟಿ ಎದುರಾಗಲಿದೆ. ಆದರೆ, ವಿದೇಶಿ ಸ್ಪಿನ್ನರ್‌ಗಾಗಿ ಎದುರು ನೋಡುತ್ತಿರುವ ಯಾವುದಾದರೂಂದು ಫ್ರಾಂಚೈಸಿ ಈತನಿಗೆ ಅವಕಾಶ ನೀಡಬೇಕು," ಎಂದು ಶ್ರೀಲಂಕಾ ಮಾಜಿ ಸ್ಪಿನ್ನರ್ ತಿಳಿಸಿದ್ದಾರೆ. "ಇದು ನಿಜಕ್ಕೂ ಟ್ರಿಕ್ಕಿ ಸಂಗತಿ. ಭವಿಷ್ಯ ವಾನಿಂದು ಹಸರಂಗ ಅವರನ್ನು ಯಾವುದಾದರೂಂದು ಫ್ರಾಂಚೈಸಿ ಖರೀದಿಸಬಹುದು. ಆದರೆ, ಅವರಿಗೆ ಅಂತಿಮ 11ರಲ್ಲಿ ಅವಕಾಶ ನೀಡುವುದು ಸುಲಭದ ವಿಷಯವಲ್ಲ. ತಂಡದಲ್ಲಿ ಅವಕಾಶ ಪಡೆದುಕೊಂಡು ಒಂದು ಅಥವಾ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದೇ ಆದಲ್ಲಿ ಹಸರಂಗ ಫ್ರಾಂಚೈಸಿಯಲ್ಲಿ ನಿಯಮಿತ ಸದಸ್ಯರಾಗುತ್ತಾರೆ," ಎಂದು ಮುರಳಿಧರನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಓಡಿಐ ಸರಣಿಯಲ್ಲಿಯೂ ವಾನಿಂದು ಹಸರಂಗ ಮೂರು ವಿಕೆಟ್‌ಗಳನ್ನು ತಮ್ಮ ಕಿಸೆಗೆ ಹಾಕಿಕೊಳ್ಳುವ ಮೂಲಕ 4.32ರ ಮೂಲಕ ಅತ್ಯುತ್ತಮ ಎಕಾನಮಿಯನ್ನು ಹೊಂದಿದ್ದಾರೆ. ಇದರಲ್ಲಿ ಗಾಯದಿಂದಾಗಿಅವರು ಕೊನೆಯ ಓಡಿಐ ಪಂದ್ಯದಿಂದ ಹೊರಗುಳಿದಿದ್ದರು. ಅಂದಹಾಗೆ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡನೇ ಭಾಗ ಯುಎಇಯಲ್ಲಿ ಸೆ.19ಕ್ಕೆ ಆರಂಭಗೊಂಡು ಅಕ್ಟೋಬರ್ 5ಕ್ಕೆ ಫೈನಲ್ ಹಣಾಹಣಿಯ ಮೂಲಕ ಅಂತ್ಯವಾಗಲಿದೆ. ಮೊದಲನೇ ಅವಧಿಯ ಮುಕ್ತಾಯಕ್ಕೆ 12 ಅಂಕಗಳನ್ನು ಕಲೆ ಹಾಕಿರುವ ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಮವಾಗಿ 2 ಹಾಗೂ 3ನೇ ಸ್ಥಾನಗಳಲ್ಲಿವೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3i1w9X8