ಬೆಂಗಳೂರು: ತಮ್ಮ ಮಾನಹಾನಿಯಾಗುವಂತ ದೃಶ್ಯ, ವಿಡಿಯೊವನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ನ್ಯಾಯಾಲಯದಿಂದ ಪಡೆದಿರುವ ಬಗ್ಗೆ ಕಾಂಗ್ರೆಸ್ ನಾಯಕರು ಕುಟುಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ , ತಮ್ಮ ವಿರುದ್ಧ ಯಾವುದೇ ವಿಡಿಯೊ ಪ್ರಸಾರ ಮಾಡದಂತೆ ಸದಾನಂದಗೌಡ ನ್ಯಾಯಾಲಯದಿಂದ ತಡೆ ಆದೇಶ ತಂದಿದ್ದಾರೆ. ಕಳ್ಳನ ಮನಸ್ಸು ಹುಳ್ಳಗೆ ಎಂಬಂತಾಗಿದೆ ಅವರ ಸ್ಥಿತಿ. ಕುಂಬಳ ಕಾಯಿ ಕಳ್ಳ ಎಂದರೆ ಅವರು ಹೆಗಲು ಮುಟ್ಟಿ ನೋಡಿಕೊಳ್ಳುವುದೇಕೆ? ಹುಳಕು ಇದ್ದರೆ ತಾನೇ ಈ ರೀತಿ ಮಾಡುವುದು ಎಂದು ವ್ಯಂಗ್ಯವಾಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮೊದಲು ಮಾಧ್ಯಮದವರು ತನಿಖೆ ನಡೆಸಿ ಯಾವ ಸಿ.ಡಿ, ಏನು ವಿಚಾರ ಎಂದು ಹೇಳಿ. ನನಗೆ ಕೇಂದ್ರ ಸಚಿವರ ಬಗ್ಗೆ ಗೌರವವಿದ್ದು, ಅವರು ಯಾವ ಕಾರಣಕ್ಕೆ ತಡೆಯಾಜ್ಞೆ ತಂದಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.
from India & World News in Kannada | VK Polls https://ift.tt/3AsXGrV