ಡೆಲ್ಟಾದ ಹೊಸ ರೂಪಾಂತರಿ 'ಪಿ1ಪಿ2' ಪತ್ತೆಗೆ ರಾಜ್ಯ ಜಿನೋಮಿಕ್‌ ಕಣ್ಗಾವಲು ಸಮಿತಿ ಸಿದ್ಧತೆ

ಬೆಂಗಳೂರು: ರಾಜ್ಯದಲ್ಲಿ ಡೆಲ್ಟಾ ಪ್ಲಸ್‌ ವೈರಾಣು ಹರಡುವಿಕೆ ಪತ್ತೆ ಹಚ್ಚುತ್ತಿರುವ ಜಿನೋಮಿಕ್‌ ಕಣ್ಗಾವಲು ಸಮಿತಿ ಇದೀಗ ಅದರದ್ದೇ ಮತ್ತೊಂದು ರೂಪಾಂತರಿಯಾಗಿರುವ ಪಿ1ಪಿ2 ವೈರಾಣುವಿನ ಬೆನ್ನು ಹತ್ತಲು ಸಿದ್ಧತೆ ನಡೆಸಿದೆ. ಹೊರ ರಾಜ್ಯಗಳಲ್ಲಿ ಈ ವೈರಾಣು ಉಲ್ಬಣಿಸುತ್ತಿರುವ ಬಗ್ಗೆ ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್ ಬಲವಾದ ಅನುಮಾನ ವ್ಯಕ್ತಪಡಿಸಿದ ಬೆನ್ನಲ್ಲೇ ವೈರಾಣು ಪತ್ತೆ ಮತ್ತು ಲಕ್ಷಣಗಳ ಬಗ್ಗೆ ತಿಳಿಯು ಪ್ರಯತ್ನ ಸಾಗಿದೆ. ಬ್ರೆಜಿಲ್‌ ಮೂಲದ ಈ ವೈರಾಣು ತೀರಾ ಆಕ್ರಮಣಕಾರಿ ಮತ್ತು ಆರೋಗ್ಯಕರ ದೇಹದ ಮೇಲೆ ನಡೆಸುವ ಹಾನಿ ಚಿಂತಾಜನಕ ಎಂದು ಐಸಿಎಂಆರ್‌ ವರದಿ ಮಾಡಿದೆ. ದೇಹದ ತೂಕದಲ್ಲಿ ನಷ್ಟ, ಶ್ವಾಸಕೋಶದಲ್ಲಿ ಗಾಯಗಳು, ಉಸಿರಾಟದಲ್ಲಿ ಸಮಸ್ಯೆ ಉಲ್ಬಣಿಸುವ ಲಕ್ಷಣವು ಪಿ1ಪಿ2 ವೈರಾಣುವಿನಲ್ಲಿದೆ ಎಂಬುದನ್ನು ಐಸಿಎಂಆರ್‌ ತಿಳಿಸಿದೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಈ ಪ್ರಕರಣ ಪತ್ತೆಯಾಗಿರುವ ಶಂಕೆ ಇದೆ. ಅಲ್ಲಿಂದ ಬರುವ ಜನರನ್ನು ತಪಾಸಣೆಗೆ ಒಳಪಡಿಸುವ ಪ್ರಕ್ರಿಯೆ ಕಠಿಣವಾಗಬೇಕು. ಎಲ್ಲ ಸಾರ್ವಜನಿಕ, ಸಾಮಾಜಿಕ ಮತ್ತು ರಾಜಕೀಯ ಸಮಾರಂಭಗಳನ್ನು ಕನಿಷ್ಠ ಡಿಸೆಂಬರ್‌ವರೆಗೆ ಸ್ಥಗಿತಗೊಳಿಸುವುದು ಅತ್ಯವಶ್ಯ ಎಂದು ಕೋವಿಡ್‌ ಕಾರ್ಯಪಡೆ ಲ್ಯಾಬ್‌ ಮತ್ತು ಪರೀಕ್ಷೆಗಳ ನೋಡಲ್‌ ಅಧಿಕಾರಿ ಡಾ. ಸಿ.ಎನ್‌. ಮಂಜುನಾಥ್‌ ಹೇಳಿದ್ದಾರೆ. 1000 ಮಾದರಿಯಲ್ಲಿ 725 ರಾಜ್ಯದಲ್ಲಿ 1000 ಸ್ವಾಬ್‌ ಮಾದರಿಗಳನ್ನು ಜಿನೋಮಿಕ್‌ ಸೀಕ್ವೆನ್ಸಿಂಗ್‌ಗೆ ಒಳಪಡಿಸಲಾಗಿದ್ದು, ಇದರಲ್ಲಿ 725ರಲ್ಲಿ ಡೆಲ್ಟಾ (ಬಿ.1.617.2) ವೈರಸ್‌ ಪತ್ತೆಯಾಗಿವೆ. ತಿಂಗಳ ಹಿಂದೆ ಕಳುಹಿಸಿದ್ದ ಸ್ವ್ಯಾಬ್‌ಗಳಲ್ಲಿ ಡೆಲ್ಟಾ ಪ್ರಕರಣ ಹೆಚ್ಚು ಬೆಳಕಿಗೆ ಬರುತ್ತಿದೆ. ಕಳೆದ ಬುಧವಾರ 318 ಪ್ರಕರಣದ ವರದಿ ಪಡೆಯಲಾಗಿತ್ತು. ಶನಿವಾರ ಪರೀಕ್ಷಗೆ ಒಳಪಡಿಸಿದ ಎಲ್ಲ ಸ್ವ್ಯಾಬ್‌ಗಳ ವರದಿ ಪಡೆಯಲಾಗಿದೆ. ಬಿಜಾಪುರ, ಉಡುಪಿ ನಂತರ ಹಾವೇರಿ, ಹಾಸನ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಹೆಚ್ಚು ಕಂಡುಬಂದಿದೆ. ಏಪ್ರಿಲ್‌ ನಂತರ ಎರಡನೇ ಅಲೆಯಲ್ಲಿ ಶೇ.62% ರಷ್ಟು ಡೆಲ್ಟಾ ಪ್ಲಸ್‌ ಹೆಚ್ಚು ಪ್ರಸರಣಗೊಂಡಿದೆ. ಇನ್ನುಳಿದ ಅಲ್ಫಾ, ಬೀಟಾ, ಗಾಮಾ ವೈರಾಣು ಹಬ್ಬುವಿಕೆ ಗಣನೀಯ ಇಳಿಕೆ ಕಂಡಿವೆ. 4 ಹೊಸ ಲ್ಯಾಬೊರೇಟರಿ ಡೆಲ್ಟಾ ಮತ್ತು ಇತರೆ ಹೊಸ ರೂಪಾಂತರಿ ವೈರಸ್‌ ಪತ್ತೆ ಮಾಡುವ ಹೊಸ 4 ವೋಲ್ಟ್‌ ಜಿನೋಮಿಕ್‌ ಸಿಕ್ವೆನ್ಸ್‌ (ಡಬ್ಲ್ಯುಜಿಎಸ್‌) ಲ್ಯಾಬರೋಟರಿಗಳ ಸ್ಥಾಪನೆಗೆ ಸರಕಾರ ಆದೇಶಿಸಿದೆ. ಈ ಮೊದಲು ನಿಮಾನ್ಸ್‌ ಮತ್ತು ನ್ಯಾಷನಲ್‌ ಸೆಂಟರ್‌ ಫಾರ್‌ ಬಯೋಲಾಜಿಕಲ್‌ ಸೈನ್ಸ್‌ ಕೇಂದ್ರಗಳಲ್ಲಿ ಮಾತ್ರ ಡಬ್ಲ್ಯುಜಿಎಸ್‌ ಉಪಕರಣ ಇರುವ ಬಗ್ಗೆ ವಿಕ ವರದಿ ಮಾಡಿತ್ತು. ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ಬೆಳಗಾವಿ ಮೆಡಿಕಲ್‌ ಕಾಲೇಜುಗಳಲ್ಲಿ ಈ ಉಪಕರಣ ಸ್ಥಾಪನೆಗೆ ಸರಕಾರ ಕ್ರಮ ಕೈಗೊಂಡಿದೆ. ಕೋವಿಡ್‌ ಪರೀಕ್ಷೆ 3 ನಿಮಿಷದಿಂದ 24 ಗಂಟೆಯೊಳಗೆ ವರದಿ ಪಡೆಯಬಹುದು. ಆದರೆ, ಡಬ್ಲ್ಯುಜಿಎಸ್‌ ಪರೀಕ್ಷೆ ಎರೆಡು ವಾರದವರೆಗೂ ಜರಗುತ್ತದೆ. ವೈರಸ್‌ ಮ್ಯಾಪಿಂಗ್‌ ಮಾಡಲು ಕಾಲಾವಕಾಶ ಬೇಕು. ಹೀಗಾಗಿ ವೈರಸ್‌ ಪತ್ತೆ ತಕ್ಷಣವೇ ಸಾಧ್ಯವಿಲ್ಲ. ಸೋಂಕಿತರು ಮುಂಜಾಗ್ರತೆ ಕ್ರಮ ಅನುಸರಿಸುವುದೇ ನಿಯಂತ್ರಣಕ್ಕೆ ಪರಿಹಾರ ಎಂದು ಜಿನೋಮಿಕ್‌ ಕಣ್ಗಾವಲು ಸಮಿತಿ ಸದಸ್ಯ ಡಾ. ವಿಶಾಲ್‌ ರಾವ್‌ ಹೇಳಿದ್ದಾರೆ.


from India & World News in Kannada | VK Polls https://ift.tt/2Tpvc1B

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...