ಐದು ಕೆಜಿ ಸ್ಫೋಟಕ ತುಂಬಿದ್ದ ಹೆಕ್ಸಾಕಾಪ್ಟರ್ ಡ್ರೋನ್ ಹೊಡೆದುರುಳಿಸಿದ ಪೊಲೀಸರು

ಜಮ್ಮು: ಪಾಕಿಸ್ತಾನದ ಜತೆಗಿನ ಭಾರತದ ಗಡಿಯಿಂದ ಸುಮಾರು ಆರು ಕಿಮೀ ಒಳಭಾಗದಲ್ಲಿ ಒಂದನ್ನು ಹೊಡೆದುರುಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಕನಾಚಕ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇದನ್ನು ಎಂದು ಗುರುತಿಸಲಾಗಿದೆ. ಈ ಹೆಕ್ಸಾಕಾಪ್ಟರ್‌ನಿಂದ ಅಂದಾಜು 5 ಕೆಜಿ ತೂಕದಷ್ಟು ಸ್ಫೋಟಕಗಳು ದೊರಕಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿ ಜಮ್ಮು ವಿಮಾನ ನಿಲ್ದಾಣದ ವಾಯು ನೆಲೆ ಬಳಿ ಎರಡು ಡ್ರೋನ್ ಸ್ಫೋಟ ದಾಳಿಗಳು ನಡೆದ ಬಳಿಕ ಈ ಪ್ರದೇಶದಲ್ಲಿ ಗಡಿಯಿಂದ ಅನೇಕ ಡ್ರೋನ್‌ಗಳು ಓಡಾಡುತ್ತಿರುವುದು ಪತ್ತೆಯಾಗಿವೆ. ಸತ್ವಾರಿ ಪ್ರದೇಶದಲ್ಲಿ ಶಂಕಿತ ಡ್ರೋನ್ ಪತ್ತೆಯಾಗಿತ್ತು. ಜುಲೈ 16ರಂದು ಜಮ್ಮು ವಾಯು ನೆಲೆ ಸಮೀಪ ಸಂಚರಿಸುತ್ತಿದ್ದ ಡ್ರೋನ್ ಒಂದು ರಾಷ್ಟ್ರೀಯ ಭದ್ರತಾ ಕಾವಲು (ಎನ್‌ಎಸ್‌ಜಿ) ನಿಯೋಜಿಸಿದ್ದ ಡ್ರೋನ್ ನಿಗ್ರಹ ವ್ಯವಸ್ಥೆಯ ರೇಡಾರ್‌ಗಳು ಪತ್ತೆಹಚ್ಚಿದ್ದವು. ಕಳೆದ ತಿಂಗಳು ವಾಯು ನೆಲೆ ಬಳಿ ಸ್ಫೋಟ ಸಂಭವಿಸಿದ ಬಳಿಕ ಅಲ್ಲಿ ಡ್ರೋನ್-ನಿಗ್ರಹ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ದೇಶದಾದ್ಯಂತ ಪ್ರಮುಖ ವಾಯು ನೆಲೆಗಳಲ್ಲಿ ಅಂತಹ ದಾಳಿಗಳನ್ನು ತಪ್ಪಿಸಲು ವಾಯು ಪಡೆ ಕ್ರಮಗಳನ್ನು ತೆಗೆದುಕೊಂಡಿದೆ. ಸಣ್ಣ ಡ್ರೋನ್‌ಗಳಿಂದ ಎದುರಾಗುವ ಅಪಾಯಗಳನ್ನು ಎದುರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.


from India & World News in Kannada | VK Polls https://ift.tt/3y2BSS9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...