ಕುಡಿದ ಮತ್ತಿನಲ್ಲಿ ಪತ್ನಿಯನ್ನೇ ಕೊಂದು ಲಕ್ವಾ ಹೊಡೀತು ಎಂದು ಕಥೆ ಕಟ್ಟಿದ ಪತಿರಾಯ..!

: ಕುಡಿದ ನಶೆಯಲ್ಲಿ ಪತ್ನಿಯನ್ನು ಕೊಲೆಗೈದು ಪಾರ್ಶ್ವವಾಯುವಿನಿಂದ ಸಾವನ್ನಪ್ಪಿದ್ದಾಳೆಂದು ಕಥೆ ಕಟ್ಟಿದ್ದ ಪತಿರಾಯನ ಮುಖವಾಡ ಕಳಚಿರುವ ಮೈಕೋ ಲೇಔಟ್‌ ಠಾಣೆ ಪೊಲೀಸರು, ಆತನನ್ನು ಬಂಧಿಸಿ ಅಸಲಿ ಬಣ್ಣ ಬಯಲಿಗೆಳೆದಿದ್ದಾರೆ. ಬಿಟಿಎಂ 2ನೇ ಹಂತದ ನಿವಾಸಿ ಅಜಿತ್‌ ಬಂಧಿತ ಆರೋಪಿ. ಸಾನಿಯಾ ಕೊಲೆಯಾದ ಮಹಿಳೆ. ಎರಡು ವರ್ಷಗಳ ಹಿಂದೆ ಅಜಿತ್‌ ಹಾಗೂ ಸಾನಿಯಾ ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿಇಬ್ಬರು ಅನ್ಯೋನ್ಯವಾಗಿದ್ದರು. ಆದರೆ, ಕೆಲ ತಿಂಗಳಿಂದ ಆರೋಪಿ ಕುಡಿದು ಬಂದು ಕ್ಷುಲ್ಲಕ ಕಾರಣಕ್ಕಾಗಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಮೇ 29ರಂದು ಸಹ ದಂಪತಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಅಜಿತ್‌, ಮನೆಯಲ್ಲಿದ್ದ ದೊಣ್ಣೆಯಿಂದ ಸಾನಿಯಾ ತಲೆಗೆ ಬಲವಾಗಿ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದ. ತೀವ್ರ ಗಾಯಗೊಂಡು ಕುಸಿದು ಬಿದ್ದ ಪತ್ನಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾನೆ. ಆದರೆ, ಸಾನಿಯಾ ಸಾವನ್ನಪ್ಪಿದ್ದಳು. ಈ ವೇಳೆ ಆಕೆ ಪಾರ್ಶ್ವವಾಯುವಿನಿಂದ ಸಾವನ್ನಪ್ಪಿದ್ದಾಳೆ ಎಂದು ಪತ್ನಿಯ ಮನೆಯವರನ್ನು ನಂಬಿಸಲು ಪತಿರಾಯ ಯತ್ನಿಸಿದ್ದ. ಸ್ಥಳಕ್ಕೆ ಬಂದ ಆಕೆಯ ಪೋಷಕರು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೈಕೋ ಲೇಔಟ್‌ ಪೊಲೀಸರಿಗೆ ದೂರು ನೀಡಿದ್ದರು. ಬಲವಾಗಿ ಹೊಡೆದಿದ್ದರಿಂದ ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ದೃಢಪಟ್ಟಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಂಗತಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


from India & World News in Kannada | VK Polls https://ift.tt/3whw8lO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...