ಮಂಡ್ಯ ಜಿಲ್ಲೆಗೆ ಅಂತಹ ಸಂಸದರು ಹಿಂದೆಯೂ ಬಂದಿಲ್ಲ, ಮುಂದೆಯೂ ಬರೋದಿಲ್ಲ! ಸುಮಲತಾ ಅಂಬರೀಶ್ ವಿರುದ್ಧ ಎಚ್‌ಡಿಕೆ ಕಿಡಿ

ಬೆಂಗಳೂರು: ಮಂಡ್ಯ ಜಿಲ್ಲೆಗೆ ಅಂತಹ ಸಂಸದರು ಹಿಂದೆಯೂ ಬಂದಿಲ್ಲ, ಮುಂದೆಯೂ ಬರೋದಿಲ್ಲ! ಹೀಗಂತ ಮಾಜಿ ಸಿಎಂ ಕಿಡಿಕಾರಿದ್ದು ಸಂಸದೆ ವಿರುದ್ಧ. ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಕೆಆರ್ ಎಸ್ ನ ಏನೋ ಇವ್ರೆ ರಕ್ಷಣೆ ಮಾಡ್ತಾರಂತಲ್ಲ, ಬಹುಶಃ ಇವರನ್ನೇ ಕೆಆರ್‌ಎಸ್‌ ಡ್ಯಾಮ್ ಬಾಗಿಲಿಗೆ ನೀರು ಹೋಗದ ರೀತಿ ಬಾಗಿಲಿಗೆ ಇವರನ್ನೇ ಮಲಗಿಸಿಬಿಟ್ರೆ ಕಾರ್ಖಾನೆ ಬಿಗಿಯಾಗಿಬಿಡುತ್ತದೆ ಎಂದರು. ಕೆಲಸ ಮಾಡೋಕೆ ಮಾಹಿತಿ ಇಟ್ಟುಕೊಳ್ಳದೇ, ಕೇವಲ ಯಾರದ್ದೋ ವೈಯಕ್ತಿಕ ದ್ವೇಷಕ್ಕೆ ಹೇಳಿಕೆ ಕೊಡುವುದು ಬಹಳ ದಿನ ನಡೆಯುವುದಿಲ್ಲ. ಯಾವುದೋ ಅನುಕಂಪದ ಮೇಲೆ ಬಂದಿದ್ದಾರೆ. ಅದರಂತೆ ಜನರ ಋಣ ತೀರಿಸುವ ಕೆಲಸ ಮಾಡಬೇಕು. ಪದೇ ಪದೇ ಇಂತಹ ಅವಕಾಶ ಗಳು ಸಿಗೋದಿಲ್ಲ. ಇವಾಗ ಅವಕಾಶ ಸಿಕ್ಕಿದೆ, ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಕೆಲಸ ಮಾಡಲಿ. ಇಲ್ಲವಾದಲ್ಲಿ ಮುಂದೆ ಜನರು ಅವರಿಗೆ ಸರಿಯಾಗಿ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು. ಇನ್ನು ತಮಿಳುನಾಡು ಸಿಎಂ ಸ್ಟಾಲಿನ್ ಪತ್ರದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸ್ಟಾಲಿನರ ಪತ್ರಿಕಾ ಹೇಳಿಕೆ ಗಮನಿಸಿದ್ದೇನೆ. ಸ್ಟಾಲಿನ್ ಅನುಮಾನ ಮೇಕೆದಾಟುವಿನಲ್ಲಿ ಸಂಗ್ರಹ ಮಾಡೋ ನೀರಿನ ಪ್ರಮಾಣ ಕಮ್ಮಿ ಆಗುತ್ತೆ ಅನ್ನೋದು. ಮೇಕೆದಾಟುವಿನಲ್ಲಿ ಜಲಾಶಯ ಕಟ್ಟಿದರೆ ನೀರಿನ ಪ್ರಮಾಣ ಕಡಿಮೆಯಾಗುವುದಿಲ್ಲ. ತಮಿಳುನಾಡಿಗೆ ಕೊಡುವ ನೀರನ್ನು ಪ್ರತೀ ವರ್ಷ ಕೊಡುವ ಹೊಣೆ ನಮ್ಮದು. ನಾವು ತಮಿಳುನಾಡಿನವರು ಅಣ್ಣತಮ್ಮಂದಿರಂತೆ ಇರಬೇಕು ಎಂದರು. ಎರಡೂ ರಾಜ್ಯಗಳ ರೈತರು ಅಣ್ಣತಮ್ಮಂದಿರು, ಜಲಾಶಯ‌ ನಿರ್ಮಾಣ ನಮ್ಮ ಜನರ ಬೇಡಿಕೆಯಾಗಿದೆ. ಸಮುದ್ರಕ್ಕೆ ಹರಿದು ಹೋಗಿ ವ್ಯರ್ಥ ಆಗೋ‌ ನೀರನ್ನು ಸಂಗ್ರಹ ಮಾಡಲು ಜಲಾಶಯ ಕಟ್ಟುತ್ತಿದ್ದೇವೆ ಅಷ್ಟೇ. ನಮ್ಮದು ನ್ಯಾಯಯುತ ಬೇಡಿಕೆ. ತಮಿಳುನಾಡಿಗೆ ಅನ್ಯಾಯ ಮಾಡೋ ಉದ್ದೇಶ ಇಲ್ಲ.ನ್ಯಾಯಾಧೀಕರಣದ ಆದೇಶದಂತೆ 193 ಟಿಎಂಸಿ‌ ಅಡಿ ನೀರು ಕೊಡ್ತೀವಿ, ಅದನ್ನು ನಿಲ್ಲಿಸಲು ಆಗಲ್ಲ. ಹೊಗೇನಕಲ್ ನಲ್ಲಿ ತಮಿಳುನಾಡು ಜಲಾಶಯ ಕಟ್ಟಿದೆಯಲ್ಲ ಯಾರಪ್ಪಣೆ ಪಡೆದಿದ್ರು? ನಾವು ನ್ಯಾಯಾಧೀಕರಣದ ತೀರ್ಪು ಉಲ್ಲಂಘನೆ ಮಾಡಲ್ಲ. ಕನ್ನಡಿಗರು ಸಹೋದರರು ಅನ್ನೋ ಮನೋಭಾವ ಸ್ಟಾಲಿನ್ ಗೆ ಇರಲಿ ಎಂದು ಮನವಿ ಮಾಡಿದರು. ಮಂಡ್ಯ ಮೈ ಶುಗರ್ ಕಾರ್ಖಾನೆಯನ್ನು ಸರ್ಕಾರ ಸ್ವಾಮ್ಯದಲ್ಲೇ ಉಳಿಸಿಕೊಳ್ಳುವ ವಿಚಾರವಾಗಿ ಮಾತನಾಡಿದ ಅವರು, ಮಂಡ್ಯ ಮೈ ಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಕುರಿತು ಚರ್ಚೆ ನಡಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಇರುವ ಬಗ್ಗೆ ಮನವಿ ಮಾಡಲಾಗಿದೆ‌. ಖಾಸಗಿಯವರಿಗೆ ಯಾವುದೇ ಕಾರಣಕ್ಕೂ ಒಪ್ಪಿಗೆ ಕೊಡುವುದಿಲ್ಲ ಎಂದು ಸಿಎಂ ಭರವಸೆ ಕೊಟ್ಟಿದ್ದಾರೆ. ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ತಾ.ಪಂ. ಜಿ.ಪಂ. ಮೀಸಲಾತಿ ಬಗ್ಗೆ ಯೋಗೇಶ್ವರ್ ಹೇಳಿಕೆ ವಿಚಾರವಾಗಿ, ಯೋಗೇಶ್ವರ್ ಬಾಲಿಶ ಹೇಳಿಕೆ ಕೊಡೋದು ಎಷ್ಟು ಸರಿ ಅಂತಾ ಅವರೇ ಯೋಚನೆ ಮಾಡಲಿ. ಮೀಸಲಾತಿ ನಿಗದಿ ಮಾಡೋದು ಚುನಾವಣಾ ಆಯೋಗ, ಸರ್ಕಾರ ಅಲ್ಲ ಎಂದು ಸಮರ್ಥಿಸಿಕೊಂಡರು.


from India & World News in Kannada | VK Polls https://ift.tt/3hukyhW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...