ಬೆಂಗಳೂರು: ನಗರದಲ್ಲಿ ಕೆಲ ದಿನಗಳ ಹಿಂದೆ ಕೋವಿಡ್ ಲಸಿಕೆಗೆ ಆಸ್ಪತ್ರೆಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದ ಜನ, ಇದೀಗ ಅಪರೂಪ ಎನ್ನುವಂತಾಗಿದೆ. ಆಸ್ಪತ್ರೆಗಳ ಮುಂದೆ 'ವ್ಯಾಕ್ಸಿನ್ ನೋ ಸ್ಟಾಕ್ 'ಫಲಕ ನೋಡಿ ಜನರು ಹಿಂತಿರುಗುತ್ತಿದ್ದಾರೆ.ನಗರದ ವಿಕ್ಟೋರಿಯಾ ಸೇರಿದಂತೆ ಕೆಲವು ಬಿಬಿಎಂಪಿ ಆಸ್ಪತ್ರೆಗಳ ಮುಂದೆ ವ್ಯಾಕ್ಸಿನ್ ನೋ ಸ್ಟಾಕ್ ಎನ್ನುವ ಬೋರ್ಡ್ ಅಂಟಿಸಲಾಗಿದ್ದು, ಆಸ್ಪತ್ರೆಗಳ ಸಿಬ್ಬಂದಿ ಕೇಳಿದರೆ 'ನಾಳೆ ಬನ್ನಿ' ಎನ್ನುವ ಸಿದ್ಧ ಉತ್ತರ ನೀಡುತ್ತಿದ್ದಾರೆ.ಸೋಮವಾರದಿಂದ ಕೋವಿಡ್ ಲಾಕ್‌ಡೌನ್ ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ಸಡಿಲಿಕೆಯಾಗುವುದರಿಂದ ಬಹಳಷ್ಟು ಜನರು ಕೆಲಸಕ್ಕೆ ಹೋಗುವ ನಿಮಿತ್ತ, ಲಸಿಕೆ ಹಾಕಿಸಿಕೊಳ್ಳಲು ಉತ್ಸಾಹದಿಂದ ಲಸಿಕಾ ಕೇಂದ್ರಕ್ಕೆ ಬಂದರೆ 'ನೋ ಸ್ಟಾಕ್' ಬೋರ್ಡ್ ದರ್ಶನದಿಂದ ಅಸಹನೆ ಹೊರಹಾಕುತ್ತಿದ್ದಾರೆ. 'ಸಚಿವರು ಲಸಿಕೆಯ ಕೊರತೆ ಇಲ್ಲಎನ್ನುತ್ತಾರೆ, ಆದರೆ ಆಸ್ಪತ್ರೆಗಳು ಮುಂದೆ ನೋ ಸ್ಟಾಕ್ ಬೋರ್ಡ್ ಏಕೆ' ಎಂದು ಜನರು ಪ್ರಶ್ನಿಸುತ್ತಿದ್ದಾರೆ.ಮೂರನೇ ಅಲೆಯ ಭಯ ಜನರನ್ನು ಕಾಡುತ್ತಿದ್ದು, ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳುವ ಇಚ್ಛೆ ಹೊಂದಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ಲಸಿಕೆಗೆ ಕಾದು ಕಾದು ಬೇಸತ್ತ ಬಹಳಷ್ಟು ಜನರು ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ.

ನಗರದಲ್ಲಿ ಕೆಲ ದಿನಗಳ ಹಿಂದೆ ಕೋವಿಡ್ ಲಸಿಕೆಗೆ ಆಸ್ಪತ್ರೆಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದ ಜನ, ಇದೀಗ ಅಪರೂಪ ಎನ್ನುವಂತಾಗಿದೆ. ಆಸ್ಪತ್ರೆಗಳ ಮುಂದೆ 'ವ್ಯಾಕ್ಸಿನ್ ನೋ ಸ್ಟಾಕ್ 'ಫಲಕ ನೋಡಿ ಜನರು ಹಿಂತಿರುಗುತ್ತಿದ್ದಾರೆ.
ನಗರದ ವಿಕ್ಟೋರಿಯಾ ಸೇರಿದಂತೆ ಕೆಲವು ಬಿಬಿಎಂಪಿ ಆಸ್ಪತ್ರೆಗಳ ಮುಂದೆ ವ್ಯಾಕ್ಸಿನ್ ನೋ ಸ್ಟಾಕ್ ಎನ್ನುವ ಬೋರ್ಡ್ ಅಂಟಿಸಲಾಗಿದ್ದು, ಆಸ್ಪತ್ರೆಗಳ ಸಿಬ್ಬಂದಿ ಕೇಳಿದರೆ 'ನಾಳೆ ಬನ್ನಿ' ಎನ್ನುವ ಸಿದ್ಧ ಉತ್ತರ ನೀಡುತ್ತಿದ್ದಾರೆ.
ಸೋಮವಾರದಿಂದ ಕೋವಿಡ್ ಲಾಕ್‌ಡೌನ್ ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ಸಡಿಲಿಕೆಯಾಗುವುದರಿಂದ ಬಹಳಷ್ಟು ಜನರು ಕೆಲಸಕ್ಕೆ ಹೋಗುವ ನಿಮಿತ್ತ, ಲಸಿಕೆ ಹಾಕಿಸಿಕೊಳ್ಳಲು ಉತ್ಸಾಹದಿಂದ ಲಸಿಕಾ ಕೇಂದ್ರಕ್ಕೆ ಬಂದರೆ 'ನೋ ಸ್ಟಾಕ್' ಬೋರ್ಡ್ ದರ್ಶನದಿಂದ ಅಸಹನೆ ಹೊರಹಾಕುತ್ತಿದ್ದಾರೆ. 'ಸಚಿವರು ಲಸಿಕೆಯ ಕೊರತೆ ಇಲ್ಲಎನ್ನುತ್ತಾರೆ, ಆದರೆ ಆಸ್ಪತ್ರೆಗಳು ಮುಂದೆ ನೋ ಸ್ಟಾಕ್ ಬೋರ್ಡ್ ಏಕೆ' ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಗುರಿ ಸಾಧಿಸಲು ತಿಣುಕಾಡುತ್ತಿದೆ ಬಿಬಿಎಂಪಿ..!

ಪ್ರತಿದಿನ ಸಾವಿರಾರು ಜನರಿಗೆ ಲಸಿಕೆ ನೀಡುತ್ತಿದ್ದ ಕೆ. ಸಿ. ಜನರಲ್ ಆಸ್ಪತ್ರೆಯಲ್ಲಿ ಲಸಿಕೆ ಕೊರತೆಯಿಂದ ಭಾನುವಾರ 300 ಮಂದಿ, ಪ್ರತಿದಿನ ಐನೂರಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡುತ್ತಿದ್ದ ಜಯನಗರ ಜನರಲ್ ಆಸ್ಪತ್ರೆಯಲ್ಲಿ ನೂರು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಅದೂ, 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಆದ್ಯತೆಯ ಮೇರೆಗೆ ಲಸಿಕೆ ನೀಡಲಾಗುತ್ತಿದೆ. ಪ್ರತಿ ದಿನ ಲಕ್ಷ ಜನರಿಗೆ ಲಸಿಕೆ ನೀಡುವ ಗುರಿಹೊಂದಿದ ಬಿಬಿಎಂಪಿ 70-80 ಸಾವಿರ ಲಸಿಕೆ ನೀಡುವುದಕ್ಕೂ ತಿಣುಕಾಡುತ್ತಿದೆ.
ಬಿಬಿಎಂಪಿ ಸರ್ವೆ ವ್ಯರ್ಥ..?

ಲಸಿಕೆ ಹಾಕಿಸಿಕೊಳ್ಳದೇ ಇರುವ ಫಲಾನುಭವಿಗಳನ್ನು ಕಂಡುಹಿಡಿಯಲು ಮನೆ-ಮನೆ ಸಮೀಕ್ಷೆ ಮಾಡುವ ಕಾರ್ಯ ಆರಂಭ ಮಾಡಿ ತಿಂಗಳುಗಳೇ ಕಳೆದು ಹೋಗಿವೆ. ಮೊದಲ ಡೋಸ್ ಪಡೆದು 2ನೇ ಡೋಸ್ ಪಡೆಯದವರನ್ನು 1,912 ಸಂಖ್ಯೆಗೆ ಕರೆ ಮಾಡಿ ಲಸಿಕೆ ಹಾಕಿಸಿಕೊಳ್ಳಲು ಕೋರಲಾಗುತ್ತಿದೆ. ಆದರೆ ಸುಲಭವಾಗಿ ಲಸಿಕೆ ಸಿಗುತ್ತಿಲ್ಲ. ಇದರಿಂದ ಸರ್ವೆ ಕಾರ್ಯ ಕೂಡ ವ್ಯರ್ಥವಾಗುತ್ತಿದೆ.
ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ವ್ಯಾಕ್ಸಿನೇಶನ್‌ಗೆ ಎಸಿಟಿ ಮತ್ತು ಇತರ ಸ್ಥಳೀಯ ಎನ್‌ಜಿಒಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಖಾಸಗಿ ಆಸ್ಪತ್ರೆಗಳಿಗೆ ಲಾಭ

ಮೂರನೇ ಅಲೆಯ ಭಯ ಜನರನ್ನು ಕಾಡುತ್ತಿದ್ದು, ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳುವ ಇಚ್ಛೆ ಹೊಂದಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ಲಸಿಕೆಗೆ ಕಾದು ಕಾದು ಬೇಸತ್ತ ಬಹಳಷ್ಟು ಜನರು ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ. 'ಹಣ ಹೋದರೆ ಹೋಗಲಿ ಲಸಿಕೆ ಸಿಕ್ಕರೆ ಸಾಕು' ಎನ್ನು ಮನಸ್ಥಿತಿಗೆ ಜನರು ತಲುಪಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್, ಕೋವ್ಯಾಕ್ಸಿನ್ ಸುಲಭವಾಗಿ ಸಿಗುತ್ತಿದೆ. ಕೆಲವು ಆಯ್ದ ಆಸ್ಪತ್ರೆಗಳಲ್ಲಿ ಸ್ಪುಟ್ನಿಕ್-ವಿ ಲಸಿಕೆ ಕೂಡ ದೊರೆಯುತ್ತಿದೆ. ಜನರು ತಮ್ಮಿಷ್ಟದ ಲಸಿಕೆ ಪಡೆಯುತ್ತಿದ್ದಾರೆ.
ಕೊರತೆಗೆ ಏನು ಕಾರಣ?

ಕೇಂದ್ರದಿಂದ ಸಮರ್ಪಕವಾಗಿ ಲಸಿಕೆ ಪೂರೈಕೆಯಾಗದೇ ಇರುವುದು ಲಸಿಕೆ ನೀಡುವ ಕಾರ್ಯಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇನ್ನೊಂದೆಡೆ 18 ವರ್ಷ ಮೇಲ್ಪಟ್ಟ ಆದ್ಯತಾ ವಲಯಗಳ ಜತೆಗೆ ಕಾಲೇಜು ವಿದ್ಯಾರ್ಥಿಗಳಿಗೂ ಲಸಿಕೆ ನೀಡಲು ಆರಂಭಿಸಿರುವುದರಿಂದ ಲಸಿಕೆ ಕೊರೆತೆ ಉಂಟಾಗುತ್ತಿದೆ ಎನ್ನುತ್ತಾರೆ ಅಧಿಕಾರಿಯೊಬ್ಬರು.
from India & World News in Kannada | VK Polls https://ift.tt/3ArLR5d