ಬೆಂಗಳೂರು: ಕೇಂದ್ರದ ಸಚಿವಾಲಯ 26 ಬಗೆಯ ಸಾಂಪ್ರದಾಯಿಕ ಅಡುಗೆಗಳ ರೆಸಿಪಿಗಳನ್ನು ಪ್ರಕಟಿಸಿದೆ. ಕರಾವಳಿ ಮತ್ತು ಭಾಗದಲ್ಲಿ ತಯಾರಿಸುವ '' ಸಹ ಆ ಸಾಲಿನಲ್ಲಿದೆ. ಪೌಷ್ಟಿಕಾಂಶಯುಕ್ತ ಆಹಾರ ಸೇವನೆಗೆ ಸಲಹೆ ನೀಡಿರುವ ಆಯುಷ್ ಸಚಿವಾಲಯ ಈ ಮಾಹಿತಿ ನೀಡಿದೆ. ಕೆಸುವಿನ ಎಲೆಯಲ್ಲಿ ಮಾಡುವ ಪತ್ರೊಡೆಯು ರೆಸಿಪಿಗಳ ಸಂಗ್ರಹದಲ್ಲಿ ಪ್ರಕಟವಾಗಿದೆ. 26 ಸಾಂಪ್ರದಾಯಿಕ ಅಡುಗೆಗಳನ್ನು ತಯಾರಿಸುವ ವಿಧಾನವನ್ನು ವಿವರಿಸಿರುವ ಬುಕ್‌ಲೆಟ್ ಆಯುಷ್ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅಡುಗೆಯ ಚಿತ್ರ, ಬೇಕಾಗುವ ಸಾಮಗ್ರಿಗಳು, ತಯಾರಿಸುವ ವಿಧಾನ, ಅದರಿಂದ ಆರೋಗ್ಯಕ್ಕೆ ಆಗುವ ಲಾಭಗಳು ಹಾಗೂ ಯಾವುದನ್ನು ಅತಿಯಾಗಿ ಬಳಸಬಾರದು ಎಂಬ ಎಚ್ಚರಿಕೆಯೂ ಇದರಲ್ಲಿದೆ. ಕರ್ನಾಟಕ ಮಾತ್ರವಲ್ಲದೆ ಕೇರಳ, ಮಹಾರಾಷ್ಟ್ರ, ಗೋವಾ, ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಪತ್ರೊಡೆ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್ಚಾಗಿ ಪತ್ರೊಡೆ ತಿಂಡಿ ತಯಾರಿಸಲಾಗುತ್ತದೆ. ಪತ್ರೊಡೆ ಆರೋಗ್ಯಕ್ಕೆ ಹೇಗೆ ಸಹಕಾರಿ? ನಾರಿನ ಅಂಶ ಅಧಿಕ ಮಟ್ಟದಲ್ಲಿರುವುದರಿಂದ ಸುಲಭವಾಗಿ ಜೀರ್ಣವಾಗುತ್ತದೆ. ಕೆಸುವಿನ ಎಲೆಗಳಲ್ಲಿ ಕಬ್ಬಿಣಾಂಶ, ವಿಟಮಿನ್ ಸಿ ಹಾಗೂ ಬೀಟಾ ಕರೊಟೀನ್ ಅಂಶ ಹೆಚ್ಚಿದೆ. ಇದರಿಂದಾಗಿ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ವೃದ್ಧಿಸಲು ಅನುವಾಗುತ್ತದೆ. ರುಮಟಾಯ್ಡ್ ಆರ್ಥರೈಟಿಸ್ ರೋಗಿಗಳಲ್ಲಿ ಉರಿಯೂತ ಕಡಿಮೆ ಮಾಡಲು ಪತ್ರೊಡೆ ಸಹಕಾರಿ ಎಂದು ಆಯುಷ್ ವಿವರಿಸಿದೆ. ಆಯುಷ್ ಸಚಿವಾಲಯ ಪ್ರಕಟಿಸಲಾಗಿರುವ ರೆಸಿಪಿಗಳ ಪೈಕಿ ಕೆಲವು ಮಜ್ಜಿಗೆ, ಅಮಲಕಿ ಪಾನಕ (ಬೆಟ್ಟದ ನೆಲ್ಲಿಕಾಯಿ ಪಾನಕ), ಬೀಟ್‌ರೂಟ್ ಹಲ್ವಾ, ಗುಲ್‌ಕಂದ್, ರಾಗಿ ಮತ್ತು ಬಾಳೆಹಣ್ಣು ಸ್ಮೂತಿ, ಮಟನ್ ಸೂಪ್, ಮಧುಕ ಲೇಹ, ಕರ್ಜೂರದ ಲಾಡು ಸೇರಿದಂತೆ ಹಲವು ಅಡುಗೆಗಳಿವೆ.
from India & World News in Kannada | VK Polls https://ift.tt/3hkaqbu