

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಂಗಣಗಳ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳಿವು!

ಬೆಂಗಳೂರು
: ಕೊರೊನಾ ವೈರಸ್ ಸಂಕಷ್ಟದ ಸಮಯದಲ್ಲೂ ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ಜಪಾನ್‌ನ ಟೋಕಿಯೋ ನಗರ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸಲು ಸಜ್ಜಾಗಿ ನಿಂತ್ತಿದ್ದು, ಇನ್ನು ಒಂದು ತಿಂಗಳಲ್ಲಿ ವಿಶ್ವಶ್ರೇಷ್ಠ ಕ್ರೀಡಾಪಟುಗಳ ನಡುವಣ ಜಟಾಪಟಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ. 2020ರಲ್ಲೇ ಈ ಕ್ರೀಡಾಕೂಟ ನಡೆಯಬೇಕಿತ್ತು, ಆದರೆ ಕೋವಿಡ್-19 ಕಾರಣ ಅನಿವಾರ್ಯವಾಗಿ 1 ವರ್ಷ ಮುಂದೂಡಲಾಯಿತು.
ಕ್ರೀಡಾಕೂಟ ಸಲುವಾಗಿ ಟೋಕಿಯೋದಲ್ಲಿ ಒಟ್ಟು 43 ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದ್ದು, 'ಟೋಕಿಯೋ ಬೇ ಝೋನ್ ಮತ್ತು 'ಹೆರಿಟೇಜ್ ಝೋನ್' ಎಂದು ವಿಭಾಗಿಸಲಾಗಿದೆ. ಹೆರಿಟೇಜ್ ಜಾಗದಲ್ಲಿ 1964ರ ಟೋಕಿಯೋ ಒಲಿಂಪಿಕ್ಸ್‌ಗೆ ಬಳಕೆ ಮಾಡಲಾಗಿದ್ದ ಹಲವು ಸ್ಥಳಗಳನ್ನು ಕಾಣಬಹುದಾಗಿದೆ.
ಒಲಿಂಪಿಕ್ ಸ್ಟೇಡಿಯಂ: ಇದನ್ನು ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಕ್ಕೆ ಬಳಕೆ ಮಾಡಲಾಗುವುದು. ಜೊತೆಗೆ ಅಥ್ಲೆಟಿಕ್ಸ್ ಮತ್ತು ಫುಟ್ಬಾಲ್ ಸ್ಪರ್ಧೆಗಳು ನಡೆಯಲಿವೆ. 68 ಸಾವಿರ ಆಸನ ಸಾಮರ್ಥ್ಯ ಹೊಂದಿದ್ದು, ಟೋಕಿಯೋ ನಗರದ ಹೃದಯ ಭಾಗದಲ್ಲಿ ಈ ಕ್ರೀಡಾಂಗಣವಿದೆ. 1964ರ ಒಲಿಂಪಿಕ್ಸ್ ಸಲುವಾಗಿ ಇದನ್ನು ನಿರ್ಮಿಸಲಾಗಿತ್ತು.

ಅರಿಯೇಕ್ ಅರೆನಾ: ಹೊಸದಾಗಿ ನಿರ್ಮಿಸಲಾಗಿರುವ ಅರಿಯೇಕ್ ಅರೆನಾದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದ ವಾಲಿಬಾಲ್ ಮತ್ತು ಪ್ಯಾರಾಲಿಂಪಿಕ್ ಬಾಸ್ಕೆಟ್‌ಬಾಲ್ ಸ್ಪರ್ಧೆಗಳು ನಡೆಯಲಿವೆ. ಇಲ್ಲಿ 15 ಸಾವಿರ ಆಸನ ವ್ಯವಸ್ಥೆ ಇದೆ.

ಆಕ್ವಾಟಿಕ್ ಸೆಂಟರ್: 2020ರ ಫೆಬ್ರವರಿಯಲ್ಲಿ ಈ ಆಕ್ವಾಟಿಕ್ ಸೆಂಟರ್‌ನ ನಿರ್ಮಾಣ ಪೂರ್ಣಗೊಂಡಿದೆ. ಇದರ ಅದ್ದೂರಿ ಉದ್ಘಾಟನಾ ಸಮಾರಂಭಕ್ಕೆ ಕೊರೊನಾ ವೈರಸ್ ಅಡಚಣೆ ತಂದೊಡ್ಡಿತ್ತು. ಬೇ ಝೋನ್‌ನಲ್ಲಿ ಇರುವ ಈ ಕ್ರೀಡಾಂಗಣ 15 ಸಾವಿರ ಆಸನ ಸಾಮರ್ಥ್ಯ ಹೊಂದಿದ್ದು, ಈಜು ಕೊಳ, ಡೈವಿಂಗ್ ಮತ್ತು ಆರ್ಟಿಸ್ಟಿಕ್ ಸ್ವಿಮಿಂಗ್ ಪೂಲ್ ಮೊದಲಾದುವನ್ನು ಒಳಗೊಂಡಿದೆ.

ಸೀ ಫಾರೆಸ್ಟ್ ವಾಟರ್ ವೇ: ಕೃತಕ ದ್ವೀಪದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ರೋಯಿಂಗ್ ಮತ್ತು ಕೆನೋಯಿಂಗ್ ಸ್ಪರ್ಧೆಗಳು ನಡೆಯಲಿವೆ. ಒಟ್ಟಾರೆ 30 ಸ್ಪರ್ಧೆಗಳು ಇಲ್ಲಿ ನಡೆಯಲಿದ್ದು, 24 ಸಾವಿರ ಆಸನ ಸಾಮರ್ಥ್ಯ ಇಲ್ಲಿ ಒದಗಿಸಲಾಗಿದೆ.

ಟೋಕಿಯೋ ಒಲಿಂಪಿಕ್ಸ್‌ಗೆ ಬಳಕೆ ಮಾಡಲಾಗುವ ಮೀಡಿಯಾ ಸೆಂಟರ್.

ಕರಾಟೆ ಮತ್ತು ಜುಡೋ ಕ್ರೀಡೆಗಳು ನಡೆಯಲಿರುವ ಕ್ರೀಡಾಂಗಣ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2UcYMau