92 ಮಂದಿಯಿಂದ ಸೇನಾ ವಿಮಾನ ಭೀಕರ ಅಪಘಾತ: ಕನಿಷ್ಠ 17 ಸೇನಾ ಸಿಬ್ಬಂದಿ ಬಲಿ

ಕೊಟಾಬಟೊ: ಸೇನೆಯ ವಿಮಾನವೊಂದು ಭೀಕರ ಅಪಘಾತಕ್ಕೀಡಾದ ಪರಿಣಾಮ ಕನಿಷ್ಠ 17 ಮಂದಿ ಮೃತಪಟ್ಟಿದ್ದು, ಸುಮಾರು 40 ಮಂದಿ ಗಾಯಗೊಂಡಿದ್ದಾರೆ. ಸೇನಾ ಪಡೆಗಳನ್ನು ಕರೆದೊಯ್ಯುತ್ತಿದ್ದ ವಿಮಾನ ರನ್‌ವೇಯಿಂದ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಫಿಲಿಪ್ಪೀನ್ಸ್‌ನ ದಕ್ಷಿಣ ಭಾಗದ ಸುಲು ಪ್ರಾಂತ್ಯದ ಜೋಲೋ ದ್ವೀಪದಲ್ಲಿ ಇಳಿಯುವ ಪ್ರಯತ್ನದ ವೇಳೆ ಸಿ-130 ಹರ್ಕ್ಯುಲಸ್ ಸಾರಿಗೆ ವಿಮಾನವು ರನ್‌ವೇನಲ್ಲಿ ಇಳಿಯದ ಕಾರಣ ಈ ದುರ್ಘಟನೆ ಸಂಭವಿಸಿದೆ. ವಿಮಾನದಲ್ಲಿದ್ದ ಹೆಚ್ಚಿನವರು ಸೇನಾ ಸಿಬ್ಬಂದಿ ಆಗಿದ್ದು, ಒಟ್ಟು 92 ಮಂದಿ ಇದ್ದರು ಎಂದು ರಕ್ಷಣಾ ಕಾರ್ಯದರ್ಶಿ ಡೆಲ್ಫಿನ್ ಲೊರೆಂಜನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 'ಇದುವರೆಗೂ 40 ಮಂದಿ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. 17 ಮೃತದೇಹಗಳು ಪತ್ತೆಯಾಗಿವೆ' ಎಂದು ಅವರು ಹೇಳಿದ್ದಾರೆ. ಉಂಟಾದ ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿವೆ. ಅಪಘಾತದ ರಭಸಕ್ಕೆ ವಿಮಾನದ ಭಾಗವೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಭಾರಿ ಪ್ರಮಾಣದ ಜ್ವಾಲೆಗಳು ಹರಡಿವೆ. ಇದರಿಂದ ಸಮೀಪದ ಮನೆಗಳ ಮೇಲೆ ದಟ್ಟ ಕಪ್ಪು ಬೂದಿ ಆವರಿಸಿದೆ. ವಿಮಾನವು ಸೇನಾ ಪಡೆಗಳನ್ನು ದಕ್ಷಿಣದ ದ್ವೀಪ ಮಿಂಡಾನಾವೊದ ಕೇಗಯಾನ್ ಡಿ ಒರೊದಿಂದ ಸಾಗಿಸುತ್ತಿತ್ತು. ಜೋಲೋದಲ್ಲಿ ಇಳಿಯುವಾಗ ರನ್‌ವೇಯನ್ನು ತಪ್ಪಿಸಿಕೊಂಡಿದೆ ಎಂದು ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಸಿರಿಲಿಟೋ ಸೊಬೆಜಾನಾ ತಿಳಿಸಿದ್ದಾರೆ. ಈ ವಿಮಾನದಲ್ಲಿದ್ದ ಬಹುತೇಕ ಸಿಬ್ಬಂದಿ ಇತ್ತೀಚೆಗಷ್ಟೇ ಮೂಲ ಸೇನಾ ತರಬೇತಿ ಪದವಿ ಪೂರೈಸಿದ್ದರು. ಅವರನ್ನು ಭಯೋತ್ಪಾದನೆ ವಿರುದ್ಧದ ಜಂಟಿ ಕಾರ್ಯಪಡೆಯೊಂದಿಗೆ ಸೇರಿಸಿ ಕಾರ್ಯಾಚರಣೆಗೆ ನಿಯೋಜಿಸುವುದಕ್ಕಾಗಿ ಕರೆದೊಯ್ಯಲಾಗುತ್ತಿತ್ತು. ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿ ಅಬು ಸಯ್ಯಫ್‌ನಂತಹ ಹಣಕ್ಕಾಗಿ ಅಪಹರಣ ಮಾಡುವ ಸಂಘಟನೆ ಸೇರಿದಂತೆ ಹಲವು ಭಯೋತ್ಪಾದನಾ ಗುಂಪುಗಳು ಸಕ್ರಿಯವಾಗಿರುವುದರಿಂದ ಈ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.


from India & World News in Kannada | VK Polls https://ift.tt/3hEwuhk

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...