ಹೇಳುವುದು ಒಂದು ಮಾಡುವುದು ಇನ್ನೊಂದು: 8 ಲಕ್ಷ ರೂ ಕರೆಂಟ್ ಬಿಲ್ ಕಟ್ಟದೆ ವಿದ್ಯುತ್ ಖರೀದಿ ಬಗ್ಗೆ ಪುಕ್ಕಟೆ ಸಲಹೆ ನೀಡಿದ ಸಿಧು!

ಅಮೃತಸರ: ಮುಖ್ಯಮಂತ್ರಿ ವಿರುದ್ಧ ನಿರಂತರವಾಗಿ ಕತ್ತಿ ಮಸೆಯುತ್ತಿರುವ ಅವರನ್ನು ತಣ್ಣಗಾಗಿಸಲು ಹೈಕಮಾಂಡ್, ಅವರಿಗೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರ ಹುದ್ದೆ ನೀಡುವ ಬಗ್ಗೆ ಚಿಂತನೆ ನಡೆಸಿದೆ. ಹಿಡಿತವಿಲ್ಲದ ಮಾತುಗಳು, ಹಠಾತ್ ಬದಲಾಗುವ ನಿರ್ಧಾರಗಳಿಂದ ಸದಾ ವಿವಾದದಲ್ಲಿರುವ ಮಾಜಿ ಸಚಿವ, ಮಾಜಿ ಕ್ರಿಕೆಟಿಗ ಸಿಧು ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಪಂಜಾಬ್‌ನಲ್ಲಿ ತೀವ್ರ ವಿದ್ಯುತ್ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ಪಂಜಾಬ್ ಸರಕಾರಕ್ಕೆ ಶುಕ್ರವಾರ ಸಿಧು ಅನೇಕ ಸಲಹೆಗಳನ್ನು ನೀಡಿದ್ದರು. ಖಾಸಗಿ ಥರ್ಮಲ್ ಸ್ಥಾವರಗಳ ಮೇಲೆ ಅವಲಂಬನೆಯಾಗುವುದನ್ನು ನಿಲ್ಲಿಸಿ ಮತ್ತು ರಾಜ್ಯದ ವಿದ್ಯುತ್ ವೆಚ್ಚವನ್ನು ತಗ್ಗಿಸಲು ನ್ಯಾಷನಲ್ ಗ್ರಿಡ್‌ನಿಂದ ವಿದ್ಯುತ್ ಖರೀದಿ ಮಾಡುವಂತೆ ಸಲಹೆ ನೀಡಿದ್ದರು. ಆದರೆ, ರಾಜ್ಯದ ವಿದ್ಯುತ್ ಬಿಕ್ಕಟ್ಟಿಗೆ ಟ್ವಿಟ್ಟರ್‌ನಲ್ಲಿ ಸುದೀರ್ಘ ಸಲಹೆ ನೀಡಿದ್ದ ಸಿಧು ಅವರು, ಸ್ವತಃ ಎಂಟು ತಿಂಗಳಿನಿಂದ ಪಾವತಿ ಮಾಡಿಲ್ಲ. ಅವರು ರಾಜ್ಯ ವಿದ್ಯುಚ್ಚಕ್ತಿ ಮಂಡಳಿ ಪಿಎಸ್‌ಪಿಸಿಎಲ್‌ಗೆ 8.67 ಲಕ್ಷ ರೂ ಬಾಕಿ ಉಳಿಸಿಕೊಂಡಿದ್ದಾರೆ ಎನ್ನುವುದು ಬಯಲಾಗಿದೆ. ರಾಜ್ಯದಲ್ಲಿನ ವಿದ್ಯುತ್ ಕೊರತೆಯನ್ನು ನೀಗಿಸಲು ಏನೆಲ್ಲ ಮಾಡಬೇಕು ಎಂದು ಪಂಜಾಬ್ ಸರಕಾರಕ್ಕೆ ಸಲಹೆ ನೀಡಿದ ಕೆಲವೇ ಸಮಯದಲ್ಲಿ ಸಿಧು ಅವರು ಬಾಕಿ ಉಳಿಸಿಕೊಂಡಿದ್ದಾರೆ ಎನ್ನಲಾದ ವಿದ್ಯುತ್ ಬಿಲ್‌ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಿಸಿವೆ. ಪಂಜಾಬ್ ರಾಜ್ಯ ವಿದ್ಯುತ್ ನಿಗಮ ನಿಯಮಿತ (ಪಿಎಸ್‌ಪಿಸಿಎಲ್) ವೆಬ್‌ಸೈಟ್ ಪ್ರಕಾರ ಅಮೃತಸರದಲ್ಲಿನ ಸಿಧು ಅವರ ಮನೆಗೆ ಸಂಬಂಧಿಸಿದ 8,67,540 ರೂಪಾಯಿ ವಿದ್ಯುತ್ ಬಿಲ್ ಇನ್ನೂ ಬಾಕಿ ಇದೆ. ಇದನ್ನು ಪಾವತಿಸಲು ಜುಲೈ 2 ಕೊನೆಯ ದಿನವಾಗಿತ್ತು. ಜೂನ್ 22ರಂದು ಈ ಬಿಲ್ ರವಾನಿಸಲಾಗಿತ್ತು. ಕಳೆದ ಎಂಟು ತಿಂಗಳ ವಿದ್ಯುತ್ ಬಿಲ್ ಮೊತ್ತ ಇದಾಗಿದೆ. ಮಾರ್ಚ್‌ನಲ್ಲಿ 10 ಲಕ್ಷ ರೂ ಪಾವತಿ2021ರ ಮಾರ್ಚ್ ವೇಳೆಗೆ ಸಿಧು ಅವರು 17,62,742 ರೂಪಾಯಿ ಮೊತ್ತದ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಬಾಕಿ ಬಿಲ್ ಪಾವತಿಸದ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲು ಪಿಎಸ್‌ಪಿಸಿಎಲ್ ಮುಂದಾದ ಸಂದರ್ಭದಲ್ಲಿ ಸಿಧು 10 ಲಕ್ಷ ರೂಪಾಯಿ ಪಾವತಿಸಿದ್ದರು. ಇನ್ನೂ 8.74 ಲಕ್ಷ ಮೊತ್ತ ಬಾಕಿ ಉಳಿದಿದೆ ಎಂದು ಪಿಎಸ್‌ಪಿಸಿಎಲ್ ಎಂಜಿನಿಯರ್ ಜಿಎಸ್ ಖೈರಾ ತಿಳಿಸಿದ್ದಾರೆ. 'ಸಿಧು ಅವರು ಬೇರೆಯವರಿಗೆ ಸಲಹೆ ಮತ್ತು ಉಪದೇಶಗಳನ್ನು ನೀಡುವ ಮೊದಲು ತಮ್ಮ ಬಾಕಿಗಳನ್ನು ತೀರಿಸಬೇಕು. ಕಡಿಮೆ ಮೊತ್ತದ ಬಿಲ್ ಬಾಕಿ ಉಳಿಸಿಕೊಂಡಿದ್ದ ಅನೇಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಆದರೆ ಸಿಧು ತಮ್ಮ ರಾಜಕೀಯ ಪ್ರಭಾವ ಬಳಸುವುದರ ಕಾರಣ ಇಲಾಖೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ' ಎಂದು ಪಿಎಸ್‌ಪಿಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸರಕಾರಿ ಕಚೇರಿ ಅವಧಿ ಕಡಿತಇದಕ್ಕೂ ಮುನ್ನ ಟ್ವಿಟ್ಟರ್‌ನಲ್ಲಿ ರಾಜ್ಯ ಸರಕಾರಕ್ಕೆ ಸಲಹೆಗಳನ್ನು ನೀಡಿದ್ದ ಸಿಧು, ಪಂಜಾಬ್ ಸರಕಾರ ಪ್ರತಿ ಸರಾಸರಿ ಯುನಿಟ್‌ಗೆ 4.54 ರೂ ನೀಡಿ ವಿದ್ಯುತ್ ಖರೀದಿಸುತ್ತಿದೆ. ಆದರೆ ರಾಷ್ಟ್ರೀಯ ಸರಾಸರಿ ಇರುವುದು 3.85 ರೂ. ನೆರೆಯ ಚಂಡೀಗಡ ಪ್ರತಿ ಯುನಿಟ್‌ಗೆ 3.44 ರೂ ಪಾವತಿಸುತ್ತಿದೆ ಎಂದು ಖಾಸಗಿ ಥರ್ಮಲ್ ಸ್ಥಾವರಗಳ ಮೇಲೆ ಅವಲಂಬಿಸಿರುವ ಕಾರಣದಿಂದ ಪಂಜಾಬ್‌ನಲ್ಲಿ ವಿದ್ಯುತ್ ದುಬಾರಿಯಾಗಿದೆ ಎಂದಿದ್ದರು. ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ದಿನಕ್ಕೆ 14,000 ಮೆಗಾ ವ್ಯಾಟ್ ದಾಟಿರುವುದರಿಂದ ವಿದ್ಯುಚ್ಚಕ್ತಿ ಅಭಾವ ಉಂಟಾಗಿದೆ. ಹೀಗಾಗಿ ಸರಕಾರಿ ಕಚೇರಿಗಳ ಕೆಲಸದ ವೇಳೆಯನ್ನು ಕಡಿತಗೊಳಿಸಿ ಅಮರಿಂದರ್ ಸಿಂಗ್ ಆದೇಶ ಹೊರಡಿಸಿದ್ದರು. ಅದರ ಅಗತ್ಯವಿಲ್ಲ ಎಂದು ನವಜೋತ್ ಸಿಂಗ್ ಸಿಧು ಸಲಹೆ ನೀಡಿದ್ದರು.


from India & World News in Kannada | VK Polls https://ift.tt/36ab0Dr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...