ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಖಂಡತುಂಡವಾಗಿ ಹೇಳಿದ ಅಖಂಡ: 'ಜನ ಬಯಕೆ' ಹೇಳಿದ ಶ್ರೀನಿವಾಸ್ ಮೂರ್ತಿ!

ಬೆಂಗಳೂರು : ನೇತೃತ್ವದಲ್ಲಿ ಚುನಾವಣೆಗೆ ಹೋದರೆ 130 ರಿಂದ 150 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್ ಶಾಸಕ ಭವಿಷ್ಯ ನುಡಿದಿದ್ದಾರೆ. ಶಾಸಕರ ಭವನದಲ್ಲಿ ಬುಧವಾರ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಆಗಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಬೇಕು ಎಂದು ಜನ ಬಯಸುತ್ತಾರೆ.‌ಜನರಿಗೆ ಉಚಿತ ಅಕ್ಕಿ ಕೊಟ್ಟವರು ಸಿದ್ದರಾಮಯ್ಯ. ನಮ್ಮ ಅಭಿಪ್ರಾಯ ಕೂಡಾ ಸಿದ್ಧರಾಮಯ್ಯ ಮತ್ತೆ ಸಿಎಂ ಆಗಬೇಕು.‌ ಇದರಿಂದ ರಾಜ್ಯಕ್ಕೆ ಹಾಗೂ ಬಡವರಿಗೆ ಅನುಕೂಲ ಆಗುತ್ತೆ. ಅಭಿವೃದ್ಧಿ ಕೆಲಸಗಳು ಉತ್ತಮ ಆಗಲಿದೆ ಎಂದರು.‌ ರಾಜ್ಯದ ಜನತೆಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋದರೆ 130 ರಿಂದ 150 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಈ ಕಾರಣಕ್ಕಾಗಿ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಬಯಕೆ ಎಂದರು. ಇನ್ನು ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಆಗಿಲ್ಲ, ಪಕ್ಷದ ಶಿಸ್ತು ಸಮಿತಿ ರಚನೆ ಆಗಿದೆ ಆದರೆ ಅಪರಾಧಿಗಳಿಗೆ ಶಿಕ್ಷೆ ಆಗಿಲ್ಲ. ಪಕ್ಷದಿಂದ ಸಂಪತ್ ರಾಜ್ ಅವರನ್ನು ಅಮಾನತು ಮಾಡಲು ಮನವಿ ಮಾಡಿದರೂ ಯಾವುದೇ ಕ್ರಮ ಆಗಿಲ್ಲ. ಇವರನ್ನು ಅಮಾನತು ಮಾಡದಿದ್ದರೆ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತೆ ಎಂದರೂ ಯಾವುದೇ ಕ್ರಮ ಆಗಿಲ್ಲ, ಯಾರನ್ನು ವಿಚಾರಣೆ ಮಾಡಿಲ್ಲ.‌ಶಾಸಕನಾಗಿ ನನ್ನ ಕುಟುಂಬ ಬೀದಿಯಲ್ಲಿ ಇದೆ. ಅಧ್ಯಕ್ಷರು ನಮ್ಮ ಧ್ವನಿಯನ್ನು ಕಿವಿಗೆ ಹಾಕುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೋವಿಡ್ ಕಾರಣಕ್ಕೆ ಹೈಕಮಾಂಡ್ ಗೆ ಈ ಬಗ್ಗೆ ಮನವಿ ಮಾಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರಿಗೆ ಮನವಿ ಮಾಡಿದ್ದೇನೆ ಪತ್ರವನ್ನು ಕೊಟ್ಟಿದ್ದೇನೆ. ‌ನನಗಾಗಿರುವ ಅನ್ಯಾಯದ ವಿರುದ್ಧ ಹೈಕಮಾಂಡ್ ಗೆ ತಿಳಿಸುತ್ತೇನೆ. ಸಿದ್ದರಾಮಯ್ಯ ಅವರು ನಮ್ಮ ಜೊತೆಗೆ ಇದ್ದಾರೆ ಎಂದ ಅವರು, ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಡುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು.‌ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಆಗಬೇಕು ಎಂದು ಶಾಸಕರಾದ ಜಮೀರ್ ಅಹ್ಮದ್ ಖಾನ್, ತುಕರಾಮ್, ಭೀಮಾ ನಾಯ್ಕ್, ಬಸವರಾಜ ರಾಯರೆಡ್ಡಿ, ಆರ್. ರಾಮಪ್ಪ, ಕಂಪ್ಲಿ ಗಣೇಶ್, ರಾಘವೇಂದ್ರ ಹಿಟ್ನಾಳ್ ಧ್ವನಿ ಎತ್ತಿದ್ದಾರೆ.


from India & World News in Kannada | VK Polls https://ift.tt/3j3D9ng

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...