ಭಾರತದಲ್ಲಿ ಇರುವ 'ಡೆಲ್ಟಾ' ರೂಪಾಂತರಿಯೊಂದೇ ಈಗ ಉಳಿದಿರುವ ಅಪಾಯ: ವಿಶ್ವ ಆರೋಗ್ಯ ಸಂಸ್ಥೆ

ಜಿನೇವಾ: ಭಾರತದಲ್ಲಿ ಮೊದಲು ಪತ್ತೆಯಾದ '' ತಳಿಯೊಂದೇ ಪ್ರಸ್ತುತ ಅಪಾಯಕಾರಿಯಾಗಿ ಉಳಿದಿರುವ ಕೊರೊನಾ ವೈರಸ್‌ನ ಏಕೈಕ ರೂಪಾಂತರಿಯಾಗಿದೆ. ಉಳಿದ ಎರಡು ತಳಿಗಳ ಪ್ರಭಾವ ಈಗ ಕಡಿಮೆಯಾಗಿದೆ ಎಂದು ಹೇಳಿದೆ. ಭಾರತದಲ್ಲಿ ಎರಡನೆಯ ಅಲೆಯ ಭೀಕರತೆಗೆ ಕಾರಣವಾಗಿದೆ ಎನ್ನಲಾಗಿರುವ B.1.617.2 ವೈರಸ್ ಪ್ರಭೇದವು, ಸದ್ಯ ಮನುಕುಲಕ್ಕೆ ಹೆಚ್ಚು ಮಾರಕವಾಗಿದೆ. ಅನೇಕ ರೂಪಾಂತರಗಳನ್ನು ಕಂಡರೂ, , ಬ್ರಿಟನ್ ಹಾಗೂ ಬ್ರೆಜಿಲ್‌ನಲ್ಲಿ ಮೊದಲು ಪತ್ತೆಯಾದ ರೂಪಾಂತರಗಳನ್ನು ಮೂರು ವಿಭಿನ್ನ ತಳಿಗಳಾಗಿ ವಿಭಜಿಸಲಾಗಿತ್ತು. ಅವುಗಳ ಶಕ್ತಿ ಹಾಗೂ ಪರಿಣಾಮ ಕೂಡ ವಿಭಿನ್ನವಾಗಿತ್ತು. ಈ ಮೂರೂ ತಳಿಗಳನ್ನು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯು ಕಳೆದ ವರ್ಷ 'ಕಳವಳಕಾರಿ ತಳಿ' (ವಿಒಸಿ) ಎಂದು ಘೋಷಿಸಿತ್ತು. ಆದರೆ, ಮಂಗಳವಾರ ಅದು ತನ್ನ ಹೇಳಿಕೆಯನ್ನು ಪರಿಷ್ಕರಿಸಿದ್ದು, ಬ್ರಿಟನ್ ಹಾಗೂ ಬ್ರೆಜಿಲ್‌ನಲ್ಲಿ ಕಂಡುಬಂದ ವೈರಸ್‌ಗಳನ್ನು ಈ ಪಟ್ಟಿಯಿಂದ ತೆಗೆದುಹಾಕಿದೆ. ಭಾರತದಲ್ಲಿ ಮೊದಲು ಪತ್ತೆಯಾದ ವೈರಸ್ ಮಾತ್ರವೇ ಆತಂಕಕಾರಿಯಾಗಿ ಉಳಿದಿದೆ ಎಂದು ಅದು ತಿಳಿಸಿದೆ. ಕೋವಿಡ್ ರೂಪಾಂತರವು ಮೊದಲು ಪತ್ತೆಯಾದ ದೇಶದ ಹೆಸರಿನೊಂದಿಗೇ ಅದನ್ನು ಗುರುತಿಸುವುದಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ವೈರಸ್‌ನ ವೈಜ್ಞಾನಿಕ ಹೆಸರುಗಳಿಂದ ಕರೆಯಲಾಗುತ್ತಿತ್ತು. ಈಗ ಡಬ್ಲ್ಯೂಎಚ್‌ಒ ಅವುಗಳಿಗೆ ಗ್ರೀಕ್ ಅಕ್ಷರಗಳ ಮೂಲಕ ನಾಮಕರಣ ಮಾಡಿದೆ. ಭಾರತದಲ್ಲಿ ಕಂಡುಬಂದ ರೂಪಾಂತರಕ್ಕೆ 'ಡೆಲ್ಟಾ' ಎಂಬ ಹೆಸರಿಡಲಾಗಿದೆ. ಬ್ರೆಜಿಲ್‌ನಲ್ಲಿ ಪತ್ತೆಯಾದ ರೂಪಾಂತರಕ್ಕೆ 'ಗಾಮಾ' ಎಂದು ಹೆಸರಿಸಲಾಗಿದೆ. ಬ್ರಿಟನ್‌ನಲ್ಲಿ ಪತ್ತೆಯಾದ ವೈರಸ್ 'ಆಲ್ಫಾ' ಹಾಗೂ ದಕ್ಷಿಣ ಆಫ್ರಿಕಾದ ತಳಿಗೆ 'ಬೀಟಾ' ಎಂದು ಹೆಸರಿಸಲಾಗಿದೆ. B.1.617.2 ತಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಆರೋಗ್ಯದ ಅಪಾಯಗಳು ಬಹಳಷ್ಟು ಹೆಚ್ಚಿದೆ. ಉಳಿದ ರೂಪಾಂತರಗಳ ಪ್ರಸರಣ ಸಾಮರ್ಥ್ಯ ಗಣನೀಯ ಇಳಿಕೆಯಾಗಿರುವುದು ಗಮನಕ್ಕೆ ಬಂದಿದೆ ಎಂದು ಡಬ್ಲ್ಯೂಎಚ್‌ಒ ತನ್ನ ಸಾಪ್ತಾಹಿಕ ವರದಿಯಲ್ಲಿ ತಿಳಿಸಿದೆ. ವಿಯೆಟ್ನಾಂನಲ್ಲಿ ಆರೋಗ್ಯ ಅಧಿಕಾರಿಗಳು ಶನಿವಾರ ಘೋಷಿಸಿರುವ ಹೈಬ್ರಿಡ್ ರೂಪಾಂತರವು ಡೆಲ್ಟಾ ತಳಿಯ ಮತ್ತೊಂದು ಪ್ರಭೇದದಂತೆ ಕಂಡುಬಂದಿದೆ ಎನ್ನಲಾಗಿದೆ.


from India & World News in Kannada | VK Polls https://ift.tt/2Rj5Oti

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...