ಹೊಸದಿಲ್ಲಿ: ಜೋ ಬೈಡನ್ ಆಡಳಿತದ ಹೊಸ ನೀತಿಯು ಆಸ್ಟ್ರಾಜೆನಿಕಾ ಮತ್ತು ನೋವಾವ್ಯಾಕ್ಸ್ ಲಸಿಕೆಗಳ ಪೂರೈಕೆ ಸರಪಳಿಯ ಅಡೆತಡೆಗಳನ್ನು ನಿವಾರಿಸುವ ಮೂಲಕ ಭಾರತದ ಸೀರಂ ಸಂಸ್ಥೆಯು ಕೋವಿಶೀಲ್ಡ್ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡಲಿದೆ ಎಂದು ಉಪಾಧ್ಯಕ್ಷೆ , ಪ್ರಧಾನಿ ಅವರಿಗೆ ಗುರುವಾರ ತಿಳಿಸಿದ್ದಾರೆ. ಅಲ್ಲದೆ, ಸೇರಿದಂತೆ ಜಗತ್ತಿನ ಹತ್ತಾರು ದೇಶಗಳಿಗೆ 25 ಮಿಲಿಯನ್ ಡೋಸ್‌ಗಳಷ್ಟು ಲಸಿಕೆಯನ್ನು ಹಂಚಿಕೊಳ್ಳುವ ಲಸಿಕೆ ಹಂಚಿಕೆ ಕಾರ್ಯಕ್ರಮವನ್ನು ಕೂಡ ಅಮೆರಿಕ ಆರಂಭಿಸಿದೆ. ಆಸ್ಟ್ರಾಜೆನಿಕಾ ಹಾಗೂ ನೋವಾವ್ಯಾಕ್ಸ್ ಲಸಿಕೆಗಳ ಕಚ್ಚಾ ವಸ್ತುಗಳನ್ನು ರಫ್ತು ಮಾಡಲು ಇದ್ದ ನಿರ್ಬಂಧಗಳನ್ನು ತೆಗೆದು ಹಾಕುತ್ತಿರುವುದಾಗಿ ಅಮೆರಿಕ ತಿಳಿಸಿದೆ. ಅಮೆರಿಕ ವಿಧಿಸಿರುವ ನಿರ್ಬಂಧವು ಲಸಿಕೆಗಳ ಉತ್ಪಾದನೆಗೆ ತೊಡಕಾಗಿದೆ ಎಂದು ಸೀರಂ ಸಂಸ್ಥೆ ಆರೋಪಿಸಿತ್ತು. ನಿರ್ಬಂಧ ತೆರವುಗೊಳಿಸುವಂತೆ ಸೀರಂ ಸಿಇಒ ಅದಾರ್ ಪೂನಾವಲ್ಲಾ ಅಮೆರಿಕಕ್ಕೆ ಮನವಿಯನ್ನೂ ಮಾಡಿದ್ದರು. 'ಸ್ವಲ್ಪ ಸಮಯದ ಹಿಂದೆ ಕಮಲಾ ಹ್ಯಾರಿಸ್ ಅವರೊಂದಿಗೆ ಮಾತನಾಡಿದೆ. ಅಮೆರಿಕದ ಜಾಗತಿಕ ಲಸಿಕೆ ಹಂಚಿಕೆ ಯೋಜನೆಯ ಭಾಗವಾಗಿ ಭಾರತಕ್ಕೆ ಲಸಿಕೆ ಪೂರೈಸುವ ಭರವಸೆಯನ್ನು ನಾನು ಅಪಾರವಾಗಿ ಶ್ಲಾಘಿಸುತ್ತೇನೆ. ಅಮೆರಿಕ ಸರ್ಕಾರ, ಉದ್ಯಮಗಳು ಮತ್ತು ಭಾರತೀಯ ಸಮುದಾಯದ ಬೆಂಬಲ ಹಾಗೂ ಸಹಾನುಭೂತಿಗಾಗಿ ಕೂಡ ಅವರಿಗೆ ಧನ್ಯವಾದ ಸಲ್ಲಿಸಿದ್ದೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. 'ಭಾರತ-ಅಮೆರಿಕ ಲಸಿಕೆ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳ ಕುರಿತು ಮತ್ತು ಕೋವಿಡ್ ಬಳಿಕದ ಜಾಗತಿಕ ಆರೋಗ್ಯ ಹಾಗೂ ಆರ್ಥಿಕ ಪುನಶ್ಚೇತನಕ್ಕೆ ನಮ್ಮ ಪಾಲುದಾರಿಕೆಯು ನೀಡುವ ಕೊಡುಗೆಯ ಕುರಿತು ಸಹ ನಾವು ಚರ್ಚಿಸಿದೆವು' ಎಂದು ತಿಳಿಸಿದ್ದಾರೆ. 'ಕೋವಿಡ್ 19 ಲಸಿಕೆಗಳು 'ಜಾಗತಿಕ ಲಸಿಕೆ ಹಂಚಿಕೆ ಕಾರ್ಯಯೋಜನೆ' ಅಡಿ ಭಾರತ ಸೇರಿದಂತೆ, ಇತರೆ ದೇಶಗಳಲ್ಲಿಯೂ ಲಸಿಕೆ ಲಭ್ಯವಾಗುವಂತೆ ಮಾಡಲು ಅಮೆರಿಕ ಚಿಂತನೆ ನಡೆಸಿದೆ. ಲಸಿಕೆ ಉತ್ಪಾದನೆ ಒಳಗೊಂಡಂತೆ ಭಾರತ ಹಾಗೂ ಅಮೆರಿಕ ನಡುವಿನ ಆರೋಗ್ಯ ಪೂರೈಕೆ ಸರಪಳಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಾಗುತ್ತಿರುವ ಪ್ರಯತ್ನಗಳ ಬಗ್ಗೆ ಉಭಯ ದೇಶಗಳ ನಾಯಕರು ಚರ್ಚಿಸಿದ್ದಾರೆ. ಸಾಂಕ್ರಾಮಿಕದ ದೀರ್ಘಕಾಲೀನ ಆರೋಗ್ಯ ಪರಿಣಾಮವನ್ನು ಎದುರಿಸಲು ಕ್ವಾಡ್ ಲಸಿಕೆ ಯೋಜನೆ ಹಾಗೂ ಭಾರತ-ಅಮೆರಿಕ ಸಹಭಾಗಿತ್ವದ ಪ್ರಾಮುಖ್ಯದ ಬಗ್ಗೆ ಕೂಡ ಸಮಾಲೋಚನೆ ನಡೆಸಿದರು' ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ತಿಳಿಸಿದ್ದಾರೆ. 'ಭಾರತಕ್ಕೆ ಕೊವ್ಯಾಕ್ಸ್ ಯೋಜನೆ ಮೂಲಕ ಪ್ರಾದೇಶಿಕ ಭಾಗದಡಿ ಲಸಿಕೆಗಳನ್ನು ನೀಡುವುದು ಮಾತ್ರವಲ್ಲದೆ, ತಮ್ಮ ವಿವೇಚನೆಗೆ ತಕ್ಕಂತೆ ಲಸಿಕೆಗಳನ್ನು ಹೆಚ್ಚುವರಿಯಾಗಿ ನೀಡುವುದಕ್ಕೂ ಅಧ್ಯಕ್ಷರು ಬದ್ಧರಾಗಿದ್ದಾರೆ. ಜೂನ್ ಅಂತ್ಯದ ವೇಳೆಗೆ ಅಮೆರಿಕವು 80 ಮಿಲಿಯನ್ ಡೋಸ್‌ಗಳನ್ನು ಹಂಚಿಕೊಳ್ಳಲಿದೆ. ಇದು ಯಾವುದೇ ಪೂರ್ವ ಷರತ್ತುಗಳಿಲ್ಲದೆ ಇತರೆ ದೇಶಗಳಿಗೆ ಅಮೆರಿಕ ಲಸಿಕೆ ಪೂರೈಸುವ ಕಾರ್ಯದ ಆರಂಭವಷ್ಟೇ' ಎಂದು ಅವರು ತಿಳಿಸಿದ್ದಾರೆ. ಅಮೆರಿಕ ಸಿದ್ಧಪಡಿಸಿರುವ ರೂಪುರೇಷೆ ಪ್ರಕಾರ ಭಾರತ ಹಾಗೂ ಏಷ್ಯಾದ ಇತರೆ ದೇಶಗಳಿಗೆ ಸುಮಾರು 7 ಮಿಲಿಯನ್ ಡೋಸ್ ಲಸಿಕೆಗಳನ್ನು ರವಾನಿಸಲಾಗುತ್ತದೆ.
from India & World News in Kannada | VK Polls https://ift.tt/2S0sMpt