ರುವನಂತಪುರಂ: ಸಂಪೂರ್ಣ ವಿದ್ಯಾವಂತರ ರಾಜ್ಯ ಎನಿಸಿಕೊಂಡಿರುವ ಕೇರಳದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದು ಉತ್ತಮ ಉದ್ಯೋಗದಲ್ಲಿರುವ ಕುಟುಂಬವೊಂದರಲ್ಲಿ ಸಾಮಾಜಿಕ ಪಿಡುಗು ಸಾವಿನ ಪ್ರಕರಣವೊಂದು ತಲ್ಲಣ ಮೂಡಿಸಿದೆ. ತನ್ನನ್ನು ಪತಿಯ ಮನೆಯವರು ವರದಕ್ಷಿಣೆಗಾಗಿ ಹಿಂಸಿಸುತ್ತಿದ್ದಾರೆ ಎಂದು ತನ್ನ ಹೆತ್ತವರಿಗೆ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿದ್ದ 24 ವರ್ಷದ , ಗಂಡನ ಮನೆಯಲ್ಲಿ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ವಿಸ್ಮಯಾ ನಾಯರ್ ಅವರು, ಪತಿ ಕಿರಣ್ ಕುಮಾರ್ ಕೂದಲು ಹಿಡಿದು ಎಳೆದು ಮುಖಕ್ಕೆ ಗುದ್ದಿದ್ದಾಗಿ ವಾಟ್ಸಾಪ್ ಸಂದೇಶದಲ್ಲಿ ಹೇಳಿಕೊಂಡಿದ್ದರು. ಈಗ ಆತನನ್ನು ಬಂಧಿಸಲಾಗಿದೆ. ಈ ಘಟನೆ ಕೇರಳದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದ್ದು, ಮುಖ್ಯಮಂತ್ರಿ ಅವರು ಘಟನೆಯನ್ನು ಖಂಡಿಸಿದ್ದಾರೆ. ವರದಕ್ಷಿಣೆ ವ್ಯವಸ್ಥೆಯು ಅತ್ಯಂತ ಅನಾಗರಿಕವಾಗಿದೆ ಎಂದಿರುವ ಅವರು, ಅಂತಹ ದೂರುಗಳನ್ನು ನೋಡಿಕೊಳ್ಳಲು ವಿಶೇಷ ಅಧಿಕಾರಿಗಳನ್ನು ನೇಮಿಸುವುದಾಗಿ ಪ್ರಕಟಿಸಿದ್ದಾರೆ. ಕೊಲ್ಲಂನಲ್ಲಿರುವ ಪತಿ ಕಿರಣ್ ಕುಮಾರ್ ಅವರ ಮನೆಯ ಸ್ನಾದ ಕೊಠಡಿಯಲ್ಲಿ ನೇಣುಬಿಗಿದ ರೀತಿಯಲ್ಲಿ ವಿಸ್ಮಯಾ ಅವರ ಶವ ಪತ್ತೆಯಾಗಿದೆ. ರಾಜ್ಯ ಸಾರಿಗೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ 30 ವರ್ಷದ ಕಿರಣ್ ಕುಮಾರ್‌ನನ್ನು ಸರಕಾರಿ ಹುದ್ದೆಯಿಂದ ಅಮಾನತು ಮಾಡಲಾಗಿದೆ. ಕಳೆದ ವರ್ಷದ ಜೂನ್ ತಿಂಗಳಲ್ಲಿ ಇಬ್ಬರಿಗೂ ಮದುವೆಯಾಗಿತ್ತು. ಕಿರಣ್ ಕುಮಾರ್ ಕುಟುಂಬಕ್ಕೆ ಮದುವೆ ಸಮಯದಲ್ಲಿ 100 ಚಿನ್ನದ ನಾಣ್ಯಗಳು ಮತ್ತು ಒಂದು ಎಕರೆ ಭೂಂಇ ನೀಡಲಾಗಿತ್ತು. ಮಾತ್ರವಲ್ಲ, 10 ಲಕ್ಷ ರೂ ಮೌಲ್ಯದ ಕಾರನ್ನು ಕೂಡ ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೆ, ಅಷ್ಟಕ್ಕೆ ತೃಪ್ತನಾಗದ ಕಿರಣ್ ಹಾಗೂ ಕುಟುಂಬದವರು ಮತ್ತಷ್ಟು ಹಣ ನೀಡುವಂತೆ ಒತ್ತಾಯಿಸಿ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ವಿಸ್ಮಯಾ ಅವರ ತಂದೆ ತ್ರಿವಿಕ್ರಮ್ ನಾಯರ್ ಆರೋಪಿಸಿದ್ದಾರೆ. 'ಜನವರಿಯಲ್ಲಿ ನಮ್ಮ ಮನೆಯಲ್ಲಿ ಮಧ್ಯರಾತ್ರಿ ವೇಳೆ ನಮ್ಮ ಕಣ್ಣೆದುರೇ ಆತ ವಿಸ್ಮಯಾಗೆ ಹೊಡೆದಿದ್ದ. ಬಳಿಕ ಗಂಡನ ಮನೆಗೆ ಹೋಗದಂತೆ ಆಕೆಯನ್ನು ತಡೆದಿದ್ದೆ. ಮಾರ್ಚ್ 17ರಂದು ಕುಮಾರ್ ಜನ್ಮದಿನದಂದು ಆಕೆ ಅಲ್ಲಿಗೆ ಹೋಗಿದ್ದಳು. ಆಕೆಯನ್ನು ಕುಮಾರ್ ಕಾಲೇಜ್‌ನಿಂದ ಕರೆದುಕೊಂಡು ಹೋಗಿದ್ದ. ಕುಮಾರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ ಮೂರು ದಿನಗಳಲ್ಲಿಯೇ ಎರಡೂ ಕುಟುಂಬಗಳು ರಾಜಿ ಸಂಧಾನಕ್ಕಾಗಿ ಭೇಟಿ ಮಾಡಿದ್ದವು' ಎಂದು ಅವರು ತಿಳಿಸಿದ್ದಾರೆ. ಪತಿಯ ಮನೆಗೆ ಮರಳಿದ ನಂತರ ವಿಸ್ಮಯಾ, ತನ್ನ ಅಮ್ಮನೊಂದಿಗೆ ಮಾತ್ರ ಸಂಪರ್ಕದಲ್ಲಿದ್ದರು. ತಾವು ಕೊಟ್ಟ ಎಸ್‌ಯುವಿಯ ಬದಲು ನಗದು ಹಣದ ಉಡುಗೊರೆ ನೀಡುವಂತೆ ಕಿರಣ್ ಒತ್ತಾಯಿಸುತ್ತಿದ್ದ. 'ಆ ಕಾರು 10 ಲಕ್ಷ ರೂ ಮೌಲ್ಯದ್ದಾಗಿತ್ತು. ಆದರೆ ಆತನಿಗೆ ಕಾರ್ ಇಷ್ಟವಿರಲಿಲ್ಲ. ಅದರ ಬದಲು 10 ಲಕ್ಷ ರೂ ನಗದು ಬೇಕೆಂದು ಹೇಳಿದ್ದ. ಅದು ಸಾಧ್ಯವಿಲ್ಲ ಎಂದು ಹೇಳಿದಾಗ ಮಗಳಿಗೆ ಹಿಂಸೆ ನೀಡುತ್ತಿದ್ದ' ಎಂದಿದ್ದಾರೆ.
from India & World News in Kannada | VK Polls https://ift.tt/3wSkUoR