ಅರವಿಂದ ಬೆಲ್ಲದ ಅವರಿಂದ ಮಠಾಧೀಶರ ಭೇಟಿ, ಅನಗತ್ಯ ಗೊಂದಲ ಬೇಡ ಎಂದ ನಳಿನ್ ಕುಮಾರ್ ಕಟೀಲ್

ರಾಯಚೂರು: ಅವರಿಂದ ಮಠಾಧೀಶರ ಭೇಟಿ ಕುರಿತಾಗಿ ಯಾವುದೇ ಅನಗತ್ಯ ಗೊಂದಲ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದರು. ರಾಯಚೂರಿನಲ್ಲಿ ಗುರುವಾರ ಮಾತನಾಡಿದ ಅವರು, ಶಾಸಕರಾದ ಅರವಿಂದ ಬೆಲ್ಲದ, ರಮೇಶ ಜಾರಕಿಹೊಳಿ ಸೇರಿ ಎಲ್ಲ‌ ಶಾಸಕರಿಗೆ ದೇವಸ್ಥಾನ, ಮಠಾಧೀಶರನ್ನು ಭೇಟಿ ಮಾಡುವ ಸ್ವಾತಂತ್ರ್ಯವಿದೆ. ಭೇಟಿಗೆ ಅನಗತ್ಯ ಗೊಂದಲ ಉಂಟು ಮಾಡಬೇಕಿಲ್ಲ ಎಂದರು. ಅರವಿಂದ ಬೆಲ್ಲದ ಅವರು ವಿವಿಧ ಮಠಗಳ‌ ಮಠಾಧೀಶರನ್ನು ಭೇಟಿ ಮಾಡುತ್ತಿರುವುದು ಅವರ ವೈಯಕ್ತಿಕ ವಿಚಾರ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ.ಬೆಲ್ಲದ ಅವರ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ನಡೆಯುತ್ತಿದೆ.‌ಸತ್ಯಾಂಶ ತನಿಖೆ ನಂತರ ಹೊರಬರಲಿದೆ ಎಂದು ಇದೇ ವೇಳೆ ತಿಳಿಸಿದರು. ಇನ್ನು ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿಗೆ ಮಹತ್ವ ನೀಡಬೇಕಿಲ್ಲ. ಫಡ್ನವೀಸ್ ಪಕ್ಷದ ಹಿರಿಯ ನಾಯಕರು. ಅವರೊಂದಿಗಿನ ಭೇಟಿ ಬಗ್ಗೆ ಇಬ್ಬರೂ ನಾಯಕರು ಏನನ್ನೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ವಿಧಾನಪರಿಷತ್ ಸದಸ್ಯ ಎಚ್‌ ವಿಶ್ವನಾಥ್ ಅವರು ಸಿಎಂ ಪುತ್ರ ವಿಜಯೇಂದ್ರ ಕುರಿತಾದ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಎಚ್. ವಿಶ್ವನಾಥ್ ಅವರು ಪಕ್ಷಕ್ಕೆ ಈಚೆಗೆ ಸೇರಿದ್ದಾರೆ. ಅವರು ಪಕ್ಷದ ನಾಯಕತ್ವದ ವಿರುದ್ಧ ಹೇಳಿಕೆ ನೀಡುತ್ತಿರುವುದರ ಬಗ್ಗೆ ಶೀಘ್ರ ಕರೆಯಿಸಿ ಮಾತಾಡುವೆ ಎಂದರು. ಮಸ್ಕಿ ಉಪಚುನಾವಣೆಯ ಸೋಲಿನ‌ ಪರಾಮರ್ಶೆ ನಡೆದಿದೆ. ವರದಿ ಬಂದ ನಂತರ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.


from India & World News in Kannada | VK Polls https://ift.tt/3zTAJh5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...