'170ಕ್ಕೆ ಆಲ್‌ಔಟ್‌', ಅತ್ಯಂತ ಕೆಟ್ಟ ಬ್ಯಾಟಿಂಗ್‌ ಎಂದು ಟೀಕಿಸಿದ ಗವಾಸ್ಕರ್‌!

ಸೌಥ್‌ಹ್ಯಾಂಪ್ಟನ್: ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯ ಫೈನಲ್ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್‌ ಮಾಡಬೇಕಿತ್ತು ಎಂದು ಭಾರತದ ಮಾಜಿ ನಾಯಕ ಅಸಮಾಧಾನ ಹೊರಹಾಕಿದ್ದಾರೆ. ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಪ್ರದರ್ಶನ ಗಮನ ಸೆಳೆಯಿತಾದರೂ, ಬ್ಯಾಟಿಂಗ್‌ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಅದರಲ್ಲೂ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 170 ರನ್‌ಗಳ ಅಲ್ಪ ಮೊತ್ತಕ್ಕೆ ಆಲ್‌ಔಟ್‌ ಆಗುವ ಮೂಲಕ ಕಿವೀಸ್‌ ಗೆಲುವಿಗೆ ಕೇವಲ 139 ರನ್‌ಗಳ ಸಾಧಾರಣ ಗುರಿ ನೀಡಿತು. ಇದು ಭಾರತ ತಂಡದ ಮಾಜಿ ನಾಯಕ ಗವಾಸ್ಕರ್‌ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಪಂದ್ಯದ ಆರನೇ ದಿನ ಸೂರ್ಯನ ಬೆಳಕು ಹೆಚ್ಚಿದ್ದು ಬ್ಯಾಟಿಂಗ್‌ಗೆ ಅತ್ಯುತ್ತಮ ಸ್ಥಿತಿ ಇದ್ದರೂ ಕೂಡ ಭಾರತೀಯ ಬ್ಯಾಟ್ಸ್‌ಮನ್‌ಗಳು ಅದರ ಲಾಭ ಪಡೆಯದೇ ಹೋದರು. "ಭಾರತ ತಂಡ ಉತ್ತಮವಾಗಿ ಬ್ಯಾಟಿಂಗ್‌ ಮಾಡಬೇಕಿತ್ತು. ಏಕೆಂದರೆ ಸೂರ್ಯನ ಬೆಳಕು ಹೆಚ್ಚಾಗಿತ್ತು. ಆದರೆ, ಕೇವಲ 170 ರನ್‌ಗಳಿಗೆ ಆಲ್‌ಔಟ್‌ ಆಗಿರುವುದು ಬೇಸರ ತಂದಿದೆ," ಸುನಿಲ್ ಗವಾಸ್ಕರ್‌ ಪಂದ್ಯದ ವೇಳೆ ವೀಕ್ಷಕ ವಿವರಣೆ ನೀಡುವ ಸಂದರ್ಭದಲ್ಲಿ ಹೇಳಿದ್ದಾರೆ. ಭಾರತ ತಂಡದ ಪರ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್ ಪಂತ್‌ 41 ರನ್‌ ಬಾರಿಸಿ ಗರಿಷ್ಠ ರನ್‌ ಸ್ಕೋರರ್‌ ಎನಿಸಿಕೊಂಡರು. ಆದರೆ, ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಹೊರಬರಲೇ ಇಲ್ಲ. ಇನಿಂಗ್ಸ್‌ ಮಧ್ಯದಲ್ಲಿ ಅಜಿಂಕ್ಯ ರಹಾನೆ (15) ಮತ್ತು ರವೀಂದ್ರ ಜಡೇಜಾ (16) ಮಾತ್ರವೇ ಅಲ್ಪ ಹೋರಾಟ ನಡೆಸಿದರು. ಕಿವೀಸ್‌ ಪರ ಅನುಭವಿ ವೇಗಿ ಟಿಮ್‌ ಸೌಥೀ ತಮ್ಮ 19 ಓವರ್‌ಗಳಲ್ಲಿ 48ಕ್ಕೆ 4 ವಿಕೆಟ್‌ಗಳನ್ನು ಪಡೆದು ಭಾರತ ತಂಡದ ಬ್ಯಾಟಿಂಗ್‌ ಬಲವನ್ನು ಅಡಗಿಸಿದರು. ಇದಕ್ಕೂ ಮುನ್ನ ಕೈಲ್‌ ಜೇಮಿಸನ್‌ (30ಕ್ಕೆ 2) ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ್ ಪೂಜಾರ ವಿಕೆಟ್‌ ಪಡೆದು ಕಿವೀಸ್‌ ಫೈನಲ್‌ ಗೆಲುವಿಗೆ ಮುನ್ನುಡಿ ಬರೆದಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಜೇಮಿಸನ್ 31ಕ್ಕೆ 5 ವಿಕೆಟ್‌ ಉರುಳಿಸಿದ್ದರು. ನ್ಯೂಜಿಲೆಂಡ್‌ ತಂಡ 2015 ಮತ್ತು 2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಗಳ ಫೈನಲ್‌ ತಲುಪಿ ರನ್ನರ್ಸ್‌ಅಪ್‌ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಈಗ ಟೆಸ್ಟ್‌ ಕ್ರಿಕೆಟ್‌ನ ವಿಶ್ವ ಚಾಂಪಿಯನ್‌ಷಿಪ್‌ ಗೆದ್ದ ಮೊತ್ತ ಮೊದಲ ತಂಡ ಎನಿಸಿಕೊಂಡು ಇತಿಹಾಸ ಬರೆದಿದೆ. ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್ ಪಂದ್ಯದ ಸಂಕ್ಷಿಪ್ತಭಾರತ: ಮೊದಲ ಇನಿಂಗ್ಸ್‌ 92.1 ಓವರ್‌ಗಳಲ್ಲಿ 217ಕ್ಕೆ ಆಲ್‌ಔಟ್‌ (ರೋಹಿತ್‌ ಶರ್ಮಾ 34, ಶುಭಮನ್ ಗಿಲ್ 28, ವಿರಾಟ್‌ ಕೊಹ್ಲಿ 44, ಚೇತೇಶ್ವರ್‌ ಪೂಜಾರ 8, ಅಜಿಂಕ್ಯ ರಹಾನೆ 49, ಆರ್‌ ಅಶ್ವಿನ್ 22; ಕೈಲ್ ಜೇಮಿಸನ್ 31ಕ್ಕೆ 5, ವ್ಯಾಗ್ನರ್‌ 40ಕ್ಕೆ 2, ಬೌಲ್ಟ್‌ 47ಕ್ಕೆ 2, ಟಿಮ್ ಸೌಥೀ 64ಕ್ಕೆ 1). ನ್ಯೂಜಿಲೆಂಡ್: ಮೊದಲ ಇನಿಂಗ್ಸ್‌ 72 ಓವರ್‌ಗಳಲ್ಲಿ 5 ವಿಕೆಟ್‌ಗೆ 135 ರನ್ (ಟಾಮ್ ಲೇಥಮ್ 30, ಡೆವೋನ್ ಕಾನ್ವೇ 54, ಕೇನ್ ವಿಲಿಯಮ್ಸನ್ 19, ರಾಸ್‌ ಟೇಲರ್‌ 11; ಆರ್‌ ಅಶ್ವಿನ್ 20ಕ್ಕೆ 1, ಇಶಾಂತ್ ಶರ್ಮಾ 28ಕ್ಕೆ 2, ಮೊಹಮ್ಮದ ಶಮಿ 20ಕ್ಕೆ 2). ಭಾರತ: ಎರಡನೇ ಇನಿಂಗ್ಸ್‌ 170 ಆಲ್‌ಔಟ್‌ (ರೋಹಿತ್ ಶರ್ಮಾ 30, ಶುಭಮನ್ ಗಿಲ್ 8, ಚೇತೇಶ್ವರ್ ಪೂಜಾರ 15, ರಿಷಭ್ ಪಂತ್ 41; ಟಿಮ್‌ ಸೌಥೀ 48ಕ್ಕೆ 4, ಟ್ರೆಂಟ್‌ ಬೌಲ್ಟ್‌ 39ಕ್ಕೆ 3, ಕೈಲ್ ಜೇಮಿಸನ್ 30ಕ್ಕೆ 2). ನ್ಯೂಜಿಲೆಂಡ್: ಎರಡನೇ ಇನಿಂಗ್ಸ್‌ 45.5 ಓವರ್‌ಗಳಲ್ಲಿ 2 ವಿಕೆಟ್‌ಗೆ 140 ರನ್ (ಕೇನ್ ವಿಲಿಯಮ್ಸನ್ ಅಜೇಯ 52, ರಾಸ್‌ ಟೇಲರ್‌ ಅಜೇಯ 47; ಆರ್‌ ಅಶ್ವಿನ್ 17ಕ್ಕೆ 2).


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3qnyJct

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...