ಕಾಫಿನಾಡಲ್ಲಿ ನಿಷ್ಕಲ್ಮಶ ಪ್ರೇಮಕಥನ: ಕಾಲುಗಳ ಸ್ವಾಧೀನ ಕಳೆದುಕೊಂಡ ಪ್ರಿಯತಮೆಗೆ ಬಾಳುಕೊಟ್ಟ ಪ್ರೇಮಿ

ಚಿಕ್ಕಮಗಳೂರು: ಪ್ರೀತಿಸ್ದೋರೆಲ್ಲಾ ಮದ್ವೆ ಆಗಲ್ಲ. ಟೈಂ ಪಾಸಿಗೆ ಪ್ರೀತಿ ನಾಟ್ಕ ಆಡೋರು ಉಂಟು. ಆಸ್ತಿಗಾಗಿ ಲವ್ ಮಾಡೋರ ಮಧ್ಯೆ ಪ್ರೀತಿಗಾಗಿ ಪ್ರಾಣ ಕೊಡೋರು ಇದ್ದಾರೆ. ಜಾರಿದ ಪ್ರೇಮ ಮುರಿದು ಬಿದ್ದಿರೋದಕ್ಕೆ ಲೆಕ್ಕವೇ ಇಲ್ಲ. ಆದರೇ ಆರು ವರ್ಷ ಪ್ರೀತಿಯ ಎರಡು ಕಾಲುಗಳು ಸ್ವಾದೀನ ಕಳೆದುಕೊಂಡು ಎರಡು ವರ್ಷಗಳೇ ಕಳೆದ್ರು ಪ್ರೀತಿ ಮಾತ್ರ ಕುಂದಿಲ್ಲ. ಹೌದು ಈಕೆ ಸ್ವಪ್ನ. ಇವನ ಹೆಸರು ಮನು. ಸ್ವಪ್ನಗೆ ನಿಲ್ಲೋಕ್ಕಾಗಲ್ಲ. ಓಡಾಡೋಕ್ಕಾಗಲ್ಲ. ನನ್ನ ಮದ್ವೆಯಾಗಿ ಏನ್ ಸುಖ ಪಡ್ತೀಯಾ ನನ್ನ ಮರೆತು ಬೇರೆ ಮದುವೆ ಆಗು ಅಂತ ತನ್ನ ಪ್ರೇಮಿ ಮನುಗೆ ಹೇಳಿದ್ದಳು. ಹುಟ್ಟಿದಾಗಿನಿಂದಲೂ ಚೆನ್ನಾಗಿದ್ದ ಸ್ವಪ್ನ ದ್ವಿತೀಯ ಪಿಯುಸಿ ಓದಿ ಟೈಪಿಂಗ್ ಕ್ಲಾಸ್ ಹೋದಾಗ ಇದ್ದಕ್ಕಿಂದಂತೆ ಕುಸಿದು ಬಿದ್ದು ಎರಡು ವರ್ಷದಿಂದ ಎರಡು ಕಾಲುಗಳ ಸ್ವಾದೀನ ಕಳೆದುಕೊಂಡು ವೀಲ್‍ಚೇರ್ ನಲ್ಲಿಯೇ ಜೀವನವಾಗಿದೆ. ಕರ್ನಾಟಕ-ಕೇರಳ ಆಸ್ಪತ್ರೆಯಲ್ಲೂ ವೈದ್ಯರು ನಾರ್ಮಲ್ ಎಂದಿದ್ದಾರೆ. ನಾಟಿ ಔಷಧಿಯೂ ಕೆಲಸ ಮಾಡಿಲ್ಲ. ಕಾಲು ಸರಿಯಾಗಿಲ್ಲ. ಜೀವನವೇ ಬೇಸತ್ತು ನೊಂದಿದ್ದಳು. ಆದರೇ ಆರು ವರ್ಷದಿಂದ ಪ್ರೀತಿಸಿದ್ದ ಮನು ನೀನು ಹೇಗೆ ಇರೋ ಏನಾದ್ರು ಕೊನೆವರೆಗೂ ನಿನ್ನ ಜೊತೆ ಇರ್ತೀನಿ ಎಂದು ಆಕೆಗೆ ಧೈರ್ಯ ತುಂಬಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಕೆಯನ್ನೇ ಮದುವೆಯಾಗಿದ್ದಾನೆ. ವೀಲ್ ಚೇರ್ ಮೇಲೇ ಕೂರಿಸಿ ತಾಳಿ ಕಟ್ಟಿ ಅದೇ ವೀಲ್ ಚೇರ್‌ನಲ್ಲಿ ಮನೆಗೆ ಕರೆದುಕೊಂಡು ಹೋಗಿದ್ದಾನೆ. ನಾನು ಪ್ರೀತಿಸಿದಾಗ ಚೆನ್ನಾಗಿದ್ಲು. ಇವತ್ತು ಕಾಲು ಸರಿ ಇಲ್ಲ ಅಂತ ಬಿಟ್ರೆ ನನ್ನ ಪ್ರೀತಿಗೆ ಬೆಲೆ ಇಲ್ಲ. ನಾನು ಪ್ರೀತಿಯಿಂದ ಪ್ರೀತಿ ಮಾಡಿದ್ದು ಎಂದು ಅವಳನ್ನೇ ಮದುವೆಯಾಗಿದ್ದಾನೆ. ಇವರು ತಾಲೂಕಿನ ಭಕ್ತರಹಳ್ಳಿ ನಿವಾಸಿ. ಇಬ್ಬರದ್ದೂ ಬಡಕುಟುಂಬ. ಇಬ್ಬರೂ ಪಿಯುಸಿ ಓದಿದ್ದಾರೆ. ಹಾರ್ಡ್‍ವೇರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮನು ನನ್ನವಳಿಗೆ ಈಗಾಯ್ತಲ್ಲ ಎಂದು ಕೆಲಸ ಬಿಟ್ಟು ಮದುವೆಗೆ ಮುನ್ನವೇ ಹಳ್ಳಿಯಲ್ಲಿ ಕೆಲಸ ಮಾಡಿಕೊಂಡು ಆಕೆಯನ್ನ ಕರೆದುಕೊಂಡು ಊರೂರು ಸುತ್ತಿದ್ದಾನೆ. ಆದರೇ ಎಲ್ಲೂ ಸರಿಯಾಗಿಲ್ಲ. ಸ್ವಪ್ನ ಕೂಡ ನನ್ನಂತವಳ ಕಟ್ಟಿಕೊಂಡು ಏನ್ ಮಾಡ್ತೀಯಾ ಬಿಡು ಎಂದರೂ ಕೇಳಿಲ್ಲ. ನಾನು ಪ್ರೀತಿಗಾಗಿ ಪ್ರೀತ್ಸಿದ್ದು ಮೋಹಕ್ಕಲ್ಲ ಎಂದು ಆಕೆಯನ್ನೇ ಮದುವೆಯಾಗಿದ್ದಾನೆ. ಪ್ರಾಮಾಣಿಕ ಹಾಗೂ ನಿಷ್ಕಲ್ಮಷ ಪ್ರೀತಿ ಇಲ್ಲಿ ಜಾತಿ-ಅಂತಸ್ತಿನ ಸಮಾಧಿ ಮೇಲೆ ಹಸೆಮಣೆ ಏರಿದೆ. ಮನು ತಾಯಿ ಕೂಡ ನನ್ನ ಮಗ ಇಷ್ಟ ಪಟ್ಟಿದ್ದಾನೆ. ಅಷ್ಟೇ ಮುಗೀತು. ಅವಳೇ ನನಗೆ ಮಗಳು-ಸೊಸೆ ಎಲ್ಲಾ ಎಂದು ಮನೆ ತುಂಬಿಸಿಕೊಂಡು, ನನ್ನ ಮಗಳಂತೆ ನೋಡಿಕೊಳ್ತೇನೆ ಎಂದೂ ಮಗನಿಗೆ ಹಾಗೂ ಸೊಸೆಗೆ ಭರವಸೆ ನೀಡಿದ್ದಾರೆ.


from India & World News in Kannada | VK Polls https://ift.tt/2Of6jD7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...