
: ಮನೆ ಮುಂದೆ ಸಿಗರೇಟ್ ಸೇದಬೇಡ ಎಂದು ಹೇಳಿದ ಮಹಿಳೆ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ಚನ್ನಸಂದ್ರದಲ್ಲಿ ನಡೆದಿದೆ. ಭಾಗ್ಯಮ್ಮ ಹಲ್ಲೆಗೊಳಗಾದ ಮಹಿಳೆಯಾಗಿದ್ದು, ಪ್ರಶಾಂತ್ ಎಂಬಾತ ಭಾಗ್ಯಮ್ಮ ಎಂಬುವವರ ಮನೆ ಮುಂದೆ ಸಿಗರೇಟ್ ಸೇದುತ್ತಿದ್ದ. ಇದರಿಂದ ಕೋಪಗೊಂಡ ಭಾಗ್ಯಮ್ಮ ಹಾಗೂ ಅವರ ಪುತ್ರ ಆಕಾಶ್ ಮನೆ ಮುಂದೆ ಸಿಗರೇಟ್ ಸೇದದಂತೆ ಪ್ರಶಾಂತ್‌ನಿಗೆ ಹೇಳಿದರು. ಇದರಿಂದ ಆಕ್ರೋಶಗೊಂಡ ಆರೋಪಿ, ಭಾಗ್ಯಮ್ಮ ಅವರ ನಾಯಿಗೆ ಕಲ್ಲಿನಿಂದ ಹೊಡೆದಿದ್ದಾನೆ. ನಾಯಿಗೆ ಕಲ್ಲು ಹೊಡೆದ ಸಣ್ಣ ವಿಷಯದಿಂದ ಪ್ರಾರಂಭವಾದ ಜಗಳ ಪ್ರಶಾಂತ್ ಮತ್ತು ಆಕಾಶ್ ಕುಟುಂಬದ ಬೀದಿ ಕಾಳಗಕ್ಕೆ ನಾಂದಿ ಹಾಡಿತು. ಜಗಳದ ನಡುವೆ ಬಂದ ಪ್ರಶಾಂತ್ ತಾಯಿ, ಭಾಗ್ಯಮ್ಮನ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ಮಹಿಳೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಎರಡೂ ಕುಟುಂಬಗಳು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
from India & World News in Kannada | VK Polls https://ift.tt/3fAdv83