ಮೈಸೂರು ಮೇಯರ್ ರುಕ್ಮಿಣಿ ಮಾದೇಗೌಡ ದಂಪತಿಗೆ ಕೊರೊನಾ ದೃಢ, ಕಾವೇರಿ ಆಸ್ಪತ್ರೆಗೆ ದಾಖಲು!

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ದಂಪತಿಗೆ ಇರುವುದು ದೃಢಪಟ್ಟಿದೆ.‌ ಮೇಯರ್‌ ಆದ ನಂತರ ರುಕ್ಮಿಣಿ ಮಾದೇಗೌಡ ಅವರು ಹಲವು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆದರೆ ಇದೀಗ ಇಬ್ಬರಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು ಇಬ್ಬರು ನಗರದ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಾಲಿಕೆ ಮೇಯರ್ ರುಕ್ಮಿಣಿ ಮಾದೇಗೌಡ ಅವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸಹಜವಾಗಿ ಮೇಯರ್ ಅವರೊಂದಿಗೆ ಸಂಪರ್ಕದಲ್ಲಿದ್ದವರಿಗೆ ಆತಂಕ ಮೂಡಿಸಿದೆ. ಅದೃಷ್ಟವಶಾತ್ ಪಾಲಿಕೆಯಲ್ಲಿ ಗುರುವಾರ ನಡೆದ ಸ್ಥಾಯಿ ಸಮಿತಿ ಸಭೆಗೆ ಮೇಯರ್ ರುಕ್ಮಿಣಿ ಮಾದೇಗೌಡ ಅವರು ಗೈರಾಗಿದ್ದರು.‌ ಇನ್ನೂ, ಮಾರ್ಚ್ 13ರಂದು ಮೇಯರ್ ರುಕ್ಮಿಣಿ ಮಾದೇಗೌಡ ಅವರು ಕೋವಿಡ್‌ ಲಸಿಕೆಯನ್ನೂ ಪಡೆದಿದ್ದರು.‌ ಆದರೆ ಕೊರೊನಾ ಲಸಿಕೆ ಪಡೆದರೂ ಸೋಂಕು ತಗುಲಿರುವುದು ಅಚ್ಚರಿ ಜೊತೆಗೆ ಆತಂಕಕ್ಕೂ ಕಾರಣವಾಗಿದೆ. ಮೇಯರ್ ಅದಾಗಿನಿಂದಲೂ ನಗರದ ಹಲವೆಡೆ ರುಕ್ಮಿಣಿ ಮಾದೇಗೌಡ ಸಂಚರಿಸಿದ್ದರು. ಇನ್ನು ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಮೈಸೂರು ಮೇಯರ್ ಆಯ್ಕೆ ವಿಚಾರ ರಾಜ್ಯ ರಾಜಕಾರಣದಲ್ಲಿ ತಲ್ಲಣವನ್ನೇ ಸೃಷ್ಟಿಸಿತ್ತು. ಇದೀಗ ಮಹಾಮಾರಿ ರುಕ್ಮಿಣಿ ಮಾದೇಗೌಡ ದಂಪತಿಗೆ ವಕ್ಕರಿಸಿದ್ದು, ಶೀಘ್ರ ಗುಣಮುಖರಾಗಲಿ ಅಂತ ಅಭಿಮಾನಿಗಳು ಹಾರೈಸಿದ್ದಾರೆ. ಇನ್ನು ಅವರ ಪತಿ ಮಾದೇಗೌಡ ಜಿಲ್ಲಾ ಪರಿಷತ್‌ನ ಸದಸ್ಯನಾಗಿದ್ದಾರೆ.


from India & World News in Kannada | VK Polls https://ift.tt/3mbLZiq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...