ಬೆಂಗಳೂರು: ಜನಹಿತಕ್ಕಿಂತ ಸ್ವಹಿತವೇ ಮುಖ್ಯವಾಗಿದೆ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಸರ್ಕಾರದ ಕ್ರೋನಾಲಜಿ! ಎಂದು ಕೆಲವೊಂದು ವಿಷಯಗಳನ್ನು ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದೆ. ನೆರೆ ಬಂದಾಗ - ಸಂಪುಟವಿಲ್ಲದೆ ಪರದಾಟ, ಕೊರೊನಾ ಬಂದಾಗ ಕೊರೊನಾ ಲೂಟಿಗೆ ಕಿತ್ತಾಟ, ಆರ್ಥಿಕ ಬಿಕ್ಕಟ್ಟಿನಲ್ಲಿ ಖಾತೆ ಕಿತ್ತಾಟ, ಬೆಲೆ ಏರಿಕೆಯ ಸಂದರ್ಭದಲ್ಲಿ ಸಿಡಿ ಕಳ್ಳಾಟ, ಕೊರೊನಾ 2ನೇ ಅಲೆ ಹೆಚ್ಚಿದೆ ಆದರೆ ದೂರು, ಪ್ರತಿದೂರಿನ ರಂಪಾಟ ಎಂದಿರುವ ಕಾಂಗ್ರೆಸ್ ಇವರಿಗೆ ಜನಹಿತಕ್ಕಿಂತ ಸ್ವಹಿತವೇ ಮುಖ್ಯವಾಗಿದೆ ಎಂದು ಕಿಡಿಕಾರಿದೆ. ಇನ್ನು ಸಾರಿಗೆ ನೌಕರರ ಮುಷ್ಕರ ಬೆದರಿಕೆ ವಿಚಾರವಾಗಿಯೂ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಸಿಡಿ ಸರ್ಕಾರಕ್ಕೆ ಸಿಡಿ ಚಿಂತೆ, ಜನತೆಗೆ ಬದುಕು ಉಳಿಸಿಕೊಳ್ಳುವ ಚಿಂತೆಯಾಗಿದೆ. ವರ್ಸಸ್ ಬಿಜೆಪಿ ಕಿತ್ತಾಟದಲ್ಲೇ ಮುಳುಗಿರುವ ಸರ್ಕಾರಕ್ಕೆ ರಾಜ್ಯದಲ್ಲಿನ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇಲ್ಲವಾಗಿದೆ ಎಂದಿದೆ. ಹಲವು ದಿನಗಳಿಂದ ಸಾರಿಗೆ ನೌಕರರ ಬಿಕ್ಕಟ್ಟು ದಿನೇ ದಿನೇ ಹೆಚ್ಚುತ್ತಿದ್ದರೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಕಣ್ ಮುಚ್ಚಿಕೊಂಡು ಕುಳಿತಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಆರೋಪ ಮಾಡಿದೆ.
from India & World News in Kannada | VK Polls https://ift.tt/3wjyv8Y