
ಮಂಗಳೂರು: ವಿವಿಯ ಪ್ರಾಧ್ಯಾಪಕರೊಬ್ಬರಿಗೆ ರಾಯಚೂರು ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆ ಕೊಡಿಸುವುದಾಗಿ ನಂಬಿಸಿ 17.5ಲಕ್ಷ ರೂ. ಹಣ ಪಡೆದು ವಂಚಿಸಿದ್ದಲ್ಲದೆ, ಜೀವ ಬೆದರಿಕೆ ಹಾಕಿದ ಪ್ರಮುಖ ಆರೋಪಿ ರಾಮಸೇನೆಯ ಪ್ರಸಾದ್ ಅತ್ತಾವರನಿಗೆ ಹದಿನೈದು ದಿನಗಳ ವಿಧಿಸಲಾಗಿದೆ. ಆರೋಪಿ ಪ್ರಸಾದ್ ಅತ್ತಾವರನನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದ ಪೊಲೀಸರು ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ದಿದ್ದರು. ವಿಚಾರಣೆ ಮುಗಿಸಿದ ಬಳಿಕ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ವಿವೇಕ್ ಆಚಾರ್ಯ, ಗೋಪಾಲಕೃಷ್ಣ, ಭರತ್, ಮಂಜು ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ನಾಲ್ವರ ಬಂಧನಕ್ಕಾಗಿ ಶೋಧ ಮುಂದುವರಿಸಿದ್ದಾರೆ. ಏನಿದು ಪ್ರಕರಣ? ಕುಲಪತಿಯನ್ನಾಗಿ ಮಾಡುವುದಾಗಿ ಹೇಳಿ ವಿವಿ ಪ್ರಾಧ್ಯಾಪಕರೊಬ್ಬರಿಂದ 17.5ಲಕ್ಷ ರೂ. ಹಣ ಪಡೆದು ವಂಚಿಸಿದ್ದಲ್ಲದೆ, ಜೀವ ಬೆದರಿಕೆಯೊಡ್ಡಿರುವ ಆರೋಪ ರಾಮಸೇನೆಯ ಸಂಸ್ಥಾಪಕ ಮೇಲಿದೆ. ಹಿಂದೂ ಸಂಘಟನೆಗಳ ಜೊತೆ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಪ್ರಸಾದ್ ಅತ್ತಾವರ್‌ಗೆ, ವಿವೇಕ್ ಆಚಾರ್ಯ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಧ್ಯಾಪಕರೊಬ್ಬರ ಪರಿಚಯವಾಗಿತ್ತು. ಆರೋಪಿ ಪ್ರಸಾದ್ ಅತ್ತಾವರ ‘ತನಗೆ ಮುಖ್ಯಮಂತ್ರಿ ಸೇರಿದಂತೆ ದೇಶದ ಗಣ್ಯ ವ್ಯಕ್ತಿಗಳ ಪರಿಚಯವಿದೆ. ನಿಮಗೆ ರಾಯಚೂರು ವಿಶ್ವವಿದ್ಯಾನಿಲಯದ ಕುಲಪತಿಯನ್ನಾಗಿ ಮಾಡುತ್ತೇನೆ. ಇದಕ್ಕಾಗಿ 30ಲಕ್ಷ ರೂ. ಹಣ ಕೊಡಬೇಕೆಂದು ತಿಳಿಸಿ, ಒತ್ತಾಯವಾಗಿ 17.5ಲಕ್ಷ ರೂ. ಹಣ ಪಡೆದು ಉಳಿದ ಹಣಕ್ಕೆ 3 ಖಾಲಿ ಚೆಕ್ ಪಡೆದು ವಂಚಿಸಿದ್ದಾನೆ.ಈ ಸಂಬಂಧ ದೂರು ದಾಖಲಾಗಿತ್ತು.
from India & World News in Kannada | VK Polls https://ift.tt/3rIGgSk