ಸಿ.ಡಿ ಯುವತಿ ಪರ ವಕೀಲ ಜಗದೀಶ್‌ ಹೆಸರು ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಣಿಯೇ ಆಗಿಲ್ಲ!

ಬೆಂಗಳೂರು: ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ಪರ ವಕಾಲತ್ತು ವಹಿಸಿರುವ ವಕೀಲ ಕೆ.ಎನ್‌ ಜಗದೀಶ್‌ ಕುಮಾರ್‌ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಜಗದೀಶ್‌ ಕುಮಾರ್‌ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ಹೆಸರು ನೋಂದಾಯಿಸಿ ಕೊಂಡಿಲ್ಲ. ಅಲ್ಲದೆ, ಆ ಹೆಸರಿನಲ್ಲಿ ಯಾವುದೇ ವಕೀಲಿಕೆ ಸನ್ನದು ವರ್ಗಾವಣೆ ಕೋರಿ ಅರ್ಜಿ ಬಂದಿಲ್ಲ ಎಂದು ರಾಜ್ಯ ವಕೀಲರ ಪರಿಷತ್ತು ತಿಳಿಸಿದೆ. ಒಂದು ವೇಳೆ ಜಗದೀಶ್‌ ಬೇರೆ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡಿದ್ದರೆ, ಅವರು ಭಾರತೀಯ ವಕೀಲರ ಪರಿಷತ್ತಿನ ನಿಯಮಗಳ ಪ್ರಕಾರ 6 ತಿಂಗಳ ಬಳಿಕ ರಾಜ್ಯದಲ್ಲಿ ವಕೀಲಿಕೆ ಮುಂದುವರಿಸುವಂತಿಲ್ಲ ಎಂದು ಕೆಎಸ್‌ಬಿಸಿ ಮಾಹಿತಿ ನೀಡಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಜಗದೀಶ್‌, ''ನಾನು ದಿಲ್ಲಿ ವಕೀಲರ ಪರಿಷತ್ತಿನಲ್ಲಿ ಹೆಸರು ನೋಂದಾಯಿಸಿ ಕೊಂಡಿದ್ದೇನೆ'' ಎಂದು ದಿಲ್ಲಿ ಬಾರ್‌ ಕೌನ್ಸಿಲ್‌ನಲ್ಲಿ ಪಡೆದುಕೊಂಡಿರುವ ಎನ್ರೋಲ್ಮೆಂಟ್‌ ಐಡಿ ಕಾರ್ಡನ್ನು ಫೇಸ್‌ ಬುಕ್‌ನಲ್ಲೂ ಪೋಸ್ಟ್‌ ಮಾಡಿದ್ದಾರೆ. ವಕೀಲರ ಕಾಯಿದೆ-1961ರ ನಿಯಮ 30ರ ಪ್ರಕಾರ ಯಾವುದೇ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡರೂ ಅವರು ದೇಶದ ಯಾವುದೇ ಕೋರ್ಟ್‌ನಲ್ಲಿ ವಕೀಲಿಕೆ ಮಾಡಬಹುದು. ಆದರೆ, ಕಾರ್ಯಕ್ಷೇತ್ರವನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬದಲಾಯಿಸಿ ಕೊಂಡಾಗ 6 ತಿಂಗಳೊಳಗೆ ಯಾವ ರಾಜ್ಯದ ಲ್ಲಿವಕೀಲಿಕೆ ನಡೆಸುತ್ತಾರೋ ಅಲ್ಲಿನ ಪರಿಷತ್ತಿಗೆ ತಮ್ಮ ಸನ್ನದನ್ನು ವರ್ಗಾವಣೆ ಮಾಡಿಕೊಳ್ಳಬೇಕು ರಮೇಶ್‌ ಬಂಧನಕ್ಕೆ ಒತ್ತಾಯಶಾಸಕ ರಮೇಶ್‌ ಜಾರಕಿಹೊಳಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಮತ್ತೆ ಒತ್ತಾಯಿಸಿದ್ದಾರೆ. ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ''ತನಿಖಾ ತಂಡ ಪಕ್ಷಪಾತವಿಲ್ಲದೇ ತನಿಖೆ ನಡೆಸುತ್ತಿದೆ. ಆದರೆ, ಪೊಲೀಸ್‌ ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿರುವ ಶಕ್ತಿಯ ಮೇಲೆ ಅನುಮಾನ ಇದೆ. ಆರೋಪಿಯನ್ನು ಪ್ರಚಾರಕ್ಕೆ ಬನ್ನಿ ಎಂದು ಕರೆದ ಸಿಎಂ ಯಡಿಯೂರಪ್ಪ, ಪರೋಕ್ಷವಾಗಿ ಬಂಧಿಸದಂತೆ ಸಂದೇಶ ನೀಡುತ್ತಿದ್ದಾರೆ,'' ಎಂದು ಆರೋಪಿಸಿದರು. ಕರ್ನಾಟಕ ಬಾರ್‌ ಕೌನ್ಸಿಲ್‌ನಲ್ಲಿ ಹೆಸರು ನೋಂದಣಿ ಮಾಡಿಕೊಂಡಿಲ್ಲದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ''ನಾನು ಕರ್ನಾಟಕ ಕಾನೂನು ವಿವಿಯಲ್ಲಿ ಕಾನೂನು ಪದವಿ ಪಡೆದಿದ್ದೇನೆ. ದಿಲ್ಲಿ ಬಾರ್‌ ಕೌನ್ಸಿಲ್‌ನಲ್ಲಿ ನೋಂದಣಿಯಾಗಿದೆ. ಆಲ್‌ ಇಂಡಿಯಾ ಬಾರ್‌ ಎಕ್ಸಾಂ ಬರೆದಿದ್ದರೆ ಮಾತ್ರ ವಕಾಲತ್‌ ಹಾಕಲು ಅರ್ಹತೆ ಇರುತ್ತದೆ. ಅದನ್ನು ಪಾಸ್‌ ಮಾಡಿದ್ದೇನೆ. ವಕೀಲನಾಗಿದ್ದೇನೆ. ಮೂವರು ವಕೀಲರು ವಕಾಲತ್‌ ಹಾಕಿದ್ದೇವೆ. ಅದರಲ್ಲಿಇಬ್ಬರು ಕರ್ನಾಟಕ ಬಾರ್‌ ಕೌನ್ಸಿಲ್‌ನವರಾಗಿದ್ದಾರೆ. ಕಾನೂನು ಪ್ರಕಾರ ದೇಶದ ಯಾವುದೇ ಭಾಗದಲ್ಲಿ ವಕೀಲರಾಗಿ ಕೆಲಸ ಮಾಡಬಹುದು. ತಾಕತ್‌ ಇದ್ದರೆ ನನ್ನ ವಿರುದ್ಧ ದೂರು ಕೊಡಿ. ವಿರೋಧಿಗಳು ಸಾವಿರ ಮತನಾಡಲಿ. ತಲೆಕೆಡಿಸಿಕೊಳ್ಳುವುದಿಲ್ಲ' ಎಂದರು. ನ್ಯಾಯ- ನೆರವು 'ಯುವತಿ ಸ್ವ-ಇಚ್ಛೆಯಿಂದ ದೂರು ಬರೆದಿದ್ದಾಳೆ. ನಾನು ಒಬ್ಬ ವಕೀಲನಾಗಿ ನೊಂದ ಯುವತಿಗೆ ನೆರವಾಗುತ್ತಿದ್ದೇನೆ. ಆದರೆ, ನನಗೆ ಅನೇಕ ಬೆದರಿಕೆ ಕರೆಗಳು ಬರುತ್ತಿವೆ. ಎಸ್‌ಐಟಿ ತನಿಖೆ ಸರಿಯಾಗಿ ನಡೆಯಬೇಕು ಎನ್ನುವುದು ನಮ್ಮ ಬೇಡಿಕೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂಬುದು ನಮ್ಮ ಉದ್ದೇಶ'' ಎಂದು ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಸೂರ್ಯ ಮುಕುಂದರಾಜ್‌ ಹೇಳಿದರು. ಮಾ.30ರಂದು ಗುರುನಾನಕ್‌ ಭವನದಲ್ಲಿರುವ ನ್ಯಾಯಾಲಯದಲ್ಲಿ ಯುವತಿ ಹೇಳಿಕೆ ನೀಡುವ ವೇಳೆ ನ್ಯಾಯಾಲಯದ ಆವರಣದಲ್ಲಿಸೂರ್ಯ ಮುಕುಂದರಾಜ್‌ ಇರುವುದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಮೊಬೈಲ್‌ಫೋನ್‌ ವಶಕ್ಕೆ ಮಾಜಿ ಸಚಿವ ಜಾರಕಿಹೊಳಿಯವರ ಜತೆ ಮೊಬೈಲ್‌ ಫೋನ್‌ನಲ್ಲಿ ವಿಡಿಯೋ ಕಾಲ್‌, ಚಾಟಿಂಗ್‌ ನಡೆಸಿರುವ ಕಾರಣ ಪ್ರಕರಣದ ತನಿಖೆಯ ಭಾಗವಾಗಿ ಯುವತಿಯ ಮೊಬೈಲ್‌ಫೋನ್‌ ಅನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜಾರಕಿಹೊಳಿ ಕರೆ ಮಾಡಿ ನನಗೆ ಫ್ಲ್ಯಾಟ್‌ಗೆ ಬರಲು ಹೇಳುತ್ತಿದ್ದರು. ನಾನು ಬಂದ ನಂತರ ಅವರು ಬರುತ್ತಿದ್ದರು ಸಂತ್ರಸ್ತ ಯುವತಿ ಸದ್ಯ ರಾಜ್ಯ ಸಿ.ಡಿ ಹಗರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದ್ದ ಗುರುವಾರ ಲೈಂಗಿಕ ಕ್ರಿಯೆ ನಡೆಸಿದ ಫ್ಲ್ಯಾಟ್‌ನಲ್ಲಿ ಮಹಜರು ನಡೆಸಲಾಗಿತ್ತು. ಇಂದು ಕೂಡ ಯುವತಿಯ ವಿಚಾರಣೆ ನಡೆಯಲಿದೆ.


from India & World News in Kannada | VK Polls https://ift.tt/3sJxHrD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...