ವೈದ್ಯಲೋಕಕ್ಕೆ ಅಚ್ಚರಿ; ತ್ರಿವಳಿ ಜನನಾಂಗ ಹೊಂದಿದ ಮಗು ಜನನ!

ಬಾಗ್ದಾದ್‌: ಇದು . ತೈಲ ಸಮೃದ್ಧ ಇರಾಕಿನ ಪಟ್ಟಣವೊಂದರಲ್ಲಿ ಮೂರು ಜನನಾಂಗಗಳನ್ನು ಹೊಂದಿದ ಅಪರೂಪದ ಮಗುವೊಂದು ಜನಿಸಿದೆ. ಹುಟ್ಟಿದಾಗ ಸಹಜವಾಗಿಯೇ ಇದ್ದ ಈ ಮಗುವಿನ ಗುಪ್ತಾಂಗ, ಮೂರು ತಿಂಗಳು ಬೆಳವಣಿಗೆ ಹೊಂದುವಷ್ಟರಲ್ಲಿ ವಿಚಿತ್ರ ಗಾತ್ರಕ್ಕೆ ತಿರುಗಿತು. ವೃಷಣ ಭಾಗದಲ್ಲಿ ಅಸಹಜ ಊತ ಕಾಣಿಸಿಕೊಂಡಿತು. ಇದರಿಂದ ದಿಗ್ಭ್ರಮೆಗೆ ಒಳಗಾದ ಪೋಷಕರು, ಮಗುವನ್ನು ಆಸ್ಪತ್ರೆಗೆ ತಂದು ಪರೀಕ್ಷೆಗೆ ಒಳಪಡಿಸಿದರು. ನಂತರ ವೃಷಣ ಶಸ್ತ್ರ ಚಿಕಿತ್ಸೆ ನೆರವೇರಿಸಿದ ವೈದ್ಯರೂ ಆಘಾತಕ್ಕೆ ಒಳಗಾಗುವ ಸನ್ನಿವೇಶ ಎದುರಾಯಿತು. ವೃಷಣದ ಮೇಲ್ಭಾಗ ಮತ್ತು ಕೆಳಭಾಗದ ಚರ್ಮದ ಒದಿಕೆಯಲ್ಲಿ ಮುಚ್ಚಿಕೊಂಡಿದ್ದ ಇನ್ನೆರಡು ಶಿಶ್ನಗಳು ಹೊರ ಬಿದ್ದವು. ಇದು ಅಪರೂಪದಲ್ಲಿ ಅಪರೂಪ. 60 ಲಕ್ಷಕ್ಕೆ ಒಂದು ಮಗುವಿನಲ್ಲಿ ಇಂತಹ ಸೋಜಿಗ ಕಾಣಿಸಬಹುದು. ಆದರೆ, ಅಧಿಕೃತವಾಗಿ ದಾಖಲಾದ ಜಗತ್ತಿನ ಪ್ರಥಮ ‘ತ್ರಿಫಲಿಯಾ’ (ತ್ರಿವಳಿ ಜನನಾಂಗ) ಪ್ರಕರಣ ಇದು ಎಂದು ಶಸ್ತ್ರ ಚಿಕಿತ್ಸೆ ನೆರವೇರಿಸಿದ ವೈದ್ಯರು ತಿಳಿಸಿದ್ದಾರೆ. ಈ ಮಗುವಿನಲ್ಲಿ ಮುಖ್ಯ ಜನನಾಂಗ ಹೊರತುಪಡಿಸಿ ಪತ್ತೆಯಾದ ಉಳಿದೆರಡು ನಿಷ್ಪ್ರಯೋಜಕವಾಗಿದ್ದರಿಂದ ಅವನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದು ಹಾಕಲಾಗಿದೆ. ಸದ್ಯ ಮಗು ಆರೋಗ್ಯವಾಗಿದ್ದು, ಮನೆಗೆ ಕರೆದೊಯ್ಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.


from India & World News in Kannada | VK Polls https://ift.tt/3dBaqBW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...