ಉಡುಪಿ: ತಾಯಿಯೊಂದಿಗೆ ಬಟ್ಟೆ ಖರೀದಿಸಲು ಬಂದ ಹೆಣ್ಣು ಮಗು ಅಂಗಡಿ ಹಿಂದಿನ ಬಾವಿಗೆ ಬಿದ್ದು ಸಾವು!

ಕಟಪಾಡಿ: ಬಟ್ಟೆ ಖರೀದಿಸಲು ಬಂದಿದ್ದ ತಾಯಿಯೊಂದಿಗಿದ್ದ ಎರಡೂವರೆ ವರ್ಷದ ಹೆಣ್ಣು ಬಟ್ಟೆಯಂಗಡಿಯ ಹಿಂದಿನ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಶಿರ್ವ ಠಾಣಾ ವ್ಯಾಪ್ತಿಯ ಮುದರಂಗಡಿ ಪೇಟೆಯಲ್ಲಿ ಶನಿವಾರ ನಡೆದಿದೆ. ಅದಮಾರು ವಾಜಿಪೇಯಿ ನಗರದ ಜಯಲಕ್ಷಿತ್ರ್ಮೕ ಮತ್ತು ಕೃಷ್ಣ ದಂಪತಿಯ ಪುತ್ರಿ ಪ್ರಿಯಾಂಕಾ ಮೃತಪಟ್ಟಿರುವ ಹಸುಳೆ. ಬಟ್ಟ ಖರೀದಿ ಮುಗಿಸಿದ ತಾಯಿಗೆ ಮಗು ಕಾಣೆಯಾಗಿರುವುದು ಗಮನಕ್ಕೆ ಬಂದ ತಕ್ಷಣ ಅವರು ಅಂಗಡಿ ಮಾಲಿಕರಿಗೆ ತಿಳಿಸಿದ್ದಾರೆ. ಮೊದಲು ಮಗುವನ್ನು ಯಾರೋ ಅಪಹರಿಸಿರಬಹುದು ಎಂಬ ಶಂಕೆ ಉಂಟಾಗಿತ್ತು. ಈ ಬಗ್ಗೆ ಶಿರ್ವ ಪೊಲೀಸರಿಗೆ ಮಾಹಿತಿ ನೀಡಿದ್ದು ಬಳಿಕ ಹುಡುಕಾಡಿದಾಗ ಅಂಗಡಿ ಕಟ್ಟಡದ ಹಿಂಭಾಗದಲ್ಲಿದ್ದ ಬಾವಿಯಲ್ಲಿ ಮಗುವಿನ ಬ್ಯಾಗ್‌ ಹಾಗೂ ಹೂ ಕಂಡುಬಂದಿತ್ತು. ಶಿರ್ವ ಪೊಲೀಸರ ಹಾಗೂ ಅಗ್ನಿಶಾಮಕ ದಳದವರು ಬಾವಿಯಲ್ಲಿ ಹುಡುಕಾಡಿದಾಗ ಮಗುವಿನ ಮೃತದೇಹ ಪತ್ತೆಯಾಗಿತ್ತು. ತಾಯಿಯ ಕಣ್ಣು ತಪ್ಪಿಸಿ ಅಂಗಡಿಯಿಂದ ಹೊರಗೆ ಹೋಗಿದ್ದ ಮಗು, ಬಾವಿಯ ಆವರಣಗೋಡೆಯ ಒಂದು ಭಾಗ ಸ್ವಲ್ಪ ತೆರದಿದ್ದು ಅಲ್ಲಿಂದ ಬಾವಿಗೆ ಇಣುಕಿದ್ದು ಆಯತಪ್ಪಿ ಬಾವಿಯೊಳಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.


from India & World News in Kannada | VK Polls https://ift.tt/2OhW54K

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...