ಬೆಂಗಳೂರು ನಗರ ಡಿ.ಸಿ. ಕಾರ್ಯಾಚರಣೆ; 66 ಕೋಟಿ ರೂ. ಮೌಲ್ಯದ 48 ಎಕರೆ ಸರಕಾರಿ ಜಮೀನು ವಶ!

: ಬೆಂಗಳೂರು ನಗರ ಜಿಲ್ಲಾಡಳಿತವು ಶನಿವಾರ ಹಲವೆಡೆ ಕಾರ್ಯಾಚರಣೆ ಕೈಗೊಂಡು 66.23 ಕೋಟಿ ರೂ. ಮೌಲ್ಯದ 48.20 ಎಕರೆ ಸರಕಾರಿ ಭೂಮಿಯ ಒತ್ತುವರಿ ತೆರವುಗೊಳಿಸಿ ವಶಕ್ಕೆ ಪಡೆದಿದೆ. ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ನೇತೃತ್ವದ ತಂಡವು ಬೆಂಗಳೂರು ಉತ್ತರ, ಯಲಹಂಕ, ಪೂರ್ವ, ದಕ್ಷಿಣ ಮತ್ತು ಆನೇಕಲ್‌ ತಾಲೂಕಿನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ, 48.20 ಎಕರೆ ಜಮೀನನ್ನು ಸರಕಾರದ ಸ್ವಾಧೀನಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ರಾವುತನಹಳ್ಳಿ ಗ್ರಾಮದ ಸರ್ವೆ ನಂ. 31ರಲ್ಲಿ15 ಎಕರೆ, ಮಲ್ಲಸಂದ್ರ ಗ್ರಾಮದ ಸರ್ವೆ ನಂ. 62 ಮತ್ತು 67ರಲ್ಲಿ3 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ಈ ಭೂಮಿಯು 18.70 ಕೋಟಿ ರೂ. ಬೆಲೆ ಬಾಳುತ್ತದೆ. ಬೆಂಗಳೂರು ಪೂರ್ವ ತಾಲೂಕಿನ ಚಿಕ್ಕಬನಹಳ್ಳಿ, ಹಿರಂಡಹಳ್ಳಿ, ವೀರೇನಹಳ್ಳಿ, ಕುರುಡು ಸೊಣ್ಣೇನಹಳ್ಳಿಯಲ್ಲಿ 24.90 ಕೋಟಿ ರೂ. ಮೌಲ್ಯದ ಜಮೀನನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಬಿ.ಎಂ.ಕಾವಲ್‌ ಗ್ರಾಮದ ಸರ್ವೆ ನಂ. 135ರಲ್ಲಿ7.50 ಕೋಟಿ ರೂ. ಬೆಲೆಯ 5.08 ಎಕರೆ ಸರಕಾರ ಜಾಗವು ಕಬಳಿಕೆಯಾಗಿತ್ತು. ತಹಶೀಲ್ದಾರ್‌ ಶಿವಪ್ಪ ಲಮಾಣಿ ನೇತೃತ್ವದ ತಂಡವು ತೆರವು ಕಾರ್ಯಾಚರಣೆ ನಡೆಸಿತು. ಆನೇಕಲ್‌ ತಾಲೂಕಿನ ದಾಸನಪುರ, ವೀರಸಂದ್ರ, ಸೊಣ್ಣನಾಯಕನಪುರ, ಮಡಿವಾಳ, ಹಾರಗದ್ದೆ, ಬಿಲ್ಲವಾರದಹಳ್ಳಿ, ಸರ್ಜಾಪುರ, ಗಟ್ಟಮಾರನಹಳ್ಳಿ, ರಾಮನಾಯ್ಕನಹಳ್ಳಿಯಲ್ಲಿ 4.11 ಕೋಟಿ ರೂ. ಮೌಲ್ಯದ ಸರಕಾರಿ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ. ಯಲಹಂಕ ತಾಲೂಕಿನ ಬಾಗಲೂರು, ಬೆಟ್ಟಹಲಸೂರು, ಬಿಳಿಜಾಜಿ, ತಮ್ಮರಸನಹಳ್ಳಿ, ಸೊಣ್ಣೇನಹಳ್ಳಿ, ಚಿಕ್ಕಜಾಲ ಗ್ರಾಮದಲ್ಲಿ ಸರಕಾರಿ ಭೂಮಿಯ ಒತ್ತುವರಿ ತೆರವುಗೊಳಿಸಿ ಭೂಗಳ್ಳರಿಗೆ ಬಿಸಿ ಮುಟ್ಟಿಸಲಾಗಿದೆ.


from India & World News in Kannada | VK Polls https://ift.tt/3fL7g1r

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...